Wedding Fashion: ಮದುಮಗನ ಆರತಕ್ಷತೆಯ ಗ್ರ್ಯಾಂಡ್‌ ಔಟ್‌ಫಿಟ್‌ ಆಯ್ಕೆಗೆ ಇಲ್ಲಿದೆ 5 ಸಿಂಪಲ್‌ ಸೂತ್ರ - Vistara News

ಫ್ಯಾಷನ್

Wedding Fashion: ಮದುಮಗನ ಆರತಕ್ಷತೆಯ ಗ್ರ್ಯಾಂಡ್‌ ಔಟ್‌ಫಿಟ್‌ ಆಯ್ಕೆಗೆ ಇಲ್ಲಿದೆ 5 ಸಿಂಪಲ್‌ ಸೂತ್ರ

ಮದುವೆಯ ಆರತಕ್ಷತೆಯಲ್ಲಿ ಥೀಮ್‌ಗೆ ತಕ್ಕಂತೆ ಮಾತ್ರವಲ್ಲ, ಪರ್ಸನಾಲಿಟಿಗೆ ತಕ್ಕಂತೆ ಈ ಗ್ರ್ಯಾಂಡ್‌ ಔಟ್‌ಫಿಟ್‌ (Wedding Fashion) ಆಯ್ಕೆ ಮಾಡಬೇಕಾಗುತ್ತದೆ. ಆಯ್ಕೆಗೆ ಏನೆಲ್ಲಾ ಮಾಡಬೇಕು? ಯಾವ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಸಿಂಪಲ್‌ ಟಿಪ್ಸ್‌ ನೀಡಿದ್ದಾರೆ.

VISTARANEWS.COM


on

Wedding Fashion
ಚಿತ್ರಕೃಪೆ: ಪಿಕ್ಸೆಲ್‌
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮದುವೆಯ ಆರತಕ್ಷತೆ (ರಿಸೆಪ್ಷನ್‌) ಮದುಮಗ ಧರಿಸುವ ಗ್ರ್ಯಾಂಡ್‌ ಔಟ್‌ಫಿಟ್‌ಗಳು (Wedding Fashion) ಕೇವಲ ವೆಡ್ಡಿಂಗ್‌ ಫೋಟೋಗಳಲ್ಲಿ ಮಾತ್ರವಲ್ಲ, ನೋಡುಗರ ಕಣ್ಮನ ಸೆಳೆಯುವಂತಿರಬೇಕು. ಇದಕ್ಕೆ ಪೂರಕ ಎಂಬಂತೆ, ಇತ್ತೀಚಿನ ದಿನಗಳಲ್ಲಿ ಶೆರ್ವಾನಿ ಹೊರತುಪಡಿಸಿದಲ್ಲಿ, ಟ್ರೆಡಿಷನಲ್‌ ಔಟ್‌ಫಿಟ್‌ಗಿಂತ ಇದೀಗ ಇಂಡೋ-ವೆಸ್ಟರ್ನ್ ಶೈಲಿಯ ಗ್ರ್ಯಾಂಡ್‌ ಡಿಸೈನರ್‌ವೇರ್‌ಗಳಿಗೂ ಆದ್ಯತೆ ಹೆಚ್ಚಾಗಿದೆ. ಹಾಗಾಗಿ ಪ್ರತಿ ಮದುವೆಯ ಥೀಮ್‌ಗೆ ತಕ್ಕಂತೆ ಆಯ್ಕೆ ಮಾಡಬೇಕು ಎನ್ನುತ್ತಾರೆ ವೆಡ್ಡಿಂಗ್‌ ಸ್ಟೈಲಿಸ್ಟ್‌ಗಳು.

“ಮದುವೆಯಲ್ಲಿ ಮಹೂರ್ತಕ್ಕೆ ಟ್ರೆಡಿಷನಲ್‌ ಔಟ್‌ಫಿಟ್‌ ಆಯಾ ಪ್ರಾದೇಶಿಕ ರಿವಾಜುಗಳಿಗೆ ತಕ್ಕಂತೆ ಧರಿಸಲಾಗುತ್ತದೆ. ಇನ್ನು ರಿಸೆಪ್ಷನ್‌ ಅಂದರೇ, ಆರತಕ್ಷತೆಯಲ್ಲಿ ಮಾತ್ರ ವಿಭಿನ್ನ ಔಟ್‌ಫಿಟ್‌ಗಳಿಗೆ ಮಹತ್ವ ನೀಡುವುದು ಹೆಚ್ಚಾಗಿದೆ. ಹಾಗೆಂದು ಟ್ರಯಲ್‌ ನೊಡದೇ ಆಯ್ಕೆ ಮಾಡುವುದು ಸೂಕ್ತವಲ್ಲ. ಅಲ್ಲದೇ, ಅವರವರ ಪರ್ಸನಾಲಿಟಿಗೆ ತಕ್ಕಂತೆ ಹಾಗೂ ಮದುಮಗಳ ಔಟ್‌ಫಿಟ್‌ಗೆ ಹೊಂದುವಂತೆ ಮ್ಯಾಚ್‌ ಮಾಡಬೇಕಾಗುತ್ತದೆ. ಇದಕ್ಕಾಗಿ ವೆಡ್ಡಿಂಗ್‌ ಅಥವಾ ಬೋಟಿಕ್‌ ಸ್ಟೈಲಿಸ್ಟ್‌ಗಳ ಸಹಾಯ ತೆಗೆದುಕೊಳ್ಳಬಹುದು”ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

Plan ahead

ಮೊದಲೇ ಪ್ಲ್ಯಾನ್‌ ಮಾಡಿ

ಮದುವೆಗೂ ಮುನ್ನವೇ ಯಾವ ಬಗೆಯ ಔಟ್‌ಫಿಟ್‌ ಸೂಕ್ತ? ಎಂಬುದನ್ನು ಬೋಟಿಕ್‌ ಇಲ್ಲವೇ ವೆಡ್ಡಿಂಗ್‌ ಡಿಸೈನರ್‌ಗಳ ಬಳಿ ಸಲಹೆ ಪಡೆದು ಆಯ್ಕೆ ಮಾಡುವುದು ಉತ್ತಮ. ಇದೀಗ ಆನ್‌ಲೈನ್‌ನಲ್ಲೂ ಟ್ರೆಂಡಿ ಔಟ್‌ಫಿಟ್‌ಗಳ ಬಗ್ಗೆ ತಿಳಿದುಕೊಂಡು ಚೂಸ್‌ ಮಾಡಬಹುದು.

Choose according to the theme

ಥೀಮ್‌ಗೆ ತಕ್ಕಂತೆ ಆಯ್ಕೆ ಮಾಡಿ

ಮದುವೆಯ ಥೀಮ್‌ಗೆ ತಕ್ಕಂತೆ ಆರತಕ್ಷತೆಯ ಔಟ್‌ಫಿಟ್‌ ಆಯ್ಕೆ ಮಾಡಬೇಕಾಗುತ್ತದೆ. ತೀರಾ ಟ್ರೆಡಿಷನಲ್‌ ಆದಲ್ಲಿ ಅದಕ್ಕೆ ಮ್ಯಾಚ್‌ ಆಗುವಂತಹ ಬಂದ್ಗಲಾ, ಶೆರ್ವಾನಿ, ಕುರ್ತಾ ಧರಿಸಬಹುದು. ಇಲ್ಲವಾದಲ್ಲಿ ಸೂಟ್‌ ಕೂಡ ಓಕೆ.

