Import duty exemption : ಅಪರೂಪದ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಎಲ್ಲ ಔಷಧಗಳ ದರ ಇಳಿಕೆ Vistara News
Connect with us

ಆರೋಗ್ಯ

Import duty exemption : ಅಪರೂಪದ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಎಲ್ಲ ಔಷಧಗಳ ದರ ಇಳಿಕೆ

ಅಪರೂಪದ ಕಾಯಿಲೆಗಳ ಚಿಕಿತ್ಸೆಯಲ್ಲಿ ಬಳಸುವ ಔಷಧ ಹಾಗೂ ಆಹಾರ ವಸ್ತುವಿನ ಮೇಲೆ ಆಮದು ಸುಂಕ ವಿನಾಯಿತಿಯನ್ನು ಕೇಂದ್ರ ಸರ್ಕಾರ ಏಪ್ರಿಲ್‌ 1ರಿಂದ ಅನ್ವಯಿಸುವಂತೆ ನೀಡಿದೆ. (Import duty exemption) ಹೀಗಾಗಿ ಅವುಗಳ ದರ ಇಳಿಕೆಯಾಗಲಿದೆ.

VISTARANEWS.COM


on

Drugs Quality Test 48 drugs failed in medical quality test what is the effect
Koo

ನವ ದೆಹಲಿ: ಕೇಂದ್ರ ಸರ್ಕಾರವು ಅಪರೂಪದ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಎಲ್ಲ ಔಷಧ ಹಾಗೂ ಆಹಾರಗಳ ದರ ಇಳಿಕೆಗೆ ಪೂರಕವಾಗಿ, ಅವುಗಳಿಗೆ ಆಮದು ಸುಂಕದಿಂದ ವಿನಾಯಿತಿ (Import duty exemption) ನೀಡಿದೆ. ಏಪ್ರಿಲ್‌ 1ರಿಂದ ಈ ಆಮದು ಸುಂಕ ವಿನಾಯಿತಿ ಅನ್ವಯವಾಗಲಿದೆ.

ಅಪರೂಪದ ಕಾಯಿಲೆಗಳ ಕುರಿತ ರಾಷ್ಟ್ರೀಯ ನೀತಿಯ (National policy for rare diseases 2021) ಅಡಿಯಲ್ಲಿ ಎಲ್ಲ ಬಗೆಯ ಅಪರೂಪದ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಎಲ್ಲ ಔಷಧ, ಆಹಾರಗಳಿಗೆ ಆಮದು ಸುಂಕದಿಂದ ವಿನಾಯಿತಿ ನೀಡಲಾಗಿದೆ ಎಂದು ಹಣಕಾಸು ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಯಾವ ಔಷಧಗಳಿಗೆ ಆಮದು ಸುಂಕ ವಿನಾಯಿತಿ:

ಕೇಂದ್ರ ಸರ್ಕಾರ ಹಲವಾರು ಬಗೆಯ ಕ್ಯಾನ್ಸರ್‌ಗಳ ಚಿಕಿತ್ಸೆಯಲ್ಲಿ ಬಳಸುವ ಔಷಧವಾಗಿರುವ ಕೀಟ್ರುಡಾ (Keytruda) ಮೇಲಿನ ಆಮದು ಸುಂಕವನ್ನು ವಿನಾಯಿತಿಯ ಪಟ್ಟಿಗೆ ಸೇರಿಸಿದೆ. ಬೇಸಿಕ್‌ ಕಸ್ಟಮ್ಸ್‌ ಸುಂಕ ಅಥವಾ ಆಮದು ಸುಂಕವು 10% ಇರುತ್ತದೆ. ಲೈಫ್‌ ಸೇವಿಂಗ್‌ ಔಷಧ, ಲಸಿಕೆಗಳಿಗೆ 5% ಇರುತ್ತದೆ. ಕೆಲ ಔಷಧಗಳಿಗೆ ವಿನಾಯಿತಿ ನೀಡುತ್ತದೆ.

ವಿಶೇಷ ವೈದ್ಯಕೀಯ ಉದ್ದೇಶಕ್ಕಾಗಿ ನೀಡುವ ಆಹಾರಗಳು ಅಪರೂಪದ ಕಾಯಿಲೆಯಿಂದ ಬಳಲುತ್ತಿರುವವರಿಗೆ ನೀಡಬೇಕಾಗುತ್ತದೆ. ಇದು ಅವರ ಆಹಾರ ಪಥ್ಯದ ಭಾಗವಾಗಿರುತ್ತದೆ. ಇಂಥ ಆಹಾರಗಳಿಗೆ ಆಮದು ಸುಂಕ ವಿನಾಯಿತಿ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.

ಈ ಸುಂಕ ವಿನಾಯಿತಿಯನ್ನು ಪಡೆಯಲು ಆಮದುದಾರರು ಕೇಂದ್ರ ಅಥವಾ ರಾಜ್ಯದ ಆಹಾರ ಇಲಾಖೆಯ ಸರ್ಟಿಫಿಕೇಟ್‌ ಪಡೆಯಬೇಕಾಗುತ್ತದೆ. ಜಿಲ್ಲಾ ವೈದ್ಯಾಧಿಕಾರಿಯ ಸರ್ಟಿಫಿಕೇಟ್‌ ಕೂಡ ಆಗುತ್ತದೆ. ಆರೋಗ್ಯ ಸಚಿವಾಲಯದ ಪ್ರಕಾರ, 10 ಕೆ.ಜಿ ತೂಕವಿರುವ ಮಗುವಿಗೆ ಅಪರೂಪದ ಕಾಯಿಲೆ ಇದ್ದರೆ, ಚಿಕಿತ್ಸೆಗೆ ವಾರ್ಷಿಕ 10 ಲಕ್ಷ ರೂ.ಗಳಿಂದ 1 ಕೋಟಿ ರೂ. ತನಕ ಖರ್ಚಾಗುತ್ತದೆ. ಹೀಗಾಗಿ ಈ ಆಮದು ಸುಂಕ ಇಳಿಕೆಯ ನಿರ್ಧಾರವು ರೋಗಿಗಳಿಗೆ ರಿಲೀಫ್‌ ನೀಡಲಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಇತ್ತೀಚೆಗೆ ಕೆಲ ಔಷಧಗಳಿಗೆ ದರ ಮಿತಿಯನ್ನು ವಿಧಿಸಲಾಗಿದೆ. ವಿವರ ಇಲ್ಲಿದೆ. ರಾಷ್ಟ್ರೀಯ ಔಷಧ ದರ ಪ್ರಾಧಿಕಾರ (National pharmaceutical pricing authority-NPPA) ಸೋಮವಾರ 74 ಔಷಧಗಳ ದರಗಳಿಗೆ ಮಿತಿ ವಿಧಿಸಿದೆ. ಇದರಲ್ಲಿ ಡಯಾಬಿಟಿಸ್‌, ರಕ್ತದೊತ್ತಡ (ಬಿಪಿ) ಸೇರಿದಂತೆ ನಾನಾ ಕಾಯಿಲೆಗಳಿಗೆ ಬಳಸುವ ಔಷಧಗಳು ಸೇರಿವೆ. 2023ರ ಫೆಬ್ರವರಿ 21ರಂದು ನಡೆದ ಪ್ರಾಧಿಕಾರದ 109ನೇ ಸಭೆಯ ನಿರ್ಣಯದ ಪ್ರಕಾರ ಈ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.

ಯಾವ ಔಷಧಗಳು ಅಗ್ಗ?

ಡಪಾಗ್ಲಿಪ್ಲೊಜಿನ್‌ ಸಿಟಾಗ್ಲಿಪ್ಟಿನ್‌ (Dapagliflozin Sitagliption) : 27.75 ರೂ.

ಮೆಟ್‌ಫಾರ್ಮಿನ್‌ ಹೈಡ್ರೊಕ್ಲೋರೈಡ್‌ : 27.75 ರೂ.

ಡಪಾಗ್ಲಿಪ್ಲೊಜಿನ್ ಟೆಲ್‌ಮಿಸರ್ಟಾನ್‌ ( Dapagliflozin sitagliptin)‌ : 10.92 ರೂ.

ಬಿಸೊಪ್ರೊಲೋಲ್‌ ಫ್ಯುಮರಾರಾಟ್‌ (Bisoprolol fumarate) 10.92 ರೂ.

ಸೋಡಿಯಂ ವಾಲ್ಪ್ರೊರೇಟ್‌: 3.20 ರೂ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ

ಆರೋಗ್ಯ

Health Tips: ಮೊಸರಿನ ಜೊತೆಗೆ ಈ ಆಹಾರಗಳನ್ನು ತಿಂದರೆ ಅಪಾಯ ಕಟ್ಟಿಟ್ಟಬುತ್ತಿ!

