Flower Finger Ring: ಯುವತಿಯರ ಬೆರಳುಗಳನ್ನು ಅಲಂಕರಿಸಿದ ಫಂಕಿ ಫ್ಲವರ್‌ ಫಿಂಗರ್‌ ರಿಂಗ್‌ - Vistara News

ಫ್ಯಾಷನ್

Flower Finger Ring: ಯುವತಿಯರ ಬೆರಳುಗಳನ್ನು ಅಲಂಕರಿಸಿದ ಫಂಕಿ ಫ್ಲವರ್‌ ಫಿಂಗರ್‌ ರಿಂಗ್‌

ಫಂಕಿ ಲುಕ್‌ ನೀಡುವ ಫ್ಲವರ್‌ ಫಿಂಗರ್‌ ರಿಂಗ್‌ಗಳು (Flower Finger ring) ಇದೀಗ ಫ್ಯಾಷನ್‌ ಜ್ಯುವೆಲರಿ ಲೋಕಕ್ಕೆ ಎಂಟ್ರಿ ನೀಡಿವೆ. ಧರಿಸಿದರೇ ಆಕರ್ಷಕವಾಗಿ ಕಾಣುವ ಇವು ನಾನಾ ವಿನ್ಯಾಸದಲ್ಲಿ ಕಾಣಿಸಿಕೊಂಡಿವೆ. ಯಾವ್ಯಾವ ಬಗೆಯವು ಮಾರುಕಟ್ಟೆಯಲ್ಲಿ ಲಭ್ಯ ಎಂಬುದರ ಬಗ್ಗೆ ಇಲ್ಲಿದೆ ವಿವರ.

VISTARANEWS.COM


on

Flower Finger ring
ಚಿತ್ರಕೃಪೆ : ಪಿಕ್ಸೆಲ್‌
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕಲರ್‌ಫುಲ್‌ ಹೂವುಗಳ ಆಕರ್ಷಕ ಕೈ ಉಂಗುರಗಳು (Flower Finger ring) ಇದೀಗ ಫಂಕಿ ಫ್ಯಾಷನ್‌ ಜ್ಯುವೆಲರಿ ಲೋಕಕ್ಕೆ ಎಂಟ್ರಿ ನೀಡಿವೆ. ಯುವತಿಯರು ಕೈ ಬೆರಳುಗಳಿಗೆ ಧರಿಸಿದಾಗ ನೋಡಲು ಅತ್ಯಾಕರ್ಷಕವಾಗಿ ಕಾಣುವ ಇವು ಲೆಕ್ಕವಿಲ್ಲದಷ್ಟು ಹೂವುಗಳ ವಿನ್ಯಾಸದಲ್ಲಿ ಕಾಣಿಸಿಕೊಂಡಿವೆ.

Attractive designs

ಮನಸೆಳೆಯುವ ಡಿಸೈನ್‌ಗಳು

“ಫಂಕಿ ಫಿಂಗರ್‌ ರಿಂಗ್‌ ಕಲೆಕ್ಷನ್‌ನಲ್ಲಿ ಸಾಕಷ್ಟು ಬಗೆಯವು ಫ್ಯಾಷನ್‌ ಲೋಕದಲ್ಲಿ ಬಂದಿವೆ. ಅವುಗಳಲ್ಲಿ ಇದೀಗ ನಾನಾ ಬಗೆಯ ತೋಟದಲ್ಲಿ ಅರಳುವ ಸಾಮಾನ್ಯ ಹೂವುಗಳು ಕಾಣಿಸಿಕೊಂಡಿವೆ. ಇವುಗಳನ್ನು ಧರಿಸಿದಾಗ ಡಿಫರೆಂಟ್‌ ಆಗಿ ಕಾಣಿಸುತ್ತವೆ. ಕೆಲವಂತೂ ನೈಜ ಹೂವುಗಳನ್ನು ಕೈ ಬೆರಳುಗಳ ಮೇಲೆ ಇರಿಸಿದಂತೆ ಕಾಣುತ್ತವೆ. ಫಂಕಿ ಜ್ಯುವೆಲರಿ ಲಿಸ್ಟ್‌ನಲ್ಲಿ ಇವು ಇದೀಗ ಆಗಮಿಸಿವೆ. ವಿಂಟರ್‌ ಫ್ರೆಶ್‌ ಲುಕ್‌ಗೆ ಸಾಥ್‌ ನೀಡುತ್ತಿವೆ” ಎನ್ನುತ್ತಾರೆ ಜ್ಯುವೆಲರಿ ಡಿಸೈನರ್‌ ಛಾಯಾ ವರ್ಮಾ. ಅವರ ಪ್ರಕಾರ, ಈ ಫಿಂಗರ್‌ ರಿಂಗ್‌ಗಳು ಇದೀಗ ವಯಸ್ಸಿನ ಭೇದ ಭಾವವಿಲ್ಲದೇ ಎಲ್ಲಾ ವಯಸ್ಸಿನ ಮಾನಿನಿಯರನ್ನು ಸೆಳೆಯುತ್ತಿವೆ ಎನ್ನುತ್ತಾರೆ.

Trending flower hand rings

ಟ್ರೆಂಡ್‌ನಲ್ಲಿರುವ ಫ್ಲವರ್‌ ಕೈ ಉಂಗುರಗಳು

ಡೈಲಿಯಾ, ಬಗೆಬಗೆಯ ಬಣ್ಣ ಬಣ್ಣದ ರೋಸ್‌ಗಳು, ಸೂರ್ಯಕಾಂತಿ, ಸೇವಂತಿ, ಮಲ್ಲಿಗೆ, ಟುಲಿಪ್‌ ಸೇರಿದಂತೆ ದೇಸಿ ಹಾಗೂ ವಿದೇಶಿ ಹೂವುಗಳು ಈ ಫ್ಲವರ್‌ ಕೈ ಉಂಗುರಗಳ ಡಿಸೈನ್‌ನಲ್ಲಿ ದೊರೆಯುತ್ತಿವೆ. ಕೆಲವು ಕ್ಲಾತ್‌ನಲ್ಲಿ ಫ್ಲವರ್‌ ವಿನ್ಯಾಸಗೊಂಡಿದ್ದರೇ, ಇನ್ನು ಕೆಲವು ಫೈಬರ್‌ ಇತರೇ ಮೆಟಿರಿಯಲ್‌ನಲ್ಲಿ ಸಿದ್ಧಗೊಂಡಿರುತ್ತವೆ. ಮಿನಿ ಫ್ಲವರ್‌ ರಿಂಗ್‌ನಿಂದಿಡಿದು ಕಾಕ್‌ಟೈಲ್‌ ಫಿಂಗರ್‌ ರಿಂಗ್‌ ಡಿಸೈನ್‌ನಲ್ಲೂ ಸಿಗುತ್ತವೆ. ಅಷ್ಟು ಮಾತ್ರವಲ್ಲದೇ ಔಟ್‌ಫಿಟ್‌ ಮ್ಯಾಚಿಂಗ್‌ಗೆ ತಕ್ಕಂತೆಯೂ ದೊರೆಯುತ್ತದೆ. ಇನ್ನು ದೊಡ್ಡ ದೊಡ್ಡ ಹರಳಿನ ಹಾಗೂ ಕ್ರಿಸ್ಟಲ್‌ನ ಫ್ಲರಲ್‌ ಡಿಸೈನ್‌ನ ಫಿಂಗರ್‌ ರಿಂಗ್‌ಗಳೂ ಪಾರ್ಟಿವೇರ್‌ಗೆ ಮ್ಯಾಚ್‌ ಆಗುವಂತೆ ಸಿಗುತ್ತಿವೆ.

