ನವದಹೆಲಿ: ಡೆಂಗೆ ಜ್ವರಬಾಧೆಗೆ (dengue Fever) ಮದ್ದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಡೆಂಗೆ ಬರದಂತೆ ತಡೆಯುವುದು ನಮಗಿರುವ ಪರಿಹಾರ ಮಾರ್ಗ. ಆದರೆ, ಈಗ ಖುಷಿಯ ಸುದ್ದಿಯೊಂದು ಹೊರ ಬಿದ್ದಿದೆ. ಜಾನ್ಸನ್ ಆ್ಯಂಡ್ ಜಾನ್ಸನ್ (Johnson & Johnson) ಕಂಪನಿಯು ಡೆಂಗೆ ತಡೆಗೆ ಪ್ರಯೋಗಾತ್ಮಕ ಮಾತ್ರೆಯನ್ನು ಅಭಿವೃದ್ಧಿಪಡಿಸಿದ್ದು(Pill for Dengue), ಚಿಕ್ಕ ಮಾನವ ಗುಂಪಿನ ಮೇಲೆ ನಡೆಸಿದ ಪ್ರಯೋಗದಲ್ಲಿ (Human Trails) ಸಕಾರಾತ್ಮಕ ಫಲಿತಾಂಶ (Positive Results) ನೀಡಿದೆ. ಡೆಂಗೆ ವಿರುದ್ಧ ಆಂಟಿವೈರಲ್ ಚಟುವಟಿಕೆಯನ್ನು ಪ್ರದರ್ಶಿಸಿದ ಮಾತ್ರೆ, ಹಲವಾರು ರೋಗಿಗಳಲ್ಲಿ ವೈರಸ್‌ನ ಒಂದು ರೂಪದಿಂದ ರಕ್ಷಿಸಲು ಸಾಧ್ಯವಾಯಿತು ಎಂದು ರಾಯಿಟರ್ಸ್ ವರದಿ ಮಾಡಿದೆ.
ಡೆಂಗೆ ಜ್ವರ ಸಾಮಾನ್ಯವಾಗಿ ಲಕ್ಷಣರಹಿತವಾಗಿದ್ದು, ತೀವ್ರವಾದ ಕೀಲು ನೋವು ಮತ್ತು ಸೆಳೆತವನ್ನು ಉಂಟುಮಾಡುವುದಕ್ಕೆ ಹೆಸರುವಾಸಿಯಾಗಿದೆ. ವಿಶೇಷವಾಗಿ ಏಷ್ಯಾ ಮತ್ತು ಲ್ಯಾಟಿನ್ ಅಮೆರಿಕಾದಲ್ಲಿ ಪ್ರತಿ ವರ್ಷ ಲಕ್ಷಾಂತರ ಜನರ ಡೆಂಗೆಯಿಂದ ಬಳಲುತ್ತಾರೆ. ಪ್ರಸ್ತುತ ಯಾವುದೇ ನಿರ್ದಿಷ್ಟ ಚಿಕಿತ್ಸೆಗಳು ಲಭ್ಯವಿಲ್ಲ. ಸುಮಾರು ಪ್ರಕರಣಗಳಲ್ಲಿ ರೋಗಿಯು ಮೃತಪಟ್ಟ ಉದಾಹರಣೆಗಳಿವೆ. ಹಾಗಾಗಿ, ಡೆಂಗೆ ನಿಯಂತ್ರಣದಲ್ಲಿ ಈ ಪ್ರಯೋಗಕ್ಕೆ ಒಳಪಡುತ್ತಿರುವ ಮಾತ್ರೆ ಪ್ರಮುಖ ಹೆಜ್ಜೆಯಾಗಲಿದೆ.
