ಸಂದರ್ಶನ : ಶೀಲಾ ಸಿ. ಶೆಟ್ಟಿ
ಫ್ಯಾಷನ್‌ಗೂ ಫಿಟ್ನೆಸ್‌ಗೂ ಡಯಟ್‌ಗೂ (Celebrity Fashion) ಒಂದಕ್ಕೊಂದು ಬಿಡಿಸಲಾರದ ನಂಟಿದೆ. ಅದು ಹೇಗೆ ಎನ್ನುತ್ತೀರಾ? ಖಂಡಿತಾ. ಆರೋಗ್ಯಕ್ಕೆ ಪೂರಕ ಡಯಟ್ ಮಾಡಿದಲ್ಲಿ , ಖಂಡಿತಾ ನಿಮ್ಮ ಆರೋಗ್ಯ ನಳನಳಿಸುವುದು ಮಾತ್ರವಲ್ಲ, ಅದರೊಂದಿಗೆ ನೀವು ಫಿಟ್ ಆಗಿರುತ್ತೀರಿ. ಅಷ್ಟು ಮಾತ್ರವಲ್ಲ, ಮುಖದ ಕಳೆ ಕೂಡ ಹೆಚ್ಚುತ್ತದೆ. ನೋಡಲು ಕೂಡ ಆಕರ್ಷಕವಾಗಿ ಕಾಣಿಸುತ್ತೀರಾ. ಹೀಗೆ ಫ್ಯಾಷನ್- ಡಯಟ್-ಫಿಟ್ನೆಸ್ ಒಂದಕ್ಕೊಂದು ಸಂಬಂಧ ಬೆಸೆದುಕೊಂಡಿದೆ ಎನ್ನುತ್ತಾರೆ ಸೆಲೆಬ್ರೆಟಿ ನ್ಯೂಟ್ರಿಷನಿಸ್ಟ್ ಹಾಗೂ ಸ್ಯಾಂಡಲ್‌ವುಡ್‌ನ ಹಿರಿಯ ನಟ ಜಗ್ಗೇಶ್ ಅವರ ಪತ್ನಿ ಪರಿಮಳ ಜಗ್ಗೇಶ್. ಇಂಡಿಯನ್ ವಿಮೆನ್ ಅಚಿವರ್ಸ್ ಅವಾರ್ಡ್ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಂದರ್ಭದಲ್ಲಿ ವಿಸ್ತಾರ ನ್ಯೂಸ್‌ಗೆ ಸಂದರ್ಶನ ನೀಡಿದ ಅವರು , ಕೇವಲ ನ್ಯೂಟ್ರಿಷಿಯನ್ ವಿಷಯಕ್ಕೆ ಸಂಬಂಧಿಸಿದಂತೆ ಮಾತ್ರವಲ್ಲ, ಅವರ ಅಭಿರುಚಿ ಹಾಗೂ ಫ್ಯಾಷನ್ ಪ್ಯಾಷನ್ ಬಗ್ಗೆಯೂ ತಿಳಿಸಿದರು.
ಡಯಟ್ ಎಂದಾಕ್ಷಣ ಆರೋಗ್ಯಕ್ಕೆ ಎಂದುಕೊಳ್ಳುವ ಬದಲು ಬಹಳಷ್ಟು ಮಂದಿ ತೆಳ್ಳಗಾಗುವುದು ಎಂದುಕೊಳ್ಳುತ್ತಾರಲ್ಲ ಅದು ಯಾಕೆ?
ಹೌದು. ಈ ಕನ್‌ಫ್ಯೂಷನ್ ಹೋಗಲಾಡಿಸಬೇಕಿದೆ. ಡಯಟ್ ಅಂದ್ರೆ ಕೇವಲ ತೆಳ್ಳಗಾಗುವುದಕ್ಕೆ ಮಾತ್ರವಲ್ಲ, ಆರೋಗ್ಯಕರ ಜೀವನ ನಡೆಸಲು ಎಂಬುದನ್ನು ಮೊದಲು ಎಲ್ಲರೂ ಅರಿಯಬೇಕು. ಫ್ಯಾಷನ್ ಹಾಗೂ ಎಂಟರ್‌ಟೈನ್‌ಮೆಂಟ್ ಕ್ಷೇತ್ರಗಳಿಗೆ ಸೀಮಿತವಾಗಿದ್ದ ಈ ಡಯಟ್ ಕಾನ್ಸೆಪ್ಟ್ ಇದೀಗ ಸಾರ್ವಜನಿಕರಲ್ಲೂ ಅಳವಡಿಸಿಕೊಳ್ಳುವುದು ಬರಬರುತ್ತಾ ಹೆಚ್ಚಾಗಿದೆ. ಇದು ಆರೋಗ್ಯಕರ ಬೆಳವಣಿಗೆಯಲ್ಲದೇ ಮತ್ತೇನು!
ಡಯಟ್ ಲಿಸ್ಟ್ ಫಾಲೋ ಮಾಡುವ ಮಾಡೆಲ್‌ಗಳಿಗೆ ನೀವು ಹೇಳುವುದೇನು?