For flower finger ring lovers

ಫ್ಲವರ್‌ ಫಿಂಗರ್‌ ರಿಂಗ್‌ ಪ್ರಿಯರಿಗಾಗಿ

 • ಕ್ಯಾಶುವಲ್‌ ಹಾಗೂ ಎಥ್ನಿಕ್‌ ಎರಡೂ ಬಗೆಯ ಔಟ್‌ಫಿಟ್‌ಗಳಿಗೂ ಧರಿಸಬಹುದು.
 • ಒಂದು ಕೈ ಬೆರಳಿಗೆ ಸಾಕು, ಹೆಚ್ಚು ಫಿಂಗರ್‌ ರಿಂಗ್‌ಗಳನ್ನು ಧರಿಸುವ ಅಗತ್ಯವಿಲ್ಲ.
 • ಡ್ರೆಸ್‌ ಮ್ಯಾಚಿಂಗ್‌ಗೆ ತಕ್ಕಂತೆ ಕಲರ್‌ ಫ್ಲವರ್‌ ರಿಂಗ್‌ ಧರಿಸಬಹುದು.
 • ಕೈಗೆಟಕುವ ದರದಲ್ಲಿ ಇವು ದೊರೆಯುತ್ತವೆ.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Winter Fashion: ಚಳಿಗಾಲದ ಸ್ಟೈಲ್‌ಗೆ ಕಲರ್‌ಫುಲ್‌ ಫೇಕ್‌ ಫರ್‌ ಜಾಕೆಟ್ಸ್ ಎಂಟ್ರಿ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Monsoon Fashion 2024: ಮಾನ್ಸೂನ್‌ ಫ್ಯಾಷನ್‌ಗೆ ಲಗ್ಗೆ ಇಟ್ಟ ಡ್ರೆಸ್ ಕೋಡ್ಸ್

Monsoon Fashion 2024: ಈ ಬಾರಿಯ 2024ರ ಮಾನ್ಸೂನ್‌ ಫ್ಯಾಷನ್‌ ಈಗಾಗಲೇ ಆರಂಭಗೊಂಡಿದ್ದು, ಲೆಕ್ಕವಿಲ್ಲದಷ್ಟು ಶೈಲಿಯವು ಎಂಟ್ರಿ ನೀಡಿವೆ. ಯಾವ್ಯಾವ ಬಗೆಯವು ಈ ಸೀಸನ್‌ನಲ್ಲಿ ರಾರಾಜಿಸಲಿವೆ? ಪಾಪುಲರ್‌ ಆಗಬಹುದಾದ ವಿನ್ಯಾಸಗಳ್ಯಾವುವು? ಎಂಬುದೆಲ್ಲರ ಕುರಿತಾಗಿ ಫ್ಯಾಷನಿಸ್ಟ್‌ಗಳು ಭವಿಷ್ಯ ನುಡಿದಿದ್ದಾರೆ. ಈ ಕುರಿತಂತೆ ಇಲ್ಲಿದೆ ಸಂಕ್ಷೀಪ್ತ ಡಿಟೇಲ್ಸ್.

VISTARANEWS.COM


on

Monsoon Fashion 2024
ಚಿತ್ರ ಕೃಪೆ : ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಾನ್ಸೂನ್‌ ಫ್ಯಾಷನ್‌ ಸೀಸನ್‌ಗೆ ಲಗ್ಗೆ ಇಟ್ಟಿದೆ. ಹೌದು. ಈ ಬಾರಿಯ ಮಳೆಗಾಲದ ಫ್ಯಾಷನ್‌ (Monsoon Fashion 2024) ಈಗಾಗಲೇ ಎಂಟ್ರಿ ನೀಡಿದ್ದು, ಮುಂದಿನ ಎರಡ್ಮೂರು ತಿಂಗಳವರೆಗೆ 2024ರ ಮಾನ್ಸೂನ್‌ ಫ್ಯಾಷನ್‌ನ ಕಾರುಬಾರು ನಡೆಯಲಿದೆ. ಈ ಜಡಿ ಮಳೆಗಾಲದಲ್ಲಿ ಟ್ರೆಂಡಿಯಾಗಲಿರುವ ಡಿಸೈನರ್‌ವೇರ್ಸ್, ವೆಸ್ಟರ್ನ್‌ವೇರ್‌, ಲೇಯರ್‌ ಲುಕ್‌, ಸೀಸನ್‌ವೇರ್ಸ್, ಕಲರ್ಸ್ ಥೀಮ್‌ ಎಲ್ಲವೂ ನಿಧಾನಗತಿಯಲ್ಲಿ ಟ್ರೆಂಡಿಯಾಗಲಿರುವ ಮುನ್ಸೂಚನೆಗಳು ಕಾಣಿಸುತ್ತಿವೆ. ಅಂದಹಾಗೆ, ಯಾವ್ಯಾವ ಶೇಡ್‌ಗಳು ಈ ಮಾನ್ಸೂನ್‌ ಫ್ಯಾಷನ್‌ ಡ್ರೆಸ್‌ಕೋಡ್‌ಗಳಲ್ಲಿ ರಾರಾಜಿಸಬಹುದು? ಯಾವ ಬಗೆಯ ವಿನ್ಯಾಸಗಳು ಟ್ರೆಂಡಿಯಾಗಬಹುದು? ಎಂಬುದೆಲ್ಲರ ಕುರಿತಾಗಿ ಫ್ಯಾಷನಿಸ್ಟ್‌ಗಳು ಇಲ್ಲಿ ಭವಿಷ್ಯ ನುಡಿದಿದ್ದಾರೆ. ಈ ಕುರಿತಂತೆ ಇಲ್ಲಿದೆ ಸಂಕ್ಷೀಪ್ತ ಡಿಟೇಲ್ಸ್.