ಮದುಮಗಳ ಔಟ್‌ಫಿಟ್‌ಗೆ ಮ್ಯಾಚ್‌

ಮದುಮಗಳ ಔಟ್‌ಫಿಟ್‌ಗೆ ಹೊಂದುವಂತಿರಬೇಕು. ಉದಾಹರಣೆಗೆ., ಆಕೆ ಗೌನ್‌ ಧರಿಸಿದಲ್ಲಿ, ವೆಸ್ಟರ್ನ್ ಬ್ಲೇಝರ್‌, ಕೋಟ್‌ ಸೂಟ್‌ ಧರಿಸಬಹುದು. ಲೆಹೆಂಗಾ, ಗಾಗ್ರ ಆದಲ್ಲಿ ಶೆರ್ವಾನಿ, ಕುರ್ತಾ ಧರಿಸಬಹುದು.

The outfit is grand

ಗ್ರ್ಯಾಂಡಾಗಿರಲಿ ಔಟ್‌ಫಿಟ್‌

ಮದುವೆಯಲ್ಲಿ ಭಾಗವಹಿಸುವವರು ಧರಿಸುವಂತಹ ಅಥವಾ ತೀರಾ ಕಾಮನ್‌ ಆದ ಡಿಸೈನ್‌ನ ಔಟ್‌ಫಿಟ್‌ ಧರಿಸಬೇಡಿ. ಸಮಾರಂಭದಲ್ಲಿ ಎಲ್ಲರ ಮಧ್ಯೆಯೂ ಎದ್ದು ಕಾಣುವಂತಹ ಯೂನಿಕ್‌ ಡಿಸೈನ್‌ನ ಔಟ್‌ಫಿಟ್‌ ಆಯ್ಕೆಗೆ ಆದ್ಯತೆ ನೀಡಿ. ಇಲ್ಲವಾದಲ್ಲಿ ನೀವು ಗುಂಪಲ್ಲಿ ಗೋವಿಂದ ಎಂಬ ಮಾತಿನಂತೆ ಕಾಣಬಹುದು.

Let it suit the personality

ಪರ್ಸನಾಲಿಟಿಗೆ ತಕ್ಕಂತಿರಲಿ

ಮದುಮಗನ ಪರ್ಸನಾಲಿಟಿಗೆ ಮ್ಯಾಚ್‌ ಆಗುವಂತಿರಬೇಕು. ಇಲ್ಲವಾದಲ್ಲಿ ನೋಡುಗರ ನಗೆಪಾಟಲೀಗಿಡಾಗಬಹುದು. ಉದ್ದಗಿರುವವರಿಗೆ ಯಾವುದೇ ಬಗೆಯ ಔಟ್‌ಫಿಟ್‌ ಓಕೆ. ಅದೇ ಕೊಂಚ ಪ್ಲಂಪಿಯಾಗಿರುವವರು ಹಾಗೂ ಕುಳ್ಳಗಿರುವವರು ಆದಷ್ಟೂ ಅವರಿಗೆ ಮ್ಯಾಚ್‌ ಆಗುವಂತಹ ಪ್ರಿಂಟ್ಸ್‌ ಹಾಗೂ ಡಿಸೈನ್‌ ಸ್ಟಿಚ್ಚಿಂಗ್‌ ಪ್ಯಾಟರ್ನ್‌ ಅನ್ನು ಆಯ್ಕೆ ಮಾಡಿಕೊಳ್ಳಬೇಕು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Wedding Fashion: ವೆಡ್ಡಿಂಗ್‌ ಸೀಸನ್‌ನಲ್ಲಿ ಟ್ರೆಂಡಿಯಾದ 3 ಶೈಲಿಯ ವೆಡ್ಡಿಂಗ್‌ ಪರ್ಸ್

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Lipstick Applying Tips: ಪರ್ಫೆಕ್ಟಾಗಿ ಲಿಪ್‌ಸ್ಟಿಕ್‌ ಹಚ್ಚುವುದೇ ಒಂದು ಕಲೆ!

ನೋಡಲು ಆಕರ್ಷಕವಾಗಿ ಹಾಗೂ ಪರ್ಫೆಕ್ಟಾಗಿ ಲಿಪ್‌ಸ್ಟಿಕ್‌ ಹಚ್ಚುವುದು ಒಂದು ಕಲೆ ಎನ್ನುತ್ತಾರೆ ಬ್ಯೂಟಿ ಎಕ್ಸ್ಪಟ್ರ್ಸ್. ಇದಕ್ಕಾಗಿ ಒಂದಿಷ್ಟು ವಿಷಯಗಳನ್ನು ಪಾಲಿಸಿ ಎನ್ನುತ್ತಾರೆ ಅವರು. ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.

VISTARANEWS.COM


on

Lipstick Applying Tips Fashion News
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಲಿಪ್‌ಸ್ಟಿಕ್‌ ಹಚ್ಚುವುದು ಒಂದು ಕಲೆ ಎನ್ನುತ್ತಾರೆ ಬ್ಯೂಟಿ ಎಕ್ಸ್ಪಟ್ರ್ಸ್. ಲಿಪ್‌ಸ್ಟಿಕ್‌ ಖರೀದಿಸುವವರೆಲ್ಲಾ, ಸರಿಯಾಗಿ ಹಚ್ಚಿಕೊಳ್ಳಬಲ್ಲರು ಎಂದಲ್ಲ! ತುಟಿ ಮೇಲೆ ಬಣ್ಣ ಹಚ್ಚಿಕೊಂಡವರೆಲ್ಲರೂ ಎಕ್ಸ್ಪರ್ಟ್ಗಳಲ್ಲ! ಇದಕ್ಕೂ ಒಂದಿಷ್ಟೂ ನಿಯಮಗಳಿವೆ. ಅದನ್ನು ಪಾಲಿಸಿ ಹಚ್ಚಿದವರು ಪರ್ಫೆಕ್ಷನಿಸ್ಟ್ ಗಳು ಎನ್ನಬಹುದು. ಸಮೀಕ್ಷೆಯೊಂದರ ಪ್ರಕಾರ, ಒಂದಿಷ್ಟು ಮಾನಿನಿಯರನ್ನು ಹೊರತುಪಡಿಸಿದಲ್ಲಿ, ಬಹುತೇಕರಿಗೆ ಸರಿಯಾಗಿ ಲಿಪ್‌ಸ್ಟಿಕ್‌ ಹಚ್ಚಲು ಬಾರದು! ಮೆತ್ತುವುದನ್ನೇ ಹಚ್ಚಿಕೊಳ್ಳುವುದು ಎಂದುಕೊಂಡಿದ್ದಾರೆ ಎನ್ನುತ್ತಾರೆ ಅವರು. ಪರ್ಫೆಕ್ಟ್ ಆಗಿ ಹಚ್ಚಲು ಬಯಸುವವರಿಗಾಗಿ ಒಂದಿಷ್ಟು ಟಿಪ್ಸ್ ನೀಡಿದ್ದಾರೆ ಎನ್ನುತ್ತಾರೆ.

