Jewel Fashion: ಜೆನ್‌ ಜಿ ಫ್ಯಾಷನ್‌ ಜ್ಯುವೆಲರಿ ಟಾಪ್‌ ಲಿಸ್ಟ್‌ಗೆ ಲಗ್ಗೆ ಇಟ್ಟ ಚೈನ್‌ ಲಿಂಕ್‌ ಜ್ಯುವೆಲ್ಸ್ - Vistara News

ಫ್ಯಾಷನ್

Jewel Fashion: ಜೆನ್‌ ಜಿ ಫ್ಯಾಷನ್‌ ಜ್ಯುವೆಲರಿ ಟಾಪ್‌ ಲಿಸ್ಟ್‌ಗೆ ಲಗ್ಗೆ ಇಟ್ಟ ಚೈನ್‌ ಲಿಂಕ್‌ ಜ್ಯುವೆಲ್ಸ್

ಚೈನ್‌ ಲಿಂಕ್‌ ಜ್ಯುವೆಲ್‌ ಫ್ಯಾಷನ್‌ (Jewel Fashion) ಇದೀಗ ಜೆನ್‌ ಜಿ ಯುವಕ-ಯುವತಿಯರ ಫ್ಯಾಷನ್‌ ಲಿಸ್ಟ್‌ಗೆ ಸೇರಿದ್ದು, ಈ ಸೀಸನ್‌ನ ಟಾಪ್‌ ಫ್ಯಾಷನ್‌ ಜ್ಯುವೆಲರಿ ಸ್ಟೇಟ್‌ಮೆಂಟ್‌ಗೆ ಸೇರಿವೆ. ಯಾವ್ಯಾವ ಬಗೆಯವು ಟ್ರೆಂಡಿಯಾಗಿವೆ ಎಂಬುದರ ಬಗ್ಗೆ ಇಲ್ಲಿದೆ ಡಿಟೇಲ್ಸ್‌.

VISTARANEWS.COM


on

Jewel Fashion
ಚಿತ್ರಗಳು : ಪಿಕ್ಸೆಲ್‌
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಚೈನ್‌ ಲಿಂಕ್‌ ಜ್ಯುವೆಲರಿಗಳು ಫ್ಯಾಷನ್‌ (Jewel Fashion) ಜ್ಯುವೆಲರಿ ಲೋಕಕ್ಕೆ ಲಗ್ಗೆ ಇಟ್ಟಿವೆ. ಸದ್ಯ, ಜೆನ್‌ ಜಿ ಫ್ಯಾಷನ್‌ ಜ್ಯುವೆಲರಿ (Jewel Fashion) ಸ್ಟೈಲ್‌ ಸ್ಟೇಟ್‌ಮೆಂಟ್‌ನ ಟಾಪ್‌ ಲಿಸ್ಟ್‌ಗೆ ಇವು ಎಂಟ್ರಿ ಪಡೆದಿದ್ದು, ವೆಸ್ಟರ್ನ್, ಕ್ಯಾಶುವಲ್‌ ಹಾಗೂ ಸೆಮಿ ಫಾರ್ಮಲ್‌ ಸೇರಿದಂತೆ ಸಾಕಷ್ಟು ಉಡುಪುಗಳೊಂದಿಗೆ ಮ್ಯಾಚ್‌ ಆಗುವ ವಿನ್ಯಾಸದಲ್ಲಿ ಇವು ಬಿಂದಾಸ್‌ ಲುಕ್‌ ನೀಡುತ್ತಿವೆ. ಪರಿಣಾಮ, ಈ ಜನರೇಷನ್‌ನ ಯುವಕ-ಯುವತಿಯರನ್ನು ಸವಾರಿ ಮಾಡತೊಡಗಿವೆ.

dress up with Jewel Fashion
#image_title

ಏನಿದು ಲಿಂಕ್ ಚೈನ್‌ ?