Monsoon Fashion 2024

ಮಾನ್ಸೂನ್‌ ಫ್ಯಾಷನ್‌ಗೆ ಎಂಟ್ರಿ

“ಪ್ರತಿಬಾರಿಯಂತೆ ಈ ಬಾರಿಯೂ ಕೂಡ ಮಾನ್ಸೂನ್‌ ಸೀಸನ್‌ನಲ್ಲಿ, ಮಳೆಗಾಲಕ್ಕೆ ತಕ್ಕಂತಹ ಡ್ರೆಸ್‌ಕೋಡ್‌ಗಳ ಕಾನ್ಸೆಪ್ಟ್‌ ಬಿಡುಗಡೆಯಾಗಿದೆ. ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದ ಫ್ಯಾಷನಿಸ್ಟ್‌ಗಳು ಹಾಗೂ ಅಪರೆಲ್‌ ಇಂಡಸ್ಟ್ರೀಯ ತಜ್ಞರು ಈ ಸೀಸನ್‌ಗೆ ಬಿಡುಗಡೆಯಾಗುತ್ತಿರುವ ಉಡುಗೆ-ತೊಡುಗೆಗಳ ಸಂಕ್ಷೀಪ್ತ ವಿವರವನ್ನು ಬ್ಯೂಟಿ ಬ್ಲಾಗ್‌ಗಳಲ್ಲಿ ಹಾಗೂ ಫ್ಯಾಷನ್‌ ಸಂದರ್ಶನಗಳಲ್ಲಿ ಹಂಚಿಕೊಂಡಿದ್ದಾರೆ. ಅವರೆಲ್ಲರ ಪ್ರಕಾರ, ಎಂದಿನಂತೆ, ಭಾರತೀಯ ಫ್ಯಾಷನ್ ಪ್ರಿಯರಿಗೆ ಒಗ್ಗುವಂತ ಸ್ಟೈಲಿಶ್‌ ಡ್ರೆಸ್‌ಗಳು ಈ ಮಳೆಗಾಲಕ್ಕೆ ಎಂಟ್ರಿ ನೀಡಿವೆ” ಎನ್ನುತ್ತಾರೆ ಫ್ಯಾಷನಿಸ್ಟ್‌ ಧವನ್‌. ಇನ್ನು ಸ್ಟೈಲಿಸ್ಟ್ ರಾಮ್‌ ಪ್ರಕಾರ, ಮಾನ್ಸೂನ್‌ ಫ್ಯಾಷನ್‌ ಇದೀಗ ಗ್ಲಾಮರಸ್‌ ರಹಿತ ಎನ್ನುವ ಮಾತು ಸುಳ್ಳಾಗಿದೆ. ಈ ಡ್ರೆಸ್‌ಕೋಡ್‌ಗೂ ಗ್ಲಾಮರಸ್‌ ಟಚ್‌ ದೊರಕಿದೆ ಎನ್ನುತ್ತಾರೆ.

Monsoon Fashion 2024

ಮಾನ್ಸೂನ್‌ ಫ್ಯಾಷನ್‌ನಲ್ಲಿ ಅಂತಹದ್ದೇನಿದೆ?

ಸಮ್ಮರ್‌ ಸ್ಪ್ರಿಂಗ್‌ಗೆ ಮಾತ್ರ ಸೀಮಿತವಾಗಿದ್ದ ಫ್ಲೋರಲ್‌ ಹಾಗೂ ಗಾರ್ಡನ್‌ ಪ್ರಿಂಟ್ಸ್ ಡ್ರೆಸ್‌ಗಳು ಈ ಸೀಸನ್‌ನಲ್ಲೂ ಮುಂದುವರೆಯಲಿವೆ. ಲಕ್ಷುರಿ ಜಂಪ್‌ಸೂಟ್‌ಗಳು, ಆಂಕೆಲ್‌ ಲೆಂಥ್‌ , ಹೈ ವೇಸ್ಟ್ ಪ್ಯಾಂಟ್ಸ್, ಶಾರ್ಟ್ ಸೂಟ್ಸ್, ಟ್ರಾಕ್‌ ಸ್ಟಾರ್‌ ಸ್ಟೈಲ್‌ ಡ್ರೆಸ್‌, ನೋ ಪ್ಯಾಂಟ್ಸ್ ಲುಕ್‌, ಬೋಹೋ, ಅಥ್ಲೆಟಿಕ್‌ ಲುಕ್‌, ಬಾಸ್‌ ಲೇಡಿ ಲುಕ್ಸ್, ಮ್ಯಾಕ್ಸಿ ಸ್ಕರ್ಟ್ಸ್, ವಾಟರ್‌ಪ್ರೂಫ್‌ ಬ್ರಿಥೆಬಲ್‌ ಗ್ಲಾಮರಸ್‌ ಡ್ರೆಸ್‌ಗಳು, ಲೇಯರ್‌ ಶೀರ್‌ ಡ್ರೆಸ್‌ಗಳು ಪ್ರಮುಖವಾಗಿ ಎಂಟ್ರಿ ನೀಡಿವೆ.

ಇದನ್ನೂ ಓದಿ: Twinning Fashion: ಪರ್ಫೆಕ್ಟ್ ಟ್ವಿನ್ನಿಂಗ್ ಫ್ಯಾಷನ್‌ಗೆ ಇಲ್ಲಿದೆ 5 ಐಡಿಯಾ!

ವಿನ್ಯಾಸಕ್ಕೆ ಒತ್ತು ನೀಡಿದ ಫ್ಯಾಷನ್‌

ಇನ್ನು, ರಫಲ್ಸ್, ವಿಂಟೇಜ್‌, ಕ್ರೊಚೆಟ್‌, ಪೊಂಚೋ ಡಿಸೈನ್‌ನ ಲೇಯರ್‌ ಲುಕ್‌ ಔಟ್‌ಫಿಟ್ಸ್, ಜಾಕೆಟ್‌ ಡ್ರೆಸ್‌, ಕೋಟ್‌ ಡ್ರೆಸ್‌ಗಳು ಡಿಫರೆಂಟ್‌ ಲುಕ್‌ನಲ್ಲಿ ಜೆನ್‌ ಜಿ ಹುಡುಗಿಯರಿಗೂ ಪ್ರಿಯವಾಗುವಂತಹ ಡಿಸೈನ್‌ನಲ್ಲಿ ಬಿಡುಗಡೆಗೊಂಡಿವೆ. ರಿಚ್‌ ರೆಡ್‌, ಮೆಟಾಲಿಕ್‌, ಗೋಲ್ಡನ್‌, ಯೆಲ್ಲೋ, ಸಿಲ್ವರ್‌, ಪರ್ಪಲ್‌, ಗ್ರೀನ್‌ನಂತಹ ಶೇಡ್‌ಗಳು ಮಳೆಗಾಲದ ಡ್ರೆಸ್‌ಗಳಲ್ಲಿ ಮೆಳೈಸಲಿವೆ ಎನ್ನುತ್ತಾರೆ ಫ್ಯಾಷನಿಸ್ಟ್‌ ರಿಂಕು ವರ್ಮಾ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಫ್ಯಾಷನ್

Twinning Fashion: ಪರ್ಫೆಕ್ಟ್ ಟ್ವಿನ್ನಿಂಗ್ ಫ್ಯಾಷನ್‌ಗೆ ಇಲ್ಲಿದೆ 5 ಐಡಿಯಾ!

