Site icon Vistara News

ಚೀನಾದಲ್ಲಿ ನಿಗೂಢ ನ್ಯುಮೋನಿಯಾ; ಆಸ್ಪತ್ರೆಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಲು ರಾಜ್ಯಗಳಿಗೆ ಸೂಚನೆ

China pneumonia scare, Center asks to states to review hospital preparedness

ನವದೆಹಲಿ: ಉತ್ತರ ಚೀನಾದಲ್ಲಿ (North China) ನಿಗೂಢ ನ್ಯುಮೋನಿಯಾ (China pneumonia scare) ಕಾಣಿಸಿಕೊಂಡ ಬೆನ್ನಲ್ಲೇ ಭಾರತ ಕೂಡ ತೀವ್ರ ಕಟ್ಟೆಚ್ಚರ ವಹಿಸುತ್ತಿದೆ. ಕೇಂದ್ರ ಆರೋಗ್ಯ ಸಚಿವಾಲಯವು (Union Health Ministry) ನವೆಂಬರ್ 26ರಂದು ಎಲ್ಲ ರಾಜ್ಯಗಳಿಗೆ (State Government) ಸೂಚನೆ ನೀಡಿದ್ದು, ಆಸ್ಪತ್ರೆಗಳ ಸಿದ್ಧತೆ (Hospitals) ಪರಿಶೀಲನೆ ಮಾಡುವಂತೆ ತಿಳಿಸಿದೆ. ಆದರೆ, ತೀವ್ರ ಎಚ್ಚರಿಕೆಯನ್ನು ನೀಡುವ ಅಗತ್ಯವಿಲ್ಲ ಎಂದು ಹೇಳಿದೆ.

ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೋವಿಡ್-19ರ ಸಂದರ್ಭದಲ್ಲಿ ಪರಿಷ್ಕೃತ ಕಣ್ಗಾವಲು ಕಾರ್ಯತಂತ್ರಕ್ಕಾಗಿ ಕಾರ್ಯಾಚರಣಾ ಮಾರ್ಗಸೂಚಿಗಳನ್ನು ಜಾರಿಗೊಳಿಸಲು ಸಲಹೆ ನೀಡಲಾಗಿದೆ ಕೇಂದ್ರ ಸಚಿವಾಲಯವು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಇನ್‌ಫ್ಲುಯೆಂಜಾ (ILT) ಮತ್ತು ತೀವ್ರ ಉಸಿರಾಟದ ತೊಂದರೆಯಂಥ ಅನಾರೋಗ್ಯಗಳ ಕುರಿತು ನಿಗಾವಹಿಸಲು ಈ ಮಾರ್ಗದರ್ಶಿಗಳು ಅಗತ್ಯವಾಗಿವೆ. ಐಎಲ್‌ಟಿ ಮ್ತತು ಎಸ್ಎಆರ್‌ಐಗಳ ಟ್ರೆಂಡ್‌ಗಳನ್ನು ಜಿಲ್ಲೆ ಮತ್ತು ರಾಜ್ಯಗಳು ಸಮೀಪದಿಂದ ನಿಗಾವಹಿಸುವ ಅವಶ್ಯಕತೆ ಇದೆ ಎಂದು ಮಾರ್ಗದರ್ಶಿಗಳಲ್ಲಿ ಸೂಚಿಸಲಾಗಿದೆ.

ಉತ್ತರ ಚೀನಾದ ಮಕ್ಕಳಲ್ಲಿ ಉಸಿರಾಟ ತೊಂದರೆಯ ಅನಾರೋಗ್ಯ ಹೆಚ್ಚುತ್ತಿರುವ ಬೆಳವಣಿಗೆಗಳನ್ನು ಕೇಂದ್ರ ಆರೋಗ್ಯ ಸಚಿವಾಲಯವು ಗಮನಿಸಿದ್ದು, ಇಡೀ ಪರಿಸ್ಥಿತಿಯನ್ನು ತೀವ್ರ ಕಟ್ಟೆಚ್ಚರಿಂದ ಪರಿಶೀಲನೆ ಮಾಡುತ್ತಿದೆ.

