Storage Tips Of Butter: ಬೆಣ್ಣೆಯನ್ನು ತಾಜಾ ಉಳಿಸಿಕೊಳ್ಳುವುದು ಹೇಗೆ? - Vistara News

ಆಹಾರ/ಅಡುಗೆ

Storage Tips Of Butter: ಬೆಣ್ಣೆಯನ್ನು ತಾಜಾ ಉಳಿಸಿಕೊಳ್ಳುವುದು ಹೇಗೆ?

ಬೆಣ್ಣೆ, ಪನೀರ್‌ನಂಥ ಡೇರಿ ಉತ್ಪನ್ನಗಳು ಖರೀದಿಸುವಾಗ ತಾಜಾ ಇದ್ದರೂ, ಮನೆಗೆ ತಂದ ಕೆಲವೇ ದಿನಗಳಲ್ಲಿ ರುಚಿಗೆಡುತ್ತವೆ. ಇವುಗಳನ್ನು ಹೆಚ್ಚು ಕಾಲ (Storage Tips Of Butter) ತಾಜಾ ಆಗಿಯೇ ಉಳಿಸಿಕೊಳ್ಳುವುದು ಹೇಗೆ?

VISTARANEWS.COM


on

Storage Tips Of Butter
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೀಗೊಂದು ಸನ್ನಿವೇಶ- ಸಮೀಪದ ಸೂಪರ್‌ಮಾರ್ಕೆಟ್‌ನಲ್ಲಿ ಡೇರಿ ಉತ್ಪನ್ನಗಳ ಸೇಲ್‌ ಇದೆ. ಬೆಣ್ಣೆ, ಪನೀರ್‌ಗಳನ್ನು ಸ್ವಲ್ಪ ಹೆಚ್ಚಾಗಿಯೇ ಖರೀದಿಸುತ್ತೀರಿ. ಆದರೆ ನೀವಂದುಕೊಂಡಷ್ಟು ಬೆಣ್ಣೆ ಖಾಲಿಯಾಗುವುದಿಲ್ಲ ನಿತ್ಯದ ಅಡುಗೆಯಲ್ಲಿ. ತಂದಿದ್ದರಲ್ಲಿ ಅರ್ಧದಷ್ಟು ಉಳಿದಿರುವಾಗಲೇ ಬೆಣ್ಣೆ ತಾಜಾತನ ಕಳೆದುಕೊಂಡಿರುತ್ತದೆ; ಕಮಟು ವಾಸನೆಯೂ ಬರಬಹುದು; ಬಣ್ಣ ಸಹ ಬದಲಾಗಿರಬಹುದು. ಸೇಲ್‌ ಇದೆಯೆಂಬ ಕಾರಣಕ್ಕೆ ಹೆಚ್ಚು ಖರೀದಿಸಿದ್ದು ಹೌದು, ಅಂತಿಮವಾಗಿ ಹಣ, ವಸ್ತು- ಎರಡೂ ದಂಡ. ವಸ್ತುಗಳನ್ನು ಅಂಗಡಿಯಿಂದ ತರುವುದು ದೊಡ್ಡ ವಿಷಯವಲ್ಲ. ತಂದ ಮೇಲೆ ಅವುಗಳು ಕೆಡದಂತೆ ಇರಿಸಿಕೊಳ್ಳುವುದು ದೊಡ್ಡ ಸವಾಲು. ಮಳೆಗಾಲವಾದರೆ ವಾತಾವರಣದಲ್ಲಿ ತೇವಾಂಶ ಹೆಚ್ಚಿ, ವಸ್ತುಗಳು ಬೇಗ ಕೆಡಬಹುದು. ಚಳಿಗಾಲದಲ್ಲಿ ವಾತಾವರಣ ಶುಷ್ಕವಾಗಿದ್ದರೂ, ಹುಳುಗಳ ಕಾಟ ಹೆಚ್ಚಾಗಿರುತ್ತದೆ. ಬದನೆಕಾಯಿ, ಅವರೆಕಾಯಿ ಮುಂತಾದವುಗಳಲ್ಲಿ ಈ ಸಮಸ್ಯೆ ಚೆನ್ನಾಗಿ ಅನುಭವಕ್ಕೆ ಬರುತ್ತದೆ. ಬೇಸಿಗೆಯಲ್ಲಿ ಸೆಕೆಯ ದೆಸೆಯಿಂದ ಆಹಾರ ಕೆಡುವುದು ಬೇಗ. ಅದರಲ್ಲೂ ಬೆಣ್ಣೆಯಂಥ ಉತ್ಪನ್ನಗಳು ಕೆಡದಂತೆ (Storage Tips Of Butter) ಇರಿಸಿಕೊಳ್ಳುವುದು ಹೇಗೆ? ಬೆಣ್ಣೆ ಮನೆಯಲ್ಲೇ ಮಾಡಿದ್ದಾರೆ ಪ್ರತಿದಿನ ಅದರ ನೀರು ಬದಲಿಸುತ್ತಿದ್ದರೆ, ಫ್ರಿಜ್‌ನಲ್ಲಿ ಇಡದೆಯೂ ನಾಲ್ಕಾರು ದಿನ ಸುರಕ್ಷಿತವಾಗಿ ಇರಿಸಿಕೊಳ್ಳಬಹುದು. ನೀರು ಬದಲಿಸುತ್ತಾ ಫ್ರಿಜ್‌ನಲ್ಲಿಟ್ಟರೆ ೧೫ ದಿನಗಳೂ ನಡೆದೀತು. ಆದರೆ ಅಂಗಡಿಯಿಂದ ತಂದ ಬೆಣ್ಣೆಯನ್ನು ಹೀಗೆ ಕಾಪಾಡಿಕೊಳ್ಳಲು ಸಾಧ್ಯವಿಲ್ಲ. ಆ ಉತ್ಪನ್ನದ ಮೇಲೆ ದಿನಾಂಕ ನಮೂದಿಗಿದ್ದರೂ, ಕೆಲವೊಮ್ಮೆ ಅದಕ್ಕೂ ಮೊದಲೇ ಹಾಳಾಗಿಬಿಡುತ್ತದೆ. ಕಡೆದ ಕೆನೆಯಂಥ ವಸ್ತುವಿನ ಕೊಬ್ಬು ಮತ್ತು ಪ್ರೊಟೀನ್‌ ಅಂಶಗಳನ್ನು ಬ್ಯಾಕ್ಟೀರಿಯಗಳು ಸುಲಭವಾಗಿ ಪ್ರವೇಶಿಸಲಾರವು. ಆದರೂ ಬೆಣ್ಣೆ, ಪನೀರ್‌ನಂಥವು ಮೂರರಿಂದ ನಾಲ್ಕು ವಾರಗಳವರೆಗೆ ಮಾತ್ರವೇ ತಾಜಾತನ (Storage Tips Of Butter) ಉಳಿಸಿಕೊಳ್ಳಬಲ್ಲವು.

Butter

ಫ್ರೀಜಿಂಗ್‌

ನಿಮ್ಮ ದಿನಬಳಕೆಗಿಂತ ಹೆಚ್ಚಿನ ಬೆಣ್ಣೆ, ಪನೀರ್‌ಗಳನ್ನು ಖರೀದಿಸಿಬಿಟ್ಟಿದ್ದೀರಿ. ಇದಕ್ಕೆ ಕಾರಣ ಏನೂ ಇರಬಹುದು. ಅಂಥ ಸಂದರ್ಭದಲ್ಲಿ, ಆ ವಸ್ತುವಿನ ನಮೂದಿತ ದಿನಾಂಕ ಮುಗಿಯುವುದರೊಳಗೆ ನಿಮಗೆಷ್ಟು ಬೇಕಾದೀತು ಎಂಬುದನ್ನು ಅಂದಾಜಿಸಿಕೊಳ್ಳಿ. ಅದಷ್ಟನ್ನು ಫ್ರಿಜ್‌ನಲ್ಲಿ ತೆಗೆದಿಟ್ಟು, ಉಳಿದಿದ್ದನ್ನು ಫ್ರೀಜ್‌ ಮಾಡಿ. ತಾಜಾ ಇರುವಾಗಲೇ ಫ್ರೀಜ್‌ ಮಾಡಿದರೆ ೩ರಿಂದ ೬ ರಿಂಗಳವರೆಗೂ ಉಳಿದೀತು ಅದು. ಹೀಗೆ ಫ್ರೀಜ್‌ ಮಾಡುವಾಗ ಅಷ್ಟನ್ನೂ ಒಟ್ಟಿಗೇ ಇರಿಸದೆ ನಾಲ್ಕಾರು ಸಣ್ಣ ಡಬ್ಬಿಗಳಲ್ಲಿ ಇರಬಹುದು. ಇದರಿಂದ ಬೇಕಾದಾಗ ಬೇಕಾದಷ್ಟನ್ನೇ ಉಪಯೋಗಿಸಲು ಅನುಕೂಲ. ಒಮ್ಮೆ ಫ್ರೀಜರ್‌ನಿಂದ ತೆಗೆದು ವಾತಾವರಣದ ಉಷ್ಣತೆಗೆ ತಂದ ಬೆಣ್ಣೆಯನ್ನು ಮತ್ತೆ ಫ್ರೀಜರ್‌ನಲ್ಲಿ ಇರಿಸಬೇಡಿ.