Twinning Fashion: ನೋಡಿದಾಗ ಟ್ವಿನ್ನಿಂಗ್‌ ಫ್ಯಾಷನ್‌ ಮಾಡುವುದು ಸುಲಭ ಎಂದೆನಿಸಬಹುದು. ಆದರೆ, ಇದಕ್ಕೂ ಒಂದಿಷ್ಟು ಫ್ಯಾಷನ್‌ ಹಾಗೂ ಸ್ಟೈಲಿಂಗ್‌ ರೂಲ್ಸ್ ಪಾಲಿಸಬೇಕಾಗುತ್ತದೆ. ಈ ಕುರಿತಂತೆ ಸ್ಟೈಲಿಸ್ಟ್‌ಗಳು ಐದು ಐಡಿಯಾ ನೀಡಿದ್ದಾರೆ.

VISTARANEWS.COM


on

Twinning Fashion
ಚಿತ್ರಗಳು: ಸುರಭಿ-ಸಮೃದ್ಧಿ, ನಟಿಯರು
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಪರ್ಫೆಕ್ಟ್ ಟ್ವಿನ್ನಿಂಗ್‌ ಫ್ಯಾಷನ್‌ಗೆ (Twinning Fashion) ಇಲ್ಲಿದೆ 5 ಸಿಂಪಲ್‌ ಐಡಿಯಾ. ಹೌದು, ಯಾರೇ ಟ್ವಿನ್ನಿಂಗ್‌ ಮಾಡಿದಾಗ ಅದನ್ನು ನೋಡಿದವರಿಗೆ ಈ ಫ್ಯಾಷನ್‌ ಮಾಡುವುದು ಸುಲಭ ಎಂದೆನಿಸಬಹುದು. ಆದರೆ, ಇದಕ್ಕೂ ಒಂದಿಷ್ಟು ಫ್ಯಾಷನ್‌ ಹಾಗೂ ಸ್ಟೈಲಿಂಗ್‌ ರೂಲ್ಸ್‌ಗಳಿವೆ. ಅವನ್ನು ಪಾಲಿಸಬೇಕಾಗುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು ಈ ಕುರಿತಂತೆ ಒಂದೈದು ಐಡಿಯಾ ನೀಡಿದ್ದಾರೆ.

Twinning Fashion

ಒಂದೇ ಬಗೆಯ ಡ್ರೆಸ್ಕೋಡ್‌ ಆಯ್ಕೆ

ಟ್ವಿನ್ನಿಂಗ್‌ ಮಾಡಲು ಬಯಸುವ ಸಹೋದರಿಯರು, ಸ್ನೇಹಿತರು ಅಥವಾ ಯಾರೇ ಆಗಲಿ ಒಂದೇ ಬಗೆಯ ಡ್ರೆಸ್‌ ಕೋಡ್‌ ಆಯ್ಕೆ ಮಾಡಬೇಕು. ನೋಡಲು ಒಂದೇ ಶೈಲಿ ಹಾಗೂ ಬಣ್ಣದ್ದಾಗಿರಬೇಕು. ಡಿಸೈನ್‌ ಕೂಡ ಸೇಮ್‌ ಟು ಸೇಮ್‌ ಆಗಿದ್ದರಂತೂ, ಪರ್ಫೆಕ್ಟ್ ಟ್ವಿನ್ನಿಂಗ್‌ ಎಂದನಿಸಿಕೊಳ್ಳುವುದು.

ಟ್ವಿನ್ನಿಂಗ್‌ಗೆ ಮೇಕಪ್‌ ಸಾಥ್‌

ಒಂದೇ ಬಗೆಯ ಡ್ರೆಸ್‌ ಧರಿಸಿ ಟ್ವಿನ್ನಿಂಗ್‌ ಮಾಡಿದರೇ ಸಾಲದು. ಮುಖದ ಮೇಕಪ್‌ ಕೂಡ ಹೊಂದಬೇಕು. ಒಬ್ಬರು ಸಿಂಪಲ್‌ ಮೇಕಪ್‌ ಮತ್ತೊಬ್ಬರು ಮಿನೆರಲ್‌ ಮೇಕಪ್‌, ಇಲ್ಲವೇ ಗ್ರ್ಯಾಂಡ್‌ ಮೇಕಪ್‌ ಮಾಡಿದಲ್ಲಿ, ನೋಡುಗರಿಗೆ ಒಂದೇ ಬಗೆಯದ್ದಾಗಿ ಕಾಣದು. ವಿಭಿನ್ನವಾಗಿ ಕಾಣಿಸಬಹುದು. ಹಾಗಾಗಿ ಟ್ವಿನ್ನಿಂಗ್‌ ಮಾಡುವವರು ಒಂದೇ ಬಗೆಯ ಮೇಕಪ್ ಮಾಡುವುದು ಉತ್ತಮ. ಆಕರ್ಷಕವಾಗಿ ಕಾಣಿಸುವುದು.

Twinning Fashion

ಹೇರ್‌ಸ್ಟೈಲ್‌ ಮ್ಯಾಚಿಂಗ್‌

ಡ್ರೆಸ್‌ಕೋಡ್‌, ಮೇಕಪ್‌ ಜೊತೆಜೊತೆಗೆ ಹೇರ್‌ಸ್ಟೈಲ್‌ ಕೂಡ ಇವೆಲ್ಲಕ್ಕೂ ಮ್ಯಾಚಿಂಗ್‌ ಆಗಬೇಕು. ಆಗ ಟ್ವಿನ್ನಿಂಗ್‌ ಕಾನ್ಸೆಪ್ಟ್ ಚೆನ್ನಾಗಿ ಕಾಣಿಸುವುದು. ಅದು ಯಾವುದೇ ಬಗೆಯ ಹೇರ್‌ಸ್ಟೈಲ್‌ ಆಗಬಹುದು. ಇಬ್ಬರದು ಸೇಮ್‌ ಟು ಸೇಮ್‌ ಹೇರ್‌ಸ್ಟೈಲ್‌ ಆಗಿದ್ದರೇ ಸಾಕು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

Twinning Fashion

ಆಕ್ಸೆಸರೀಸ್‌ ಒಂದೇ ಬಗೆಯದ್ದಾಗಿರಲಿ

ಉಡುಪು, ಮೇಕಪ್‌, ಹೇರ್‌ಸ್ಟೈಲ್‌ ಇವೆಲ್ಲದರ ಜೊತೆಗೆ ಹೊಂದುವಂತೆ ಧರಿಸುವ ಆಕ್ಸೆಸರೀಸ್‌ ಆಯಾ ಡ್ರೆಸ್‌ಕೋಡ್‌ಗೆ ಸರಿಯಾದಲ್ಲಿ ಟ್ವಿನ್ನಿಂಗ್‌ಗೆ ಫುಲ್‌ ಮಾರ್ಕ್ಸ್ ದೊರೆತಂತೆ. ಸ್ಟೇಟ್‌ಮೆಂಟ್‌ ಜ್ಯುವೆಲರಿಗಳು ಈ ಟ್ವಿನ್ನಿಂಗ್‌ ಡ್ರೆಸ್‌ಕೋಡ್‌ಗೆ ಬೆಸ್ಟ್‌ ಜ್ಯುವೆಲರಿಗಳು ಎನ್ನುತ್ತಾರೆ ಡಿಸೈನರ್ಸ್.

