Health Tips Kannada: ಈ 5 ಅಭ್ಯಾಸಗಳು ನಿಮ್ಮ ಹಾರ್ಮೋನಿನ ಏರುಪೇರಿಗೆ ಕಾರಣವಾಗಿರಬಹುದು! - Vistara News

ಆರೋಗ್ಯ

Health Tips Kannada: ಈ 5 ಅಭ್ಯಾಸಗಳು ನಿಮ್ಮ ಹಾರ್ಮೋನಿನ ಏರುಪೇರಿಗೆ ಕಾರಣವಾಗಿರಬಹುದು!

Health Tips Kannada: ಹಾರ್ಮೋನಿನ ಏರುಪೇರು ಕೇವಲ ನಿಮ್ಮ ಭಾವನೆ, ಮಾನಸಿಕತೆಯ ಮೇಲೆ ಮಾತ್ರವಲ್ಲ, ಒಟ್ಟು ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ, ಹಾರ್ಮೋನಿನ ಸಮಸ್ಯೆ ಕಂಡಾಗಲೆಲ್ಲ ಅದರ ಮೂಲವನ್ನು ಕಂಡು ಹಿಡಿಯುವುದು ಅತ್ಯಾವಶ್ಯಕ. ನಮ್ಮ ದಿನನಿತ್ಯದ ಸಣ್ಣ ಪುಟ್ಟ ಅಭ್ಯಾಸಗಳೂ ಕೂಡಾ ಆರೋಗ್ಯದ ಮೇಳೆ ದೊಡ್ಡ ಪರಿಣಾಮವನ್ನೇ ಬೀರಿರಬಹುದು. ಈ ಕುರಿತು ಎಚ್ಚರಿಸುವ ಲೇಖನ ಇಲ್ಲಿದೆ.

VISTARANEWS.COM


on

Health Tips Kannada
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಇಂದಿನ ಧಾವಂತದ (Health Tips Kannada) ಬದುಕಿನಲ್ಲಿ ಜೀವನಶೈಲಿಯ ಸಮಸ್ಯೆಗಳಿಂದಾಗಿ ಆರೋಗ್ಯ ಹದಗೆಡುತ್ತಿರುವುದು ಸಾಮಾನ್ಯವಾಗಿಬಿಟ್ಟಿದೆ. ಇದರಿಂದಾಗಿ ಬೊಜ್ಜು, ಒತ್ತಡ, ಉದ್ವೇಗ ಸೇರಿದಂತೆ ನಾನಾ ಸಮಸ್ಯೆಗಳು ಸಾಮಾನ್ಯ. ಹಾರ್ಮೋನಿನ ಏರುಪೇರು ಕೂಡಾ ಈಗ ಅತ್ಯಂತ ಹೆಚ್ಚಾಗುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಹಾರ್ಮೋನಿನ ಏರುಪೇರು ಕೇವಲ ನಿಮ್ಮ ಭಾವನೆ, ಮಾನಸಿಕತೆಯ ಮೇಲೆ ಮಾತ್ರವಲ್ಲ, ಒಟ್ಟು ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ, ಹಾರ್ಮೋನಿನ ಸಮಸ್ಯೆ ಕಂಡಾಗಲೆಲ್ಲ ಅದರ ಮೂಲವನ್ನು ಕಂಡು ಹಿಡಿಯುವುದು ಅತ್ಯಾವಶ್ಯಕ. ನಮ್ಮ ದಿನನಿತ್ಯದ ಸಣ್ಣ ಪುಟ್ಟ ಅಭ್ಯಾಸಗಳೂ ಕೂಡಾ ಆರೋಗ್ಯದ ಮೇಳೆ ದೊಡ್ಡ ಪರಿಣಾಮವನ್ನೇ ಬೀರಿರಬಹುದು. ಆದರೆ ಅದರ ಅರಿವು ನಮಗಾಗುವುದಿಲ್ಲ ಅಷ್ಟೇ. ಹಾಗಾಗಿ, ಯಾವ ಅಭ್ಯಾಸವನ್ನು ಬದಲಾಯಿಸುವ ಅಗತ್ಯವಿದೆ ಎಂಬುದನ್ನು ನಾವು ಪ್ರಾಮಾಣಿಕವಾಗಿ ಕಂಡುಕೊಳ್ಳಬೇಕು. ಆರೋಗ್ಯಯುತ ಜೀವನದೆದುರು ನಮ್ಮ ಯಾವ ಐಶ್ವರ್ಯವೂ ದೊಡ್ಡದಲ್ಲ. ಬನ್ನಿ, ಹಾರ್ಮೋನಿನ ಏರುಪೇರಿಗೆ ನಮ್ಮ ಯಾವ ಬಗೆಯ ಜೀವನಕ್ರಮ ಕಾರಣವಿರಬಹುದು ಎಂಬುದನ್ನು ನೋಡೋಣ.

Sweet Pongal

ಊಟದ ನಂತರ ಸಿಹಿ ತಿನ್ನುವುದು

ಹೌದು. ವಿಷಯ ಸಿಂಪಲ್‌ ಆಗಿ ಕಾಣಬಹುದು. ನಮ್ಮಲ್ಲಿ ಹಲವರಿಗೆ ಊಟದ ನಂತರ ಸಿಹಿ ತಿನ್ನಬೇಕೆಂಬ ಬಯಕೆಯಾಗುವುದು ಉಂಟು. ಏನಾದರೊಂದು ಸಿಹಿಯನ್ನು ಊಟದ ನಂತರ ತಿಂದರೆ ಸಮಾಧಾನದ ಖುಷಿ ಸಿಗುವುದುಂಟು. ಆದರೆ, ಇದು ದೇಹದಲ್ಲಿರುವ ಸಕ್ಕರೆಯ ಮಟ್ಟವನ್ನು ಏರುಪೇರು ಮಾಡಬಹುದು. ಇನ್ಸುಲಿನ್‌ ಏರುಪೇರಿನಿಂದಾಗಿ ಹಾರ್ಮೋನೂ ಏರುಪೇರಾಗುವುದು ಸಹಜ.

Mobile Overuse

ಮಲಗುವ ಮೊದಲು ಫೋನ್‌ ನೋಡುವ ಅಭ್ಯಾಸ

ಮಲಗುವ ಮೊದಲು ಫೋನ್‌ ಹಿಡಿದು ಗಂಟೆಗಟ್ಟಲೆ ಸಾಮಾಜಿಕ ಜಾಲತಾಣ, ಸಿನಿಮಾ ವೀಕ್ಷಣೆ ಇತ್ಯಾದಿ ರಿಲ್ಯಾಕ್ಸಿಂಗ್‌ ಅಭ್ಯಾಸ ಹಲವರಿಗಿದೆ. ಆದರೆ, ಇವು ನಮ್ಮ ಮಿದುಳನ್ನು ಖಂಡಿತ ರಿಲ್ಯಾಕ್ಸ್‌ ಮಾಡದು. ಇದರಲ್ಲಿರುವ ಹಾನಿಕಾರಕ ಕಿರಣಗಳು ನಮ್ಮ ಮಿದುಳನ್ನು ಅಲರ್ಟ್‌ ಆಗಿರುವಂತೆ ಮಾಡಿ, ನಿದ್ದೆಯನ್ನು ಓಡಿಸುತ್ತದೆ. ಜೊತೆಗೆ ಇದು ಮೆಲಟೋನಿನ್‌ ಹಾರ್ಮೋನಿನ ಉತ್ಪಾದನೆಯನ್ನು ಮೊಟಕುಗಳಿಸುತ್ತದೆ. ಪರಿಣಾಮವಾಗಿ ನಮ್ಮ ನಿದ್ದೆ ಹಾಳಾಗುತ್ತದೆ. ಸರಿಯಾದ ಹೊತ್ತಿನಲ್ಲಿ ನಿದ್ದೆ ಮಾಡದೆ, ಇಡೀ ದಿನ ಸುಸ್ತಾದ ಅನುಭವ ನೀಡುತ್ತದೆ.

