Site icon Vistara News

Health Tips | ಈ ಆಹಾರಗಳು ನಿಮ್ಮನ್ನು ಆಸ್ಪತ್ರೆಯಿಂದ ದೂರ ಇಡುತ್ತವೆ

ದೇಹದ ಸ್ವಾಸ್ಥ್ಯಕ್ಕೆ ಪೌಷ್ಟಿಕಾಂಶಗಳು ಅತ್ಯಗತ್ಯ. ಉತ್ತಮ ಆಹಾರ ಪದ್ಧತಿಯಿಂದ (Health Tips) ದೇಹದ ಶಕ್ತಿ ಹೆಚ್ಚುತ್ತದೆ, ರೋಗನಿರೋಧಕ ಅಂಶಗಳು ಕೂಡ ವೃದ್ಧಿಸುತ್ತವೆ. ದೇಹದಲ್ಲಿ ರೋಗ ನಿರೋಧಕ ಅಂಶಗಳು ಹೆಚ್ಚಿದ್ದರೆ ಸಣ್ಣ ಸಣ್ಣ ಕಾಯಿಲೆಗೆ ಆಸ್ಪತ್ರೆಗೆ ಹೋಗುವ ಸನ್ನಿವೇಶ ಎದುರಾಗುವುದಿಲ್ಲ. ಅಷ್ಟಲ್ಲದೆ, ಅಪಾಯಕಾರಿ ವೈರಾಣುಗಳಿಂದ ಉಂಟಾಗುವ ಸಮಸ್ಯೆಗಳನ್ನೂ ತಡೆಯಬಹುದು. ರೋಗನಿರೋಧಕ ಅಂಶಗಳನ್ನು ಹೆಚ್ಚಿಸುವ ಪೋಷಕಾಂಶಗಳು ದೊರಕುವುದು ನೀವು ಸೇವಿಸುವ ಆಹಾರದ ಮೂಲಕ ಹಾಗೂ ನಿಮ್ಮ ಆಹಾರ ಪದ್ಧತಿಯ ಮೂಲಕ.

ನೀವು ದಿನವನ್ನು ಆರಂಭಿಸುವಾಗ ಮೊದಲು ಸೇವಿಸುವ ಆಹಾರ ಬಹುಮುಖ್ಯವಾಗಿರುತ್ತದೆ. ನೀವು ಸೇವಿಸುವ ಆಹಾರ ನಿಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ. ಉತ್ತಮ ಪೋಷಕಾಂಶಗಳನ್ನು ನೀಡುವಂಥ ಅನೇಕ ಆಹಾರಗಳಿವೆ. ಇನ್ನು ಕೆಲವು ಆಹಾರಗಳು ನಿಮ್ಮಲ್ಲಿರುವ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತವೆ. ಅವುಗಳನ್ನು ನಿಮ್ಮ ಮೊದಲ ಆಹಾರದಲ್ಲಿ ಕೂಡ ಸೇರಿಸಿ ಸೇವಿಸಬಹುದು.

ಈ ಪದಾರ್ಥಗಳು ಬ್ರೇಕ್‌ಫಾಸ್ಟ್‌ನಲ್ಲಿ ಇರಲಿ

1. ನಟ್ಸ್‌ ಹಾಗೂ ಸೀಡ್ಸ್‌

ಕೆಲವು ಬಾದಾಮಿ, ಪಿಸ್ತಾ ಅಥವಾ ಇತರ ಡ್ರೈ ಫ್ರೂಟ್ಸ್‌ ಸೇವಿಸಬಹುದು. ಪೌಷ್ಟಿಕವಾದ ಮೊಳಕೆ ಕಾಳುಗಳನ್ನು ನಿಮ್ಮ ಬೆಳಗಿನ ಆಹಾರದಲ್ಲಿ ಸೇರಿಸುವುದರೊಂದಿಗೆ ಅಗತ್ಯವಾದ ಪೋಷಕಾಂಶಗಳು ದೇಹಕ್ಕೆ ಸೇರಿಕೊಳ್ಳುತ್ತವೆ.