Twinning Fashion

ಫೋಟೋಶೂಟ್‌ಗೆ ತಕ್ಕಂತೆ ಪೋಸ್‌

ಟ್ವಿನ್ನಿಂಗ್‌ ಮಾಡುವವರು ಫ್ಯಾಷನೆಬಲ್‌ ಆಗಿ ಕಾಣಿಸಿಕೊಳ್ಳುವುದು ಮಾತ್ರ ಮುಖ್ಯವಲ್ಲ, ಅದರ ಜೊತೆಗೆ ಫೋಟೋಗಳಿಗೆ ಪೋಸ್‌ ನೀಡುವಾಗ ಇಬ್ಬರ ಮೇಕೋವರ್‌ನಿಂದಿಡಿದು ಧರಿಸಿದ ಡ್ರೆಸ್‌ ಹಾಗೂ ಎಲ್ಲವೂ ಒಂದೇ ಬಗೆಯದ್ದಾಗಿ ಬಿಂಬಿಸಲು, ಒಂದೇ ಬಗೆಯ ಪೋಸ್‌ ನೀಡುವುದು ಮುಖ್ಯ ಎಂಬುದು ಸ್ಟೈಲಿಸ್ಟ್ ರಿಂಕು ಅಭಿಪ್ರಾಯ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Floral Jumpsuit fashion: ಔಟಿಂಗ್‌ಗೆ ಪರ್ಫೆಕ್ಟ್ ಔಟ್‌ ಫಿಟ್‌ ಈ ಫ್ಲೋರಲ್‌ ಜಂಪ್‌ ಸೂಟ್‌!

Continue Reading

ಲೈಫ್‌ಸ್ಟೈಲ್

Floral Jumpsuit fashion: ಔಟಿಂಗ್‌ಗೆ ಪರ್ಫೆಕ್ಟ್ ಔಟ್‌ ಫಿಟ್‌ ಈ ಫ್ಲೋರಲ್‌ ಜಂಪ್‌ ಸೂಟ್‌!

Floral Jumpsuit fashion: ಇದೀಗ ಟ್ರೆಂಡಿಯಾಗಿರುವ ಫ್ಲೋರಲ್‌ ಜಂಪ್‌ ಸೂಟ್‌ಗಳು ಕಾಲೇಜು ಹುಡುಗಿಯರನ್ನು ಆಕರ್ಷಿಸಿವೆ. ನೋಡಲು ಲೈವ್ಲಿಯಾಗಿ ಬಿಂಬಿಸುವ ಈ ಔಟ್‌ಫಿಟ್‌ಗಳು ಯಾವ್ಯಾವ ವಿನ್ಯಾಸದಲ್ಲಿ ಹೆಚ್ಚು ಟ್ರೆಂಡಿಯಾಗಿವೆ? ಹೇಗೆಲ್ಲಾ ಧರಿಸಬಹುದು ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಇಲ್ಲಿ ವಿವರಿಸಿದ್ದಾರೆ.

VISTARANEWS.COM


on

Floral Jumpsuit fashion
ಚಿತ್ರಗಳು: ಕರೀಷ್ಮಾ ತನ್ನಾ , ನಟಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮನೋಲ್ಲಾಸ ಹೆಚ್ಚಿಸುವಂತಹ ವೈವಿಧ್ಯಮಯ ಪ್ರಿಂಟ್ಸ್‌ನ ಫ್ಲೋರಲ್‌ ಜಂಪ್‌ಸೂಟ್‌ಗಳು (Floral Jumpsuit fashion) ಇದೀಗ ಕಾಲೇಜು ಹುಡುಗಿಯರನ್ನು ಸವಾರಿ ಮಾಡತೊಡಗಿವೆ. ಈಗಾಗಲೇ ಫ್ಯಾಷನ್‌ನಲ್ಲಿ ಲೆಕ್ಕವಿಲ್ಲದಷ್ಟು ಬಗೆಯ ಜಂಪ್‌ಸೂಟ್‌ಗಳು ಲಗ್ಗೆ ಇಟ್ಟಿದ್ದು, ಅವುಗಳಲ್ಲಿ ನೋಡಲು ಲೈವ್ಲಿಯಾಗಿ ಬಿಂಬಿಸುವಂತಹ ವೆರೈಟಿ ಫ್ಲೋರಲ್‌ ಪ್ರಿಂಟ್ಸ್ನವು ಹೆಚ್ಚು ಬೇಡಿಕೆ ಸೃಷ್ಟಿಸಿಕೊಂಡಿವೆ.

Floral Jumpsuit fashion

ಆಕರ್ಷಕ ಫ್ಲೋರಲ್‌ ಜಂಪ್‌ಸೂಟ್ಸ್

“ಜಂಪ್‌ಸೂಟ್‌ ಎಂದಿಗೂ ಫ್ಯಾಷನ್‌ನಿಂದ ಆಚೆ ಹೋಗದ ಔಟ್‌ಫಿಟ್‌ಗಳು. ಇವುಗಳ ಒಂದಲ್ಲ ಒಂದು ಡಿಸೈನ್ಸ್ ಅಥವಾ ವಿಭಿನ್ನ ಪ್ರಿಂಟ್ಸ್‌ನಿಂದಾಗಿ ಆಗಾಗ್ಗೆ ಫ್ಯಾಷನ್‌ ಲೋಕದಲ್ಲಿ ಸುದ್ದಿ ಮಾಡುತ್ತಿರುತ್ತವೆ. ಸೆಲೆಬ್ರೆಟಿಗಳು ಕೂಡ ತಮ್ಮ ಔಟಿಂಗ್‌ನಲ್ಲಿ ಹಾಗೂ ರಿಲಾಕ್ಸೇಷನ್‌ ಸಮಯದಲ್ಲಿ ಹಾಗೂ ಮಕ್ಕಳೊಂದಿಗೆ ಟ್ವಿನ್ನಿಂಗ್‌ ಮಾಡುವ ಸಮಯದಲ್ಲಿ ಈ ಫ್ಲೋರಲ್‌ ಜಂಪ್‌ ಸೂಟ್‌ಗಳನ್ನು ಧರಿಸುವುದು ಕಂಡು ಬರುತ್ತಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಈ ಮೊದಲು ಸೀಸನ್‌ಗೆ ತಕ್ಕಂತೆ ಬಿಡುಗಡೆಯಾಗುತ್ತಿದ್ದ ಈ ಜಂಪ್‌ಸೂಟ್‌ಗಳು ಇದೀಗ ಎಲ್ಲಾ ಸೀಸನ್‌ಗೂ ಮ್ಯಾಚ್‌ ಆಗುವಂತಹ ಡಿಸೈನ್‌ನಲ್ಲಿ ಬಿಡುಗಡೆಗೊಳ್ಳುತ್ತಿವೆ. ಅದರಲ್ಲೂ ಮಕ್ಕಳು ಹಾಗೂ ಯುವತಿಯರ ಅಭಿರುಚಿಗೆ ಹೊಂದುವಂತಹ ಕಲರ್ಸ್ ಹಾಗೂ ಪ್ರಿಂಟ್ಸ್‌ನಲ್ಲಿ ಬರುತ್ತಿರುವುದು ಟ್ರೆಂಡಿಯಾಗಲು ಕಾರಣವಾಗುತ್ತಿದೆ” ಎಂದು ಹೇಳುತ್ತಾರೆ ವೆಸ್ಟರ್ನ್ ಔಟ್‌ಫಿಟ್ಸ್ ಸ್ಟೈಲಿಸ್ಟ್ ಗಾನ. ಅವರ ಪ್ರಕಾರ, ಇವು ಧರಿಸುವವರಿಗೆ ಯಂಗ್‌ ಲುಕ್‌ ನೀಡುತ್ತವಂತೆ.

