ಶೀಲಾ ಸಿ. ಶೆಟ್ಟಿ, ಬೆಂಗಳೂರು
ಪ್ರತಿ ವಿಂಟರ್ ಸೀಸನ್‌ನಲ್ಲೂ ಬ್ಲಾಕ್ ಶೇಡ್ ಡಿಸೈನರ್‌ವೇರ್‌ಗಳು (Winter Black fashion) ಚಾಲ್ತಿಗೆ ಬರುತ್ತವೆ. ಅದೇ ರೀತಿ ಈ ಬಾರಿಯೂ ಕೂಡ ಬ್ಲ್ಯಾಕ್‌ನ ನಾನಾ ವಿನ್ಯಾಸದ ಡಿಸೈನರ್‌ವೇರ್‌ಗಳು ಹೊಸ ವಿನ್ಯಾಸದಲ್ಲಿ ಕಾಲಿಟ್ಟಿವೆ. ವೆಸ್ಟರ್ನ್ ಹಾಗೂ ಎಥ್ನಿಕ್ ಎರಡೂ ಕಾನ್ಸೆಪ್ಟ್‌ಗಳಲ್ಲೂ ಹೊಸ ರೂಪದಲ್ಲಿ ಬಿಡುಗಡೆಗೊಂಡಿವೆ.
ಹೌದು. ಫ್ಯಾಷನ್ ಡಿಸೈನರ್‌ಗಳ ಪ್ರಕಾರ, ಕಪ್ಪು ಬಣ್ಣ ಸೀರಿಯಸ್ ಕ್ಲಾಸಿಕ್ ಬಣ್ಣ. ಅಷ್ಟೇ ಅಲ್ಲ, ಈ ಸೀಸನ್‌ನ ಪಾರ್ಟಿವೇರ್‌ಗೆ ಸೂಟ್ ಆಗುವ ಟ್ರೆಂಡಿ ಕಲರ್ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಬ್ಲ್ಯಾಕ್ ಈಸ್ ಕ್ಲಾಸಿಕ್
ಇನ್ನು, ಮೊದಲಿನಂತೆ, ಕಪ್ಪು ಬಣ್ಣ ಎಂದರೇ ಅಪಶಕುನ-ಅನಿಷ್ಟ ಎಂಬ ಮೂಢನಂಬಿಕೆ ಸಿಟಿ ಜನರಿಂದ ದೂರವಾಗಿದೆ. ಹಾಗಾಗಿ ಇತ್ತೀಚೆಗೆ ಈ ಬ್ಲಾಕ್ ಶೇಡ್‌ಗಳ ಔಟ್‌ಫಿಟ್‌ಗಳು ಹೆಚ್ಚು ಚಾಲ್ತಿಗೆ ಬಂದಿವೆ. ಇದಕ್ಕೆ ಪೂರಕ ಎಂಬಂತೆ, ಚಳಿಗಾಲದ ಚಳಿಗೆ ಬೆಚ್ಚಗಿಡಬಹುದಾದ ಬ್ಲ್ಯಾಕ್ ಶೇಡ್ಸ್‌ನ ಜಾಕೆಟ್-ಪುಲ್‌ಓವರ್ಸ್ ಬ್ಲ್ಯಾಕ್ ಉಡುಪನ್ನು ಬ್ಯೂಟಿಫುಲ್ ಆಗಿಸುತ್ತಿವೆ ಎನ್ನುತ್ತಾರೆ. ಬ್ಲ್ಯಾಕ್ ಈಸ್ ಕ್ಲಾಸಿಕ್ ಎನ್ನುವ ಮಾಡೆಲ್ ವಿನಯ್‌ಗೆ ಬ್ಲಾಕ್ ಮೇಲೆ ಹೆಚ್ಚು ಮೋಹವಿದೆ. ಬಹಳಷ್ಟು ಫ್ಯಾಷನ್ ಶೋಗಳಲ್ಲಿ ಹುಡುಗರಿಗೆ ಬ್ಲಾಕ್ ಶೇಡ್ಸ್ ಕಲರ್‌ಗಳ ಉಡುಪುಗಳನ್ನೇ ನೀಡಲಾಗುತ್ತದೆ ಎನ್ನುವ ಇವರ ಪ್ರಕಾರ, ಹುಡುಗರಿಗೆ ಬ್ಲಾಕ್ ಶೇಡ್ಸ್‌ನ ಜೀನ್ಸ್ ಹಾಗೂ ಜಾಕೆಟ್‌ಗಳು ಗುಡ್‌ಲುಕ್ಕಿಂಗ್ ಕಲರ್‌ಗಳು. ವಿಪರ್ಯಾಸ ಅಂದರೇ, ಟೀನೆಜ್ ಹೈಕಳಿಗೆ ಮಾತ್ರ ಈ ಕಲರ್ ನಾಟ್ ಓಕೆ. ಯಾಕಂದ್ರೆ, ಬಬ್ಲಿಯಾಗಿರುವ ಅವರು ತೀರಾ ಸೀರಿಯಸ್ ಆಗಿ ಕಂಡರೇ ಚೆನ್ನಾಗಿರೋದಿಲ್ಲನೋಡಿ, ಅದಕ್ಕೆ ಎನ್ನುತ್ತಾರೆ.
