ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬೆಳಕಿನ ಹಬ್ಬ ದೀಪಾವಳಿಗೆ (Deepavali Fashion) ಗ್ರ್ಯಾಂಡ್ ಲುಕ್ ನೀಡುವ ನಾನಾ ಬಗೆಯ ಫೆಸ್ಟಿವ್ ಕಲೆಕ್ಷನ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಅವುಗಳಲ್ಲಿ ಟ್ರೆಡಿಷನಲ್ ಹಾಗೂ ದೇಸಿ ಲುಕ್ ನೀಡುವ ಗ್ರ್ಯಾಂಡ್ ಫ್ಯಾಷನ್‌ವೇರ್‌ಗಳದ್ದೇ ಕಾರುಬಾರು. “ದೀಪಾವಳಿ ಸಡಗರ ಸಂಭ್ರಮದ ಹಬ್ಬ. ಫ್ಯಾಷನ್‌ಪ್ರಿಯರಿಗೆ ಮೂರು ದಿನವೂ ಮೂರು ಬಗೆಯ ಫೆಸ್ಟಿವ್ ಲುಕ್‌ನಲ್ಲಿ ಕಾಣಿಸಿಕೊಳ್ಳುವ ಸದಾವಕಾಶ. ಇದಕ್ಕೆ ಪೂರಕ ಎಂಬಂತೆ, ಗಾಗ್ರ-ಚೋಲಿಯಿಂದಿಡಿದು ಸೆಮಿ ಫಾರ್ಮಲ್ಸ್ ಔಟ್‌ಫಿಟ್‌ಗಳು ಮಾನಿನಿಯರನ್ನುಅಲಂಕರಿಸಲು ಸಜ್ಜಾಗಿವೆ. ಅಂದಹಾಗೆ, ಈ ಬಾರಿ ಟ್ರೆಂಡಿಯಾಗಿರುವ ಒಂದಿಷ್ಟು ಡಿಸೈನರ್‌ವೇರ್‌ಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಹೆವ್ವಿ ವರ್ಕ್ ಲೆಹೆಂಗಾ
ದೀಪಾವಳಿಯ ರಂಗು ಹೆಚ್ಚಿಸಲು ಡಿಸೈನರ್‌ವೇರ್ ಲೆಹೆಂಗಾಗಳಲ್ಲಿ ಈ ಬಾರಿ ಹೆವ್ವಿ ವರ್ಕ್ ಇರುವಂತಹ ಲೆಹೆಂಗಾಗಳು ಕಾಲಿಟ್ಟಿವೆ. ಚಿಕ್ಕ ಚಿಕ್ಕ ಮಿರರ್ ಹಾಗೂ ಕುಂದನ್ ವರ್ಕ್ ಇರುವಂತಹ ಹೆವಿ ಡಿಸೈನ್ ಇರುವಂತವು ಚಾಲ್ತಿಯಲ್ಲಿವೆ. ಬಾಲಿವುಡ್ ಸಿನಿಮಾಗಳು ಇದಕ್ಕೆ ಪ್ರೇರಣೆ ಎನ್ನುತ್ತಾರೆ ಡಿಸೈನರ್ ರೇಷ್ಮಾ.
ಗೋಲ್ಡನ್-ಸಿಲ್ವರ್ ಎಂಬ್ರಾಯ್ಡರಿ ಗಾಗ್ರ
ಈ ಫೆಸ್ಟಿವ್ ಸೀಸನ್‌ನಲ್ಲಿ ಗೋಲ್ಡನ್ ಹಾಗೂ ಸಿಲ್ವರ್ ಶೆಡ್‌ನ ಹೆವ್ವಿ ಡಿಸೈನ್‌ನ ಗಾಗ್ರಗಳು ಹೆಚ್ಚು ಬೇಡಿಕೆಯಲ್ಲಿವೆ. ಸ್ಲಿಮ್ ಆಗಿರುವವರಿಗಂತೂ ಇದು ಹೇಳಿ ಮಾಡಿಸಿದ ಫೆಸ್ಟಿವ್ ಸೀಸನ್ ಸ್ಟೈಲ್‌ಸ್ಟೆಟ್‌ಮೆಂಟ್. ಹೆಚ್ಚು ವರ್ಕ್ ಮಾಡಿರುವಂತವು ಭಾರವಾಗಿರುತ್ತವೆ. ಹಾಗಾಗಿ ನೋಡಿ ಖರೀದಿಸಿ.
