ಶೀಲಾ ಶೆಟ್ಟಿ, ಬೆಂಗಳೂರು
ಸೆಲೆಬ್ರೆಟಿ ಲುಕ್ ನೀಡುವ ಫ್ರಿಲ್- ಫ್ಲೇರ್ ಗೌನ್‌ಗಳು ( Frill Flare Gown) ಈ ಸೀಸನ್‌ನ ಫ್ಯಾಷನ್‌ನಲ್ಲಿ ಟ್ರೆಂಡಿಯಾಗಿವೆ. ಈ ಸೀಸನ್‌ಗೆ ಸೂಟ್ ಆಗುವಂತಹ ಪಾಸ್ಟೆಲ್ ಹಾಗೂ ತಿಳಿ ವರ್ಣದ ವೈವಿಧ್ಯಮಯ ಗೌನ್‌ಗಳು ನಾನಾ ವಿನ್ಯಾಸಗಳಲ್ಲಿ ಫ್ಯಾಷನ್ ಲೋಕಕ್ಕೆ ಲಗ್ಗೆ ಇಟ್ಟಿವೆ.
ನೋಡಲು ಮನಮೋಹಕವಾಗಿರುವ ಇವು ಉದ್ದನೆಯ ಬಳುಕಾಡುವ ಸಿಂಡ್ರೆಲಾ ಫ್ರಾಕ್‌ನಂತೆ ಕಾಣುತ್ತವೆ. ಅಂದಹಾಗೆ, ಈಗಾಗಲೇ ಪಾಸ್ಟೆಲ್ ಶೇಡ್‌ನ ಫ್ರಿಲ್-ಫ್ಲೇರ್ ಗೌನ್‌ಗಳು ಅಂತರಾಷ್ಟ್ರೀಯ ಕಾನೆ ಫಿಲ್ಮ್ ಫೆಸ್ಟಿವಲ್‌ನಲ್ಲಿ ಸೆಲೆಬ್ರಿಟಿಗಳನ್ನು ಸವಾರಿ ಮಾಡಿರುವುದನ್ನು ಕಾಣಬಹುದು. ಇದಕ್ಕೆ ಪೂರಕ ಎಂಬಂತೆ, ನಮ್ಮ ದೇಸಿ ಡಿಸೈನರ್‌ಗಳೂ ಕೂಡ ಈ ಶೈಲಿಯ ಗೌನ್‌ಗಳನ್ನು ರೂಪಿಸಿದ್ದಾರೆ. “ನಾನಂತೂ ಇಂತಹ ಗೌನ್‌ಗಳಿಗೆ ಫಿದಾ ಆಗಿದ್ದೇನೆ. ಧರಿಸಿದಾಗ ಕಂಪ್ಲೀಟ್ ವೆಸ್ಟರ್ನ್ ಲುಕ್ ನಮ್ಮದಾಗುತ್ತದೆ” ಎನ್ನುತ್ತಾರೆ ಮಾಡೆಲ್ ಹಾಗೂ ನಟಿ ಇತಿ ಆಚಾರ್ಯ.
ಈ ಗೌನ್ ಎಲ್ಲರಿಗೂ ಅಚ್ಚುಮೆಚ್ಚು…
ಯಂಗ್‌ಲುಕ್ ನೀಡುವ ಈ ಶೈಲಿಯ ಗೌನ್‌ಗಳಿಗೆ ಎಲ್ಲಾ ವರ್ಗದ ಮಹಿಳೆಯರು ಮನ ಸೋತಿದ್ದಾರೆ. ಸೆಲೆಬ್ರೆಟಿಗಳನ್ನು ಅನುಸರಿಸುತ್ತಿದ್ದಾರೆ. ಈ ಮೊದಲು ಚಾಲ್ತಿಯಲ್ಲಿದ್ದ ಫ್ಲೋರಲ್, ಟ್ರಾಪಿಕಲ್, ನೇಚರ್, ಜಿಯಾಮೆಟ್ರಿಕ್ ಹೀಗೆ ನಾನಾ ಪ್ರಿಂಟ್ಸ್‌ನ ಫ್ರಿಲ್-ಫ್ಲೇರ್ ಗೌನ್‌ಗಳು ಸೈಡಿಗೆ ಸರಿದಿವೆ. ತಿಳಿ ಬಣ್ಣದ ಫ್ಲೀಟ್ಸ್, ಫ್ರಿಲ್ಸ್, ವೇವ್ಸ್ ವಿನ್ಯಾಸದ ಗೌನ್‌ಗಳು ಚಾಲ್ತಿಯಲ್ಲಿವೆ. ಇವು ಯಂಗ್ ಲುಕ್ ನೀಡುತ್ತವೆ ಎಂಬ ಕಾರಣದಿಂದಾಗಿ ಬೇಡಿಕೆ ಹೆಚ್ಚಾಗಿದೆ ಎನ್ನುತ್ತಾರೆ ಸೆಲೆಬ್ರಿಟಿ ಡಿಸೈನರ್ ದೀಪ್ತಿ ರೆಡ್ಡಿ.