ಸಂಜೆ ನಾಲ್ಕರ ನಂತರ ಕೆಫೀನ್

ಸಂಜೆ ಚಹಾ/ಕಾಫಿ ಕುಡಿಯದಿದ್ದರೆ ಅನೇಕರಿಗೆ ಏನೋ ಕಳೆದುಕೊಂಡ ಭಾವ. ಹೌದು. ಆದರೆ, ಸಂಜೆ ನಾಲ್ಕು ಗಂಟೆ ಕಳೆದ ಮೇಲೆ ಕೆಫೀನ್‌ಯುಕ್ತ ಚಹಾ, ಕಾಫಿಯಂತಹ ಪೇಯಗಳು ಒಳ್ಳೆಯದಲ್ಲ. ಇವು ನೇರವಾಗಿ ಕಾರ್ಟಿಸಾಲ್‌ ಮೇಲೆ ಪರಿಣಾಮ ಬೀರುತ್ತದೆ. ಒತ್ತಡವನ್ನು ನಿಭಾಯಿಸಲು ಕಾರ್ಟಿಸಾಲ್‌ ಹಾರ್ಮೋನ್‌ ಬೇಕೇ ಬೇಕು. ಇದು ಏರುಪೇರಾದರೆ, ಒತ್ತಡವೂ ಹೆಚ್ಚುತ್ತದೆ. ಹಾಗಾಗಿ, ಕಾಫಿ, ಚಹಾ ಹಾಗೂ ಇತರ ಕಾರ್ಬೋನೇಟೆಡ್‌ ಪೇಯಗಳನ್ನು ಮಲಗುವ ೧೦ ಗಂಟೆಗಳಿಗೂ ಮೊದಲೇ ಕುಡಿಯಿರಿ.

ಇದನ್ನೂ ಓದಿ: How safe are apples to eat: ನೀವು ತಿನ್ನುವ ಸೇಬು ಎಷ್ಟು ಸುರಕ್ಷಿತ? ಸೇಬು ಬಾಯಿಗಿಡುವ ಮುನ್ನ ಯೋಚಿಸಿ!

ಕಾರ್ಬೋಹೈಡ್ರೇಟ್‌ ಅನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದು

ಕಾರ್ಬೋಹೈಡ್ರೇಟ್‌ ಅಧಿಕವಾಗಿಉವ ಆಹಾರಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವ ಅಭ್ಯಾಸವಿದ್ದರೆ ಅದನ್ನು ಬಿಡಿ. ಕಾರ್ಬೋಹೈಡ್ರೇಟ್‌ ಖಾಲಿ ಹೊಟ್ಟೆಯಲ್ಲಿ ಸೇರಿದಾಗ, ನೇರವಾಗಿ ಇನ್ಸುಲಿನ್‌ ಮೇಲೆ ಪರಿಣಾಮ ಬೀರುತ್ತದೆ. ಇದು ಮಧುಮೇಹಕ್ಕೂ ಕಾರಣವಾಗಬಹುದು.

ಕಡಿಮೆ ತರಕಾರಿ ಸೇವನೆ

ಕೆಲವರಿಗೆ ತರಕಾರಿಗಳು ಎಂದರೆ ಅಸಡ್ಡೆ. ತರಕಾರಿಗಳನ್ನು ಕಡಿಮೆ ತರಕಾರಿಗಳ ಸೇವನೆ ಹಾಗೂ ಹೆಚ್ಚು ಕೊಬ್ಬಿನ ಅಹಾರಗಳನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ಇಸ್ಟ್ರೋಜನ್‌ ಹಾರ್ಮೋನಿನ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಹಾರ್ಮೋನಿನ ಅಸಮತೋಲನವಾಗುತ್ತದೆ. ತರಕಾರಿಗಳನ್ನು ಹೆಚ್ಚು ಸೇವಿಸುವುದು ಆರೋಗ್ಯದ ದೃಷ್ಠಿಯಲ್ಲಿ ಅತ್ಯಂತ ಅವಶ್ಯಕ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Dark Circles: ಕಣ್ಣಿನ ಸುತ್ತಲಿನ ಕಪ್ಪುವರ್ತುಲದಿಂದ ಶಾಶ್ವತ ಪರಿಹಾರ ಬೇಕೇ? ಇಲ್ಲಿವೆ ಸರಳ ಉಪಾಯಗಳು!

Dark Circles: ಕಣ್ಣ ಸುತ್ತ ಕೊಂಚ ಕಪ್ಪು ವರ್ತುಲ ಮೂಡಿದರೂ ಸಾಕು, ಕಣ್ಣು ಕಳೆಗುಂದಿದಂತೆ ಅನಿಸುತ್ತದೆ. ಮುಖ ನಿಸ್ತೇಜವಾಗಿ, ಕಳಾಹೀನವಾಗಿ ಕಾಣುತ್ತದೆ. ತಾತ್ಕಾಲಿಕವಾಗಿ ಕನ್ಸೀಲರ್‌ನಿಂದ ನೀವು ಈ ಕಪ್ಪು ವರ್ತುಲವನ್ನು ಮುಚ್ಚಿ ಹಾಕಬಹುದು. ಆದರೆ, ಶಾಶ್ವತವಾಗಿ ಅಲ್ಲ. ಏನೇ ಮೇಕಪ್‌ ಮಾಡಿದರೂ, ಒಳಗಿನಿಂದ ತುಳುಕುವ ಸೌಂದರ್ಯ ಅತ್ಯಂತ ಮುಖ್ಯ. ಕಪ್ಪು ವರ್ತುಲವನ್ನು ಶಾಶ್ವತವಾಗಿ ದೂರ ಮಾಡಬೇಕಾದರೆ, ಕೆಲವು ಮನೆಮದ್ದುಗಳನ್ನು ಮಾಡಬಹುದು. ಆ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

dark circles
Koo

ಯಾವುದೋ ಫಂಕ್ಷನ್‌ಗೆ ಚೆನ್ನಾಗಿ ಡ್ರೆಸ್‌ ಮಾಡಿಕೊಂಡು ರೆಡಿಯಾಗಿರುತ್ತೀರಿ. ಕನ್ನಡಿ ಮುಂದೆ ನಿಂತು ನಿಮ್ಮನ್ನೇ ನೀವು ಮೇಲಿನಿಂದ ಕೆಳಗೆ ನೋಡುತ್ತೀರಿ. ಎಲ್ಲ ಚೆನ್ನಾಗಿದೆ, ಆದರೆ ಕಣ್ಣು ಮಾತ್ರ ಕಳೆಗುಂದಿದೆ ಎಂದು ನಿಮಗನಿಸಿಬಿಡುತ್ತದೆ. ಫಂಕ್ಷನ್‌ನಲ್ಲಿ ಸಿಕ್ಕ ಆತ್ಮೀಯರೂ, ಏನಾಯ್ತೇ ನಿನಗೆ? ಎನ್ನುತ್ತಾರೆ. ಇದಕ್ಕೆಲ್ಲ ಕಾರಣ ಕಣ್ಣಿನ ಸುತ್ತ ಇರುವ ಕಪ್ಪು ವರ್ತುಲ. ಈ ಕಪ್ಪು ವರ್ತುಲ ನಿಮ್ಮ ಸೌಂದರ್ಯಕ್ಕೇ ಕಪ್ಪುಚುಕ್ಕೆಯಂತೆ ಕಾಣಿಸುತ್ತದೆ. ಯಾಕೆಂದರೆ, ಕಣ್ಣು ಸೌಂದರ್ಯದ ಪ್ರತೀಕ. ಸುಂದರ ಆರೋಗ್ಯಯುತ ಕಣ್ಣು ಸೌಂದರ್ಯದಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಕಣ್ಣ ಸುತ್ತ ಕೊಂಚ ಕಪ್ಪು ವರ್ತುಲ ಮೂಡಿದರೂ ಸಾಕು, ಕಣ್ಣು ಕಳೆಗುಂದಿದಂತೆ ಅನಿಸುತ್ತದೆ. ಮುಖ ನಿಸ್ತೇಜವಾಗಿ, ಕಳಾಹೀನವಾಗಿ ಕಾಣುತ್ತದೆ. ತಾತ್ಕಾಲಿಕವಾಗಿ ಕನ್ಸೀಲರ್‌ನಿಂದ ನೀವು ಈ ಕಪ್ಪು ವರ್ತುಲವನ್ನು ಮುಚ್ಚಿ ಹಾಕಬಹುದು. ಆದರೆ, ಶಾಶ್ವತವಾಗಿ ಅಲ್ಲ. ಏನೇ ಮೇಕಪ್‌ ಮಾಡಿದರೂ, ಒಳಗಿನಿಂದ ತುಳುಕುವ ಸೌಂದರ್ಯ ಅತ್ಯಂತ ಮುಖ್ಯ. ಹಾಗಾಗಿ ಬನ್ನಿ, ಕಪ್ಪು ವರ್ತುಲವನ್ನು ಶಾಶ್ವತವಾಗಿ ದೂರ ಮಾಡಬೇಕಾದರೆ, ಕೆಲವು ಮನೆಮದ್ದುಗಳನ್ನು ಮಾಡಬಹುದು. ಅವು ಯಾವುವು ಎಂದು ನೋಡೋಣ.

