ಲವಂಗ ನಮ್ಮ ಅಡುಗೆಮನೆಗಳಲ್ಲಿ ಸದಾ ಇರುವ ಮಸಾಲೆ. ಆದರೆ ಬಹುಮಂದಿಗೆ ಇದರ ಆರೋಗ್ಯ ಪ್ರಯೋಜನ ಗೊತ್ತೇ ಇಲ್ಲ. ಇದು ಆಹಾರದ ರುಚಿ ಮತ್ತು ಸುವಾಸನೆಯನ್ನು ಹೆಚ್ಚಿಸುವುದರ ಜತೆಗೆ ಔಷಧ ಕೂಡ ಹೌದು. ಪ್ರತಿ ದಿನ ನಿಯಮಿತವಾಗಿ ಲವಂಗವನ್ನು ಸೇವಿಸುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳಿಂದ ದೂರವಿರಬಹುದು. ಲವಂಗವನ್ನು ಆಯುರ್ವೇದದಲ್ಲಿಯೂ ಬಳಕೆ ಮಾಡಲಾಗುತ್ತದೆ. ಲವಂಗ ಹೇಗೆ ಆರೋಗ್ಯಕ್ಕೆ ಬಹಳ ಪರಿಣಾಮಕಾರಿ (Clove benefits) ಅಂತ ನೋಡೋಣ.
ಲವಂಗದಲ್ಲಿ ರಂಜಕ, ಸೋಡಿಯಂ, ಪೊಟ್ಯಾಸಿಯಮ್, ವಿಟಮಿನ್ ಕೆ, ಫೈಬರ್, ಒಮೆಗಾ 3 ಕೊಬ್ಬಿನಾಮ್ಲಗಳು, ಮೆಗ್ನೀಸಿಯಮ್, ಕಬ್ಬಿಣ ಅಂಶ ಸೇರಿದಂತೆ ಅನೇಕ ಪೋಷಕಾಂಶಗಳಿವೆ. ಲವಂಗವು ರೋಗನಿರೋಧಕ ಸಾಮರ್ಥ್ಯವನ್ನೂ ವೃದ್ಧಿಸುತ್ತದೆ. ದೇಹದ ಅನೇಕ ರೋಗಗಳನ್ನು ಬುಡದಿಂದ ತೆಗೆದುಹಾಕಲು ಸಹಾಯ ಮಾಡುತ್ತದೆ.
- ಲವಂಗದ ರಾತ್ರಿ ಬಳಕೆ ಮಾಡುವುದು ಬಹಳ ಪರಿಣಾಮಕಾರಿ. ರಾತ್ರಿ ಮಲಗುವ ಮೊದಲು 2 ಲವಂಗ ತಿಂದು ನಂತರ 1 ಗ್ಲಾಸ್ ಬಿಸಿನೀರನ್ನು ಕುಡಿಯಿರಿ. ಇದರಿಂದ ಗ್ಯಾಸ್ಟ್ರಿಕ್ ಸಮಸ್ಯೆ, ಹೊಟ್ಟೆ ಉರಿತ, ಕೀಲು ನೋವು ಮುಂತಾದ ಸಮಸ್ಯೆಗಳು ಇರುವುದಿಲ್ಲ. ಮಲಬದ್ಧತೆ, ಹೊಟ್ಟೆ ನೋವು, ಗ್ಯಾಸ್ಟ್ರಿಕ್ ಮತ್ತು ಅಜೀರ್ಣ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
- ಹಲ್ಲು ನೋವು ಅಥವಾ ಹಲ್ಲಿನಲ್ಲಿ ಹುಳುಗಳ ಸಮಸ್ಯೆ ಇದ್ದರೆ, ರಾತ್ರಿ ಮಲಗುವ ಮುನ್ನ 2 ಲವಂಗವನ್ನು ಸರಿಯಾಗಿ ಅಗಿಯಿರಿ ಮತ್ತು ನಂತರ 1 ಲೋಟ ಬೆಚ್ಚಗಿನ ನೀರನ್ನು ಕುಡಿಯಿರಿ.
- ಲವಂಗವನ್ನು ತಿನ್ನುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ, ತಲೆನೋವು ನಿವಾರಣೆಗೆ ಸಹಾಯ ಮಾಡುತ್ತದೆ, ಬಾಯಿಯಿಂದ ಕೆಟ್ಟ ವಾಸನೆಯ ಸಮಸ್ಯೆ ಇದ್ದರೂ ಲವಂಗ ನಿಮಗೆ ಪ್ರಯೋಜನಕಾರಿಯಾಗುತ್ತದೆ.
- ಗಂಟಲಿಗೆ ಸಂಬಂಧಿಸಿದ ಸಮಸ್ಯೆ ಇದ್ದರೆ, ಉದಾಹರಣೆಗೆ – ಗಂಟಲು ಸಮಸ್ಯೆ, ಗಂಟಲು ನೋವು, ಗಂಟಲಲ್ಲಿ ಕಫ, ಲವಂಗ ಕೂಡ ಈ ಎಲ್ಲ ಸಮಸ್ಯೆಗಳನ್ನು ತೆಗೆದು ಹಾಕುತ್ತದೆ.
- ಲವಂಗವು ಖಾರವಾಗಿರುವ ಕಾರಣ ಅಗಿಯುವುದು ಅಥವಾ ತಿನ್ನಲು ನಿಮಗೆ ಕಷ್ಟವಾದರೆ, ಲವಂಗವನ್ನ ಚೆನ್ನಾಗಿ ಪುಡಿಮಾಡಿ ಅದನ್ನ 1 ಲೋಟ ನೀರಿನಲ್ಲಿ 2-3 ನಿಮಿಷ ಕುದಿಸಿ ಆರಿಸಿ ಕುಡಿಯಿರಿ.
- ಮಕ್ಕಳಿಗೆ ಮಲಬದ್ಧತೆ ಅಥವಾ ಶೀತ ಕೆಮ್ಮು ಸಮಸ್ಯೆ ಇದ್ದರೆ, 1 ಲವಂಗವನ್ನು ಚೆನ್ನಾಗಿ ಪುಡಿಮಾಡಿ ಅರ್ಧ ಟೀ ಚಮಚ ಜೇನುತುಪ್ಪದಲ್ಲಿ ಹಾಕಿ ಮಕ್ಕಳಿಗೆ ಕೊಡಿ.
ಇದನ್ನೂ ಓದಿ: Lose Belly Fat: ಈ ಮಸಾಲೆಗಳು ರುಚಿ ಹೆಚ್ಚಿಸುತ್ತವೆ, ಆದರೆ ಹೊಟ್ಟೆ ಇಳಿಸುತ್ತವೆ!