ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬಿಗ್‌ಬಾಸ್ ಮಾಜಿ ಸ್ಪರ್ಧಿ, ನಿರೂಪಕಿ ಹಾಗೂ ಉದ್ಯಮಿ ಚೈತ್ರಾ ವಾಸುದೇವನ್ ಅವರು ಧರಿಸಿರುವ ಆಕರ್ಷಕ ಸೌತ್ ಇಂಡಿಯನ್ ಲೆಹೆಂಗಾ, ಫೆಸ್ಟಿವ್ ಸೀಸನ್‌ನ (Festive Fashion) ಎಥ್ನಿಕ್ ಫ್ಯಾಷನ್‌ನಲ್ಲಿ ಟ್ರೆಂಡ್ ಸೆಟ್ ಮಾಡಿದೆ. ಶ್ರಾವಣ ಮಾಸದ ಫೆಸ್ಟಿವ್ ಸೀಸನ್ ಸ್ವಾಗತಿಸಿರುವ ಚೈತ್ರಾ ಅವರ ಈ ಆಕರ್ಷಕ ಟ್ರೆಡಿಷನಲ್ ಔಟ್‌ಫಿಟ್‌ಗೆ ಫ್ಯಾಷನ್ ಪ್ರಿಯರು ಮಾರು ಹೋಗಿದ್ದಾರೆ. ಸದ್ಯ ಟ್ರೆಂಡ್ ಲಿಸ್ಟ್‌ನಲ್ಲಿರುವ ಈ ಉಡುಪು ಹಬ್ಬದ ಸೀಸನ್‌ನ ಸಂಭ್ರಮವನ್ನು ಹೆಚ್ಚಿಸಿದೆ.
ಸೌತ್ ಇಂಡಿಯನ್ ಲೆಹೆಂಗಾ ಜಾದೂ
ಅಂದಹಾಗೆ, ಈ ಟ್ರೆಡಿಷನಲ್ ಡಿಸೈನರ್‌ವೇರ್ ಸಿದ್ಧಪಡಿಸಿರುವುದು ಕೊಲ್ಕತ್ತಾ ಮೂಲಕದ ಮೌಸಮಿ ಮಾಯಾ ಡಿಸೈನರ್ ಸ್ಟುಡಿಯೋದವರು. ದಕ್ಷಿಣ ಭಾರತದ ಡಿಸೈನರ್‌ವೇರ್‌ಗಳ ಬಗ್ಗೆ ಅಪಾರ ಆಸಕ್ತಿ ಹೊಂದಿರುವ ಇವರು ಈ ಔಟ್‌ಫಿಟ್ ಇಲ್ಲಿನ ಸಂಸ್ಕೃತಿಗೆ ಹೊಂದುವಂತೆ ಸಿದ್ಧಪಡಿಸಿದ್ದಾರೆ ಎನ್ನುತ್ತಾರೆ ಚೈತ್ರಾ ವಾಸುದೇವನ್.
ಚೈತ್ರಾ ವಾಸುದೇವನ್ ಫ್ಯಾಷನ್ ಟಾಕ್
ಈ ಕುರಿತಂತೆ ವಿಸ್ತಾರ ನ್ಯೂಸ್‌ನೊಂದಿಗೆ ಮಾತನಾಡಿರುವ, ಚೈತ್ರಾ ವಾಸುದೇವನ್, ಪ್ರತಿ ಟ್ರೆಡಿಷನಲ್ ಉಡುಪು ಕೂಡ ನಮ್ಮ ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತವೆ. ಇನ್ನು, ಸೌತ್ ಇಂಡಿಯನ್ ಲೆಹೆಂಗಾ ಎಂದು ಕರೆಯಲ್ಪಡುವ ಈ ಲಂಗ-ದಾವಣಿಯನ್ನು ವಿಭಿನ್ನವಾಗಿ ಧರಿಸಿರುವುದು ಮತ್ತಷ್ಟು ಸೌಂದರ್ಯ ಹೆಚ್ಚಿಸಿದೆ. ಮುಂಬರುವ ವರಮಹಾಲಕ್ಷ್ಮಿ ಹಬ್ಬಕ್ಕೆ ಇದು ಹೇಳಿ ಮಾಡಿಸಿದ ಔಟ್‌ಫಿಟ್. ಎಂತಹವರನ್ನು ಲಕ್ಷ್ಮಿಯಂತೆ ಬಿಂಬಿಸುತ್ತದೆ ಎನ್ನುತ್ತಾರೆ.