Blood Pressure
Saffron with wooden background Benefits Of Saffron

ಆಲೂಗಡ್ಡೆ

ಸೌಂದರ್ಯ ಚಿಕಿತ್ಸೆಯಲ್ಲಿ ಆಲೂಗಡ್ಡೆಗೆ ಪ್ರಮುಖ ಸ್ಥಾನವಿದೆ. ನಿತ್ಯವೂ ಮುಖಕ್ಕೆ ಆಲೂಗಡ್ಡೆಯ ಪ್ರಯೋಗ ಮಾಡುವುದರಿಂದ ಹಲವು ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಮುಖ್ಯವಾಗಿ ಕಣ್ಣ ಸುತ್ತಲ ಡಾರ್ಕ್‌ ಸರ್ಕಲ್‌ ಸಮಸ್ಯೆ ನಿಮಗಿದ್ದರೆ, ಆಲೂಗಡ್ಡೆಯ ರಸವನ್ನು ಕಣ್ಣಿನ ಸುತ್ತ ಹಚ್ಚಿ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್‌, ವಿಟಮಿನ್‌ಗಳು ಪೋಷಣೆ ನೀಡಿ ಕಣ್ಣಿನ ಸುತ್ತಲ ಕಪ್ಪು ವರ್ತುಲವನ್ನು ತಿಳಿಯಾಗಿಸುತ್ತದೆ, ನಿಯಮಿತವಾಗಿ ಹಚ್ಚುವ ತಾಳ್ಮೆ ಮಾತ್ರ ಅತ್ಯಗತ್ಯ.

Aloe Vera Herbs For Hair Growth Aloe vera contains enzymes that can promote healthy hair growth by removing dead skin cells from the scalp and promoting hair follicle health.

ಆಲೋವೆರಾ

ಆಲೋವೆರಾದಲ್ಲಿ ಆಲೋಸಿನ್‌ ಹೇರಳವಾಗಿದ್ದು ಇದು ಪಿಗ್ಮೆಂಟೇಶನ್‌ ಸಮಸ್ಯೆಗೆ ಅತ್ಯುತ್ತಮವಾಗಿ ಪರಿಹಾರ ನೀಡುತ್ತದೆ. ಇದು ಚರ್ಮಕ್ಕೆ ಬೇಕಾದ ನೀರಿನಂಶವನ್ನು ನೀಡಿ, ಚರ್ಮದ ಉರಿಯೂತವನ್ನೂ ಕಡಿಮೆ ಮಾಡುತ್ತದೆ. ಚರ್ಮ ತಿಳಿಯಾಗಲು ಕೂಡಾ ಇದು ಒಳ್ಳೆಯದು. ಆಲೋವೆರಾ ಜೆಲ್‌ ಅನ್ನು ಹೆಚ್ಚು ಒತ್ತಡ ಹಾಕದೆ ನಿಧಾನವಾಗಿ ಕಣ್ಣ ಸುತ್ತ ಹಚ್ಚಿಕೊಳ್ಳುವುದನ್ನು ನಿಯಮಿತವಾಗಿ ಮಾಡಿದರೆ ಉತ್ತಮ ಪ್ರತಿಫಲ ಕಾಣಬಹುದು.

Almond oil

ಬಾದಾಮಿ ಎಣ್ಣೆ

ಬಾದಾಮಿ ಎಣ್ಣೆ ಕೇವಲ ತಲೆಕೂದಲಿಗೆ ಎಂದು ಯಾರು ಹೇಳಿದ್ದು? ಚರ್ಮಕ್ಕೆ ಇದು ಅತ್ಯಂತ ಒಳ್ಳೆಯದು. ಯಾಕೆಂದರೆ ಇದರಲ್ಲಿ ವಿಟಮಿನ್‌ ಇ, ಮೆಗ್ನೀಶಿಯಂ, ಪಾಸ್ಪರಸ್‌, ಆಂಟಿ ಆಕ್ಸಿಡೆಂಟ್ಸ್‌ ಎಲ್ಲವೂ ಇದೆ. ಕಣ್ಣ ಸುತ್ತ ಇದನ್ನು ಹಚ್ಚಿ ಮೆದುವಾಗಿ ಮಸಾಜ್‌ ಮಾಡುವುದರಿಂದ ಕಣ್ಣಿನ ಸುತ್ತಲ ಚರ್ಮಕ್ಕೆ ರಕ್ತಪರಿಚಲನೆ ಹೆಚ್ಚಿ ಕಣ್ಣಿನ ಕಪ್ಪು ವರ್ತುಲ ಸಮಸ್ಯೆ ನಿಧಾನವಾಗಿ ಕಡಿಮೆಯಾಗುತ್ತದೆ.

Saffron with wooden background Benefits Of Saffron

ಕೇಸರಿ

ಕೇಸರಿ ಕೇವಲ ಆಹಾರವಾಗಿ ಅಲ್ಲ, ಸೌಂದರ್ಯವರ್ಧಕವಾಗಿಯೂ ಇದಕ್ಕೆ ಅತ್ಯುನ್ನತ ಸ್ಥಾನವಿದೆ. ಎರಡರಿಂದ ಮೂರು ಕೇಸರಿ ದಳಗಳನ್ನು ತಣ್ಣಗಿನ ಹಾಲಿನಲ್ಲಿ ಸ್ವಲ್ಪ ಹೊತ್ತು ನೆನೆಹಾಕಿಡಿ. ಹತ್ತಿಯನ್ನು ಇದರಲ್ಲಿ ಅದ್ದಿ, ಕಣ್ಣಿನ ಸುತ್ತ ಹಚ್ಚಿಕೊಳ್ಳಿ. ಇದೂ ಕೂಡಾ ಕಣ್ಣಿನ ಸುತ್ತಲಿನ ಕಪ್ಪು ಕಲೆಯನ್ನು ತೆಗೆದು ಹಾಕಲು ಒಳ್ಳೆಯ ಮನೆಮದ್ದು.

ಇದನ್ನೂ ಓದಿ: Benefits Of Onion Hair Oil: ಕೂದಲು ಬಿಳಿಯಾಗುತ್ತಿದೆಯೆ? ಈರುಳ್ಳಿ ತೈಲವನ್ನು ಈ ರೀತಿ ಬಳಸಿ

ಗ್ರೀನ್‌ ಟೀ ಬ್ಯಾಗ್‌

ಗ್ರೀನ್‌ ಟೀ ಕುಡಿಯುತ್ತಿದ್ದರೆ ಬಳಸಿದ ಟೀ ಬ್ಯಾಗನ್ನು ಎಸೆಯಬೇಡಿ. ಅವುಗಳನ್ನು ಹಾಗೆಯೇ ಫ್ರಿಡ್ಜ್‌ನಲ್ಲಿ ಇಡಿ. ನಿತ್ಯವೂ ಹದಿನೈದು ನಿಮಿಷ ಈ ತಂಪಾದ ಟೀ ಬ್ಯಾಗನ್ನು ಕಣ್ಣ ಮೇಲಿರಿಸಿ ರಿಲ್ಯಾಕ್ಸ್‌ ಮಾಡಿ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ಕಣ್ಣ ಸುತ್ತಲ ಕಪ್ಪು ವರ್ತುಲದ ಸಮಸ್ಯೆಗೆ ಉತ್ತಮ ಪರಿಹಾರ ನೀಡುತ್ತದೆ. ಒತ್ತಡ, ಕೆಲಸದಿಂದ ಬಸವಳಿದಾಗ, ಹೆಚ್ಚು ಸ್ಕ್ರೀನ್‌ಟೈಮ್‌ನಲ್ಲಿದ್ದಾಗ, ನಿದ್ದೆಯಿಲ್ಲದಿದ್ದಾಗ ಇಂತಹ ಕಪ್ಪು ವರ್ತುಲದ ಸಮಸ್ಯೆ ಹೆಚ್ಚಾಗುತ್ತದೆ. ಅಂಥ ಸಂದರ್ಭ ಈ ಟೀ ಬ್ಯಾಗ್‌ ಕಣ್ಣಿಗೆ ರಿಲ್ಯಾಕ್ಸ್‌ ಮಾಡುತ್ತದೆ. ಮತ್ತೆ ಕಣ್ಣು ತಾಜಾತನವನ್ನು ಮರಳಿ ಪಡೆಯುತ್ತದೆ.

Continue Reading

ಆರೋಗ್ಯ

Red Line on Medicine Strip: ಔಷಧ ಪ್ಯಾಕೇಟ್‌ ಮೇಲೆ ಕೆಂಪು ಗೆರೆ ಏಕಿರುತ್ತದೆ ಅನ್ನೋದು ಗೊತ್ತಾ?