Plate with Fresh Butter and Knife on Table

ರೆಫ್ರಿಜಿರೇಶನ್‌

ಫ್ರೀಜರ್‌ನಲ್ಲಲ್ಲದೆ, ಫ್ರಿಜ್‌ನಲ್ಲೇ ತಿಂಗಳುಗಳ ಕಾಲ ಕೆಡದಂತೆ ಇರಿಸಿಕೊಳ್ಳುವುದಕ್ಕೆ ಸಾಧ್ಯವಿದೆ. ಆದರೆ ಬೆಣ್ಣೆಯಂಥ ವಸ್ತುಗಳು ಸ್ಪಾಂಜ್‌ನಂತೆ ಕೆಲಸ ಮಾಡುತ್ತವೆ. ಅಂದರೆ ಫ್ರಿಜ್‌ನಲ್ಲಿ ಇರಿಸಿದ ಉಳಿದ ಆಹಾರ ವಸ್ತುಗಳ ಘಮವನ್ನು ತಾನಾಗೇ ಹೀರಿಕೊಳ್ಳುತ್ತವೆ. ಇದಕ್ಕೆ ಅವಕಾಶ ನೀಡಿದಷ್ಟಕ್ಕೂ ಬೆಣ್ಣೆ ಬೇಗನೇ ಹಾಳಾಗುತ್ತದೆ. ಪನೀರ್‌ನ ಕಥೆ ಇದಕ್ಕಿಂತ ಭಿನ್ನವಲ್ಲ. ಆದರೆ ಇವುಗಳನ್ನು ಗಾಳಿಯಾಡದ ಡಬ್ಬಿಗಳಲ್ಲೇ ಇರಿಸುತ್ತೇವೆ ಎನ್ನಬಹುದು. ಅದಷ್ಟೇ ಸಾಕಾಗುವುದಿಲ್ಲ. ಅವುಗಳ ಮೂಲ ಪ್ಯಾಕಿಂಗ್‌ ವಸ್ತುಗಳಲ್ಲಿ ಸಾ‍ಧ್ಯವಾದಷ್ಟೂ ಬಿಗಿಯಾಗಿ ಸುತ್ತಿ. ಆನಂತರ ಗಾಳಿಯಾಡದ ಡಬ್ಬಿಗಳಲ್ಲಿ ಇರಿಸಿ. ಮಾತ್ರವಲ್ಲ, ಹಾಲು-ಬೆಣ್ಣೆಗಳನ್ನು ಶೇಖರಿಸಿಡುವುದಕ್ಕೆ ಫ್ರಿಜ್‌ನಲ್ಲಿ ಪ್ರತ್ಯೇಕ ವಿಭಾಗವಿದ್ದರೆ ಇಲ್ಲಿಯೇ ಇಡಿ. ಆಗ ಉಳಿದ ಆಹಾರ ವಸ್ತುಗಳ ಪರಿಮಳವನ್ನು ಇವುಗಳಿಂದ ವ್ಯವಸ್ಥಿತ ಆಗಿ ದೂರ ಮಾಡಬಹುದು.
ಇಷ್ಟಾಗಿಯೂ ಸಮಸ್ಯೆ ಬಗೆಹರಿಯುತ್ತಿಲ್ಲವೇ? ಅಗತ್ಯಕ್ಕಿಂತ ತುಂಬ ಹೆಚ್ಚಿನ ಪ್ರಮಾಣದಲ್ಲಿ ಬೆಣ್ಣೆ ಇದೆ ಎನಿಸಿದರೆ, ಅದನ್ನು ಹೇಗೆ ಕಾಪಾಡಿಕೊಂಡರೂ ತಾಜಾತನ ಉಳಿಯುತ್ತಿಲ್ಲ ಎನಿಸಿದರೆ… ಕಾಯಿಸಿ ತುಪ್ಪ ಮಾಡಿ. ಈ ತುಪ್ಪವನ್ನಾದರೂ ಡಬ್ಬಿಗಳಿಗೆ ಹಾಕುವಾಗ ಎಲ್ಲವನ್ನೂ ಒಂದೇ ಡಬ್ಬಿಗೆ ಸುರಿಯುವ ಬದಲು, ನಾಲ್ಕಾರು ಪುಟ್ಟ ಡಬ್ಬಿಗಳಿಗೆ ಹಾಕಿಟ್ಟುಕೊಳ್ಳಿ. ಒಂದನ್ನಷ್ಟೇ ಬಳಕೆಗೆ ಇರಿಸಿಕೊಂಡು ಉಳಿದಿದ್ದನ್ನು ಫ್ರಿಜ್‌ನಲ್ಲಿರಿಸಿ. ಇದರಿಂದ ಉದ್ದಕ್ಕೂ ತಾಜಾ ತುಪ್ಪವನ್ನೇ ತಿನ್ನಬಹುದು.

Slicing Block of Butter

ಸೂಚನೆಗಳೇನು?

ಬೆಣ್ಣೆ, ಪನೀರ್‌ಗಳು ಬಳಕೆಗೆ ಯೋಗ್ಯವಲ್ಲ ಎಂಬ ಸೂಚನೆಗಳೇನು? ಹಾಳಾದ ವಸ್ತುಗಳನ್ನು ಉಪಯೋಗಿಸುವುದರಿಂದ ತಿನ್ನುವವರ ಆರೋಗ್ಯವೂ ಹಾಳಾದೀತು. ಮೊದಲಿಗೆ, ವಸ್ತುವಿನ ಪರಿಮಳ ಬದಲಾಗಿದೆಯೇ? ಕಮಟು ವಾಸನೆ ಇದೆಯೇ ಎಂಬುದನ್ನು ಗಮನಿಸಿ. ನೋಡುವುದಕ್ಕೆ ಬಣ್ಣ ಬದಲಾಗಿದೆಯೇ? ಕೆನೆ ಬಣ್ಣದಲ್ಲಿರುವ ಈ ವಸ್ತುಗಳು ಹಳದಿ, ಹಸಿರು ಅಥವಾ ನೀಲಿ ಇಲ್ಲವೇ ಕಪ್ಪು ಬಣ್ಣಗಳನ್ನು ಎಲ್ಲಾದರೂ ಹೊತ್ತಿವೆಯೇ? ಮುಟ್ಟಿದಾಗ ಕೈಗೆ ನೀರಿನಂಥ ಇಲ್ಲವೇ ಲೋಳೆಯಂಥ ಪದರ ತಾಕುತ್ತಿದೆ ಎಂದಾದರೆ, ಅದರ ಆಯಸ್ಸು ಮುಗಿದಿದೆ ಎಂದರ್ಥ.

ಇದನ್ನೂ ಓದಿ: Ash Gourd Juice Benefits: ಬೂದುಕುಂಬಳಕಾಯಿ ಜ್ಯೂಸ್‌ ಕುಡಿಯುವುದರಿಂದ ಆಗುವ 10 ಪ್ರಯೋಜನಗಳಿವು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಆರೋಗ್ಯ

Morning Nutrition: ಆರೋಗ್ಯಕರ ಆಗಿರಬೇಕಿದ್ದರೆ ನಮ್ಮ ಬೆಳಗಿನ ತಿಂಡಿ ಹೇಗಿರಬೇಕು?