ಬಹಳಷ್ಟು ಸಾರಿ ನಾವು ಮೊಸರಿನೊಂದಿಗೆ ಸೇರಿಸಿ ತಿನ್ನುವ ಜೋಡಿ ಆಹಾರಗಳಿಂದಾಗಿ ನಮಗೆ ಅಸಿಡಿಟಿ, ಗ್ಯಾಸ್‌, ಎದೆಯುರಿ, ಹೊಟ್ಟೆಯುಬ್ಬರ, ಜೀರ್ಣಕ್ರಿಯೆ ಸಮಸ್ಯೆಗಳು ತಲೆದೋರುತ್ತವೆ. ಆಯುರ್ವೇದದ ಪ್ರಕಾರ ವಿರುದ್ಧ ಗುಣದ ಆಹಾರಗಳನ್ನು ಜೊತೆಯಾಗಿ ಸೇವನೆ ಮಾಡುವುದು ಒಳ್ಳೆಯದಲ್ಲ.

VISTARANEWS.COM


on

Edited by

curd myths
Koo

ಬಿಸಿಬಿಸಿಯಾದ ಆಲೂ ಪರಾಠಾದ ಮೇಲೆ ತುಂಡು ಬೆಣ್ಣೆ ಹಾಗೆಯೇ ಕರಗುತ್ತಿದ್ದರೆ, ಅದನ್ನು ಕೈಯಲ್ಲಿ ಮುರಿದು ಮೊಸರಿನ ಜೊತೆಗೆ ಅದ್ದಿ ಅದ್ದಿ ತಿನ್ನುವುದು ಸ್ವರ್ಗ ಸುಖ ಅಂತ ನಿಮಗೆ ಬಹಳ ಸಲ ಅನಿಸಿರಬಹುದಲ್ಲವೇ? ಆದರೆ, ನಿಜವಾದ ಅರ್ಥದಲ್ಲಿ ಇದು ತಿನ್ನಬಾರದ ಜೋಡಿಯಂತೆ. ನಮಗೇ ಗೊತ್ತಿಲ್ಲದ ಹಾಗೆ ಮೊಸರಿನ ಜೊತೆಗೆ ಆರೋಗ್ಯಕರ ಜೋಡಿಯಾಗದ ಜೋಡಿಗಳನ್ನು ನಾವು ತಿನ್ನುವುದನ್ನು ಅಭ್ಯಾಸ ಮಾಡಿಕೊಂಡಿರುತ್ತೇವೆ. ಆದರೆ, ನಿಜಾರ್ಥದಲ್ಲಿ ಅವು ಸರಿಯಾದ ಜೋಡಿಯೇ ಆಗಿರುವುದಿಲ್ಲ.

ಭಾರತದಲ್ಲಿ ಮೊಸರು ಎಂಬುದು ನಿತ್ಯದ ಆಹಾರವಾದ್ದರಿಂದ ಅದಿಲ್ಲದೆ ಬಹುತೇಕದ ಆಹಾರಕ್ರಮ ಪೂರ್ಣವಾಗುವುದಿಲ್ಲವಾದ್ದರಿಂದ ಎಷ್ಟೋ ಸಾರಿ ನಮಗೇ ಗೊತ್ತಿಲ್ಲದೆ ಕೆಲವು ತಪ್ಪುಗಳನ್ನು ನಾವು ಮಾಡುತ್ತಿರುತ್ತೇವೆ. ಮೊಸರಿನಲ್ಲಿ ವಿಟಮಿನ್‌ ಸಿ, ಆಂಟಿ ಆಕ್ಸಿಡೆಂಟ್‌ಗಳು, ಕ್ಯಾಲ್ಶಿಯಂ ಮತ್ತಿತರ ಖನಿಜಾಂಶಗಳು ಇದ್ದು, ಇವು ದೇಹದ ಅಗತ್ಯ ಪೋಷಕಾಂಶಗಳನ್ನು ಪೂರೈಸುತ್ತವಾದರೂ ಬಹಳಷ್ಟು ಸಾರಿ ನಾವು ಮೊಸರಿನೊಂದಿಗೆ ಸೇರಿಸಿ ತಿನ್ನುವ ಜೋಡಿ ಆಹಾರಗಳಿಂದಾಗಿ ನಮಗೆ ಅಸಿಡಿಟಿ, ಗ್ಯಾಸ್‌, ಎದೆಯುರಿ, ಹೊಟ್ಟೆಯುಬ್ಬರ, ಜೀರ್ಣಕ್ರಿಯೆ ಸಮಸ್ಯೆಗಳು ತಲೆದೋರುತ್ತವೆ. ಆಯುರ್ವೇದದ ಪ್ರಕಾರ ವಿರುದ್ಧ ಗುಣದ ಆಹಾರಗಳನ್ನು ಜೊತೆಯಾಗಿ ಸೇವನೆ ಮಾಡುವುದು ಒಳ್ಳೆಯದಲ್ಲ. ಒಂದಕ್ಕೊಂದು ಹೊಂದಿಕೆಯಾಗದ ಗುಣಗಳ ಆಹಾರಗಳನ್ನು ಜೊತೆಯಾಗಿ ಸೇವಿಸುವುದರಿಂದ ಸಾಕಷ್ಟು ಜೀರ್ಣಕ್ರಿಯೆ ತೊಂದರೆಗಳು ಎದುರಾಗುತ್ತವೆ. ಹಾಗಾದರೆ ಬನ್ನಿ, ಮೊಸರಿನ ಜೊತೆಗೆ ಯಾವೆಲ್ಲ ಆಹಾರಗಳು ಒಳ್ಳೆಯ ಜೋಡಿಯಲ್ಲ ನೋಡೋಣ.

1. ಬೆಲ್ಲ ಮತ್ತು ಮೊಸರು: ಬೆಲ್ಲ ಸಕ್ಕರೆಗಿಂತ ಒಳ್ಳೆಯದು ನಿಜ. ಇದೇ ಕಾರಣಕ್ಕೆ ಬಹಳಷ್ಟು ಮಂದಿ ಸಕ್ಕರೆಯ ಬದಲಿಎ ಬೆಲ್ಲವನ್ನು ಬಳಸುವುದುಂಟು. ಆದರೆ, ಬೆಲ್ಲ ಸಕ್ಕರೆಯಂತೆ ಎಲ್ಲದಕ್ಕೂ ಸರಿ ಹೊಂದುವುದಿಲ್ಲ.‌ ಮೊಸರಿನ ಜೊತೆಗೆ ಬೆಲ್ಲ ಯೋಗ್ಯ ಜೋಡಿಯಲ್ಲ. ಮೊಸರು ಶೀತ ಪ್ರಕೃತಿಯಾದರೆ, ಬೆಲ್ಲ ಉಷ್ಣ ಪ್ರಕೃತಿಯದ್ದು. ಹಾಗಾಗಿ ಮೊಸರಿನ ಜೊತೆಗೆ ಬೆಲ್ಲ ಸೇರಿಸಿದರೆ ಕೆಮ್ಮು, ಶೀತ, ಜ್ವರದಂತಹ ಆರೋಗ್ಯ ಸಮಸ್ಯೆಳೂ ಬರಬಹುದು ಎನ್ನುತ್ತಾರೆ ತಜ್ಞರು.

curd

2. ಹಾಲು ಮತ್ತು ಮೊಸರು: ಎಷ್ಟೋ ವರ್ಷಗಳಿಂದ ನಾವು ಹಾಲು ಹಾಗೂ ಮೊಸರನ್ನು ಜೊತೆಜೊತೆಯಾಗಿ ಬಳಸುತ್ತಾ ಬಂದಿದ್ದೇವೆ. ಆದರೆ, ಹಾಲು ಹಾಗೂ ಮೊಸರು ಒಳ್ಳೆಯ ಕಾಂಬಿನೇಶನ್‌ ಅಲ್ಲವಂತೆ. ಯಾವುದೇ ಹುಳಿ ಬಂದ ಆಹಾರವನ್ನು ಹಾಲಿನ ಜೊತೆ ಬೆರೆಸುವುದು ಒಳ್ಳೆಯ ಅಭ್ಯಾಸ ಅಲ್ಲ. ಇದರಿಂದ ಹೊಟ್ಟೆ ಕೆಡುವ ಸಂಭವ ಹೆಚ್ಚು.

