Winter Black Fashion: ವಿಂಟರ್‌ ಸೀಸನ್‌ನಲ್ಲಿ ಟ್ರೆಂಡಿಯಾದ ಬ್ಲ್ಯಾಕ್‌ ಡಿಸೈನರ್‌ವೇರ್ಸ್ - Vistara News

ಫ್ಯಾಷನ್

Winter Black Fashion: ವಿಂಟರ್‌ ಸೀಸನ್‌ನಲ್ಲಿ ಟ್ರೆಂಡಿಯಾದ ಬ್ಲ್ಯಾಕ್‌ ಡಿಸೈನರ್‌ವೇರ್ಸ್

ಪ್ರತಿ ವಿಂಟರ್‌ ಸೀಸನ್‌ನಲ್ಲೂ ಬ್ಲ್ಯಾಕ್‌ ಶೇಡ್‌ ಡಿಸೈನರ್‌ವೇರ್‌ಗಳು (Winter Black fashion) ಚಾಲ್ತಿಗೆ ಬರುತ್ತವೆ. ಅದೇ ರೀತಿ ಈ ಬಾರಿಯೂ ಕೂಡ ಬ್ಲ್ಯಾಕ್‌ನ ನಾನಾ ವಿನ್ಯಾಸದ ಡಿಸೈನರ್‌ವೇರ್‌ಗಳು ಹೊಸ ವಿನ್ಯಾಸದಲ್ಲಿ ಕಾಲಿಟ್ಟಿವೆ. ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.

VISTARANEWS.COM


on

Winter Black Fashion
ಚಿತ್ರಕೃಪೆ : ಪಿಕ್ಸೆಲ್‌
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಪ್ರತಿ ವಿಂಟರ್‌ ಸೀಸನ್‌ನಲ್ಲೂ ಬ್ಲಾಕ್‌ ಶೇಡ್‌ ಡಿಸೈನರ್‌ವೇರ್‌ಗಳು (Winter Black fashion) ಚಾಲ್ತಿಗೆ ಬರುತ್ತವೆ. ಅದೇ ರೀತಿ ಈ ಬಾರಿಯೂ ಕೂಡ ಬ್ಲ್ಯಾಕ್‌ನ ನಾನಾ ವಿನ್ಯಾಸದ ಡಿಸೈನರ್‌ವೇರ್‌ಗಳು ಹೊಸ ವಿನ್ಯಾಸದಲ್ಲಿ ಕಾಲಿಟ್ಟಿವೆ. ವೆಸ್ಟರ್ನ್ ಹಾಗೂ ಎಥ್ನಿಕ್‌ ಎರಡೂ ಕಾನ್ಸೆಪ್ಟ್‌ಗಳಲ್ಲೂ ಹೊಸ ರೂಪದಲ್ಲಿ ಬಿಡುಗಡೆಗೊಂಡಿವೆ.
ಹೌದು. ಫ್ಯಾಷನ್‌ ಡಿಸೈನರ್‌ಗಳ ಪ್ರಕಾರ, ಕಪ್ಪು ಬಣ್ಣ ಸೀರಿಯಸ್‌ ಕ್ಲಾಸಿಕ್‌ ಬಣ್ಣ. ಅಷ್ಟೇ ಅಲ್ಲ, ಈ ಸೀಸನ್‌ನ ಪಾರ್ಟಿವೇರ್‌ಗೆ ಸೂಟ್‌ ಆಗುವ ಟ್ರೆಂಡಿ ಕಲರ್‌ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

Black is classic

ಬ್ಲ್ಯಾಕ್‌ ಈಸ್‌ ಕ್ಲಾಸಿಕ್‌

ಇನ್ನು, ಮೊದಲಿನಂತೆ, ಕಪ್ಪು ಬಣ್ಣ ಎಂದರೇ ಅಪಶಕುನ-ಅನಿಷ್ಟ ಎಂಬ ಮೂಢನಂಬಿಕೆ ಸಿಟಿ ಜನರಿಂದ ದೂರವಾಗಿದೆ. ಹಾಗಾಗಿ ಇತ್ತೀಚೆಗೆ ಈ ಬ್ಲಾಕ್‌ ಶೇಡ್‌ಗಳ ಔಟ್‌ಫಿಟ್‌ಗಳು ಹೆಚ್ಚು ಚಾಲ್ತಿಗೆ ಬಂದಿವೆ. ಇದಕ್ಕೆ ಪೂರಕ ಎಂಬಂತೆ, ಚಳಿಗಾಲದ ಚಳಿಗೆ ಬೆಚ್ಚಗಿಡಬಹುದಾದ ಬ್ಲ್ಯಾಕ್‌ ಶೇಡ್ಸ್‌ನ ಜಾಕೆಟ್‌-ಪುಲ್‌ಓವರ್ಸ್‌ ಬ್ಲ್ಯಾಕ್‌ ಉಡುಪನ್ನು ಬ್ಯೂಟಿಫುಲ್‌ ಆಗಿಸುತ್ತಿವೆ ಎನ್ನುತ್ತಾರೆ. ಬ್ಲ್ಯಾಕ್‌ ಈಸ್‌ ಕ್ಲಾಸಿಕ್‌ ಎನ್ನುವ ಮಾಡೆಲ್‌ ವಿನಯ್‌ಗೆ ಬ್ಲಾಕ್‌ ಮೇಲೆ ಹೆಚ್ಚು ಮೋಹವಿದೆ. ಬಹಳಷ್ಟು ಫ್ಯಾಷನ್‌ ಶೋಗಳಲ್ಲಿ ಹುಡುಗರಿಗೆ ಬ್ಲಾಕ್‌ ಶೇಡ್ಸ್‌ ಕಲರ್‌ಗಳ ಉಡುಪುಗಳನ್ನೇ ನೀಡಲಾಗುತ್ತದೆ ಎನ್ನುವ ಇವರ ಪ್ರಕಾರ, ಹುಡುಗರಿಗೆ ಬ್ಲಾಕ್‌ ಶೇಡ್ಸ್‌ನ ಜೀನ್ಸ್‌ ಹಾಗೂ ಜಾಕೆಟ್‌ಗಳು ಗುಡ್‌ಲುಕ್ಕಿಂಗ್‌ ಕಲರ್‌ಗಳು. ವಿಪರ್ಯಾಸ ಅಂದರೇ, ಟೀನೆಜ್‌ ಹೈಕಳಿಗೆ ಮಾತ್ರ ಈ ಕಲರ್‌ ನಾಟ್‌ ಓಕೆ. ಯಾಕಂದ್ರೆ, ಬಬ್ಲಿಯಾಗಿರುವ ಅವರು ತೀರಾ ಸೀರಿಯಸ್‌ ಆಗಿ ಕಂಡರೇ ಚೆನ್ನಾಗಿರೋದಿಲ್ಲನೋಡಿ, ಅದಕ್ಕೆ ಎನ್ನುತ್ತಾರೆ.