ರಾತ್ರಿಯಿಡೀ ದೇಹಕ್ಕೆ ಅಗತ್ಯವಾದ ವಿಶ್ರಾಂತಿಯನ್ನು ನೀಡಿದ್ದಾಗಿದೆ. ಇನ್ನೀಗ ಮುಂಜಾನೆ (Morning Nutrition) ಎದ್ದು ದಿನವನ್ನು ಪ್ರಾರಂಭಿಸಬೇಕು ಎನ್ನುವಾಗ, ದೇಹಕ್ಕೆ ನೀಡುವಂಥ ಗ್ರಾಸ ಹೇಗಿರಬೇಕು? ಒಂದು ಆಮ್ಲೇಟ್‌ ಸಾಕೇ? ಜೊತೆಗೆರಡು ಬ್ರೆಡ್‌…? ಅಥವಾ ಎರಡು ದೋಸೆ? ಹೀಗೆ ಗೊಂದಲಗಳು ಬಹಳಷ್ಟು ಇರಬಹುದು. ಅದಕ್ಕೆ ಉತ್ತರ ಇಲ್ಲಿದೆ.

VISTARANEWS.COM


on

Morning Nutrition
Koo

ಹೆಚ್ಚಿನ ಜನಕ್ಕೆ ಬೆಳಗಿನ ತಿಂಡಿಯ ಮಹತ್ವವೇ ತಿಳಿದಿರುವುದಿಲ್ಲ. ಈ ಮಾತನ್ನು ಹೇಳುವುದಕ್ಕೂ ಕಾರಣವಿದೆ. ಬೆಳಗ್ಗೆ (Morning Nutrition) ತಿಂಡಿಯನ್ನು ಎದ್ದ ನಾಲ್ಕು ತಾಸುಗಳ ನಂತರ ತಿನ್ನುವುದು, ಕೆಲವೊಮ್ಮೆ ತಿಂಡಿಯನ್ನೇ ತಿನ್ನದಿರುವುದು, ದಿನದ ಪ್ರಾರಂಭಕ್ಕೆ ಸೂಕ್ತ ಅಲ್ಲದ್ದನ್ನು ತಿನ್ನುವುದು, ಕೇವಲ ಕಾಫಿ/ಟೀ ಕುಡಿದು ಮಧ್ಯಾಹ್ನ ಊಟ ಮಾಡುವುದು- ಇಂಥ ಉದಾಹರಣೆಗಳು ಕಡಿಮೆಯೇನಿಲ್ಲ. ಆದರೆ ಬೆಳಗಿನ ತಿಂಡಿಯನ್ನು ದಿನದ ಅತ್ಯಂತ ಆರೋಗ್ಯಕರ ಊಟವನ್ನಾಗಿ ಮಾಡುವುದು ಮಹತ್ವದ್ದು ಎನ್ನುತ್ತಾರೆ ಪೌಷ್ಟಿಕಾಂಶ ತಜ್ಞರು. ರಾತ್ರಿಡೀ ದೇಹಕ್ಕೆ ಅಗತ್ಯವಾದ ವಿಶ್ರಾಂತಿಯನ್ನು ನೀಡಿದ್ದಾಗಿದೆ. ಇನ್ನೀಗ ಮುಂಜಾನೆದ್ದು ದಿನವನ್ನು ಪ್ರಾರಂಭಿಸಬೇಕು ಎನ್ನುವಾಗ, ದೇಹಕ್ಕೆ ನೀಡುವಂಥ ಗ್ರಾಸ ಹೇಗಿರಬೇಕು? ಅಧಿಕ ಸತ್ವಗಳನ್ನು ಹೊಂದಿದ ಆಹಾರವನ್ನೇ ತಿನ್ನಬೇಕು ಎಂದಾದರೆ, ಏಕೆ ಹಾಗೆ? ಬೆಳಗ್ಗೆ ತಿಂಡಿ ತಿನ್ನದಿದ್ದರೆ ತೂಕ ಇಳಿಸುವುದು ಸಾಧ್ಯವಿಲ್ಲವೇ? ಇಂತಹ ಹಲವಾರು ಪ್ರಶ್ನೆಗಳು ಮನದಲ್ಲಿದ್ದರೆ, ಅವಕ್ಕೆಲ್ಲ ಉತ್ತರ ಹುಡುಕುವ ಪ್ರಯತ್ನ ಇಲ್ಲಿದೆ. ಬೆಳಗಿನ ತಿಂಡಿಗೆ ಆರೋಗ್ಯಕರ ಕೊಬ್ಬುಗಳು, ಸಂಕೀರ್ಣ ಪಿಷ್ಟ ಮತ್ತು ಪ್ರೊಟೀನ್‌ ಇರುವಂಥ ಆಹಾರ ಅಗತ್ಯ. ಈ ಸತ್ವಗಳ ಮಿಶ್ರಣವು ದೇಹವು ದೀರ್ಘಕಾಲದವರೆಗೆ ಬಳಲದಂತೆ ನೋಡಿಕೊಳ್ಳುತ್ತದೆ. ದಿನವಿಡೀ ಅಗತ್ಯವಾದ ಚೈತನ್ಯವನ್ನು ದೇಹಕ್ಕೆ ನೀಡುತ್ತದೆ ಮತ್ತು ಆಹಾರ ತಿಂದ ತೃಪ್ತಿಯನ್ನು ಒದಗಿಸುತ್ತದೆ. ಜೊತೆಗೆ, ಬೇಗ ಹಸಿವಾಗುವುದನ್ನು ತಡೆಯುತ್ತದೆ. ಇಂಥ ಆಹಾರವು ದೇಹಕ್ಕೆ ಮಾತ್ರವಲ್ಲ, ಮನಸ್ಸಿಗೂ ಬೇಕಾದ ಗ್ರಾಸವನ್ನು ಒದಗಿಸಿಕೊಡುತ್ತದೆ. ಈ ಬಗ್ಗೆ ವಿವರಣೆ ಇಲ್ಲಿದೆ.

South Indian breakfast

ಸಂಕೀರ್ಣ ಪಿಷ್ಟಗಳು

ನಮ್ಮೆಲ್ಲ ಚಟುವಟಿಕೆಗಳನ್ನು ಮಾಡುವುದಕ್ಕೆ ನಮಗೆ ಪಿಷ್ಟ ಅಥವಾ ಕಾರ್ಬೊಹೈಡ್ರೇಟ್‌ಗಳು ಬೇಕು. ಆದರೆ ಮೈದಾ ಅಥವಾ ಸಂಸ್ಕರಿತ ತಿನಿಸುಗಳಿಂದ ಬರುವಂಥ ಸರಳ ಪಿಷ್ಟವಲ್ಲ, ದೀರ್ಘ ಕಾಲದವರೆಗೆ ಶಕ್ತಿಯನ್ನು ಉಣಿಸುವಂಥ ಸಂಕೀರ್ಣವಾದ ಪಿಷ್ಟಗಳು ಬೇಕು. ಇದನ್ನು ಇಡೀ ಧಾನ್ಯಗಳು, ಓಟ್ಸ್‌, ಸಿರಿ ಧಾನ್ಯಗಳು, ಕಿನೊವಾ, ರಾಗಿ ಮುಂತಾದ ನಾರುಭರಿತ ಅಂದರೆ ತೌಡು ಸಹಿತವಾದ ಧಾನ್ಯಗಳಿಂದ ಪಡೆಯಬಹುದು. ಈ ಧಾನ್ಯಗಳಿಂದ ಉಪ್ಪಿಟ್ಟು, ಅವಲಕ್ಕಿ, ದೋಸೆ, ಇಡ್ಲಿ, ಚಿತ್ರಾನ್ನ… ನಿಮಗೆ ಇಷ್ಟವಾದ ಯಾವುದನ್ನಾದರೂ ಮಾಡಿ.

