Site icon Vistara News

Festive Season Jewel Trend: ಧನ್‌ತೆರಾಸ್‌ಗೆ ಟ್ರೆಂಡಿಯಾದ 5 ಡಿಸೈನ್‌ನ ಬಂಗಾರದ ನೆಕ್ಲೇಸ್‌ಗಳಿವು

Festive season jewel trend

ಶೀಲಾ ಸಿ. ಶೆಟ್ಟಿ, ಬೆಂಗಳೂರು

ದೀಪಾವಳಿಯ ಫೆಸ್ಟಿವ್‌ ಸೀಸನ್‌ನ ಧನ್‌ತೆರಾಸ್‌ (Festive season jewel trend) ಧನ್‌ತೆರಾಸ್‌ಗೆ ಟ್ರೆಂಡಿಯಾದ 5 ಡಿಸೈನ್‌ನ ಬಂಗಾರದ ನೆಕ್ಲೇಸ್‌ಗಳಿವು ಹಬ್ಬದಲ್ಲಿ ಮಹಿಳೆಯರು ಬಂಗಾರ ಖರೀದಿ ಮಾಡುವುದು ಮೊದಲಿನಿಂದಲೂ ಚಾಲ್ತಿಯಲ್ಲಿದೆ. ಅದರಲ್ಲೂ ಆಭರಣಗಳಲ್ಲಿ ನೆಕ್ಲೇಸ್‌ ಖರೀದಿ ಮಾಡುವವರೇ ಹೆಚ್ಚು. ಖರೀದಿಸುವವರು ಇದಕ್ಕೂ ಮುನ್ನ ಈ ಸೀಸನ್‌ನಲ್ಲಿ ಟ್ರೆಂಡಿಯಾಗಿರುವ ನೆಕ್ಲೇಸ್‌ಗಳು ಯಾವ್ಯುವು? ಎಂಬುದರ ಬಗ್ಗೆ ತಿಳಿದುಕೊಳ್ಳುವುದು ಉತ್ತಮ ಎನ್ನುತ್ತಾರೆ ಜ್ಯುವೆಲ್‌ ಡಿಸೈನರ್‌ ಅರ್ಚನಾ ಕೇಸರಿ. ಅವರು ಈ ಬಗ್ಗೆ ಒಂದಿಷ್ಟು ವಿವರ ನೀಡಿದ್ದಾರೆ.

ಲೈಟ್‌ವೇಟ್‌ ನೆಕ್ಲೇಸ್‌

ಲೈಟ್‌ವೇಟ್‌ ಡಿಸೈನ್‌ನ ನೆಕ್ಲೇಸ್‌ಗಳು ಇಂದು ಪ್ರಚಲಿತದಲ್ಲಿವೆ. ನೋಡಲು ಹೆಚ್ಚು ಭಾರವೆನಿಸಿದಂತೆ ಕಂಡರೂ, ಕಡಿಮೆ ತೂಕದಲ್ಲಿಇವನ್ನು ತಯಾರಿಸಲಾಗಿರುತ್ತದೆ. ಬಂಗಾರದಲ್ಲಿ ನಾನಾ ವಿನ್ಯಾಸದಲ್ಲಿಇವು ಲಭ್ಯ. ಹಾಗಾಗಿ ಸಾಮಾನ್ಯರು ಕೂಡ ಇವನ್ನು ಖರೀದಿಸಲು ಸಾಧ್ಯ. ಕಡಿಮೆ ಹಣದಲ್ಲಿ ಭಾರಿ ಲುಕ್‌ ನೀಡುವ ಇವು ಮಲ್ಟಿಪಲ್‌ ಡಿಸೈನ್ಸ್‌ನಲ್ಲಿ ದೊರಕುತ್ತಿವೆ.

ಫ್ಯಾಷನ್ ಜ್ಯುವೆಲರಿಯಲ್ಲಿ ನೆಕ್ಲೇಸ್‌

ಇವು ಈ ಜನರೇಷನ್‌ಗೆ ಹೇಳಿ ಮಾಡಿಸಿದ ನೆಕ್ಲೇಸ್‌. ಹೆಚ್ಚು ವಿನ್ಯಾಸವಿರುವುದಿಲ್ಲ. ನೋಡಲು ಚೈನ್‌ ಅಥವಾ ತೆಳುವಾದ ಡಿಸೈನ್‌ಗಳನ್ನು ಹೊಂದಿರುತ್ತವೆ. ಇಲ್ಲವೇ ಆರ್ಟಿಫಿಷಿಯಲ್‌ ನೆಕ್‌ಚೈನ್‌ ಡಿಸೈನ್‌ ಅಥವಾ ಕಂಟೆಂಪರರಿ ಡಿಸೈನ್‌ ಹೊಂದಿರುತ್ತವೆ. ಇವು ಜೆನ್‌ ಜಿ ಹುಡುಗಿಯರು, ಯುವತಿಯರು ಹಾಗೂ ಕಾರ್ಪೋರೇಟ್‌ ಕ್ಷೇತ್ರದ ಮಹಿಳೆಯರು ಇವನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಇವು ಟ್ರೆಡಿಷನಲ್‌ ಉಡುಪುಗಿಂತ ಕ್ಯಾಶುವಲ್‌ ಹಾಗೂ ಆಫೀಸ್‌ವೇರ್‌ಗೆ ಆಕರ್ಷಕವಾಗಿ ಕಾಣುತ್ತವೆ.

