Site icon Vistara News

ನನಗೆ ನನ್ನದೇ ಆದ ಫ್ಯಾಷನ್(Fashion) ರೂಲ್ಸ್‌ ಇದೆ!

ಸಂಗೀತಾ ಎಸ್‌. ರಾಜೀವ್‌, ಕನ್ನಡ ಪಾಪ್‌ ಸ್ಟಾರ್‌

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಕನ್ನಡದ ಪಾಪ್‌ ಸ್ಟಾರ್‌, ಪಾಪ್‌ ಐಕಾನ್‌ ಎಂದೇ ಹೆಸರು ಮಾಡಿರುವ ಗಾಯಕಿ ಸಂಗೀತಾ ಎಸ್‌. ರಾಜೀವ್‌. ಸಂಗೀತಾ ಅವರು ಹಿನ್ನಲೆ ಗಾಯಕಿ ಮಾತ್ರವಲ್ಲ, ಕನ್ನಡದ ಪಾಪ್‌ ಆಲ್ಬಂಗಳನ್ನು ಮಾಡುವುದರ ಮೂಲಕ ಯುವ ಜನಾಂಗದ ಮನಗೆದ್ದ ಯುವ ಕಲಾವಿದೆ. ಕನ್ನಡದ ಹಾಡುಗಳನ್ನು ಪಾಪ್‌ ಶೈಲಿಯಲ್ಲಿ ಹೆಜ್ಜೆ ಹಾಕುತ್ತಲೇ ಹಾಡುವ ಸಂಗೀತಾ ಸೆಲೆಬ್ರಿಟಿ ಫ್ಯಾಷನ್‌(Fashion) ಕಾರ್ನರ್‌ ಕಾಲಂನಲ್ಲಿ ತಮ್ಮ ಫ್ಯಾಷನ್‌ ಇಮೇಜ್‌ ಬಗ್ಗೆ ಒಂದಿಷ್ಟು ಮಾತನಾಡಿದ್ದಾರೆ.

ಕನ್ನಡದ ಪಾಪ್‌ ಸ್ಟಾರ್‌ ಆಗಿರುವ ನಿಮ್ಮ ಫ್ಯಾಷನ್‌ ಇಮೇಜ್‌ ಬಗ್ಗೆ ವಿವರಿಸಿ?

ಸಂಗೀತಾ: ಪಾಪ್ ಸ್ಟಾರ್‌ ಎಂದಾಕ್ಷಣಾ ಫಂಕಿ ಫ್ಯಾಷನ್‌ ಎಂದುಕೊಳ್ಳುತ್ತಾರೆ. ಆದರೆ ಈ ವಿಷಯದಲ್ಲಿ ನಾನು ಕೊಂಚ ಡಿಫರೆಂಟ್‌. ಸ್ಟೇಜ್‌ ಮೇಲೆ ಕಾರ್ಯಕ್ರಮ ನೀಡುವಾಗ ಮಾತ್ರ ಶಿಮ್ಮರಿಂಗ್‌, ಗ್ಲಿಟ್ಟರಿ ಟಾಪ್‌ ಹಾಗೂ ಫಂಕಿ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತೇನೆ. ಇದು ಅಲ್ಲಿನ ಅಗತ್ಯ ಕೂಡ. ಆಕರ್ಷಕವಾಗಿ ಬಿಂಬಿಸಲು ಇದು ಸಹಕಾರಿ.

ಸಂಗೀತಾ ಎಸ್‌. ರಾಜೀವ್‌, ಕನ್ನಡ ಪಾಪ್‌ ಸ್ಟಾರ್‌

ನಿಮ್ಮ ಇತ್ತೀಚಿನ ಫ್ಯಾಷನ್‌ನಲ್ಲಿ ಏನೇನಿದೆ?

ಸಂಗೀತಾ: ಸಿಂಪಲ್‌ ಡ್ರೆಸ್ಸಿಂಗ್‌ ನನಗಿಷ್ಟ. ಸದ್ಯಕ್ಕೆ ನಾನು ಪಾಸ್ಟೆಲ್‌ ಶೇಡ್ಸ್‌ ಇಷ್ಟಪಡಲಾರಂಭಿಸಿದ್ದೇನೆ. ಇನ್ನು ಕ್ಯಾಶುವಲ್ಸ್‌ನಲ್ಲಿ ಜಂಪ್‌ಸೂಟ್‌ ಇಷ್ಟ. ಅದಕ್ಕೆ ಹೊಂದುವ ಜಾಕೆಟ್‌ ಧರಿಸುವುದು ಲಿಸ್ಟ್‌ನಲ್ಲಿ ಸೇರಿದೆ. ಇನ್ನು ಫ್ಲೋರಲ್‌, ಮಲ್ಟಿ ಕಲರ್‌ ಡ್ರೆಸ್‌ಗಳು ನನ್ನ ವಾರ್ಡ್ರೊಬ್ ಅಲಂಕರಿಸಿವೆ. ಟ್ರೆಡಿಷನಲ್‌ ಇಂಡಿಯನ್‌ ಔಟ್‌ಫಿಟ್‌ ವಿಷಯಕ್ಕೆ ಬಂದಲ್ಲಿ ಸಿಂಪಲ್‌ ಸೀರೆ ಧರಿಸುವುದು ನನಗಿಷ್ಟ. ಇದಕ್ಕೆ ಹೊಂದುವಂತೆ ಮ್ಯಾಚಿಂಗ್‌ ಜುವೆಲರಿ ಧರಿಸುವ ಅಭ್ಯಾಸವಿದೆ.