ಸಾಮಾನ್ಯವಾಗಿ ಔಷಧಗಳ (Medicine Check) ಪ್ಯಾಕೆಟ್ ಮೇಲೆ ಕೆಂಪು ಬಣ್ಣದ ಪಟ್ಟಿಯನ್ನು ಗಮನಿಸಿರಬಹುದು. ಇದು ಔಷಧ, ಮಾತ್ರೆಗಳ ಬಗ್ಗೆ ಬಹಳ ಮುಖ್ಯವಾದುದನ್ನು ಸೂಚಿಸುತ್ತದೆ ಎಂಬುದು ಎಷ್ಟೋ ಜನರಿಗೆ ಗೊತ್ತಿರಲಿಕ್ಕಿಲ್ಲ. ಈ ಕೆಂಪು ಗೆರೆಯ ಅರ್ಥವೇನು, ಇದನ್ನು ಯಾಕೆ ಔಷಧಗಳ ಮೇಲೆ ಹಾಕಲಾಗುತ್ತದೆ ಎನ್ನುವ ಕುರಿತು ಮಾಹಿತಿ ಇಲ್ಲಿದೆ.

VISTARANEWS.COM


on

By

Medicine
Koo

ಕೆಲವರು ಔಷಧಗಳ ಮೇಲೆ ಹೆಚ್ಚು ಅವಲಂಬಿತರಾಗಿರುತ್ತಾರೆ. ತಲೆನೋವಿನಿಂದ ಹಿಡಿದು ದೀರ್ಘಕಾಲದ ಕಾಯಿಲೆಗಳವರೆಗೆ ಪರಿಹಾರಕ್ಕಾಗಿ ಔಷಧವನ್ನು (Medicine) ಅವಲಂಬಿಸಿರುವ ಅನೇಕರಿದ್ದಾರೆ. ವೈದ್ಯರ ಸಮಾಲೋಚನೆ (doctors prescription) ಇಲ್ಲದೆ ಯಾವುದೇ ಔಷಧವನ್ನು (Check Medicine) ತೆಗೆದುಕೊಳ್ಳಬಾರದು ಎನ್ನುವ ನಿಯಮವಿದ್ದರೂ ಹೆಚ್ಚಿನವರು ಔಷಧಾಲಯಗಳಿಂದ (Pharmacy) ಔಷಧ ತಂದು ತೆಗೆದುಕೊಳ್ಳುತ್ತಾರೆ. ಬಳಿಕ ಅದರ ಅಡ್ಡ ಪರಿಣಾಮಗಳನ್ನು ಎದುರಿಸುತ್ತಾರೆ. ಕೆಲವೊಮ್ಮೆ ಇದು ಜೀವಕ್ಕೆ ಅಪಾಯ ಉಂಟು ಮಾಡಬಹುದು.

ಈ ಕುರಿತು ಜಾಗೃತಿ ಮೂಡಿಸುವ ಸಲುವಾಗಿ 2016ರಲ್ಲಿ ಭಾರತ ಸರ್ಕಾರದ ಆರೋಗ್ಯ ಸಚಿವಾಲಯವು ಔಷಧದ ಮೇಲೆ ಕೆಂಪು ರೇಖೆಯನ್ನು (Red Line on Medicine Packets) ಹಾಕಿ ಜನರಿಗೆ ಅರಿವು ಮೂಡಿಸುವ ಪ್ರಯತ್ನ ಮಾಡಿತ್ತು. ಈ ಕುರಿತು ಟ್ವಿಟ್ಟರ್‌ನಲ್ಲಿ ಪೋಸ್ಟ್ ಅನ್ನೂ ಹಂಚಿಕೊಂಡಿತ್ತು. ಔಷಧದ ಮೇಲೆ ಕೆಂಪು ಪಟ್ಟಿಯಿರುವ ಯಾವುದೇ ಔಷಧಗಳನ್ನು ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ತೆಗೆದುಕೊಳ್ಳಬಾರದು. ಹೀಗಾಗಿ ಔಷಧದ ಮುಕ್ತಾಯ ದಿನಾಂಕವನ್ನು ಪರಿಶೀಲಿಸುವಾಗ ಪ್ಯಾಕೆಟ್ ಮೇಲಿರುವ ಕೆಂಪು ಪಟ್ಟಿಯನ್ನೂ ಗಮನಿಸುವುದು ಮುಖ್ಯವಾಗಿದೆ ಎಂದು ಸಚಿವಾಲಯ ಈ ಪೋಸ್ಟ್ ನಲ್ಲಿ ತಿಳಿಸಿದೆ.


ಸಾಮಾನ್ಯವಾಗಿ ಈ ಗೆರೆ ಆಂಟಿ ಬಯೋಟಿಕ್ ಔಷಧಗಳ ಮೇಲೆ ಇರುತ್ತದೆ. ಇವುಗಳನ್ನು ಅತಿಯಾಗಿ ತೆಗೆದುಕೊಂಡರೆ ಕೆಲವು ವರ್ಷಗಳ ಅನಂತರ ಅವು ದೇಹದ ಮೇಲೆ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ ಎಂದು ಇಲಾಖೆ ಎಚ್ಚರಿಸಿದೆ.

ಔಷದ ಖರೀದಿ ಮಾಡುವಾಗ ಗಮನಿಸಬೇಕಾದ ಸಂಗತಿಗಳು ಇಲ್ಲಿವೆ.


ಡೋಸೇಜ್

ಕೆಂಪು ಔಷಧ ಪಟ್ಟಿಯು ಮಾತ್ರೆಗಳು ಅಥವಾ ಬಾಟಲಿಯಲ್ಲಿ ಗುರುತಿಸಲು ಸುಲಭವಾಗಿದೆ. ಇದು ವಯಸ್ಕರು ಸೇವಿಸಬಹುದಾದ ಡೋಸೇಜ್ ಅನ್ನು ಒಳಗೊಂಡಿದೆ. ಔಷಧವು ವಯಸ್ಕರು ಮತ್ತು ಮಕ್ಕಳಿಗೆ ವಿಭಿನ್ನ ಡೋಸೇಜ್ ಗಳನ್ನು ಒಳಗೊಂಡಿರುತ್ತದೆ. ಔಷಧವನ್ನು ನಿಯಮಿತವಾಗಿ ಸೇವಿಸುತ್ತಿದ್ದರೂ ಖರೀದಿಸುವ ಮೊದಲು ಯಾವಾಗಲೂ ಡೋಸೇಜ್ ಅನ್ನು ಪರಿಶೀಲಿಸಿ.

ಅಡ್ಡಪರಿಣಾಮ

ಔಷಧಗಳು ಅಲರ್ಜಿಯನ್ನು ಉಂಟು ಮಾಡುವ ಅಂಶವನ್ನು ಸೂಚಿಸುವ ಎಚ್ಚರಿಕೆಯ ಲೇಬಲ್ ಅನ್ನು ಹೊಂದಿರುತ್ತವೆ. ಅದನ್ನು ಓದಿ ಮತ್ತು ನಿಮ್ಮ ವೈದ್ಯರಿಗೆ ತಿಳಿಸಿ. ಇದರಿಂದ ಔಷಧವನ್ನು ಬದಲಾಯಿಸಬಹುದು ಮತ್ತು ಅದರ ಬದಲಿಗೆ ಬೇರೆ ಯಾವುದನ್ನಾದರೂ ಶಿಫಾರಸು ಮಾಡಬಹುದು. ರೋಗಿಗಳು ಮತ್ತು ಆರೈಕೆ ಮಾಡುವವರು ಸಂಭಾವ್ಯ ಅಡ್ಡಪರಿಣಾಮಗಳು, ಔಷಧಗಳ ಪರಸ್ಪರ ಕ್ರಿಯೆಗಳು, ಅಲರ್ಜಿಯ ಪ್ರತಿಕ್ರಿಯೆಗಳು ಮತ್ತು ವಿಶೇಷ ಸೂಚನೆಗಳ ಬಗ್ಗೆ ಎಚ್ಚರಿಕೆಯಿಂದ ಗಮನಿಸಬೇಕು.

ಸಂಗ್ರಹ

ಎಲ್ಲ ಔಷಧಗಳು ಹೆಚ್ಚು ಕಾಲ ಸಂಗ್ರಹಕ್ಕೆ ಯೋಗ್ಯವಾಗಿರುವುದಿಲ್ಲ. ಸಂಗ್ರಹಕ್ಕೆ ನಿರ್ದಿಷ್ಟ ಸ್ಥಿತಿಗಳನ್ನು ಸೂಚಿಸಲಾಗಿರುತ್ತದೆ. ಶೇಖರಣಾ ಪರಿಸ್ಥಿತಿಗಳು ಔಷಧೀಯ ಸ್ಥಿರತೆ ಮತ್ತು ಸಾಮರ್ಥ್ಯವನ್ನು ಕಾಪಾಡಿಕೊಳ್ಳಲು ಅಗತ್ಯವಿರುವ ಪರಿಸರ ಅಂಶಗಳನ್ನು ಸೂಚಿಸುತ್ತವೆ. ಅಸಮರ್ಪಕ ಶೇಖರಣೆಯು ಔಷಧಿಗಳ ಪರಿಣಾಮಕಾರಿತ್ವವನ್ನು ಕಡಿಮೆ ಮಾಡಿ ಪ್ರತಿಕೂಲ ಪರಿಣಾಮಗಳ ಅಪಾಯವನ್ನು ಹೆಚ್ಚಿಸಬಹುದು.