ಪ್ರೊಟೀನ್‌

ಬೆಳಗಿನ ತಿಂಡಿಗೆ ಹೆಚ್ಚಿನ ಪ್ರಮಾಣದ ಪ್ರೊಟೀನ್‌ ಅಗತ್ಯ. ಇದರಿಂದ ದೇಹದ ರಿಪೇರಿ ಕೆಲಸ, ಹಾರ್ಮೋನುಗಳ ಕ್ಷಮತೆ, ಕಿಣ್ವಗಳ ಉತ್ಪಾದನೆ ಮುಂತಾದ ಮಹತ್ವದ ಕೆಲಸಗಳೆಲ್ಲವೂ ಮಟ್ಟಸವಾಗಿ ಇರುತ್ತದೆ. ಇದಕ್ಕಾಗಿ ಹಾಲು, ಮೊಸರು, ಗ್ರೀಕ್‌ ಯೋಗರ್ಟ್‌, ಪನೀರ್‌, ತೋಫು, ಮೊಟ್ಟೆ, ಕಾಳುಗಳು, ಸೋಯಾ, ಕಾಯಿ ಮತ್ತು ಬೀಜಗಳು ಬೆಳಗಿನ ಆಹಾರದಲ್ಲಿ ಇರಬೇಕು. ಆಮ್ಲೆಟ್‌ ಜೊತೆಗೆ ಇಡೀಧಾನ್ಯದ ಬ್ರೆಡ್‌ ಅಥವಾ ಚಪಾತಿಯಂಥವು ಬೇಕು ಎನ್ನುವುದು ಸ್ಪಷ್ಟವಾಗಿದೆಯಲ್ಲವೇ?

ಇದನ್ನೂ ಓದಿ: World Blood Donor Day: ರಕ್ತದಾನ ಯಾರು ಮಾಡಬಹುದು? ಯಾರು ಮಾಡಬಾರದು?

ಆರೋಗ್ಯಕರ ಕೊಬ್ಬು

ಇದು ಸಹ ಅತಿ ಮುಖ್ಯವಾದ ಸತ್ವ. ದೇಹದ ತೂಕವನ್ನು ನಿಯಂತ್ರಿಸಲು, ಹೆಚ್ಚಿನ ಕೊಬ್ಬು ದೇಹದಲ್ಲಿ ಜಮೆಯಾಗದಂತೆ ಕಾಯ್ದುಕೊಳ್ಳಲು ಇದು ಅಗತ್ಯ. ದೇಹದ ಅಂಗಾಂಗಗಳೆಲ್ಲ ಸರಿಯಾಗಿ ಕೆಲಸ ಮಾಡಲು ಈ ಕೊಬ್ಬು ಬೇಕೇಬೇಕು. ಇದಕ್ಕಾಗಿ ಅವಕಾಡೊ, ಕಾಯಿ-ಬೀಜಗಳು, ತುಪ್ಪ, ಕೊಬ್ಬರಿ ಎಣ್ಣೆಯಂಥ ಆರೋಗ್ಯಕರ ತೈಲಗಳು, ಪೀನಟ್‌ಬಟರ್‌ ಅಥವಾ ಇನ್ನಾವುದಾದರೂ ಬೀಜಗಳ ತುಪ್ಪ- ಇವೆಲ್ಲ ಶರೀರಕ್ಕೆ ಬೇಕು. ಮೆದುಳಿನ ಆರೋಗ್ಯ ರಕ್ಷಣೆಗಂತೂ ಇವು ತೀರಾ ಅಗತ್ಯವಾದವು. ಇವುಗಳಲ್ಲಿರುವ ಒಮೇಗಾ ೩ ಕೊಬ್ಬಿನಾಮ್ಲವು ಇಡೀ ದೇಹದ ಸ್ವಾಸ್ಥ್ಯಕ್ಕೆ ಅಗತ್ಯವಾಗಿದ್ದು.

drinking water

ನೀರು

ಇದಿಷ್ಟರ ಜೊತೆಗೆ ದಿನಕ್ಕೆ ಮೂರು ಲೀ. ನೀರು ಕುಡಿಯುವುದು ಬಹುಮುಖ್ಯ. ರಾತ್ರಿಡೀ ನೀರಿಲ್ಲದೆ ಇರುವಂಥ ದೇಹಕ್ಕೆ ಬೆಳಗಿನ ಹೊತ್ತು ಒಂದೆರಡು ಗ್ಲಾಸ್‌ ನೀರು ಕುಡಿಸಿ. ಬರೀ ನೀರು ಕುಡಿಯುವುದು ಕಷ್ಟ ಎನಿಸಿದರೆ, ಸಕ್ಕರೆ ರಹಿತವಾದ ಯಾವುದೇ ರಸಗಳನ್ನು ಸೇರಿಸಿಕೊಳ್ಳಬಹುದು. ಜೊತೆಗೆ, ದಿನವಿಡೀ ಹರ್ಬಲ್‌ ಚಹಾಗಳು, ಎಳನೀರು, ರಸಭರಿತ ಹಣ್ಣು-ತರಕಾರಿಗಳು, ಮಜ್ಜಿಗೆ- ಇಂಥವೆಲ್ಲ ದಿನದ ಮೂರು ಲೀ. ನೀರು ಕುಡಿಯುವ ಗುರಿಯನ್ನು ಪೂರ್ಣಗೊಳಿಸಲು ನೆರವಾಗುತ್ತವೆ.

Continue Reading

ದೇಶ

Indian Chutneys: ವಿಶ್ವದ ಟಾಪ್ 50 ಅಚ್ಚುಮೆಚ್ಚಿನ ತಿನಿಸುಗಳಲ್ಲಿ ಭಾರತದ ಈ ಎರಡು ಚಟ್ನಿಗಳು!

Indian Chutneys: ಅಡುಗೆ ಎಂಬ ಶಬ್ದ ಕಿವಿಯ ಮೇಲೆ ಇದ್ದರೆ ಹೊಟ್ಟೆ ಜಾಗೃತವಾಗುತ್ತದೆ. ರುಚಿಯಾದ ಅಡುಗೆಯನ್ನು ಚಪ್ಪರಿಸಿ ತಿನ್ನುವುದೇ ಒಂದು ಭಾಗ್ಯ. ಇನ್ನು ಮಸಾಲೆ ಸಾಮಗ್ರಿಗಳನ್ನು ಬಳಸಿ ಮಾಡುವ ಭಾರತದ ಅಡುಗೆಗಳು ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿವೆ. ಭಾರತದ ಅಡುಗೆಗೆ ಈಗ ಇನ್ನೊಂದು ಗರಿ ಮೂಡಿದೆ. ಅದೇನೆಂದರೆ ಊಟದ ಎಲೆಯ ತುದಿಯ ಮೇಲೆ ಬೀಳುವ ಚಟ್ನಿ  ಈಗ ವಿಶ್ವದ 50 ಡಿಪ್‌ ಗಳಲ್ಲಿ ಸ್ಥಾನ ಪಡೆದಿದೆಯೆಂತೆ.  

VISTARANEWS.COM


on

Indian Chutneys
Koo

ಬೆಂಗಳೂರು: ಚಟ್ನಿ ಎಂದಾಗ ಬಾಯಲ್ಲಿ ನೀರು ಬರುವುದು ಸಹಜ. ದೋಸೆ, ಇಡ್ಲಿ ಮಾಡಿದಾಗ ಸಾಂಬಾರಿನ ಹಂಗಿಲ್ಲದೇ ಚಟ್ನಿ ಜೊತೆ ಇವುಗಳನ್ನು ಸವಿಯಬಹುದು. ಇನ್ನು ಬಿಸಿ ಬಿಸಿ ಅನ್ನದ (Rice) ಜೊತೆಗೆ ಈ ಚಟ್ನಿಯ ಕಾಂಬಿನೇಷನ್‌ ಸೂಪರ್‌ ಆಗಿರುತ್ತದೆ. ಹೆಚ್ಚಾಗಿ  ನಾವು ಕೊತ್ತಂಬರಿಸೊಪ್ಪಿನ ಚಟ್ನಿ, ಮಾವಿನಕಾಯಿ ಚಟ್ನಿ (Mango Chutney), ಟೊಮೆಟೊ ಚಟ್ನಿ, ಶೇಂಗಾ ಚಟ್ನಿ ಮಾಡುತ್ತೇವೆ. ಇನ್ನು ಹಲವು ಬಗೆಯ ತರಕಾರಿಗಳನ್ನು ಬಳಸಿ ರುಚಿ ರುಚಿಯಾದ ಚಟ್ನಿಗಳನ್ನು ಮಾಡಬಹುದು. ಚಟ್ನಿಯ ಕುರಿತು ಯಾಕಿಷ್ಟು ಪೀಠಿಕೆಯೆಂದರೆ, ಇದೀಗ ಭಾರತದ ಚಟ್ನಿಗಳಲ್ಲಿ (Indian Chutneys)ಎರಡು ಚಟ್ನಿಗಳು ವಿಶ್ವದ 50 ಡಿಪ್ ಗಳಲ್ಲಿ ಸ್ಥಾನ ಪಡೆದಿವೆಯಂತೆ!

