Site icon Vistara News

ದೇಸಿ ಕ್ರಾಪ್‌ ಟಾಪ್‌ಗೆ ಬಿಂದಾಸ್‌ ಲುಕ್‌

ಸುಮನ್‌ ಗೌಡ್‌, ಮಾಡೆಲ್‌, ನಟಿ

ಶೀಲಾ ಸಿ. ಶೆಟ್ಟಿ ಬೆಂಗಳೂರು

ಕ್ರಾಪ್‌ ಟಾಪ್‌ಗೆ ಇದೀಗ ದೇಸಿ ಬ್ಲೌಸ್‌ ರೂಪ ಸಿಕ್ಕಿದೆ. ವೆಸ್ಟರ್ನ್ ಕ್ಯಾಶುವಲ್‌ ಔಟ್‌ಫಿಟ್‌ಗಳ ಮೊದಲ ಸಾಲಿನಲ್ಲಿದ್ದ ಈ ಕ್ರಾಪ್‌ ಟಾಪ್‌ಗಳಿಗೆ ಇದೀಗ ನಾನಾ ಬಗೆಯ ಹೊಸ ರೂಪ ದೊರಕಿದ್ದು, ವಿನ್ಯಾಸಗಾರರ ಊಹೆಗೂ ಮೀರಿದ ಡಿಸೈನ್‌ಗಳಲ್ಲಿ ಲಭ್ಯವಿದೆ.

ಮಾಡೆಲ್‌, ನಟಿ ಸುಮನಾ ಗೌಡ ಅವರು ಹೇಳುವಂತೆ: ಇದೀಗ ಮಿಕ್ಸ್‌ ಮ್ಯಾಚ್‌ ಫ್ಯಾಷನ್‌ ಅಷ್ಟೇ ಅಲ್ಲ, ಪಕ್ಕಾ ದೇಸಿ ಲುಕ್‌ ನೀಡುವ ವಿನ್ಯಾಸ ಯುವತಿಯರನ್ನು ಸೆಳೆಯುತ್ತಿದೆ. ವೆಸ್ಟರ್ನ್‌ ರೂಪದಲ್ಲಿದ್ದ ಕ್ರಾಪ್‌ ಟಾಪ್‌ ತಮ್ಮ ಮೂಲ ರೂಪವನ್ನು ಕಳೆದುಕೊಂಡು ಸೆಮಿಎಥ್ನಿಕ್‌ ಸ್ಟೈಲ್‌ಗೂ ಸಾಥ್‌ ನೀಡತೊಡಗಿದೆ.

ಸೆಲೆಬ್ರಿಟಿಗಳ ಚಾಯ್ಸ್

ಕ್ರಾಪ್‌ ಟಾಪ್‌ ಬಾಲಿವುಡ್‌ ಮಾತ್ರವಲ್ಲ,ಇದೀಗ ಸ್ಯಾಂಡಲ್‌ವುಡ್‌ ಹಾಗೂ ಕಿರುತೆರೆ ಸೆಲೆಬ್ರಿಟಿಗಳ ಲಿಸ್ಟ್‌ನಲ್ಲಿರುವ ಫ್ಯಾಷನ್‌ವೇರ್‌. ಬಳುಕಾಡುವ ಬೆಲ್ಲಿಯ ಮೇಲೆ ನೋಡಲು ಗಿಡ್ಡ ಟಾಪ್‌ನಂತೆ ಕಾಣುವ, ಹೊಟ್ಟೆಯಿಂದ ಮೇಲೆ, ಸೈಡಲ್ಲಿ -ಮಧ್ಯದಲ್ಲಿ ಅಸೆಮ್ಮಿಟ್ರಿಕಲ್‌ ಸ್ಲಿಟ್ಸ್… ಹೀಗೆ ನಾನಾ ಶೈಲಿಯ ವಿನ್ಯಾಸದಲ್ಲಿ ಪಾಪ್ಯುಲರ್‌ ಆಗಿವೆ. ವೇಸ್ಟ್‌ಲೈನನ್ನು ಹೈಲೈಟ್‌ ಮಾಡುತ್ತಿವೆ.