ಮೊದಲಿಗೆ ಲಿಪ್‌ಲೈನರ್‌ನಿಂದ ಲೈನ್‌ ಹಾಕಿ

ಯಾವುದೇ ಲಿಪ್‌ಸ್ಟಿಕ್‌ ಹಚ್ಚಿಕೊಳ್ಳುವ ಮುನ್ನ, ಮೊದಲಿಗೆ ಲಿಪ್‌ಲೈನರ್‌ನಿಂದ ನೀಟಾಗಿ ಲೈನ್‌ ಹಾಕಿ. ಇದು ಹಚ್ಚುವ ಲಿಪ್‌ಸ್ಟಿಕನ್ನು ಹಚ್ಚುವಾಗ ಆಚೆ ಹೋಗದಂತೆ ನಿರ್ಬಂಧಿಸುತ್ತದೆ. ಸರಿಯಾದ ಶೇಪ್‌ ಕಾಣುವಂತೆ ಬಿಂಬಿಸುತ್ತದೆ.

ತುಟಿಯ ಬಣ್ಣಕ್ಕೆ ತಕ್ಕಂತೆ ಮ್ಯಾಚ್‌

ಯಾವುದೋ ಒಂದು ಲಿಪ್‌ಸ್ಟಿಕ್‌ ಕೊಂಡು ಹಚ್ಚುವುದು ನಿಮ್ಮ ಅಭ್ಯಾಸವಾಗಬಾರದು. ನಿಮ್ಮ ತುಟಿಯ ಬಣ್ಣಕ್ಕೆ ಹಾಗೂ ಮುಖದ ವರ್ಣಕ್ಕೆ ಯಾವ ಬಣ್ಣ ಚೆನ್ನಾಗಿ ಕಾಣಿಸುತ್ತದೆ ಎಂಬುದನ್ನು ಮೊದಲೇ ಟೆಸ್ಟ್ ಮಾಡಿ, ಖರೀದಿಸಿ. ಇಲ್ಲವಾದಲ್ಲಿ ನೀವು ಹಚ್ಚುವ ಬಣ್ಣ ನಿಮ್ಮನ್ನು ಮುಜುಗರಕ್ಕಿಡು ಮಾಡಬಹುದು.

ಇದನ್ನೂ ಓದಿ: CM Siddaramaiah: ಕುಂಕುಮ ನಿರಾಕರಿಸಿದ ಸಿದ್ದರಾಮಯ್ಯಗೆ ಬಿಜೆಪಿ ನಾಯಕರ ತರಾಟೆ

ಲಿಪ್‌ಸ್ಟಿಕ್‌ ಮೆತ್ತಬೇಡಿ

ಲಿಪ್‌ಸ್ಟಿಕ್‌ ಹಚ್ಚುವುದು ಒಂದು ಕಲೆ. ಅದನ್ನು ಮೆತ್ತುವುದಲ್ಲ!ಅಥವಾ ಪೇಟಿಂಗ್‌ನಂತೆ ಬಳಿಯುವುದಲ್ಲ! ಹಾಗಾಗಿ ಸಮಯವಿದ್ದಾಗ ಮನೆಯಲ್ಲೆ ಲಿಪ್‌ಸ್ಟಿಕ್‌ ತೆಳುವಾಗಿ ಹಚ್ಚುವುದನ್ನು ಕಲಿಯಿರಿ. ಮೆತ್ತಬೇಡಿ.

ಹಲ್ಲಿಗೆ ತಾಗದಂತೆ ಲಿಪ್‌ಸ್ಟಿಕ್‌ ಹಚ್ಚಿ :

ಕೆಲವರು ತುಟಿಗೆ ಹಚ್ಚಿದ ಲಿಪ್‌ಸ್ಟಿಕ್‌ ಹಲ್ಲಿನ ಮೇಲೆ ಹತ್ತಿರುತ್ತದೆ. ಅದನ್ನು ಗಮನಿಸಿರುವುದೇ ಇಲ್ಲ! ಮಾತನಾಡಲು ಬಾಯಿ ತೆರೆದಾಗ ಅದು ಎದುರಿಗಿದ್ದವರಿಗೆ ಕಾಣಿಸುತ್ತದೆ. ಹಾಗಾಗಿ, ಪ್ರತಿಯೊಬ್ಬರು ಲಿಪ್‌ಸ್ಟಿಕ್‌ ಹಚ್ಚಿದ ನಂತರ, ಒಮ್ಮೆ ಕನ್ನಡಿಯ ಮುಂದೆ ನಿಂತು ಸರಿಯಾಗಿದೆಯೇ ಎಂಬುದನ್ನು ನೋಡಿಕೊಳ್ಳಬೇಕು. ಹತ್ತಿದ್ದಲ್ಲಿ ಟಿಶ್ಯೂ ಪೇಪರ್‌ ಬಳಸಿ ತೆಗೆಯಬೇಕು.

ಲಿಪ್‌ಸ್ಟಿಕ್‌ ಹಚ್ಚಿದ ನಂತರ

ಲಿಪ್‌ಸ್ಟಿಕ್‌ ಹಚ್ಚಿದ ನಂತರ ಯದ್ವಾ ತದ್ವಾ ತಿನ್ನಬೇಡಿ! ಮೊದಲೇ ಸೇವಿಸಿ. ಸೇವಿಸುವ ಅಗತ್ಯವಿದ್ದಲ್ಲಿ ಆದಷ್ಟೂ ಸ್ಮಡ್ಜ್‌ ಪ್ರೂಫ್‌ ಆಯ್ಕೆ ಮಾಡಿ. ಇಲ್ಲವಾದಲ್ಲಿ ಈ ಲಿಪ್‌ಸ್ಟಿಕ್‌ ಬಾಯಿಯ ಸುತ್ತಮುತ್ತಲೆಲ್ಲಾ ಹರಡಬಹುದು. ನೋಡಲು ಅಸಹ್ಯವಾಗಿ ಕಾಣಿಸಬಹುದು.

( ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಫ್ಯಾಷನ್

Star travel Fashion: ಪಾರು ಖ್ಯಾತಿಯ ಮೋಕ್ಷಿತಾ ಪೈ ದುಬೈ ಟ್ರಾವೆಲ್‌ ಫ್ಯಾಷನ್‌ ವಿಶೇಷ ಇದು!

ಪಾರು ಸೀರಿಯಲ್‌ ಖ್ಯಾತಿಯ ನಟಿ ಮೋಕ್ಷಿತಾ ಪೈ, ಅರಬ್‌ ರಾಷ್ಟ್ರಗಳನ್ನು ಸುತ್ತಿಬಂದಿದ್ದಾರೆ. ಅತ್ಯಾಕರ್ಷಕವಾಗಿದ್ದ, ಅವರ ಟ್ರಾವೆಲ್‌ ಫ್ಯಾಷನ್‌ನಲ್ಲಿ ಏನೇನಿತ್ತು? ಎಲ್ಲೆಲ್ಲಿ ಹೇಗೆಲ್ಲಾ ತಮ್ಮದೇ ಆದ ಸ್ಟೈಲ್‌ ಸ್ಟೇಟ್‌ಮೆಂಟ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಎಂಬುದರ ಕುರಿತಂತೆ ಖುದ್ದು ಅವರೇ ವಿಸ್ತಾರ ನ್ಯೂಸ್‌ನೊಂದಿಗೆ ಹಂಚಿಕೊಂಡಿದ್ದಾರೆ.