ಟೇಸ್ಟ್ ಅಟ್ಲಾಸ್ ಇತ್ತೀಚೆಗೆ ಜೂನ್ 2024ರ  ಶ್ರೇಯಾಂಕದ ಪ್ರಕಾರ ವಿಶ್ವದ 50 ಅತ್ಯುತ್ತಮ ಡಿಪ್ ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಭಾರತೀಯ ಮಿಕ್ಸ್ ಚಟ್ನಿ  42ನೇ ಸ್ಥಾನ ಪಡೆದುಕೊಂಡಿದೆ. ಈ ಚಟ್ನಿಯನ್ನು ಬೇಯಿಸಿದ ಹಣ್ಣು ಮತ್ತು ತರಕಾರಿಗಳಿಂದ ತಯಾರಿಸಲಾಗುತ್ತದೆ. ಹಣ್ಣು ಹಾಗೂ ತರಕಾರಿಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಅದಕ್ಕೆ ಜೀರಿಗೆ, ಏಲಕ್ಕಿ, ಹುಣಸೆಹಣ್ಣು, ಶುಂಠಿ ಮತ್ತು ಅರಿಶಿನದಂತಹ ವಿವಿಧ ಮಸಾಲೆಗಳನ್ನು ಬೆರೆಸಿ ತಯಾರಿಸಲಾಗುತ್ತದೆಯಂತೆ. ಇದನ್ನು “ಭಾರತದ ರಾಷ್ಟ್ರೀಯ ಕಾಂಡಿಮೆಂಟ್ಸ್”ಎಂದು ಕರೆಯಲಾಗಿದೆ. ಹಾಗೇ ಟೇಸ್ಟ್ ಅಟ್ಲಾಸ್ ನ ಪಟ್ಟಿಯಲ್ಲಿ 47 ನೇ ಸ್ಥಾನದಲ್ಲಿ ನಮಗೆ ಪ್ರಿಯವಾದಂತಹ ಕೊತ್ತಂಬರಿ ಚಟ್ನಿ (ಧನಿಯಾ ಚಟ್ನಿ) ಹಾಗೂ ಕೊನೆಯ ಅಂದರೆ 50 ನೇ ಸ್ಥಾನದಲ್ಲಿ ಮಾವಿನ ಚಟ್ನಿ ಇದೆ. ಇದನ್ನು ಮಾವಿನ ಹಣ್ಣಿನಿಂದ ತಯಾರಿಸಲಾಗುತ್ತದೆ. ಈ ಮಾವಿನ ಚಟ್ನಿ ಹುಳಿ, ಸಿಹಿ ಮತ್ತು ಮಸಾಲೆಯ ಸುವಾಸನೆಯಿಂದ ಕೂಡಿತ್ತು ಎನ್ನಲಾಗಿದೆ.

ಅಲ್ಲದೇ ಈ ಪಟ್ಟಿಯಲ್ಲಿ ಲೆಬನಾನ್ ನಿಂದ ಟೌಮ್ ಮೊದಲ ಸ್ಥಾನದಲ್ಲಿದ್ದರೆ , ಮೆಕ್ಸಿಕನ್ ನ ಜನಪ್ರಿಯ ಡಿಲೈಟ್ ಗ್ವಾಕಮೋಲ್ 4ನೇ ಸ್ಥಾನದಲ್ಲಿದೆ. ಹಮ್ಮಸ್ 10 ನೇ ಸ್ಥಾನವನ್ನು ಪಡೆದುಕೊಂಡಿದೆ.

ಇದಕ್ಕೂ ಮೊದಲು ಹಲವಾರು ಭಾರತೀಯ ಭಕ್ಷ್ಯಗಳು ಟೇಸ್ಟ್ ಅಟ್ಲಾಸ್ ನ ಟಾಪ್ 50 ಪಟ್ಟಿಗಳಲ್ಲಿ ಸ್ಥಾನ ಪಡೆದಿತ್ತು. ವಡಾ ಪಾವ್, ಮಹಾರಾಷ್ಟ್ರದ ಪ್ರಸಿದ್ಧ ಬೀದಿ ಶೈಲಿಯ ತಿಂಡಿ ವಿಶ್ವದ ಅತ್ಯುತ್ತಮ ಸ್ಯಾಂಡ್ ವಿಚ್ ಗಳಲ್ಲಿ ಹೆಸರು ಪಡೆದಿವೆ.  ಅಷ್ಟೇ ಅಲ್ಲದೇ ಮೂರು ಭಾರತೀಯ ಸಿಹಿತಿಂಡಿಗಳು ವಿಶ್ವದ 10 ಅತ್ಯುತ್ತಮ ರೈಸ್ ಪುಡಿಂಗ್ ಗಳಲ್ಲಿ ಸ್ಥಾನ ಪಡೆದಿವೆ.

ಇದೇ ರೀತಿ ಭಾರತೀಯ ಎಲ್ಲಾ ಭಕ್ಷ್ಯಗಳು ವಿಶ್ವದ ಎಲ್ಲಾ ಕಡೆ ಮೆಚ್ಚುಗೆಯನ್ನು ಗಳಿಸುವಂತಾಗಲಿ. ಎಲ್ಲರ ನಾಲಿಗೆಯ ರುಚಿಯನ್ನು ಹೆಚ್ಚಿಸುವಂತಾಗಲಿ.

Continue Reading

ಆಹಾರ/ಅಡುಗೆ

Dry Fruits: ಈ ಒಣಹಣ್ಣುಗಳನ್ನು ಬೆಳಗ್ಗೆ ಎದ್ದ ಕೂಡಲೇ ತಿನ್ನುವುದು ಒಳ್ಳೆಯದಲ್ಲ!

ಬೆಳಗ್ಗೆ ಎದ್ದ ಕೂಡಲೇ ಕೆಲವು ಬಗೆಯ ಬೀಜಗಳು ಹಾಗೂ ಒಣ ಹಣ್ಣುಗಳು ತಿನ್ನಲು ಯೋಗ್ಯವಲ್ಲ ಎಂಬ ವಿಚಾರ ನಿಮಗೆ ಗೊತ್ತೇ? ಹೌದು. ಎಲ್ಲ ಒಣ ಹಣ್ಣುಗಳೂ (dry fruits) ಕೂಡಾ ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ತಿನ್ನುವುದು ಯೋಗ್ಯವಲ್ಲ. ಒಣಹಣ್ಣುಗಳಲ್ಲಿ ಸಕ್ಕರೆಯ ಅಂಶ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಬೆಳಗ್ಗೆ ಎದ್ದ ಕೂಡಲೇ ಅವನ್ನು ತಿನ್ನುವುದರಿಂದ ಇವು ನಮ್ಮ ಜೀರ್ಣಕ್ರಿಯೆಯ ಮೇಲೆ ಅಡ್ಡ ಪರಿಣಾಮ ಬೀರಬಹುದಂತೆ. ಅಷ್ಟೇ ಅಲ್ಲ, ರಕ್ತದಲ್ಲಿರುವ ಸಕ್ಕರೆಯ ಪ್ರಮಾಣ ಒಡನೆಯೇ ಏರುತ್ತದೆ. ಯಾವೆಲ್ಲ ಒಣಹಣ್ಣುಗಳನ್ನು ನೀವು ಬೆಳಗ್ಗಿನ ಹೊತ್ತಿನಲ್ಲಿ ಎದ್ದ ಕೂಡಲೇ ತಿನ್ನಬಾರದು ಎಂಬುದರ ಮಾಹಿತಿ ಇಲ್ಲಿದೆ.