ಕಾಲೇಜು ಯುವತಿಯರಿಗೂ ಪ್ರಿಯ

ಇನ್ನು ಸ್ಕರ್ಟ್ ಹಾಗೂ ಪ್ಯಾಂಟ್‌ ಮೇಲೆ ಧರಿಸಬಹುದಾದ ಈ ಕ್ರಾಪ್‌ ಟಾಪ್‌ಗಳು ಕ್ಯಾಂಪಸ್‌ ಹುಡುಗಿಯರ ಬಿಂದಾಸ್‌ ಸ್ಟೈಲ್‌ ಸ್ಟೇಟ್‌ಮೆಂಟ್‌ನಲ್ಲಿ ಸೇರಿವೆ. ಇನ್ನು ಕೆಲವರು ಡಿಸೆಂಟ್‌ ಲುಕ್‌ಗಾಗಿ ಇದರ ಮೇಲೊಂದು ವೇಸ್ಟ್‌ಕೋಟ್‌ ಧರಿಸುತ್ತಾರೆ ಎನ್ನುತ್ತಾರೆ ಕಾಲೇಜ್‌ವೊಂದರ ವಿದ್ಯಾರ್ಥಿ ಕ್ರಾಪ್‌ಟಾಪ್‌ ಪ್ರೇಮಿ ದೀಪಿಕಾ.

ಸುಮನ್‌ ಗೌಡ್‌, ಮಾಡೆಲ್‌, ನಟಿ

ಪ್ರಯೋಗಾತ್ಮಕ ಮ್ಯಾಚ್‌ ಮಾಡುವ ಮುನ್ನ

ಕ್ಯಾಶುವಲ್‌ ವೇರ್‌, ನಾರ್ಮಲ್‌ ಪ್ಯಾಂಟ್‌, ಪಲಾಜ್ಹೂ, ಶಾರ್ಟ್ಸ್, ಬರ್ಮಡಾಸ್‌, ಗಿಡ್ಡ ಹಾಗೂ ಉದ್ದನೆಯ ಸ್ಕರ್ಟ್ ಗಳು, ಕೇಪ್ರಿಸ್‌ಗಳಿಗೂ ಕ್ರಾಪ್‌ ಟಾಪ್‌ ಸೂಟ್‌ ಆಗುತ್ತದೆ. ಆದರೆ, ದೇಸಿ ಸ್ಟೈಲ್‌ನದ್ದಾದಲ್ಲಿ ಗಮನಿಸಿಕೊಂಡು ಮ್ಯಾಚ್‌ ಮಾಡಬೇಕು ಎನ್ನುತ್ತಾರೆ ಫ್ಯಾಷನಿಸ್ಟ್‌ ದಿಶಾ.
ಅವರ ಪ್ರಕಾರ: ದೇಸಿ ಕ್ರಾಪ್‌ ಟಾಪ್‌ಗಳು ಇಂದು ಪ್ರಯೋಗಾತ್ಮಕ ಶೈಲಿಯ ಉಡುಪುಗಳಲ್ಲಿ ಟ್ರೆಂಡಿಯಾಗಿವೆ. ನೋಡಲು ಕೊಂಚ ಅಸ್ಸೆಮ್ಮಿಟ್ರಿಕಲ್‌ ಡಿಸೈನ್‌ನಲ್ಲಿ ಇವು ಕಂಡರೂ ಇವು ಪಕ್ಕಾ ಬ್ಲೌಸ್‌ ಅಲ್ಲ. ಇನ್ನು ಸೆಮಿ ಫಾರ್ಮಲ್‌ ಉಡುಪುಗಳಿಗೂ ಕ್ರಾಪ್‌ ಟಾಪ್‌ಗಳನ್ನು ಧರಿಸಬಹುದು.

