ಸಂದರ್ಶನ: ಶೀಲಾ ಸಿ. ಶೆಟ್ಟಿ
ಖ್ಯಾತ ಕಿರುತೆರೆ ನಟಿ ಸುನೇತ್ರಾ ಪಂಡಿತ್, ತಮ್ಮ ನಟನೆಯಿಂದಲೇ ಎಲ್ಲರನ್ನೂ ಸೆಳೆದವರು. ತಮ್ಮದೇ ಆದ ಖಡಕ್ ಹಾಗೂ ಕಾಮಿಡಿ ಪಾತ್ರಗಳ ಮೂಲಕ ಮನೆಮಾತಾದವರು. ಇವರು ಕಾಟನ್ ಫ್ಯಾಷನ್ ಪ್ರೇಮಿಯಂತೆ. ಹೌದು. ಔಟ್‌ಫಿಟ್ ವಿಷಯಕ್ಕೆ ಬಂದಲ್ಲಿ ಎಲ್ಲದರಲ್ಲೂ ಕಾಟನ್ ಪ್ರಿಫರ್ ಮಾಡುತ್ತಾರಂತೆ. ಅಷ್ಟು ಮಾತ್ರವಲ್ಲ, ತಮ್ಮದೇ ಆದ ಫ್ಯಾಷನ್ ಫಾಲೋ ಮಾಡುತ್ತಾರಂತೆ. ಹಾಗೆಂದು ಅವರೇ ಹೇಳುತ್ತಾರೆ. ತಮ್ಮ ಫ್ಯಾಷನ್ ಪ್ರೇಮ ಕುರಿತಂತೆ ವಿಸ್ತಾರ ನ್ಯೂಸ್‌ನೊಂದಿಗೆ (Fashion Interview) ಹಂಚಿಕೊಂಡಿದ್ದಾರೆ.
ನಾನಾ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ನಿಮ್ಮ ಫ್ಯಾಷನ್ ಮಂತ್ರ ಏನು?
ಇಂಡಿಯನ್‌ವೇರ್ ನನಗಿಷ್ಟವಾದ ಫ್ಯಾಷನ್. ನನ್ನ ಪ್ರಕಾರ, ಫ್ಯಾಷನ್ ಅಂದ್ರೆ ಕಂಫರ್ಟಬಲ್.
ನಿಮ್ಮಇಂಡೋ-ವೆಸ್ಟರ್ನ್ ಸೀರೆಯ ಸೆಲ್ಫ್ ಡಿಸೈನ್ ಫ್ಯಾಷನ್ ಬಗ್ಗೆ ವಿವರಿಸಿ
ಹೌದು. ಇಂಡೋ-ವೆಸ್ಟರ್ನ್ ಸೀರೆ ಫ್ಯಾಷನ್ ನನಗೆ ಇಷ್ಟವಾದ ಸೀರೆ ಫ್ಯಾಷನ್ ಎಂದರೂ ತಪ್ಪಲ್ಲ! ಉದಾಹರಣೆಗೆ., ಇಳಕಲ್ ಸೀರೆಯೊಂದಿಗೆ ಸ್ಲಿವ್‌ಲೆಸ್ ವೆಸ್ಟರ್ನ್ ಟಾಪ್‌ನ ಕಾಂಬಿನೇಷನ್ ಮಾಡುತ್ತೇನೆ. ಇದು ಕಂಪ್ಲೀಟ್ ಡಿಫರೆಂಟ್ ಲುಕ್ ನೀಡುತ್ತದೆ. ನೋಡಲು ಕಂಪ್ಲೀಟ್ ಡಿಫರೆಂಟ್ ಆಗಿ ಬಿಂಬಿಸುತ್ತದೆ.
ನಿಮ್ಮ ಸಿಗ್ನೇಚರ್ ಸ್ಟೈಲ್ ?
ಸದಾ ತಲೆಯ ಮೇಲೊಂದು ಕನ್ನಡಕವನ್ನು ಸ್ಟೈಲಾಗಿ ಧರಿಸುತ್ತೇನೆ. ಇದು ನನ್ನ ಎಂದೂ ಬದಲಾಗದ ಸಿಗ್ನೇಚರ್ ಸ್ಟೈಲ್ ಎನ್ನಬಹುದು.
