Site icon Vistara News

14 ತಿಂಗಳು ಮೂತ್ರ ವಿಸರ್ಜನೆ ಸಾಧ್ಯವಾಗದೆ ಪರಿತಪಿಸಿದ ಮಹಿಳೆ; ವರ್ಷದ ಬಳಿಕ ಗೊತ್ತಾಯ್ತು ಈ ಅಪರೂಪದ ಕಾಯಿಲೆ ಹೆಸರು

UK Woman Unable To Urinate for over 1 Year

#image_title

ಯುನೈಟೆಡ್​ ಕಿಂಗ್​​ಡಮ್​​ನ, 30ವರ್ಷದ ಎಲ್ಲೆ ಆಡಮ್ಸ್ ಎಂಬ ಮಹಿಳೆಗೆ 14 ತಿಂಗಳುಗಳ ಕಾಲ ಮೂತ್ರ ವಿಸರ್ಜನೆ ಮಾಡಲು ಸಾಧ್ಯವಾಗಿಯೇ ಇಲ್ಲವಂತೆ..! ಅಂದರೆ ಆಕೆ ಒಂದೂವರೆ ವರ್ಷಗಳ ಕಾಲ ಮೂತ್ರವನ್ನು ವಿಸರ್ಜಿಸಲೇ ಇಲ್ಲ. ಅದೆಷ್ಟೇ ನೀರು, ಜ್ಯೂಸ್​ ಏನೇ ಕುಡಿಯಲಿ, ಆಕೆಗೆ ಮೂತ್ರ ಹೊರಹೋಗುತ್ತಿರಲಿಲ್ಲ. ಮೂತ್ರಕ್ಕೆ ಹೋಗಬೇಕು ಎಂದು ಆಕೆಗೆ ಅನ್ನಿಸಿದರೂ, ಮಾಡಲು ಸಾಧ್ಯವಾಗುತ್ತಿರಲಿಲ್ಲವಂತೆ. ಈ ಬಗ್ಗೆ ಆಕೆಯೇ ತನ್ನ ಇನ್​ಸ್ಟಾಗ್ರಾಂ ಪೋಸ್ಟ್​​ನಲ್ಲಿ ಹೇಳಿಕೊಂಡಿದ್ದಾರೆ.

ಜೀವನದಲ್ಲಿ ಎಲ್ಲವೂ ಚೆನ್ನಾಗಿತ್ತು. ಆರೋಗ್ಯವಾಗಿಯೇ ಇದ್ದೆ. 2020ರ ಅಕ್ಟೋಬರ್​​ನಲ್ಲಿ ಒಂದು ದಿನ ಬೆಳಗ್ಗೆ ಎದ್ದೆ. ಅಂದು ಮೂತ್ರ ಮಾಡಲು ಆಗಲಿಲ್ಲ. ದಿನವೆಲ್ಲ ಹಾಗೇ ಕಳೆದೆ. ನನಗೆ ವಿಚಿತ್ರ ಎನ್ನಿಸಿತು. ಆತಂಕವಾಯಿತು. ವೈದ್ಯರ ಬಳಿ ಹೋದಾಗಲೇ ಗೊತ್ತಾಯಿತು ನನಗೆ ‘ಫೌಲರ್ ಸಿಂಡ್ರೋಮ್’ ಎಂಬ ಅಪರೂಪದ ಕಾಯಿಲೆ ಬಂದಿದ್ದು. ಈ ಕಾಯಿಲೆ ನನ್ನ ಜೀವನವನ್ನು ಸಂಪೂರ್ಣವಾಗಿಯೇ ಬದಲಿಸಿಬಿಟ್ಟಿತು. ಹಾಸಿಗೆಯೇ ಮೇಲೆ ಜೀವನ ಕಳೆವಂತಾಯ್ತು. ಎದ್ದು ಟಾಯ್ಲೆಟ್​ಗೂ ಹೋಗದ ಸ್ಥಿತಿ ತಲುಪಿದೆ’ ಎಂದು ಎಲ್ಲೆ ಬರೆದುಕೊಂಡಿದ್ದಾರೆ.

