ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸೆಲೆಬ್ರೆಟಿಯಂತೆ ಗ್ರ್ಯಾಂಡ್ ಲುಕ್‌ನಲ್ಲಿ ಕಾಣಿಸಲು ಯಾರಿಗೆ ಇಷ್ಟವಿಲ್ಲ ಹೇಳಿ ನೋಡಿ! ಎಲ್ಲಾ ಹೆಣ್ಣು ಮಕ್ಕಳಿಗೂ ಹಬ್ಬದಂದು ಆಕರ್ಷಕವಾಗಿ ಕಾಣಬೇಕೆಂಬ ಬಯಕೆ ಇದ್ದೇ ಇರುತ್ತದೆ. ಇದಕ್ಕೆ ಪೂರಕ ಎಂಬಂತೆ, ದೀಪಾವಳಿ ಫೆಸ್ಟಿವ್ ಸೀಸನ್‌ನಲ್ಲಿ ಸೆಲೆಬ್ರೆಟಿ ಮೇಕಪ್‌ಗೆ (Festive Season Makeup) ಆದ್ಯತೆ ಹೆಚ್ಚಾಗಿದೆ.
“ನೋಡಲು ಆಕರ್ಷಕವಾಗಿ ಹಾಗೂ ಕಾಂತಿಯುಕ್ತವಾಗಿ ಕಾಣುವ ಸೆಲೆಬ್ರೆಟಿ ಮೇಕಪ್ ಮಾಡುವುದಷ್ಟೇ ಅಲ್ಲ, ಒಂದಿಷ್ಟು ಮುಖದ ಆರೈಕೆಯೂ ಮಾಡಿರಬೇಕು. ಒಂದಿಷ್ಟು ರೂಲ್ಸ್ ಫಾಲೋ ಮಾಡಬೇಕು. ಆಗಷ್ಟೇ ಮೇಕಪ್ ಕಂಪ್ಲೀಟ್ ಆಗಿ ಚೆನ್ನಾಗಿ ಕಾಣುವುದು ಎನ್ನುತ್ತಾರೆ” ಸೆಲೆಬ್ರೆಟಿ ಮೇಕಪ್ ಆರ್ಟಿಸ್ಟ್ ಮಂಜುನಾಥ್. ಅವರ ಪ್ರಕಾರ, ಮುಖಕ್ಕೆ ಬಳಸುವ ಸೌಂದರ್ಯ ಉತ್ಪನ್ನಗಳ ಆಯ್ಕೆ ಕೂಡ ಮುಖ್ಯವಾಗುತ್ತದೆ. ಆಯಾ ಸ್ಕಿನ್ ಟೋನ್‌ಗೆ ಮ್ಯಾಚ್ ಆಗುವಂತೆ ಮೇಕಪ್ (Festive Season Makeup) ಮಾಡಬೇಕು ಎನ್ನುತ್ತಾರೆ.
ಫೆಸ್ಟಿವ್ ಮೇಕಪ್
ಹಬ್ಬದ ಮೇಕಪ್‌ಗೆ ಹೈಡೆಫನೇಷನ್ ವಾಟರ್ ಪ್ರೂಫ್ ಮೇಕಪ್ ಸೌಂದರ್ಯವರ್ಧಕ ಬಳಸಿ. ಇದರಲ್ಲೂ ನಾರ್ಮಲ್, ಆಯ್ಲಿ, ಡ್ರೈ ಸ್ಕಿನ್‌ಗಾಗಿ ಫೌಂಡೇಷನ್‌ಗಳು ಲಭ್ಯ. ನಿಮಗೆ ಮ್ಯಾಚ್ ಆಗುವುದನ್ನು ನೀವು ಬಳಸಬಹುದು ಮೇಕಪ್‌ಗೂ ಮೊದಲು ಕ್ಲೆನ್ಸಿಂಗ್‌ನಿಂದ ಮುಖವನ್ನು ಕ್ಲೀನ್ ಮಾಡಿ. ನಂತರ ಆಯಿಲ್ ಫ್ರೀ ಸನ್‌ಸ್ಕ್ರೀನ್ ಹಚ್ಚಿ. 5 ನಿಮಿಷದ ನಂತರ ಫೌಂಡೇಷನ್ ಹಚ್ಚಿ. ಪೌಡರ್ ಹಚ್ಚಿ, ಹೈಬ್ರೊ ಪೆನ್ಸಿಲ್‌ನಿಂದ ಹುಬ್ಬನ್ನು ತಿದ್ದಿ. ನಿಮ್ಮ ಔಟ್‌ಫಿಟ್ ಅಥವಾ ಸೀರೆಗೆ ಮ್ಯಾಚ್ ಆಗುವಂತಹ ಐ ಶ್ಯಾಡೋ ಲೇಪಿಸಿ. ಮತ್ತಷ್ಟು ಗ್ರಾಂಡ್ ಲುಕ್‌ಗಾಗಿ ಎರಡು ಬಣ್ಣದ ಐ ಶ್ಯಾಡೋಗಳನ್ನು ಒಂದರ ಮೇಲೊಂದು ಹಚ್ಚಿ. ಗ್ಲಿಟರನ್ನು ಲೇಪಿಸಿ. ನಂತರ ಮಸ್ಕರಾದಿಂದ ಲೈನ್ ಎಳೆಯಿರಿ. ಕಣ್ಣಿಗೆ ಐ ಲೈನರ್ ಕಾಡಿಗೆ ಹಚ್ಚಿ, ಆದಷ್ಟೂ ದಪ್ಪ ಲೈನ್ ಇರಲಿ. ಬ್ಲಷರನ್ನು ಕೆನ್ನೆಗಳಿಗೆ ಹಚ್ಚಿ. ಧರಿಸುವ ಬಣ್ಣದ ಆಧಾರಕ್ಕೆ ಅನುಗುಣವಾಗಿ ಐ ಶ್ಯಾಡೋ, ಲಿಪ್ಸ್ಟಿಕ್ ವರ್ಣಗಳನ್ನು ಬಳಸಿ. ಕೊಂಚ ಗ್ರ್ಯಾಂಡ್ ಲುಕ್‌ಗೆ ಆದ್ಯತೆ ನೀಡಿ. ನಂತರ ಲಿಪ್ ಲೈನರ್ ಹಚ್ಚಿ, ರೆಡ್ ಲಿಪ್‌ಸ್ಟಿಕ್ ಅಥವಾ ಕೋರಲ್ ಬಣ್ಣದ ಲಿಪ್‌ಸ್ಟಿಕ್ ಹಚ್ಚಿ, ಗ್ರ್ಯಾಂಡಾಗಿ ಕಾಣಲು ಕತ್ತಿಗೆ, ಬೆನ್ನಿಗೆ, ಕೆನ್ನೆಗೆ ಗೋಲ್ಡನ್ ಗ್ಲಿಟರ್ ಪೌಡರ್ ಹಚ್ಚಿ, ಗ್ರ್ಯಾಂಡ್ ಲುಕ್‌ಗೆ ಸಾಥ್ ನೀಡುವ ಹೇರ್ ಸ್ಟೈಲ್ ಮಾಡಿ, ಹಣೆಗೆ ಸ್ಟೋನ್ ಬಿಂದಿ ಹಚ್ಚಿ. ಆಗ ಹಬ್ಬದ ಮೇಕಪ್‌ನಲ್ಲಿ ನೀವು ಬ್ರೈಟ್ ಆಗಿ ಕಾಣಿಸುತ್ತೀರಿ. ನಿಮ್ಮ ವಧನದ ಅಂದಕ್ಕಾಗಿ ನಿಮ್ಮ ಉಡುಗೆಗೆ ತಕ್ಕಂತೆ ಡಿಸೈನರ್ ಬಿಂದಿಗಳನ್ನು ಚೂಸ್ ಮಾಡಿ. ಕ್ರಿಸ್ಟಲ್ ಹಾಗೂ ಬೀಡ್ಸ್ ಇಂದು ಫ್ಯಾಷನ್‌ನಲ್ಲಿವೆ. ಟ್ರೈ ಮಾಡಿ ನೋಡಿ. ಈ ಮೇಲ್ಗಡೆ ತಿಳಿಸಿರುವುದು ಸಿಂಪಲ್ ಆಗಿ ಗ್ರ್ಯಾಂಡ್ ಮೇಕಪ್ ಮಾಡುವ ವಿಧಾನ. ಇನ್ನಿತರೇ ಮೇಕಪ್ ಆದಲ್ಲಿ, ಯೂ ಟ್ಯೂಬ್‌ನಲ್ಲಿ ಲಭ್ಯವಿರುವ ಟ್ಯುಟೋರಿಯಲ್ ನೋಡಿ ಮಾಡಬಹುದು ಎನ್ನುತ್ತಾರೆ ಮೇಕಪ್ ಆರ್ಟಿಸ್ಟ್. ಅವರ ಪ್ರಕಾರ, ದೀಪಾವಳಿ ಹಬ್ಬದಂದು ಆದಷ್ಟೂ ಹೈಲೈಟಾಗುವ ಟ್ರೆಂಡಿ ಗ್ರ್ಯಾಂಡ್ ಮೇಕಪ್ ಚೂಸ್ ಮಾಡಬೇಕು. ನೋಡಲು ಎಥ್ನಿಕ್ ನೀಡುವಂತಿರಬೇಕು.
ಇತ್ತೀಚೆಗೆ ಟ್ರೆಂಡಿಯಾಗಿರುವ ಸ್ಟಾರ್ಸ್ ಮೇಕಪ್
- ಆಲಿಯಾ ಭಟ್ ಪಿಂಕ್ ಮಾನೋಕ್ರೋಮ್ ಮೇಕಪ್.
- ಕರೀನಾ ಕಪೂರ್ ಬ್ರಾನ್ಜ್ ಐ ಮೇಕಪ್, ತಿಳಿ ಲಿಪ್ಸ್ಟಿಕ್
- ಕೃತಿ ಸನೂನ್ರ ಗ್ರ್ಯಾಂಡ್ ಮೇಕಪ್.
- ಕಿಯಾರ ಅಡ್ವಾನಿಯ ಗ್ಲಾಸ್ ಸ್ಕಿನ್ ಮೇಕಪ್.
- ಸಾರಾ ಅಲಿ ಖಾನ್ರ ದೇಸಿ ಬಾರ್ಬಿ ಲುಕ್ ಮೇಕಪ್.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Deepavali Fashion: ಬೆಳಕಿನ ಹಬ್ಬ ದೀಪಾವಳಿಗೆ ಬಂತು ಗ್ರ್ಯಾಂಡ್ ಫ್ಯಾಷನ್