ಇಂದಿನ ಧಾವಂತದ (Health Tips Kannada) ಬದುಕಿನಲ್ಲಿ ಜೀವನಶೈಲಿಯ ಸಮಸ್ಯೆಗಳಿಂದಾಗಿ ಆರೋಗ್ಯ ಹದಗೆಡುತ್ತಿರುವುದು ಸಾಮಾನ್ಯವಾಗಿಬಿಟ್ಟಿದೆ. ಇದರಿಂದಾಗಿ ಬೊಜ್ಜು, ಒತ್ತಡ, ಉದ್ವೇಗ ಸೇರಿದಂತೆ ನಾನಾ ಸಮಸ್ಯೆಗಳು ಸಾಮಾನ್ಯ. ಹಾರ್ಮೋನಿನ ಏರುಪೇರು ಕೂಡಾ ಈಗ ಅತ್ಯಂತ ಹೆಚ್ಚಾಗುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಹಾರ್ಮೋನಿನ ಏರುಪೇರು ಕೇವಲ ನಿಮ್ಮ ಭಾವನೆ, ಮಾನಸಿಕತೆಯ ಮೇಲೆ ಮಾತ್ರವಲ್ಲ, ಒಟ್ಟು ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ, ಹಾರ್ಮೋನಿನ ಸಮಸ್ಯೆ ಕಂಡಾಗಲೆಲ್ಲ ಅದರ ಮೂಲವನ್ನು ಕಂಡು ಹಿಡಿಯುವುದು ಅತ್ಯಾವಶ್ಯಕ. ನಮ್ಮ ದಿನನಿತ್ಯದ ಸಣ್ಣ ಪುಟ್ಟ ಅಭ್ಯಾಸಗಳೂ ಕೂಡಾ ಆರೋಗ್ಯದ ಮೇಳೆ ದೊಡ್ಡ ಪರಿಣಾಮವನ್ನೇ ಬೀರಿರಬಹುದು. ಆದರೆ ಅದರ ಅರಿವು ನಮಗಾಗುವುದಿಲ್ಲ ಅಷ್ಟೇ. ಹಾಗಾಗಿ, ಯಾವ ಅಭ್ಯಾಸವನ್ನು ಬದಲಾಯಿಸುವ ಅಗತ್ಯವಿದೆ ಎಂಬುದನ್ನು ನಾವು ಪ್ರಾಮಾಣಿಕವಾಗಿ ಕಂಡುಕೊಳ್ಳಬೇಕು. ಆರೋಗ್ಯಯುತ ಜೀವನದೆದುರು ನಮ್ಮ ಯಾವ ಐಶ್ವರ್ಯವೂ ದೊಡ್ಡದಲ್ಲ. ಬನ್ನಿ, ಹಾರ್ಮೋನಿನ ಏರುಪೇರಿಗೆ ನಮ್ಮ ಯಾವ ಬಗೆಯ ಜೀವನಕ್ರಮ ಕಾರಣವಿರಬಹುದು ಎಂಬುದನ್ನು ನೋಡೋಣ.
ಊಟದ ನಂತರ ಸಿಹಿ ತಿನ್ನುವುದು
ಹೌದು. ವಿಷಯ ಸಿಂಪಲ್ ಆಗಿ ಕಾಣಬಹುದು. ನಮ್ಮಲ್ಲಿ ಹಲವರಿಗೆ ಊಟದ ನಂತರ ಸಿಹಿ ತಿನ್ನಬೇಕೆಂಬ ಬಯಕೆಯಾಗುವುದು ಉಂಟು. ಏನಾದರೊಂದು ಸಿಹಿಯನ್ನು ಊಟದ ನಂತರ ತಿಂದರೆ ಸಮಾಧಾನದ ಖುಷಿ ಸಿಗುವುದುಂಟು. ಆದರೆ, ಇದು ದೇಹದಲ್ಲಿರುವ ಸಕ್ಕರೆಯ ಮಟ್ಟವನ್ನು ಏರುಪೇರು ಮಾಡಬಹುದು. ಇನ್ಸುಲಿನ್ ಏರುಪೇರಿನಿಂದಾಗಿ ಹಾರ್ಮೋನೂ ಏರುಪೇರಾಗುವುದು ಸಹಜ.