2. ಅರಿಶಿನ

ನೀವು ಬೆಳಗ್ಗೆ ಕುಡಿಯುವ ಹಾಲು, ಚಹಾ, ಅಥವಾ ಇತರ ಪಾನೀಯಗಳಿಗೆ ಚೂರು ಅರಿಶಿನ ಬೆರೆಸಿ ಕುಡಿಯುವುದು ಒಳ್ಳೆಯದು. ಆರೋಗ್ಯ ಉತ್ತಮಗೊಳಿಸುವಲ್ಲಿ ಅರಿಶಿನ ಅತ್ಯಂತ ಉಪಯೋಗಕಾರಿ.

3. ಚಹಾ

ಭಾರತದಲ್ಲಿ ಸಾಮಾನ್ಯವಾಗಿ ಎಲ್ಲರೂ ತಮ್ಮ ದಿನವನ್ನು ಆರಂಭಿಸುವುದು ಚಹಾ ಅಥವಾ ಕಾಫಿ ಕುಡಿಯುವ ಮೂಲಕ. ಕಾಫಿ ಅಥವಾ ಚಹಾ ಸೇವಿಸದೇ ಇರುವುದು ಕಷ್ಟ. ಹೀಗಾಗಿ ಕೇವಲ ಚಹಾ ಬದಲು ಅದಕ್ಕೆ ಶುಂಠಿ, ಲವಂಗ, ಏಲಕ್ಕಿ ಸೇರಿಸಿ ಚಹಾ ಕುಡಿದರೆ ಉತ್ತಮ.

4. ಪ್ರೊಟೀನ್‌ಗಳು

ನೀವು ಬೆಳಗ್ಗೆ ಸೇವಿಸುವ ಆಹಾರದಲ್ಲಿ ಪ್ರೊಟೀನ್‌ ಅಂಶ ಇರುವಂಥ ಆಹಾರವನ್ನೇ ಸೇವಿಸುವುದು ಒಳ್ಳೆಯದು. ಮೊಟ್ಟೆಯನ್ನು ಸೇವಿಸುವ ಅಭ್ಯಾಸವಿದ್ದರೆ ಅದನ್ನು ಸೇವಿಸಬಹುದು. ಇಲ್ಲದಿದ್ದರೆ, ಪನೀರ್‌ ಅಥವಾ ಪನೀರ್‌ನಂಥ ಪದಾರ್ಥವನ್ನು ಸೇವಿಸಬಹುದು.

6. ಸಲಾಡ್‌

ವಿವಿಧ ಹಣ್ಣುಗಳ ಸಲಾಡ್‌ ಮಾಡಿ ಸೇವಿಸಬಹುದು. ಇದನ್ನು ಇನ್ನಷ್ಟು ರುಚಿಯಾಗಿಸಲು ಡ್ರೈ ಫ್ರೂಟ್‌, ಹಣ್ಣುಗಳು ಹಾಗೂ ಸ್ವಲ್ಪ ಜೇನುತುಪ್ಪ ಸೇರಿಸಿ ಮಿಲ್ಕ್‌ಶೇಕ್‌ ಅಥವಾ ಜ್ಯೂಸ್‌ ಮಾಡಿ ಕುಡಿಯಬಹುದು. ಇದು ಸ್ವಾದಿಷ್ಟ ಹಾಗೂ ರುಚಿಕರ.

ಇದನ್ನೂ ಓದಿ: Health Tips: ಸೆರೆಲ್ಸ್‌, ಜ್ಯೂಸ್‌ಗಳೂ ಹೃದಯ ಕಾಯಿಲೆ ತರಬಲ್ಲವು; ಯಾವುದಕ್ಕೂ ಸೇವನೆ ಮಿತವಾಗಿರಲಿ

Exit mobile version