ಅಂದಹಾಗೆ, ಈ ಡಿಸೈನ್‌ ಏನೂ ಹೊಸದಾಗಿ ಕಂಡು ಹಿಡಿದ ವಿನ್ಯಾಸವೇನೂ ಅಲ್ಲ! ಹಳೆಯ ವಿನ್ಯಾಸವೇ! ಹೊಸ ರೂಪದಲ್ಲಿ ಹಾಗೂ ಡಿಸೈನ್‌ನಲ್ಲಿ ಬಿಡುಗಡೆಗೊಂಡಿವೆ ಅಷ್ಟೇ ಎನ್ನುತ್ತಾರೆ ಜ್ಯುವೆಲ್‌ ಡಿಸೈನರ್‌ ದೇವಿಕಾ. ಅವರ ಪ್ರಕಾರ, ಅಜ್ಜಿ ಕಾಲದಲ್ಲಿ ಈ ಚೈನ್‌ ಲಿಂಕ್‌ ವಿನ್ಯಾಸದ ಬಂಗಾರದ ಆಭರಣಗಳು ಸಾಕಷ್ಟು ಪಾಪುಲರ್‌ ಆಗಿದ್ದವು. ದಪ್ಪನೆಯ ಡಿಸೈನ್‌ನಲ್ಲಿ ಎರಡೆಳೆ ವಿನ್ಯಾಸದಲ್ಲಿ ಹೀಗೆ ಬಂಗಾರದಲ್ಲಿ ಮಾಡಿಸಿ ಧರಿಸುತ್ತಿದ್ದರು. ಇದೀಗ ಇವು ಟ್ರೆಂಡಿಯಾಗಿರುವುದು ಬಂಗಾರದಲ್ಲಿ ಅಲ್ಲ! ಬದಲಿಗೆ ಬಂಗಾರೇತರ ಮೆಟಲ್‌ನಲ್ಲಿ. ಹೌದು, ಒಂದು ಗ್ರಾಮ್‌ ಗೋಲ್ಡ್‌, ಗೋಲ್ಡ್‌ ಕವರಿಂಗ್‌, ಸಿಲ್ವರ್‌, ಬ್ಲಾಕ್‌ ಹಾಗೂ ವೈಟ್‌ ಮೆಟಲ್‌ನಲ್ಲಿ ಎನ್ನುತ್ತಾರೆ ಫ್ಯಾಷನ್‌ ಜ್ಯುವೆಲರಿ ಡಿಸೈನರ್‌ ರಾಚಪ್ಪ.

ಈ ಲಿಂಕ್‌ ಚೈನ್ ಇದೀಗ ಗೋಲ್ಡನ್‌, ಸಿಲ್ವರ್‌ ಹಾಗೂ ಬ್ಲಾಕ್‌ ಮೆಟಲ್‌ ಸೇರಿದಂತೆ ನಾನಾ ಮೆಟೀರಿಯಲ್‌ನಲ್ಲಿ ಮಿಕ್ಸ್‌ ಮ್ಯಾಚ್‌ ಡಿಸೈನ್‌ನಲ್ಲಿ ಲೆಕ್ಕವಿಲ್ಲದಷ್ಟು ವಿನ್ಯಾಸಗಳಲ್ಲಿ ಬಿಡುಗಡೆಗೊಂಡಿದ್ದು, ಸಿಂಗಲ್‌ ಲೇಯರ್, ಡಬ್ಬಲ್‌ ಲೇಯರ್‌ ಹಾಗೂ ಮಲ್ಟಿ ಲೇಯರ್‌ ಚೈನ್‌, ಚಂಕಿ-ಫಂಕಿ ಡಿಸೈನ್‌ನಲ್ಲಿ ಯುವಕ-ಯುವತಿಯರ ಕತ್ತನ್ನು ಬಳಸಿವೆ.

girl Necklace Jewel Fashion

ವೈವಿಧ್ಯಮಯ ಡಿಸೈನ್ಸ್

ಇದೀಗ ಅತಿ ಹೆಚ್ಚು ಬೇಡಿಕೆ ಸೃಷ್ಟಿಸಿಕೊಂಡಿರುವ ಚೈನ್‌ ಲಿಂಕ್‌ ಆಭರಣಗಳಲ್ಲಿ , ಚೈನ್‌ ರಿಂಗ್‌ ನೆಕ್ಲೇಸ್‌, ಸ್ಲೀಕ್‌ ಚೈನ್ಸ್‌, ಬೋಲ್ಡ್‌ ಚೈನ್‌ ಲಿಂಕ್‌ ನೆಕ್ಲೇಸ್‌, ಚೈನ್‌ ಲಿಂಕ್‌ ಬ್ರೇಸ್‌ಲೇಟ್ಸ್‌, ಚಂಕಿ ಚೈನ್‌ ಲಿಂಕ್ಸ್ ಸೇರಿದಂತೆ ಫಿಂಗರ್‌ ರಿಂಗ್‌ಗಳು ಲಭ್ಯ. ಕಿವಿಗೆ ಧರಿಸುವ ಹೂಪ್‌ ಚೈನ್‌ ಲಿಂಕ್‌ ಡಿಸೈನ್‌ನವು ಕೂಡ ಬೇಡಿಕೆ ಹೆಚ್ಚಿಸಿಕೊಂಡಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ ರಾಘವ್‌.

men Jewel Fashion

ಚೈನ್‌ ಲಿಂಕ್‌ ಫ್ಯಾಷನ್‌ ಜ್ಯುವೆಲರಿಗಳು ಎಲ್ಲೆಲ್ಲಿ ಲಭ್ಯ?

