ಶೀಲಾ ಸಿ. ಶೆಟ್ಟಿ, ಬೆಂಗಳೂರು
ಎಲ್ಲೆಡೆ ಫೆಸ್ಟಿವ್ ಸೀಸನ್ ಶಾಪಿಂಗ್ ಮೇನಿಯಾ. ಹೌದು. ಮುಂಬರುವ ಗೌರಿ-ಗಣೇಶನ ಚತುರ್ಥಿಗೆ (Ganesha Chaturthi) ಈಗಾಗಲೇ ಶಾಪಿಂಗ್ ಮಾಡುವವರು ಹೆಚ್ಚಾಗಿದ್ದಾರೆ. ಹಬ್ಬಕ್ಕೆ ಧರಿಸುವ ಉಡುಪಿನಿಂದಿಡಿದು, ಆಚರಿಸುವ ಸಂಪ್ರದಾಯಗಳಿಗೆ ಬೇಕಾದ ಅಗತ್ಯ ವಸ್ತುಗಳನ್ನು (Gowri-ganesha Festival Shopping) ವಾರಕ್ಕೆ ಮುನ್ನವೇ ಖರೀದಿಸುವುದು ಮೊದಲಿಗಿಂತ ಹೆಚ್ಚಾಗಿದೆ.
ಹಬ್ಬದ ಶಾಪಿಂಗ್ ಮೇನಿಯಾ
ಉದ್ಯಾನನಗರಿಯ ಎಲ್ಲೆಡೆ ಹಬ್ಬದ ಶಾಪಿಂಗ್‌ಕ್ರೇಝ್ ಯಾವ ಮಟ್ಟಕ್ಕೆ ಹೆಚ್ಚಾಗಿದೆ ಎಂದರೇ, ಕೇವಲ ಮಾಲ್‌ಗಳಲ್ಲಿ ಮಾತ್ರವಲ್ಲ, ಚಿಕ್ಕ ಪುಟ್ಟ ಶಾಪ್‌ಗಳಲ್ಲೂ, ಎಲ್ಲಾ ಬಗೆಯ ಅಂಗಡಿಗಳಲ್ಲೂ ವ್ಯಾಪಾರ-ವ್ಯವಹಾರ ಅಧಿಕಗೊಂಡಿದೆ. ವಾರಕ್ಕೂ ಮುನ್ನವೇ ಉದ್ಯೋಗಸ್ಥರಿಂದಿಡಿದು ಎಲ್ಲರೂ ಖರೀದಿಯಲ್ಲಿ ಬ್ಯುಸಿಯಾಗಿದ್ದಾರೆ.
ನ್ಯೂ ಅರೈವಲ್ಸ್
ಇನ್ನು, ಕಳೆದ ಸೀಸನ್ ಎಂಡ್ ಸೇಲ್ ಕೂಡ ಮುಕ್ತಾಯವಾಗಿದೆ. ಈಗೇನಿದ್ದರೂ ಹೊಸ ಪ್ರಾಡಕ್ಟ್‌ಗಳು ಆಗಮನವಾಗಿದ್ದು, ಹಬ್ಬಕ್ಕೆ ಬಳಕೆಯಾಗುವ ಪೂಜೆ ಸಾಮಗ್ರಿಗಳಿಂದಿಡಿದು ಧರಿಸುವ ಉಡುಪಿನವರೆಗೂ ಎಲ್ಲವೂ ನ್ಯೂ ಅರೈವಲ್ ಕೆಟಗರಿಯಲ್ಲಿ ಬಂದಿವೆ ಎನ್ನುತ್ತಾರೆ ಮಾರಾಟಗಾರರಾದ ರಜತ್ ಹಾಗೂ ಸಮನ್ಯು. ಅವರ ಪ್ರಕಾರ, ಫೆಸ್ಟಿವ್ ಸೀಸನ್ ಶಾಪಿಂಗ್ ಪ್ರತಿಬಾರಿಯಂತೆ ಈ ಬಾರಿಯೂ ಎಲ್ಲರಲ್ಲೂ ಹೊಸತನವನ್ನು ಸೃಷ್ಟಿಸಿದೆ. ಜೊತೆಗೆ ನಾನಾ ಬಗೆಯ ಆಫರ್ ಹಾಗೂ ಡಿಸ್ಕೌಂಟ್‌ಗಳಿಂದಲೂ ಸೆಳೆಯುತ್ತಿದೆ ಎನ್ನುತ್ತಾರೆ.