Medicine
Medicine


ಮುಕ್ತಾಯ ದಿನಾಂಕ

ಯಾವತ್ತೂ ಔಷಧದ ಮುಕ್ತಾಯ ದಿನಾಂಕವನ್ನು ಪರಿಶೀಲಿಸದೆ ಔಷಧ ಖರೀದಿಸಬೇಡಿ. ರೋಗಿಗಳು ಅವಧಿ ಮೀರಿದ ಔಷಧಗಳನ್ನು ಬಳಸಬಾರದು. ಇದು ಪ್ರತಿಕೂಲ ಪರಿಣಾಮ ಅಥವಾ ಚಿಕಿತ್ಸೆಯ ವೈಫಲ್ಯಕ್ಕೆ ಕಾರಣವಾಗಬಹುದು.

ಬ್ಯಾಚ್ ಸಂಖ್ಯೆ

ಇದು ಔಷಧಗಳ ತಯಾರಿಕೆಯ ಇತಿಹಾಸವನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ. ಕೆಲವು ಔಷಧಗಳು ಎಕ್ಸ್‌ಪೈರಿ ಕೋಡ್ ಅನ್ನು ಸಹ ಒಳಗೊಂಡಿರುತ್ತದೆ. ಇದು ಮುಕ್ತಾಯ ದಿನಾಂಕ ಅಥವಾ ಬ್ಯಾಚ್ ಗುರುತಿನ ಕುರಿತು ಹೆಚ್ಚುವರಿ ಮಾಹಿತಿಯನ್ನು ಒದಗಿಸುತ್ತದೆ.

ಇದನ್ನೂ ಓದಿ: Multivitamins: ನಮಗೆ ವಿಟಮಿನ್‌ ಪೂರಕಗಳು ಅಗತ್ಯವೆಂದು ತಿಳಿಯುವುದು ಹೇಗೆ?

ಕರಪತ್ರ

ಪ್ರತಿಯೊಂದು ಔಷಧದಲ್ಲೂ ಕಾಗದದ ಕರಪತ್ರವಿರುತ್ತದೆ. ಇದನ್ನು ಓದುವುದು ಬಹಳ ಮುಖ್ಯ. ಇದು ಔಷಧಿಯ ಬಳಕೆ, ಅಡ್ಡ ಪರಿಣಾಮ, ಮುನ್ನೆಚ್ಚರಿಕೆಗಳು ಮತ್ತು ಬಳಕೆಗೆ ಸೂಚನೆಗಳನ್ನು ಒಳಗೊಂಡಂತೆ ಸಮಗ್ರ ಮಾಹಿತಿಯನ್ನು ಒದಗಿಸುತ್ತದೆ.

Continue Reading

ಆರೋಗ್ಯ

Benefits of weight training for women: ತೂಕ ಎತ್ತುವ ವ್ಯಾಯಾಮ ಮಹಿಳೆಯರಿಗೆ ಏಕೆ ಬೇಕು?

Benefits of weight training for women: ವೇಯ್ಟ್‌ ಲಿಫ್ಟಿಂಗ್‌ ಎನ್ನುತ್ತಿದ್ದಂತೆ ಅದು ಮಹಿಳೆಯರಿಗಲ್ಲ ಎನ್ನುವ ಭಾವ ಬಹಳ ಜನರಲ್ಲಿದೆ. ಇದೇನು ಒಲಿಂಪಿಕ್ಸ್‌ಗಾಗಿ ನಡೆಸುವ ಭಾರ ಎತ್ತುವ ತಾಲೀಮಲ್ಲ. ಸ್ನಾಯುಗಳ ಬಲ ಹೆಚ್ಚಿಸಿ, ದೇಹಸ್ವಾಸ್ಥ್ಯ ವೃದ್ಧಿಸಿಕೊಳ್ಳಲು ಮಹಿಳೆಯರಿಗೆ ಅನುಕೂಲವಾಗುವ ವೇಯ್ಟ್‌ ಟ್ರೇನಿಂಗ್.‌ ಇದನ್ನು ಯಾಕಾಗಿ ಮಾಡಬೇಕು? ಇದನ್ನು ಮಾಡುವುದರಿಂದ ಏನೆಲ್ಲ ಪ್ರಯೋಜನಗಳಿವೆ? ಈ ಕುರಿತ ಮಾಹಿತಿ.

VISTARANEWS.COM


on

Benefits of weight training for women
Koo

ತೂಕ ಎತ್ತುವುದಕ್ಕೂ ಮಹಿಳೆಯರಿಗೂ (Benefits of weight training for women) ಅಂಥ ಅನುಬಂಧವೇನಿಲ್ಲ. ಹಾಗೆಂದು ಬಾವಿಯಿಂದ ನೀರೆತ್ತುವುದರಿಂದ ಹಿಡಿದು, ಸೌದೆ ಹೊರೆ ಹೊರುವವರೆಗೆ ನಮ್ಮ ಗ್ರಾಮೀಣ ಮಹಿಳೆಯರ ಸಾಮರ್ಥ್ಯ ಊಹೆಗೆ ಮೀರಿದ್ದು. ಇದೀಗ ವ್ಯಾಯಾಮಕ್ಕಾಗಿ ತೂಕ ಎತ್ತುವ ಬಗ್ಗೆ ಹೇಳುವುದಾದರೆ, ಹಲವಾರು ಸ್ತ್ರೀಯರು ಇದನ್ನು ಇಷ್ಟಪಡುವುದಿಲ್ಲ. ಆದರೂ ತೂಕ ಎತ್ತುವ ಮೂಲಕ ಸ್ನಾಯುಗಳಿಗೆ ಪ್ರತಿರೋಧಕತೆಯನ್ನು ಒಡ್ಡಿ, ಈ ಮೂಲಕ ಮಾಂಸಪೇಶಿಗಳನ್ನು ಸಬಲಗೊಳಿಸುವ ಕ್ರಿಯೆ ಹೊಸದೇನಲ್ಲ, ತೀರಾ ಹಳೆಯದ್ದೆ. ಹೀಗೆನ್ನುತ್ತಿದ್ದಂತೆ ವೇಯ್ಟ್‌ ಲಿಫ್ಟರ್‌ಗಳಂತೆ ತೂಕ ಎತ್ತಿ ಹೊಟ್ಟೆ ಕರಗಿಸಿ, ರಟ್ಟೆ ಬೆಳೆಸುವುದು ಎಂಬ ತೀರ್ಮಾನಕ್ಕೆ ಬರುವ ಅಗತ್ಯವಿಲ್ಲ. ದೇಹದ ಒಟ್ಟು ಸ್ವಾಸ್ಥ್ಯಕ್ಕೆ ಇವೆಲ್ಲ ಹಲವು ರೀತಿಯಲ್ಲಿ ಇಂಬು ನೀಡುತ್ತವೆ. ಏನು ಲಾಭಗಳಿವೆ ಮಹಿಳೆಯರಿಗೆ ತೂಕ ಎತ್ತುವುದರಿಂದ?

Weight Training for Women

ಶಕ್ತಿ ಹೆಚ್ಚಳ

ಭಾರ ಎತ್ತುವ ವ್ಯಾಯಾಮವೆಂದರೆ ಹತ್ತಿಪ್ಪತ್ತು ಕೇಜಿಗಳನ್ನೇ ಎತ್ತಬೇಕೆಂದಿಲ್ಲ. ನಾಲ್ಕಾರು ಕೇಜಿ ಭಾರವೂ ಉಪಯುಕ್ತವೇ. ಸ್ನಾಯುಬಲ ಹೆಚ್ಚಿಸಿಕೊಳ್ಳುವುದಕ್ಕೆ ಮೊದಲಿಗೆ ಕಡಿಮೆ ಭಾರದ ಪ್ರತಿರೋಧವೇ ಸಾಕಾಗುತ್ತದೆ. ಇದನ್ನು ಕ್ರಮೇಣ ಹೆಚ್ಚಿಸುತ್ತಾ ಹೋದಂತೆ ದೇಹದ ಶಕ್ತಿಯೂ ವೃದ್ಧಿಯಾಗುತ್ತದೆ. ಮಹಿಳೆಯರ ಪ್ರಾಯ ಹೆಚ್ಚಿದಂತೆ ಸ್ನಾಯುಗಳು ಕಡಿಮೆಯಾಗಿ ಕೊಬ್ಬು ಹೆಚ್ಚುವುದು ಸಾಮಾನ್ಯವಾದ್ದರಿಂದ, ತೂಕ ಎತ್ತುವ ವ್ಯಾಯಾಮಗಳು ಅಗತ್ಯವಾಗಿ ಬೇಕಾಗುತ್ತವೆ.