VISTARANEWS.COM


on

Star travel Fashion mokshith pai
ಚಿತ್ರಗಳು: ಮೋಕ್ಷಿತಾ ಪೈ, ನಟಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಅರಬ್‌ ರಾಷ್ಟ್ರಗಳನ್ನು ಸುತ್ತಿ ಬಂದ ನಟಿ ಮೋಕ್ಷಿತಾ ಪೈ ಫ್ಯಾಷನ್‌ ವಾವ್ಹ್ ಎನ್ನುವಂತಿದೆ ಎನ್ನುತ್ತಿದ್ದಾರೆ ಫ್ಯಾಷನ್‌ ವಿಮರ್ಶಕರು. ದುಬೈ, ಅಬುದಾಬಿ ಸೇರಿದಂತೆ ಅರಬ್‌ ರಾಷ್ಟ್ರದಲ್ಲಿನ ನಾನಾ ಜಾಗಗಳನ್ನು ಸುತ್ತುತ್ತ ಬಿಂದಾಸ್‌ ಟೂರ್‌ ಮಾಡಿರುವ ಪಾರು ಅವರ ಟ್ರಾವೆಲ್‌ ಫ್ಯಾಷನ್‌ ಕೂಡ ಟ್ರೆಂಡಿಯಾಗಿತ್ತು. ಇನ್ನು, ಅಲ್ಲಿನ ಹವಮಾನಕ್ಕೆ ತಕ್ಕಂತೆ ಅವರು ಧರಿಸಿದ ಒಂದೊಂದು ಧಿರಿಸುಗಳು ಕೂಡ ಫ್ಯಾಷೆನಬಲ್‌ ಆಗಿದ್ದವು. ಆ ಉಡುಪುಗಳಲ್ಲಿ ಕ್ಲಿಕ್ಕಿಸಿದ ಒಂದೊಂದು ಫೋಟೋಗಳು ಅವರ ಅಭಿಮಾನಿಗಳನ್ನು ಸೆಳೆಯುವಲ್ಲಿ ಯಶಸ್ವಿಯಾದವು ಕೂಡ ಎನ್ನುತ್ತಾರೆ ಫ್ಯಾಷನಿಸ್ಟಾಗಳು.
ಫೇವರೇಟ್‌ ಕಲರ್‌ ಹಾಗೂ ಡ್ರೆಸ್‌ಕೋಡ್‌ನಲ್ಲಿ ಲೈವ್ಲಿಯಾಗಿ ಕಾಣಿಸಿಕೊಂಡಿರುವ ನಟಿ ಪಾರು ತಮ್ಮ ಈ ಟ್ರಾವೆಲ್‌ ಫ್ಯಾಷನ್‌ ಬಗ್ಗೆ ವಿಸ್ತಾರ ನ್ಯೂಸ್‌ನೊಂದಿಗೆ ಹಂಚಿಕೊಂಡಿದ್ದಾರೆ. ಈ ಕುರಿತಂತೆ ಇಲ್ಲಿದೆ ವಿವರ.

ಟ್ರಾವೆಲ್‌ ಸ್ಪಾಟ್‌ಗಳಿಗೆ ತಕ್ಕಂತೆ ಮ್ಯಾಚಿಂಗ್‌

ದುಬೈ ಸೇರಿದಂತೆ ಎಲ್ಲೆಡೆಯೂ ಕೂಡ ಆಯಾ ಜಾಗಗಳಿಗೆ ಮ್ಯಾಚ್‌ ಆಗುವಂತಹ ಔಟ್‌ಫಿಟ್ಸ್ಗೆ ಮಾನ್ಯತೆ ನೀಡಿದ್ದೇನೆ. ಡಂಗ್ರೀಸ್‌ ನನ್ನ ಟ್ರಾವೆಲ್‌ ಫ್ಯಾಷನ್‌ನಲ್ಲಿ ಜೀವ ತುಂಬಿತು. ಕೆಲವೆಡೆ ಲಾಂಗ್‌ ಡಂಗ್ರೀಸ್‌ ಧರಿಸಿದರೇ ಇನ್ನು ಕೆಲವೆಡೆ ಶಾರ್ಟ್ ಡಂಗ್ರೀಸ್‌ ಧರಿಸಿದ್ದೇನೆ. ಇದರೊಂದಿಗೆ ವೈಟ್‌ ಪ್ಯಾಂಟ್‌ ಮೇಲೆ ಸ್ಯಾಟೀನ್‌ ಟಾಪ್‌ನಲ್ಲಿಯೂ ಕಾಣಿಸಿಕೊಂಡಿದ್ದೇನೆ. ದುಬೈನ ಅಂಡರ್‌ ವಾಟರ್‌ ಜೂನಲ್ಲಿ ಅಲ್ಲಿನ ಬ್ಲ್ಯೂ ಥೀಮ್‌ಗೆ ತಕ್ಕಂತೆ ಹೊಂದುವಂತೆ ಫ್ಲೋರಲ್‌ ಫ್ರಾಕ್‌ನಲ್ಲಿ ಎಂಜಾಯ್‌ ಮಾಡಿದ್ದೇನೆ. ಮಿರಾಕಲ್ ಗಾರ್ಡನ್‌ನಲ್ಲಿ, ಫ್ಲೋರಲ್‌ ಪ್ರಿಂಟ್‌ ಇರುವಂತಹ ಲಾಂಗ್‌ ಮ್ಯಾಕ್ಸಿ ಗೌನ್‌ನಲ್ಲಿ ಓಡಾಡಿದ್ದೇನೆ ಎನ್ನುತ್ತಾರೆ ಮೋಕ್ಷಿತಾ ಪೈ.

ಇದನ್ನೂ ಓದಿ: Naseeruddin Shah: ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್‌ ಮೇಲೆ ಗರಂ ಆದ ನಟ ನಾಸಿರುದ್ದೀನ್ ಶಾ!

ಡೆಸರ್ಟ್ ಸಫಾರಿಗೆ ಡಂಗ್ರೀಸ್‌

ಅತಿ ಹೆಚ್ಚು ಬಿಸಿಲಿರುವ ಡೆಸರ್ಟ್ ಸಫಾರಿಯಲ್ಲಿ ಅಂದರೇ, ಮರುಭೂಮಿಯಲ್ಲಿ ಡಂಗ್ರೀಸ್‌ನಲ್ಲಿ ಕಾಣಿಸಿಕೊಂಡೆ. ಅಲ್ಲಿನ ಸುಡು ಬಿಸಿಲಿನಲ್ಲಿ ಸಂರಕ್ಷಣೆ ಮಾಡುವಂತಹ ಔಟ್‌ಫಿಟ್‌ಗೆ ಆದ್ಯತೆ ನೀಡಿದೆ ಎನ್ನುತ್ತಾರೆ.

ಮೋಕ್ಷಿತಾ ಪೈ ಫ್ಯಾಷನ್‌ ಮಾತು

ನಾವು ಎಲ್ಲಿಗೆ ಟ್ರಾವೆಲ್‌ ಮಾಡಲಿ, ಅಲ್ಲಿನ ಜಾಗಗಳಿಗೆ ತಕ್ಕಂತೆ ಔಟ್‌ಫಿಟ್‌ ಧರಿಸಬೇಕು ಎಂದು ಸಲಹೆ ನೀಡುವ ಮೋಕ್ಷಿತಾ ಪೈ, ಫೋಟೋಗಳಲ್ಲೂ ಕೂಡ ಆಕರ್ಷಕವಾಗಿ ಕಾಣಿಸಿಕೊಳ್ಳಬೇಕು. ಇವು ನಮ್ಮ ಜೀವನದ ನೆನಪಿನಲ್ಲಿ ಉಳಿಯುತ್ತವೆ ಎನ್ನುತ್ತಾರೆ.

