Site icon Vistara News

Shravan Recipes: ಶ್ರಾವಣ ಮಾಸದಲ್ಲಿ ಸಾಬುದಾನದ ಈ 5 ಖಾದ್ಯಗಳನ್ನು ಮಾಡಿ ನೋಡಿ

shravan foods

ಭಾರತದಲ್ಲಿ ಶ್ರಾವಣ ಮಾಸವು ಹೆಚ್ಚಿನ ಪ್ರಾಮುಖ್ಯತೆಯನ್ನು (Shravan Recipes) ಹೊಂದಿದೆ. ಶಿವನ ಆಶೀರ್ವಾದವನ್ನು ಪಡೆಯಲು ಹೆಚ್ಚಿನ ಭಕ್ತರು (Shravan 2024) ಉಪವಾಸ ವ್ರತಾಚರಣೆ (fast) ಮಾಡುತ್ತಾರೆ. ಉಪವಾಸ ನಿರತರು ಸಾತ್ವಿಕ ಆಹಾರವನ್ನು (fasting food) ಮಾತ್ರ ಸೇವಿಸುತ್ತಾರೆ. ಉಪವಾಸ ವ್ರತಗಳನ್ನು ಆಚರಿಸುವವರು ಏನು ತಿನ್ನಬೇಕು, ಏನು ತಿನ್ನಬಾರದು ಎನ್ನುವ ನಿಯಮಗಳಿವೆ. ಉಪವಾಸ ನಿರತರಿಗೆ ತಾಜಾ ತರಕಾರಿ (Vegetables) ಮತ್ತು ಹಣ್ಣುಗಳ (fruits) ಜೊತೆಗೆ, ಸಾಬುದಾನವು (Sabudana) ಭಾರತದಲ್ಲಿ ಅತ್ಯಂತ ಜನಪ್ರಿಯ ಉಪವಾಸದ ಆಹಾರವಾಗಿದೆ.

ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಸಾಬುದಾನವನ್ನು ಪ್ರತಿ ದಿನ ಒಂದೇ ರೀತಿಯಾಗಿ ತಿನ್ನುವುದು ಬೇಸರ ಮೂಡಿಸಬಹುದು. ಅದಕ್ಕಾಗಿ ಸಾಬುದಾನದ ವಿವಿಧ ರೀತಿಯ ಖಾದ್ಯಗಳನ್ನು ಮಾಡಿ ಸೇವಿಸಬಹುದು.

ಮರಗೆಣಸಿನ ಬೇರುಗಳಿಂದ ತಯಾರಿಸುವ ಸಾಬುದಾನ ವ್ರತ ಸ್ನೇಹಿ ಆಹಾರಗಳಲ್ಲಿ ಒಂದು. ಇದನ್ನು ಉಪವಾಸ ನಿರತರು ಸೇವಿಸುವುದರಿಂದ ಹೆಚ್ಚು ಕಾಲ ಹೊಟ್ಟೆ ತುಂಬಿದ ಅನುಭವವನ್ನು ಪಡೆಯಬಹುದು. ಹಲವಾರು ಪೋಷಕಾಂಶಗಳನ್ನು ಹೊಂದಿರುವ ಸಾಬುದಾನ ನಂಬರ್ ಒನ್ ಫಾಸ್ಟಿಂಗ್ ಫುಡ್ ಎಂದೇ ಪರಿಗಣಿಸಲಾಗಿದೆ.

ಟಪಿಯೋಕಾ ಮುತ್ತುಗಳು ಎಂದೂ ಕರೆಯಲ್ಪಡುವ ಸಾಬುದಾನವು ಅನೇಕ ಭಾರತೀಯ ಮನೆಗಳಲ್ಲಿ ಪ್ರಧಾನವಾಗಿ ಬಳಸಲಾಗುತ್ತದೆ. ವಿಶೇಷವಾಗಿ ನವರಾತ್ರಿ, ಜನ್ಮಾಷ್ಟಮಿ ಮತ್ತು ಶ್ರಾವಣ ಮಾಸದ ಉಪವಾಸದ ಅವಧಿಯಲ್ಲಿ ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ.

ಸಾಬುದಾನ ಅಥವಾ ಸಾಗೋ ಮೂಲತಃ ಸಣ್ಣ ಪಿಷ್ಟದ ಮುತ್ತುಗಳು. ಇದರಲ್ಲಿ ಹೆಚ್ಚಿನ ಪಿಷ್ಟದ ಅಂಶವಿರುವುದರಿಂದ ಸುಲಭವಾಗಿ ಬೇಯಿಸಬಹುದು. ಸಿಹಿ ಮತ್ತು ಖಾರ ಎರಡಕ್ಕೂ ಹೊಂದಿಕೆಯಾಗುವ ಸಾಗುವಿನ ರುಚಿ ಮಕ್ಕಳಿಂದ ಹಿಡಿದು ವೃದ್ಧರಿಗೂ ಪ್ರಿಯವಾಗುವುದು.