ಟ್ರೆಂಡ್‌ಗೆ ತಕ್ಕಂತೆ ಫ್ಯಾಷನ್‌ ರೂಲ್ಸ್‌ ಪಾಲಿಸುತ್ತೀರಾ?

ಸಂಗೀತಾ: ಫ್ಯಾಷನ್‌ ರೂಲ್ಸ್‌ ಪಾಲಿಸಲು ನನಗೆ ಆಗುವುದಿಲ್ಲ. ಬದಲಿಗೆ ನನ್ನದೇ ಆದ ಫ್ಯಾಷನ್‌ ಇಮೇಜ್‌ ಬೆಳೆಸಿಕೊಂಡಿದ್ದೇನೆ. ನನ್ನ ಪ್ರಕಾರ, ನಾವು ಯಾವ ಟ್ರೆಂಡನ್ನು ಫಾಲೋ ಮಾಡುತ್ತಿದ್ದೀವಿ ಎನ್ನುವುದಕ್ಕಿಂತ ಧರಿಸಿದಾಗ ಹೇಗೆ ಕಾಣಿಸುತ್ತೇವೆ ಹಾಗೂ ಹೇಗೆ ಅದನ್ನು ಪ್ರತಿನಿಧಿಸುತ್ತಿದ್ದೇವೆ ಎಂಬುದು ಮುಖ್ಯವಾಗುತ್ತದೆ. ಹಾಗಾಗಿ ನಾನು ಹೇಳುವುದೇ ಇಷ್ಟೇ, ಪ್ರತಿಯೊಬ್ಬರು ಅವರದ್ದೇ ಆದ ಫ್ಯಾಷನ್‌ ರೂಲ್ಸ್‌ ಪಾಲಿಸುವುದು ಸೂಕ್ತ.

ಪ್ರತಿ ಪಾಪ್‌ ಆಲ್ಬಂನಲ್ಲಿ ನಿಮ್ಮದೇ ಆದ ಕಾಸ್ಟ್ತ್ಯೂಮ್‌ನಿಂದ ಎಲ್ಲರನ್ನೂ ಸೆಳೆಯುತ್ತಿರಲ್ಲ! ಇದರ ಗುಟ್ಟೇನು?

ಸಂಗೀತಾ ಎಸ್‌. ರಾಜೀವ್‌

ಸಂಗೀತಾ: ಪಾಪ್‌ ಸ್ಟಾರ್‌ ಎಂದಾಕ್ಷಣ ಪಾಪ್‌ ಆಲ್ಬಂನಲ್ಲೂ ಸದಾ ಮಿನುಗುವ ಉಡುಪಿನಲ್ಲೆ ಕಾಣಿಸಬೇಕೆಂಬ ನಿಯಮವಿಲ್ಲ. ಹಾಗಾಗಿ ನಾನು ಆಲ್ಬಂಗಳಲ್ಲಿ ಪ್ರಯೋಗಾತ್ಮಕವಾಗಿ ದೇಸಿ ಆಕರ್ಷಕ ಉಡುಪುಗಳಲ್ಲಿ ಕಾಣಿಸಿಕೊಂಡಿದ್ದೇನೆ. ಇದು ಹಿಟ್‌ ಕೂಡ ಆಗಿದೆ.

ನೀವೂ ಶಾಪಿಂಗ್‌ ಪ್ರಿಯರಾ?

ಸಂಗೀತಾ: ಹೌದು. ಶಾಪಿಂಗ್‌ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ! ಬೆಂಗಳೂರಿನ ಕಮರ್ಷಿಯಲ್‌ ಸ್ಟ್ರೀಟ್‌ ನನ್ನ ಶಾಪಿಂಗ್‌ ಸ್ಪಾಟ್‌.

(ಲೇಖಕಿ ಫ್ಯಾಷನ್ ಪತ್ರಕರ್ತೆ)

ಇದನ್ನೂ ಓದಿ| ಮಾಡರ್ನ್ ಯುವಕರ ಮನಗೆದ್ದ ಐಬ್ರೋ ಸ್ಲಿಟ್!

Exit mobile version