Site icon Vistara News

Happiness | ಜೀವನಪ್ರೀತಿಗೆ ಸ್ಫೂರ್ತಿ ಜಪಾನೀಯರ ಈ ಎಂಟು ಬದುಕಿನ ಸೂತ್ರಗಳು!

japanese

ಜಪಾನೀಯರು ಎಂದ ಕೂಡಲೇ ನೆನಪಾಗುವುದು ಅವರ ಕೆಲಸದ ಮೇಲಿನ ಶ್ರದ್ಧೆ, ಶ್ರಮಜೀವಿ ತತ್ವ. ಪುಟಾಣಿ ದೇಶದ ಮಂದಿಯಾದರೂ, ಜಗತ್ತನ್ನೇ ತಮ್ಮ ಕಡೆಗೆ ತಿರುಗಿ ನೋಡುವಂತೆ ಮಾಡಿದವರು. ಎಷ್ಟೇ ಕಷ್ಟವಾದರೂ ಅಂದುಕೊಂಡದ್ದನ್ನು ಸಾಧಿಸುವ, ಸ್ಪಷ್ಠ ಗುರಿಯಿರುವ ಜಪಾನೀಯರೆಂದರೆ ಪ್ಪಪಂಚದ ಎಲ್ಲರಿಗೂ ಗೌರವ. ಅವರ ಸ್ವಚ್ಛತೆ, ಬದುಕಿನ ಬಗೆಗಿನ ಒಳನೋಟ, ಜೀವನಪ್ರೀತಿ ಎಲ್ಲರಿಗೂ ಅನುಕರಣೀಯ.

ಇವರು ಕಂಡುಕೊಂಡ ಕೆಲವು ಜೀವನಸತ್ಯಗಳು ನಮ್ಮ ಬದುಕಿನಲ್ಲಿ ಸದಾ ಅನುಕರಣೀಯ. ಜಪಾನೀಯರು ಸದಾ ನಂಬುವ, ಅದರಂತೆ ನಡೆಯುವ ಎಂಟು ಜೀವನತತ್ವಗಳು ದೇಶ ಭಾಷೆ ಗಡಿಗಳ ಹಂಗಿಲ್ಲದೆ ಎಲ್ಲರಿಗೂ ಸ್ಪೂರ್ತಿದಾಯಕ. ಅವುಗಳು ಇಲ್ಲಿವೆ.

೧. ಜೀವನದ ಮುಖ್ಯ ಉದ್ದೇಶ ಏನೆಂಬುದನ್ನು ಅರ್ಥ ಮಾಡಿಕೊಳ್ಳಿ. ಪ್ರತಿದಿನ ಬೆಳಗ್ಗೆ ಏಳಲು ಮುಖ್ಯ ಕಾರಣಗಳನ್ನು ಕಂಡುಕೊಳ್ಳಿ. ನಿಮ್ಮ ಶಕ್ತಿಗನುಸಾರವಾಗಿ ಇಚ್ಛಾ಼ಶಕ್ತಿಗನುಸಾರವಾಗಿ ಹಾಗೂ ಆಸಕ್ತಿಗೆ ಅನುಗುಣವಾಗಿ ಹಾಗೂ ಜಗತ್ತಿಗೆ ಅಗತ್ಯವಿರುವುದಕ್ಕೆ ಅನುಸಾರವಾಗಿ ನಿಮ್ಮ ಆಯ್ಕೆಯಿರಲಿ. ಇದು ಚಂದದ ಬದುಕಿಗೆ ಅರ್ಥ ನೀಡುತ್ತದೆ.

೨. ನೀವು ಬದಲಾಯಿಸಲಾಗದ್ದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಅದನ್ನು ಅದಿದ್ದ ಹಾಗೇ ಬಿಟ್ಟುಬಿಡಿ. ಕೆಲವು ವಿಚಾರಗಳು ನಮ್ಮ ನಿಯಂತ್ರಣವನ್ನೂ ಮೀರಿದ್ದು ಎಂಬುದನ್ನು ಅರ್ಥ ಮಾಡಿಕೊಳ್ಳಿ. ಅದು ಓಕೆ ಕೂಡಾ. ನೀವು ಯಾವುದನ್ನು ಬದಲಾಯಿಸಬಹುದು ಎಂಬುದರ ಬಗ್ಗೆ ನಿಮ್ಮ ಗುರಿಯಿರಲಿ. ಅದರತ್ತ ಪ್ರಯತ್ನ ಹಾಗೂ ಸ್ಪಷ್ಟ ನಡೆಯಿರಲಿ.

