Site icon Vistara News

Milk Products: ಹಾಲು, ಹಾಲಿನ ಉತ್ಪನ್ನ ಸೇವಿಸಿದರೆ ಲಾಭವೋ ನಷ್ಟವೋ?

Milk Products

ನಿತ್ಯಾಹಾರದಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳ (Milk products) ಸೇವನೆ ನಮ್ಮ ಭಾರತೀಯ ಆಹಾರ ಪದ್ಧತಿಯಲ್ಲಂತೂ ಬಹಳ ಸಾಮಾನ್ಯ. ನಿತ್ಯವೂ ಹಾಲು ಕುಡಿಯುವುದು, ಹಾಲು ಹಾಕಿದ ಚಹಾ ಕಾಫಿ ಸೇವನೆ, ಮೊಸರು, ಮಜ್ಜಿಗೆ, ತುಪ್ಪಗಳ ಸೇವನೆ, ಹಾಲಿನ ಉತ್ಪನ್ನಗಳಾದ ಪನೀರ್‌, ಖೋವಾ ಮತ್ತಿತರ ವಸ್ತುಗಳನ್ನು ಧಾರಳವಾಗಿ ಬಳಸುತ್ತೇವೆ. ಆದರೆ, ಇತ್ತೀಚೆಗಿನ ದಿನಗಳಲ್ಲಿ ವೀಗನ್‌ ಆಗಿ ಬದಲಾದ ಮಂದಿ ಸೇರಿದಂತೆ ಅನೇಕರು ಈ ಡೈರಿ ಉತ್ಪನ್ನಗಳನ್ನು ಬಿಡುವ ಟ್ರೆಂಡ್‌ ಹೆಚ್ಚಾಗುತ್ತಿದೆ. ಇನ್ನೂ ಕೆಲವರಿಗೆ, ಹಾಲಿನಲ್ಲಿ ಇರುವ ಲ್ಯಾಕ್ಟೋಸ್‌ ಕಾರಣದಿಂದಲೂ ಕೆಲವರು ಹಾಲಿನ ಉತ್ಪನ್ನಗಳನ್ನು ಬಿಡುವುದುಂಟು. ಆದರೆ ಇದರಿಂದ ಲಾಭಗಳೂ ಇವೆ, ನಷ್ಟವೂ ಇವೆ. ಬನ್ನಿ, ಲ್ಯಾಕ್ಟೋಸ್‌ ರಹಿತ ಆಹಾರ ಸೇವನೆಯಿಂದ ಆಗುವ ಲಾಭ ನಷ್ಟಗಳನ್ನು ಗಮನಿಸೋಣ.

ಮೊಡವೆ ನಿವಾರಣೆ

ಹಾಲಿನ ಉತ್ಪನ್ನಗಳನ್ನು ಬಿಡುವುದರಿಂದ ಮೊಡವೆಗಳ ಸಮಸ್ಯೆ ಕಡಿಮೆಯಾಗಬಹುದು. ಕೆಲವು ಮಂದಿಗೆ ಹಾಲಿನ ಉತ್ಪನ್ನ ಸೇವನೆಯಿಂದ ಚರ್ಮ ಎಣ್ಣೆಯುಕ್ತವಾಗುವುದರಿಂದ ಮೊಡವೆಗಳುಂಟಾಗುತ್ತವೆ. ಹೀಗಾಗಿ ಕೆಲವರಿಗೆ ಹಾಲು ಹಾಗೂ ಹಾಲಿನ ಉತ್ಪನ್ನ ಬಿಟ್ಟ ಕೂಡಲೇ, ಚರ್ಮದ ಆರೋಗ್ಯ ಗಣನೀಯವಾಗಿ ಸುಧಾರಿಸುತ್ತದೆ.

ತೂಕ ಇಳಿಕೆ

ತೂಕ ಇಳಿಸಬೇಕು ಎಂದು ಬಯಸುವ ಮಂದಿಯೂ ಹಾಲಿನ ಉತ್ಪನ್ನಗಳಿಗೆ ಗುಡ್‌ಬೈ ಹೇಳುತ್ತಾರೆ. ಲ್ಯಾಕ್ಟೋಸ್‌ನಲ್ಲಿ ನೈಸರ್ಗಿಕ ಸಕ್ಕರೆ ಇರುವುದರಿಂದ ಇದನ್ನು ಬಿಟ್ಟ ಕೂಡಲೇ, ಸಹಜವಾಗಿಯೇ ತೂಕದಲ್ಲಿ ಇಳಿಕೆಯಾಗುತ್ತದೆ.

ಅಲರ್ಜಿ ನಿವಾರಣೆ

ಕೆಲವು ಮಂದಿಗೆ ಲ್ಯಾಕ್ಟೋಸ್‌ನಿಂದ ಅಲರ್ಜಿಗಳುಂಟಾಗುವ ಕಾರಣದಿಂದ ಇದನ್ನು ಬಿಟ್ಟ ಕೂಡಲೇ ಅಲರ್ಜಿ ಸಮಸ್ಯೆ ಪರಿಹಾರವಾಗುತ್ತದೆ.

