Site icon Vistara News

Festival Bangles Shopping: ಗೌರಿ ಹಬ್ಬಕ್ಕೆ ಮಾರುಕಟ್ಟೆಯಲ್ಲಿ ಗಾಜಿನ ಬಾಕ್ಸ್‌ ಬಳೆಗಳ ಕಲರವ

Festival Bangles Shopping

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಗೌರಿ ಹಬ್ಬಕ್ಕೆ ಘಲ್‌ ಎನ್ನುವ ಗಾಜಿನ ಬಾಕ್ಸ್‌ ಬಳೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಹಬ್ಬದ ಸೀಸನ್‌ನ ರಂಗೇರಿಸುತ್ತಿರುವ ಈ ಗಾಜಿನ ಬಳೆಗಳು (Festival Bangles Shopping), ಮುತ್ತೈದೆಯರ ಕೈಗಳನ್ನು ಸಿಂಗರಿಸುವುದರೊಂದಿಗೆ ಗೌರಿ ಪೂಜೆಯಲ್ಲೂ ಪಾತ್ರವಹಿಸುತ್ತಿವೆ. ಈ ನಿಟ್ಟಿನಲ್ಲಿ, ಈ ಫೆಸ್ಟಿವ್‌ ಸೀಸನ್‌ನಲ್ಲಿ ಬಣ್ಣ ಬಣ್ಣದ ಗಾಜಿನ ಬಾಕ್ಸ್‌ ಬಳೆಗಳು ಎಂಟ್ರಿ ನೀಡಿವೆ. ಲೆಕ್ಕವಿಲ್ಲದಷ್ಟು ಶೇಡ್‌ನವು ಫ್ಯಾನ್ಸಿ ಹಾಗೂ ಬ್ಯಾಂಗಲ್‌ ಶಾಪ್‌ಗಳಲ್ಲಿ ಮಾತ್ರವಲ್ಲ, ಬೀದಿ ಬದಿ ಅಂಗಡಿಗಳಲ್ಲೂ ಮಾರಾಟವಾಗುತ್ತಿವೆ.

ಗೌರಿ ಪೂಜೆಗೆ ಗಾಜಿನ ಬಾಕ್ಸ್‌ ಬಳೆಗಳು

ಗಣೇಶನ ಪೂಜೆ ನಡೆಯುವ ಮುನ್ನ, ಇರಿಸಲಾಗುವ ಗೌರಿ ಪೂಜೆಯಲ್ಲಿ ಗಾಜಿನ ಬಳೆಗಳಿಗೆ ಪ್ರಮುಖ ಸ್ಥಾನ. ಮೊದಲೆಲ್ಲಾ ಕೇವಲ ಹಸಿರು ಗಾಜಿನ ಬಳೆಗಳಿಗೆ ಮಾತ್ರ ಪ್ರಾದಾನ್ಯತೆ ನೀಡಲಾಗುತ್ತಿತ್ತು. ಬರಬರುತ್ತಾ ಹಸಿರು ಬಾಕ್ಸ್‌ ಬಳೆಗಳು ಚಾಲ್ತಿಗೆ ಬಂದವು. ಇತ್ತೀಚೆಗೆ ಇವುಗಳಲ್ಲಿ ಬಣ್ಣಬಣ್ಣದ ಗೋಲ್ಡನ್‌ ಚುಕ್ಕಿ ಹಾಗೂ ಚಿಕ್ಕ ಬೂಟಾ ಇರುವಂತಹ ಕಲರ್‌ಫುಲ್‌ ಗಾಜಿನ ಬಾಕ್ಸ್‌ ಬಳೆಗಳು ಆಗಮಿಸಿವೆ.