Mix with block and other shades

ಬ್ಲಾಕ್‌ ಜತೆಮಿಕ್ಸ್ ಮಾಡಿ ಇನ್ನಿತರೇ ಶೇಡ್ಸ್‌

ಯಾವುದೇ ಬ್ಲಾಕ್‌ ಕಲರ್‌ ಜತೆ ಆದಷ್ಟೂ ಪರ್ಪಲ್‌ ಅಂದರೇ ನೇರಳೆ ಬಣ್ಣ ಅಥವಾ ಮಜಂತಾ, ಡಾರ್ಕ್‌ ಮರೂನ್‌ ಕಲರ್ಸ್‌ಗಳು ಸಾಥ್‌ ನೀಡುತ್ತವೆ. ಇನ್ನು ಬೆರ್ರಿ, ಡಾರ್ಕ್‌ ಪರ್ಪಲ್‌, ಮಲ್ಬೆರ್ರಿ, ವೈನ್‌ ಕಲರ್ಸ್‌ ಮತ್ತಷ್ಟು ಗ್ಲ್ಯಾಮರಸ್‌ ಲುಕ್‌ ನೀಡುತ್ತವೆ. ಇದು ಮೇನ್ಸ್‌ವೇರ್‌ ಆಗಬಹುದು ಇಲ್ಲವೇ ಲೇಡಿಸ್‌ ವೇರ್‌ ಆಗಬಹುದು ಎಂದು ಸಲಹೆ ನೀಡುತ್ತಾರೆ ಸ್ಟೈಲಿಸ್ಟ್ ರಾಣಿ. ಅವರ ಪ್ರಕಾರ, ಈ ಸೀಸನ್‌ನಲ್ಲಿ ಅತಿ ಹೆಚ್ಚು ಮಿಕ್ಸ್‌ ಮ್ಯಾಚ್‌ ಬ್ಲಾಕ್‌ ಔಟ್‌ಫಿಟ್‌ಗಳು ಲಭ್ಯವಿದೆಯಂತೆ.

ಬ್ಲಾಕ್‌ನ ನಾನಾ ಶೇಡ್‌ಗಳು

ಇನ್ನು, ಕಪ್ಪು ಬಣ್ಣವೊಂದರಲ್ಲೆ ಸುಮಾರು 10 ಕ್ಕೂ ಹೆಚ್ಚು ಫ್ಯಾಷನ್‌ ಶೇಡ್ಸ್‌ಗಳಿವೆ. ವಾರ್ಮ್‌ ಹಾಗೂ ಕೋಲ್ಡ್‌ ಕಲರ್ಸ್‌ ಇಂದು ಅತಿ ಹೆಚ್ಚು ಟ್ರೆಂಡ್‌ನಲ್ಲಿವೆ. ಇನ್ನು ವಾರ್ಮ್‌ ಶೇಡ್ಸ್‌ನಲ್ಲಿಗಾಢ ಕೆಂಪು ಹೆಚ್ಚು ಪ್ರಚಲಿತದಲ್ಲಿವೆ. ಕೋಲ್ಡ್‌ ಶೇಡ್ಸ್‌ನಲ್ಲಿ ಬ್ಲ್ಯೂಯಿಶ್‌-ಗ್ರೀನಿಶ್‌ ಬಣ್ಣಗಳು ಹಾಟ್‌ ಟ್ರೆಂಡಿಯಾಗಿವೆ. ಇನ್ನು ಎಲ್ಲರಿಗೂ ಗೊತ್ತಿರುವಂತೆ, ವೈಟ್‌ ಅಂಡ್‌ ಬ್ಲ್ಯಾಕ್‌ ಸ್ಟ್ರೈಪ್‌ ಡಿಸೈನ್ಸ್‌ಗಳಂತೂ ಸಾಕಷ್ಟು ಜನಪ್ರಿಯವಾಗಿವೆ.

Universal Matching

ಯೂನಿವರ್ಸಲ್‌ ಮ್ಯಾಚಿಂಗ್‌

ಬ್ಲ್ಯಾಕ್‌ ಬಣ್ಣ ಯೂನಿವರ್ಸಲ್‌ ಬಣ್ಣ ಎಂದೇ ಹೇಳಬಹುದು. ಆದ್ರೆ, ಈ ಬಣ್ಣದ ಡಿಸೈನ್ಸ್‌ ಚೆನ್ನಾಗಿರಬೇಕಷ್ಟೇ. ಮೆಟಿರೀಯಲ್‌ ಗುಣಮಟ್ಟದ್ದಾಗಿರಬೇಕು ಎಂಬುದು ಮಾಡೆಲ್‌ ದೀಪ್ತಿ ಅಭಿಪ್ರಾಯ.

Black Outfit Tips

ಬ್ಲ್ಯಾಕ್‌ ಔಟ್‌ಫಿಟ್‌ ಟಿಪ್ಸ್

  • ಶಿಮ್ಮರ್‌ ಬ್ಲ್ಯಾಕ್‌ ಡ್ರೆಸ್‌ ನೈಟ್‌ ಪಾರ್ಟಿಗಳಿಗೆ ಸಖತ್‌ ಆಗಿ ಕಾಣುತ್ತದೆ.
  • ಬ್ರೈಟ್‌ ಆಕ್ಸೆಸ್ಸರೀಸ್‌, ಕಾಂಟ್ರಸ್ಟ್‌ ಕಲರ್ಸ್‌ ಸಖತ್‌ ಮ್ಯಾಚಿಂಗ್‌
  • ಮಾನೋಕ್ರೋಮ್‌ ಬ್ಲ್ಯಾಕ್‌ ಡ್ರೆಸ್‌ ಆದಲ್ಲಿ, ಅದಕ್ಕೆ ಶೈನಿ ಶೇಡ್ಸ್‌ ಸ್ಕಾರ್ಫ್‌ -ಸ್ಟೋಲ್ಸ್‌ ಬಳಸಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Funky Pant Suit Fashion: ಮೆನ್ಸ್ ಕ್ಲಾಸಿ ಪ್ಯಾಂಟ್‌ ಸೂಟ್‌ಗೂ ಸಿಕ್ತು ಫ್ಯಾನ್ಸಿ ಫಂಕಿ ಲುಕ್‌!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಾಣಿಜ್ಯ

Nita Ambani: 50-60 ಬನಾರಸಿ ಸೀರೆ ಖರೀದಿಸಿದ ನೀತಾ ಅಂಬಾನಿ: ಸೀರೆಯ ದರ ಎಷ್ಟು?

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆಗೂ ಮುನ್ನ ರಿಲಯನ್ಸ್ ಫೌಂಡೇಶನ್‌ನ ಸಂಸ್ಥಾಪಕಿ ಮತ್ತು ಅಧ್ಯಕ್ಷೆ ನೀತಾ ಅಂಬಾನಿ (Nita Ambani) ಅವರು ವಾರಣಾಸಿಯಲ್ಲಿ ಮಗ್ಗದ ಮಾಲೀಕರು ಮತ್ತು ನೇಕಾರರನ್ನು ಭೇಟಿ ಮಾಡಿ ಸೀರೆಗಳನ್ನು ಖರೀದಿ ಮಾಡಿ, ನೇಕಾರರ ಕೌಶಲಕ್ಕಾಗಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಅಲ್ಲಿ ಅವರು ಐವತ್ತಕ್ಕೂ ಹೆಚ್ಚು ಸೀರೆಗಳನ್ನು ಖರೀದಿಸಿದ್ದಾರೆ. ಇವು ಯಾವ ಮಾದರಿ ಸೀರೆ, ದರ ಎಷ್ಟು ಇತ್ಯಾದಿ ಮಾಹಿತಿ ಇಲ್ಲಿದೆ.