ಮೊದಲು ಆರೋಗ್ಯಕ್ಕರ ಡಯಟ್‌ಗೆ ಗಮನ ನೀಡಬೇಕು. ಆಯಾ ಮಾಡೆಲ್‌ನ ಬಾಡಿ ಮಾಸ್ ಇಂಡೆಕ್ಸ್‌ಗೆ ತಕ್ಕಂತೆ ಡಯಟ್ ಫಾಲೋ ಮಾಡಬೇಕು. ಯಾವುದೇ ಸಮಸ್ಯೆ ಇಲ್ಲದಿದ್ದಲ್ಲಿ, ಆದಷ್ಟೂ ಎಲ್ಲಾ ಬಗೆಯ ಆರೋಗ್ಯಕರ ಆಹಾರ ಸೇವಿಸುವುದು ಉತ್ತಮ. ಅತಿ ಹೆಚ್ಚು ದೇಹ ದಂಡಿಸುವುದು ನಾಟ್ ಓಕೆ.
ಆರೋಗ್ಯಕರ ಡಯಟ್‌ಗೆ ನೀವು ನೀಡುವ ೩ ಸಲಹೆಗಳೇನು?
ಮೊದಲನೆಯದು ನಿಮ್ಮನ್ನು ನೀವು ಪ್ರೀತಿಸಿ. ಎರಡನೆಯದು ದೇಹಕ್ಕೆ ಅಗತ್ಯವಿರುವ ಪೌಷ್ಠಿಕಾಂಶಗಳುಳ್ಳ ಆಹಾರ ಸೇವಿಸಿ. ಡಯಟ್‌ನೊಂದಿಗೆ ಅಗತ್ಯವಿರುವಷ್ಟು ವಾಕ್ ಮಾಡಿ. ಮೂರನೆಯದು ಯಾವುದೇ ಡಯಟ್ ಆರಂಭಿಸುವ ಮೊದಲು ಡಯಟೀಶಿಯನ್ ಅಥವಾ ನ್ಯೂಟ್ರಿಷಿಯನ್‌ಗಳ ಸಲಹೆ ಪಡೆದುಕೊಳ್ಳಿ.
ಡಯಟ್ ಬಗ್ಗೆ ಕಾಳಜಿವಹಿಸುವ ನೀವು ಪಾಲಿಸುವ ಫ್ಯಾಷನ್ ಯಾವುದು?
ಆರೋಗ್ಯಕರ ಆಹಾರ ಕ್ರಮಗಳು ನನ್ನ ರೂಟಿನ್‌ನಲ್ಲಿವೆ. ಇನ್ನು ಫ್ಯಾಷನ್ ವಿಷಯಕ್ಕೆ ಬಂದಲ್ಲಿ, ನನಗಂತೂ ಎಷ್ಟು ಬಾರಿ ಸೀರೆ ಉಟ್ಟರೂ ಬೇಸರವಾಗದು. ಸೀರೆ ಪ್ರೇಮಿ ನಾನು. ಅದರಲ್ಲೂ ಕಾಂಚಿವರಂ ಸೀರೆಯಂದ್ರೆ ನನಗಿಷ್ಟ. ಟ್ಯಾಟೂ ಪ್ರಿಯೆ ನಾನು.
ಸೆಲೆಬ್ರೆಟಿ ಕಪಲ್ ಆಗಿರುವ ನಿಮ್ಮ ಹಾಗೂ ಜಗ್ಗೇಶ್ ಅವರು ಒಟ್ಟೊಟ್ಟಿಗಿದ್ದಾಗ ಫಾಲೋ ಮಾಡುವ ಫ್ಯಾಷನ್ ಏನು ? ಎಂದಿನಂತೆ ನಾನು ಸೀರೆಯಲ್ಲಿ ಕಾಣಿಸಿಕೊಂಡರೇ, ಅವರು ಸಮಾರಂಭಕ್ಕೆ ತಕ್ಕಂತೆ ಕುರ್ತಾ ಅಥವಾ ಬಂದಗಲಾ, ಮೋದಿ ಕೋಟ್‌ನಂತಹ ಡ್ರೆಸ್‌ಕೋಡ್‌ಗಳಲ್ಲಿ ಕಾಣಿಸಿಕೊಳ್ಳುತ್ತಾರೆ.
ಲೇಖಕಿ : ಫ್ಯಾಷನ್ ಪತ್ರಕರ್ತೆ
ಚಿತ್ರಗಳು : ಪರಿಮಳಾ ಜಗ್ಗೇಶ್, ಸೆಲೆಬ್ರೆಟಿ ನ್ಯೂಟ್ರಿಷನಿಸ್ಟ್ , ಅಲಾಮಿರಾಪ್ ನ್ಯೂಟ್ರಿಷನ್ ಸಂಸ್ಥಾಪಕರು
ಪೋಟೊಗ್ರಫಿ : ಗಿರೀಶ್ ಕುಮಾರ್ ಎಸ್.