ನಿಮಗೆ ಜಂಕ್ ಜ್ಯುವೆಲರಿ ಅಂದ್ರೆ ಸಖತ್ ಇಷ್ಟವಂತೆ!
ಖಂಡಿತಾ. ನನಗೆ ನಾನಾ ಬಗೆಯ ಜಂಕ್ ಜ್ಯುವೆಲರಿಗಳಿಷ್ಟ. ಅದರಲ್ಲೂ ಹ್ಯಾಂಡ್‌ಮೇಡ್ ಜಂಕ್ ಜ್ಯುವೆಲರಿ ಪ್ರೇಮಿ ನಾನು. ಇವನ್ನು ಯಾವುದೇ ಔಟ್‌ಫಿಟ್‌ಗೆ ಬೇಕಾದರೂ ಮಿಕ್ಸ್ ಮ್ಯಾಚ್ ಮಾಡಬಹುದು. ಸೀರೆಯಿಂದಿಡಿದು ಎಲ್ಲವಕ್ಕೂ ಧರಿಸಬಹುದು.
ಮಿಕ್ಸ್ – ಮ್ಯಾಚ್ ಫ್ಯಾಷನ್ ಪ್ರಿಯರಂತೆ?
ಹೌದು. ನಾನು ಯಾವಾಗಲೂ ವೆಸ್ಟರ್ನ್ ಹಾಗೂ ಎಥ್ನಿಕ್ ಫ್ಯಾಷನ್ ಮಿಕ್ಸ್ ಮ್ಯಾಚ್ ಮಾಡುತ್ತೇನೆ. ಇನ್ನು ಟೈಟ್ ಫಿಟ್ ಔಟ್‌ಫಿಟ್ ಆವಾಯ್ಡ್ ಮಾಡುತ್ತೇನೆ.
ಎವರ್‌ಗ್ರೀನ್ ಫ್ಯಾಷನ್‌ನಲ್ಲಿ ಕಾಟನ್‌ಗೆ ಆದ್ಯತೆ ಎಂದು ಹೇಳುತ್ತೀರಲ್ಲ? ಯಾಕೆ?
ಯಾವುದೇ ಸೀಸನ್‌ಗೆ ತಕ್ಕಂತೆ ಔಟ್‌ಫಿಟ್ ಬದಲಿಸುತ್ತೇನೆ. ಆದರೆ, ಕಾಟನ್ ಫ್ಯಾಬ್ರಿಕ್ ಪ್ರಿಫರ್ ಮಾಡುತ್ತೇನೆ. ನಿಮಗೆ ಗೊತ್ತೇ! ಮದುವೆಗೂ ಕೂಡ ನಾನು ಕಾಟನ್ ಸೀರೆಯನ್ನೇ ಉಡುತ್ತೇನೆ ಎಂದರೇ ನಂಬುತ್ತೀರಾ!
ಸದಾ ನಿಮಗಿಷ್ಟವಾಗುವ ಕಲರ್ ಯಾವುದು?
ಲ್ಯಾವೆಂಡರ್ ಅಥವಾ ಪರ್ಪಲ್ ಶೇಡ್ ನನ್ನ ಆಲ್ ಟೈಮ್ ಫೇವರೇಟ್ ಕಲರ್. ಫ್ಯಾಷನ್ ಔಟ್‌ಫಿಟ್‌ಗಳು ಮಾತ್ರವಲ್ಲ, ಅದೇ ವರ್ಣದ ಲಿಪ್‌ಶೇಡ್ ಕೂಡ ಇಷ್ಟ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನು ಓದಿ: Fashion Show News: ಪ್ರೈಮ್ ಫ್ಯಾಷನ್ ವೀಕ್‌ನಲ್ಲಿ ಶ್ವೇತಾ ನಂದಕುಮಾರ್ ಚೀತಾ ಪ್ರಿಂಟ್ಸ್ ಡಿಸೈನರ್‌ವೇರ್ಸ್