ಬೆಂಗಳೂರು: ದಿನದಿಂದ ದಿನಕ್ಕೆ ಅಡುಗೆ ಅನಿಲದ (LPG) ಬೆಲೆ ಗಗನಕ್ಕೆ ಏರುತ್ತಿದೆ. ಹೀಗಾಗಿ ಅಡುಗೆ ಅನಿಲ ಉಳಿತಾಯ ಮಾಡುವುದು ಇಂದಿನ ಅನಿವಾರ್ಯವೂ ಹೌದು. ಮಿತವಾಗಿ ಅಡುಗೆ (cooking) ಅನಿಲ ಬಳಸುವುದರಿಂದ ಸಿಲಿಂಡರ್ (gas cylinder) ಹೆಚ್ಚು ಕಾಲ ಬಾಳಿಕೆ ಬರುವುದು ಮಾತ್ರವಲ್ಲ, ಹಣವನ್ನೂ ಉಳಿತಾಯ ಮಾಡಬಹುದು.
ಅಡುಗೆ ಮಾಡುವಾಗ ಅನಿಲ ಉಳಿಸಲು ಹಲವು ದಾರಿಗಳಿವೆ. ಇದಕ್ಕಾಗಿ ಕೆಲವು ಸರಳ ವಿಧಾನಗಳನ್ನು (simple tips) ಅನುಸರಿಸಬೇಕು ಅಷ್ಟೇ.
1. ಪಾತ್ರೆಗಳು ಒಣಗಿರಲಿ
ಕೆಲವೊಮ್ಮೆ ಪಾತ್ರೆಯನ್ನು ತೊಳೆದು ಹಾಗೆ ಗ್ಯಾಸ್ ಸ್ಟವ್ (gas stove) ಮೇಲೆ ಇರಿಸುತ್ತೇವೆ. ಇದರಿಂದ ಪಾತ್ರೆ ಬಿಸಿಯಾಗಲು ಹೆಚ್ಚು ಹೊತ್ತು ಬೇಕಾಗುತ್ತದೆ. ಇದು ಬಹಳಷ್ಟು ಅನಿಲವನ್ನು ವ್ಯರ್ಥ ಮಾಡುತ್ತದೆ. ಹೀಗಾಗಿ ಪಾತ್ರೆ ತೊಳೆದು, ಶುದ್ಧವಾದ ಬಟ್ಟೆಯಿಂದ ಅವನ್ನು ಒರೆಸಿ ಬಳಿಕ ಅಡುಗೆಗಾಗಿ ಬಳಸಿ. ಇದರಿಂದ ಅನಿಲ ಉಳಿತಾಯವಾಗುತ್ತದೆ.
2. ಸೋರಿಕೆ ಪರಿಶೀಲಿಸಿ
ಅಡುಗೆ ಅನಿಲ ಸೋರಿಕೆಯಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಿ. ಇದಕ್ಕಾಗಿ ಸ್ಟವ್‌ನ ಎಲ್ಲಾ ಬರ್ನರ್, ಪೈಪ್ ಮತ್ತು ನಿಯಂತ್ರಕಗಳನ್ನು ಸರಿಯಾಗಿ ಸರಿಯಾಗಿ ಪರಿಶೀಲಿಸಿ. ಸಣ್ಣ ಸೋರಿಕೆ ಇದ್ದರೂ ಬಹಳಷ್ಟು ಅನಿಲವನ್ನು ವ್ಯರ್ಥವಾಗುತ್ತದೆ. ಅನಿಲ ಸೋರಿಕೆ ಹೆಚ್ಚು ಅಪಾಯಕಾರಿಯೂ ಆಗಿರುತ್ತದೆ.
ಇದನ್ನು ಓದಿ: Storage Tips Of Butter: ಬೆಣ್ಣೆಯನ್ನು ತಾಜಾ ಉಳಿಸಿಕೊಳ್ಳುವುದು ಹೇಗೆ?
3. ಪ್ಯಾನ್‌ಗಳನ್ನು ಮುಚ್ಚಿ
ಅಡುಗೆ ಮಾಡುವಾಗ ಪ್ಯಾನ್ ಅನ್ನು ಪ್ಲೇಟ್ ನಿಂದ ಮುಚ್ಚಿ. ಇದರಿಂದ ಆಹಾರ ಬೇಗ ಬೇಯುವುದು ಮಾತ್ರವಲ್ಲ ಹೆಚ್ಚು ಇಂಧನವನ್ನೂ ಉಳಿಸಬಹುದು.
4. ಕಡಿಮೆ ಶಾಖವನ್ನು ಬಳಸಿ
ಕಡಿಮೆ ಉರಿಯಲ್ಲಿ ಆಹಾರ ಬೇಯಿಸುವುದರಿಂದ ಅನಿಲವನ್ನು ಉಳಿತಾಯವಾಗುವುದು ಮಾತ್ರವಲ್ಲ ಆಹಾರದಲ್ಲಿ ಪೋಷಕಾಂಶವು ಉಳಿಯುತ್ತದೆ. ಹೆಚ್ಚಿನ ಉರಿಯಲ್ಲಿ ಆಹಾರ ಬೇಯಿಸುವುದು ಆಹಾರದಲ್ಲಿನ ಪೋಷಕಾಂಶಗಳು ಹೆಚ್ಚು ನಷ್ಟವಾಗುತ್ತದೆ.