ಜಾನ್ಸ್ ಹಾಪ್ಕಿನ್ಸ್ ಬ್ಲೂಮ್‌ಬರ್ಗ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ಸಹಯೋಗದೊಂದಿಗೆ ನಡೆಸಿದ ಪ್ರಯೋಗವು 10 ರೋಗಿಗಳನ್ನು ಒಳಗೊಂಡಿತ್ತು. ಇವರಿಗೆ ಡೆಂಗೆಯನ್ನು ಇಂಜೆಕ್ಟ್ ಮಾಡುವುದಕ್ಕಿಂತ ಐದು ದಿನ ಮೊದಲು ಹೈ ಡೋಸ್ ಮಾತ್ರೆಯನ್ನು ನೀಡಲಾಗಿತ್ತು ಮತ್ತು ಅವರು ಬಳಿಕವೂ 21 ದಿನಗಳ ಕಾಲ ಮಾತ್ರೆ ತೆಗೆದುಕೊಳ್ಳುವುದನ್ನು ಮುಂದುವರಿಸಿದರು ಎಂದು ವರಿಯಲ್ಲಿ ತಿಳಿಸಲಾಗಿದೆ.
ಈ ಸುದ್ದಿಯನ್ನೂ ಓದಿ: ICMR: ಪುರುಷರಿಗೂ ಗರ್ಭನಿರೋಧಕ ಚುಚ್ಚುಮದ್ದು! ಕ್ಲಿನಿಕಲ್ ಟ್ರಯಲ್ಸ್‌ನಲ್ಲಿ ಐಸಿಎಂಆರ್‌ನ ಔಷಧ ಸಕ್ಸೆಸ್
ಪ್ರಯೋಗದಲ್ಲಿ ಭಾಗವಹಿಸಿದ 10 ಮಂದಿ ಪೈಕಿ ಆರು ಮಂದಿ ರೋಗಕಾರಕಕ್ಕೆ ಒಡ್ಡಿಕೊಂಡ ನಂತರ ಅವರ ರಕ್ತದಲ್ಲಿ ಪತ್ತೆ ಮಾಡಬಹುದಾದ ಡೆಂಗ್ಯೂ ವೈರಸ್ ಅನ್ನು ಕಂಡು ಬರಲಿಲ್ಲ. 85 ದಿನಗಳ ಮೇಲ್ವಿಚಾರಣೆಯಲ್ಲಿ ಸೋಂಕಿಗೆ ಪ್ರತಿರಕ್ಷಣಾ ಪ್ರತಿಕ್ರಿಯೆಯ ಯಾವುದೇ ಚಿಹ್ನೆಗಳನ್ನು ತೋರಿಸಲಿಲ್ಲ ಎಂದು ಹೇಳಲಾಗಿದೆ.
ಎರಡು ವೈರಲ್ ಪ್ರೋಟೀನ್‌ಗಳ ಕ್ರಿಯೆಯನ್ನು ತಡೆಯುವ ಮೂಲಕ ಔಷಧವು ಕಾರ್ಯನಿರ್ವಹಿಸುತ್ತದೆ, ಇದರಿಂದಾಗಿ ವೈರಸ್ ಪುನರಾವರ್ತನೆಯಾಗದಂತೆ ತಡೆಯುತ್ತದೆ. ಜಾನ್ಸನ್ ಮತ್ತು ಜಾನ್ಸನ್ ಪ್ರಕಾರ, ಎಲ್ಲಾ ಪ್ರಯೋಗದಲ್ಲಿ ಭಾಗವಹಿಸುವವರು ಈ ಮಾತ್ರೆಯನ್ನು ಚೆನ್ನಾಗಿ ಸಹಿಸಿಕೊಂಡಿದ್ದಾರೆ. ಮುಂದಿನ ಪರೀಕ್ಷೆಗಳಲ್ಲಿ ಈ ಮಾತ್ರೆ ಬಗ್ಗೆ ಇನ್ನಷ್ಟು ಸ್ಪಷ್ಟವಾದ ನಿರ್ಧಾರಗಳು ಹೊರ ಬೀಳಬಹುದು.