3. ಚಹಾ ಮತ್ತು ಮೊಸರು: ಚಹಾದ ಜೊತೆಗೆ ಮೊಸರು ತಿನ್ನುವ ಅಭ್ಯಾಸವಿದ್ದರೆ ಖಂಡಿತ ಬಿಡಿ. ಚಹಾದ ಜೊತೆ ಮೊಸರು ಯಾರಾದರೂ ತಿನ್ನುತ್ತಾರಾ ಎಂದು ಮರುಪ್ರಶ್ನೆ ಹಾಕಬೇಡಿ. ಚಹಾದ ಜೊತೆಗೆ ಮೊಸರಿನಿಂದ ಮಾಡಿದ ತಿನಿಸುಗಳಾದ ದಹಿ ಕೆಬಾಬ್‌, ದಹಿ ಸ್ಯಾಂಡ್‌ವಿಚ್‌ ಮತ್ತಿತರ ತಿನಿಸುಗಳೂ ಕೂಡಾ ಒಳ್ಳೆಯದಲ್ಲ. ತಂಪು ಹಾಗೂ ಉಷ್ಣ ಪ್ರಕೃತಿಯ ಎರಡು ವಿರುದ್ಧ ಆಹಾರಗಳಿವು.

4. ಮಾವಿನಹಣ್ಣು ಹಾಗೂ ಮೊಸರು: ಬಹಳಷ್ಟು ಮಂದಿ ಮ್ಯಾಂಗೋ ಶೇಕ್‌ಗೆ ಮೊಸರು ಹಾಕಿ ಮ್ಯಾಂಗೋ ಲಸ್ಸಿ ಮಾಡುವುದುಂಟು. ರುಚಿಯಾಗಿರುತ್ತದೆ ನಿಜ. ಆದರೆ, ಇದೂ ಕೂಡಾ ಒಳ್ಳೆಯ ಕಾಂಬಿನೇಶನ್‌ ಅಲ್ಲವಂತೆ. ಯಾಕೆಂದರೆ ಮೊಸರಿನಲ್ಲಿ ಪ್ರಾಣಿಜನ್ಯ ಪ್ರೊಟೀನ್‌ ಇದ್ದು ಇದು ಹಣ್ಣುಗಳ ಜೊತೆ ಬೆರೆತು ದೇಹದೊಳಗೆ ಹುಳಬರುವ ಸಾಧ್ಯತೆ ಹೆಚ್ಚಿರುವುದರಿಂದ ಇದು ಅಜೀರ್ಣದಂತಹ ತೊಂದರೆಗಳನ್ನು ಆಹ್ವಾನಿಸುತ್ತದೆ.

5. ಈರುಳ್ಳಿ ಮತ್ತು ಮೊಸರು: ನಾವೆಲ್ಲ ಈರುಳ್ಳಿ ಕತ್ತರಿಸಿ ಮೊಸರಿನಿಂದ ಮಾಡುವ ರೈತಾಕ್ಕೆ ಹಾಕುತ್ತೇವೆ. ಇದು ರುಚಿಯಲ್ಲಿ ಅದ್ಭುತವಾಗಿರುತ್ತದೆ ನಿಜ. ಆದರೆ, ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದಂತೆ. ಈರುಳ್ಳಿಯದು ಉಷ್ಣ ಪ್ರಕೃತಿಯಾದರೆ, ರೈತಾ ಶೀತ ಪ್ರಕೃತಿ. ಇವೆರಡನ್ನು ಸೇರಿಸಿದರೆ, ಚರ್ಮದ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರಬಹುದಂತೆ. ಮುಖ್ಯವಾಗಿ ಮೊಡವೆ, ಚರ್ಮದ ಅಲರ್ಜಿ, ಕಜ್ಜಿ, ತುರಿಕೆ ಇತ್ಯಾದಿ.

ಇದನ್ನೂ ಓದಿ: Benefits Of Eating Yogurt: ಮೊಸರು ತಿನ್ನುವ ಲಾಭಗಳೇನು ಗೊತ್ತೇ?

6. ಮೊಸರು ಹಾಗೂ ಮೀನು: ಮೀನು ಹಾಗೂ ಮೊಸರು ಎರಡರಲ್ಲೀ ಪ್ರೊಟೀನ್‌ ಹೇರಳವಾಗಿದೆ. ಹಾಗಾಗಿ ಎರಡು ಪ್ರೊಟೀನ್‌ಯುಕ್ತ ಆಹಾರಗಳ ಜೋಡಿ ಯಾವತ್ತೂ ಒಳ್ಳೆಯದಲ್ಲ. ಊಟದ ಜೊತೆಗೆ ಒಂದು ಪ್ರೊಟೀನ್‌ಯುಕ್ತ ಆಹಾರವಿದ್ದರೆ ಸಾಕು ಎನ್ನುತ್ತಾರೆ ತಜ್ಞರು. ಯಾಕೆಂದರೆ, ಪ್ರಟೀನನ್ನು ಕರಗಿಸುವುದಕ್ಕೆ ದೇಹಕ್ಕೆ ಹೆಚ್ಚು ಶ್ರಮ ಬೇಕಾಗುತ್ತದೆ.

7. ಪರಾಠಾ ಮತ್ತು ಮೊಸರು: ಇದು ಬಹುತೇಕರಿಗೆ ಕೆಟ್ಟ ಸುದ್ದಿಯಾಗಿ ಕೇಳಬಹುದು. ಯಾಕೆಂದರೆ ಪರಾಠಾದ ಜೊತೆಗೆ ಮೊಸರು ತಿನ್ನುವುದು ಅತ್ಯಂತ ಪ್ರಸಿದ್ಧ ಹಾಗೂ ಉತ್ತರ ಭಾರತದಲ್ಲಿ ಹೆಚ್ಚು ಬಳಕೆಯಲ್ಲಿರುವ ಕಾಂಬಿನೇಶನ್.‌ ಆದರೆ, ಪರಾಠಾದಲ್ಲಿ ಹೆಚ್ ಎಣ್ಣೆಯಂಶ ಇರುವುದರಿಂದ ಅದನ್ನು ಮೊಸರಿನ ಜೊತೆ ಸೇರಿಸಿದಾಗ ಜೀರ್ಣಕ್ರಿಯೆ ನಿಧಾನವಾಗುತ್ತದೆ. ದೇಹದಲ್ಲಿ ಆಲಸ್ಯ ಹೆಚ್ಚುತ್ತದೆ.

ಇದನ್ನೂ ಓದಿ: Watermelon: ಕಲ್ಲಂಗಡಿ ಹಣ್ಣನ್ನು ಕತ್ತಲಾದ ಮೇಲೆ ತಿನ್ನಬಾರದು ಯಾಕೆ ಗೊತ್ತೇ?

Continue Reading

ಆರೋಗ್ಯ

Health Tips For Monsoon: ಮಳೆಗಾಲದಲ್ಲಿ ಕಾಡುವ ಶೀತ-ಜ್ವರವನ್ನು ದೂರ ಇರಿಸುವುದು ಹೇಗೆ?

ಕೆಲವು ಸರಳ ಜೀವನಶೈಲಿಯ ವಿಧಾನಗಳು ಮತ್ತು ಸುಲಭ ಆಹಾರದ ಪಥ್ಯಗಳಿಂದ ಮಳೆಗಾಲದ ಸೋಂಕುಗಳಿಗೆ ಬೆಚ್ಚಿ ಬೀಳದೆ ಬೆಚ್ಚಗಿರಬಹುದು. (Health tips for monsoon) ಹಾಗಾದರೆ ಏನು ಮಾಡಬೇಕು?

VISTARANEWS.COM


on

Edited by

Monsoon Health Tips
Koo
Vistara Monsoon Focus

ಮಳೆಗಾಲದಲ್ಲಿ ಹವಾಮಾನ ಬದಲಾಗುವುದು ಹೊರಗೆ ಮಾತ್ರವಲ್ಲ. ದೇಹದ ಒಳಗೂ ಹೌದಲ್ಲ. ಇದ್ದಕ್ಕಿದ್ದಂತೆ ವಾತಾವರಣದಲ್ಲಿ ಹೆಚ್ಚುವ ಶೀತ, ಥಂಡಿ ಒಂದೆಡೆಯಾದರೆ ಮಳೆಯಲ್ಲಿ ನೆನೆಯಬೇಕೆಂಬ ಬಯಕೆ, ಅನಿವಾರ್ಯತೆ ಇನ್ನೊಂದೆಡೆ. ಮಾತ್ರವಲ್ಲದೆ, ಗಾಳಿಯಲ್ಲಿ ಹರಡುವ ಸೋಂಕುಗಳ ಅಬ್ಬರ. ಈ ಎಲ್ಲದರ ಪರಿಣಾಮವೆಂದರೆ ಆಗಾಗ ಕಾಡುವ ನೆಗಡಿ-ಜ್ವರ. ಮಳೆಗಾಲದಲ್ಲಿ ಕಾಡುವ ನೆಗಡಿ-ಜ್ವರದ ಬಾಧೆಯಿಂದ ಮತ್ತು ಗಾಳಿಯ ಮೂಲಕ ದಾಳಿಯಿಡುವ ಸೋಂಕುಗಳನ್ನು (Health tips for monsoon) ದೂರ ಅಟ್ಟುವುದು ಹೇಗೆ?