ಆರೋಗ್ಯ ಪ್ರಯೋಜನಗಳು ಏನು?

ಉಪವಾಸ ನಿರತರು ಸಾಮಾನ್ಯವಾಗಿ ಆಹಾರ ಸೇವಿಸದೇ ದೀರ್ಘಕಾಲದವರೆಗೆ ಇರಬೇಕಾಗುತ್ತದೆ. ಹೀಗಾಗಿ ನಿರಂತರ ಶಕ್ತಿಯನ್ನು ಒದಗಿಸುವ ಯಾವುದನ್ನಾದರೂ ಸ್ವಲ್ಪ ಸಾತ್ವಿಕ ಆಹಾರ ಸೇವಿಸುವುದು ಬಹುಮುಖ್ಯವಾಗಿರುತ್ತದೆ. ಆದ್ದರಿಂದ ಪ್ರಾಥಮಿಕವಾಗಿ ಕಾರ್ಬೋಹೈಡ್ರೇಟ್‌ಗಳನ್ನು ಒಳಗೊಂಡಿರುವ ಸಬುದಾನವು ದಿನವಿಡೀ ನಮ್ಮನ್ನು ಶಕ್ತಿಯುತವಾಗಿರಿಸುತ್ತದೆ.

ಉಪವಾಸದ ಸಮಯದಲ್ಲಿ ಸಾಬುದಾನಕ್ಕೆ ಆದ್ಯತೆ ನೀಡಲು ಮತ್ತೊಂದು ಪ್ರಮುಖ ಕಾರಣವೆಂದರೆ ಅದು ಸುಲಭವಾಗಿ ಜೀರ್ಣವಾಗುತ್ತದೆ. ಹೊಟ್ಟೆಯನ್ನು ಭಾರಗೊಳಿಸುವುದಿಲ್ಲ. ಹೊಟ್ಟೆಗೆ ಸಂಬಂಧಿಸಿ ಯಾವುದೇ ಅಸ್ವಸ್ಥತೆ ಅಥವಾ ಉಬ್ಬುವಿಕೆಯನ್ನು ಉಂಟುಮಾಡುವುದಿಲ್ಲ.

ಸಾಬುದಾನದಲ್ಲಿ ಕ್ಯಾಲ್ಸಿಯಂ ಮತ್ತು ಕಬ್ಬಿಣದಂತಹ ಖನಿಜಗಳಲ್ಲಿ ಸಮೃದ್ಧವಾಗಿದೆ. ಹೀಗಾಗಿ ಇದರ ಸೇವನೆ ಉಪವಾಸ ನಿರತರಿಗೆ ಅತ್ಯಗತ್ಯ.


1. ಸಾಬುದಾನ ಖಿಚಡಿ

ಬೆಳಗ್ಗಿನ ಉಪಾಹಾರ, ಸಂಜೆಯ ಫಲಾಹಾರಕ್ಕೆ ಸಾಬುದಾನ ಖಿಚಡಿ ಒಂದು ಜನಪ್ರಿಯ ಉಪವಾಸ ಖಾದ್ಯ. ರಾತ್ರಿಯಿಡೀ ನೆನೆಸಿಟ್ಟ ಸಾಬುದಾನಕ್ಕೆ ಹುರಿದ ಕಡಲೆಕಾಳು, ಜೀರಿಗೆ, ಹಸಿರು ಮೆಣಸಿನಕಾಯಿ ಮತ್ತು ಬೇಯಿಸಿದ ಆಲೂಗಡ್ಡೆಯನ್ನು ಬೆರೆಸಿ ಖಿಚಿಡಿ ತಯಾರಿಸಲಾಗುತ್ತದೆ.


