Site icon Vistara News

Fashion Ramp News: ಮಾನ್ಸೂನ್‌ನಲ್ಲಿ ಯಶಸ್ವಿಯಾಗಿ ನಡೆದ ಕರ್ನಾಟಕ ಗ್ರೇಶಿಯಸ್‌ ಫ್ಯಾಷನ್‌ ವೀಕ್‌

Fashion Ramp News

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಪುಟ್ಟ ಮಕ್ಕಳಿಂದಿಡಿದು ಟೀನೇಜ್‌ ಮಕ್ಕಳವರೆಗೆ ಕೆಲವರು ಮುದ್ದು ಮುದ್ದಾಗಿ ಹೆಜ್ಜೆ ಹಾಕಿದರೇ, ಟೀನೇಜ್‌ ಮಕ್ಕಳು ತಮ್ಮದೇ ಆದ ಸ್ಟೈಲ್‌ನಲ್ಲಿ ಗಾಂಭೀರ್ಯ ಹಾಗೂ ಹೊಸ ಸ್ಟೈಲ್‌ನಲ್ಲಿ ರ‍್ಯಾಂಪ್‌ ವಾಕ್‌ (Fashion Ramp News) ಮಾಡಿದರು. ಅಂದಹಾಗೆ, ಇಲ್ಲಿ ವಾಕ್‌ ಮಾಡಿದವರೆಲ್ಲರೂ ಬ್ರಾಂಡ್‌ ಅಂಬಾಸಡರ್ಸ್. ಇನ್ನು ಮಿಸ್ಟರ್‌ ಹಾಗೂ ಮಿಸ್‌ ಕರ್ನಾಟಕ ಗ್ರೇಶಿಯಸ್‌ ಟೈಟಲ್‌ಗಾಗಿ ನಡೆದ ಹಣಾಹಣಿಯಲ್ಲಿ ಸ್ಪರ್ಧೆಯಲ್ಲಿದ್ದ ಮಾಡೆಲ್‌ಗಳೆಲ್ಲರೂ ರೆಡ್‌ ಗೌನ್‌ ಹಾಗೂ ಬ್ಲಾಕ್‌ ಡ್ರೆಸ್‌ಕೋಡ್‌ನಲ್ಲಿ ಕಂಡು ಬಂದದ್ದು, ಇಡೀ ಸ್ಟೇಜ್‌ನ ಸೌಂದರ್ಯ ಎತ್ತಿ ಹಿಡಿದಿತ್ತು.

ಸುಮಾರು ಹತ್ತು ವರ್ಷಗಳಿಂದ ಜಾಸ್‌ ಸಂಸ್ಥೆಯ ಜ್ಯೋತ್ಸ್‌ನಾ ವೆಂಕಟೇಶ್‌ ಹಾಗೂ ಶಬರೀಶ್‌ ಜಂಟಿಯಾಗಿ ನಡೆಸಿಕೊಂಡು ಬರುತ್ತಿರುವ ಕರ್ನಾಟಕ ಗ್ರೇಶಿಯಸ್‌ ಫ್ಯಾಷನ್‌ ವೀಕ್‌ನಲ್ಲಿ ಕಂಡು ಬಂದ ಫ್ಯಾಷನ್‌ ಪೇಜೆಂಟ್‌ ಹಾಗೂ ಶೋನ ಝಲಕ್‌ನ ಸ್ಯಾಂಪಲ್‌ಗಳಿವು.