೩. ಪರಿಪೂರ್ಣವಾಗಿಲ್ಲದಿರುವಲ್ಲಿಯೂ ಶಾಂತಿಯನ್ನು ಕಂಡುಕೊಳ್ಳಿ. ಜೀವನದಲ್ಲಿ ಎಲ್ಲವೂ ಪರಿಪೂರ್ಣವಾಗಿರುವುದಿಲ್ಲ. ನಿಮ್ಮ ಸುತ್ತಮುತ್ತಲಿನವರು ಮಾತ್ರವಲ್ಲ, ನೀವೂ ಪರಿಪೂರ್ಣರಲ್ಲ ಎಂಬುದರ ಬಗ್ಗೆ ಅರಿವಿರಲಿ. ಲೋಪದೋಷ ಇಲ್ಲದಿರುವುದರ ಬಗ್ಗೆಯೇ ಹಾತೊರೆಯುವಿಕೆಗಿಂತ, ಅದರ ಬಗ್ಗೆಯೇ ಯಾವಾಗಲೂ ತುಡಿಯುವುದಕ್ಕಿಂತ ಕೆಲವು ಅಪರಿಪೂರ್ಣ ಸಂಗತಿಗಳಲ್ಲಿ ಖುಷಿಯನ್ನು ಹುಡುಕಿ. ಇದು ಸರಳ ಜೀವನವನ್ನು ವಿಶೇಷವಾಗಿಸುತ್ತದೆ.

೪. ಕೆಟ್ಟ ದಿನಗಳಲ್ಲಿ ನಿಮ್ಮ ಗೌರವವನ್ನು ಕಾಪಾಡಿಕೊಳ್ಳಿ. ಮಾನಸಿಕವಾಗಿ ಪ್ರಬುದ್ಧತೆ, ಆತ್ಮಬಲ ಈ ಸಂದರ್ಭ ಅತ್ಯಂತ ಅಗತ್ಯ ಎಂಬುದು ನೆನಪಿರಲಿ. ತಾಳ್ಮೆ, ಸಹಕಾರ, ಪರಿಸ್ಥಿತಿ ಅರ್ಥ ಮಾಡಿಕೊಳ್ಳುವ ಗುಣಗಳು ನಿಮ್ಮನ್ನು ಸದಾ ಕಾಯುತ್ತದೆ.

೫. ನಿಮ್ಮನ್ನು ಬೇರೆಯವರ ಜೊತೆ ಯಾವತ್ತೂ ಹೋಲಿಸಿಕೊಳ್ಳಬೇಡಿ. ಪ್ರತಿಯೊಬ್ಬರಿಗೂ ಪ್ರತ್ಯೇಕವಾದ ಅವರದ್ದೇ ಆದ ವಿಶೇಷ ಹಾದಿಯಿರುತ್ತದೆ. ಇನ್ನೊಬ್ಬರ ಜೊತೆಗೆ ಹೋಲಿಸಿಕೊಳ್ಳುವುದರ ಬದಲಾಗಿ, ನಿಮ್ಮ ಉನ್ನತಿ, ಪ್ರಗತಿಯೆಡೆಗೆ ಗುರಿ ಹೊಂದುವ ಬದ್ಧತೆ ನಿಮಗಿದ್ದರೆ ಸಾಕು.

ಇದನ್ನೂ ಓದಿ | Happiness: ಈ ಪುಟ್ಟ ದ್ವೀಪದ ಜನ ಸದಾ ಸಂತೋಷವಾಗಿರ್ತಾರೆ, ಯಾಕೆ ಗೊತ್ತೆ?