ನಿದ್ದೆ: ಇದೆಂಥಾ ಮದ್ದು ಎಂದು ಹುಬ್ಬೇರಿಸಬೇಡಿ. ದಿನಕ್ಕೆ ಎಂಟು ತಾಸು ಕಣ್ತುಂಬಾ ನಿದ್ರೆ ಮಾಡಿದರೆ ದೇಹದ ರೋಗ ನಿರೋಧಕ ಶಕ್ತಿ ಚೆನ್ನಾಗಿರುತ್ತದೆ. ದೀರ್ಘಕಾಲ ನಿದ್ದೆಯಲ್ಲಿರುವಾಗ ತನಗಾದ ಹಾನಿಯನ್ನು ದುರಸ್ತಿ ಮಾಡಿಕೊಳ್ಳುವ ಕೆಲಸವನ್ನು ದೇಹ ಕೈಗೊಳ್ಳುತ್ತದೆ. ಜೊತೆಗೆ, ನಿದ್ದೆಯಲ್ಲಿ ಬಿಡುಗಡೆಯಾಗುವ ಸೈಟೋಕಿನ್‌ಗಳು ದೇಹಕ್ಕೆ ಅವಶ್ಯಕ. ದೇಹದ ಪ್ರತಿರೋಧಕ ಶಕ್ತಿಯನ್ನು ಬಲಗೊಳಿಸುವ ಪ್ರೊಟೀನ್‌ಗಳಿವು.

ವ್ಯಾಯಾಮ: ದೇವರ ತಲೆಯ ಮೇಲೆ ಹೂವಿಡುವಷ್ಟೇ ನಿಯತ್ತಿಂದ ವ್ಯಾಯಾಮ ಮಾಡಿ, ತಪ್ಪಿಸಬೇಡಿ. ಅದಕ್ಕೆಂದು ಜಿಮ್‌ ಸೇರಿಕೊಂಡು ಮೂಟೆಗಟ್ಟಲೆ ಭಾರವನ್ನು ಎತ್ತಬೇಕೆಂದಿಲ್ಲ. ಸರಳ ನಡಿಗೆಯೂ ಆದೀತು. ವಾರದಲ್ಲಿ ಐದು ದಿನ ಮತ್ತು ದಿನಕ್ಕೆ ೩೦ ನಿಮಿಷ ವಾಕಿಂಗ್‌ ಮಾಡಿದರೂ ಸಹ ಆರೋಗ್ಯ ವೃದ್ಧಿಸುತ್ತದೆ. ಮಳೆಗಾಲದ ಜಡ ವಾತಾವರಣದಲ್ಲಿ ತಿಂದಿದ್ದೂ ಪಚನವಾಗುತ್ತದೆ.

Monsoon Health Tips

ವಿಟಮಿನ್‌ ಡಿ: ಮಳೆಗಾಲದ ಮೋಡ ಮುಸುಕಿದ ವಾತಾವರಣದ ಕಾರಣದಿಂದ ಬಿಸಿಲು ಕಡಿಮೆ. ಆದರೆ ಎಂದಾದರೂ ಬಿಸಿಲಿದ್ದಾಗ ಕೊಂಚ ಮೈಯೊಡ್ಡಿಕೊಳ್ಳಿ. ಇದರಿಂದ ದೇಹಕ್ಕೆ ಅಗತ್ಯವಾದ ವಿಟಮಿನ್‌ ಡಿ ದೊರೆಯುತ್ತದೆ. ಮನಸ್ಸಿನ ಮಬ್ಬು ಕಳೆದು ಚೈತನ್ಯ ಆವರಿಸುತ್ತದೆ. ವಿಟಮಿನ್‌ ಡಿ ಕೊರತೆಯಿಂದಲೂ ದೇಹದ ರೋಗ ನಿರೋಧಕ ಶಕ್ತಿ ಕುಂಠಿತಗೊಳ್ಳಬಹುದು. ಹಾಗಾಗಿ ಚೀಸ್‌, ಕೊಬ್ಬು ಹೆಚ್ಚಿರುವ ಮೀನುಗಳು, ಮೊಟ್ಟೆಯ ಹಳದಿ ಭಾಗಗಳಿಂದಲೂ ದೊರೆಯುವ ಡಿ ಜೀವಸತ್ವವನ್ನು ದೇಹಕ್ಕೆ ಒದಗಿಸಿ.

ಅರಿಶಿನದ ಕಷಾಯ: ಪ್ರಬಲವಾದ ಉತ್ಕರ್ಷಣ ನಿರೋಧಕಗಳಿಂದ ಕೂಡಿದ ಅರಿಶಿನವನ್ನು ಹಾಲಿಗೆ ಹಾಕಿಕೊಂಡು ಅಥವಾ ಕಷಾಯದೊಂದಿಗೆ ಸೇವಿಸುವುದು ಒಳ್ಳೆಯದು. ಕರಿಮೆಣಸಿನ ಪುಡಿಯೂ ಇದರೊಂದಿಗೆ ಹಿತ. ಮಾಮೂಲಿ ಚಹಾದ ಬದಲು ಯಾವುದೇ ರೀತಿಯ ಗ್ರೀನ್‌ ಟೀಯನ್ನೂ ಈ ದಿನಗಳಲ್ಲಿ ಬಳಸುವುದು ಹಿತವಾಗುತ್ತದೆ.

ಆಹಾರ: ಆದಷ್ಟೂ ಮನೆಯೂಟವೇ ಇರಲಿ. ಹೊತ್ತಿಂದ ಹೊತ್ತಿಗೆ ಬಿಸಿಯಾಗಿ, ಶುಚಿಯಾಗಿ ಆಹಾರ ಸೇವಿಸುವುದರಿಂದ ಅರ್ಧಕ್ಕರ್ಧ ಆರೋಗ್ಯ ಸಮಸ್ಯೆಗಳು ಬಳಿಗೆ ಸುಳಿಯುವುದಿಲ್ಲ. ಹೊರಗಿನ ಆಹಾರದಲ್ಲಿ ಶುಚಿತ್ವದ ಸಮಸ್ಯೆಯಿದ್ದರೆ ಸೋಂಕುಗಳಿ ಬೆನ್ನು ಬೀಳುತ್ತವೆ. ಸಾಕಷ್ಟು ಪ್ರಮಾಣದಲ್ಲಿ ಬೆಚ್ಚಗಿನ ನೀರು ಕುಡಿಯಿರಿ. ಆದರೆ ಸಿಕ್ಕಾಪಟ್ಟೆ ಬಿಸಿನೀರು ಕುಡಿದು ಗಂಟಲು ಸುಟ್ಟುಕೊಳ್ಳುವ ಅಗತ್ಯವಿಲ್ಲ. ಆಹಾರದಲ್ಲಿ ವಿಟಮಿನ್‌ ಸಿ ಹೆಚ್ಚಿಸಿಕೊಳ್ಳುವುದು ಸಹ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಇನ್ನೊಂದು ವಿಧಾನ.

ಬೆಚ್ಚಗಿರಿ: ಮಳೆಯಲ್ಲಿ ನೆನೆದರೆ ಮೊದಲು ತಣ್ಣಗಿನ ವಸ್ತ್ರಗಳನ್ನು ತೆಗೆದಿರಿಸಿ, ಬೆಚ್ಚಗಿನ ವಸ್ತ್ರಗಳನ್ನು ಧರಿಸಿ. ಬಿಸಿಯಾಗಿ ಕಾಫಿ, ಕಷಾಯ ಅಥವಾ ಗ್ರೀನ್‌ ಟೀ ಕುಡಿಯುವುದು ಲಾಭದಾಯಕ. ಗ್ರೀನ್‌ ಟೀ ಜೊತೆಗೆ ನಾಲ್ಕಾರು ಹನಿ ನಿಂಬೆರಸ ಬೆರೆಸಿಕೊಂಡರೆ ವಿಟಮಿನ್‌ ಸಿ ಸಹ ದೇಹಕ್ಕೆ ದೊರೆಯುತ್ತದೆ. ಕೈಕಾಲುಗಳನ್ನು ಶುಚಿಯಾಗಿ ಇರಿಸಿಕೊಳ್ಳಿ. ಮಳೆಗಾಲದ ದಿನಗಳಲ್ಲಿ ವೈಯಕ್ತಿಕ ಶುಚಿತ್ವ ಕಾಪಾಡಿಕೊಳ್ಳುವುದು ಮಹತ್ವದ್ದೆನಿಸುತ್ತದೆ.