ಟ್ರೆಂಡ್ ಸೆಟ್ ಮಾಡಿದ ಚೈತ್ರಾ ಟ್ರೆಡಿಷನಲ್ ಔಟ್‌ಫಿಟ್
ಇಂದು ಲೆಹೆಂಗಾಗಳು ಕೂಡ ಸೌತ್ ಇಂಡಿಯನ್ ಲುಕ್ ಪಡೆದಿವೆ. ಅದರಲ್ಲೂ ಲಂಗ-ದಾವಣಿ ಡಿಸೈನರ್‌ವೇರ್‌ಗಳು ಇಂದು ಟ್ರೆಂಡಿಯಾಗಿವೆ ಕೂಡ. ಹಬ್ಬದ ಸಂಭ್ರಮಕ್ಕೆ ಸಾಥ್ ನೀಡುವ ಈ ಶೈಲಿಯ ರೇಷ್ಮೆ ಹಾಗೂ ಇನ್ನಿತರೇ ಸಿಲ್ಕ್ ಫ್ಯಾಬ್ರಿಕ್‌ನ ಗ್ರ್ಯಾಂಡ್ ಲಂಗ-ದಾವಣಿಗಳು ಕೇವಲ ಹುಡುಗಿಯರನ್ನು ಮಾತ್ರವಲ್ಲ, ಎಲ್ಲಾ ವಯಸ್ಸಿನ ಸ್ತ್ರಿಯರನ್ನು ಆಕರ್ಷಿಸುತ್ತಿವೆ. ಈ ನಿಟ್ಟಿನಲ್ಲಿ, ಈ ಎಥ್ನಿಕ್ ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡ ಚೈತ್ರಾ ವಾಸುದೇವನ್ ಅವರ ಈ ಎಥ್ನಿಕ್ ಔಟ್‌ಫಿಟ್ ಈ ಸೀಸನ್‌ನಲ್ಲಿ ಟ್ರೆಂಡ್ ಸೆಟ್ ಮಾಡಿದೆ ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು.
ಸೌತ್ ಇಂಡಿಯನ್ ಲೆಹಂಗಾ ಪ್ರಿಯರಿಗೆ ಚೈತ್ರಾ ವಾಸುದೇವನ್ ಟಿಪ್ಸ್
- ಕಂಪ್ಲೀಟ್ ಟ್ರೆಡಿಷನಲ್ ಲುಕ್ಗೆ ಆದ್ಯತೆ ನೀಡಿ.
- ಮೇಕಪ್, ಹೇರ್ಸ್ಟೈಲ್ ಎಲ್ಲವೂ ಟ್ರೆಡಿಷನಲ್ ಲುಕ್ಗೆ ಮ್ಯಾಚ್ ಆಗಬೇಕು.
- ಆಂಟಿಕ್ ಜ್ಯುವೆಲರಿಗಳು ಈ ಔಟ್‌ಫಿಟ್‌ಗೆ ಬೆಸ್ಟ್ ಚಾಯ್ಸ್.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Anklet Fashion: ಬೆಳ್ಳಿ ಕಾಲ್ಗೆಜ್ಜೆಯ ಜಾಗಕ್ಕೆ ಬಂತು ಫಂಕಿ ಆಕ್ಸೆಸರೀಸ್