೬. ಯಾವಾಗಲೂ, ವಯಸ್ಸೆಷ್ಟೇ ಆಗಿದ್ದರೂ ನಿಮ್ಮ ಬದುಕಿನ ಎಲ್ಲ ಸ್ತರಗಳ ಪ್ರಗತಿಯ ಬಗ್ಗೆ ಯೋಚಿಸಿ, ಪ್ರಯತ್ನಿಸಿ. ಒಂದು ಪುಟ್ಟ ಬದಲಾವಣೆ, ಅಭಿವೃದ್ಧಿಯೂ ಕೂಡಾ ಬದುಕಿನ ಗತಿಯನ್ನೇ ಬದಲಾಯಿಸಬಹುದು.

೮. ಶು-ಹ-ರಿ: ʻವಿದ್ಯಾರ್ಥಿ ತಯಾರಿದ್ದಾಗ ಗುರುವೂ ಕಾಣಿಸುತ್ತಾನೆ. ಆದರೆ ವಿದ್ಯಾರ್ಥಿ ನಿಜವಾಗಿಯೂ ತಯಾರಿದ್ದಾಗ ಗುರು ಮಾಯವಾಗುತ್ತಾನೆʼ ಎಂಬುದೇ ಈ ಪ್ರಸಿದ್ಧ ಉಕ್ತಿ. ಜಪಾನೀಯರ ಸಮರ ಕಲೆ ಕಲಿಯುವ ಸಂದರ್ಭ ಈ ಉಕ್ತಿಗೆ ಬದ್ಧರಾಗುತ್ತಾರೆ. ಪ್ರತಿಯೊಂದು ವಿದ್ಯೆಯನ್ನೂ ಕಲಿಯುವುದು ಹಾಗೂ ಪಳಗುವುದರ ಬಗೆಗಿನ ಯೋಚನಾ ವಿದಾನ ಇದು. ಜ್ಞಾನ ಅಥವಾ ವಿದ್ಯೆ ಪಡೆಯುವುದಕ್ಕೆ ಜಪಾನೀಯರ ಪ್ರಕಾರ ಮೂರು ಹಂತಗಳಿವೆಯಂತೆ. ಅದು ಶು-ಹ-ರಿ. ಶು ಅಂದರೆ ಒಬ್ಬ ಗುರುವಿನಿಂದ ಯಾವುದೇ ವಿಚಾರವಾದರೂ ಸಾಮಾನ್ಯ ಕಲಿಕೆಯ ಹಂತವಿದು. ಇದರಲ್ಲಿ ಜ್ಞಾನಿ ಗುರುವಿದ್ದರೂ ಕಲಿಯುವ ಶಿಷ್ಯನಿಗೆ ಮಿತಿಗಳಿರುತ್ತದೆ. ಹ ಎಂದರೆ ಪ್ರಯೋಗಶೀಲತೆ. ಗುರುವಿನಿಂದ ವಿದ್ಯೆ ಕಲಿಯುವುದಷ್ಟೇ ಅಲ್ಲ, ಶಿಷ್ಯ ಅದನ್ನು ಪ್ರಯೋಗಗಳಿಗೆ ಒಡ್ಡಿಕೊಳ್ಳುವುದು. ರಿ ಎಂದರೆ, ಕೇವಲ ಪ್ರಯೋಗವಷ್ಟೇ ಅಲ್ಲ, ಕಲಿತ ವಿದ್ಯೆಯ ಮೂಲಕ ಹೊಸ ಅನ್ವೇಷಣೆಗಳಿಗೆ ನಾಂದಿಯಾಗುವುದು. ಕಲಿತ ವಿದ್ಯೆಯನ್ನು ನಿಜವಾದ ಸಂದರ್ಭಗಳಿಗೆ ಬಳಸಿಕೊಳ್ಳುವುದು. ಜಪಾನೀಯರ ಬದುಕಿನ ಈ ಎಂಟು ಸರಳ ಸೂತ್ರಗಳು ಎಲ್ಲರ ಬದುಕಿಗೂ ಅನ್ವಯಿಸುವಂಥದ್ದು, ಅಳವಡಿಸಿಕೊಳ್ಳುವಂಥದ್ದು.

ಇದನ್ನೂ ಓದಿ | Happiness | ಸದಾ ಖುಷಿಯೇ ಬೇಕೇ? ಈ ಹಾರ್ಮೋನುಗಳನ್ನೂ ಚೆನ್ನಾಗಿ ನೋಡಿಕೊಳ್ಳಿ!

Exit mobile version