VISTARANEWS.COM


on

By

Nita Ambani
Koo

ಎಲ್ಲ ಸಂದರ್ಭಕ್ಕೂ ಸೂಕ್ತವಾಗುವ ಬನಾರಸಿ ಸೀರೆಗಳು (Banarasi sari) ಎಲ್ಲರಿಗೂ ಇಷ್ಟವಾಗುತ್ತದೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ (Anant Radhika Wedding) ಅವರ ಮದುವೆಗೂ ಮುನ್ನ ಬನಾರಸಿ ಸೀರೆಗಳನ್ನು ಖರೀದಿ ಮಾಡಲು ರಿಲಯನ್ಸ್ ಫೌಂಡೇಶನ್‌ನ (Reliance Foundation) ಸಂಸ್ಥಾಪಕಿ ಮತ್ತು ಅಧ್ಯಕ್ಷೆ ನೀತಾ ಅಂಬಾನಿ (Nita Ambani) ಅವರು ವಾರಣಾಸಿಗೆ (varanasi) ತೆರಳಿ ಐವತ್ತರಿಂದ ಅರವತ್ತು ಸೀರೆಗಳನ್ನು ಖರೀದಿಸಿದರು.

ವಾರಣಾಸಿಯಲ್ಲಿ ಮಗ್ಗದ ಮಾಲೀಕರು ಮತ್ತು ನೇಕಾರರನ್ನು ಭೇಟಿ ಮಾಡಿದ ಅವರು ಸೀರೆಗಳನ್ನು ಖರೀದಿ ಮಾಡಿದರು. ಇದಕ್ಕೂ ಮೊದಲು ಹಲವಾರು ಬನಾರಸಿ ಕುಶಲಕರ್ಮಿಗಳು ಮತ್ತು ವ್ಯಾಪಾರಿಗಳನ್ನು ಹೊಟೇಲ್ ಗೆ ಕರೆಸಿ ಮಾತನಾಡಿದ ಅವರು ಬಳಿಕ ಸೀರೆಗಳನ್ನು ಸ್ವತಃ ಆಯ್ಕೆ ಮಾಡಿದರು. ನೇಕಾರರ ಕೌಶಲಕ್ಕಾಗಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಬಾಲಿವುಡ್, ಹಾಲಿವುಡ್ ಮತ್ತು ಇತರ ದೇಶಗಳ ಅನೇಕ ಅತಿಥಿಗಳು ಅನಂತ್ ಅಂಬಾನಿ ಅವರ ವಿವಾಹದಲ್ಲಿ ಪಾಲ್ಗೊಳ್ಳುವುದರಿಂದ ಬನಾರಸಿ ಸೀರೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ. ಅಂಬಾನಿ ಕುಟುಂಬ ಸೀರೆಗಳಿಗೆ ಆರ್ಡರ್ ಮಾಡಿದ್ದು, ನೇಕಾರರು ಸಂತಸ ವ್ಯಕ್ತಪಡಿಸಿದ್ದಾರೆ.

ಲಕ್ಕಾ ಬೂಟಿ ಸೀರೆ

ನೀತಾ ಅಂಬಾನಿ ಅವರ ಲಕ್ಕಾ ಬೂಟಿ ಸೀರೆಯನ್ನು ಇಷ್ಟಪಟ್ಟಿದ್ದಾರೆ ಎಂದು ಬನಾರಸಿ ಕೈಮಗ್ಗ ನೇಕಾರ ಛೋಟೆ ಲಾಲ್ ಪಾಲ್ ತಿಳಿಸಿದ್ದಾರೆ. ಅಂಬಾನಿ ಕುಟುಂಬವು ಭಾರತದ ಪ್ರಸಿದ್ಧ ವ್ಯಾಪಾರ ಕುಟುಂಬವಾಗಿದೆ. ನೀತಾ ಅಂಬಾನಿ ತನ್ನ ಮಗನ ಮದುವೆಯಲ್ಲಿ ನಾನು ತಯಾರಿಸಿದ ಸೀರೆಯನ್ನು ಧರಿಸಿದರೆ ಅನಂತರ ಎಲ್ಲರೂ ಅದನ್ನು ಟಿವಿಯಲ್ಲಿ ನೋಡುತ್ತಾರೆ. ಅವರು ನನ್ನ ಸೀರೆಯನ್ನು ಇಷ್ಟಪಟ್ಟಿದ್ದಾರೆ ಎಂದರು.


ನಾವು ಬನಾರಸ್‌ನ ಹಳೆಯ ಕುಶಲಕರ್ಮಿಗಳು. ನಾವು ಮೂರನೇ ತಲೆಮಾರಿನವರು. ನಮ್ಮ ಅಜ್ಜ ಮತ್ತು ತಂದೆ ನೇಕಾರರು. ನಾವು ತಯಾರಿಸುವ ಸೀರೆಗೆ ಲಖ ಬೂಟಿ ಎಂದು ಕರೆಯಲಾಗುತ್ತದೆ. ಈ ಸೀರೆಯ ವಿಶೇಷತೆ ಎಂದರೆ ಆಂಚಲ್ ಬಳಿ ಒಂದು ಮೂಲೆ ಇದೆ. ಒಮ್ಮೆ ಮಗ್ಗವನ್ನು ಸ್ಥಾಪಿಸಿದಾಗ, ಸಂಪೂರ್ಣ ಸೀರೆಯನ್ನು ಸಿದ್ಧಪಡಿಸುತ್ತೇವೆ. ಆದರೆ ವಿಶೇಷ ಸೀರೆಯನ್ನು ತಯಾರಿಸಲು ಮಗ್ಗವನ್ನು ಮೂರು ಬಾರಿ ತಯಾರಿಸಲಾಗುತ್ತದೆ/ ಇದನ್ನು ಹಿಂದೂ ಧರ್ಮದ ಶುಭ ಸಮಾರಂಭಗಳಲ್ಲಿ ಬಳಸಲಾಗುತ್ತದೆ, ಇದನ್ನು ತಯಾರಿಸಲು 60 ರಿಂದ 62 ದಿನಗಳು ಬೇಕಾಗುತ್ತದೆ ಎಂದು ಹೇಳಿದರು.

ನೇಕಾರರ ಜೊತೆಗೆ ಸೀರೆ ತಯಾರಿಸಲು ಸಹಾಯ ಮಾಡಲು ಇನ್ನೂ 20ರಿಂದ 25 ಕಾರ್ಮಿಕರು ಅಗತ್ಯವಿದೆ. ಮೊದಲು ತಯಾರಿ ಇದೆ. ವಿವರಣೆ ಮುಗಿದಿದೆ. ವಿನ್ಯಾಸವನ್ನು ರಚಿಸಲಾಗಿದೆ. ನಕ್ಷೆಯನ್ನು ರಚಿಸಲಾಗಿದೆ. ವಿನ್ಯಾಸ ಮುಗಿದ ಮೇಲೆ ಸೀರೆಯನ್ನು ಕೈಮಗ್ಗಕ್ಕೆ ಕಳುಹಿಸಲಾಗುತ್ತದೆ. ಇಪ್ಪತ್ತೈದು ಜನರ ಕೈಗಳಲ್ಲಿ ಸೀರೆ ಸಂಪೂರ್ಣ ವಿನ್ಯಾಸಗೊಳ್ಳುತ್ತದೆ.