ಮೋಕ್ಷಿತಾ ಪೈ ಆಕ್ಸೆಸರೀಸ್‌ ಲಿಸ್ಟ್

  1. ಬಿಸಿಲಿಗೆ ಸನ್‌ಗ್ಲಾಸ್‌ ಮಸ್ಟ್.
  2. ಆಕ್ಸೆಸರೀಸ್‌ ಲಿಸ್ಟ್ನಲ್ಲಿ ವಾಚ್‌ ಅತ್ಯಗತ್ಯ.
  3. ಇಂಡೋ-ವೆಸ್ಟರ್ನ್ ಸ್ಟೈಲ್‌ಗೆ ಬ್ರೇಸ್‌ಲೇಟ್‌ ಇರಲೇಬೇಕು.
  4. ಮ್ಯಾಚಿಂಗ್‌ ಬ್ಯಾಗ್‌ ಕ್ಯಾರಿಯ ಸಾಥ್‌
  5. ಮ್ಯಾಚಿಂಗ್‌ ಫುಟ್‌ವೇರ್‌ ಔಟ್‌ಫಿಟ್‌ ಹೈಲೈಟ್‌ ಮಾಡುತ್ತದೆ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಫ್ಯಾಷನ್

Orrys Nut & Bolt Earring Fashion: ವಿಚಿತ್ರ ಸ್ಟೈಲಿಂಗ್‌ ಮಾಡುವ ಪೇಜ್‌ ತ್ರಿ ಸ್ಟಾರ್‌ನ ಕಿವಿ ಅಲಂಕರಿಸಿದ ನಟ್‌ & ಬೋಲ್ಟ್!

ಖ್ಯಾತ ಫ್ಯಾಷನ್‌ ಇನ್‌ಫ್ಲೂಯೆನ್ಸರ್ ಹಾಗೂ ಬಾಲಿವುಡ್‌ ಪೇಜ್‌ ತ್ರಿ ಸ್ಟಾರ್‌ ಒರ್ರಿಯ ಪ್ರಯೋಗಾತ್ಮಕ ಫ್ಯಾಷನ್‌ನಲ್ಲಿ ಇದೀಗ ನಟ್‌ & ಬೋಲ್ಟ್‌ಗೆ (Orrys Nut & Bolt Earring Fashion) ಸ್ಥಾನ ದೊರಕಿದೆ. ಅದು ಹೇಗೆ ಅಂತಿರಾ! ಕಿವಿಯೋಲೆಯ ಜಾಗವನ್ನು ಇವು ಆಕ್ರಮಿಸಿಕೊಂಡಿವೆ. ಒರ್ರಿಯ ಈ ವಿಚಿತ್ರ ಫ್ಯಾಷನ್‌ ಕುರಿತಂತೆ ವಿಮರ್ಶಕರು ಹೇಳುವುದೇನು? ಇಲ್ಲಿದೆ ವಿವರ.

VISTARANEWS.COM


on

Orrys Nut & Bolt Earring Fashion
ಚಿತ್ರಗಳು: ಒರ್ರಿ, ಖ್ಯಾತ ಫ್ಯಾಷನ್‌ ಇನ್ಫ್ಲೂಯೆನ್ಸರ್
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ನಟ್‌ & ಬೋಲ್ಟ್ ಒರ್ರಿಯ ಕಿವಿಯನ್ನೇರಿವೆ. ಹೌದು, ಖ್ಯಾತ ಫ್ಯಾಷನ್‌ ಇನ್‌ಫ್ಲೂಯೆನ್ಸರ್ ಹಾಗೂ ಬಾಲಿವುಡ್‌ ಪೇಜ್‌ ತ್ರಿ ಸ್ಟಾರ್‌ ಒರ್ರಿಯ ಪ್ರಯೋಗಾತ್ಮಕ ಫ್ಯಾಷನ್‌ನಲ್ಲಿ ಇದೀಗ ನಟ್‌ & ಬೋಲ್ಟ್‌ಗೆ (Orrys Nut & Bolt Earring Fashion) ಸ್ಥಾನ ದೊರಕಿದೆ. ಅದು ಯಾವ ರೀತಿಯಲ್ಲಿ ಅಂತಿರಾ! ಸ್ಟಡ್ಸ್ ಹಾಗೂ ರಿಂಗ್‌ಗಳನ್ನು ಧರಿಸುವ ಕಿವಿಯೊಲೆಯ ಜಾಗವನ್ನು ಇವು ಆಕ್ರಮಿಸಿವೆ.

One of Orry's strangest fashions

ಒರ್ರಿಯ ವಿಚಿತ್ರ ಫ್ಯಾಷನ್‌ಗಳಲ್ಲೊಂದು

ಒರ್ರಿಯದು ಇದೆಂತಹ ಫ್ಯಾಷನ್‌? ಇದ್ಯಾವ ಬಗೆಯ ಕ್ರೇಜ್ ಎಂದು ಯೋಚಿಸುತ್ತಿದ್ದೀರಾ! ಇದು ಆತನ ನ್ಯೂ ಸ್ಟೈಲ್‌! ಪ್ರತಿ ಪಾರ್ಟಿ, ಅವಾರ್ಡ್ ಫಂಕ್ಷನ್‌ ಅಥವಾ ಬಾಲಿವುಡ್‌ ಗೆಟ್‌ ಟುಗೆದರ್‌ನಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಒರ್ರಿ ಫ್ಯಾಷನ್‌ ಹಾಗೂ ಸ್ಟೈಲ್‌ ಸ್ಟೇಟ್‌ಮೆಂಟ್‌ಗಳ ಕಥೆಯೇ ಹಾಗೇ! ಒಂದೊಂದು ಬಾರಿಯೂ ಒಂದೊಂದು ರೀತಿಯಲ್ಲಿ ಕಾಣಿಸಿಕೊಳ್ಳುವುದು ಮಾಮೂಲು! ಅದರಲ್ಲೂ, ಚಿತ್ರ-ವಿಚಿತ್ರ ಡಿಸೈನರ್‌ವೇರ್‌ ಇಲ್ಲವೇ, ಮೊಬೈಲ್‌ ಕವರ್‌ ಅಥವಾ ವೈಲ್ಡ್ ಆಕ್ಸೆಸರೀಸ್‌ಗಳನ್ನು ಬಳಸಿ, ಧರಿಸಿ, ನೋಡುಗರ ಹುಬ್ಬೇರಿಸುತ್ತಾರೆ. ಅಷ್ಟೇಕೆ! ಮುಂಬಯಿಯ ಪಾಪ್ಹಾರಾಜಿ ಕೂಡ ಸದಾ ಇವರ ಹಿಂದೆಯೇ ಇದೇ ಕಾರಣಕ್ಕಾಗಿ ಹಿಂದೆ ಬಿದ್ದಿರುತ್ತದೆ. ಪ್ರತಿಬಾರಿಯೂ ತಮ್ಮ ಫಂಕಿ-ಜಂಕ್‌ ಅಥವಾ ವಿಯರ್ಡ್ ಫ್ಯಾಷನ್‌ನಲ್ಲಿ ಕಾಣಿಸಿಕೊಂಡು, ಸೋಷಿಯಲ್‌ ಮೀಡಿಯಾದಲ್ಲೂ ಸದಾ ಕ್ರೇಝಿ ಫ್ಯಾಷನ್‌ ಫೋಟೋಗಳನ್ನು ಅಪ್‌ಲೋಡ್‌ ಮಾಡಿ ಫ್ಯಾಷನ್‌ ಪ್ರಿಯರನ್ನು ಸೆಳೆಯುತ್ತಿರುತ್ತಾರೆ. ಹಾಗಾದಲ್ಲಿ, ಒರ್ರಿಯ ಈ ಫ್ಯಾಷನ್‌ ಬಗ್ಗೆ ಫ್ಯಾಷನ್‌ ವಿಮರ್ಶಕರು ಏನು ಹೇಳುತ್ತಾರೆ? ಇಲ್ಲಿದೆ ಡಿಟೇಲ್ಸ್.