ಇನ್‌ಫ್ಲುಯೆಂಜಾ ಮತ್ತು ಚಳಿಗಾಲದ ಋತುವಿನಿಂದಾಗಿ ಉಸಿರಾಟದ ಕಾಯಿಲೆಯ ಪ್ರಕರಣಗಳಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ. ಭಾರತ ಸರ್ಕಾರವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ಯಾವುದೇ ಎಚ್ಚರಿಕೆಯ ಅಗತ್ಯವಿಲ್ಲ ಎಂದು ಸೂಚಿಸಿದೆ ಎಂದು ಆರೋಗ್ಯ ಸಚಿವಾಲಯವು ತಿಳಿಸಿದೆ.

ನವೆಂಬರ್ 24 ರಂದು ಚೀನಾ ದೇಶದಲ್ಲಿ ಉಸಿರಾಟದ ಕಾಯಿಲೆಯ ಪ್ರಕರಣಗಳು ಮತ್ತಷ್ಟು ಹೆಚ್ಚಾಗಬಹುದು ಎಂದು ಸೂಚಿಸಿದೆ. ಚಳಿಗಾಲ ಮತ್ತು ವಸಂತ ತಿಂಗಳುಗಳಲ್ಲಿ ಇನ್‌ಫ್ಲುಯೆಂಜಾ ಸೋಂಕುಗಳು ಹೆಚ್ಚಾಗುವ ನಿರೀಕ್ಷೆಯಿದೆ. ಆದರೆ, ಕೆಲವು ಪ್ರದೇಶಗಳಲ್ಲಿ ಮೈಕೋಪ್ಲಾಸ್ಮಾ ನ್ಯುಮೋನಿಯಾ ಸೋಂಕು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತದೆ ಎಂದು ಚೀನಾದ ಕ್ಯಾಬಿನೆಟ್ ಆಗಿರುವ ಸ್ಟೇಟ್ ಕೌನ್ಸಿಲ್ ಹೇಳಿದೆ.

ಈ ಮಧ್ಯೆ, ಉತ್ತರ ಚೀನಾದ ಮಕ್ಕಳಲ್ಲಿ ಹೆಚ್ಚುತ್ತಿರುವ ಉಸಿರಾಟ ತೊಂದರೆಗಳ ಕುರಿತು ವಿಶ್ವ ಆರೋಗ್ಯ ಸಂಸ್ಥೆಯು ತೀವ್ರ ನಿಗಾ ವಹಿಸುತ್ತಿದೆ. ಈ ಹೆಚ್ಚುತ್ತಿರುವ ಸೋಂಕಿಗೆ ಯಾವುದೇ ಹೊಸ ಅಥವಾ ಅಸಾಮಾನ್ಯ ವೈರಸ್ ಕಾರಣವಲ್ಲ ಎಂದು ವಿಶ್ವಸಂಸ್ಥೆ ಹೇಳಿದೆ.

ಮೇ ತಿಂಗಳಿನಿಂದ ಮೈಕೋಪ್ಲಾಸ್ಮಾ ನ್ಯುಮೋನಿ‌ಯಾ ಮತ್ತು ಅಕ್ಟೋಬರ್‌ನಿಂದ ಆರ್‌ಎಸ್‌ವಿ, ಅಡೆನೊವೈರಸ್ ಮತ್ತು ಇನ್‌ಫ್ಲುಯೆನ್ಸ ವೈರಸ್ ಸೋಂಕು ಹೆಚ್ಚಳದಿಂದಾಗಿ ಉತ್ತರ ಚೀನಾದ ಮಕ್ಕಳು ಹೆಚ್ಚಿನ ಸಂಖ್ಯೆಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಈ ಸುದ್ದಿಯನ್ನೂ ಓದಿ: ಚೀನಾಗೆ H9N2 ವೈರಸ್‌ ಕಾಟ! ತೀವ್ರ ನಿಗಾ ವಹಿಸಿದ ಭಾರತ ಸರ್ಕಾರ

Exit mobile version