ಮಾನೋಕ್ರೋಮ್ ನೆಟ್ಟೆಡ್ ಗೌನ್
ಈ ಸೀಸನ್‌ಗೆ ಹೊಂದುವಂತಹ ಒಂದೇ ಬಗೆಯ ಬಣ್ಣಗಳಲ್ಲಿ ಲಭ್ಯವಿರುವ ಮೃದುವಾದ ಪರದೆಯಂತಿರುವ ನೆಟ್ಟೆಡ್ ಗೌನ್‌ಗಳು ಮಾಡೆಲಿಂಗ್ ಲೋಕದ ರೂಪದರ್ಶಿಯರನ್ನು ಮಾತ್ರವಲ್ಲ, ಫ್ಯಾಷನ್ ಪ್ರಿಯ ಯುವತಿಯರನ್ನು ಸೆಳೆದಿವೆ. ಇವು ನೋಡಲು ಲಾಂಗ್‌ಫ್ರಾಕ್‌ನಂತೆ ಬಿಂಬಿಸುತ್ತವೆ.
ಮಲ್ಟಿ ಲೆಯರ್ ಫ್ರಿಲ್-ಫ್ಲೇರ್ ಗೌನ್
ಒಂದರ ಮೇಲೊಂದರಂತೆ ಜೋಡಿಸಿರುವ ನೆರಿಗೆಯಂತೆ ಕಾಣುವ ಮಲ್ಟಿ ಲೇಯರ್ ಫ್ರಿಲ್ ಇಲ್ಲವೇ ಪಕ್ಷಿಗಳ ರೆಕ್ಕೆ ಪುಕ್ಕದಂತೆ ಕಾಣುವ ಫ್ಲೀಟ್ಸ್ ಅಥವಾ ಫ್ಲೇರ್ ಶೈಲಿಯ ಈ ಗೌನ್ ಹರಡಿದಂತೆ ಕಂಡರೂ ಸುಂದರವಾಗಿ ಕಾಣುತ್ತದೆ. ಈ ಗೌನ್ ಧರಿಸಲು ಬಾಡಿ ಮಾಸ್ ಇಂಡೆಕ್ಸ್ ಪರ್ಫೆಕ್ಟ್ ಆಗಿರಬೇಕಾಗಿಲ್ಲ. ಬಳುಕಾಡುವ ಮ್ಯಾಕ್ಸಿ ಸ್ಟೈಲ್ ಫ್ಲೀಟ್ಸ್ ಗೌನ್ : ಬಳುಕಾಡುವ ಫ್ಲೋಟಿ ಮ್ಯಾಕ್ಸಿ ಸ್ಟೈಲ್ ಫ್ಲೀಟ್ಸ್ ಗೌನ್ ಹೆಚ್ಚಾಗಿ ಪ್ಲಂಪಿಯಾಗಿರುವವರಿಗೆ ಚೆನ್ನಾಗಿ ಕಾಣುತ್ತದೆ. ಇಂದು ಇದು ಯಾವ ಮಟ್ಟಿಗೆ ಟ್ರೆಂಡಿಯಾಗಿದೆ ಎಂದರೇ, ಕಾರ್ಪೋರೇಟ್ ಕ್ಷೇತ್ರದ ಮಹಿಳೆಯರು ಹೆಚ್ಚಾಗಿ ಇವೆಂಟ್‌ಗಳಲ್ಲಿ ಧರಿಸಲಾರಂಭಿಸಿದ್ದಾರೆ.
ಗೌನ್ ಪ್ರಿಯರಿಗೆ ಸ್ಟೈಲಿಸ್ಟ್ ಅಮಿತ್ ಪಾಂಡ್ಯ ಸಿಂಪಲ್ ಸಲಹೆ
ಪಾಸ್ಟೆಲ್ ವರ್ಣದ ಗೌನ್ ಆಯ್ಕೆ ಮಾಡುವಾಗ ನಿಮ್ಮ ಸ್ಕಿನ್‌ಟೋನ್‌ಗೆ ಸೂಟ್ ಆಗುವುದೇ ಎಂಬುದನ್ನು ಮನದಲ್ಲಿರಿಸಿಕೊಳ್ಳಿ. ಗೌನ್ ಜತೆಗೆ ಹೈ ಹೀಲ್ಸ್ ಶೂ ಧರಿಸುವುದು ಉತ್ತಮ. ಟ್ರಡಿಷನಲ್ ಜುವೆಲರಿ ಬಳಕೆ ಬೇಡ. ವೈಬ್ರೆಂಟ್ ನೇಲ್ ಆರ್ಟ್ ಮ್ಯಾಚ್ ಆಗುತ್ತದೆ. ಕಿವಿಗೆ ಹ್ಯಾಂಗಿಂಗ್ಸ್ ಇರಲಿ. ನೆಕ್‌ಲೈನ್‌ಗೆ ತಕ್ಕಂತೆ ಹೇರ್‌ಸ್ಟೈಲ್ ಮ್ಯಾಚ್ ಮಾಡುವುದು ಅಗತ್ಯ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| ಸಿಂಗಾಪುರದ ಫ್ಯಾಷನ್ ಸ್ಟಾರ್ಟಪ್ ಝಿಲಿಂಗೊ ಸಿಇಒ ಅಂಕಿತಿ ಬೋಸ್ ವಜಾ