ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮುಂಬರುವ ಗೌರಿ ಹಬ್ಬದ ಸಂಭ್ರಮ ಹೆಚ್ಚಿಸಲು ಇದೀಗ ಟ್ರೆಡಿಷನಲ್ ಲುಕ್ ನೀಡುವ ಫ್ಲೋರಲ್ ಪ್ರಿಂಟೆಡ್ ರೇಷ್ಮೆ ಸೀರೆಗಳು (Festival Saree Trend) ಎಂಟ್ರಿ ನೀಡಿವೆ. ಉಟ್ಟಾಗ ಥೇಟ್ ಗೌರಿಯಂತೆ ಬಿಂಬಿಸಬಲ್ಲ ಈ ಸಾಫ್ಟ್ ಫ್ಲೋರಲ್ ಪ್ರಿಂಟೆಡ್ ಸಿಲ್ಕ್ ಸೀರೆಗಳು ಸದ್ಯಕ್ಕೆ ಸೀರೆ ಲೋಕದಲ್ಲಿ ಟ್ರೆಂಡಿಯಾಗಿವೆ.
ಮೃದುವಾದ ಫ್ಯಾಬ್ರಿಕ್ ಹೊಂದಿದ ಸಾಫ್ಟ್ ರೇಷ್ಮೆ ಸೀರೆಗಳಿವು
“ಫ್ಲೋರಲ್ ಪ್ರಿಂಟೆಡ್ ಸಿಲ್ಕ್‌ನ ಸಾಫ್ಟ್ ರೇಷ್ಮೆ ಸೀರೆಗಳು ಉಟ್ಟಾಗ ಹಾಗೆಯೇ ಫ್ಲೋ ಆಗುತ್ತವೆ. ಈ ಹಿಂದೆ, ಪ್ರಿಂಟೆಡ್ ಶೈನಿಂಗ್ ಸೀರೆ ಹಾಗೂ ಬಾರ್ಡರ್‌ನ ರೇಷ್ಮೆ ಸೀರೆಗಳು ಚಾಲ್ತಿಯಲ್ಲಿದ್ದವು. ಇದೀಗ ಈ ಸೀಸನ್‌ನ ಫೆಸ್ಟಿವಲ್‌ಗಳಿಗೆ ಸಾಥ್ ನೀಡಲು ನಾನಾ ಬಗೆಯ ಪ್ರಿಂಟೆಡ್ ಸಾಫ್ಟ್ ರೇಷ್ಮೆಸೀರೆಗಳು ಕಾಲಿಟ್ಟಿದ್ದು, ಅವುಗಳಲ್ಲಿ ಕೆಲವು ಯುವತಿಯರ ಹಾಗೂ ಉದ್ಯೋಗಸ್ಥ ಮಹಿಳೆಯರ ಫೆವರೇಟ್ ಲಿಸ್ಟ್‌ಗೆ ಸೇರಿವೆ” ಎನ್ನುತ್ತಾರೆ ಸೀರೆ ಸ್ಪೆಷಲಿಸ್ಟ್ ಸ್ಟೈಲಿಸ್ಟ್ ರಮ್ಯಾ ದೇವನಾಥ್.
ಟ್ರೆಂಡಿಯಾಗಿರುವ ಫ್ಲೋರಲ್ ಪ್ರಿಂಟೆಡ್ ಸಾಫ್ಟ್ ರೇಷ್ಮೆ ಸೀರೆಗಳು
ಟ್ರೆಂಡ್‌ನಲ್ಲಿರುವ ಗ್ರ್ಯಾಂಡ್ ಸಾಫ್ಟ್ ರೇಷ್ಮೆ ಸೀರೆಗಳಲ್ಲಿ 3 ಬಗೆಯವು ಅತಿ ಹೆಚ್ಚು ಬೇಡಿಕೆ ಪಡೆದುಕೊಂಡಿವೆ. ಕಾಂಚೀವರಂ ಫ್ಲೋರಲ್ ಪ್ರಿಂಟೆಡ್ ಸಾಫ್ಟ್ ರೇಷ್ಮೆಸೀರೆ, ಬನಾರಸ್ ಪ್ರಿಂಟೆಡ್ ಸಾಫ್ಟ್ ಸೀರೆ, ಇಕ್ಕಟ್-ಪಟೋಲಾ ಪ್ರಿಂಟೆಡ್ ಸೀರೆಗಳು ಅತಿ ಹೆಚ್ಚು ಡಿಸೈನ್‌ನಲ್ಲಿ ಹಾಗೂ ಕಲರ್‌ಗಳಲ್ಲಿ ದೊರೆಯುತ್ತಿವೆ ಎನ್ನುತ್ತಾರೆ ಪ್ರತಿಷ್ಠಿತ ಸೀರೆ ಶೋರೂಮ್‌ವೊಂದರ ಸೇಲ್ಸ್‌ಮ್ಯಾನ್.