ಕೊಬ್ಬು ಕರಗಿಸಲು

ತೋಳು, ಹೊಟ್ಟೆ ಮತ್ತು ತೊಡೆಗಳಲ್ಲಿನ ಕೊಬ್ಬು ಕೊಂಚ ಹೆಚ್ಚೇ ಹಠಮಾರಿ. ಇದನ್ನು ಕರಗಿಸಲು ಬೆವರು ಹರಿಸಬೇಕು. ಆದರೆ ವೇಯ್ಟ್‌ ಟ್ರೈನಿಂಗ್‌ ನಿಂದ ಹಠಮಾರಿ ಕೊಬ್ಬನ್ನೂ ಕರಗಿಸಬಹುದು. ಇದಕ್ಕಾಗಿ ತೂಕದ ಉಪಕರಣಗಳು ಮಾತ್ರವಲ್ಲ, ರೆಸಿಸ್ಟೆನ್ಸ್‌ ಬ್ಯಾಂಡ್‌ ಸಹ ಪ್ರಯೋಜನಕಾರಿ. ಅಂತೂ ಸ್ನಾಯುಗಳಿಗೆ ಪ್ರತಿರೋಧ ಒಡ್ಡಿದಾಗಲೇ ಕೊಬ್ಬು ಕರಗಿ, ದೃಢತೆ ಹೆಚ್ಚುವುದು.

Although menopause is natural it brings about many changes in the body Menopause

ಋತುಬಂಧದ ನಂತರ

ಮಹಿಳೆಯರಿಗೆ ಋತುಬಂಧ ಸಮೀಪಿಸುತ್ತಿದ್ದಂತೆ ಸಪೂರನೆಯ ದೇಹ ಉದ್ದುರುಟು ಗಾತ್ರಕ್ಕೆ ತಿರುಗುತ್ತದೆ. ಅಷ್ಟೇ ಅಲ್ಲ, ಸ್ನಾಯುಗಳ ಜಾಗವನ್ನು ಕೊಬ್ಬು ಆಕ್ರಮಿಸಿಕೊಂಡು, ಮೂಳೆಗಳಿಗೆ ಆಧಾರ ಕಡಿಮೆಯಾಗುತ್ತದೆ. ಕೀಲುಗಳು ಸವೆಯುವುದು, ಮೂಳೆ ದುರ್ಬಲವಾಗುವಂಥ ತೊಂದರೆಗಳು ಪ್ರಾರಂಭವಾಗುತ್ತವೆ. ಆದರೆ ತೂಕ ಎತ್ತುವ ವ್ಯಾಯಾಮದ ಮೂಲಕ ಕೊಬ್ಬು ಕರಗಿಸಿ, ಮಾಂಸಪೇಶಿಗಳಿಗೆ ಬಲ ತುಂಬುವುದರಿಂದ ಮೂಳೆಗಳು ದುರ್ಬಲವಾಗದಂತೆ ಕಾಪಾಡಿಕೊಳ್ಳಬಹುದು.

ಹಾರ್ಮೋನುಗಳ ಸಮತೋಲನೆಗೆ

ಹಲವು ರೀತಿಯ ಚೋದಕಗಳನ್ನು ಸರಿದಾರಿಗೆ ತರುವುದಕ್ಕೆ ಇವು ಸಹಕಾರಿ. ಭಾರ ಎತ್ತುವ ಮೂಲಕ ತೂಕ ನಿರ್ವಹಣೆ ಮಾಡುವುದರಿಂದ ದೇಹದ ಇನ್‌ಸುಲಿನ್‌ ಪ್ರತಿರೋಧಕತೆಯನ್ನು ನಿಯಂತ್ರಣದಲ್ಲಿ ಇರಿಸಬಹುದು. ಜೊತೆಗೆ ಮಾನಸಿಕ ಒತ್ತಡ ಹೆಚ್ಚಾದಾಗ ದೇಹದಲ್ಲಿ ಏರುಮುಖವಾಗುವ ಕಾರ್ಟಿಸೋಲ್‌ಗಳನ್ನು ಕಡಿಮೆ ಮಾಡುವುದಕ್ಕೆ ಇದರಿಂದ ಅನುಕೂಲ. ಕ್ಸೆನೊಈಸ್ಟ್ರೋಜೆನ್‌ ಮಟ್ಟ ಕುಸಿದರೆ ಶರೀರದಲ್ಲಿ ಉರಿಯೂತದ ಲಕ್ಷಣಗಳು ಕಾಣುತ್ತವೆ. ಪಿಸಿಒಎಸ್‌ ತೊಂದರೆ ಇದ್ದರೂ ತೂಕ ನಿಯಂತ್ರಣದಲ್ಲಿ ಇರಿಸಿಕೊಳ್ಳುವುದು ಮುಖ್ಯವಾಗುತ್ತದೆ.

ಇದನ್ನೂ ಓದಿ: Health Tips: ಅನೀಮಿಯ ತಡೆಯುವುದಕ್ಕೆ ದಿನಕ್ಕೆಷ್ಟು ಕಬ್ಬಿಣದಂಶ ಬೇಕು? ಇದನ್ನು ಆಹಾರದಿಂದ ಪಡೆಯುವುದು ಹೇಗೆ?

ಮಾನಸಿಕ ತೃಪ್ತಿ

ಆರೋಗ್ಯಕರ ಶರೀರವು ಮಾನಸಿಕ ಸಂತೋಷವನ್ನು ಹೆಚ್ಚಿಸುತ್ತದೆ. ಅದರಲ್ಲೂ ಇಡೀ ದಿನದ ಎಲ್ಲ ಕೆಲಸಗಳಲ್ಲಿ ಈ ಸಂತೋಷವು ವ್ಯಾಪಿಸಿಕೊಳ್ಳುವುದು, ಇಡೀ ಜೀವನದ ಮಟ್ಟವನ್ನೇ ಸುಧಾರಿಸುತ್ತದೆ. ೨೦೧೮ರಲ್ಲಿ ಲಿಮೆರಿಕ್‌ ವಿಶ್ವವಿದ್ಯಾಲಯದಲ್ಲಿ ನಡೆಸಲಾದ ಅಧ್ಯಯನದ ಪ್ರಕಾರ, ಮೂಡ್‌ ಬಲದಾವಣೆ, ಜೀವನವೇ ನಶ್ವರವೆಂಬ ಭಾವನೆ ಮತ್ತು ಖಿನ್ನತೆಯಂಥ ಮಾನಸಿಕ ಸಮಸ್ಯೆಗಳಿಗೆ, ಪ್ರತಿರೋಧ ಒಡ್ಡುವ ವ್ಯಾಯಾಮಗಳು ಮದ್ದಾಗಿ ಪರಿಣಮಿಸಬಲ್ಲವು.

Continue Reading

ಆರೋಗ್ಯ

Benefits Of Onion Hair Oil: ಕೂದಲು ಬಿಳಿಯಾಗುತ್ತಿದೆಯೆ? ಈರುಳ್ಳಿ ತೈಲವನ್ನು ಈ ರೀತಿ ಬಳಸಿ

Benefits Of Onion Hair Oil: ತಲೆಕೂದಲಿಗೆ ಈರುಳ್ಳಿ ಎಣ್ಣೆ ಎನ್ನುತ್ತಿದ್ದಂತೆ ಮುಖ ಕಿವುಚಬೇಡಿ. ಈರುಳ್ಳಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ಕೂದಲು ಬಿಳಿಯಾಗುವುದನ್ನು ಮುಂದೂಡುತ್ತವೆ. ಜೊತೆಗೆ, ಇದರ ಬ್ಯಾಕ್ಟೀರಿಯ ವಿರೋಧಿ ಅಂಶಗಳು ತಲೆಯ ಚರ್ಮದ ಆರೋಗ್ಯವನ್ನು ಕಾಪಾಡಲು ನೆರವಾಗುತ್ತವೆ. ಇನ್ನೂ ಏನೆಲ್ಲ ಸದ್ಗುಣಗಳು ಈರುಳ್ಳಿ ತೈಲದಲ್ಲಿವೆ? ಇಲ್ಲಿದೆ ಮಾಹಿತಿ.

