Site icon Vistara News

Bengaluru Belly | ಪ್ರತಿಯೊಬ್ಬರ ಹೊಟ್ಟೆ ತುಂಬಿಸಲು ಬೆಂಗಳೂರು ಬೆಲ್ಲಿ ರೆಸ್ಟೊರೆಂಟ್‌ ಅಕ್ಟೋಬರ್‌ 14ರಿಂದ ಆರಂಭ

ಬೆಂಗಳೂರು: ಬೆಂಗಳೂರಿನಲ್ಲಿ ಜನತೆಗೆ ವೈವಿಧ್ಯಮಯ ಆಹಾರ ಮತ್ತು ಪಾನೀಯಗಳನ್ನು ಆಸ್ವಾದಿಸಲು ಮತ್ತು ಸವಿ ರುಚಿಯೊಂದಿಗೆ ಹೊಟ್ಟೆ ತುಂಬಿಸುವ ಮಹತ್ತ್ವಾಕಾಂಕ್ಷೆಯೊಂದಿಗೆ ಬೆಂಗಳೂರು ಬೆಲ್ಲಿ (Bengaluru Belly) ಎಂಬ ವಿಶಿಷ್ಟ ರೆಸ್ಟೊರೆಂಟ್‌, ಅಕ್ಟೋಬರ್‌ 14ರಂದು ಆರಂಭವಾಗುತ್ತಿದೆ.

ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿ ಫೇಸ್-‌೧ರಲ್ಲಿ ನೀಲಾದ್ರಿ ರಸ್ತೆಯಲ್ಲಿ ಅಸ್ತಿತ್ವಕ್ಕೆ ಬರುತ್ತಿರುವ ಬೆಂಗಳೂರು ಬೆಲ್ಲಿ, ಬಫೆಟ್‌ ರೆಸ್ಟೊರೆಂಟ್‌ ಆಗಿದ್ದು, ಗ್ರಾಹಕರ ಮನತಣಿಸಲಿದೆ. ಬಫೆಟ್‌ ಪದ್ಧತಿಯಲ್ಲಿ ಆಹಾರ ವೈವಿಧ್ಯಗಳು ಗ್ರಾಹಕರಿಗೆ ದೊರೆಯಲಿದೆ. ಭಾರತದ ನಾನಾ ರಾಜ್ಯಗಳ ವಿಶೇಷ ಭಕ್ಷ್ಯ ಭೋಜ್ಯಗಳು ಪ್ರತಿ ತಿಂಗಳು ಸಿಗಲಿದೆ.

ಖಾಸಗಿ ಪಾರ್ಟಿಗಳನ್ನು ಇಲ್ಲಿ ಆಯೋಜಿಸಬಹುದು. ತಮ್ಮ ಅಭಿರುಚಿಗೆ ತಕ್ಕಂತೆ ಆಹಾರಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಅಲಂಕರಿಸಬಹುದು. ಸಾಕಷ್ಟು ಸ್ಥಳಾವಕಾಶವನ್ನೂ ರೆಸ್ಟೊರೆಂಟ್‌ ನೀಡಲಿದೆ. ಬೆಂಗಳೂರು ಬೆಲ್ಲಿ ರೆಸ್ಟೊರೆಂಟ್‌ನಲ್ಲಿ 30 ಐಷಾರಾಮಿ ಬೋಟಿಕ್‌ ಹೋಟೆಲ್‌ ಕೊಠಡಿಗಳು ಲಭ್ಯವಿದೆ. ಹೋಟೆಲ್‌ ಉದ್ದಿಮೆ ವಲಯದ ಆಳವಾದ ಅಧ್ಯಯನ, ಅನುಭವದ ಅಧಾರದಲ್ಲಿ ರೆಸ್ಟೊರೆಂಟ್‌ ಅನ್ನು ವಿನ್ಯಾಸಗೊಳಿಸಲಾಗಿದೆ.