ಕಾಂಚೀವರಂ ಫ್ಲೋರಲ್ ಪ್ರಿಂಟೆಡ್ ಸೀರೆಗಳು
ಕಾಂಚೀವರಂ ರೇಷ್ಮೆ ಸೀರೆಗಳು ಎವರ್‌ಗ್ರೀನ್ ಸೀರೆಗಳೆಂದೇ ಖ್ಯಾತಿ ಪಡೆದಿವೆ. ಇವುಗಳಲ್ಲೂ ಇದೀಗ ಲೆಕ್ಕವಿಲ್ಲದಷ್ಟು ಬಗೆಯ ಗಾರ್ಡನ್ ಪ್ರಿಂಟ್ ಅಂದರೇ, ಫ್ಲೋರಲ್ ಪ್ರಿಂಟ್ಸ್ ಹೆಚ್ಚು ಬೇಡಿಕೆ ಪಡೆದುಕೊಂಡಿವೆ. ಸದಾ ಬೂಟಾ ಇಲ್ಲವೇ ಗೋಲ್ಡನ್ ಚಿತ್ತಾರಗಳಿಂದ ತುಂಬಿರುತ್ತಿದ್ದ ಈ ಸೀರೆಗಳಲ್ಲಿ ಇದೀಗ ಹೂ-ಬಳ್ಳಿ, ಹೂಕುಂಡ, ಹೂವುಗಳ ತೋರಣ ಹೀಗೆ ನಾನಾ ಹೂಗಳ ಚಿತ್ತಾರದ ಒಡಲು ಮಾನಿನಿಯರನ್ನು ಸೆಳೆದಿವೆ.
ಬನಾರಸ್ ಫ್ಲೋರಲ್ ಪ್ರಿಂಟೆಡ್ ಸೀರೆಗಳು
ಬನಾರಸ್ ಸೀರೆ ಮೊದಲಿನಿಂದಲೂ ಮಾನಿನಿಯರ ವಾರ್ಡ್ರೋಬ್‌ಗಳಲ್ಲಿ ಸ್ಥಾನ ಪಡೆದಿದೆ. ಅವುಗಳಲ್ಲಿ ಇದೀಗ ಟಿಶ್ಯೂ, ಸಾಫ್ಟ್ ಬನಾರಸ್ ಸಿಲ್ಕ್ ಗಾರ್ಡನ್ ಥೀಮ್ ಸೀರೆಗಳು ಬಂದಿದ್ದು, ಎಂದಿನಂತೆ ಗೋಲ್ಡನ್ ಹಾಗೂ ಸಿಲ್ವರ್ ಥ್ರೆಡ್‌ನ ಬ್ಯೂಟಿಫುಲ್ ಚಿತ್ತಾರದವು ಸೀರೆಯ ಒಡಲ ಅಂದಹೆಚ್ಚಿಸಿವೆ.
ಇಕ್ಕಟ್-ಪಟೋಲಾ ಫ್ಲೋರಲ್ ರೇಷ್ಮೆ ಸೀರೆಗಳು
ಈ ಸೀಸನ್‌ನಲ್ಲಿ ಅತಿ ಹೆಚ್ಚು ಡಿಸೈನ್ ಹಾಗೂ ಪ್ರಿಂಟ್‌ನಲ್ಲಿ ಆಗಮಿಸಿರುವ ಇಕ್ಕಟ್ ಹಾಗೂ ಪಟೋಲಾ ಗಾರ್ಡನ್ ಅಥವಾ ಫ್ಲೋರಲ್ ಪ್ರಿಂಟೆಡ್ ಸೀರೆಗಳು ಯುವತಿಯರನ್ನು ಹಾಗೂ ಉದ್ಯೋಗಸ್ಥ ಮಹಿಳೆಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ. ಲೆಕ್ಕವಿಲ್ಲದಷ್ಟು ಕಾಂಬಿನೇಷನ್ ಬಾರ್ಡರ್‌ಗಳಲ್ಲಿ ಇವು ಬಂದಿದ್ದು, ಮನಮೋಹಕ ಡಿಸೈನ್‌ಗಳು ಮಹಿಳೆಯರನ್ನು ಸೆಳೆಯುತ್ತಿವೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Festival Bangles Shopping: ಗೌರಿ ಹಬ್ಬಕ್ಕೆ ಮಾರುಕಟ್ಟೆಯಲ್ಲಿ ಗಾಜಿನ ಬಾಕ್ಸ್ ಬಳೆಗಳ ಕಲರವ