ದೂರವಿರಿ: ಯಾರಿಗಾದರೂ ನೆಗಡಿ, ಜ್ವರದಂಥ ಲಕ್ಷಣಗಳಿದ್ದರೆ ಅವರಿಂದ ದೂರವಿರಿ. ಮಕ್ಕಳನ್ನೂ ಅಂಥವರ ಸಮೀಪ ಬಿಡಬೇಡಿ. ಒಂದೊಮ್ಮೆ ಗೊತ್ತಿಲ್ಲದೆಯೇ ಸೋಂಕಿತರೊಂದಿಗೆ ಹತ್ತಿರದಲ್ಲಿದ್ದಿರಿ ಎಂದಾದರೆ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ. ಕಣ್ಣು, ಮೂಗು, ಬಾಯಿಗಳನ್ನು ಮುಟ್ಟಿಕೊಳ್ಳಬೇಡಿ. ಹೊರಗಿನಿಂದ ಮನೆಯೊಳಗೆ ಬರುತ್ತಿದ್ದಂತೆ ಕೈಕಾಲುಗಳನ್ನು ಮೊದಲು ಶುಚಿ ಮಾಡಿಕೊಳ್ಳಿ.

ಇದನ್ನೂ ಓದಿ: Monsoon Travel: ಮಳೆ ಇಷ್ಟಪಡುವ ಮಂದಿ ಮಳೆಗಾಲದಲ್ಲಿ ಈ ಬೆಟ್ಟದೂರುಗಳಿಗೆ ಹೋಗಬೇಕು!

ಇಷ್ಟಾಗಿಯೂ ನೆಗಡಿ, ಗಂಟಲುರಿ, ತಲೆಭಾರ ಮುಂತಾದ ಫ್ಲೂ ಲಕ್ಷಣಗಳು ಕಾಣಿಸಿಕೊಂಡರೆ- ನಿಮ್ಮನ್ನು ಉಳಿದವರಿಂದ ಬೇರ್ಪಡಿಸಿಕೊಳ್ಳಿ. (Health tips for monsoon) ಕೆಮ್ಮುವಾಗ, ಸೀನುವಾಗ ಮೂಗು-ಬಾಯಿ ಮುಚ್ಚಿಕೊಳ್ಳುವುದು ಅಗತ್ಯ. ಅರಿಶಿನದ ಕಷಾಯ ಅಥವಾ ಶುಂಠಿ ಕಷಾಯಗಳು ನೆರವಾಗಬಹುದು. ಬಿಸಿ ಆವಿ ತೆಗೆದುಕೊಳ್ಳುವುದು ಗಂಟಲುರಿ ಮತ್ತು ಕಟ್ಟಿದ ಮೂಗಿನ ಪರಿಣಾಮಕಾರಿಯಾಗ ಉಪಶಮನ ನೀಡುತ್ತದೆ. ಕೆಮ್ಮು ಹೆಚ್ಚಾದರೆ ಜೇನುತುಪ್ಪದಲ್ಲಿ ಅತಿಮಧುರ ಅಥವಾ ಜೇಷ್ಠಮಧುವಿನ ಪುಡಿಯನ್ನು ತೆಗೆದುಕೊಳ್ಳುವುದು ಅನುಕೂಲ ಎನಿಸಬಹುದು. ಅಡುಗೆಯಲ್ಲಿ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ-ಬೆಳ್ಳಿಳ್ಳಿ ಬಳಸುವುದೂ ಲಾಭದಾಯಕ. ಆಹಾರವನ್ನು ಬಿಸಿಯಿರುವಾಗಲೇ ಸೇವಿಸಿ. ಸಾಕಷ್ಟು ದ್ರಾವಾಹಾರವನ್ನು ಸೇವಿಸಿ, ಮಿಶ್ರಾಂತಿ ಪಡೆಯಿರಿ. ಒಂದೆರಡು ದಿನಗಳಲ್ಲಿ ಜ್ವರ ಮತ್ತಿತರ ಲಕ್ಷಣಗಳು ನಿಯಂತ್ರಣಕ್ಕೆ ಬಾರದಿದ್ದರೆ ವೈದ್ಯರ ಸಲಹೆ ಪಡೆಯಿರಿ.

Continue Reading

ಆರೋಗ್ಯ

Dinesh Gundu Rao: ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣ ಮರು ತನಿಖೆ; ರೆಡಿ ಆಗ್ತಿದೆ ಡಿಪಿಆರ್!

Chamarajanagar oxygen tragedy: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 2021ರಲ್ಲಿ ದಾಖಲಾಗಿದ್ದ ರೋಗಿಗಳಿಗೆ ಆಕ್ಸಿಜನ್‌ ಕೊರತೆಯಾಗಿ ಮೇ 2ರಂದು 36 ಕೊರೊನಾ ರೋಗಿಗಳು ಮೃತಪಟ್ಟಿದ್ದರು. ಆಗ ಪ್ರತಿಪಕ್ಷದಲ್ಲಿದ್ದ ಕಾಂಗ್ರೆಸ್‌, ಈ ಪ್ರಕರಣವನ್ನು ತನಿಖೆಗೆ ಆಗ್ರಹಿಸಿತ್ತು. ಈಗ ಅಧಿಕಾರಕ್ಕೆ ಬಂದೊಡನೆ ಈ ಪ್ರಕರಣದ ತನಿಖೆಗೆ ಮುಂದಾಗಿದೆ.

VISTARANEWS.COM


on

Edited by

Chamarajanagar oxygen tragedy and Dinesh Gundu Rao
Koo

ಬೆಂಗಳೂರು: ‌ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಹಾಗೂ ಕೋವಿಡ್‌ (Covid 19) ಸಂದರ್ಭದಲ್ಲಿ ನಡೆದ ಕೆಲವು ಸಂಗತಿಗಳ ತನಿಖೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ 2021ರಲ್ಲಿ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನಡೆದಿದ್ದ ಆಕ್ಸಿಜನ್ ದುರಂತ (Chamarajanagar oxygen tragedy) ಪ್ರಕರಣದ ಮರು ತನಿಖೆಗೆ ರಾಜ್ಯ ಸರ್ಕಾರ ಹಾಗೂ ಆರೋಗ್ಯ ಇಲಾಖೆ ಮುಂದಾಗಿದೆ. ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಮಾತನಾಡಿ, ಈ ಘಟನೆಯು ಎರಡು ಇಲಾಖೆಗೆ ಒಳಪಡುತ್ತದೆ. ಹಾಗಾಗಿ ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆ (Health Department) ಸಮನ್ವಯತೆ ಇರುವುದರಿಂದ ತನಿಖೆಯನ್ನು ಮಾಡಬೇಕಿದೆ ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ದಿನೇಶ್‌ ಗುಂಡೂರಾವ್‌, ಈ ಹಿಂದಿನ ಸರ್ಕಾರ ತನಿಖೆಗೆ ಕೆಲವರನ್ನು ನೇಮಕ ಮಾಡಿತ್ತು. ಆದರೆ, ಆ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಹಾಗಾಗಿ ಹೊಸ ಸರ್ಕಾರ ಬಂದಿರುವುದರಿಂದ ನಾವು ಮರು ತನಿಖೆಗೆ ನಿರ್ಧಾರ ಮಾಡಿದ್ದೇವೆ. ಮರು ತನಿಖೆಗೆ ಸರ್ಕಾರಕ್ಕೆ ಹೇಳಿದ್ದೇನೆ. ಅದಕ್ಕೆ ಡಿಪಿಆರ್ ಕೂಡ ಸಿದ್ಧವಾಗುತ್ತಿದೆ ಎಂದು ತಿಳಿಸಿದರು.

ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ರೋಗಿಗಳಿಗೆ ಆಕ್ಸಿಜನ್‌ ಕೊರತೆಯಾಗಿ 36 ಕೊರೊನಾ ರೋಗಿಗಳು ಮೃತಪಟ್ಟಿದ್ದರು. ಈ ಬಗ್ಗೆ ಆಗ ಪ್ರತಿಪಕ್ಷದಲ್ಲಿದ್ದ ಕಾಂಗ್ರೆಸ್‌, ಈ ಪ್ರಕರಣವನ್ನು ತನಿಖೆಗೆ ಆದೇಶಿಸಿತ್ತು. ಈಗ ಅಧಿಕಾರಕ್ಕೆ ಬಂದೊಡನೆ ಈ ಪ್ರಕರಣದ ತನಿಖೆಗೆ ಮುಂದಾಗಿದೆ.