” ಪ್ರಮುಖ ಸ್ಥಳದಲ್ಲಿ ಇರುವ ಬೆಂಗಳೂರು ಬೆಲ್ಲಿ ರೆಸ್ಟೊರೆಂಟ್‌ನಲ್ಲಿ ನಾವು ಬಿ2ಸಿ (B2C) ಮತ್ತು ಬಿ೨ಬಿ (B2B) ವಲಯದ ಗ್ರಾಹಕರಿಗೆ ಸೇವೆ ಒದಗಿಸಲಿದ್ದೇವೆ. ಬಿ2ಸಿ ವಿಭಾಗದಲ್ಲಿ ವೈಯಕ್ತಿಕ ಗ್ರಾಹಕರು, ಅತಿಥಿಗಳು ಸ್ವಾದಿಷ್ಟಕರ ಆತಿಥ್ಯವನ್ನು ಸ್ವೀಕರಿಸಲಿದ್ದಾರೆ. ಸ್ವಾದಿಷ್ಟ ಆಹಾರಗಳನ್ನು ಪಡೆಯಲಿದ್ದಾರೆ. ಕಾಕ್‌ ಟೈಲ್ಸ್ ಮತ್ತು ಮೋಕ್‌ ಟೈಲ್ಸ್‌ಗಳ ವೈವಿಧ್ಯವನ್ನೂ ಪಡೆಯಬಹುದು.‌ ಬಿ2ಸಿ ವಲಯದಲ್ಲಿ ಸೆಮಿನಾರ್‌ ಅಥವಾ ಬಿಸಿನೆಸ್‌ ಸಭೆ, ಕಾರ್ಯಕ್ರಮಗಳನ್ನು ಆಯೋಜಿಸುವವರಿಗೆ ಆತಿಥ್ಯ ಸೇವೆ ಸಿಗಲಿದೆ. ಅವರಿಗೆ ಸಾಕಷ್ಟು ಸ್ಥಳಾವಕಾಶ ಮತ್ತು ಸುವ್ಯವಸ್ಥೆಯ ಅನುಕೂಲ ಸಿಗಲಿದೆʼʼ ಎಂದು ರೆಸ್ಟೊರೆಂಟ್‌ ಸ್ಥಾಪಕರು ತಿಳಿಸಿದ್ದಾರೆ.

ಗ್ರಾಹಕರಿಗೆ ಆಹಾರ ಸೇವೆಯನ್ನು ” ಫ್ಲೇವರ್ಸ್‌ ಆಫ್‌ ಇಂಡಿಯಾ” ಎಂಬ ಟ್ಯಾಗ್‌ಲೈನ್‌ನಲ್ಲಿ ಒದಗಿಸಲಾಗುವುದು. ಭಾರತೀಯ ಶೈಲಿಯ ಬಫೆಟ್‌ ಸಿಗಲಿದೆ. ಚೈನೀಸ್‌ ಶೈಲಿಯ ಆಹಾರ, ಲೈವ್ ಚಾಟ್‌ ಮತ್ತು ಪಾಪ್‌ಕಾರ್ನ್‌ ಸೆಂಟರ್‌ಗಳು ಇರಲಿವೆ.‌ ನವರಾತ್ರಿಯ ಸೀಸನ್‌ ಆಗಿರುವುದರಿಂದ ಹಬ್ಬದ ಸ್ವಾದಿಷ್ಟ ಆಹಾರಗಳನ್ನು ನೀಡಲಿದ್ದೇವೆ ಎಂದು ಅಡುಗೆ ವಿಭಾಗದ ಮುಖ್ಯಸ್ಥರು ತಿಳಿಸಿದ್ದಾರೆ. ಬೆಂಗಳೂರು ಬೆಲ್ಲಿ ಲೈವ್‌ ಮ್ಯೂಸಿಕ್‌, ಶೋಗಳನ್ನೂ ಆಯೋಜಿಸಲಿದೆ.

ಬೆಂಗಳೂರು ಬೆಲ್ಲಿ ರೆಸ್ಟೊರೆಂಟ್‌, ಎಲೆಕ್ಟ್ರಾನಿಕ್‌ ಸಿಟಿಯ ಕಾಸಾ ಪಿಕಾಸಾ ಟೆರೇಸ್‌ ಬಾರ್‌ನ ಆವರಣದಲ್ಲಿದೆ. ಅದು ತನ್ನ ಮ್ಯೂಸಿಕ್‌ಗೂ ಹೆಸರಾಗಿದೆ. 30 ಬೋಟಿಕ್‌ ರೂಮ್‌ಗಳೂ ಇಲ್ಲಿ ಲಭ್ಯ. ಈ ಕಾಂಪ್ಲೆಕ್ಸ್‌, ಐಯ್ಯಂಗಾರ್ಸ್‌ ಓವೆನ್‌ ಫ್ರೆಶ್‌ ರೆಸ್ಟೊರೆಂಟ್‌ ತಾಣವೂ ಆಗಿದೆ. ಇದು ಬಿಬಿಎಚ್‌ಎಯಿಂದ ಬೆಸ್ಟ್‌ ಬೇಕರು ಪ್ರಶಸ್ತಿಯನ್ನೂ ಗಳಿಸಿದೆ.

ವಿಳಾಸ: ಬೆಂಗಳೂರು ಬೆಲ್ಲಿ, ೪ನೇ ಮಹಡಿ, ನೀಲಾದ್ರಿ ರಸ್ತೆ, ಅಜ್ಮಿರಾ ಇನ್‌ಫಿನಿಟಿ ಎದುರು, ಎಲೆಕ್ಟ್ರಾನಿಕ್‌ ಸಿಟಿ ಫೇಸ್-‌1, ಬೆಂಗಳೂರು-560100, ದೂರವಾಣಿ-080-41236299, ಮೊಬೈಲ್-‌7411734499

Exit mobile version