ಗಾಢ ಬಣ್ಣದ ಗ್ರ್ಯಾಂಡ್ ಸಲ್ವಾರ್-ಚೂಡಿದಾರ್
ಗಾಢ ಬಣ್ಣದ ಗ್ರ್ಯಾಂಡ್ ಆಗಿರುವ ಸಲ್ವಾರ್ ಹಾಗೂ ಚೂಡಿದಾರ್ ಸೂಟ್‌ಗಳು ಹೊಸ ವಿನ್ಯಾಸದಲ್ಲಿ ಮರಳಿವೆ. ಕೊಂಚ ಡಿಸೈನ್ಸ್ ಬದಲಾಗಿರುತ್ತವಷ್ಟೇ. ಅದರಲ್ಲೂ ಎದ್ದು ಕಾಣುವಂತಹ ಗ್ರೀನ್, ಮಜಂತಾ, ರೆಡ್, ಕೇಸರಿ, ಪಿಂಕ್ ಹಾಗೂ ನಿಯಾನ್ ವರ್ಣದವು ಹೆಚ್ಚು ಪ್ರಚಲಿತದಲ್ಲಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಡಿಸೈನರ್ ಸಲ್ವಾರ್ ಹಾಗೂ ಚೂಡಿದಾರ್‌ನಲ್ಲಿ ಇದೀಗ ಫ್ಲೀಟ್ಸ್, ಫ್ರಿಲ್‌ನದ್ದು, ಜಾಕೆಟ್‌ನ ಲೇಯರ್ ಲುಕ್‌ನದ್ದು ಹೆಚ್ಚು ಚಾಲ್ತಿಯಲ್ಲಿವೆ. ಚಿಕ್ಕ ಮಕ್ಕಳಿಗೂ ಲಭ್ಯ ಎನ್ನುತ್ತಾರೆ ಡಿಸೈನರ್‌ಗಳು.
ಡಿಸೈನರ್ ಡಿವೈಡೆಡ್ ಸ್ಕರ್ಟ್ಸ್
ಟ್ರೆಡಿಷನಲ್ ಲುಕ್ ನೀಡುವ ಫ್ಲೀಟ್ಸ್ ಹಾಗೂ ಕ್ರಶ್ ಮೆಟಿರೀಯಲ್‌ನ ಲಾಂಗ್ ಡಿವೈಡೆಡ್ ಸ್ಕರ್ಟ್‌ಗಳು ಬಂದಿವೆ. ಜರಿ ಬಾರ್ಡರ್, ಬೂಟಾ ಪ್ರಿಂಟ್ಸ್ ಪ್ರಚಲಿತದಲ್ಲಿವೆ.
ಹಬ್ಬದ ಫೆಸ್ಟಿವ್‌ವೇರ್ ಆಯ್ಕೆಗೆ ಟಿಪ್ಸ್
- ಹಬ್ಬದ ನಂತರವೂ ಧರಿಸಬಹುದಾದ ಡಿಸೈನರ್‌ವೇರ್ ಖರೀದಿಸಿ.
- ಟ್ರೆಂಡ್ನಲ್ಲಿ ಇರುವಂತವನ್ನು ಆಯ್ಕೆ ಮಾಡಿ.
- ಆನ್ಲೈನ್ನಲ್ಲಿ ಕೊಂಡಲ್ಲಿ ಟ್ರಯಲ್ ಮಾಡಲಾಗದು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Saree Fashion: ನಿಮ್ಮ ಹಳೆ ಸೀರೆಗೆ ನೀಡಿ ನಯಾ ಲುಕ್