ಅಂದಹಾಗೇ ಈ ಫೌಲರ್​ ಸಿಂಡ್ರೋಮ್​ ಯಾಕೆ ಉಂಟಾಗುತ್ತದೆ ಎಂಬುದಕ್ಕೆ ನಿರ್ದಿಷ್ಟ ಕಾರಣ ಗೊತ್ತಿಲ್ಲ. ಮೂತ್ರಕೋಶದ ತುದಿಯಲ್ಲಿರುವ ಸ್ನಾಯುಗಳು ತೆರೆಯುವುದು ಮತ್ತು ಬಂದ್​ ಆಗುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತವೆ. ಹೀಗಾದಾಗ ಮೂತ್ರ ಅದರಷ್ಟಕ್ಕೇ ಹೊರಹೋಗುವುದಿಲ್ಲ. ಇದು ಸಾಮಾನ್ಯವಾಗಿ ಯುವತಿಯರಲ್ಲಿ ಕಂಡುಬರುವ ಸಮಸ್ಯೆಯಾಗಿದೆ. ಹೆಚ್ಚಾಗಿ ಹೆರಿಗೆಯಾದ ಬಳಿಕ, ಕೆಲವು ಸರ್ಜರಿ ನಂತರ ಈ ಸಮಸ್ಯೆ ಕಾಣಿಸಿಕೊಳ್ಳಬಹುದು ಎನ್ನಲಾಗಿದ್ದರೂ, ಅದರ ಹೊರತಾಗಿ ಯಾಕೆ ತೊಂದರೆಯಾಗುತ್ತದೆ ಎಂದು ಗೊತ್ತಿಲ್ಲ.

ಈ ಯುವತಿಯ ವಿಚಾರದಲ್ಲಿ ಸಮಸ್ಯೆಯೇ ಆಯಿತು. 2020ರಲ್ಲಿ ಮೊದಲ ಬಾರಿಗೆ ಮೂತ್ರ ವಿಸರ್ಜನೆ ಆಗದೆ ಇದ್ದಾಗ ಆಕೆ ಮೊದಲು ಲಂಡನ್​​ನಲ್ಲಿರುವ ಸೇಂಟ್ ಥಾಮಸ್​ ಆಸ್ಪತ್ರೆಗೆ ಹೋದರು. ಸ್ಕ್ಯಾನ್​ ಮಾಡಿದ ವೈದ್ಯರು, ನಿಮ್ಮ ಮೂತ್ರಕೋಶದಲ್ಲಿ ಸುಮಾರು 1 ಲೀಟರ್​ ಮೂತ್ರ ತುಂಬಿದೆ ಎಂದು ಹೇಳಿ, ಅದನ್ನು ಟ್ಯೂಬ್ ಹಾಕಿ ಹೊರತೆಗೆದು, ಕಳಿಸಿದರು. ಆದರೆ ಮರುದಿನವೂ ಅದೇ ಸಮಸ್ಯೆಯಾಯಿತು. ಈ ಸಮಸ್ಯೆಗೆ ಕಾರಣ ಗೊತ್ತಾಗಲಿಲ್ಲ. ಹಲವು ತಪಾಸಣೆಗಳು, ಔಷಧಗಳು, ಚಿಕಿತ್ಸೆಯ ಬಳಿಕವೂ ಅದೇನು ರೋಗ ಗೊತ್ತಾಗಲಿಲ್ಲ. ನಂತರ ಎಲ್ಲೆ, ಮನೆಯಲ್ಲೇ ಮೂತ್ರವನ್ನೂ ಸ್ವಯಂ ಆಗಿ ತೆಗೆಯುವುದನ್ನು ಕಲಿತರು.

ಇದನ್ನೂ ಓದಿ: Harrassment : ಕಾಫಿ ತೋಟದೊಳಗೆ ಎಳೆದೊಯ್ದು ಯುವತಿಯ ಅತ್ಯಾಚಾರ ಯತ್ನ; ಒಬ್ಬ ಆರೋಪಿ ಸೆರೆ, ಇನ್ನಿಬ್ಬರು ಪರಾರಿ

ಹೀಗೆ ಒಂದು ವರ್ಷಕ್ಕೂ ಅಧಿಕ ಕಾಲದ ಬಳಿಕ 2021ರ ಡಿಸೆಂಬರ್​ನಲ್ಲಿ ಅವರಿಗೆ ಫೌಲರ್​ ಸಿಂಡ್ರೋಮ್ ಇರುವುದು ಪತ್ತೆಯಾಯಿತು. ನೀವು ಜೀವನ ಪರ್ಯಂತ ಹೀಗೆ ತೂರುನಳಿಕೆಯ ಮೂಲಕವೇ ಮೂತ್ರವನ್ನು ಹೊರಗೆ ತೆಗೆಯಬೇಕು ಎಂದು ವೈದ್ಯರು ಹೇಳಿದರು. ಇದೇ ಜನವರಿಯಲ್ಲಿ ಎಲ್ಲೆ ಆಡಮ್ಸ್​ ಒಂದು ಸರ್ಜರಿಗೂ ಒಳಗಾಗಿದ್ದಾರೆ. ಅದಾದ ಮೇಲೆ ಆಕೆ ತೂರು ನಳಿಕೆ ಬಳಕೆ ಕಡಿಮೆ ಮಾಡಿದ್ದಾರೆ. ಶೇ.50ರಷ್ಟು ಸಮಸ್ಯೆ ಸರಿಯಾಗಿದೆ ಎಂದು ಹೇಳಿಕೊಂಡಿದ್ದಾರೆ.

Exit mobile version