Site icon Vistara News

Import duty exemption : ಅಪರೂಪದ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಎಲ್ಲ ಔಷಧಗಳ ದರ ಇಳಿಕೆ

Medicine Price

False And Misleading: Central Government on reports of hike in medicine prices

ನವ ದೆಹಲಿ: ಕೇಂದ್ರ ಸರ್ಕಾರವು ಅಪರೂಪದ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಎಲ್ಲ ಔಷಧ ಹಾಗೂ ಆಹಾರಗಳ ದರ ಇಳಿಕೆಗೆ ಪೂರಕವಾಗಿ, ಅವುಗಳಿಗೆ ಆಮದು ಸುಂಕದಿಂದ ವಿನಾಯಿತಿ (Import duty exemption) ನೀಡಿದೆ. ಏಪ್ರಿಲ್‌ 1ರಿಂದ ಈ ಆಮದು ಸುಂಕ ವಿನಾಯಿತಿ ಅನ್ವಯವಾಗಲಿದೆ.

ಅಪರೂಪದ ಕಾಯಿಲೆಗಳ ಕುರಿತ ರಾಷ್ಟ್ರೀಯ ನೀತಿಯ (National policy for rare diseases 2021) ಅಡಿಯಲ್ಲಿ ಎಲ್ಲ ಬಗೆಯ ಅಪರೂಪದ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಎಲ್ಲ ಔಷಧ, ಆಹಾರಗಳಿಗೆ ಆಮದು ಸುಂಕದಿಂದ ವಿನಾಯಿತಿ ನೀಡಲಾಗಿದೆ ಎಂದು ಹಣಕಾಸು ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಯಾವ ಔಷಧಗಳಿಗೆ ಆಮದು ಸುಂಕ ವಿನಾಯಿತಿ:

ಕೇಂದ್ರ ಸರ್ಕಾರ ಹಲವಾರು ಬಗೆಯ ಕ್ಯಾನ್ಸರ್‌ಗಳ ಚಿಕಿತ್ಸೆಯಲ್ಲಿ ಬಳಸುವ ಔಷಧವಾಗಿರುವ ಕೀಟ್ರುಡಾ (Keytruda) ಮೇಲಿನ ಆಮದು ಸುಂಕವನ್ನು ವಿನಾಯಿತಿಯ ಪಟ್ಟಿಗೆ ಸೇರಿಸಿದೆ. ಬೇಸಿಕ್‌ ಕಸ್ಟಮ್ಸ್‌ ಸುಂಕ ಅಥವಾ ಆಮದು ಸುಂಕವು 10% ಇರುತ್ತದೆ. ಲೈಫ್‌ ಸೇವಿಂಗ್‌ ಔಷಧ, ಲಸಿಕೆಗಳಿಗೆ 5% ಇರುತ್ತದೆ. ಕೆಲ ಔಷಧಗಳಿಗೆ ವಿನಾಯಿತಿ ನೀಡುತ್ತದೆ.

ವಿಶೇಷ ವೈದ್ಯಕೀಯ ಉದ್ದೇಶಕ್ಕಾಗಿ ನೀಡುವ ಆಹಾರಗಳು ಅಪರೂಪದ ಕಾಯಿಲೆಯಿಂದ ಬಳಲುತ್ತಿರುವವರಿಗೆ ನೀಡಬೇಕಾಗುತ್ತದೆ. ಇದು ಅವರ ಆಹಾರ ಪಥ್ಯದ ಭಾಗವಾಗಿರುತ್ತದೆ. ಇಂಥ ಆಹಾರಗಳಿಗೆ ಆಮದು ಸುಂಕ ವಿನಾಯಿತಿ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.

ಈ ಸುಂಕ ವಿನಾಯಿತಿಯನ್ನು ಪಡೆಯಲು ಆಮದುದಾರರು ಕೇಂದ್ರ ಅಥವಾ ರಾಜ್ಯದ ಆಹಾರ ಇಲಾಖೆಯ ಸರ್ಟಿಫಿಕೇಟ್‌ ಪಡೆಯಬೇಕಾಗುತ್ತದೆ. ಜಿಲ್ಲಾ ವೈದ್ಯಾಧಿಕಾರಿಯ ಸರ್ಟಿಫಿಕೇಟ್‌ ಕೂಡ ಆಗುತ್ತದೆ. ಆರೋಗ್ಯ ಸಚಿವಾಲಯದ ಪ್ರಕಾರ, 10 ಕೆ.ಜಿ ತೂಕವಿರುವ ಮಗುವಿಗೆ ಅಪರೂಪದ ಕಾಯಿಲೆ ಇದ್ದರೆ, ಚಿಕಿತ್ಸೆಗೆ ವಾರ್ಷಿಕ 10 ಲಕ್ಷ ರೂ.ಗಳಿಂದ 1 ಕೋಟಿ ರೂ. ತನಕ ಖರ್ಚಾಗುತ್ತದೆ. ಹೀಗಾಗಿ ಈ ಆಮದು ಸುಂಕ ಇಳಿಕೆಯ ನಿರ್ಧಾರವು ರೋಗಿಗಳಿಗೆ ರಿಲೀಫ್‌ ನೀಡಲಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಇತ್ತೀಚೆಗೆ ಕೆಲ ಔಷಧಗಳಿಗೆ ದರ ಮಿತಿಯನ್ನು ವಿಧಿಸಲಾಗಿದೆ. ವಿವರ ಇಲ್ಲಿದೆ. ರಾಷ್ಟ್ರೀಯ ಔಷಧ ದರ ಪ್ರಾಧಿಕಾರ (National pharmaceutical pricing authority-NPPA) ಸೋಮವಾರ 74 ಔಷಧಗಳ ದರಗಳಿಗೆ ಮಿತಿ ವಿಧಿಸಿದೆ. ಇದರಲ್ಲಿ ಡಯಾಬಿಟಿಸ್‌, ರಕ್ತದೊತ್ತಡ (ಬಿಪಿ) ಸೇರಿದಂತೆ ನಾನಾ ಕಾಯಿಲೆಗಳಿಗೆ ಬಳಸುವ ಔಷಧಗಳು ಸೇರಿವೆ. 2023ರ ಫೆಬ್ರವರಿ 21ರಂದು ನಡೆದ ಪ್ರಾಧಿಕಾರದ 109ನೇ ಸಭೆಯ ನಿರ್ಣಯದ ಪ್ರಕಾರ ಈ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.

ಯಾವ ಔಷಧಗಳು ಅಗ್ಗ?

ಡಪಾಗ್ಲಿಪ್ಲೊಜಿನ್‌ ಸಿಟಾಗ್ಲಿಪ್ಟಿನ್‌ (Dapagliflozin Sitagliption) : 27.75 ರೂ.

ಮೆಟ್‌ಫಾರ್ಮಿನ್‌ ಹೈಡ್ರೊಕ್ಲೋರೈಡ್‌ : 27.75 ರೂ.

ಡಪಾಗ್ಲಿಪ್ಲೊಜಿನ್ ಟೆಲ್‌ಮಿಸರ್ಟಾನ್‌ ( Dapagliflozin sitagliptin)‌ : 10.92 ರೂ.

ಬಿಸೊಪ್ರೊಲೋಲ್‌ ಫ್ಯುಮರಾರಾಟ್‌ (Bisoprolol fumarate) 10.92 ರೂ.

ಸೋಡಿಯಂ ವಾಲ್ಪ್ರೊರೇಟ್‌: 3.20 ರೂ.

Exit mobile version