ಪ್ರತಿ ಸೀರೆಯು ಚಿನ್ನ ಮತ್ತು ಬೆಳ್ಳಿಯ ಎಳೆಗಳನ್ನು ಹೊಂದಿರುವ ನಿಜವಾದ ಝರಿಯನ್ನು ಬಳಸಿ ಕೈಯಿಂದ ಮಾಡಲ್ಪಟ್ಟಿದೆ. ಶೇ. 58-60ರಷ್ಟು ಬೆಳ್ಳಿ ಮತ್ತು ಶೇ. 1.5ರಷ್ಟು ಚಿನ್ನದ ಲೇಪನವನ್ನು ಅನ್ವಯಿಸಲಾಗುತ್ತದೆ. ಚಿನ್ನ ಮತ್ತು ಬೆಳ್ಳಿಯ ದಾರಗಳ ಸೀರೆಗಳ ಬೆಲೆ 1.5 – 2 ಲಕ್ಷ ರೂ. ಗಳಿಂದ 5- 6 ಲಕ್ಷ ರೂ. ಗಳವರೆಗೆ ಇರುತ್ತದೆ.

ಈ ಸೀರೆಗಳನ್ನು ತಯಾರಿಸಲು ಬಹಳ ಸಮಯ ಬೇಕಾಗುತ್ತದೆ. ನೀತಾ ಅಂಬಾನಿ ಅವರು ಹಜಾರಾ ಬುಟಿ ಎಂದು ಕರೆಯಲ್ಪಡುವ ವಿಶಿಷ್ಟವಾದ ಸೀರೆಯನ್ನು ಖರೀದಿಸಿದ್ದಾರೆ. ಇದು 35,000 ಬೆಳ್ಳಿಯ ಬೂಟಿಗಳನ್ನು ಒಳಗೊಂಡಿದೆ. ಹಜಾರಾ ಬುಟಿ ಸೀರೆಯನ್ನು 40- 45 ದಿನಗಳಲ್ಲಿ ತಯಾರಿಸಲಾಗುತ್ತದೆ.


ಅನಂತ್-ರಾಧಿಕಾ ಮದುವೆ

ಜುಲೈ 12ರಂದು ಅನಂತ್ ಅಂಬಾನಿ ಮತ್ತು ಕೈಗಾರಿಕೋದ್ಯಮಿ ವೀರೇನ್ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್ ಮುಂಬಯಿನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ (ಬಿಕೆಸಿ) ಪ್ರಸಿದ್ಧ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ವಿವಾಹವಾಗಲಿದ್ದಾರೆ. ಮದುವೆಗೆ ಮುನ್ನ ನೀತಾ ಅಂಬಾನಿ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ತೆರಳಿ ದೇವರಿಗೆ ಮದುವೆ ಆಮಂತ್ರಣ ಪತ್ರಿಕೆಯನ್ನು ನೀಡಿದರು. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆಯ ದಿನ ಹತ್ತಿರವಾಗುತ್ತಿದ್ದಂತೆ ಮುಂಬಯಿನಲ್ಲಿ ಪುರಾತನ ಹಿಂದೂ ವೈದಿಕ ಸಂಪ್ರದಾಯದಂತೆ ನಡೆಯಲಿದೆ ಎನ್ನಲಾಗಿದೆ.

ಮಂಗಳಕರ ಶುಭ ವಿವಾಹ ಎಂದೂ ಕರೆಯಲ್ಪಡುವ ವಿವಾಹ ಸಮಾರಂಭವು ಶುಕ್ರವಾರ ಮುಖ್ಯ ಸಮಾರಂಭಗಳ ಮೂಲಕ ಪ್ರಾರಂಭವಾಗಲಿದೆ. ಆಚರಣೆಯ ವಾತಾವರಣವನ್ನು ಸಂಪೂರ್ಣವಾಗಿ ಆನಂದಿಸಲು ಸಾಂಪ್ರದಾಯಿಕ ಭಾರತೀಯ ಉಡುಪುಗಳನ್ನು ಧರಿಸಲು ಅತಿಥಿಗಳಿಗೆ ಸೂಚಿಸಲಾಗಿದೆ. ಜುಲೈ 13ರಂದು ಶುಭ್ ಆಶೀರ್ವಾದ್ , ಕೊನೆಯ ದಿನವಾದ ಜುಲೈ 14ರಂದು ಮಂಗಲ್ ಉತ್ಸವ ಅಥವಾ ಮದುವೆಯ ಆರತಕ್ಷತೆ ನಡೆಯಲಿದೆ.

Continue Reading

ಫ್ಯಾಷನ್

Monsoon Footwear Fashion: ಮಳೆಗಾಲಕ್ಕೆ ತಕ್ಕಂತೆ ಬದಲಾಗುವ ಫುಟ್‌ವೇರ್‌ ಸ್ಟೈಲಿಂಗ್‌

Monsoon Footwear Fashion: ಮಳೆಗಾಲ ಆರಂಭವಾದಲ್ಲಿ ನೀವು ಧರಿಸುವ ಫುಟ್‌ವೇರ್‌ ಕೂಡ ಬದಲಾಗುತ್ತದೆ. ಇದಕ್ಕೆ ಪೂರಕ ಎಂಬಂತೆ, ಮಾರುಕಟ್ಟೆಯಲ್ಲಿ ನಾನಾ ಬ್ರಾಂಡ್‌ನ ಸ್ಕಿಡ್‌ ಆಗದ ಫುಟ್‌ವೇರ್‌ನಿಂದಿಡಿದು ವಾಟರ್‌ಪ್ರೂಫ್‌ ಶೂಗಳು ಲಗ್ಗೆ ಇಡುತ್ತವೆ. ಯಾವ್ಯಾವ ಬಗೆಯವು ಈ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಇಲ್ಲಿ ವಿವರಿಸಿದ್ದಾರೆ.

VISTARANEWS.COM


on

Monsoon Footwear Fashion
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಳೆಗಾಲಕ್ಕೆ ತಕ್ಕಂತೆ (Monsoon Footwear Fashion) ಪ್ರತಿಯೊಬ್ಬರ ಫುಟ್‌ವೇರ್‌ ಸ್ಟೈಲಿಂಗ್‌ ಕೂಡ ಬದಲಾಗುತ್ತದೆ. ಇದಕ್ಕೆ ಪೂರಕ ಎಂಬಂತೆ, ಮಾರುಕಟ್ಟೆಯಲ್ಲಿ ನಾನಾ ಬ್ರಾಂಡ್‌ಗಳು ವಿನೂತನ ಮಾದರಿಯ ಬಗೆಬಗೆಯ ವಿನ್ಯಾಸದ ವಾಟರ್‌ಪ್ರೂಫ್‌ ಹಾಗೂ ಸ್ಕಿಡ್‌ ಆಗದ ಫುಟ್‌ವೇರ್​​ಗಳು ಲಗ್ಗೆ ಇಟ್ಟಿವೆ.

Monsoon Footwear Fashion

ವೈವಿಧ್ಯಮಯ ಫುಟ್‌ವೇರ್ಸ್

ಅವುಗಳಲ್ಲಿ ಫಂಕಿ ಕ್ರೂಕ್ಸ್‌, ಫ್ಲಿಪ್‌ಫ್ಲಾಪ್‌, ಜೆಲ್ಲಿ ಫ್ಲಾಟ್ಸ್, ವೆಡ್ಜಸ್‌ ಬೆಲ್ಲಿ ಶೂಸ್‌, ಸ್ಕಿಪ್ಪರ್‌ ಕ್ಲಾಗ್ಸ್‌, ಕ್ಯಾನ್ವಾಸ್‌, ಬ್ಯಾಲೇರಿನಾ ಫ್ಲಾಟ್‌ ಸ್ಯಾಂಡಲ್ಸ್, ಮಾನ್ಸೂನ್‌ ಸ್ನೀಕರ್‌, ರೈನ್‌ ಶೂ, ಅಕ್ವಾ ಶೂಸ್‌, ಗಮ್‌ ಬೂಟ್ಸ್, ಫೋಮ್‌ ಕ್ಲಾಗ್ಸ್ ಸೇರಿದಂತೆ ಮೆನ್ಸ್‌ ಹಾಗೂ ವುಮೆನ್ಸ್‌ ಕೆಟಗರಿಯಲ್ಲಿ ನಾನಾ ಬಗೆಯವು ಬಿಡುಗಡೆಗೊಂಡಿದ್ದು, ಮಾರಾಟ ಹೆಚ್ಚಾಗಿಯೇ ಸಾಗಿದೆ ಎನ್ನುತ್ತಾರೆ ಫುಟ್‌ವೇರ್‌ ಶೋರೂಂವೊಂದರ ಮಾರಾಟಗಾರರು.

