ಶೀಲಾ ಸಿ. ಶೆಟ್ಟಿ, ಬೆಂಗಳೂರು
ಚೈನ್ ಲಿಂಕ್ ಜ್ಯುವೆಲರಿಗಳು ಫ್ಯಾಷನ್ (Jewel Fashion) ಜ್ಯುವೆಲರಿ ಲೋಕಕ್ಕೆ ಲಗ್ಗೆ ಇಟ್ಟಿವೆ. ಸದ್ಯ, ಜೆನ್ ಜಿ ಫ್ಯಾಷನ್ ಜ್ಯುವೆಲರಿ (Jewel Fashion) ಸ್ಟೈಲ್ ಸ್ಟೇಟ್‌ಮೆಂಟ್‌ನ ಟಾಪ್ ಲಿಸ್ಟ್‌ಗೆ ಇವು ಎಂಟ್ರಿ ಪಡೆದಿದ್ದು, ವೆಸ್ಟರ್ನ್, ಕ್ಯಾಶುವಲ್ ಹಾಗೂ ಸೆಮಿ ಫಾರ್ಮಲ್ ಸೇರಿದಂತೆ ಸಾಕಷ್ಟು ಉಡುಪುಗಳೊಂದಿಗೆ ಮ್ಯಾಚ್ ಆಗುವ ವಿನ್ಯಾಸದಲ್ಲಿ ಇವು ಬಿಂದಾಸ್ ಲುಕ್ ನೀಡುತ್ತಿವೆ. ಪರಿಣಾಮ, ಈ ಜನರೇಷನ್‌ನ ಯುವಕ-ಯುವತಿಯರನ್ನು ಸವಾರಿ ಮಾಡತೊಡಗಿವೆ.
ಏನಿದು ಲಿಂಕ್ ಚೈನ್ ?
ಅಂದಹಾಗೆ, ಈ ಡಿಸೈನ್ ಏನೂ ಹೊಸದಾಗಿ ಕಂಡು ಹಿಡಿದ ವಿನ್ಯಾಸವೇನೂ ಅಲ್ಲ! ಹಳೆಯ ವಿನ್ಯಾಸವೇ! ಹೊಸ ರೂಪದಲ್ಲಿ ಹಾಗೂ ಡಿಸೈನ್‌ನಲ್ಲಿ ಬಿಡುಗಡೆಗೊಂಡಿವೆ ಅಷ್ಟೇ ಎನ್ನುತ್ತಾರೆ ಜ್ಯುವೆಲ್ ಡಿಸೈನರ್ ದೇವಿಕಾ. ಅವರ ಪ್ರಕಾರ, ಅಜ್ಜಿ ಕಾಲದಲ್ಲಿ ಈ ಚೈನ್ ಲಿಂಕ್ ವಿನ್ಯಾಸದ ಬಂಗಾರದ ಆಭರಣಗಳು ಸಾಕಷ್ಟು ಪಾಪುಲರ್ ಆಗಿದ್ದವು. ದಪ್ಪನೆಯ ಡಿಸೈನ್‌ನಲ್ಲಿ ಎರಡೆಳೆ ವಿನ್ಯಾಸದಲ್ಲಿ ಹೀಗೆ ಬಂಗಾರದಲ್ಲಿ ಮಾಡಿಸಿ ಧರಿಸುತ್ತಿದ್ದರು. ಇದೀಗ ಇವು ಟ್ರೆಂಡಿಯಾಗಿರುವುದು ಬಂಗಾರದಲ್ಲಿ ಅಲ್ಲ! ಬದಲಿಗೆ ಬಂಗಾರೇತರ ಮೆಟಲ್‌ನಲ್ಲಿ. ಹೌದು, ಒಂದು ಗ್ರಾಮ್ ಗೋಲ್ಡ್, ಗೋಲ್ಡ್ ಕವರಿಂಗ್, ಸಿಲ್ವರ್, ಬ್ಲಾಕ್ ಹಾಗೂ ವೈಟ್ ಮೆಟಲ್‌ನಲ್ಲಿ ಎನ್ನುತ್ತಾರೆ ಫ್ಯಾಷನ್ ಜ್ಯುವೆಲರಿ ಡಿಸೈನರ್ ರಾಚಪ್ಪ.