ಡೇರಿ ಉತ್ಪನ್ನದ ಕತೆ ಏನು?

ಆದರೆ, ಡೇರಿ ಉತ್ಪನ್ನಗಳನ್ನು ಬಿಡುವುದು ಬಹಳ ಕಷ್ಟ. ಕೇವಲ ಹಾಲು ಬಿಡುವುದರಿಂದ ಡೈರಿ ಉತ್ಪನ್ನ ಬಿಟ್ಟಂತಾಗುವುದಿಲ್ಲ. ಬಹಳಷ್ಟು ಆಹಾರಗಳಲ್ಲಿ ಇಂದು ಡೇರಿ ಉತ್ಪನ್ನಗಳನ್ನು ಬಳಸುವುದರಿಂದ ಸಾಕಷ್ಟು ಆಹಾರ ಪದಾರ್ಥಗಳನ್ನು ನಾವು ಬಿಡಬೇಕಾಗುತ್ತದೆ. ಇದು ಬಹಳ ಕಷ್ಟ.

ಪೋಷಕಾಂಶ ಕೊರತೆ

ಹಾಲು ಹಾಗೂ ಹಾಲಿನ ಉತ್ಪನ್ನಗಳಲ್ಲಿ ನಮ್ಮ ದೇಹಕ್ಕೆ ನಿತ್ಯವೂ ಬೇಕಾದ ಸಾಕಷ್ಟು ಪೋಷಕಾಂಶಗಳು ಸಿಗುವುದರಿಂದ ಇದನ್ನು ಬಿಟ್ಟರೆ, ಇದಕ್ಕೆ ಪರ್ಯಾಯವಾಗಿ ಪೋಷಕಾಂಶಗಳನ್ನು ಹುಡುಕಬೇಕಾಗುತ್ತದೆ. ಇಲ್ಲವಾದರೆ ಈ ಪೋಷಕಾಂಶಗಳ ಕೊರತೆಯಾಗಬಹುದು.

ಇದನ್ನೂ ಓದಿ: Moringa Leaves Health Benefits: ನುಗ್ಗೆ ಸೊಪ್ಪು ಏಕೆ ತಿನ್ನಬೇಕು? ಏನಿದೆ ಇದರಲ್ಲಿ ವಿಶೇಷ ಗುಣ?

ಪೋಷಕಾಂಶ ಪೂರೈಕೆ

ಹಾಲಿನ ಉತ್ಪನ್ನಗಳಿಂದ ನಮ್ಮ ದೇಹಕ್ಕೆ ನಿತ್ಯವೂ ಸಿಗುವ ಪ್ರೊಟೀನ್‌, ಕ್ಯಾಲ್ಸಿಯಂ ಸೇರಿದಂತೆ ಪ್ರಮುಖ ಪೋಷಕಾಂಶಗಳನ್ನು ಬೇರೆ ಆಹಾರಗಳಿಂದ ಭರಿಸುವುದು ಬಹಳ ಕಷ್ಟ. ಇದಕ್ಕಾಗಿ ಸಪ್ಲಿಮೆಂಟ್‌ಗಳ ಸೇವನೆಯನ್ನೂ ಮಾಡಬೇಕಾಗಬಹುದು. ಸಪ್ಲಿಇಮೆಂಟ್‌ ಸೇವನೆ ಮಾಡದೇ ಇದ್ದರೆ, ಹಾಳಿಗೆ ಪರ್ಯಾಯ ಮೂಲಗಳನ್ನು ಹುಡುಕಿ ನಿತ್ಯವೂ ಆ ಪೋಷಕಾಂಶಗಳು ಸರಿಯಾದ ಪ್ರಮಾಣದಲ್ಲಿ ಸೇರುವಂತೆ ಮಾಡಬೇಕು. ಈ ಕಾರಣಗಳಿಂದಾಗಿ, ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಬಿಡುವುದರಿಂದ ಕೆಲವು ಲಾಭಗಳಿದ್ದರೂ, ನಷ್ಟದ ಪ್ರಮಾಣ ಅಧಿಕವಾಗಿರುವುದರಿಂದ ಅದನ್ನು ಬಿಡುವುದು ಆರೋಗ್ಯಕರ ಲಕ್ಷಣವಲ್ಲ ಎನ್ನಲಾಗುತ್ತದೆ. ಇವು ನಮ್ಮ ನಿತ್ಯ ಆಹಾರದ ಪ್ರಮುಖ ಭಾಗವಾಗಿರುವುದರಿಂದ ಇದನ್ನು ಬಿಡುವುದು ಯೋಗ್ಯ ಆಯ್ಕೆಯಲ್ಲ ಎಂದು ತಜ್ಞರು ಹೇಳುತ್ತಾರೆ.

Exit mobile version