ಇದನ್ನೂ ಓದಿ: Electricity Bill: ನೇಕಾರರಿಗೆ ಶಾಕ್!‌ 90 ರೂಪಾಯಿ ಮಿನಿಮಮ್ ಚಾರ್ಜ್‌ 140ಕ್ಕೆ ಏರಿಕೆ; ಇದು ಗ್ಯಾರಂಟಿ ಎಫೆಕ್ಟಾ?

ದಕ್ಷಿಣ ಕನ್ನಡ ಜಿಲ್ಲೆಗೆ ಉಸ್ತುವಾರಿ ಸಚಿವರಾಗಿ ನೇಮಕ ಆಗಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿದ ದಿನೇಶ್ ಗುಂಡೂರಾವ್, ದಕ್ಷಿಣ ಕನ್ನಡ ಪ್ರಜ್ಞಾವಂತ ಜಿಲ್ಲೆಯಾಗಿದೆ. ನಾನು ಯಾವ ಜಿಲ್ಲೆಗೂ ಬೇಡಿಕೆ ಇಟ್ಟಿರಲಿಲ್ಲ. ಇದು ಮುಖ್ಯಮಂತ್ರಿಗಳ ನಿರ್ಧಾರವಾಗಿದೆ. ಯಾವ ಜಿಲ್ಲೆಗೆ ಹೋದರೂ ಕೆಲಸ ಮಾಡಬೇಕು. ದಕ್ಷಿಣ ಕನ್ನಡದಲ್ಲಿ ಜನ ಸಹೋದರತೆಯಿಂದ ಬದುಕಿ ಬಾಳಬೇಕು. ನೈತಿಕ ಪೊಲೀಸ್‌ಗಿರಿಗೆ ಕಡಿವಾಣ ಹಾಕಬೇಕಿದೆ. ಅಲ್ಲಿ ಶಾಂತಿ ಸೌಹರ್ದತೆ ನೆಲೆಸಬೇಕಿದೆ. ಅ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಕೋವಿಡ್ ಅವಧಿಯ ಟೆಂಡರ್‌ಗಳ ಮರು ಪರಿಶೀಲನೆ ಮಾಡಲಾಗುತ್ತದೆ. ಅನುಮಾನ ಬಂದ ಟೆಂಡರ್‌ಗಳ ತನಿಖೆ ಮಾಡುತ್ತೇವೆ. ಹೆಚ್ಚು ಬಿಡ್ ಮಾಡಿರುವ ಟೆಂಡರ್‌ಗಳನ್ನು ಪರಿಶೀಲಿಸಲು ಕ್ರಮ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಈ ಹಿಂದೆ ಕರೆಯಲಾಗಿದ್ದ 108 ಆಂಬ್ಯುಲೆನ್ಸ್ ಟೆಂಡರ್ ಮತ್ತು ಡಯಾಲಿಸಿಸ್ ಟೆಂಡರ್ ಅನ್ನು ರದ್ದುಪಡಿಸಿದ್ದು, ಮರು ಟೆಂಡರ್ ಕರೆಯುತ್ತೇವೆ. ಜಿವಿಕೆ ಮೇಲೆ ಆರೋಪ ಬಂದಿರುವ ಕಾರಣ ಈ ಕ್ರಮ ತೆಗೆದುಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಟೆಂಡರ್ ‌ಕರೆಯುತ್ತೇವೆ ಎಂದು ಹೇಳಿದರು.

ಅಧಿಕಾರಿಗಳಿಗೆ ತರಾಟೆ

ಆರೋಗ್ಯ ಇಲಾಖೆಯಲ್ಲಿ ಅಧಿಕಾರಿಗಳ ಜತೆ ಸಭೆ ಮುಂದುವರಿದ್ದು, ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಈ ವೇಳೆ ಸಚಿವ ದಿನೇಶ್‌ ಗುಂಡೂರಾವ್‌ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಆಸ್ಪತ್ರೆಗಳಲ್ಲಿ ಸಾವಾದರೆ ನಾನು ಸಹಿಸೋದಿಲ್ಲ. ಯಾರದ್ದೇ ತಪ್ಪು ಕಂಡುಬಂದರೂ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ತೆಗೆದುಕೊಳ್ಳುತ್ತೇನೆ. ಈ ವಿಚಾರವಾಗಿ ಯಾವುದೇ ರಾಜಕೀಯ ಒತ್ತಡ ತಂದರೂ ಪ್ರಯೋಜನ ಇಲ್ಲ. ರಾಜಕೀಯ ಒತ್ತಡ ತಂದರೆ ಅದರ ಮುಂದಿನ ಪರಿಣಾಮವನ್ನು ನೀವೇ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: Viral News: ಮುಖ್ಯಮಂತ್ರಿಗಳೇ ಎಣ್ಣೆ ರೇಟ್‌ ಜಾಸ್ತಿ ಮಾಡ್ಬೇಡಿ; BPL ಕಾರ್ಡ್‌ದಾರನ ವಾರ್ಷಿಕ ಲೆಕ್ಕ ಮುಂದಿಟ್ಟ ಕುಡುಕರ ಸಂಘ!

ಈ ಹಿಂದೆ ಡಯಾಬಿಟಿಕ್ ಸಮೀಕ್ಷೆ ನಡೆಸಲಾಗಿತ್ತು. ಈ ವೇಳೆ ಜಿರೋ ಡಯಾಬಿಟಿಕ್ ಎಂದು ಯಾದಗಿರಿ ಜಿಲ್ಲೆಯಲ್ಲಿ ವರದಿ ನೀಡಲಾಗಿದೆ. ಆದರೆ, ಇಂತಹ ತಪ್ಪು ಮಾಹಿತಿಗಳನ್ನು ಕೊಡಬಾರದು ಎಂದು ಇದೇ ವೇಳೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸಚಿವ ದಿನೇಶ್‌ ಗುಂಡೂರಾವ್‌ ಎಚ್ಚರಿಕೆ ನೀಡಿದರು.

Continue Reading

ಆರೋಗ್ಯ

Dinesh Gundu Rao: ಬಿಜೆಪಿ ಅವಧಿಯ 108 ಆಂಬ್ಯುಲೆನ್ಸ್‌, ಡಯಾಲಿಸಿಸ್‌ ಟೆಂಡರ್‌ ರದ್ದು; ಆರೋಗ್ಯ ಇಲಾಖೆಯಲ್ಲಿ ಮೇಜರ್‌ ಸರ್ಜರಿ

Karnataka Health Department: ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯ ಅನೇಕ ಟೆಂಡರ್‌ಗಳನ್ನು ರದ್ದು ಮಾಡುವ ನಿರ್ಧಾರಕ್ಕೆ ಕಾಂಗ್ರೆಸ್‌ ಸರ್ಕಾರ ಬಂದಿದ್ದು, ಈಗ ಆರೋಗ್ಯ ಇಲಾಖೆಯಲ್ಲಿ ಭಾರಿ ಸರ್ಜರಿಗೆ ಮುಂದಾಗಿದೆ. ಈ ಬಗ್ಗೆ ಸಚಿವ ದಿನೇಶ್‌ ಗುಂಡೂರಾವ್‌ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.