ಈ ಲಿಂಕ್ ಚೈನ್ ಇದೀಗ ಗೋಲ್ಡನ್, ಸಿಲ್ವರ್ ಹಾಗೂ ಬ್ಲಾಕ್ ಮೆಟಲ್ ಸೇರಿದಂತೆ ನಾನಾ ಮೆಟೀರಿಯಲ್‌ನಲ್ಲಿ ಮಿಕ್ಸ್ ಮ್ಯಾಚ್ ಡಿಸೈನ್‌ನಲ್ಲಿ ಲೆಕ್ಕವಿಲ್ಲದಷ್ಟು ವಿನ್ಯಾಸಗಳಲ್ಲಿ ಬಿಡುಗಡೆಗೊಂಡಿದ್ದು, ಸಿಂಗಲ್ ಲೇಯರ್, ಡಬ್ಬಲ್ ಲೇಯರ್ ಹಾಗೂ ಮಲ್ಟಿ ಲೇಯರ್ ಚೈನ್, ಚಂಕಿ-ಫಂಕಿ ಡಿಸೈನ್‌ನಲ್ಲಿ ಯುವಕ-ಯುವತಿಯರ ಕತ್ತನ್ನು ಬಳಸಿವೆ.
ವೈವಿಧ್ಯಮಯ ಡಿಸೈನ್ಸ್
ಇದೀಗ ಅತಿ ಹೆಚ್ಚು ಬೇಡಿಕೆ ಸೃಷ್ಟಿಸಿಕೊಂಡಿರುವ ಚೈನ್ ಲಿಂಕ್ ಆಭರಣಗಳಲ್ಲಿ , ಚೈನ್ ರಿಂಗ್ ನೆಕ್ಲೇಸ್, ಸ್ಲೀಕ್ ಚೈನ್ಸ್, ಬೋಲ್ಡ್ ಚೈನ್ ಲಿಂಕ್ ನೆಕ್ಲೇಸ್, ಚೈನ್ ಲಿಂಕ್ ಬ್ರೇಸ್‌ಲೇಟ್ಸ್, ಚಂಕಿ ಚೈನ್ ಲಿಂಕ್ಸ್ ಸೇರಿದಂತೆ ಫಿಂಗರ್ ರಿಂಗ್‌ಗಳು ಲಭ್ಯ. ಕಿವಿಗೆ ಧರಿಸುವ ಹೂಪ್ ಚೈನ್ ಲಿಂಕ್ ಡಿಸೈನ್‌ನವು ಕೂಡ ಬೇಡಿಕೆ ಹೆಚ್ಚಿಸಿಕೊಂಡಿವೆ ಎನ್ನುತ್ತಾರೆ ಸ್ಟೈಲಿಸ್ಟ್ ರಾಘವ್.
ಚೈನ್ ಲಿಂಕ್ ಫ್ಯಾಷನ್ ಜ್ಯುವೆಲರಿಗಳು ಎಲ್ಲೆಲ್ಲಿ ಲಭ್ಯ?
- ಕಮರ್ಷಿಯಲ್ ಸ್ಟ್ರೀಟ್ ಶಾಪ್ಗಳಲ್ಲಿ ಈ ಬಗೆಯ ಜ್ಯುವೆಲರಿಗಳು ಲಭ್ಯ.
- ಮಾಲ್ಗಳ ಆಕ್ಸೆಸರೀಸ್ ವಿಭಾಗದಲ್ಲಿ ಲಭ್ಯ. ಆದರೆ, ಬೆಲೆ ದುಬಾರಿ.
- ಜಯನಗರ, ಮಲ್ಲೇಶ್ವರದ ಆಕ್ಸೆಸರೀಸ್ ಸ್ಟ್ರೀಟ್ ಶಾಪ್ಗಳಲ್ಲೂ ದೊರೆಯುತ್ತವೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Summer Fashion: ಸೀಸನ್ ಫ್ಯಾಷನ್‌ನಲ್ಲಿ ಮಾನಿನಿಯರ ಸೆಳೆದ ಫಿಟ್ & ಫ್ಲೇರ್ ಡ್ರೆಸ್