Orrie is experimental fashion

ಒರ್ರಿಯದು ಪ್ರಯೋಗಾತ್ಮಕ ಫ್ಯಾಷನ್‌

ಒರ್ರಿಯದು ತೀರಾ ಹೆಚ್ಚಾದ ಪ್ರಯೋಗಾತ್ಮಕ ಫ್ಯಾಷನ್‌ ಕ್ರೇಝ್‌ ಎನ್ನಬಹುದು. ಯಾಕೆಂದರೇ, ಯಾವುದೇ ಫ್ಯಾಷನ್‌ ವಿಮರ್ಶೆಗೂ ಜಗ್ಗದೇ-ಬಗ್ಗದೇ ತಮ್ಮದೇ ಆದ ಬಿಂದಾಸ್‌ ಫ್ಯಾಷನ್‌ ರೂಲ್ಸ್ ಹುಟ್ಟುಹಾಕಿಕೊಂಡು, ಎಲ್ಲರೂ ಹುಬ್ಬೇರಿಸುವ ಸ್ಟೈಲಿಂಗ್‌ ಮಾಡುವ, ಅದನ್ನು ಕ್ಯಾರಿ ಮಾಡುವ ಒರ್ರಿಯ ಫ್ಯಾಷನ್‌ ಸೆನ್ಸ್ ಮೆಚ್ಚಲೇಬೇಕು! ಇಂತಹ ವ್ಯಕ್ತಿತ್ವ ತೀರಾ ಕಡಿಮೆ ಹುಡುಗರಲ್ಲಿ ಕಂಡುಬರುತ್ತದೆ. ಯಾವುದೇ ಮುಲಾಜಿಲ್ಲದೇ ವೈಲ್ಡ್ ಫ್ಯಾಷನ್‌ನಿಂದಿಡಿದು, ಫಂಕಿ ಫ್ಯಾಷನನ್ನು ಕೂಡ ಕ್ಯಾರಿ ಮಾಡುವ ಒರ್ರಿಯ ಈ ಲೈಫ್‌ಸ್ಟೈಲ್‌ ಬ್ರಾಂಡ್‌ಗೆ ಲೆಬೆಲ್‌ಗೆ ಮಾತ್ರ ಸೀಮಿತವಾಗಿಲ್ಲ! ಬದಲಿಗೆ ಊಹೆಗೂ ಮೀರಿದ ಜಂಕ್‌ ಆಕ್ಸೇಸರೀಸ್‌ ಸ್ಟೈಲಿಂಗ್‌ಗೂ ಸಾಥ್‌ ನೀಡುತ್ತಿದೆ. ಹಾಗಾಗಿ ಇದೀಗ ಒರ್ರಿಯೇ ಸೆಲ್ಫ್‌ ಬ್ರಾಂಡ್‌ ಸೃಷ್ಟಿಸಿಕೊಂಡಿದ್ದಾರೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.
ಒಟ್ಟಿನಲ್ಲಿ, ಪ್ರತಿ ಬಾರಿಯೂ ಫ್ಯಾಷನ್‌ಲೋಕದಲ್ಲಿ ಕ್ರೇಜಿ ಸ್ಟೈಲಿಂಗ್‌ ಮಾಡುವ ಒರ್ರಿಯ ಪ್ರಯೋಗಾತ್ಮಕ ಫ್ಯಾಷನ್‌ಗೆ ಸದ್ಯಕ್ಕೆ ಕೊನೆಯಿಲ್ಲ ಎನ್ನಬಹುದು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Milan Fashion Week 2024: ಮಿಲಾನ್‌ ಫ್ಯಾಷನ್‌ ವೀಕ್‌ನಲ್ಲಿ ಜಪಾನೀಸ್‌ ಲೆಬೆಲ್‌ನ ಹೈ ಫ್ಯಾಷನ್‌ಗೆ ಸೈ ಎಂದ ನಟಿ ರಶ್ಮಿಕಾ ಮಂದಣ್ಣ

Continue Reading

ಫ್ಯಾಷನ್

Milan Fashion Week 2024: ಮಿಲಾನ್‌ ಫ್ಯಾಷನ್‌ ವೀಕ್‌ನಲ್ಲಿ ಜಪಾನೀಸ್‌ ಲೆಬೆಲ್‌ನ ಹೈ ಫ್ಯಾಷನ್‌ಗೆ ಸೈ ಎಂದ ನಟಿ ರಶ್ಮಿಕಾ ಮಂದಣ್ಣ

ಇದೀಗ ನಡೆಯುತ್ತಿರುವ ಮಿಲಾನ್‌ ಫ್ಯಾಷನ್‌ ವೀಕ್‌ನಲ್ಲಿ (Milan Fashion Week 2024) ಜಪಾನೀಸ್‌ ಲೆಬೆಲ್‌ ಆನ್ಇಟ್ಸುಕಾ ಟೈಗರ್‌ ಬ್ರಾಂಡ್‌ನ ಕಂಪ್ಲೀಟ್‌ ಬ್ಲ್ಯಾಕ್ ಡಿಸೈನರ್‌ವೇರ್‌ನಲ್ಲಿ ನಟಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡು ಹೈ ಫ್ಯಾಷನ್‌ಗೆ ಸೈ ಎಂದಿದ್ದಾರೆ. ಅವರ ಲುಕ್‌ ಕುರಿತಂತೆ ಇಲ್ಲಿದೆ ಡಿಟೇಲ್ಸ್.

VISTARANEWS.COM


on

Milan Fashion Week 2024
ಚಿತ್ರಗಳು: ಮಿಲಾನ್‌ ಫ್ಯಾಷನ್ ವೀಕ್‌ನಲ್ಲಿ ನಟಿ ರಶ್ಮಿಕಾ ಮಂದಣ್ಣ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಿಲಾನ್‌ ಫ್ಯಾಷನ್‌ ವೀಕ್‌ನಲ್ಲಿ (Milan Fashion Week 2024) ಕಾಣಿಸಿಕೊಂಡ ನಟಿ ರಶ್ಮಿಕಾ ಮಂದಣ್ಣ, ಬ್ಲ್ಯಾಕ್ ಗೋತ್‌ ಲುಕ್‌ನ ಹೈ ಫ್ಯಾಷನ್‌ಗೆ ಸೈ ಎಂದಿದ್ದಾರೆ. ಈಗಾಗಲೇ ಆರಂಭಗೊಂಡಿರುವ ಈ ಫ್ಯಾಷನ್‌ ವೀಕ್‌ನಲ್ಲಿ ಜಪಾನೀಸ್‌ ಲೆಬೆಲ್‌ ಆನ್ಇಟ್ಸುಕಾ ಟೈಗರ್‌ನ ಬ್ಲ್ಯಾಕ್ ಡಿಸೈನರ್‌ವೇರ್‌ನಲ್ಲಿ ಕಾಣಿಸಿಕೊಂಡಿದ್ದು, ಈ ಬ್ರಾಂಡ್‌ನ ಬ್ರಾಂಡ್‌ ಅಂಬಾಸಡರ್‌ ಕೂಡ ಆಗಿದ್ದಾರೆ. ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.