VISTARANEWS.COM


on

Benefits Of Onion Hair Oil
Koo

ಈರುಳ್ಳಿಯ ಭಕ್ತರು ಇದ್ದಷ್ಟೇ ಸಂಖ್ಯೆಯಲ್ಲಿ ವಿರೋಧಿಗಳೂ ಇದ್ದಾರೆ. ರುಚಿಗಾಗಲಿ, ಮದ್ದಿಗಾಗಲಿ ಈರುಳ್ಳಿಗೆ ಸಮನಾದದ್ದಿಲ್ಲ ಎಂದು ಹೊಗಳುವವರು ಒಂದೆಡೆಯಾದರೆ, ಬೆಳಗ್ಗೆ ತಿಂದರೆ ಸಂಜೆಯವರೆಗೂ ಬಾಯೆಲ್ಲ ವಾಸನೆ ಎಂದು ಮುಖ ಕಿವುಚುವವರಿದ್ದಾರೆ. ಇದೀಗ ತಿನ್ನುವ ವಿಷಯವಲ್ಲ, ತಲೆಕೂದಲಿಗೆ ಈರುಳ್ಳಿ ಉಪಯೋಗಿಸಿದರೆ? ʻತಲೆಯೆಲ್ಲ ಒಗ್ಗರಣೆ ವಾಸನೆʼ ಎಂದು ಬೊಬ್ಬೆ ಹೊಡೆಯುವವರಿದ್ದಾರೆ. ಆದರೆ ಕೂದಲಿನ ಸಮಸ್ಯೆಗಳಿಗೆ ಈರುಳ್ಳಿ ಎಣ್ಣೆ ಅತ್ತ್ಯುತ್ತಮ ಮದ್ದಿನಂತೆ ಕೆಲಸ ಮಾಡಬಲ್ಲದು (Benefits Of Onion Hair Oil) ಎಂಬುದು ತಿಳಿದಿದೆಯೇ?
ಹೇರಳವಾಗಿ ಸಲ್ಫರ್‌ ಅಂಶವನ್ನು ಹೊಂದಿರುವ ಈರುಳ್ಳಿಯು ಕೂದಲಿನ ಪೋಷಣೆಯನ್ನು ಹಲವು ರೀತಿಯಲ್ಲಿ ಮಾಡುತ್ತದೆ. ಕೂದಲ ಕೋಶಗಳ ಪೋಷಣೆ ಮಾಡಿ, ಕೂದಲು ಉದುರುವುದನ್ನು ಕಡಿಮೆ ಮಾಡಿ, ತುಂಡಾಗುವ ತೊಂದರೆಯನ್ನೂ ಪರಿಹಾರ ಮಾಡುತ್ತದೆ. ಸಲ್ಫರ್‌ ಅಥವಾ ಗಂಧಕದ ಅಂಶವು ಹೆಚ್ಚಿನ ಪ್ರಮಾಣದ ಕೊಲಾಜಿನ್‌ ಉತ್ಪಾದನೆಗೆ ಪ್ರೋತ್ಸಾಹ ನೀಡುತ್ತದೆ. ಕೂದಲ ಬೆಳವಣಿಗೆಯಲ್ಲಿ ಕೊಲಾಜಿನ್‌ ಮಹತ್ವ ಅಧಿಕವಾಗಿದೆ. ಈರುಳ್ಳಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ಕೂದಲು ಬಿಳಿಯಾಗುವುದನ್ನು ಮುಂದೂಡುತ್ತವೆ. ಜೊತೆಗೆ, ಇದರ ಬ್ಯಾಕ್ಟೀರಿಯ ವಿರೋಧಿ ಅಂಶಗಳು ತಲೆಯ ಚರ್ಮದ ಆರೋಗ್ಯವನ್ನು ಕಾಪಾಡಲು ನೆರವಾಗುತ್ತವೆ.

Onion Hair Oil
Dandruff

ಮಾಡುವುದು ಹೇಗೆ?

ಈರುಳ್ಳಿ ತೈಲವನ್ನು ಮಾಡುವ ಕ್ರಮವನ್ನೂ ಈಗ ತಿಳಿಯೋಣ. ಈರುಳ್ಳಿಯ ಸಿಪ್ಪೆಗಳನ್ನು ಬಿಡಿಸಿ, ಹೆಚ್ಚಿ ರಸ ತೆಗೆದು ಇರಿಸಿ. ಇದರ ರಸ ತೆಗೆಯುವುದಕ್ಕೆಂದು ಮಿಕ್ಸಿ ಮಾಡುವಾಗ ಜೊತೆಗೆ ಎರಡು ಚಮಚ ಮೆಂತೆ ಬೀಜಗಳನ್ನೂ ಸೇರಿಸಿಕೊಳ್ಳಬಹುದು. ಈ ರಸಕ್ಕೆ ಶುದ್ಧ ಕೊಬ್ಬರಿ ಎಣ್ಣೆಯನ್ನು ಸೇರಿಸಿ, ಸಣ್ಣ ಉರಿಯಲ್ಲಿ ಕುದಿಸಿ. ಈರುಳ್ಳಿಯ ಹಸಿ ವಾಸನೆಯೆಲ್ಲ ಹೋಗಿ, ತಿಳಿಯಾದ ಘಮ ವ್ಯಾಪಿಸುತ್ತದೆ. ಈರುಳ್ಳಿ ಮತ್ತು ಮೆಂತೆಯ ಅಂಶಗಳೆಲ್ಲ ತಮ್ಮ ಸತ್ವವನ್ನು ಬಿಟ್ಟು ಎಣ್ಣೆಯ ಮೇಲೆ ತೇಲತೊಡಗುತ್ತವೆ. ಇದೀಗ ಈರುಳ್ಳಿ ಎಣ್ಣೆ ಸಿದ್ಧವಾಗಂತೆ. ಇದನ್ನು ತೆಳುವಾದ ಬಟ್ಟೆಯಲ್ಲಿ ಶೋಧಿಸಿ, ಗಾಜಿನ ಬಾಟಲಿಯಲ್ಲಿ ಶೇಖರಿಸಿಟ್ಟುಕೊಂಡು ಉಪಯೋಗಿಸಿಕೊಳ್ಳಿ.

ಹೊಳಪಿನ ಕೇಶರಾಶಿ

ಕೂದಲಿನ ಹೊಳಪು ಹೆಚ್ಚಿಸುವಲ್ಲಿ ಈರುಳ್ಳಿ ಎಣ್ಣೆ ಒಳ್ಳೆಯ ಕೆಲಸ ಮಾಡುತ್ತದೆ. ಇದನ್ನು ಕೂದಲ ಬುಡಕ್ಕೆ ಮಾತ್ರವಲ್ಲ, ತುದಿಯವರೆಗೂ ಹಚ್ಚಿ ಒಂದರಡು ತಾಸಿನ ನಂತರ ತಲೆ ಸ್ನಾನ ಮಾಡಿ. ಇಷ್ಟೇ ಅಲ್ಲ, ಘಾಟು ಸಹಿಸಿಕೊಳ್ಳಬಹುದು ಎನಿಸಿದರೆ ಹಸಿ ಈರುಳ್ಳಿ ಪೇಸ್ಟ್‌ ಮಾಡಿ, ನೇರವಾಗಿ ತಲೆಗೂದಲಿಗೆ ಲೇಪಿಸಿಕೊಳ್ಳಿ. ಒಂದೆರಡು ತಾಸುಗಳ ನಂತರ ತಲೆಸ್ನಾನ ಮಾಡಿ. ಹೀಗೆ ಮಾಡುವುದರಿಂದ ನೈಸರ್ಗಿಕ ಕಂಡೀಶನರ್‌ ರೀತಿಯಲ್ಲಿ ಇದು ಕೆಲಸ ಮಾಡಿ, ಕೂದಲಿನ ಹೊಳಪು ಹೆಚ್ಚಿಸುತ್ತದೆ.

Onion Hair Oil Benefits
Dandruff

ಕೂದಲು ಉದುರುತ್ತಿದ್ದರೆ

ನಿಯಮಿತವಾಗಿ ಈರುಳ್ಳಿ ಎಣ್ಣೆಯ ಬಳಕೆಯಿಂದ ಕೂದಲು ಉದುರುವುದನ್ನು ತಡೆಗಟ್ಟಬಹುದು. ಇದರಲ್ಲಿರುವ ಸಲ್ಫರ್‌ ಅಂಶವು ಹೆಚ್ಚಿನ ಕೊಲಾಜಿನ್‌ ಉತ್ಪಾದನೆಗೆ ಪ್ರಚೋದನೆ ನೀಡುತ್ತದೆ. ಈ ತೈಲವನ್ನು ಕೂದಲಿನ ಬುಡಕ್ಕೆ ಮಸಾಜ್‌ ಮಾಡುವುದರಿಂದ, ಕೂದಲಿನ ಬೇರುಗಳು ಸದೃಢವಾಗಿ, ಉದುರುವುದು ಕಡಿಮೆಯಾಗಿ, ಕೇಶರಾಶಿ ದಟ್ಟವಾಗಿ ಬೆಳೆಯುತ್ತದೆ.

