ಶೀಲಾ ಸಿ. ಶೆಟ್ಟಿ, ಬೆಂಗಳೂರು
ಶ್ರಾವಣ ಮಾಸದ ಸಂಭ್ರಮ ಹೆಚ್ಚಿಸಲು ಗ್ರ್ಯಾಂಡ್ ಟ್ರೆಡಿಷನಲ್ವೇರ್ಗಳು (Festive Season Fashion) ಮಾರುಕಟ್ಟೆಗೆ ಎಂಟ್ರಿ ನೀಡಿವೆ. ಸಾಲು ಸಾಲು ಹಬ್ಬಗಳು ಆಗಮಿಸುವ ಈ ಫೆಸ್ಟಿವ್ ಸೀಸನ್ನ ಕಳೆ ಹೆಚ್ಚಿಸಲು ಸಜ್ಜಾಗಿವೆ.
ಮಾರುಕಟ್ಟೆಗೆ ವೆರೈಟಿ ಟ್ರೆಡಿಷನಲ್ವೇರ್ಸ್
ಈ ಫೆಸ್ಟಿವ್ ಸೀಸನ್ನಲ್ಲಿ ಇದೀಗ ಟ್ರೆಡಿಷನಲ್ವೇರ್ಗಳದ್ದೇ ಕಾರುಬಾರು. ಸೋ, ವೆಸ್ಟರ್ನ್ ಔಟ್ಫಿಟ್ಗಳು ಸೈಡಿಗೆ ಸರಿದಿವೆ. ಏನಿದ್ದರೂ ನೋಡಲು ದೇಸಿ ಲುಕ್ ನೀಡುವ ಅದರಲ್ಲೂ ಗ್ರ್ಯಾಂಡ್ ಲುಕ್ ನೀಡುವಂತಹ ಲೆಕ್ಕವಿಲ್ಲದಷ್ಟು ಬಗೆಯ ಊಹೆಗೂ ಮೀರಿದ ಟ್ರೆಡಿಷನಲ್ವೇರ್ಗಳು ಕಾಲಿಟ್ಟಿವೆ ಎನ್ನುವ ಸ್ಟೈಲಿಸ್ಟ್ಗಳ ಪ್ರಕಾರ, ಈ ಸೀಸನ್ನಲ್ಲಿ ಆದಷ್ಟೂ ಈ ಎಥ್ನಿಕ್ವೇರ್ಗಳನ್ನು ಕೊಳ್ಳುವುದು ಉತ್ತಮ. ವಿನೂತನ ವಿನ್ಯಾಸ ಇಲ್ಲವೇ ನಮಗೆ ಬೇಕಾದಂತಹ ಶೇಡ್ಸ್ನವು ಅತಿ ಹೆಚ್ಚು ಆಪ್ಷನ್ನಲ್ಲಿ ಲಭ್ಯ ಎನ್ನುತ್ತಾರೆ.
ಟ್ರೆಂಡ್ನಲ್ಲಿರುವ ಟ್ರೆಡಿಷನಲ್ ಔಟ್ಫಿಟ್ಸ್
ಪ್ರತಿವರ್ಷದಂತೆ ಈ ವರ್ಷವೂ ಕೂಡ ನಾನಾ ವಿನ್ಯಾಸದ ಲಂಗ-ದಾವಣಿ, ಸೀರೆ ಶೈಲಿಯ ಹಾಫ್ ಸೀರೆ, ಲೆಹೆಂಗಾ ಶೈಲಿಯವು, ಕಾಂಟ್ರಾಸ್ಟ್ ಬಣ್ಣದವು, ಗ್ರ್ಯಾಂಡ್ ಲುಕ್ ನೀಡುವ ಕಾಂಚೀಪುರಂ ಫ್ಯಾಬ್ರಿಕ್ನವು, ಇಕ್ಕಟ್ ಹಾಗೂ ಬಿಗ್ ಬಾರ್ಡರ್ ರೇಷ್ಮೆ ಸೀರೆಯಲ್ಲಿ ಹೊಲೆದ ಲಂಗ-ದಾವಣಿಗಳು ಬಂದಿವೆ. ಇನ್ನು ಉದ್ದ-ಲಂಗ ಎಂದು ಕರೆಸಿಕೊಳ್ಳುತ್ತಿದ್ದ ಲಾಂಗ್ ಸ್ಕರ್ಟ್ನವು ಕೊಂಚ ಇಂಡೋ-ವೆಸ್ಟರ್ನ್ ಶೈಲಿಯಲ್ಲಿ ಬಿಡುಗಡೆಗೊಂಡಿವೆ. ಟ್ರೆಡಿಷನಲ್ ಟಚ್ ನೀಡುವ ರೇಷ್ಮೆ ಸೀರೆಯ ಫ್ಯಾಬ್ರಿಕ್ನಲ್ಲಿ ಬಾರ್ಡರ್ ಡಿಸೈನ್ಲ್ಲಿ ಎಂಟ್ರಿ ನೀಡಿವೆ. ಲಾಂಗ್ ಕುರ್ತಾ, ಸಲ್ವಾರ್ ಚೂಡಿದಾರ್ ಕೂಡ ಝರಿ ಬಾರ್ಡರ್ ಹಾಗೂ ಎಥ್ನಿಕ್ ಲುಕ್ ನೀಡುವ ಫ್ಯಾಬ್ರಿಕ್ನಲ್ಲಿ ಬಂದಿವೆ.ಇದರೊಂದಿಗೆ ಸದಾ ಉಡುಪನ್ನು ಗ್ರ್ಯಾಂಡ್ ಆಗಿ ಬಿಂಬಿಸಬಲ್ಲ ದುಪಟ್ಟಾಗಳು ಕೂಡ ಹೆವ್ವಿ ಡಿಸೈನ್ನಲ್ಲಿ ಆಗಮಿಸಿವೆ.
ಮಕ್ಕಳಿಗೂ ಟ್ರೆಡಿಷನಲ್ವೇರ್ಸ್
ಇನ್ನು ಮಕ್ಕಳ ಸೌಂದರ್ಯವನ್ನು ಹೆಚ್ಚಿಸಬಲ್ಲ ಮಿನಿ ಲಂಗ-ದಾವಣಿ, ರೆಡಿ ಸೀರೆ ಹಾಗೂ ರೇಷ್ಮೆ ಫ್ಯಾಬ್ರಿಕ್ನಂತೆ ಕಾಣುವ ಫ್ಯಾಬ್ರಿಕ್ನಲ್ಲಿ ಫ್ರಾಕ್ ಹಾಗೂ ಗೌನ್ಗಳು ಆಗಮಿಸಿವೆ. ಇವು ನೋಡಲು ಪುಟ್ಟ ಗೌರಮ್ಮನಂತೆ ಬಿಂಬಿಸುತ್ತವೆ ಎನ್ನುತ್ತಾರೆ ಫ್ಯಾಷನಿಸ್ಟ್ ಜಮುನಾ.
ಪುರುಷರಿಗೆ ಸಿಂಪಲ್ ಪಂಚೆ-ಶಲ್ಯ-ಧೋತಿ
ಶ್ರಾವಣ ಮಾಸದಲ್ಲಿ ಅತಿ ಹೆಚ್ಚು ಹಬ್ಬಗಳು ಹೆಣ್ಮಕ್ಕಳಿಗೆ ಮೀಸಲಾಗಿರುವುದರಿಂದ ಪುರುಷರ ಫ್ಯಾಷನ್ನಲ್ಲಿ ಅಂತಹ ವ್ಯತ್ಯಾಸವೇನಿಲ್ಲ! ಎಂದಿನಂತೆ ಬಾರ್ಡರ್ ಪಂಚೆ-ಶಲ್ಯ-ಧೋತಿ ಕೊಂಚ ಹೊಸ ಡಿಸೈನ್ನಲ್ಲಿ ಬಂದಿವೆ ಎನ್ನುತ್ತಾರೆ ಮಾಡೆಲ್ ವಿನಯ್.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Shravana Festive Season Shopping: ಫೆಸ್ಟಿವ್ ಸೀಸನ್ನಲ್ಲಿ ಬೇಡಿಕೆ ಹೆಚ್ಚಿಸಿಕೊಂಡ ಜರ್ಮನ್ ಸಿಲ್ವರ್ ಪೂಜಾ ಪರಿಕರಗಳು