ಗಾಜಿನ ಸೆಟ್‌ ಬಾಕ್ಸ್ ಬಳೆಗಳಿಗೆ ಆದ್ಯತೆ

ಇನ್ನು ಈ ಹಬ್ಬದ ಸಮಯದಲ್ಲಿ ಬಾಕ್ಸ್ನೊಳಗೆ ಬರುವಂತಹ ಸೆಟ್‌ ಗಾಜಿನ ಡಿಸೈನ್‌ನ ಬಳೆಗಳನ್ನು ಕೊಳ್ಳುವವರು ಹೆಚ್ಚಾಗಿದ್ದಾರೆ. ಗೌರಿ ಪೂಜೆಯಲ್ಲಿ ಸೀರೆ ಅಥವಾ ಬ್ಲೌಸ್‌ ಪೀಸ್‌ ಜೊತೆಗೆ ಇಲ್ಲವೇ ಮುತ್ತೈದೆಯರಿಗೆ ನೀಡುವ ಬಾಗಿಣದಲ್ಲಿ ಇವುಗಳನ್ನು ಕೊಡುವುದು ಸಾಮಾನ್ಯವಾಗಿದೆ. ಇವುಗಳನ್ನು ಹಬ್ಬಕ್ಕೆ ಧರಿಸುವವರು ಹೆಚ್ಚಾಗಿದ್ದು ಕೊಳ್ಳುವ ಮಹಿಳೆಯರು ಹೆಚ್ಚಾಗಿದ್ದಾರೆ. ಇನ್ನು, ಒಂದು ಸೆಟ್‌ನಲ್ಲಿ 12 ಬಳೆಗಿರುತ್ತವೆ. ಹಸಿರು , ಕೆಂಪು, ಹಳದಿ, ಕೇಸರಿ ಸೇರಿದಂತೆ ಲೆಕ್ಕವಿಲ್ಲಷ್ಟು ಬಣ್ಣದವು ಇದೀಗ ಲಭ್ಯ. ಆದರೆ, ಸದಾ ಹಸಿರು ಗಾಜಿನ ಬಳೆಗಳಿಗೆ ಆದ್ಯತೆ ಹೆಚ್ಚು ಎನ್ನುತ್ತಾರೆ ಹಬ್ಬ ಆಚರಿಸುವ ಗೃಹಿಣಿಯರು.

ಹಬ್ಬದ ರಂಗು ಹೆಚ್ಚಿಸುವ ಗಾಜಿನ ಬಳೆಗಳು

ಇತರೇ ಹಬ್ಬಗಳಲ್ಲಿ ಪ್ಲಾಸ್ಟಿಕ್‌, ಫೈಬರ್‌, ವುಡನ್‌ ಹಾಗೂ ಇನ್ನಿತರೇ ಮೆಟಿರಿಯಲ್‌ನ ಸೆಟ್‌ ಬ್ಯಾಂಗಲ್‌ಗಳನ್ನು ಮಹಿಳೆಯರು ಧರಿಸುವುದು ಕಾಮನ್‌ ಆಗಿದೆ. ಆದರೆ, ಈ ಗೌರಿ ಹಬ್ಬದಲ್ಲಿ ಮಾತ್ರ, ಗೌರಿಗೆ ಪ್ರಿಯವಾಗುವ ಗಾಜಿನ ಬಳೆಗಳನ್ನು ಮಹಿಳೆಯರು ಧರಿಸಲು ಇಷ್ಟಪಡುತ್ತಾರೆ ಎನ್ನುತ್ತಾರೆ ಮಾರಾಟಗಾರರು.

ಗಾಜಿನ ಸೆಟ್‌ ಬಾಕ್ಸ್‌ ಬಳೆಗಳ ಟಿಪ್ಸ್

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Festival Fashion: ಟ್ರೆಡಿಷನಲ್‌ವೇರ್ಸ್‌ನಲ್ಲಿ ಮಹಾಲಕ್ಷ್ಮಿಯರಂತೆ ಹಬ್ಬವನ್ನು ಸಂಭ್ರಮಿಸಿದ ಸೆಲೆಬ್ರೆಟಿಗಳು

Exit mobile version