ಬಿಳಿಕೂದಲಿಗೆ

ಇದಕ್ಕೂ ಸಹ ಹಸಿ ಈರುಳ್ಳಿ ಪೇಸ್ಟ್‌ ಪರಿಣಾಮಕಾರಿ. ಒಂದೊಮ್ಮೆ ಆ ಘಾಟನ್ನು ಸಹಿಸಲು ಸಾಧ್ಯವಿಲ್ಲ ಎನಿಸಿದರೆ, ರಾತ್ರಿಯೇ ತಲೆಯ ಚರ್ಮಕ್ಕೆ ಈರುಳ್ಳಿ ಎಣ್ಣೆಯಿಂದ ಲಘುವಾಗಿ ಮಸಾಜ್‌ ಮಾಡಿ. ಬೆಳಗಿನವರೆಗೆ ತೈಲ ಕೂದಲಿನಲ್ಲಿ ಉಳಿಯಲಿ. ನಂತರ ತಲೆಸ್ನಾನ ಮಾಡಿ. ಇದನ್ನು ನಿಯಮಿತವಾಗಿ ಮಾಡುವುದರಿಂದ ತಲೆಗೂದಲು ಬಿಳಿಯಾಗುವುದನ್ನು ಮುಂದೂಡಬಹುದು.

Dandruff

ತಲೆಹೊಟ್ಟು ದೂರ

ಈ ಘಾಟುಮದ್ದಿಗೆ ಬ್ಯಾಕ್ಟೀರಿಯದೊಂದಿಗೆ ಹೋರಾಡುವ ಗುಣವಿದೆ. ಜೊತೆಗೆ ಫಂಗಸ್‌ ವಿರೋಧಿ ಸಾಮರ್ಥ್ಯವೂ ಉಂಟು. ಹಾಗಾಗಿ ತಲೆಯ ಚರ್ಮಕ್ಕೆ ಅಂಟುವಂಥ ಸೋಂಕುಗಳನ್ನು ದೂರ ಇರಿಸುವ ಕ್ಷಮತೆ ಈರುಳ್ಳಿ ಎಣ್ಣೆಗಿದೆ. ಯಾವುದೇ ಕಾರಣಕ್ಕೆ ತಲೆಯಲ್ಲಿ ಹೊಟ್ಟಾಗಿದ್ದರೂ, ಅದನ್ನು ನಿವಾರಿಸಿ, ಚರ್ಮದ ಆರೋಗ್ಯ ಸುಧಾರಿಸುತ್ತದೆ.

ಇದನ್ನೂ ಓದಿ: How safe are apples to eat: ನೀವು ತಿನ್ನುವ ಸೇಬು ಎಷ್ಟು ಸುರಕ್ಷಿತ? ಸೇಬು ಬಾಯಿಗಿಡುವ ಮುನ್ನ ಯೋಚಿಸಿ!

ಉತ್ಕರ್ಷಣ ನಿರೋಧಕಗಳು

ಈರುಳ್ಳಿಯಲ್ಲಿ ಹಲವು ರೀತಿಯ ಉತ್ಕರ್ಷಣ ನಿರೋಧಕಗಳಿವೆ. ಇವುಗಳಿಂದ ಕೂದಲು ಕಪ್ಪಾಗುವುದು ಮಾತ್ರವಲ್ಲ, ತುರಿಕೆಯಂಥ ಸಮಸ್ಯೆಗಳು ದೂರವಾಗುತ್ತದೆ. ಕೂದಲಿಗೆ ಕಡುಕಪ್ಪಾದ ನೈಸರ್ಗಿಕ ಬಣ್ಣ ಹಿಂದಿರುಗುತ್ತದೆ. ಶುಷ್ಕತೆಯೆಲ್ಲ ದೂರವಾಗಿ, ಕೂದಲು ನಯವಾಗಿ ನಳನಳಿಸುತ್ತದೆ. ಈ ಎಣ್ಣೆಯನ್ನು ಕೂದಲಿನ ಬುಡಕ್ಕೆ ಲಘುವಾಗಿ ಮಸಾಜ್‌ ಮಾಡುವುದರಿಂದ, ಆ ಭಾಗದಲ್ಲಿ ರಕ್ತ ಸಂಚಾರವೂ ಹೆಚ್ಚುತ್ತದೆ.

Continue Reading
Advertisement
Shivamogga News
ಕರ್ನಾಟಕ41 seconds ago

Shivamogga News: ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಚಂದ್ರಗುತ್ತಿಯ ಶ್ರೀ ರೇಣುಕಾಂಬ ದೇವಾಲಯದಲ್ಲಿ ವಿಶೇಷ ಪೂಜೆ

Viral News
ಕ್ರೀಡೆ19 mins ago

Viral News: ಮಾವ ಎಮ್ಮೆ ಬದಲು ಆ ಗಿಫ್ಟ್​ ಕೊಡುತ್ತಿದ್ದರೆ ಸಂತಸವಾಗುತ್ತಿತ್ತು ಎಂದ ಒಲಿಂಪಿಕ್ಸ್ ಚಿನ್ನ​ ವಿಜೇತ ಅರ್ಷದ್​ ನದೀಮ್

Kolkata Doctor Murder Case
ದೇಶ33 mins ago

Kolkata Doctor murder case: ವೈದ್ಯೆ ಕೊಲೆ ಕೇಸ್‌; ಪ್ರತಿಭಟನಾಕಾರರ ಮೇಲೆ ವಾಹನ ಹರಿಸಲು ಪೊಲೀಸ್‌ ಯತ್ನ?

Bangalore Rain
ಮಳೆ49 mins ago

Bangalore Rain: ರಾಜಧಾನಿಯ ಹಲವೆಡೆ ಅಬ್ಬರಿಸಿದ ವರುಣ; ಆಟೋ ಮೇಲೆ ಮರ ಬಿದ್ದು ಚಾಲಕ ಸೇರಿ ಮೂವರಿಗೆ ಗಾಯ

MS Dhoni Fans
ಕ್ರಿಕೆಟ್1 hour ago

MS Dhoni Fans: ಧೋನಿ ಅಭಿಮಾನಿಗಳಿಗೆ ಗುಡ್ ನ್ಯೂಸ್; ಹಳೆಯ ಐಪಿಎಲ್​ ನಿಯಮ ಜಾರಿಗೆ ಮುಂದಾದ ಬಿಸಿಸಿಐ

Government Employees Sports
ಬೆಂಗಳೂರು2 hours ago

Government Employees Sports: ಆ.17ರಂದು ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಚಾಲನೆ

Government Employees
ಕರ್ನಾಟಕ2 hours ago

Government Employees: 7ನೇ ವೇತನ ಆಯೋಗ; ಸರ್ಕಾರಿ ನೌಕರರ ಸಂಘದಿಂದ ಆ.17ರಂದು ಸಿಎಂ, ಡಿಸಿಎಂಗೆ ಸನ್ಮಾನ

Saarthi AI
ವಿದೇಶ2 hours ago

Saarthi AI: ಕೆಲ್ಸ ಕಳ್ಕೊಂಡ ಕೋಪಕ್ಕೆ ಬಾಸ್‌ನ ಪಾಸ್‌ಪೋರ್ಟ್‌, ವೀಸಾಕ್ಕೆ ಕನ್ನ- ಉದ್ಯೋಗಿಯ ಕಿತಾಪತಿಗೆ ಬೆಂಗಳೂರು ಸಿಇಒ ಹೈರಾಣ

Paralympics 2024
ಕ್ರೀಡೆ2 hours ago

Paralympics 2024: ಪ್ಯಾರಾಲಿಂಪಿಕ್ಸ್​ನಲ್ಲಿ ಭಾಗ್ಯಶ್ರೀ, ಸುಮಿತ್ ತ್ರಿವರ್ಣ ಧ್ವಜಧಾರಿಗಳು

Crop Damage
ಕರ್ನಾಟಕ3 hours ago

Crop Damage: ಮಳೆಯಿಂದ 81,589 ಹೆಕ್ಟೇರ್‌ನಲ್ಲಿ ಬೆಳೆಹಾನಿ; ಅಂತಿಮ ವರದಿ ಬಂದ ಕೂಡಲೇ ಪರಿಹಾರ ವಿತರಣೆ ಎಂದ ಸಿಎಂ

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ1 week ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 week ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 week ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು1 week ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ1 week ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