VISTARANEWS.COM


on

Edited by

Cancellation of tenders for 108 ambulances and Dinesh Gundu rao
Koo

ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ನೀಡಲಾಗಿದ್ದ ಗುತ್ತಿಗೆಗಳ ಮೇಲೆ ಈಗಿನ ಕಾಂಗ್ರೆಸ್‌ ಸರ್ಕಾರ ಕಣ್ಣಿಟ್ಟಿದ್ದು, ಒಂದೊಂದೇ ಟೆಂಡರ್‌ಗಳನ್ನು ರದ್ದುಗೊಳಿಸುವತ್ತ ಹೆಜ್ಜೆಯನ್ನಿಡುತ್ತಿದೆ. ಅಲ್ಲದೆ, ಆಗಿನ ಸಚಿವ ಡಾ. ಕೆ. ಸುಧಾಕರ್‌ (Dr K Sudhakar) ತೆಗೆದುಕೊಂಡಿರುವ ಹಲವು ನಿರ್ಧಾರಗಳ ಬಗ್ಗೆಯೂ ತನಿಖೆ ನಡೆಸುವುದಾಗಿ ಈಗಾಗಲೇ ಹೇಳಿಕೊಂಡಿದೆ. ಈಗ ಇದರ ಭಾಗವಾಗಿ 108 ಆಂಬ್ಯುಲೆನ್ಸ್‌ ಹಾಗೂ ಡಯಾಲಿಸಿಸ್‌ ಕೇಂದ್ರಗಳ ಟೆಂಡರ್‌ಗಳನ್ನು ರದ್ದುಗೊಳಿಸಿ ಆದೇಶಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ (Dinesh Gundu Rao) ತಿಳಿಸಿದರು.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌, ಈಗಾಗಲೇ ಕೆಲವು ಟೆಂಡರ್‌ಗಳನ್ನು ರದ್ದುಪಡಿಸಿದ್ದೇವೆ. 108 ಆಂಬ್ಯುಲೆನ್ಸ್‌ ಸೇವೆ ನೀಡಲು ಜಿವಿಕೆಗೆ ನೀಡಿದ್ದ ಗುತ್ತಿಗೆಯನ್ನು ರದ್ದುಪಡಿಸಲಾಗಿದೆ. ಅಲ್ಲದೆ, ರಾಜ್ಯದ ಡಯಾಲಿಸಿಸ್ ಕೇಂದ್ರಗಳಲ್ಲಿ ಅವ್ಯವಸ್ಥೆ ಇದೆ. ಹಾಗಾಗಿ ಡಯಾಲಿಸಿಸ್ ಟೆಂಡರ್ ಅನ್ನು ಸಹ ರದ್ದುಪಡಿಸಲಾಗಿದೆ. ಈಗ ಜರೂರಾಗಿರುವ ಕೆಲಸಗಳನ್ನು ಮಾಡುತ್ತಿದ್ದೇವೆ. ಇಲಾಖೆಯ ಕಾರ್ಯನಿರ್ವಹಣೆ ಬದಲಾವಣೆ ಕೆಲಸ ನಡೆಯುತ್ತಿದೆ. ಅಧಿಕಾರಿಗಳು, ವೈದ್ಯರ ಕಾರ್ಯನಿರ್ವಹಣೆಯನ್ನು ಸರಿಪಡಿಸಬೇಕಿದೆ. ಪಾಲಿಸಿ ವಿಚಾರಗಳನ್ನು ಬದಲಾಯಿಸಬೇಕಿದೆ. ಸಾಮಾನ್ಯ ಜನರಿಗೆ ಗುಣಮಟ್ಟದ ಚಿಕಿತ್ಸೆ ಕೊಡಿಸುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: Traffic Police:‌ ಒನ್‌ವೇ, ಫುಟ್‌ಪಾತ್‌ನಲ್ಲಿ ಗಾಡಿ ಓಡಿಸ್ಬೇಡಿ, ಹೋದ್ರೆ ಕ್ರಿಮಿನಲ್ ಕೇಸ್ ಬೀಳೋದು ಗ್ಯಾರಂಟಿ!

ಆರೋಗ್ಯ‌ ಇಲಾಖೆಯಲ್ಲಿ ಸುಧಾರಣೆ ತರಲು ಪ್ರಯತ್ನ ಮಾಡುತ್ತಿದ್ದೇವೆ. ಅದರ ಭಾಗವಾಗಿ ಈಗಾಗಲೇ ಕೆಲವು ಟೆಂಡರ್‌ಗಳನ್ನು ಕ್ಯಾನ್ಸಲ್ ಮಾಡಿದ್ದೇವೆ. ಬಾಕಿ ಕೆಲಸಗಳನ್ನು ಆದ್ಯತೆ ಮೇರೆಗೆ ಮಾಡುತ್ತಿದ್ದೇವೆ. ತಜ್ಞರ ಜತೆ ಚರ್ಚೆ ಮಾಡಿ ಸುಧಾರಣೆ ತರುತ್ತೇವೆ. ಗುಣಮಟ್ಟದ ಚಿಕಿತ್ಸೆ, ಗುಣಮಟ್ಟದ ವ್ಯವಸ್ಥೆಯನ್ನು ನಾವು ಕೊಡುವಂತೆ ಮಾಡುತ್ತೇವೆ ಎಂದು ದಿನೇಶ್‌ ಗುಂಡೂರಾವ್‌ ಹೇಳಿದರು.

ಗೃಹಲಕ್ಷ್ಮಿ ಯೋಜನೆ ಬಗ್ಗೆ ದಿನೇಶ್‌ ಗುಂಡೂರಾವ್‌ ಹೇಳಿಕೆ

ಅರ್ಹರಿಗೆ ಗೃಹಲಕ್ಷ್ಮಿ ಯೋಜನೆ ಸಿಗಲಿದೆ

ಮಕ್ಕಳು ತೆರಿಗೆ ಪಾವತಿದಾರರಾಗಿದ್ದರೆ ಅಂಥವರಿಗೆ ಗೃಹಲಕ್ಷ್ಮಿ ಯೋಜನೆ ಅನ್ವಯವಾಗುವುದಿಲ್ಲ ಎಂಬ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ದಿನೇಶ್‌ ಗುಂಡೂರಾವ್‌, ಈ ಬಗ್ಗೆ ಸ್ಪಷ್ಟವಾಗಿ ಮಾರ್ಗಸೂಚಿ ಇದೆ. ಅಂಥವರು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಬೇಡಿಕೆ ಇರುವಂತಹ ಅರ್ಹರಿಗೆ ಯೋಜನೆ ಸಿಗಲಿದೆ. ಜನಸಂಖ್ಯೆ ನೋಡಿದರೆ 1-2 ಪರ್ಸೆಂಟ್ ಮಾತ್ರ ಈ ರೀತಿ ಇರಬಹುದು. ಈ ರೀತಿ ಕಾರ್ಯಕ್ರಮಗಳನ್ನು ಘೋಷಣೆ ಮಾಡುವುದು ಸುಲಭ. ಆದರೆ ಅನುಷ್ಠಾನ ಮಾಡೋದು ಕಷ್ಟ. ಈಗ ಅನುಷ್ಠಾನ ಕೂಡ ಮಾಡಿ ಜನರಿಗೆ ನಾವು ತೋರಿಸಿದ್ದೇವೆ. ಅನುಷ್ಠಾನ ಮಾಡಲ್ಲ ಎಂದು ಕೆಲವರು ನಕರಾತ್ಮಕತೆಯಿಂದ ನೋಡುತ್ತಿದ್ದಾರೆ ಎಂದು ಹೇಳಿದರು.

ದಿನೇಶ್‌ ಗುಂಡೂರಾವ್‌ ಹೇಳಿಕೆಯ ವಿಡಿಯೊ ಇಲ್ಲಿದೆ

ಇದನ್ನೂ ಓದಿ: Video Viral: ಚಾಮರಾಜನಗರದಲ್ಲಿ ಹಾವುಗಳ ಮಿಲನ; ಗಂಟೆಗೂ ಹೆಚ್ಚು ಸರಸ ಸಲ್ಲಾಪ! ವೈರಲ್‌ ಆಯ್ತು ವಿಡಿಯೊ

ಪಠ್ಯಪುಸ್ತಕ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ದಿನೇಶ್‌ ಗುಂಡೂರಾವ್‌, ಜನರಲ್ಲಿ ಕೋಮುವಾದದ ವಿಚಾರವನ್ನು ಹಿಂದಿನ ಬಿಜೆಪಿ ಸರ್ಕಾರದವರು ತುಂಬಿದರು. ಅವರ ಪಕ್ಷದ ಬೆಳವಣಿಗೆಗೆ ಸಿದ್ಧಾಂತ ಬಿತ್ತಲು ನೋಡುತ್ತಿದ್ದಾರೆ. ಮಕ್ಕಳಲ್ಲಿ ತಪ್ಪು ವಿಚಾರಗಳನ್ನು ತಲೆಗೆ ಹಾಕಬಾರದು, ಅದನ್ನು ಒಪ್ಪಲು ಸಾಧ್ಯವಿಲ್ಲ. ಹೀಗಾಗಿ ನಾವು ಇಂತಹ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ ಎಂದು ಹೇಳಿದರು.