ಥೀಮ್‌ ನೆಕ್ಲೇಸ್‌

ಥೀಮ್‌ ಆಧಾರಿತ ನೆಕ್ಲೆಸ್‌ಗಳಿಗೆ ಮೊದಲಿನಿಂದಲೂ ಪ್ರಾಮುಖ್ಯತೆ ಇದೆ. ಇವು ಸೀಸನ್‌ಗೆ ತಕ್ಕಂತೆ, ಸಂದರ್ಭಕ್ಕೆ ಸೂಟ್‌ ಆಗುವಂತೆ ಅನಿಮಲ್‌, ಫ್ಲೋರಲ್‌, ಟೆಂಪಲ್‌ ಹೀಗೆ ನಾನಾ ಥೀಮ್‌ ಹೊಂದಿರುತ್ತವೆ. ಈ ಶೈಲಿಯ ನೆಕ್ಲೇಸ್‌ಗಳು ವಿಶೇಷ ಯೂನಿಕ್‌ ಡಿಸೈನ್‌ಗಳಲ್ಲಿ ದೊರೆಯುತ್ತವೆ.

ಆ್ಯಂಟಿಕ್‌ ಬಂಗಾರದ ನೆಕ್ಲೇಸ್‌

ಆ್ಯಂಟಿಕ್‌ ಬಂಗಾರದ ನೆಕ್ಲೇಸ್‌ ಎವರ್‌ಗ್ರೀನ್‌ ಟ್ರೆಂಡ್‌ನಲ್ಲಿದೆ. ಇನ್ನು ಕುಸುರಿ ಕೆಲಸಕ್ಕೆ ಸಾಕ್ಷಿಯಾಗುವ ಟ್ರೆಡಿಷನಲ್‌ ಆ್ಯಂಟಿಕ್‌ ವಿನ್ಯಾಸದ ನೆಕ್ಲೇಸ್‌ಗಳು ಹೆಚ್ಚು ದಿನ ಬಾಳಿಕೆ ಕೂಡ ಬರುತ್ತವೆ. ಇವು ಮಾನಿನಿಯರ ಮೆರಗನ್ನು ಹೆಚ್ಚಿಸುತ್ತವೆ. ಹಬ್ಬ-ಹರಿದಿನಗಳಿಗೆ ಟ್ರೆಡಿಷನಲ್‌ ಸೀರೆ ಹಾಗೂ ಉಡುಪುಗಳಿಗೆ ಧರಿಸಲು ಸರಿಯಾದ ಆಯ್ಕೆಇವು ಎನ್ನುತ್ತಾರೆ ಡಿಸೈನರ್ಸ್.

ಮಲ್ಟಿ ಲೆಯರ್ಡ್‌ ನೆಕ್ಲೇಸ್‌

ಗ್ರ್ಯಾಂಡ್‌ ಲುಕ್‌ಗಾಗಿ ಮಲ್ಟಿ ಲೆಯರ್ಡ್‌ ನೆಕ್ಲೇಸ್‌ ಕೊಳ್ಳಬಹುದು. ಒಂದರ ಮೇಲೆ ಒಂದು ಆಭರಣಗಳನ್ನು ಧರಿಸುವುದಕ್ಕಿಂತ ಒಂದರಲ್ಲೆಐದಾರು ಬಗೆಯ ಎಳೆಗಳ ನೆಕ್ಲೇಸ್‌ನಂತಹ ಹಾರ ಧರಿಸುವ ಟ್ರೆಂಡ್‌ ಇಂದು ಬ್ರೈಡಲ್‌ವೇರ್‌ ಫ್ಯಾಷನ್‌ ಶೋಗಳ ಮೂಲಕ ಆರಂಭವಾಗಿದೆ.

ನೆಕ್ಲೇಸ್‌ ಪ್ರಿಯರು ಗಮನಿಸಬೇಕಾದದ್ದು

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Saree Fashion: ನಿಮ್ಮ ಹಳೆ ಸೀರೆಗೆ ನೀಡಿ ನಯಾ ಲುಕ್‌

Exit mobile version