VISTARANEWS.COM


on

dry fruits
Koo

ಒಣ ಹಣ್ಣುಗಳು ಹಾಗೂ ಬೀಜಗಳು (dry fruits) ಬೆಳಗ್ಗೆ ಎದ್ದ ಕೂಡಲೇ ತಿಂದರೆ ಒಳ್ಳೆಯದು ಎಂಬುದು ಈಗ ಬಹುತೇಕ ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ. ಹೀಗಾಗಿ ರಾತ್ರಿ ಮಲಗುವ ಸಂದರ್ಭವೇ ಇವನ್ನೆಲ್ಲ ನೆನೆ ಹಾಕಿ ಇಟ್ಟುಕೊಂಡು ಬೆಳಗ್ಗೆ ಎದ್ದ ಕೂಡಲೇ ತಿನ್ನುತ್ತೇವೆ. ನಮ್ಮ ಆರೋಗ್ಯಕ್ಕೆ ಒಳ್ಳೆಯದನ್ನೇ ನಾವು ಮಾಡುತ್ತಿದ್ದೇವೆ ಎಂದು ನಾವು ಅಂದುಕೊಳ್ಳುತ್ತೇವೆ. ಆದರೆ, ಬೆಳಗ್ಗೆ ಎದ್ದ ಕೂಡಲೇ ಕೆಲವು ಬಗೆಯ ಬೀಜಗಳು ಹಾಗೂ ಒಣ ಹಣ್ಣುಗಳು ತಿನ್ನಲು ಯೋಗ್ಯವಲ್ಲ ಎಂಬ ವಿಚಾರ ನಿಮಗೆ ಗೊತ್ತೇ? ಹೌದು. ಎಲ್ಲ ಒಣ ಹಣ್ಣುಗಳೂ ಕೂಡಾ ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ತಿನ್ನುವುದು ಯೋಗ್ಯವಲ್ಲ. ಒಣಹಣ್ಣುಗಳಲ್ಲಿ ಸಕ್ಕರೆಯ ಅಂಶ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಬೆಳಗ್ಗೆ ಎದ್ದ ಕೂಡಲೇ ಅವನ್ನು ತಿನ್ನುವುದರಿಂದ ಇವು ನಮ್ಮ ಜೀರ್ಣಕ್ರಿಯೆಯ ಮೇಲೆ ಅಡ್ಡ ಪರಿಣಾಮ ಬೀರಬಹುದಂತೆ. ಅಷ್ಟೇ ಅಲ್ಲ, ರಕ್ತದಲ್ಲಿರುವ ಸಕ್ಕರೆಯ ಪ್ರಮಾಣ ಒಡನೆಯೇ ಏರುತ್ತದೆ. ಹೀಗಾಗಿ, ಇವನ್ನು ಬೇರೆ ಹೊತ್ತಿನಲ್ಲಿ ಸೇವಿಸುವುದು ಉಚಿತ. ಬನ್ನಿ, ಯಾವೆಲ್ಲ ಒಣಹಣ್ಣುಗಳನ್ನು ನೀವು ಬೆಳಗ್ಗಿನ ಹೊತ್ತಿನಲ್ಲಿ ಎದ್ದ ಕೂಡಲೇ ತಿನ್ನಬಾರದು ಎಂಬುದನ್ನು ನೋಡೋಣ.

Raisins Weight Loss Dry Fruits

ಒಣದ್ರಾಕ್ಷಿ

ಒಣದ್ರಾಕ್ಷಿ ಅತ್ಯಂತ ಸಿಹಿಯಾದ ಒಣಹಣ್ಣು. ಇದರಲ್ಲಿ ಸಕ್ಕರೆಯ ಪ್ರಮಾಣ ಅಧಿಕವಾಗಿರುತ್ತದೆ. ಇದರ ಸೇವನೆಯಿಂದ ಅನೇಕ ಆರೋಗ್ಯಕರ ಲಾಭಗಳಿರುವುದು ನಿಜವಾದರೂ, ಇದನ್ನು ಖಾಲಿ ಹೊಟ್ಟೆಯಲ್ಲಿ ಎದ್ದ ಕೂಡಲೇ ತಿನ್ನುವುದರಿಂದ ರಕ್ತದಲ್ಲಿ ಸಕ್ಕರೆಯ ಮಟ್ಟ ದಿಢೀರ್‌ ಏರಿಕೆಯಾಗುವ ಸಾಧ್ಯತೆ ಹೆಚ್ಚು. ಕೆಲವು ಬೀಜಗಳ ಜೊತೆಗೆ ಇದನ್ನು ಸೇರಿಸಿ ತಿನ್ನಬಹುದಾದರೂ, ಬೆಳಗಿನ ಸೇವನೆ ಅಷ್ಟು ಒಳ್ಳೆಯದಲ್ಲ.

Figs Dry Fruits For Hair Fall

ಒಣ ಅಂಜೂರ

ನಾರಿನಂಶ ಅತ್ಯಂತ ಅಧಿಕವಾಗಿರುವ ಒಣ ಅಂಜೂರದ ಹಣ್ಣು ಆರೋಗ್ಯಕ್ಕೆ ಅತ್ಯಂತ ಒಳ್ಳೆಯದು. ಮಲಬದ್ಧತೆ ಸಮಸ್ಯೆ ಇರುವ ಮಂದಿಗೆ, ಪೋಷಕಾಂಶಗಳ ಕೊರತೆ ಇರುವ ಮಂದಿಗೆ ಇದು ಒಳ್ಳೆಯ ಆಹಾರ. ವಿಟಮಿನ್‌ಗಳು, ಖನಿಜಾಂಶಗಳು ಇದರಲ್ಲಿ ಹೇರಳವಾಗಿ ಇರುವುದರಿಂದ ಇದೊಂದು ಸಂಪೂರ್ಣ ಆಹಾರ ಕೂಡಾ. ಆದರೆ ಸಕ್ಕರೆಯ ಅಂಶ ಇದರಲ್ಲಿ ಹೆಚ್ಚಿರುವುದರಿಂದ ಇದನ್ನು ತಿನ್ನುವುದರಿಂದ ರಕ್ತದಲ್ಲಿ ದಿಢೀರ್‌ ಸಕ್ಕರೆಯ ಮಟ್ಟ ಏರಿಕೆಯಾಗುವ ಸಂಭವವೂ ಇದೆ. ಜೊತೆಗೆ ಗ್ಯಾಸ್‌, ಹೊಟ್ಟೆಯುಬ್ಬರದಂತಹ ಸಮಸ್ಯೆಯನ್ನೂ ತಂದೊಡ್ಡಬಹುದು. ಇದಕ್ಕಾಗಿ, ಒಣ ಅಂಜೂರವನ್ನು ಬೇರೆ ಒಣಬೀಜಗಳ ಜೊತೆಗೆ ಸೇರಿಸಿ ತಿನ್ನಬಹುದು. ಆದರೂ ಎದ್ದ ಕೂಡಲೇ ತಿನ್ನುವ ಅಭ್ಯಾಸದಿಂದ ದೂರವಿಡುವುದು ಒಳ್ಳೆಯದು.

