ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕಲರ್‌ಫುಲ್ ಹೂವುಗಳ ಆಕರ್ಷಕ ಕೈ ಉಂಗುರಗಳು (Flower Finger ring) ಇದೀಗ ಫಂಕಿ ಫ್ಯಾಷನ್ ಜ್ಯುವೆಲರಿ ಲೋಕಕ್ಕೆ ಎಂಟ್ರಿ ನೀಡಿವೆ. ಯುವತಿಯರು ಕೈ ಬೆರಳುಗಳಿಗೆ ಧರಿಸಿದಾಗ ನೋಡಲು ಅತ್ಯಾಕರ್ಷಕವಾಗಿ ಕಾಣುವ ಇವು ಲೆಕ್ಕವಿಲ್ಲದಷ್ಟು ಹೂವುಗಳ ವಿನ್ಯಾಸದಲ್ಲಿ ಕಾಣಿಸಿಕೊಂಡಿವೆ.
ಮನಸೆಳೆಯುವ ಡಿಸೈನ್‌ಗಳು
“ಫಂಕಿ ಫಿಂಗರ್ ರಿಂಗ್ ಕಲೆಕ್ಷನ್‌ನಲ್ಲಿ ಸಾಕಷ್ಟು ಬಗೆಯವು ಫ್ಯಾಷನ್ ಲೋಕದಲ್ಲಿ ಬಂದಿವೆ. ಅವುಗಳಲ್ಲಿ ಇದೀಗ ನಾನಾ ಬಗೆಯ ತೋಟದಲ್ಲಿ ಅರಳುವ ಸಾಮಾನ್ಯ ಹೂವುಗಳು ಕಾಣಿಸಿಕೊಂಡಿವೆ. ಇವುಗಳನ್ನು ಧರಿಸಿದಾಗ ಡಿಫರೆಂಟ್ ಆಗಿ ಕಾಣಿಸುತ್ತವೆ. ಕೆಲವಂತೂ ನೈಜ ಹೂವುಗಳನ್ನು ಕೈ ಬೆರಳುಗಳ ಮೇಲೆ ಇರಿಸಿದಂತೆ ಕಾಣುತ್ತವೆ. ಫಂಕಿ ಜ್ಯುವೆಲರಿ ಲಿಸ್ಟ್‌ನಲ್ಲಿ ಇವು ಇದೀಗ ಆಗಮಿಸಿವೆ. ವಿಂಟರ್ ಫ್ರೆಶ್ ಲುಕ್‌ಗೆ ಸಾಥ್ ನೀಡುತ್ತಿವೆ” ಎನ್ನುತ್ತಾರೆ ಜ್ಯುವೆಲರಿ ಡಿಸೈನರ್ ಛಾಯಾ ವರ್ಮಾ. ಅವರ ಪ್ರಕಾರ, ಈ ಫಿಂಗರ್ ರಿಂಗ್‌ಗಳು ಇದೀಗ ವಯಸ್ಸಿನ ಭೇದ ಭಾವವಿಲ್ಲದೇ ಎಲ್ಲಾ ವಯಸ್ಸಿನ ಮಾನಿನಿಯರನ್ನು ಸೆಳೆಯುತ್ತಿವೆ ಎನ್ನುತ್ತಾರೆ.
ಟ್ರೆಂಡ್‌ನಲ್ಲಿರುವ ಫ್ಲವರ್ ಕೈ ಉಂಗುರಗಳು
ಡೈಲಿಯಾ, ಬಗೆಬಗೆಯ ಬಣ್ಣ ಬಣ್ಣದ ರೋಸ್‌ಗಳು, ಸೂರ್ಯಕಾಂತಿ, ಸೇವಂತಿ, ಮಲ್ಲಿಗೆ, ಟುಲಿಪ್ ಸೇರಿದಂತೆ ದೇಸಿ ಹಾಗೂ ವಿದೇಶಿ ಹೂವುಗಳು ಈ ಫ್ಲವರ್ ಕೈ ಉಂಗುರಗಳ ಡಿಸೈನ್‌ನಲ್ಲಿ ದೊರೆಯುತ್ತಿವೆ. ಕೆಲವು ಕ್ಲಾತ್‌ನಲ್ಲಿ ಫ್ಲವರ್ ವಿನ್ಯಾಸಗೊಂಡಿದ್ದರೇ, ಇನ್ನು ಕೆಲವು ಫೈಬರ್ ಇತರೇ ಮೆಟಿರಿಯಲ್‌ನಲ್ಲಿ ಸಿದ್ಧಗೊಂಡಿರುತ್ತವೆ. ಮಿನಿ ಫ್ಲವರ್ ರಿಂಗ್‌ನಿಂದಿಡಿದು ಕಾಕ್‌ಟೈಲ್ ಫಿಂಗರ್ ರಿಂಗ್ ಡಿಸೈನ್‌ನಲ್ಲೂ ಸಿಗುತ್ತವೆ. ಅಷ್ಟು ಮಾತ್ರವಲ್ಲದೇ ಔಟ್‌ಫಿಟ್ ಮ್ಯಾಚಿಂಗ್‌ಗೆ ತಕ್ಕಂತೆಯೂ ದೊರೆಯುತ್ತದೆ. ಇನ್ನು ದೊಡ್ಡ ದೊಡ್ಡ ಹರಳಿನ ಹಾಗೂ ಕ್ರಿಸ್ಟಲ್‌ನ ಫ್ಲರಲ್ ಡಿಸೈನ್‌ನ ಫಿಂಗರ್ ರಿಂಗ್‌ಗಳೂ ಪಾರ್ಟಿವೇರ್‌ಗೆ ಮ್ಯಾಚ್ ಆಗುವಂತೆ ಸಿಗುತ್ತಿವೆ.
ಫ್ಲವರ್ ಫಿಂಗರ್ ರಿಂಗ್ ಪ್ರಿಯರಿಗಾಗಿ
- ಕ್ಯಾಶುವಲ್ ಹಾಗೂ ಎಥ್ನಿಕ್ ಎರಡೂ ಬಗೆಯ ಔಟ್ಫಿಟ್ಗಳಿಗೂ ಧರಿಸಬಹುದು.
- ಒಂದು ಕೈ ಬೆರಳಿಗೆ ಸಾಕು, ಹೆಚ್ಚು ಫಿಂಗರ್ ರಿಂಗ್ಗಳನ್ನು ಧರಿಸುವ ಅಗತ್ಯವಿಲ್ಲ.
- ಡ್ರೆಸ್ ಮ್ಯಾಚಿಂಗ್‌ಗೆ ತಕ್ಕಂತೆ ಕಲರ್ ಫ್ಲವರ್ ರಿಂಗ್ ಧರಿಸಬಹುದು.
- ಕೈಗೆಟಕುವ ದರದಲ್ಲಿ ಇವು ದೊರೆಯುತ್ತವೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Winter Fashion: ಚಳಿಗಾಲದ ಸ್ಟೈಲ್‌ಗೆ ಕಲರ್‌ಫುಲ್ ಫೇಕ್ ಫರ್ ಜಾಕೆಟ್ಸ್ ಎಂಟ್ರಿ!