ಟ್ರೆಂಡಿಯಾಗಿರುವ ಫ್ಲೋರಲ್‌ ಜಂಪ್‌ಸೂಟ್‌ಗಳಿವು

ಮೊದಲೆಲ್ಲಾ ಕೇವಲ ವಿದೇಶೀ ಹೂವುಗಳ ಪ್ರಿಂಟ್ಸ್‌ನಲ್ಲಿ ಲಭ್ಯವಿದ್ದ ಇವು ಇದೀಗ ದೇಸಿ ಹೂವುಗಳ ಪ್ರಿಂಟ್ಸ್‌ನಲ್ಲೂ ಕಾಣಬಹುದು. ಲಿಲ್ಲಿ, ಆರ್ಕಿಡ್‌, ಟುಲಿಪ್‌, ಸೇವಂತಿ, ಸನ್‌ಫ್ಲವರ್ಸ್ ಬಂಚ್‌, ರೋಸ್‌ ಗಾರ್ಡನ್‌, ಬಟನ್‌ ರೋಸ್‌, ಕಲರ್‌ಫುಲ್‌ ರೋಸ್‌ ಹೀಗೆ ನಾನಾ ಹೂವುಗಳ ಚಿಕ್ಕ ಹಾಗೂ ದೊಡ್ಡ ಫ್ಲೋರಲ್‌ ಪ್ರಿಂಟ್ಸ್ ಇದೀಗ ಚಾಲ್ತಿಯಲ್ಲಿವೆ.

ಇದನ್ನೂ ಓದಿ: Mini Coins Jewel Fashion: ಹುಡುಗಿಯರನ್ನು ಸೆಳೆಯುತ್ತಿರುವ ಮಿನಿ ಕಾಯಿನ್ಸ್ ನೆಕ್ಲೇಸ್‌

ಫ್ಲೋರಲ್‌ ಜಂಪ್‌ಸೂಟ್‌ ಪ್ರಿಯರಿಗೆ 7 ಟಿಪ್ಸ್

 • ಈ ಶೈಲಿಯ ಜಂಪ್‌ಸೂಟ್‌ ಧರಿಸುವಾಗ ಆದಷ್ಟೂ ಸೀಸನ್‌ಗೆ ಹೊಂದುವ ಫ್ಯಾಬ್ರಿಕ್‌ನದ್ದನ್ನು ಆಯ್ಕೆ ಮಾಡಬಹುದು. ಇದರಿಂದ ಕಂಫರ್ಟಬಲ್‌ ಫೀಲ್‌ ಆಗುತ್ತದೆ.
 • ಹೈ ಹೀಲ್ಸ್ ಈ ಔಟ್‌ಫಿಟ್‌ನ ಸೌಂದರ್ಯ ಹೆಚ್ಚಿಸುತ್ತದೆ.
 • ಆಕ್ಸೆಸರೀಸ್‌ ಧರಿಸುವ ಅಗತ್ಯವಿಲ್ಲ.
 • ಸ್ಲಿವ್‌ಲೆಸ್‌ ಹಾಗೂ ಸ್ಲೀವ್‌ ಡಿಸೈನ್‌ ಇರುವಂತವು ದೊರೆಯುತ್ತವೆ.
 • ಜಿಪ್‌ ಹಾಗೂ ಬಟನ್‌ನ ಫ್ಲೋರಲ್‌ ಜಂಪ್‌ಸೂಟ್‌ಗಳಲ್ಲಿ ಜಿಪ್‌ನದ್ದು ಬೆಸ್ಟ್. ಇವನ್ನು ಇನ್ನರ್‌ ಫ್ಯಾಷನ್‌ವೇರ್‌ ಮೇಲೆ ಧರಿಸಬಹುದು.
 • ಒಮ್ಮೆ ಧರಿಸಿದರೇ ಇದನ್ನು ಸುಲಭವಾಗಿ ಬಿಚ್ಚಲು ಸಾಧ್ಯವಿಲ್ಲ.
 • ಆದಷ್ಟೂ ದೊಗಲೆಯಾದ್ದನ್ನು ಆವಾಯ್ಡ್ ಮಾಡಿ. ಸ್ಲಿಮ್‌ ಫಿಟ್‌ ಆಕರ್ಷಕವಾಗಿ ಕಾಣಿಸುತ್ತದೆ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಫ್ಯಾಷನ್

International Yoga Day 2024: ಯೋಗಾಭ್ಯಾಸಕ್ಕೆ ಪುರುಷರ ಉಡುಗೆಗಳು ಹೀಗಿರಬೇಕು

International Yoga Day 2024: ಪುರುಷರ ಯೋಗ ಔಟ್‌ಫಿಟ್ಸ್‌ಗಳು ತೀರಾ ಸಿಂಪಲ್‌! ಇವುಗಳನ್ನು ಧರಿಸಿದಾಗ ಫ್ಯಾಷನಬಲ್‌ ಆಗಿ ಕಾಣಿಸುವುದಿಲ್ಲ, ಬದಲಿಗೆ ಸಿಂಪಲ್‌ ಲುಕ್‌ ಜೊತೆಗೆ ಕಂಫರ್ಟಬಲ್‌ ಫೀಲ್‌ ನೀಡುತ್ತವೆ. ಈ ಲಿಸ್ಟ್‌ನಲ್ಲಿ ಯಾವ್ಯಾವ ಔಟ್‌ಫಿಟ್‌ಗಳಿವೆ ಎಂಬುದರ ಬಗ್ಗೆ ಇಲ್ಲಿದೆ ಡಿಟೇಲ್ಸ್.

