ಶೀಲಾ ಸಿ. ಶೆಟ್ಟಿ, ಬೆಂಗಳೂರು
ಐ ಮೇಕಪ್‌ಗೆ (Colour Eyeliner Tips) ಸಾಥ್ ನೀಡುವ ಬಣ್ಣ ಬಣ್ಣದ ವೈಬ್ರೆಂಟ್ ಶೇಡ್‌ನ ಐ ಲೈನರ್‌ಗಳು ಕಾಲಿಟ್ಟಿದ್ದು, ಹೆಣ್ಣಿನ ಕಣ್ಣಿನ ಸೌಂದರ್ಯಕ್ಕೆ ಸಾಥ್ ನೀಡುತ್ತಿವೆ. ಪ್ರತಿ ಉಡುಪಿಗೂ ಮ್ಯಾಚಿಂಗ್ ಮಾಡಿ ಹಚ್ಚಬಹುದಾದಂತಹ ಈ ಕಲರ್‌ಗಳು ಇದೀಗ ಹುಡುಗಿಯರ ಕಂಗಳನ್ನು ಸಿಂಗರಿಸುತ್ತಿವೆ.
“ಕಣ್ಣಿಗೆ ಐ ಲೈನರ್ ಹಚ್ಚದೇ ಐ ಮೇಕಪ್ ಎಂದಿಗೂ ಕಂಪ್ಲೀಟ್ ಆಗದು. ಅದರಲ್ಲೂ ಈ ಜನರೇಷನ್‌ನವರು ಐ ಲೈನರ್ ಹಚ್ಚದೇ ಹೊರಗೆ ಕಾಲಿಡುವುದೇ ಇಲ್ಲ! ಮೊದಲಿನಂತೆ ಇದೀಗ ಕೇವಲ ಒಂದೇ ಶೇಡ್‌ನ ಬ್ಲಾಕ್ ಹಾಗೂ ಬ್ರೌನ್ ಐ ಲೈನರ್‌ಗಳಿಲ್ಲ, ಬದಲಿಗೆ ವೈಬ್ರೆಂಟ್ ಶೇಡ್‌ನವು, ನಿಯಾನ್, ಬ್ಲ್ಯೂ, ಪಿಂಕ್, ಪೀಚ್, ಪಿಸ್ತಾ, ಗ್ರೀನ್, ಆರೆಂಜ್ ಹೀಗೆ ಬಣ್ಗ ಬಣ್ಣದವು ಕಾಲಿಟ್ಟಿವೆ. ಮ್ಯಾಚಿಂಗ್ ಐ ಲೈನರ್ ಪ್ರಿಯರಿಗೆ ಇವು ಸಾಥ್ ನೀಡುತ್ತಿವೆ. ಕಣ್ಣುಗಳನ್ನು ಮತ್ತಷ್ಟು ಆಕರ್ಷಕವಾಗಿಸುತ್ತಿವೆ” ಎನ್ನುತ್ತಾರೆ ಐ ಮೇಕಪ್ ಎಕ್ಸ್ಪರ್ಟ್ ರಿಯಾ.
ಯಾವ್ಯಾವ ಬಗೆಯವು ಲಭ್ಯ?
ವೈಬ್ರೆಂಟ್ ಶೇಡ್‌ಗಳ ಲಿಕ್ವಿಡ್ ಐ ಲೈನರ್, ಪೆನ್ಸಿಲ್ ಐ ಲೈನರ್, ಪೆನ್ ಐ ಲೈನರ್, ಜೆಲ್ ಐ ಲೈನರ್, ಐ ಲೈನರ್‌ನಂತೆ ಬಳಸಬಹುದಾದ ಕಲರ್ ಪೆನ್ಸಿಲ್ ಶೇಡ್‌ನವು ದೊರೆಯುತ್ತಿವೆ. ಆಯಾ ಸ್ಕಿನ್ ಟೋನ್‌ಗೆ ತಕ್ಕಂತೆ ಇವನ್ನು ಬಳಸಬಹುದು. ಕೆಲವರಿಗೆ ಲಿಕ್ವಿಡ್ ಐ ಲೈನರ್ ಬಳಸಿ ರೂಢಿಯಾಗಿರುತ್ತದೆ, ಇನ್ನು ಕೆಲವರಿಗೆ ಪೆನ್ಸಿಲ್ ಬಿಟ್ಟರೇ ಇತರೇ ಐ ಲೈನರ್ ಅಡ್ಜಸ್ಟ್ ಆಗಿರುವುದಿಲ್ಲ! ಹೀಗೆ ಅವರವರ ಆಯ್ಕೆಗೆ ತಕ್ಕಂತೆ ಟ್ರಯಲ್ ನೋಡಿ ಖರೀದಿಸಬಹುದು.