ಸೀಸನ್‌ಗೆ ಬದಲಾಗುವ ಫುಟ್‌ವೇರ್ಸ್

ಸಮ್ಮರ್‌ ಸೀಸನ್‌ನಿಂದ ಮಾನ್ಸೂನ್‌ ಸೀಸನ್‌ಗೆ ಕಾಲಿಡುವಾಗ ಫುಟ್‌ವೇರ್‌ ಫ್ಯಾಷನ್‌ ಕೂಡ ಸಾಕಷ್ಟು ಬದಲಾಗುತ್ತದೆ. ಗ್ರ್ಯಾಂಡ್‌ ಲುಕ್‌ ನೀಡುವ ಸ್ಯಾಂಡಲ್ಸ್‌ ಆಗಲಿ, ವೆಲ್ವೆಟ್‌ ಹಾಗೂ ಡಿಸೈನರ್‌ ಶೂಗಳನ್ನಾಗಲಿ ಈ ಮಳೆಗಾಲದಲ್ಲಿ ಧರಿಸಿ ಹೊರಾಂಗಣದಲ್ಲಿ ಓಡಾಡಲು ಸಾಧ್ಯವಿಲ್ಲ! ಹಾಗಾಗಿ ಮಳೆಗಾಲಕ್ಕೆ ನೀರಿನಲ್ಲಿ ನೆನೆದರೂ, ತೊಪ್ಪೆಯಾದರೂ, ವಾಶ್‌ ಮಾಡಿದರೂ ಹಾಳಾಗದ ಮೆಟೀರಿಯಲ್‌ನ ಫುಟ್‌ವೇರ್‌ಗಳನ್ನು ಧರಿಸುವುದು, ವಾಕ್‌ ಮಾಡುವಾಗ ಸ್ಕಿಡ್‌ ಆಗದ, ಜಾರದ ಫುಟ್‌ವೇರ್‌ಗಳನ್ನು ಧರಿಸುವುದು ಅವಶ್ಯವಾಗುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಅದರಲ್ಲೂ ಪ್ರತಿನಿತ್ಯ ಹೆಚ್ಚು ಓಡಾಡುವ ವ್ಯಾಪಾರಸ್ಥರು, ಉದ್ಯೋಗಸ್ಥರು ಹೆಚ್ಚಾಗಿ ಕಂಫರ್ಟಬಲ್‌ ಜೊತೆಗೆ ಸೀಸನ್‌ ಮುಗಿಯುವವರೆಗೂ ಬಾಳಿಕೆ ಬರುವಂತಹ ಫುಟ್‌ವೇರ್‌ಗಳನ್ನೇ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ ಎನ್ನುತ್ತಾರೆ ಅವರು.

ಬೂಟ್ಸ್-ಶೂ-ಸ್ಯಾಂಡಲ್ಸ್-ಫ್ಲಿಪ್‌-ಫ್ಲಾಪ್‌

ಮಳೆಗಾಲದಲ್ಲಿ ಫ್ಯಾಷನ್‌ ಲುಕ್‌ಗಾಗಿ ಮಾತ್ರವಲ್ಲ, ನಿಮ್ಮ ಕಂಫರ್ಟಬಲಿಟಿಗೆ ತಕ್ಕಂತೆ ಆಯ್ಕೆ ಮಾಡಿಕೊಳ್ಳುವುದು ಜಾಣತನ. ಔಟ್‌ಡೋರ್‌ನಲ್ಲಿ ಹೆಚ್ಚು ಓಡಾಡುವವರು ಹಾಗೂ ಕೆಲಸ ಮಾಡುವವರು ಬೂಟ್ಸ್​​​ಗಎ ಮೊರೆ ಹೋದರೆ, ಮಹಿಳೆಯರು ಸ್ಯಾಂಡಲ್ಸ್‌ ಹಾಗೂ ಫ್ಲಿಪ್‌-ಫ್ಲಾಪ್‌ಗಳನ್ನು ಚೂಸ್‌ ಮಾಡುತ್ತಾರೆ. ಇನ್ನು ಹುಡುಗಿಯರು ಕ್ರೂಕ್ಸ್‌ ಹಾಗೂ ಬ್ಯಾಲೇರಿನಾ ಶೂಗಳಂತವನ್ನು ಸೆಲೆಕ್ಟ್‌ ಮಾಡುತ್ತಾರೆ ಎನ್ನುತ್ತಾರೆ ಫುಟ್‌ವೇರ್‌ ಮಾರಾಟಗಾರರು.

ಇದನ್ನೂ ಓದಿ: Star Fashion: ಬ್ಲ್ಯಾಕ್‌ & ವೈಟ್‌ ಪ್ರಿಂಟೆಡ್‌ ಜಂಪ್‌ಸೂಟ್‌ನಲ್ಲಿ ನಟಿ ಆರೋಹಿ ನಾರಾಯಣ್‌ ಸ್ಟೈಲಿಶ್‌ ಲುಕ್‌!

ಫುಟ್‌ವೇರ್‌ ಸೆಲೆಕ್ಷನ್‌ ಹೀಗಿರಲಿ

  • – ಫ್ಯಾಷನ್‌ಗಿಂತ ಹೆಚ್ಚಾಗಿ ಆರಾಮದಾಯಕವಾಗಿರಲಿ.
  • – ಫುಟ್‌ವೇರ್‌ ಒದ್ದೆಯಾಗಿದ್ದಲ್ಲಿ, ಒಣಗಿಸಿ, ಧರಿಸಿ.
  • – ಗುಣಮಟ್ಟದ ಫುಟ್‌ವೇರ್ ಕೊಳ್ಳಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಫ್ಯಾಷನ್

Ashada Sale 2024: ಆಷಾಢ ಸೇಲ್‌ನಲ್ಲಿ ಶಾಪಿಂಗ್‌ ಮಾಡುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ 5 ಸಂಗತಿಗಳು

Ashada Sale 2024: ಪ್ರತಿ ವರ್ಷದಂತೆ ಈ ಬಾರಿಯೂ ಆಷಾಢ ಸೇಲ್‌ ಎಲ್ಲೆಡೆ ಆರಂಭವಾಗಿದೆ. ಈ ಸೇಲ್‌ನಲ್ಲಿ ಖರೀದಿಸುವವರು ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಂಡಲ್ಲಿ, ಉತ್ತಮ ಖರೀದಿಯೊಂದಿಗೆ ಒಂದಿಷ್ಟು ಉಳಿತಾಯ ಕೂಡ ಮಾಡಬಹುದು ಎನ್ನುತ್ತಾರೆ ಶಾಪಿಂಗ್‌ ಎಕ್ಸ್‌ಫರ್ಟ್ಸ್‌. ಆದರೆ, ಅದು ಹೇಗೆ? ಇಲ್ಲಿದೆ ಸಿಂಪಲ್‌ ಟಿಪ್ಸ್.