Continue Reading
Advertisement
Chief Minister Siddaramaiah
ಕರ್ನಾಟಕ5 mins ago

ಇಂದು ಮಧ್ಯಾಹ್ನದಿಂದಲೇ ಮಹಿಳೆಯರಿಗೆ ಉಚಿತ ಬಸ್​ ಪ್ರಯಾಣ; ’ಶಕ್ತಿ’ ಟಿಕೆಟ್​​ ಹಂಚಲಿರುವ ಸಿಎಂ ಸಿದ್ದರಾಮಯ್ಯ

curd myths
ಆರೋಗ್ಯ34 mins ago

Health Tips: ಮೊಸರಿನ ಜೊತೆಗೆ ಈ ಆಹಾರಗಳನ್ನು ತಿಂದರೆ ಅಪಾಯ ಕಟ್ಟಿಟ್ಟಬುತ್ತಿ!

Sphoorti Salu
ಸುವಚನ2 hours ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Horoscope Today
ಪ್ರಮುಖ ಸುದ್ದಿ2 hours ago

Horoscope Today: ಈ ರಾಶಿಯವರ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ, ಎಚ್ಚರ ಇರಲಿ!

Hindu janajagruti samiti pressmeet
ಕರ್ನಾಟಕ7 hours ago

ಜೂ.16 ರಿಂದ 22ರವರೆಗೆ ಗೋವಾದಲ್ಲಿ ‘ವೈಶ್ವಿಕ ಹಿಂದು ರಾಷ್ಟ್ರ ಮಹೋತ್ಸವʼ

Man Dies Of Heart Attack In Noida
ಕ್ರೀಡೆ7 hours ago

Heart Attack: ಬ್ಯಾಡ್ಮಿಂಟನ್‌ ಆಡುತ್ತಿದ್ದವನ ಬಾಳಲ್ಲಿ ಆಟವಾಡಿದ ವಿಧಿ; ಹೃದಯಾಘಾತದಿಂದ ವ್ಯಕ್ತಿ ಸಾವು

Digital Payment
ಪ್ರಮುಖ ಸುದ್ದಿ8 hours ago

ವಿಸ್ತಾರ ಸಂಪಾದಕೀಯ: ಡಿಜಿಟಲ್ ಪಾವತಿಯಲ್ಲಿ ಭಾರತ ನಂ.1, ಭಾರತೀಯರ ಪ್ರೌಢಿಮೆಗೆ ಇದು ಸಾಕ್ಷಿ

aamir khan to act in rajamouli movie
ಸಿನಿಮಾ8 hours ago

Aamir Khan : ದಕ್ಷಿಣ ಭಾರತ ಸಿನಿಮಾದಲ್ಲಿ ವಿಲನ್‌ ಆಗ್ತಾರಂತೆ ಬಾಲಿವುಡ್‌ನ ಮಿಸ್ಟರ್‌ ಪರ್ಫೆಕ್ಟ್‌ ಆಮೀರ್ ಖಾನ್‌!

Minister Pralhad Joshi
ಕರ್ನಾಟಕ8 hours ago

ಹುಬ್ಬಳ್ಳಿ ಏರ್‌ಪೋರ್ಟ್‌ ವಿಸ್ತರಣೆಗೆ 273 ಕೋಟಿ ರೂ.; ಕೇಂದ್ರಕ್ಕೆ ಪ್ರಲ್ಹಾದ್‌ ಜೋಶಿ ಧನ್ಯವಾದ

Viat kohli WTC Final 2023
ಕ್ರಿಕೆಟ್8 hours ago

WTC Final : ಭಾರತದ ಗೆಲುವಿಗೆ ಇನ್ನೂ ಬೇಕು 280 ರನ್​, ಕೌತುಕದಲ್ಲಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ಫೈನಲ್​

7th Pay Commission
ನೌಕರರ ಕಾರ್ನರ್7 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ4 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ1 day ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Govt employees ssociation
ಕರ್ನಾಟಕ4 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Village Accountant Recruitment
ಉದ್ಯೋಗ4 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike Order from Govt
ನೌಕರರ ಕಾರ್ನರ್3 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ6 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

Teacher Transfer
ನೌಕರರ ಕಾರ್ನರ್8 months ago

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದಿಂದ ಗುಡ್‌ ನ್ಯೂಸ್‌?

7th Pay Commission
ಕರ್ನಾಟಕ7 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

smartphone
ವಾಣಿಜ್ಯ2 months ago

Mobile export : ಭಾರತದಿಂದ 2022-23ರಲ್ಲಿ 85,000 ಕೋಟಿ ರೂ. ಮೊಬೈಲ್‌ ಫೋನ್‌ ರಫ್ತು

Autodrivers oppose free bus service
ಕರ್ನಾಟಕ14 hours ago

Free Bus Service: ನನ್ ಒಂದೇ ಓಟಲ್ಲ ಸ್ವಾಮಿ, ನಮ್ ಫ್ಯಾಮಿಲಿದೆಲ್ಲ ಇದೆ ಹುಷಾರ್: ಸಿದ್ದರಾಮಯ್ಯಗೆ ಆಟೋ ಡ್ರೈವರ್‌ ವಾರ್ನಿಂಗ್‌

accident in kerala
ವೈರಲ್ ನ್ಯೂಸ್18 hours ago

Viral Video: ಬಸ್ಸು ಮತ್ತು ಲಾರಿ ಮಧ್ಯೆ ಸ್ಕೂಟರ್‌ ಅಪ್ಪಚ್ಚಿ, ಸವಾರರ ಕಣ್ ಮುಂದೆ ಯಮ ರಪ್ ಅಂತ ಪಾಸ್ ಆದ!

Cancellation of tenders for 108 ambulances and Dinesh Gundu rao
ಆರೋಗ್ಯ2 days ago

Dinesh Gundu Rao: ಬಿಜೆಪಿ ಅವಧಿಯ 108 ಆಂಬ್ಯುಲೆನ್ಸ್‌, ಡಯಾಲಿಸಿಸ್‌ ಟೆಂಡರ್‌ ರದ್ದು; ಆರೋಗ್ಯ ಇಲಾಖೆಯಲ್ಲಿ ಮೇಜರ್‌ ಸರ್ಜರಿ

Meghalaya Villagers Chase Bangladesh soldiers
ದೇಶ2 days ago

Viral Video : ಗಡಿ ದಾಟಿ ಭಾರತಕ್ಕೆ ನುಗ್ಗಿದ ಬಾಂಗ್ಲಾ ಯೋಧರು! ಅಟ್ಟಾಟಿಸಿಕೊಂಡು ಒದ್ದೋಡಿಸಿದ ಹಳ್ಳಿಗರು

snake mate in chamarajnagar 2
ಕರ್ನಾಟಕ2 days ago

Video Viral: ಚಾಮರಾಜನಗರದಲ್ಲಿ ಹಾವುಗಳ ಮಿಲನ; ಗಂಟೆಗೂ ಹೆಚ್ಚು ಸರಸ ಸಲ್ಲಾಪ! ವೈರಲ್‌ ಆಯ್ತು ವಿಡಿಯೊ

Rain in mangalore
ಉಡುಪಿ2 days ago

Rain News: ಬಿಪರ್‌ಜಾಯ್‌ ಸೈಕ್ಲೋನ್ ಎಫೆಕ್ಟ್‌; ಮಂಗಳೂರಲ್ಲಿ ಚಿಟಪಟ ಮಳೆ

Rain in koppal
ಉಡುಪಿ2 days ago

Weather Report: ಕರಾವಳಿಯಲ್ಲಿ ಗುಡುಗಲಿರುವ ಮಳೆ; ಮಲೆನಾಡು, ಒಳನಾಡಲ್ಲಿ ಹೇಗಿರಲಿದೆ ಪ್ರಭಾವಳಿ

youths rescued in Kaveri river
ಕರ್ನಾಟಕ3 days ago

Video Viral: ತಲಕಾಡಿನ ಕಾವೇರಿ ನದಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಮೂವರು ಯುವಕರ ರಕ್ಷಣೆ!

Elephant attack in muttunga wildlife sanctuary
ಕರ್ನಾಟಕ3 days ago

Viral Video: ವನ್ಯಧಾಮದಲ್ಲಿ ಮೂತ್ರಕ್ಕೆಂದು ಕಾಡಿಗೆ ಹೋದ; ಆನೆ ದಾಳಿಗೆ ಹೆದರಿ ಪ್ಯಾಂಟ್‌ ಹಿಡಿದು ಓಡೋಡಿ ಬಂದ!

abhishek ambareesh wedding Reception
ಕರ್ನಾಟಕ3 days ago

Abhishek Ambareesh Reception: ಅಭಿ- ಅವಿವ ಅದ್ಧೂರಿ ಆರತಕ್ಷತೆ; ಲೈವ್‌ ವಿಡಿಯೊ ಇಲ್ಲಿದೆ

ಟ್ರೆಂಡಿಂಗ್‌

error: Content is protected !!