Fresh Medjool Dates

ಖರ್ಜೂರ

ಕಬ್ಬಿಣಾಂಶ ಸೇರಿದಂತೆ ಸಾಕಷ್ಟು ಪೋಷಕಾಂಶಗಳನ್ನು ಹೊಂದಿರುವ ಖರ್ಜೂರ ಕೂಡಾ ಬೆಳಗ್ಗೆ ಎದ್ದ ಕೂಡಲೇ ತಿನ್ನಬಹುದಾದ ಒಣ ಹಣ್ಣಲ್ಲ. ಸಾಕಷ್ಟು ಸಿಹಿಯಾಗಿರುವ ಖರ್ಜೂರವನ್ನು ತಿಂದ ತಕ್ಷಣ ರಕ್ತದಲ್ಲಿ ಸಕ್ಕರೆಯ ಅಂಶ ಏರುವ ಸಾಧ್ಯತೆಗಳೇ ಹೆಚ್ಚು. ಖರ್ಜೂರವನ್ನು ಬೇರೆ ಬೀಜಗಳ ಜೊತೆ ಸೇರಿಸಿ ತಿನ್ನಬಹುದಾದರೂ, ಬೇರೆ ಹೊತ್ತಿನಲ್ಲಿ ತಿನ್ನುವುದು ಉತ್ತಮ.

Dried apricots Weight Loss Dry Fruits

ಒಣ ಆಪ್ರಿಕಾಟ್‌

ಒಣ ಆಪ್ರಿಕಾಟ್‌ ಹಣ್ಣಿನಲ್ಲಿ ಸಾಕಷ್ಟು ಪೋಷಕಾಂಶಗಳೂ, ಖನಿಜಾಂಶಗಳೂ ಇರುವುದರ ಜೊತೆಗೆ ಸಕ್ಕರೆಯ ಅಂಶವೂ ಸಾಕಷ್ಟಿದೆ. ಬೆಳಗ್ಗೆಯೇ ಹೆಚ್ಚಿನ ಪ್ರಮಾಣದಲ್ಲಿ ತಿಂದರೆ ಇದರ ಸಕ್ಕರೆಯ ಅಂಶ ನೇರವಾಗಿ ರಕ್ತಕ್ಕೆ ಸೇರಿ ಸಕ್ಕರೆಯ ಅಂಶ ದಿಢೀರ್‌ ಏರಬಹುದು. ಅಷ್ಟೇ ಅಲ್ಲ, ಜೀರ್ಣದ ಸಮಸ್ಯೆಗಳೂ ಬರಬಹುದು. ಬೇರೆ ಬೀಜಗಳು ಹಾಗೂ ಧಾನ್ಯಗಳ ಜೊತೆಯಲ್ಲಿ ಬೇರೆ ಹೊತ್ತಿನಲ್ಲಿ ತೆಗೆದುಕೊಳ್ಳುವುದು ಒಳ್ಳೆಯದು.

Prunes Dry Fruits for Womens Health

ಪ್ರೂನ್‌

ಈ ಒಣಹಣ್ಣಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ನಾರಿನಂಶವಿದೆ. ಖನಿಜಾಂಶ, ಪೋಷಕಾಂಶಗಳೂ ಇವೆ. ನಾರಿನಂಶವಿರುವುದರಿಂದ ಬೆಳಗಿನ ಹೊತ್ತು ತಿನ್ನುವುದು ಒಳ್ಳೆಯದೇ ಆದರೂ, ಸಕ್ಕರೆ ಹೆಚ್ಚಿರುವುದರಿಂದ ದಿಢೀರ್‌ ಸಕ್ಕರೆಯ ಮಟ್ಟ ಏರುವ ಅಪಾಯವೂ ಇದೆ. ಹಾಗಾಗಿ, ಬೆಳಗಿನ ಹೊತ್ತು ಇದರಿಂದ ದೂರವಿಡಬಹುದು. ಅಥವಾ ಬೇರೆ ಒಣಬೀಜಗಳ ಜೊತೆಗೆ ಸೇರಿಸಿ ಬೇರೆ ಹೊತ್ತಿನಲ್ಲಿ ತಿನ್ನಬಹುದು.

Continue Reading

ಆರೋಗ್ಯ

Super Food For Kids: ನಿಮ್ಮ ಮಕ್ಕಳು ಜಾಣರಾಗಿ ಹೆಚ್ಚು ಅಂಕ ಗಳಿಸಬೇಕೆ? ಈ ಆಹಾರಗಳನ್ನು ಕೊಡಿ

ಮಕ್ಕಳಿಗೆ ಹೆಚ್ಚಿನ ಪೋಷಕಾಂಶಗಳ ಅಗತ್ಯವಿರುತ್ತದೆ. ಹೀಗಾಗಿ ಅವರ ನಿತ್ಯದ ಆಹಾರದಲ್ಲಿ ಕೆಲವೊಂದು ಪದಾರ್ಥಗಳು ಇರಲೇಬೇಕು. ಇದು ಅವರ ದೇಹಾರೋಗ್ಯ ಮಾತ್ರವಲ್ಲ ಮೆದುಳಿನ ಆರೋಗ್ಯಕ್ಕೂ ಬಹಳ ಒಳ್ಳೆಯದು. ಅಂತಹ ಆಹಾರ ಪದಾರ್ಥಗಳು (Super Food For Kids) ಯಾವುದು ಗೊತ್ತೇ? ಇಲ್ಲಿದೆ ಪೋಷಕರಿಗೆ ಉಪಯುಕ್ತ ಮಾಹಿತಿ.

VISTARANEWS.COM


on

By

Super Food For Kids
Koo

ನೆನಪಿನ ಶಕ್ತಿ (memory), ಏಕಾಗ್ರತೆ (concentration) ಮತ್ತು ಮೆದುಳಿನ ಕಾರ್ಯವನ್ನು (brain function) ಸುಧಾರಿಸುವ ಪ್ರಮುಖ ಅಂಶಗಳಲ್ಲಿ ಒಂದಾಗಿರುವುದರಿಂದ ಮಕ್ಕಳಿಗೆ (childrens) ಸರಿಯಾದ ಆಹಾರವನ್ನು (Super Food For Kids) ಆಯ್ಕೆ ಮಾಡುವುದು ಬಹಳ ಮುಖ್ಯ. ಮಕ್ಕಳು ಮೆದುಳು ಉತ್ತೇಜಕವಾಗಿ ಕಾರ್ಯನಿರ್ವಹಿಸುವ ಪೌಷ್ಟಿಕ ಆಹಾರಗಳನ್ನು (nutritious foods) ಸೇವಿಸಬೇಕು. ಮಗುವಿನ ಮೆದುಳನ್ನು ಶಕ್ತಿಯುತವಾಗಿ ಮತ್ತು ಚುರುಕಾಗಿಸಬಲ್ಲ ಕೆಲವು ಆಹಾರ ಪದಾರ್ಥಗಳು ಹೀಗಿವೆ.


ಹಾಲು

ಹೆಚ್ಚಿನ ಮಕ್ಕಳು ಹಾಲನ್ನು ಕುಡಿಯಲು ಇಷ್ಟಪಡುವುದಿಲ್ಲ. ಆದರೆ ಇದು ಮಗುವಿನ ಮೆದುಳನ್ನು ಚುರುಕುಗೊಳಿಸುವ ಅತ್ಯಂತ ಪ್ರಮುಖ ಆಹಾರ ಪದಾರ್ಥವಾಗಿದೆ. ಹಾಲಿನಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ, ವಿಟಮಿನ್ ಡಿ ಮತ್ತು ಪ್ರೊಟೀನ್ ಇದ್ದು ಇದು ಮಗುವಿನ ಮೆದುಳಿನ ಕಾರ್ಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.


ಮೊಟ್ಟೆ

ಮೊಟ್ಟೆಗಳಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಡಿ ಮತ್ತು ಪ್ರೊಟೀನ್ ಇದೆ. ಇದು ನಮ್ಮ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಮಗುವಿನ ಮೆದುಳನ್ನು ಆರೋಗ್ಯಕರವಾಗಿ ಮತ್ತು ತೀಕ್ಷ್ಣವಾಗಿಡುವಲ್ಲಿ ಮೊಟ್ಟೆಗಳು ತುಂಬಾ ಪರಿಣಾಮಕಾರಿಯಾಗಿರುವುದರಿಂದ ದೈನಂದಿನ ಆಹಾರದಲ್ಲಿ ಮೊಟ್ಟೆಗಳನ್ನು ಅಳವಡಿಸಿಕೊಳ್ಳಬೇಕು. ಮೊಟ್ಟೆಗಳಲ್ಲಿ ಇರುವ ಕೋಲೀನ್ ಮಕ್ಕಳ ಜ್ಞಾಪಕಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.