5. ಥರ್ಮೋಸ್ ಫ್ಲಾಸ್ಕ್
ನೀರನ್ನು ಕುದಿಸಿ ಫ್ಲಾಸ್ಕ್‌ನಲ್ಲಿ ಶೇಖರಿಸಿಡಿ. ಇದರಿಂದ ಹೆಚ್ಚು ಹೊತ್ತು ನೀರು ಬಿಸಿಯಾಗಿರುತ್ತದೆ. ಹೀಗಾಗಿ ಪದೇಪದೇ ನೀರನ್ನು ಬಿಸಿ ಮಾಡಿ ಅನಿಲವನ್ನು ವ್ಯರ್ಥ ಮಾಡಬೇಕಾಗಿಲ್ಲ.
6. ಪ್ರೆಶರ್ ಕುಕ್ಕರ್ ಬಳಸಿ
ಕುಕ್ಕರ್‌ಗಳು ಆಹಾರ ವೇಗವಾಗಿ ಬೇಯಲು ಸಹಾಯ ಮಾಡುತ್ತದೆ. ಇದರಿಂದ ಇಂಧನವನ್ನು ಉಳಿಸಬಹುದು. ಹಾಗಾಗಿ ಅಡುಗೆ ಬೇಯಿಸಲು ಸಾಮಾನ್ಯ ಪಾತ್ರೆಗಳ ಬದಲಾಗಿ ಉತ್ತಮ ಗುಣಮಟ್ಟದ ಕುಕ್ಕರ್‌ಗಳನ್ನೇ ಬಳಸಿ.
7. ಬರ್ನರ್‌ಗಳು ಸ್ವಚ್ಛವಾಗಿರಲಿ
ಬರ್ನರ್‌ನಿಂದ ಕಿತ್ತಳೆ ಬಣ್ಣದಲ್ಲಿ ಜ್ವಾಲೆ ಬರುತ್ತಿದ್ದರೆ ಅದರಲ್ಲಿ ಇಂಗಾಲದ ನಿಕ್ಷೇಪವಿದೆ ಎಂದು ಅರ್ಥ. ಇದರಿಂದ ಅನಿಲ ಹೆಚ್ಚು ವ್ಯರ್ಥವಾಗುತ್ತದೆ. ಹೀಗಾಗಿ ಬರ್ನರ್ ಅನ್ನು ಆಗಾಗ ಸ್ವಚ್ಛಗೊಳಿಸಬೇಕು.
8. ಮೊದಲು ಸಿದ್ಧತೆ ಮಾಡಿಕೊಳ್ಳಿ
ಗ್ಯಾಸ್ ಉರಿಸಿ ಅಡುಗೆಗೆ ಸಿದ್ಧ ಮಾಡುವುದಲ್ಲ. ಮೊದಲು ಸಿದ್ಧತೆ ಮಾಡಿಕೊಂಡು ಬಳಿಕ ಗ್ಯಾಸ್ ಆನ್ ಮಾಡಿ. ಅಡುಗೆಗೆ ಬೇಕಾದ ಪದಾರ್ಥಗಳನ್ನು ಹುಡುಕಲು ಸಾಕಷ್ಟು ಸಮಯ ವ್ಯರ್ಥವಾಗುತ್ತದೆ. ಇದರಿಂದ ಇಂಧನವೂ ವ್ಯರ್ಥವಾಗುವುದು.
9. ಕೆಲವೊಂದು ಸಾಮಗ್ರಿಗಳನ್ನು ನೆನೆಸಿಡಿ
ಅಕ್ಕಿ, ಧಾನ್ಯ, ಬೇಳೆಕಾಳನ್ನು ಬೇಯಿಸುವ ಮೊದಲು ನೆನೆಸಿಟ್ಟರೆ ಅಡುಗೆ ಮಾಡುವಾಗ ಸಮಯದೊಂದಿಗೆ ಇಂಧನವನ್ನೂ ಉಳಿಸಬಹುದು.
10. ಜ್ವಾಲೆಯನ್ನು ಆಫ್ ಮಾಡಿ
ಆಹಾರ ಸಂಪೂರ್ಣ ಬೇಯುವವರೆಗೂ ಗ್ಯಾಸ್ ಉರಿಯಮೇಲೆ ಇರಿಸಬೇಕಿಲ್ಲ. ಆಹಾರ ಸಿದ್ಧವಾಗುವ ಕೆಲವು ನಿಮಿಷಗಳ ಮೊದಲು ಬೆಂಕಿ ಉರಿಯನ್ನು ಆಫ್ ಮಾಡಿ. ಪಾತ್ರೆಯನ್ನು ಮುಚ್ಚಿಟ್ಟರೆ ಒಳಗೆ ಇರುವ ಬಿಸಿಯಿಂದ ಕೆಲವೇ ನಿಮಿಷದಲ್ಲಿ ಆಹಾರ ಸಂಪೂರ್ಣ ಬೆಂದಿರುತ್ತದೆ.
11. ಹೆಪ್ಪುಗಟ್ಟಿದ ವಸ್ತುಗಳನ್ನು ಕರಗಿಸಿ
ಹಾಲು, ಬೆಣ್ಣೆಯಂತಹ ಫ್ರಿಜರ್‌ನಲ್ಲಿ ಇಟ್ಟ ವಸ್ತುಗಳು ಹೆಪ್ಪುಗಟ್ಟಿರುತ್ತದೆ. ಮೊದಲು ಅವುಗಳನ್ನು ಕೆಲಹೊತ್ತು ಹೊರಗಿಟ್ಟು ಅದು ಸಂಪೂರ್ಣ ಕರಗಿದ ಮೇಲೆ ಒಲೆ ಮೇಲೆ ಇಟ್ಟು ಕಾಯಿಸಿ. ಇದರಿಂದಲೂ ಇಂಧನವನ್ನು ಗಣನೀಯ ಪ್ರಮಾಣದಲ್ಲಿ ಉಳಿಸಬಹುದು.