VISTARANEWS.COM


on

Ashada Sale 2024
ಚಿತ್ರಗಳು: ಮಿಂಚು
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ನೀವು ಆಷಾಢದಲ್ಲಿ ನಡೆಯುವ ಸೇಲ್‌ನಲ್ಲಿ (Ashada Sale 2024) ಶಾಪಿಂಗ್‌ ಮಾಡುತ್ತೀದ್ದೀರಾ! ಈ ಆಷಾಢದಲ್ಲಿ ಕಡಿಮೆ ಬೆಲೆಗೆ ಸಿಗುವುದೆಂದು ಖರೀದಿಗೆ ಮುಂದಾಗಿದ್ದೀರಾ? ಹಾಗಾದಲ್ಲಿ, ಒಂದಿಷ್ಟು ಸಂಗತಿಗಳನ್ನು ಗಮನದಲ್ಲಿಟ್ಟುಕೊಳ್ಳಿ. ಆಗಷ್ಟೇ! ನೀವು ಈ ಖರೀದಿಯ ಸದುಪಯೋಗದೊಂದಿಗೆ ಕೊಂಚ ಉಳಿತಾಯ ಕೂಡ ಮಾಡಬಹುದು ಎನ್ನುತ್ತಾರೆ ಶಾಪಿಂಗ್‌ ಎಕ್ಸ್‌ಫರ್ಟ್ಸ್‌. “ಪ್ರತಿ ವರ್ಷದಂತೆ ಈ ಬಾರಿಯೂ ಆಷಾಢ ಸೇಲ್‌ ಎಲ್ಲೆಡೆ ಆರಂಭವಾಗಿದೆ. ಮಾಲ್‌ಗಳಲ್ಲಿ ಮಾತ್ರವಲ್ಲ, ಸಾಕಷ್ಟು ಜ್ಯುವೆಲರಿ ಶಾಪ್‌ಗಳು ಹಾಗೂ ಬಟ್ಟೆ ಅಂಗಡಿಗಳು ಕೂಡ ಈ ಸೇಲ್‌ ಆಯೋಜಿಸುತ್ತಿವೆ. ಅಲ್ಲದೇ, ಸಾಕಷ್ಟು ಎಕ್ಸಿಬೀಷನ್‌ಗಳು ಕೂಡ ನಡೆಯುತ್ತಿವೆ. ಇನ್ನು, ಇದಕ್ಕೆ ಪೂರಕ ಎಂಬಂತೆ, ಮುಂಬರುವ ಹಬ್ಬಗಳನ್ನು ಗಮನದಲ್ಲಿಟ್ಟುಕೊಂಡು ಸಾಕಷ್ಟು ಮಂದಿ ಈ ಸೇಲ್ನಲ್ಲಿ ಶಾಪಿಂಗ್‌ ಮಾಡುವುದು ಕಂಡು ಬರುತ್ತಿದೆ” ಎನ್ನುತ್ತಾರೆ ಶಾಪಿಂಗ್‌ ಎಕ್ಸ್‌ಫರ್ಟ್ ರಾಘವ್‌ ಹಾಗೂ ಧನ್ಯ ಶರ್ಮಾ.

Ashada Sale 2024

ಫೆಸ್ಟಿವ್‌ ಸೀಸನ್‌ಗೆ ಈಗಲೇ ಖರೀದಿಸಿ

ಮುಂಬರುವ ಫೆಸ್ಟಿವ್‌ ಸೀಸನ್‌ಗೆ ಈಗಲೇ ಖರೀದಿ ಆರಂಭಿಸಬಹುದು. ಹಾಗೆಂದು ಕಂಡಕಂಡದ್ದನ್ನೇಲ್ಲಾ ಖರೀದಿಸಿದಲ್ಲಿ, ಹಣ ವ್ಯಯವಾಗಬಹುದು. ಎಥ್ನಿಕ್‌ ಡಿಸೈನರ್‌ವೇರ್‌ಗಳು ಈ ಆಷಾಡ ಸೇಲ್‌ನಲ್ಲಿ ಕಡಿಮೆ ಬೆಲೆಗೆ ದೊರಕುತ್ತವೆ. ಅಂತಹವನ್ನು ಕೊಂಡಲ್ಲಿ, ಮುಂಬರುವ ಹಬ್ಬಗಳಿಗೆ ಖರೀದಿಸುವ ಜವಾಬ್ದಾರಿ ಕೊಂಚ ಕಡಿಮೆಯಾಗಬಹುದು.

Ashada Sale 2024

ಆಭರಣಗಳ ಖರೀದಿ

ಬೆಳ್ಳಿ-ಬಂಗಾರದ ಆಭರಣಗಳನ್ನು ಮುಂಬರುವ ಶ್ರಾವಣದಲ್ಲಿ ಖರೀದಿ ಮಾಡುವ ಯೋಚನೆಯಿದ್ದಲ್ಲಿ, ಅದನ್ನು ಮುಂದೂಡದೇ ಈ ಸಮಯದಲ್ಲೆ ಜಾರಿಗೊಳಿಸಿ. ಹೌದು, ಕೆಲವು ಅಂಗಡಿಗಳಲ್ಲಿ ಆಷಾಡ ಸೇಲ್‌ನಲ್ಲಿ ಮೇಕಿಂಗ್‌ ಚಾರ್ಜ್‌, ವೇಸ್ಟೆಜ್‌ ಎಲ್ಲವನ್ನು ಕಡಿತಗೊಳಿಸಲಾಗಿರುತ್ತದೆ. ಇದರಿಂದ ನಿಮಗೆ ಕೊಂಚ ಲಾಭವಾದರೂ ಆಗಬಹುದು.

Ashada Sale 2024

ಆನ್‌ಲೈನ್‌ ಸೇಲ್‌ನ ಸದುಪಯೋಗ

ಆನ್‌ಲೈನ್‌ ಶಾಪಿಂಗ್‌ ಮಾಡುವಾಗ ಎಚ್ಚರವಹಿಸಿ. ಆನ್‌ಲೈನ್‌ ಶಾಪಿಂಗ್‌ ಮಾಡಿ. ಕಣ್ಣಿಗೆ ಬೇಕಾದ ವಸ್ತುಗಳನ್ನು ಮನೆಯಲ್ಲೆ ಕುಳಿತು ಖರೀದಿಸಬಹುದು. ಫ್ಯಾಷನ್‌ವೇರ್ಸ್‌, ಬ್ಯೂಟಿ ಪ್ರಾಡಕ್ಟ್ಸ್, ಕಿಚನ್‌ ಸಾಮಗ್ರಿಗಳಿಂದ ಹಿಡಿದು ಸಾಕಷ್ಟು ವಸ್ತುಗಳಿಗೆ ಆಷಾಡ ಸೇಲ್‌ನಲ್ಲಿ ಆಫರ್‌ಗಳ ಸುರಿಮಳೆಯನ್ನೇ ಕಾಣಬಹುದು.

Ashada Sale 2024

ಎಕ್ಸ್‌ಚೇಗ್‌ಗೆ ಅವಕಾಶವಿರುವುದಿಲ್ಲ

ಯಾವುದೇ ಒಂದು ಸೇಲ್‌ನಲ್ಲಿ ಶಾಪಿಂಗ್‌ ಮಾಡುವಾಗ ತೀರಾ ಅಗತ್ಯವಾಗಿರುವಂತವಕ್ಕೆ ಮಾತ್ರ ಆದ್ಯತೆ ನೀಡಬೇಕು. ಯಾಕೆಂದರೇ, ಅವಕ್ಕೆ ಎಕ್ಸ್ಚೇಂಜ್‌ ಸೌಲಭ್ಯ ಇರುವುದಿಲ್ಲ ಎಂಬುದು ನೆನಪಿರಲಿ.