Rashmika black outfit

ರಶ್ಮಿಕಾ ಬ್ಲ್ಯಾಕ್ ಔಟ್‌ಫಿಟ್‌

ಮುಡಿಯಿಂದ ಕಾಲಿನವರೆಗೂ ಗೌನ್ ನಂತೆ ಕಾಣುವ ಬ್ಲ್ಯಾಕ್ ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡಿರುವ ನಟಿ ರಶ್ಮಿಕಾ ಆನ್‌ಇಟ್ಸೂಕಾ ಲೆಬೆಲ್‌ನ ಆಂಡ್ರಿಯಾ ಪೊಮ್‌ಪಿಲಿಯೊ ಅವರ ಎಕ್ಸ್‌ಕ್ಲೂಸಿವ್‌ ಡಿಸೈನರ್‌ವೇರ್‌ ಧರಿಸಿದ್ದರು. ಅವರು ಧರಿಸಿದ ಲಾಂಗ್‌ ಬ್ಲಾಕ್‌ ಡ್ರೆಸ್‌ ಮೇಲೆ ಮೇಲುಡುಗೆಯಂತೆ ಕಾಣುವ ಒವರ್‌ ಸೈಝ್‌ ಟ್ರೆಂಡಿ ಜಾಕೆಟ್‌ ಧರಿಸಿದ್ದರು. ಇನ್ನು, ಇವಕ್ಕೆಲ್ಲಾ ಮ್ಯಾಚ್‌ ಆಗುವಂತೆ ಬ್ಲಾಕ್‌ ಶೂ ಹಾಕಿದ್ದರು. ಒಟ್ಟಾರೆ, ಬ್ಲಾಕ್‌ ಶೇಡ್‌ನ ಮಾನೋಕ್ರೊಮಾಟಿಕ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು.

Rashmika Makeup

ಹೀಗಿತ್ತು ರಶ್ಮಿಕಾ ಮೇಕಪ್‌

ನೋಡಲು ಹೆಚ್ಚೆನಿಸದ ಮಿನಿಮಲಿಸ್ಟಿಕ್‌ ಮೇಕಪ್‌, ಕಣ್ಣಿಗೆ ಹಚ್ಚಿದ ಕಾಡಿಗೆಗೆ ಮ್ಯಾಚ್‌ ಆಗುವಂತಿದ್ದ ಸ್ಮೋಕಿ ಐ ಮೇಕಪ್‌, ಹಾರಾಡದ, ಹರಡದ ಕೂದಲ ಸ್ಲೀಕ್‌ ಫ್ರೀ ಹೇರ್‌ ಲುಕ್‌, ಅದಕ್ಕೊಂದು ಮಿನುಗುವ ಹೇರ್‌ಪಿನ್‌! ಔಟ್‌ಫಿಟ್‌ಗೆ ಮ್ಯಾಚ್‌ ಆಗುವಂತಿತ್ತು. ಧರಿಸಿದ್ದು ಬ್ಲಾಕ್‌ ಆದರೂ ಮಾಡರ್ನ್ ಲುಕ್‌ ನೀಡಿತ್ತು.

ಪಾಪ್‌ಸ್ಟಾರ್ ಜೊತೆಗೆ ರಶ್ಮಿಕಾ

ಬ್ರಾಂಡ್‌ನ ರ್ಯಾಂಪ್‌ ಶೋನಲ್ಲಿ, ಮುಂದಿನ ಸಾಲಿನ ಗೆಸ್ಟ್ ಲಿಸ್ಟ್ ನಲ್ಲಿದ್ದ ರಶ್ಮಿಕಾ, ಜಪಾನೀಸ್‌ ಲೆಬೆಲ್‌ನ ಮೊದಲ ಭಾರತೀಯ ಬ್ರಾಂಡ್‌ ಅಂಬಾಸಡರ್‌ ಕೂಡ. ಈ ಬ್ರಾಂಡ್‌ನ ಡಿಸೈನರ್‌ವೇರ್‌ಗಳನ್ನು ಧರಿಸಿ ಹೆಜ್ಜೆ ಹಾಕಿದ ಮಾಡೆಲ್‌ಗಳ ವಿಡಿಯೋಗಳನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಸ್ಟೇಟಸ್‌ನಲ್ಲಿ ಹಂಚಿಕೊಂಡು ವಿಶ್‌ ಮಾಡಿದ್ದಾರೆ. ಅಲ್ಲದೇ, ಥಾಯ್‌ ನಟ ಗುಲ್ಫ್ ಕನಾವತ್‌, ಖ್ಯಾತ ಪಾಪ್‌ ಸ್ಟಾರ್‌ ವಾಸಾ ಸೇರಿದಂತೆ ಹಲವು ನಟ-ನಟಿಯರೊಂದಿಗೆ, ಫ್ಯಾಷನ್‌ ದಿಗ್ಗಜರೊಂದಿಗೆ ಭಾಗವಹಿಸಿರುವುದು ಸಂತಸ ತಂದಿದೆ ಎಂದು ಮಾಧ್ಯಮಗಳಿಗೆ ಹೇಳಿಕೊಂಡಿದ್ದಾರೆ.

Actress Rashmika is a sy for high fashion

ಹೈ ಫ್ಯಾಷನ್‌ಗೆ ಸೈ ಎಂದ ನಟಿ

ಬಾಲಿವುಡ್‌ನ ಕೆಲವು ತಾರೆಯರನ್ನು ಹೊರತು ಪಡಿಸಿದರೇ, ದಕ್ಷಿಣ ಭಾರತದ ಅದರಲ್ಲೂ ಸ್ಯಾಂಡಲ್‌ವುಡ್‌ನಿಂದ ಬಾಲಿವುಡ್‌ಗೆ ಹಾರಿದ ನಟಿ ರಶ್ಮಿಕಾ ಮಂದಣ್ಣ, ಮಿಲಾನ್‌ನಂತಹ ಅಂತರಾಷ್ಟ್ರೀಯ ಮಟ್ಟದ ಫ್ಯಾಷನ್‌ ವೀಕ್‌ನಲ್ಲಿ ಭಾಗವಹಿಸಿರುವುದು ಹೆಮ್ಮೆಯ ವಿಚಾರ ಎಂದಿದೆ ಕರ್ನಾಟಕ ಫ್ಯಾಷನ್ ಲೋಕ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: High Street Fashion Spider Earrings: ಯುವತಿಯರ ಹೈ ಸ್ಟ್ರೀಟ್‌ ಫ್ಯಾಷನ್‌ಗೆ ಸೇರಿದ ಸ್ಪೈಡರ್‌ ಇಯರಿಂಗ್ಸ್!