ಗೋಡಂಬಿ

ಹೆಚ್ಚಿನ ಪ್ರಮಾಣದಲ್ಲಿ ಪ್ರೋಟೀನ್, ವಿಟಮಿನ್‌ ಮತ್ತು ಖನಿಜಗಳನ್ನು ಒಳಗೊಂಡಿರುವ ಕಾರಣ ವಯಸ್ಸಿನ ಹೊರತಾಗಿಯೂ ಗೋಡಂಬಿ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಮಗುವಿನ ಮೆದುಳನ್ನು ಆರೋಗ್ಯವಾಗಿಡಲು ಅವರ ದೈನಂದಿನ ಆಹಾರದಲ್ಲಿ ಗೋಡಂಬಿಯನ್ನು ಸೇರಿಸಲು ಪ್ರಯತ್ನಿಸಿ.


ಧಾನ್ಯಗಳು

ಧಾನ್ಯಗಳು ಮಕ್ಕಳಿಗೆ ಪ್ರೋಟೀನ್, ವಿಟಮಿನ್ ಮತ್ತು ಖನಿಜಗಳ ಉತ್ತಮ ಮೂಲವಾಗಿದೆ. ಕಿಡ್ನಿ ಮತ್ತು ಪಿಂಟೋ ಧಾನ್ಯಗಳು ಯಾವುದೇ ರೀತಿಯ ಧಾನ್ಯಗಳು ಹೆಚ್ಚು ಒಮೆಗಾ 3 ಅನ್ನು ಹೊಂದಿರುತ್ತದೆ. ಧಾನ್ಯಗಳು ಅನ್ನು ಸಲಾಡ್‌ನೊಂದಿಗೆ ಬೆರೆಸಿ ಅಥವಾ ಕರಿ ಮಾಡುವ ಮೂಲಕ ಬಡಿಸಬಹುದು. ಧಾನ್ಯಗಳು ಜ್ಞಾಪಕ ಶಕ್ತಿ ಹೆಚ್ಚಿಸಲು ಮತ್ತು ಮೆದುಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Benefits Of Cherries: ಚೆರ್ರಿ ಹಣ್ಣು ರುಚಿಗಷ್ಟೇ ಅಲ್ಲ, ಉತ್ತಮ ಆರೋಗ್ಯಕ್ಕೂ ಹಿತಕರ!


ಮೀನು

ಮಕ್ಕಳಿಗೆ ಪ್ರತಿದಿನ ಮೀನನ್ನು ಬಡಿಸಲು ಪ್ರಯತ್ನಿಸಿ. ಯಾಕೆಂದರೆ ಇದು ಆರೋಗ್ಯದ ಒಟ್ಟಾರೆ ಬೆಳವಣಿಗೆಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಮೀನಿನಲ್ಲಿ ಹೆಚ್ಚಿನ ಪ್ರಮಾಣದ ಒಮೆಗಾ 3 ಇದ್ದು ಇದು ಜೀವಕೋಶಗಳ ನಿರ್ಮಾಣಕ್ಕೆ ಸಹಾಯ ಮಾಡುತ್ತದೆ.


ತರಕಾರಿಗಳು

ತರಕಾರಿಗಳು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ಮೆದುಳಿನ ಕೋಶಗಳನ್ನು ಆರೋಗ್ಯಕರವಾಗಿಡಲು ತರಕಾರಿಗಳು ಸಹಾಯ ಮಾಡುತ್ತದೆ. ಟೊಮ್ಯಾಟೊ, ಸಿಹಿ ಆಲೂಗಡ್ಡೆ, ಕುಂಬಳಕಾಯಿ, ಕ್ಯಾರೆಟ್ ಮತ್ತು ಪಾಲಕ್ ಮೊದಲಾದ ತರಕಾರಿಗಳನ್ನು ಮಗುವಿನ ನಿಯಮಿತ ಆಹಾರದಲ್ಲಿ ಸೇರಿಸಬೇಕು.

Continue Reading
Advertisement
Dina Bhavishya
ಭವಿಷ್ಯ1 hour ago

Dina Bhavishya : ಗೌಪ್ಯ ವಿಷಯವನ್ನು ಹಂಚಿಕೊಂಡರೆ ಈ ರಾಶಿಯವರಿಗೆ ಅಪಾಯ ಗ್ಯಾರಂಟಿ!

World War 3
ಪ್ರಮುಖ ಸುದ್ದಿ7 hours ago

World War 3: ಜೂನ್ 18ರಿಂದ 3ನೇ ಮಹಾಯುದ್ಧ ಶುರು; ಖ್ಯಾತ ಜ್ಯೋತಿಷಿಯ ಭವಿಷ್ಯವಾಣಿ ಸಂಚಲನ

Cholera outbreak
ಕರ್ನಾಟಕ9 hours ago

Cholera outbreak: ಕಲುಷಿತ ನೀರು ಸೇವನೆ; ಮಧುಗಿರಿಯ ಚಿನ್ನೇನಹಳ್ಳಿಯಲ್ಲಿ ವ್ಯಕ್ತಿಗೆ ಕಾಲರಾ ದೃಢ

NCERT Textbooks
ಪ್ರಮುಖ ಸುದ್ದಿ10 hours ago

NCERT Textbooks: ರಾಜಕೀಯ ಶಾಸ್ತ್ರದ ಪಠ್ಯದಿಂದ ‘ಬಾಬ್ರಿ ಮಸೀದಿ’ ಅಧ್ಯಾಯ ತೆಗೆದ ಎನ್‌ಸಿಇಆರ್‌ಟಿ!

Parenting Tips
ಪ್ರಮುಖ ಸುದ್ದಿ10 hours ago

Parenting Tips: ನೀವು ಹೊಸ ಅಪ್ಪ ಅಮ್ಮಂದಿರೇ? ನಿಮಗಿದೆ ಇಲ್ಲಿ ಮುಖ್ಯವಾದ ಟಿಪ್ಸ್!

Drowns in Lake
ಕರ್ನಾಟಕ10 hours ago

Drowns in lake: ಸ್ನೇಹಿತರ ಜತೆ ಕೆರೆಗೆ ಈಜಲು ಹೋದ ಬಾಲಕ ನೀರುಪಾಲು

Petrol Diesel Price
ಕರ್ನಾಟಕ11 hours ago

Petrol Diesel Price: ಪೆಟ್ರೋಲ್, ಡೀಸೆಲ್ ದರ ಏರಿಕೆಗೂ ಚುನಾವಣಾ ಫಲಿತಾಂಶಕ್ಕೂ ಸಂಬಂಧವಿಲ್ಲ ಎಂದ ಸಿಎಂ

Amit Shah
ದೇಶ11 hours ago

Amit Shah: ಕಾಶ್ಮೀರದಲ್ಲಿ ಒಬ್ಬನೇ ಒಬ್ಬ ಉಗ್ರ ಉಳಿಯಬಾರದು; ಖಡಕ್‌ ಆದೇಶ ಕೊಟ್ಟ ಅಮಿತ್‌ ಶಾ

Karnataka Weather Forecast
ಮಳೆ12 hours ago

Karnataka weather : ಭಾನುವಾರ ರಾಯಚೂರಿನಲ್ಲಿ ಅಬ್ಬರಿಸಿದ ವರುಣ; ನಾಳೆಗೂ ಇದೆ ಮಳೆ ಅಲರ್ಟ್‌

Actor Darshan
ಪ್ರಮುಖ ಸುದ್ದಿ12 hours ago

Actor Darshan: ರೇಣುಕಾಸ್ವಾಮಿ ಕುಟುಂಬಕ್ಕಷ್ಟೇ ಅಲ್ಲ, ಚಿತ್ರರಂಗಕ್ಕೂ ನ್ಯಾಯ ಸಿಗಬೇಕು: ಕಿಚ್ಚ ಸುದೀಪ್‌

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Renukaswamy murder case The location of the accused is complete
ಸಿನಿಮಾ12 hours ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ13 hours ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ18 hours ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ3 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು3 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು3 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ3 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

karnataka weather Forecast
ಮಳೆ6 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ6 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

ಟ್ರೆಂಡಿಂಗ್‌