ಪಾಪ್ಯುಲರ್ ಲಿಕ್ವಿಡ್ ಐ ಲೈನರ್
ವೈಬ್ರೆಂಟ್ ಶೇಡ್‌ನ ಲಿಕ್ವಿಡ್ ಐ ಲೈನರ್‌ಗಳು ಹೆಚ್ಚು ಪಾಪ್ಯುಲರ್ ಆಗಿವೆ. ಇವುಗಳಲ್ಲಿ ನಾರ್ಮಲ್ ಹಾಗೂ ವಾಟರ್ ಪ್ರೂಫ್‌ನವು ದೊರೆಯುತ್ತಿವೆ. ಇತ್ತೀಚೆಗಂತೂ ಇವು ಮೇಕಪ್ ಕಿಟ್‌ನ ಪ್ರಮುಖ ಐ ಮೇಕಪ್ ಪ್ರಾಡಕ್ಟ್‌ಗಳಲ್ಲಿ ಒಂದಾಗಿವೆ.
ವೈಬ್ರೆಂಟ್ ಶೇಡ್ಸ್‌ನ ಪೆನ್ಸಿಲ್ ಐ ಲೈನರ್
ಮೊದಲಿನಿಂದಲೂ ಪೆನ್ಸಿಲ್ ಐ ಲೈನರ್ ಬಳಸುವವರು ಹೆಚ್ಚು. ಹೆಚ್ಚು ಜಂಜಾಟವಿಲ್ಲದೇ ಬಳಸಬಹುದಾದ ಈ ಐ ಲೈನರ್‌ಗಳು ಎಲ್ಲಾ ಬ್ರಾಂಡ್‌ಗಳಲ್ಲೂ ಲಭ್ಯ. ರಫ್ ಬಳಕೆ ಮಾಡುವವರಿಗೆ ಇವು ಸೂಕ್ತ.
ದುಬಾರಿ ಪೆನ್ ಐ ಲೈನರ್ಸ್
ಬಣ್ಣ ಬಣ್ಣದ ಪೆನ್ ಐ ಲೈನರ್ಸ್ ದುಬಾರಿ. ನಾಲ್ಕೈದು ಐ ಲೈನರ್ ಪೆನ್ಸಿಲ್ ಬದಲು ಒಂದು ಪೆನ್ ಐ ಲೈನರ್ ಕೊಳ್ಳಬಹುದು. ಆದರೆ, ಬಳಸುವುದು ತೀರಾ ಸರಳ ಹಾಗೂ ಸುಲಭ. ಸೆಲೆಬ್ರೆಟಿಗಳನ್ನು ಇವನ್ನು ಹೆಚ್ಚಾಗಿ ಬಳಸುತ್ತಾರೆ. ಇನ್ನು ಜೆಲ್ ಹಾಗೂ ಶ್ಯಾಡೋಗಳನ್ನು ಐ ಲೈನರ್ ಆಗಿ ಬಳಸುವವರು ತೀರಾ ಕಡಿಮೆ. ಮೇಕಪ್ ಬಗ್ಗೆ ಹೆಚ್ಚು ಜ್ಞಾನ ಇರುವವರು ಮಾತ್ರ ಬಳಕೆ ಮಾಡುತ್ತಾರೆ.
- ಗುಣ ಮಟ್ಟದ ಐ ಲೈನರ್ ಬಳಕೆ ಮಾಡಿ.
- ಮಲಗುವ ಮುನ್ನ ತೆಗೆದು ಮಲಗುವುದು ಉತ್ತಮ.
- ವಾಟರ್ ಪ್ರೂಫ್ ಐ ಲೈನರ್ ದಿನವಿಡಿ ಹಚ್ಚಬಾರದು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Friendship Day Fashion: ಫ್ರೆಂಡ್‌ಶಿಪ್ ಸೆಲೆಬ್ರೇಷನ್‌ಗೂ ಬಂತು ಟ್ರೆಂಡಿ ಫ್ಯಾಷನ್‌ವೇರ್ಸ್