Continue Reading
Advertisement
Job fair at district level every year Complementary training
ಉದ್ಯೋಗ15 mins ago

Job Fair: ಇನ್ನು ಪ್ರತಿ ವರ್ಷ ಜಿಲ್ಲಾ ಮಟ್ಟದಲ್ಲೂ ಉದ್ಯೋಗ ಮೇಳ; ಪೂರಕ ತರಬೇತಿ

channabasava
ಕರ್ನಾಟಕ18 mins ago

Emerging Leader: ದೇಶಕ್ಕಾಗಿ 18 ಗಂಟೆ ದುಡಿಯುವ ಮೋದಿಯವರ ಕೈ ಬಲಪಡಿಸಲು ರಾಜಕಾರಣಕ್ಕೆ: ಚನ್ನಬಸವಣ್ಣ ಬಳತೆ ಮನದ ಮಾತು

Road Accident in Anekal
ಬೆಂಗಳೂರು ಗ್ರಾಮಾಂತರ24 mins ago

Road Accident : ಬೈಕ್‌-ಕಾರು ಡಿಕ್ಕಿ; ಹಿಂಬದಿ ಕುಳಿತಿದ್ದ ಮಹಿಳೆ ಸಾವು

PM Narendra Modi inaugurates 2000 railway projects worth RS 41,000 crore
ಪ್ರಮುಖ ಸುದ್ದಿ31 mins ago

PM Narendra Modi: 2000 ರೈಲ್ವೆ ಪ್ರಾಜೆಕ್ಟ್‌ಗಳಿಗೆ ಪಿಎಂ ಚಾಲನೆ; ಜೂನ್‌ನಿಂದ 3ನೇ ಅವಧಿಗೆ ಸರ್ಕಾರ ಎಂದ ಮೋದಿ

Kannada Name Board Deadline
ಬೆಂಗಳೂರು35 mins ago

Kannada Name Board : ಕನ್ನಡ ನಾಮಫಲಕಕ್ಕೆ ಫೆ. 28 ಕೊನೇ ದಿನ; ಇನ್ನೂ ಬಳಸದವರಿಗೆ ನೋಟಿಸ್‌

CM Siddaramaiah Inauguration of job fair and announces setting up of new GTTC
ಉದ್ಯೋಗ37 mins ago

Job Fair: ಚಾರಿತ್ರಿಕ ಉದ್ಯೋಗ ಮೇಳ ಉದ್ಘಾಟನೆ; ಹೊಸದಾಗಿ GTTC ಸ್ಥಾಪನೆ: ಸಿಎಂ ಮಹತ್ವದ ಘೋಷಣೆ

cricket
ಕ್ರಿಕೆಟ್42 mins ago

IND Vs ENG: ಇಂಗ್ಲೆಂಡ್‌ ವಿರುದ್ಧ 4ನೇ ಟೆಸ್ಟ್‌ ಗೆಲುವು; ಭಾರತಕ್ಕೆ ಸರಣಿ

Man murders old woman to pay off debts
ಬೆಂಗಳೂರು43 mins ago

Murder Case : ಸಾಲ ತೀರಿಸಲು ವೃದ್ಧೆ ಸುಶೀಲಮ್ಮಳ ಉಸಿರುಗಟ್ಟಿಸಿ ಕೊಂದ

Shah Rukh Khan's Adorable Reaction To Allu Arjun's Son
ಬಾಲಿವುಡ್46 mins ago

Shah Rukh Khan: ಅಲ್ಲು ಅರ್ಜುನ್ ಮಗನನ್ನು ಹಾಡಿ ಹೊಗಳಿದ ಶಾರುಖ್‌! ಅದ್ಯಾಕೆ?

Crowd mistakes Arabic words as Quran Verses on the kurta and Pak Women mobbed
ವಿದೇಶ56 mins ago

Pak Woman: ಕುರ್ತಾ ಮೇಲಿನ ಅರೇಬಿಕ್ ಪದಗಳನ್ನು ತಪ್ಪಾಗಿ ತಿಳಿದು ಮಹಿಳೆ ಮೇಲೆ ಹಲ್ಲೆಗೆ ಯತ್ನ

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Crowd mistakes Arabic words as Quran Verses on the kurta and Pak Women mobbed
ವಿದೇಶ56 mins ago

Pak Woman: ಕುರ್ತಾ ಮೇಲಿನ ಅರೇಬಿಕ್ ಪದಗಳನ್ನು ತಪ್ಪಾಗಿ ತಿಳಿದು ಮಹಿಳೆ ಮೇಲೆ ಹಲ್ಲೆಗೆ ಯತ್ನ

read your daily horoscope predictions for february 26 2024
ಭವಿಷ್ಯ9 hours ago

Dina Bhavishya : ಈ ಮೂರು ರಾಶಿಯವರು ಇಂದು ಹೂಡಿಕೆ ವ್ಯವಹಾರದಲ್ಲಿ ತೊಡುಗುವುದು ಬೇಡ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರು ಆಪ್ತರೊಂದಿಗೆ ಗೌಪ್ಯ ವಿಷಯವನ್ನು ಹೇಳುವಾಗ ಎಚ್ಚರ!

Video Viral Student falls under school bus He escaped with minor injuries
ವೈರಲ್ ನ್ಯೂಸ್2 days ago

Video Viral: ಸ್ಕೂಲ್ ಬಸ್‌ನಡಿ ಬಿದ್ದ ವಿದ್ಯಾರ್ಥಿ; ಪಾರಾಗಿದ್ದೇ ಪವಾಡ!

Varthur Santhosh
ಮಂಡ್ಯ2 days ago

Varthur Santhosh: ಮತ್ತೆ ಹಳ್ಳಿಕಾರ್‌ ಒಡೆಯ ವಿವಾದ; ವರ್ತೂರ್‌ ಸಂತೋಷ್ ವಿರುದ್ಧ ಕಾನೂನು ಸಮರ

read your daily horoscope predictions for february 24 2024
ಭವಿಷ್ಯ2 days ago

Dina Bhavishya : ಹೂಡಿಕೆ ವ್ಯವಹಾರದಲ್ಲಿ ಈ ರಾಶಿಯವರಿಗೆ ಸಿಗಲಿದೆ ಸಂಗಾತಿ ಸಾಥ್‌

Staff nurses attempt to convert at health centre in Ratagal village
ಕಲಬುರಗಿ3 days ago

Forced Conversion : ಆಪರೇಶನ್‌ ಮತಾಂತರ; ನರ್ಸ್‌ಗಳಿಂದ ಹಿಂದೂಗಳ ಬ್ರೈನ್‌ ವಾಶ್‌

Fire breaks out in auto shed Burnt autos
ಬೆಂಗಳೂರು3 days ago

Fire Accident : ಬೆಂಗಳೂರಿನಲ್ಲಿ ತಡರಾತ್ರಿ ಭಾರೀ ಅಗ್ನಿ ಅವಘಡ! 40-50 ಆಟೋಗಳು ಬೆಂಕಿಗಾಹುತಿ

He sent a private photo video of his girlfriend
ಬೆಳಗಾವಿ3 days ago

Belgavi News : ನವ ವಿವಾಹಿತೆಯ ಖಾಸಗಿ ವಿಡಿಯೊ ಹರಿಬಿಟ್ಟು ಹಳೇ ಪ್ರೇಮಿ ಕಿತಾಪತಿ!

read your daily horoscope predictions for february 23 2024
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಆಫೀಸ್‌ನಲ್ಲಿ ಬಾಸ್‌ನ ಕಿರಿಕಿರಿಯಿಂದ ದಿನಪೂರ್ತಿ ಟೆನ್ಷನ್‌!

ಟ್ರೆಂಡಿಂಗ್‌