ಇದನ್ನೂ ಓದಿ: Paris Fashion Week: ಪ್ಯಾರಿಸ್‌ ಹಾಟ್‌ ಕೌಚರ್‌ ಫ್ಯಾಷನ್‌ ವೀಕ್ 2024ರ ಹೈಲೈಟ್ಸ್

ಮಾಲ್‌ಗಳಲ್ಲಿ ಶಾಪಿಂಗ್‌

ಮಾಲ್‌ಗಳಲ್ಲಿ ಲಭ್ಯವಿರುವ ಆಷಾಡ ಸೇಲ್‌ನಲ್ಲಿ, ನೀವು ನಾನಾ ಪಾಪುಲರ್‌ ಬ್ರಾಂಡ್‌ನ ಗುಣ ಮಟ್ಟದ ಫ್ಯಾಷನ್‌ವೇರ್ಸ್ ಹಾಗೂ ಆಕ್ಸೆಸರೀಸ್‌ಗಳನ್ನು ಕಡಿಮೆ ಬೆಲೆಗೆ ಖರೀದಿಸಬಹುದು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಫ್ಯಾಷನ್

Star Fashion: ಬ್ಲ್ಯಾಕ್‌ & ವೈಟ್‌ ಪ್ರಿಂಟೆಡ್‌ ಜಂಪ್‌ಸೂಟ್‌ನಲ್ಲಿ ನಟಿ ಆರೋಹಿ ನಾರಾಯಣ್‌ ಸ್ಟೈಲಿಶ್‌ ಲುಕ್‌!

Star Fashion: ಸ್ಯಾಂಡಲ್‌ವುಡ್‌ ನಟಿ ಆರೋಹಿ ನಾರಾಯಣ್‌, ಅಬ್‌ಸ್ಟ್ರಾಕ್ಟ್ ಪ್ರಿಂಟ್ಸ್ ಇರುವಂತಹ ಬ್ಲ್ಯಾಕ್‌ & ವೈಟ್‌ ಜಂಪ್‌ಸೂಟ್‌ನಲ್ಲಿ ಸ್ಟೈಲಿಶ್‌ ಆಗಿ ಕಾಣಿಸಿಕೊಂಡಿದ್ದಾರೆ. ಹಾಗಾದಲ್ಲಿ, ಈ ಡ್ರೆಸ್‌ ವಿಶೇಷತೆಯೇನು? ಇವರಂತೆಯೇ ಕಾಣಿಸಲು ಸ್ಟೈಲಿಂಗ್‌ ಮಾಡುವುದು ಹೇಗೆ ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಇಲ್ಲಿ ವಿವರಿಸಿದ್ದಾರೆ.

VISTARANEWS.COM


on

Star Fashion
ಚಿತ್ರಗಳು: ಆರೋಹಿ ನಾರಾಯಣ್‌, ನಟಿ, ಫೋಟೋ ಕೃಪೆ: ಸಂದೀಪ್‌ ಹೊಲ್ಲಾ, ಹೊಲ್ಲಾ ಫೋಟೋಗ್ರಾಫಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬ್ಲ್ಯಾಕ್‌ & ವೈಟ್‌ ಪ್ರಿಂಟೆಡ್‌ ಜಂಪ್‌ಸೂಟ್‌ನಲ್ಲಿ ನಟಿ ಅರೋಹಿ ನಾರಾಯಣ್‌ ಸ್ಟೈಲಿಶ್‌ ಆಗಿ ಕಾಣಿಸಿಕೊಂಡಿದ್ದು, ಫ್ಯಾಷನ್‌ ಪ್ರಿಯರ ಗಮನ ಸೆಳೆದಿದೆ.

Star Fashion

ಅಬ್‌ಸ್ಟ್ರಾಕ್ಟ್ ಪ್ರಿಂಟೆಡ್‌ ಜಂಪ್‌ಸೂಟ್‌

ಹಾಲ್ಟರ್‌ ನೆಕ್‌ಲೈನ್‌ನ ಅಬ್‌ಸ್ಟ್ರಾಕ್ಟ್ ಪ್ರಿಂಟ್ಸ್ ಇರುವಂತಹ ಬ್ಲ್ಯಾಕ್‌ & ವೈಟ್‌ ಬೋ, ಜಂಪ್‌ಸೂಟ್‌ನಲ್ಲಿ ಸ್ಟೈಲಿಶ್‌ ಆಗಿ ಕಾಣಿಸಿಕೊಂಡಿರುವ ಫೋಟೋಗಳನ್ನು ನಟಿ ಆರೋಹಿ ನಾರಾಯಣ್‌, ಬ್ಯಾಕ್‌ ಟು ಬ್ಯಾಕ್‌ ಸೋಷಿಯಲ್‌ ಮೀಡಿಯಾದಲ್ಲಿ , ಅಪ್‌ಲೋಡ್‌ ಮಾಡಿದ್ದು, ಇದು ಫ್ಯಾಷನ್‌ ಪ್ರಿಯ ಅಭಿಮಾನಿಗಳನ್ನು ಆಕರ್ಷಿಸಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಈ ಜಂಪ್‌ ಸೂಟ್‌ ಇವರಿಗೆ ಬಾಲಿವುಡ್‌ ಸೆಲೆಬ್ರೆಟಿ ಲುಕ್‌ ನೀಡಿದೆ.

Star Fashion

ನಟಿ ಆರೋಹಿ ನಾರಾಯಣ್‌ ಸ್ಟೈಲಿಶ್‌ ಲುಕ್‌

ಸ್ಯಾಂಡಲ್‌ವುಡ್‌ ನಟಿಯಾಗಿರುವ ಆರೋಹಿ ನಾರಾಯಣ್‌ ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದು, ಮಾಡೆಲಿಂಗ್‌ ಕೂಡ ಮಾಡಿದ್ದಾರೆ. ಆಗಾಗ್ಗೆ ಸಾಕಷ್ಟು ಫ್ಯಾಷೆನಬಲ್‌ ಲುಕ್‌ ಇರುವಂತಹ ಫೋಟೋಶೂಟ್‌ಗಳಲ್ಲಿ ಪಾಲ್ಗೊಳ್ಳುತ್ತಲೇ ಇರುತ್ತಾರೆ. ಅವರ ಪ್ರತಿಯೊಂದು ಡ್ರೆಸ್‌ಗಳಲ್ಲೂ ಫ್ಯಾಷನ್‌ ಸೆನ್ಸ್ ಎದ್ದು ಕಾಣುತ್ತದೆ. ಅವರ ಸ್ಟೈಲಿಂಗ್‌ ಕೂಡ ಎಂತಹವರನ್ನು ಆಕರ್ಷಿಸುವಂತದ್ದಾಗಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು. ಅವರು ಹೇಳುವಂತೆ, ಆರೋಹಿಯ ಫ್ಯಾಷನ್‌ ಕೊಂಚ ವಿಭಿನ್ನವಾಗಿರುವುದು ಕಂಡು ಬರುತ್ತದೆ. ಅಲ್ಲದೇ, ಅವರ ಮುಖದ ಮೇಲಿನ ಮುಗುಳ್ನಗೆ ಹಾಗೂ ನಗು ಇಡೀ ಅವರ ಲುಕ್‌ಗೆ ಸಾಥ್‌ ನೀಡುತ್ತಿದೆ ಎಂದಿದ್ದಾರೆ.