2. ಸಾಬುದಾನ ವಡಾ

ಉಪವಾಸದ ವೇಳೆ ಗರಿಗರಿಯಾದ ಮತ್ತು ರುಚಿಕರವಾದ ತಿಂಡಿಗಳನ್ನು ತಿನ್ನಲು ಬಯಸುವವರು ಸಾಬುದಾನ ವಡಾವನ್ನು ತಯಾರಿಸಬಹುದು. ನೆನೆಸಿದ ಸಾಬುದಾನವನ್ನು ಬೇಯಿಸಿದ ಆಲೂಗಡ್ಡೆ, ಹುರಿದ ಕಡಲೆಕಾಯಿಗಳು ಮತ್ತು ವಿವಿಧ ಮಸಾಲೆಗಳೊಂದಿಗೆ ಬೆರೆಸಿ, ಅನಂತರ ಆಕಾರ ಕೊಟ್ಟು ಎಣ್ಣೆಯಲ್ಲಿ ಕರಿಯಿರಿ. ಇದನ್ನು ಹುಣಸೆ ಹಣ್ಣಿನ ಚಟ್ನಿ ಅಥವಾ ಮಸಾಲೆಯುಕ್ತ ಹಸಿರು ಚಟ್ನಿಯೊಂದಿಗೆ ಸೇವಿಸಲು ರುಚಿಯಾಗಿರುತ್ತದೆ.


3. ಸಾಬುದಾನ ಖೀರ್

ಸಿಹಿ ತಿನ್ನಲು ಬಯಸುವವರಿಗೆ ಸಾಬುದಾನದ ಖೀರ್‌ ಅತ್ಯುತ್ತಮ ಆಯ್ಕೆಯಾಗಿದೆ. ಇದು ಸಾಗು, ಹಾಲು ಮತ್ತು ಸಕ್ಕರೆ ಹಾಕಿ ಇದನ್ನು ತಯಾರಿಸಲಾಗುತ್ತದೆ. ಇದಕ್ಕಾಗಿ ಸಾಬುದಾನವನ್ನು ಮೊದಲು ನೆನೆಸಿ ಇಡಬೇಕು. ಬಳಿಕ ಹಾಲಿನಲ್ಲಿ ಬೇಯಿಸಿ ಸಕ್ಕರೆ, ಏಲಕ್ಕಿ ಸೇರಿಸಿ. ಜೊತೆಗೆ ಒಂದೆರಡು ಕೇಸರಿ ದಳಗಳು, ಕತ್ತರಿಸಿದ ಬೀಜಗಳನ್ನು ಹಾಕಿದರೆ ಸಾಬೂದಾನದ ಖೀರ್ ಸವಿಯಲು ಸಿದ್ಧ.


4. ಸಾಬುದಾನ ದೋಸೆ

ಸಾಬುದಾನ ದೋಸೆಯು ದಕ್ಷಿಣ ಭಾರತದ ಸಾಂಪ್ರದಾಯಿಕ ಉಪಹಾರದ ವಿಶಿಷ್ಟ ಮತ್ತು ಆರೋಗ್ಯಕರ ತಿನಿಸು. ಅಕ್ಕಿಯ ಬದಲಿಗೆ ನೆನೆಸಿದ ಸಾಬುದಾನ, ಹಿಸುಕಿದ ಆಲೂಗಡ್ಡೆ ಮತ್ತು ಮಸಾಲೆಯನ್ನು ಸೇರಿಸಿ ಇದನ್ನು ತಯಾರಿಸಲಾಗುತ್ತದೆ. ಈ ದೋಸೆಯು ಗ್ಲುಟನ್ ಮುಕ್ತವಾಗಿದೆ ಮತ್ತು ಪೋಷಕಾಂಶಗಳಿಂದ ತುಂಬಿರುತ್ತದೆ. ಇದನ್ನು ತೆಂಗಿನಕಾಯಿ ಚಟ್ನಿಯೊಂದಿಗೆ ಬಿಸಿಯಾಗಿ ಸವಿಯಬಹುದು.

ಇದನ್ನೂ ಓದಿ: Shravan 2024: ಶ್ರಾವಣ ಮಾಸದಲ್ಲೇಕೆ ಮಾಂಸಾಹಾರ ಮಾಡಬಾರದು? ಇದಕ್ಕಿದೆ ವೈಜ್ಞಾನಿಕ ಕಾರಣ!


5. ಸಾಬುದಾನದ ಲಡ್ಡು

ಸಕ್ಕರೆ ಮತ್ತು ತುಪ್ಪದಿಂದ ತಯಾರಿಸಿದ ಸಾಬುದಾನದ ಲಡ್ಡು ರುಚಿಯ ಜೊತೆಗೆ ಪೌಷ್ಟಿಕ ಖಾದ್ಯವಾಗಿದೆ. ಸಕ್ಕರೆ ಪುಡಿ, ಏಲಕ್ಕಿ ಮತ್ತು ಗೋಡಂಬಿ ಮತ್ತು ಬಾದಾಮಿಗಳಂತಹ ಬೀಜಗಳನ್ನು ಲಡ್ಡುವಿನಲ್ಲಿ ಸೇರಿಸಬಹುದು. ಇದು ತ್ವರಿತ ಶಕ್ತಿಯ ವರ್ಧಕವೂ ಹೌದು.

Exit mobile version