ಬಿಂದಾಸ್‌ ಲುಕ್‌ಗೆ ಕ್ರಾಪ್‌ ಟಾಪ್‌

ಕ್ರಾಪ್‌ ಟಾಪ್‌ ಯಾವುದೇ ಕಾರಣಕ್ಕೂ ಆಫೀಸ್‌ ವೇರ್‌ಗೆ ಸೂಕ್ತವಲ್ಲ. ಡಿಸಿಪ್ಲೀನ್‌ ಲುಕ್‌ ನೀಡುವುದಿಲ್ಲ ಎನ್ನುವ ಮಾಡೆಲ್‌ ಸುಮನಾ ಹೇಳುವಂತೆ: ಕ್ರಾಪ್‌ ಟಾಪ್‌ ಜತೆಗೆ ಮ್ಯಾಚ್‌ ಆಗುವಂತಹ ಶೇಡ್ಸ್‌, ಇಲ್ಲವೇ ಪ್ರಿಂಟ್ಸ್‌ ಅಥವಾ ಮಾನೋಕ್ರೋಮ್‌ ವರ್ಣದ ಪ್ಯಾಂಟ್‌ ಸೂಟ್‌ ಆಗುತ್ತದೆ. ಕ್ರಾಪ್‌ ಟಾಪ್‌ಗಳಿಗೆ ಆದಷ್ಟೂ ಫಂಕಿ ಆಕ್ಸೆಸರೀಸ್‌ ಧರಿಸುವುದು ಉತ್ತಮ ಎನ್ನುತ್ತಾರೆ ಅವರು.

ದೇಸಿ-ವೆಸ್ಟರ್ನ್ ಶೈಲಿಯ ಕ್ರಾಪ್‌ ಟಾಪ್‌ಗೆ ಸಿಂಪಲ್‌ ಟ್ರಿಕ್ಸ್‌

ಕ್ರಾಪ್‌ ಟಾಫ್ಸ್‌ ಧರಿಸುವಾಗ ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಮೊದಲಿಗೆ ನೀವು ಧರಿಸುತ್ತಿರುವ ಕ್ರಾಪ್‌ ಟಾಪ್‌ ಕ್ಯಾಶುವಲ್‌ ಉಡುಪಿನದ್ದಾ ಅಥವಾ ಎಥ್ನಿಕ್‌ ಸ್ಟೈಲ್‌ಗೆ ಹೊಂದುವಂತದ್ದಾ ಎಂಬುದನ್ನು ಅರಿಯಬೇಕು.

ಧರಿಸುವವರು ತೀರಾ ತೆಳ್ಳಗಿದ್ದಲ್ಲಿ ಆದಷ್ಟೂ ಪ್ರಿಂಟ್ಸ್‌ನದ್ದು ಸೆಲೆಕ್ಟ್ ಮಾಡಿ. ಉದ್ದಗಿರದವರು ಹೈ ಹೀಲ್ಡ್‌ ಧರಿಸುವುದು ಉತ್ತಮ. ಆಕ್ಸೆಸರೀಸ್‌ಗಳು ಕಲರ್‌ಫುಲ್‌ ಆಗಿದ್ದರೆ ಚೆನ್ನ. ಎಲ್ಲವೂ ಮ್ಯಾಚಿಂಗ್‌ ಇರಬೇಕಾಗಿಲ್ಲ. ಇನ್ನು ಹೇರ್‌ಸ್ಟೈಲ್‌ ವಿಷಯಕ್ಕೆ ಬಂದಲ್ಲಿ, ಹೈ ಪೋನಿ, ಫಿಶ್‌ಟೇಲ್‌, ಸೈಡ್‌ ಪೋನಿ, ಲಾಂಗ್‌ ಸೈಡ್‌ ಚೋಟಿಯಂತವು ಪರ್ಫೆಕ್ಟ್ ಸೂಟ್‌ ಆಗುತ್ತವೆ. ಹೇರ್‌ ಕಲರಿಂಗ್‌ ಇದ್ದಲ್ಲಿ ಸ್ಟೈಲ್‌ಸ್ಟೇಟ್‌ಮೆಂಟ್‌ ಹೈಲೈಟ್‌ ಆಗುತ್ತದೆ.

(ಲೇಖಕಿ ಫ್ಯಾಷನ್ ಪತ್ರಕರ್ತೆ)

Exit mobile version