ಮಲಗುವ ಮೊದಲು ಫೋನ್ ನೋಡುವ ಅಭ್ಯಾಸ
ಮಲಗುವ ಮೊದಲು ಫೋನ್ ಹಿಡಿದು ಗಂಟೆಗಟ್ಟಲೆ ಸಾಮಾಜಿಕ ಜಾಲತಾಣ, ಸಿನಿಮಾ ವೀಕ್ಷಣೆ ಇತ್ಯಾದಿ ರಿಲ್ಯಾಕ್ಸಿಂಗ್ ಅಭ್ಯಾಸ ಹಲವರಿಗಿದೆ. ಆದರೆ, ಇವು ನಮ್ಮ ಮಿದುಳನ್ನು ಖಂಡಿತ ರಿಲ್ಯಾಕ್ಸ್ ಮಾಡದು. ಇದರಲ್ಲಿರುವ ಹಾನಿಕಾರಕ ಕಿರಣಗಳು ನಮ್ಮ ಮಿದುಳನ್ನು ಅಲರ್ಟ್ ಆಗಿರುವಂತೆ ಮಾಡಿ, ನಿದ್ದೆಯನ್ನು ಓಡಿಸುತ್ತದೆ. ಜೊತೆಗೆ ಇದು ಮೆಲಟೋನಿನ್ ಹಾರ್ಮೋನಿನ ಉತ್ಪಾದನೆಯನ್ನು ಮೊಟಕುಗಳಿಸುತ್ತದೆ. ಪರಿಣಾಮವಾಗಿ ನಮ್ಮ ನಿದ್ದೆ ಹಾಳಾಗುತ್ತದೆ. ಸರಿಯಾದ ಹೊತ್ತಿನಲ್ಲಿ ನಿದ್ದೆ ಮಾಡದೆ, ಇಡೀ ದಿನ ಸುಸ್ತಾದ ಅನುಭವ ನೀಡುತ್ತದೆ.
ಸಂಜೆ ನಾಲ್ಕರ ನಂತರ ಕೆಫೀನ್
ಸಂಜೆ ಚಹಾ/ಕಾಫಿ ಕುಡಿಯದಿದ್ದರೆ ಅನೇಕರಿಗೆ ಏನೋ ಕಳೆದುಕೊಂಡ ಭಾವ. ಹೌದು. ಆದರೆ, ಸಂಜೆ ನಾಲ್ಕು ಗಂಟೆ ಕಳೆದ ಮೇಲೆ ಕೆಫೀನ್‌ಯುಕ್ತ ಚಹಾ, ಕಾಫಿಯಂತಹ ಪೇಯಗಳು ಒಳ್ಳೆಯದಲ್ಲ. ಇವು ನೇರವಾಗಿ ಕಾರ್ಟಿಸಾಲ್ ಮೇಲೆ ಪರಿಣಾಮ ಬೀರುತ್ತದೆ. ಒತ್ತಡವನ್ನು ನಿಭಾಯಿಸಲು ಕಾರ್ಟಿಸಾಲ್ ಹಾರ್ಮೋನ್ ಬೇಕೇ ಬೇಕು. ಇದು ಏರುಪೇರಾದರೆ, ಒತ್ತಡವೂ ಹೆಚ್ಚುತ್ತದೆ. ಹಾಗಾಗಿ, ಕಾಫಿ, ಚಹಾ ಹಾಗೂ ಇತರ ಕಾರ್ಬೋನೇಟೆಡ್ ಪೇಯಗಳನ್ನು ಮಲಗುವ ೧೦ ಗಂಟೆಗಳಿಗೂ ಮೊದಲೇ ಕುಡಿಯಿರಿ.
ಇದನ್ನೂ ಓದಿ: How safe are apples to eat: ನೀವು ತಿನ್ನುವ ಸೇಬು ಎಷ್ಟು ಸುರಕ್ಷಿತ? ಸೇಬು ಬಾಯಿಗಿಡುವ ಮುನ್ನ ಯೋಚಿಸಿ!
ಕಾರ್ಬೋಹೈಡ್ರೇಟ್ ಅನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದು
ಕಾರ್ಬೋಹೈಡ್ರೇಟ್ ಅಧಿಕವಾಗಿಉವ ಆಹಾರಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವ ಅಭ್ಯಾಸವಿದ್ದರೆ ಅದನ್ನು ಬಿಡಿ. ಕಾರ್ಬೋಹೈಡ್ರೇಟ್ ಖಾಲಿ ಹೊಟ್ಟೆಯಲ್ಲಿ ಸೇರಿದಾಗ, ನೇರವಾಗಿ ಇನ್ಸುಲಿನ್ ಮೇಲೆ ಪರಿಣಾಮ ಬೀರುತ್ತದೆ. ಇದು ಮಧುಮೇಹಕ್ಕೂ ಕಾರಣವಾಗಬಹುದು.
ಕಡಿಮೆ ತರಕಾರಿ ಸೇವನೆ
ಕೆಲವರಿಗೆ ತರಕಾರಿಗಳು ಎಂದರೆ ಅಸಡ್ಡೆ. ತರಕಾರಿಗಳನ್ನು ಕಡಿಮೆ ತರಕಾರಿಗಳ ಸೇವನೆ ಹಾಗೂ ಹೆಚ್ಚು ಕೊಬ್ಬಿನ ಅಹಾರಗಳನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ಇಸ್ಟ್ರೋಜನ್ ಹಾರ್ಮೋನಿನ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಹಾರ್ಮೋನಿನ ಅಸಮತೋಲನವಾಗುತ್ತದೆ. ತರಕಾರಿಗಳನ್ನು ಹೆಚ್ಚು ಸೇವಿಸುವುದು ಆರೋಗ್ಯದ ದೃಷ್ಠಿಯಲ್ಲಿ ಅತ್ಯಂತ ಅವಶ್ಯಕ.