ಬದಲಾದ ಜನರ ಶಾಪಿಂಗ್ ಕಾನ್ಸೆಪ್ಟ್
ಹಿಂದಿನಂತೆ ಬಹುತೇಕ ಜನರು ಹಬ್ಬದ ಹಿಂದಿನ ದಿನ ಹಾಗೂ ಒಂದೆರೆಡು ಮುನ್ನಾ ದಿನ ಶಾಪಿಂಗ್ ಆರಂಭಿಸುವುದಿಲ್ಲ. ಒಂದೇ ದಿನ ಇಡೀ ಶಾಪಿಂಗ್ ಕೂಡ ಮಾಡುವುದಿಲ್ಲ! ಪ್ರತಿ ಶಾಪಿಂಗನ್ನು, ಕೆಟಗರಿಯಂತೆ ವಿಂಗಡಿಸಿಕೊಂಡು ಮುಂದುವರೆಯುತ್ತಾರೆ. ಉದಾಹರಣೆಗೆ., ವೀಕೆಂಡ್‌ನಲ್ಲಿ ಪೂಜಾ ಸಾಮಗ್ರಿಗಳು ಹಾಗೂ ಅಲಂಕಾರಿಕ ವಸ್ತುಗಳು, ಎಷ್ಟು ದಿನ ಇಟ್ಟರೂ ಕೆಡದಂತಹ ಇನ್‌ಸ್ಟಂಟ್ ಡೆಕೋರೇಟಿವ್ ವಸ್ತುಗಳು, ಫುಡ್ ಪ್ರಾಡಕ್ಟ್‌ಗಳು, ಡಿಸೈನರ್ ಬಾಗಿಣದ ಮೊರ, ಅರಿಶಿಣ-ಕುಂಕುಮ, ಆರತಿ ತಟ್ಟೆಗಳು, ಕೃತಕ ಬಾಳೆದಿಂಡು, ಹಣ್ಣು ಹೀಗೆ ಎಲ್ಲವನ್ನೂ ಮೊದಲೇ ಖರೀದಿಸಿ ಇಡುತ್ತಾರೆ. ಇನ್ನು ಕೆಲವರು ವಾರದಲ್ಲಿ ಕೊಂಚ ಫ್ರೀ ಇರುವ ಸಮಯದಲ್ಲಿ ಕುಟುಂಬದೊಂದಿಗೆ ಮಾಲ್ ಅಥವಾ ಶಾಪಿಂಗ್ ಸೆಂಟರ್ಗಳಿಗೆ ತೆರಳಿ ಹಬ್ಬಕ್ಕೆ ಉಡುಪನ್ನು ಕೊಳ್ಳುತ್ತಾರೆ. ಇದು ಇಂದಿನ ಶಾಪಿಂಗ್ ಕಾನ್ಸೆಪ್ಟ್. ಎಲ್ಲವನ್ನೂ ಎಲ್ಲರೂ ತಮ್ಮ ದಿನನಿತ್ಯದ ರೂಟಿನಲ್ಲಿ ಮಿಕ್ಸ್ ಮಾಡಿಕೊಳ್ಳುವುದಿಲ್ಲ ಎಂಬುದು ಶಾಪಿಂಗ್ ಎಕ್ಸ್‌ಫರ್ಟ್ ರಾಮಾನುಜಂ ಅಭಿಪ್ರಾಯ.
ಹಬ್ಬದ ಶಾಪಿಂಗ್ ಆರಂಭಿಸಿ
ಹಬ್ಬದ ಶಾಪಿಂಗ್ ಆರಂಭಿಸದವರು ಶುರು ಮಾಡಿದರೇ ಉತ್ತಮ. ಸಮಯವಾದಗಲೆಲ್ಲಾ ಖರೀದಿ ಮಾಡಿದಲ್ಲಿ, ಕೊನೆಯ ದಿನದ ಜಂಜಾಟ ಇರದು ಎನ್ನುತ್ತಾರೆ ಶಾಪಿಂಗ್ ಎಕ್ಸ್‌ಫಟ್ರ್ಸ್. ಅದಕ್ಕೆ ಒಂದಿಷ್ಟು ಟಿಪ್ಸ್ ಕೂಡ ನೀಡಿದ್ದಾರೆ.
- ಒಂದೇ ದಿನಾ ಎಲ್ಲವನ್ನು ಶಾಪಿಂಗ್ ಮಾಡುವ ಸರ್ಕಸ್ ಮಾಡಬೇಡಿ.
- ಮೊದಲೇ ಎಲ್ಲಿ ಏನು ಸಿಗುತ್ತದೆ ಎಂಬುದನ್ನು ತಿಳಿದುಕೊಂಡು ಹೋಗಿ.
- ಕಂಫರ್ಟನಲ್ ಡ್ರೆಸ್ಕೋಡ್ ಇರಲಿ.
- ಮಳೆಯ ಮುನ್ಸೂಚನೆ ತಿಳಿದುಕೊಂಡು ಹೊರಡಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Fashion news: ಫೆಸ್ಟಿವ್ ಸೀಸನ್‌ನಲ್ಲಿ ನಡೆದ ಆಕರ್ಷಕ ಬ್ರೈಡಲ್ ಫ್ಯಾಷನ್ ಶೋ