Star Fashion

ಜಂಪ್‌ಸೂಟ್‌ ವಿನ್ಯಾಸ

ಸ್ಟೈಲಿಸ್ಟ್‌ಗಳು ಹೇಳುವಂತೆ, ಜಂಪ್‌ ಸೂಟ್‌ಗಳೆಂದಾಕ್ಷಣ ಎಲ್ಲವೂ ಒಂದೇ ಬಗೆಯದ್ದಾಗಿ ಇರುವುದಿಲ್ಲ! ನೋಡಲು ವಿನ್ಯಾಸ ಒಂದೇ ತರಹದ್ದಾಗಿದ್ದರೂ ಅವುಗಳ ಪ್ರಿಂಟ್ಸ್, ನೆಕ್‌ಲೈನ್‌, ವೇಸ್ಟ್‌ಲೇನ್‌ ಹಾಗೂ ಸ್ಲೀವ್‌ಗಳಿಂದ ಅವನ್ನು ವಿಂಗಡಿಸಬಹುದು. ಅವರವರ ಆಯ್ಕೆಗೆ ತಕ್ಕಂತೆ ಅವು ಹೈಲೈಟಾಗುತ್ತವೆ ಎನ್ನುತ್ತಾರೆ.

ಇದನ್ನೂ ಓದಿ: Monsoon Rain Boots Fashion: ಮಕ್ಕಳ ಮಾನ್ಸೂನ್‌ ಫ್ಯಾಷನ್‌ನಲ್ಲಿ ಟ್ರೆಂಡಿಯಾದ 3 ಬಗೆಯ ರೈನ್‌ ಬೂಟ್ಸ್

ಜಂಪ್ ಸೂಟ್‌ನಲ್ಲಿ ಆರೋಹಿಯಂತೆ ಸ್ಟೈಲಿಶ್‌ ಆಗಿ ಕಾಣಿಸಲು ಹೀಗೆ ಮಾಡಿ

  • ಟ್ರೆಂಡಿಯಾಗಿರುವ ಪ್ರಿಂಟೆಡ್‌ ಜಂಪ್‌ ಸೂಟ್‌ ಆಯ್ಕೆ ಮಾಡಿ
  • ಧರಿಸುವ ಜಂಪ್‌ಸೂಟ್‌ನ ನೆಕ್‌ಲೈನ್‌ಗೂ ಪ್ರಾಮುಖ್ಯತೆ ನೀಡಿ.
  • ವೆಸ್ಟರ್ನ್‌ ಲುಕ್‌ಗೆ ಹೊಂದುವಂತ ಮೇಕೋವರ್‌ಗೆ ಸೈ ಎನ್ನಿ.
  • ಮಿನಿಮಲ್‌ ಆಕ್ಸೆಸರೀಸ್‌ ಧರಿಸಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading
Advertisement
UGC NET Exam
ದೇಶ35 mins ago

UGC NET Exam: ರದ್ದಾಗಿದ್ದ ಯುಜಿಸಿ ನೆಟ್‌ ಪರೀಕ್ಷೆಗೆ ಹೊಸ ದಿನಾಂಕ ಘೋಷಣೆ; ಪರೀಕ್ಷೆಗೆ ಹೊಸ ವಿಧಾನ, ಇಲ್ಲಿದೆ ವಿವರ‌

Vodafone Idea
ದೇಶ48 mins ago

Vodafone Idea: ಜಿಯೋ, ಏರ್‌ಟೆಲ್‌ ಬೆನ್ನಲ್ಲೇ ವೋಡಾಫೋನ್‌ ಐಡಿಯಾ ಪ್ಲಾನ್‌ ಬೆಲೆ ಏರಿಕೆ; ಹೀಗಿದೆ ವಿವರ

T20 World Cup 2024
ಪ್ರಮುಖ ಸುದ್ದಿ1 hour ago

T20 World Cup 2024 : ಭಾರತ ತಂಡವನ್ನು ಟೀಕಿಸಿದ ಮೈಕೆಲ್​ ವಾನ್​ಗೆ ತಿರುಗೇಟು ಕೊಟ್ಟ ಗಂಗೂಲಿ

CM SIddaramaiah
ಪ್ರಮುಖ ಸುದ್ದಿ1 hour ago

Siddaramaiah: ಅಮಿತ್‌ ಶಾ-ಸಿದ್ದರಾಮಯ್ಯ ಭೇಟಿ; ರಾಜ್ಯದ 5 ನಗರಗಳಲ್ಲಿ ಸೇಫ್‌ ಸಿಟಿ ಯೋಜನೆ ಜಾರಿಗೆ ಒತ್ತಾಯ

Religious Freedom
ದೇಶ3 hours ago

Religious Freedom: ಧಾರ್ಮಿಕ ಸ್ವಾತಂತ್ರ್ಯದ ಕುರಿತು ಅಮೆರಿಕ ಹುಸಿ ಕಳವಳ; ಭಾರತ ತಿರುಗೇಟು

Virat Kohli
ಪ್ರಮುಖ ಸುದ್ದಿ3 hours ago

Virat Kohli : ಫಾರ್ಮ್​ ಕಳೆದುಕೊಂಡಿರುವ ವಿರಾಟ್​ ಕೊಹ್ಲಿಯ ಬೆಂಬಲಕ್ಕೆ ನಿಂತ ಗಂಗೂಲಿ

Application Invitation to Join Air Wing NCC July 09 is the last day for submission of application
ಕರ್ನಾಟಕ3 hours ago

Air Wing NCC: ಏರ್ ವಿಂಗ್ ಎನ್‌ಸಿಸಿ ಸೇರಲು ಅರ್ಜಿ ಆಹ್ವಾನ; ಜುಲೈ 9 ಕೊನೆಯ ದಿನ

Tulu language
ತಂತ್ರಜ್ಞಾನ3 hours ago

Tulu Translate Google: ಗೂಗಲ್ ಟ್ರಾನ್ಸ್‌ಲೇಟ್‌ನಲ್ಲಿ ತುಳು ಭಾಷೆ ಸೇರ್ಪಡೆ

India is a secular nation because Hindus are the majority says Union Minister Pralhad Joshi
ಕರ್ನಾಟಕ4 hours ago

Pralhad Joshi: ಹಿಂದೂಗಳು ಅಲ್ಪಸಂಖ್ಯಾತರಾದ ದಿನ ಭಾರತ ಜಾತ್ಯತೀತವಾಗಿ ಉಳಿಯದು; ಪ್ರಲ್ಹಾದ್‌ ಜೋಶಿ ಆತಂಕ

IND vs SA
ಪ್ರಮುಖ ಸುದ್ದಿ4 hours ago

IND vs SA: ದಕ್ಷಿಣ ಆಫ್ರಿಕಾದ ಬೌಲಿಂಗ್​ ಶಕ್ತಿ ಭಾರತದ ಬ್ಯಾಟಿಂಗ್​ಗೆ ಲೆಕ್ಕಕ್ಕೇ ಇಲ್ಲ; ಮಾಜಿ ಆಟಗಾರನ ಭವಿಷ್ಯ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ6 hours ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ13 hours ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ1 day ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ1 day ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು1 day ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ2 days ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ4 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ1 week ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ1 week ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ1 week ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

ಟ್ರೆಂಡಿಂಗ್‌