VISTARANEWS.COM


on

International Yoga Day 2024
ಚಿತ್ರ ಕೃಪೆ : ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮೆನ್ಸ್ ಯೋಗ ಔಟ್‌ಫಿಟ್ಸ್‌ನಲ್ಲಿ (International Yoga Day 2024) ಸಿಂಪಲ್‌ ಹಾಗೂ ಆರಾಮದಾಯಕ ಎಂದೆನಿಸುವ ಔಟ್‌ಫಿಟ್ಸ್‌ಗಳು ಮಾತ್ರ ಈ ಸೀಸನ್‌ನಲ್ಲಿ ಬೇಡಿಕೆ ಸೃಷ್ಟಿಸಿಕೊಂಡಿವೆ. ಹೌದು. ಪುರುಷರು ಧರಿಸುವ ಯೋಗಾಭ್ಯಾಸದ ಔಟ್‌ಫಿಟ್ಸ್‌ಗಳು ಯುವತಿಯರ ಯೋಗ ಸೆಟ್‌ ಫ್ಯಾಷನ್‌ವೇರ್‌ಗಳಂತೆ ಟ್ರೆಂಡಿಯೂ ಆಗಿಲ್ಲ! ಫ್ಯಾಷೆನಬಲ್‌ ಕೂಡ ಇಲ್ಲ! ಬದಲಿಗೆ ನಾನಾ ಸಂದರ್ಭಗಳಿಗೆ ಧರಿಸಬಹುದಾಗಿದೆ.

International Yoga Day 2024

ಆರಾಮದಾಯಕ ಉಡುಪುಗಳಿಗೆ ಪ್ರಾಮುಖ್ಯತೆ

“ಸಿಂಪಲ್‌ ಶಾರ್ಟ್ಸ್ ಕುರ್ತಾ-ಕಾಟನ್‌ ಪ್ಯಾಂಟ್‌ ಹೊರತುಪಡಿಸಿದಲ್ಲಿ, ಪುರುಷರಿಗೆ ನೋಡಲು ಸಿಂಪಲ್‌ ಲುಕ್‌ ನೀಡುವುದರೊಂದಿಗೆ ಕಂಫರ್ಟಬಲ್‌ ಫೀಲ್‌ ನೀಡುವಂತಹ ಕೆಲವು ವೆಸ್ಟರ್ನ್‌ ಔಟ್‌ಫಿಟ್‌ಗಳು ಯೋಗಾಭ್ಯಾಸದ ಪ್ರಾಕ್ಟೀಸ್‌ಗೆ ಸಾಥ್‌ ನೀಡುತ್ತಿವೆ. ಪುರುಷರು ಮೊದಲು ಪ್ರಾಮುಖ್ಯತೆ ನೀಡುವುದು ಆರಾಮದಾಯಕ ಉಡುಗೆಗಳಿಗೆ ಮಾತ್ರ. ಅದು ಯಾವುದೇ ದೊಡ್ಡ ಬ್ರಾಂಡ್‌ನದ್ದಾದರೂ ಸರಿಯೇ ಸಿಂಪಲ್‌ & ಕಂಫರ್ಟಬಲ್‌ ಎಂದೆನಿಸುವಂತಹ ಔಟ್‌ಫಿಟ್‌ಗಳು ಆಯ್ಕೆ ಅವರದ್ದಾಗಿರುತ್ತದೆ” ಎನ್ನುತ್ತಾರೆ ಮೆನ್ಸ್ ಸ್ಟೈಲಿಸ್ಟ್‌ಗಳು.

International Yoga Day 2024

ಜಾಗರ್ಸ್ ಆಯ್ಕೆ

ಬಹುತೇಕ ಪುರುಷರು ತಮ್ಮ ಯೋಗಾಭ್ಯಾಸಕ್ಕೆ ಅತಿ ಸಾಮಾನ್ಯವಾಗಿ ಧರಿಸುವ ಜಾಗರ್ಸ್ ಸೆಟ್‌ಗಳನ್ನು ಧರಿಸುವುದು ಸಾಮಾನ್ಯವಾಗಿದೆ. ಇದಕ್ಕೆ ಪ್ರಮುಖ ಕಾರಣ, ಧರಿಸಿದಾಗ ಇವು ಆರಾಮದಾಯಕ ಎನಿಸುತ್ತವೆ. ಜೊತೆಗೆ ಬ್ರಿಥಬಲ್‌ ಫ್ಯಾಬ್ರಿಕ್‌ನಿಂದ ಇವು ಸಿದ್ಧಗೊಂಡಿರುವುದರಿಂದ ದೇಹವನ್ನು ಉಸಿರುಗಟ್ಟಿಸುವುದಿಲ್ಲ. ಹಾಗಾಗಿ ಅತಿ ಹೆಚ್ಚು ಪುರುಷರು ಇವನ್ನೇ ಚೂಸ್‌ ಮಾಡತೊಡಗಿದ್ದಾರೆ.

International Yoga Day 2024

ಹುಡುಗರ ಆಯ್ಕೆಯಲ್ಲಿ ಬರ್ಮುಡಾ ಶಾರ್ಟ್ಸ್

ಇನ್ನು, ಕಾಲೇಜು ಯುವಕರು ಹಾಗೂ ಈ ಜನರೇಷನ್‌ನವರು ಯೋಗಾಭ್ಯಾಸಕ್ಕಾಗಿ ಆಯ್ಕೆ ಮಾಡಿಕೊಂಡಿರುವ ಔಟ್‌ಫಿಟ್‌ಗಳಲ್ಲಿ ಬರ್ಮುಡಾ ಶಾರ್ಟ್ಸ್ ಪ್ರಥಮ ಸ್ಥಾನ ಪಡೆದಿದೆ. ಇವು ಕಂಫರ್ಟಬಲ್‌ ಫೀಲ್‌ ನೀಡುವುದರೊಂದಿಗೆ ತಮ್ಮ ಜನರೇಷನ್‌ಗೆ ಮ್ಯಾಚ್‌ ಆಗುತ್ತವೆ ಎಂಬುದು ಅವರ ಯೋಚನೆಯಾಗಿದೆ ಎನ್ನುತ್ತಾರೆ ಯೋಗ ಎಕ್ಸ್‌ಫರ್ಟ್‌ ರಾಜ್‌ ವಿರಾಜ್‌. ಅವರ ಪ್ರಕಾರ, ಅವರವರ ವಯಸ್ಸಿಗೆ ತಕ್ಕಂತೆ ಇವುಗಳ ಆಯ್ಕೆಯಲ್ಲಿ ಬದಲಾವಣೆ ಕಾಣಬಹುದಂತೆ.