ಬ್ಲಾಕ್ ಜತೆಮಿಕ್ಸ್ ಮಾಡಿ ಇನ್ನಿತರೇ ಶೇಡ್ಸ್
ಯಾವುದೇ ಬ್ಲಾಕ್ ಕಲರ್ ಜತೆ ಆದಷ್ಟೂ ಪರ್ಪಲ್ ಅಂದರೇ ನೇರಳೆ ಬಣ್ಣ ಅಥವಾ ಮಜಂತಾ, ಡಾರ್ಕ್ ಮರೂನ್ ಕಲರ್ಸ್‌ಗಳು ಸಾಥ್ ನೀಡುತ್ತವೆ. ಇನ್ನು ಬೆರ್ರಿ, ಡಾರ್ಕ್ ಪರ್ಪಲ್, ಮಲ್ಬೆರ್ರಿ, ವೈನ್ ಕಲರ್ಸ್ ಮತ್ತಷ್ಟು ಗ್ಲ್ಯಾಮರಸ್ ಲುಕ್ ನೀಡುತ್ತವೆ. ಇದು ಮೇನ್ಸ್‌ವೇರ್ ಆಗಬಹುದು ಇಲ್ಲವೇ ಲೇಡಿಸ್ ವೇರ್ ಆಗಬಹುದು ಎಂದು ಸಲಹೆ ನೀಡುತ್ತಾರೆ ಸ್ಟೈಲಿಸ್ಟ್ ರಾಣಿ. ಅವರ ಪ್ರಕಾರ, ಈ ಸೀಸನ್‌ನಲ್ಲಿ ಅತಿ ಹೆಚ್ಚು ಮಿಕ್ಸ್ ಮ್ಯಾಚ್ ಬ್ಲಾಕ್ ಔಟ್‌ಫಿಟ್‌ಗಳು ಲಭ್ಯವಿದೆಯಂತೆ.
ಬ್ಲಾಕ್‌ನ ನಾನಾ ಶೇಡ್‌ಗಳು
ಇನ್ನು, ಕಪ್ಪು ಬಣ್ಣವೊಂದರಲ್ಲೆ ಸುಮಾರು 10 ಕ್ಕೂ ಹೆಚ್ಚು ಫ್ಯಾಷನ್ ಶೇಡ್ಸ್‌ಗಳಿವೆ. ವಾರ್ಮ್ ಹಾಗೂ ಕೋಲ್ಡ್ ಕಲರ್ಸ್ ಇಂದು ಅತಿ ಹೆಚ್ಚು ಟ್ರೆಂಡ್‌ನಲ್ಲಿವೆ. ಇನ್ನು ವಾರ್ಮ್ ಶೇಡ್ಸ್‌ನಲ್ಲಿಗಾಢ ಕೆಂಪು ಹೆಚ್ಚು ಪ್ರಚಲಿತದಲ್ಲಿವೆ. ಕೋಲ್ಡ್ ಶೇಡ್ಸ್‌ನಲ್ಲಿ ಬ್ಲ್ಯೂಯಿಶ್-ಗ್ರೀನಿಶ್ ಬಣ್ಣಗಳು ಹಾಟ್ ಟ್ರೆಂಡಿಯಾಗಿವೆ. ಇನ್ನು ಎಲ್ಲರಿಗೂ ಗೊತ್ತಿರುವಂತೆ, ವೈಟ್ ಅಂಡ್ ಬ್ಲ್ಯಾಕ್ ಸ್ಟ್ರೈಪ್ ಡಿಸೈನ್ಸ್‌ಗಳಂತೂ ಸಾಕಷ್ಟು ಜನಪ್ರಿಯವಾಗಿವೆ.
ಯೂನಿವರ್ಸಲ್ ಮ್ಯಾಚಿಂಗ್
ಬ್ಲ್ಯಾಕ್ ಬಣ್ಣ ಯೂನಿವರ್ಸಲ್ ಬಣ್ಣ ಎಂದೇ ಹೇಳಬಹುದು. ಆದ್ರೆ, ಈ ಬಣ್ಣದ ಡಿಸೈನ್ಸ್ ಚೆನ್ನಾಗಿರಬೇಕಷ್ಟೇ. ಮೆಟಿರೀಯಲ್ ಗುಣಮಟ್ಟದ್ದಾಗಿರಬೇಕು ಎಂಬುದು ಮಾಡೆಲ್ ದೀಪ್ತಿ ಅಭಿಪ್ರಾಯ.
ಬ್ಲ್ಯಾಕ್ ಔಟ್‌ಫಿಟ್ ಟಿಪ್ಸ್
- ಶಿಮ್ಮರ್ ಬ್ಲ್ಯಾಕ್ ಡ್ರೆಸ್ ನೈಟ್ ಪಾರ್ಟಿಗಳಿಗೆ ಸಖತ್ ಆಗಿ ಕಾಣುತ್ತದೆ.
- ಬ್ರೈಟ್ ಆಕ್ಸೆಸ್ಸರೀಸ್, ಕಾಂಟ್ರಸ್ಟ್ ಕಲರ್ಸ್ ಸಖತ್ ಮ್ಯಾಚಿಂಗ್
- ಮಾನೋಕ್ರೋಮ್ ಬ್ಲ್ಯಾಕ್ ಡ್ರೆಸ್ ಆದಲ್ಲಿ, ಅದಕ್ಕೆ ಶೈನಿ ಶೇಡ್ಸ್ ಸ್ಕಾರ್ಫ್ -ಸ್ಟೋಲ್ಸ್ ಬಳಸಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Funky Pant Suit Fashion: ಮೆನ್ಸ್ ಕ್ಲಾಸಿ ಪ್ಯಾಂಟ್ ಸೂಟ್‌ಗೂ ಸಿಕ್ತು ಫ್ಯಾನ್ಸಿ ಫಂಕಿ ಲುಕ್!