ಮಿಸ್ಟರ್‌ –ಮಿಸ್‌ ಕರ್ನಾಟಕ ಗ್ರೇಶಿಯಸ್‌ ವಿಜೇತರು

ಸುಮಾರು ಎರಡು ದಿನಗಳ ಕಾಲ ನಡೆದ ಈ ಕಾರ್ಯಕ್ರಮವು ವೀಕೆಂಡ್‌ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಸೆಮಿ ಫೈನಲ್‌ ನಂತರ ಆಯ್ಕೆಯಾದ ಸ್ಪರ್ಧಿಗಳಿಗೆ ಅಂತಿಮ ಸ್ಪರ್ಧೆಯಲ್ಲಿ ನಾನಾ ರೌಂಡ್‌ಗಳನ್ನು ಹಮ್ಮಿಕೊಳ್ಳಲಾಗಿತ್ತು. ಜ್ಯೂರಿ ಟೀಮ್‌ನಲ್ಲಿ ಸೂಪರ್‌ ಮಾಡೆಲ್‌ ಸಂತೋಷ್‌ ರೆಡ್ಡಿಸೇರಿದಂತೆ ನಾನಾ ಫ್ಯಾಷನ್‌ ಕ್ಷೇತ್ರದ ಸೆಲೆಬ್ರೆಟಿಗಳು ಪಾಲ್ಗೊಂಡಿದ್ದರು. ಮಿಸ್ಟರ್‌ ಕರ್ನಾಟಕ ಗ್ರೇಶಿಯಸ್‌ ಆಗಿ ಪ್ರತೀಕ್ಷಾ ಪಾಟೀಲ್‌, ಮಿಸ್‌ ಕರ್ನಾಟಕ ಗ್ರೇಶಿಯಸ್‌ ಆಗಿ ಅಜಯ್‌, ಮಿಸ್ಟರ್‌ ಫಿಟ್ನೆಸ್‌ ಅರುಣಾಗೌಡ, ಮಿಸೆಸ್‌ ಕರ್ನಾಟಕ ಗ್ರೇಶಿಯಸ್‌ ಆಗಿ ಜಾಸ್ಮೀನ್‌ ತಾಜ್‌ ವಿಜೇತರಾಗಿ ಟೈಟಲ್‌ ಪಡೆದರು.

ಬ್ರಾಂಡ್‌ ಅಂಬಾಸಡರ್‌ಗಳ ಸ್ಪೆಷಲ್‌ ರ್ಯಾಂಪ್‌ ವಾಕ್‌

ಸುಮಾರು 1 ದಶಕದಿಂದ ನಡೆಯುತ್ತಿರುವ ಸಂಸ್ಥೆಯ ಫ್ಯಾಷನ್‌ ಶೋಗಳಿಗೆ ಅಂದರೆ, ಕೆಜಿಎಫ್‌ ಡಬ್ಲ್ಯೂಗೆ ಬ್ರಾಂಡ್‌ ಅಂಬಾಸಡರ್ಸ್‌ ಆಗಿದ್ದ ಮಕ್ಕಳ ಸ್ಪೆಷಲ್‌ ರ್ಯಾಂಪ್‌ ವಾಕ್‌ ನೆರೆದಿದ್ದವರ ಮನ ಸೆಳೆಯಿತು.

ಸ್ಯಾಂಡಲ್‌ವುಡ್‌ ಬಾಲ ನಟ ಮಾಸ್ಟರ್‌ ಓಂ ಸೆಲೆಬ್ರೆಟಿ ವಾಕ್‌

ಸ್ಯಾಂಡಲ್‌ವುಡ್‌ನ ಬಾಲ ನಟ ಹಾಗೂ ಕರ್ನಾಟಕ ಸೂಪರ್‌ ಟೀನ್‌ ಮಾಡೆಲ್‌ ಮಾಸ್ಟರ್‌ ಓಂ, ಸುಮಾರು ವರ್ಷಗಳ ಕಾಲ ಸಂಸ್ಥೆಯ ಬ್ರಾಂಡ್‌ ಅಂಬಾಸಡರ್‌ ಆಗಿದ್ದು, ಈ ಬಾರಿಯೂ ಸೆಲೆಬ್ರೆಟಿ ಬ್ರಾಂಡ್‌ ಅಂಬಾಸಡರ್‌ ಆಗಿ ತಮ್ಮದೇ ಆದ ಸ್ಟೈಲ್‌ನಲ್ಲಿ ರ್ಯಾಂಪ್‌ ವಾಕ್‌ ಮಾಡಿದರು. ಜೊತೆಗೆ ಹಿಂದಿನ ಸಾಲಿನ ಬ್ರಾಂಡ್‌ ಅಂಬಾಸಡರ್‌ಗಳು ಕೂಡ ವಾಕ್‌ ಮಾಡಿ ಎಲ್ಲರ ಗಮನ ಸೆಳೆದರು.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Monsoon Fashion: ಮಾನ್ಸೂನ್‌ನ ಉಲ್ಲಾಸ ಹೆಚ್ಚಿಸುವ ಬಣ್ಣ ಬಣ್ಣದ ಡಂಗ್ರೀಸ್‌

Exit mobile version