ಸ್ವೆಟ್‌ ಪ್ಯಾಂಟ್ಸ್–ಟೀ ಶರ್ಟ್ಸ್

ಸ್ವೆಟ್‌ ಪ್ಯಾಂಟ್ಸ್ ಹಾಗೂ ಕೊಂಚ ಲೂಸಾಗಿರುವ ಕಾಲರ್‌ ಇಲ್ಲದ ಟೀ ಶರ್ಟ್‌ಗಳನ್ನು ಕೂಡ ಅತಿ ಹೆಚ್ಚು ಪುರುಷರು ಯೋಗಾಭ್ಯಾಸಕ್ಕಾಗಿ ಧರಿಸುತ್ತಾರಂತೆ. ಇದಕ್ಕೆ ಕಾರಣವೂ ಇದೆ. ಈ ಔಟ್‌ಫಿಟ್‌ ಯೋಗ ಮಾತ್ರವಲ್ಲದೇ, ಇತರೇ ಸಮಯದಲ್ಲೂ ಧರಿಸಬಹುದು. ಟು ಇನ್‌ ವನ್‌ ಔಟ್‌ಫಿಟ್‌ಗಳಂತೆ ಬಳಬಹುದು ಹಾಗೂ ಮಿಕ್ಸ್‌ ಮ್ಯಾಚ್‌ ಕೂಡ ಮಾಡಬಹುದು. ಹಾಗಾಗಿ ಇವುಗಳ ಬಳಕೆ ಕೂಡ ಹೆಚ್ಚು ಎನ್ನುತ್ತಾರೆ ಸ್ಟೈಲಿಸ್ಟ್ ಧವನ್‌.

ಇದನ್ನೂ ಓದಿ: Yoga Fashion: ಯೋಗ ಕೋ-ಆರ್ಡ್ ಸೆಟ್‌ಗೆ ಸಿಕ್ತು ಗ್ಲಾಮರ್‌ ಟಚ್‌!

ಮೆನ್ಸ್ ಯೋಗ ಔಟ್‌ಫಿಟ್ಸ್ ಟಿಪ್ಸ್

 • ಟೈಟ್‌ ಫಿಟ್‌ ಔಟ್‌ಫಿಟ್ಸ್ ಧರಿಸುವುದು ನಾಟ್‌ ಓಕೆ.
 • ಫ್ಯಾಷನ್‌ಗಿಂತ ಕಂಫರ್ಟಬಲ್‌ ಆಗಿರುವುದು ಮುಖ್ಯ.
 • ಈ ಔಟ್‌ಫಿಟ್‌ ಜೊತೆ ಆಕ್ಸೆಸರೀಸ್‌ ಧರಿಸಕೂಡದು.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading
Advertisement
Viral Video
Latest21 seconds ago

Viral Video: ಮಕ್ಕಳನ್ನು ಖಾಸಗಿ ವಾಹನದಲ್ಲಿ ಶಾಲೆಗೆ ಕಳುಹಿಸುವ ಪೋಷಕರಲ್ಲಿ ಆತಂಕ ಮೂಡಿಸುವ ವಿಡಿಯೊ ಇದು!

Actor Darshan Ram Gopal Varma says ELEPHANT attacking a DOG
ಸ್ಯಾಂಡಲ್ ವುಡ್12 mins ago

Actor Darshan: ರೇಣುಕಾಸ್ವಾಮಿ ಹತ್ಯೆ ಶ್ವಾನದ ಮೇಲೆ ʻಆನೆʼ ದಾಳಿ ಮಾಡಿದಂತೆ ಎಂದ ರಾಮ್​ ಗೋಪಾಲ್ ವರ್ಮಾ!

Bengaluru News Accident Case Dj Halli
ಬೆಂಗಳೂರು25 mins ago

Bengaluru news : ಸೋಪಿನ ಮೇಲೆ ಕಾಲಿಟ್ಟು ಆಯತಪ್ಪಿ ಕಟ್ಟಡದ ಮೇಲಿಂದ ಹಾರಿ ಬಿದ್ದಳು; ಎದೆ ಝಲ್​ ಎನಿಸುವ ದೃಶ್ಯ ಸೆರೆ

Actor Darshan fans turn against D boss
ಸ್ಯಾಂಡಲ್ ವುಡ್37 mins ago

Actor Darshan: ಕಸ್ಟಡಿಯಲ್ಲಿ ʻಡಿ ಬಾಸ್‌ʼ; ನೆಚ್ಚಿನ ನಟನ ವಿರುದ್ಧ ತಿರುಗಿ ಬಿದ್ರಾ ʻದಚ್ಚುʼ ಫ್ಯಾನ್ಸ್?

IND vs BAN
ಕ್ರೀಡೆ42 mins ago

IND vs BAN: ಇಂದಿನ ಪಂದ್ಯಕ್ಕೆ ಟೀಮ್​ ಇಂಡಿಯಾದಲ್ಲಿ ಒಂದು ಮಹತ್ವದ ಬದಲಾವಣೆ

Actress Ramya
ಕರ್ನಾಟಕ45 mins ago

Actress Ramya: ದರ್ಶನ್, ಪ್ರಜ್ವಲ್‌, ಸೂರಜ್, ಯಡಿಯೂರಪ್ಪ ಹೆಸರು ಉಲ್ಲೇಖಿಸಿ ಮತ್ತೆ ಕಿಡಿ ಕಾರಿದ ರಮ್ಯಾ; ಪೋಸ್ಟ್‌ನಲ್ಲಿ ಏನಿದೆ?

Suraj Revanna Case
ಕರ್ನಾಟಕ54 mins ago

Suraj Revanna Case: ಸೂರಜ್ ರೇವಣ್ಣ ವಿರುದ್ಧ ನಮಗೆ ಇನ್ನೂ ಅಧಿಕೃತ ದೂರು ಬಂದಿಲ್ಲ: ಗೃಹ ಸಚಿವ ಪರಮೇಶ್ವರ್‌

Communal Violence
ದೇಶ55 mins ago

Communal Violence: ಭಾರೀ ಕೋಮು ಗಲಭೆ… ಕಲ್ಲು ತೂರಾಟ; ಪೊಲೀಸರಿಗೆ ಗಂಭೀರ ಗಾಯ

Actor Darshan Ganesh Kasaragod About Darshan life
ಸ್ಯಾಂಡಲ್ ವುಡ್1 hour ago

Actor Darshan: ಬದುಕು ನಾಯಿ ಪಾಡು ಆಗ್ಬಿಟ್ಟಿದೆ ಎಂದಿದ್ದ ದರ್ಶನ್;‌ ʻದಚ್ಚುʼ ಏಳು ಬೀಳು ಕುರಿತು ಗಣೇಶ್‌ ಕಾಸರಗೋಡು ಹೇಳಿದ್ದು ಹೀಗೆ!

murder Case
ಹಾವೇರಿ1 hour ago

Murder case : ಹಾವೇರಿಯಲ್ಲಿ ದೊಣ್ಣೆಯಿಂದ ಹೊಡೆದು ಪತ್ನಿಯನ್ನೇ ಕೊಂದ ವೃದ್ಧ; ಶಿವಮೊಗ್ಗದಲ್ಲಿ ತಂದೆಗೆ ಚಾಕು ಹಾಕಿದ ಮಗ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ19 hours ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ1 day ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ2 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು5 days ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು5 days ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ6 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ6 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ6 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ7 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ1 week ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

ಟ್ರೆಂಡಿಂಗ್‌