  • ಕಮರ್ಷಿಯಲ್‌ ಸ್ಟ್ರೀಟ್‌ ಶಾಪ್‌ಗಳಲ್ಲಿ ಈ ಬಗೆಯ ಜ್ಯುವೆಲರಿಗಳು ಲಭ್ಯ.
  • ಮಾಲ್‌ಗಳ ಆಕ್ಸೆಸರೀಸ್‌ ವಿಭಾಗದಲ್ಲಿ ಲಭ್ಯ. ಆದರೆ, ಬೆಲೆ ದುಬಾರಿ.
  • ಜಯನಗರ, ಮಲ್ಲೇಶ್ವರದ ಆಕ್ಸೆಸರೀಸ್‌ ಸ್ಟ್ರೀಟ್‌ ಶಾಪ್‌ಗಳಲ್ಲೂ ದೊರೆಯುತ್ತವೆ.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Summer Fashion: ಸೀಸನ್‌ ಫ್ಯಾಷನ್‌ನಲ್ಲಿ ಮಾನಿನಿಯರ ಸೆಳೆದ ಫಿಟ್‌ & ಫ್ಲೇರ್‌ ಡ್ರೆಸ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Summer Fashion: ಸಮ್ಮರ್‌ ಸೀಸನ್‌ನಲ್ಲಿ ಸಿಂಪಲ್‌ ಸ್ಲಿವ್‌ಲೆಸ್‌ ಗೌನ್‌ಗಳ ಹಂಗಾಮ!

ಸಮ್ಮರ್‌ ಸೀಸನ್‌ನಲ್ಲಿ (Summer Fashion) ಇದೀಗ ಸ್ಲಿವ್‌ಲೆಸ್‌ ಗೌನ್‌ಗಳ ಹಂಗಾಮ ಹೆಚ್ಚಾಗಿದೆ. ಅದರಲ್ಲೂ ಲೈಟ್‌ವೈಟ್‌ ಫ್ಯಾಬ್ರಿಕ್‌ನ ತೋಳಿಲ್ಲದ ಈ ಗೌನ್‌ಗಳು ನಾನಾ ಡಿಸೈನ್‌ನಲ್ಲಿ ಮಾರುಕಟ್ಟೆಗೆ ಕಾಲಿಟ್ಟಿವೆ ಯಾವ್ಯಾವ ಬಗೆಯವು ಟ್ರೆಂಡ್‌ನಲ್ಲಿವೆ ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಇಲ್ಲಿ ತಿಳಿಸಿದ್ದಾರೆ.

VISTARANEWS.COM


on

Summer Fashion
ಚಿತ್ರಕೃಪೆ: ಪಿಕ್ಸೆಲ್‌
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸಮ್ಮರ್‌ ಸೀಸನ್‌ನಲ್ಲಿ (Summer Fashion) ಇದೀಗ ಸ್ಲಿವ್‌ಲೆಸ್‌ ಗೌನ್‌ಗಳ ಹಂಗಾಮ ಹೆಚ್ಚಾಗಿದೆ. ನೋಡಲು ಮಾತ್ರವಲ್ಲ, ಧರಿಸಿದಾಗ ಈ ಸೀಸನ್‌ನಲ್ಲಿ ಹೆಚ್ಚು ಸೆಕೆಯಾಗದಂತೆ, ಕಂಫರ್ಟಬಲ್‌ ಫೀಲ್‌ ಆಗುವಂತಹ ನಾನಾ ಡಿಸೈನ್ನ ಅದರಲ್ಲೂ ಲೈಟ್‌ವೈಟ್‌ ಫ್ಯಾಬ್ರಿಕ್‌ನ ತೋಳಿಲ್ಲದ ಈ ಗೌನ್‌ಗಳು ನಾನಾ ಡಿಸೈನ್‌ನಲ್ಲಿ ಮಾರುಕಟ್ಟೆಗೆ ಕಾಲಿಟ್ಟಿವೆ.

Summer Fashion

ಕಂಫರ್ಟಬಲ್‌ ಡಿಸೈನ್‌ ಗೌನ್‌

“ಸ್ಲಿವ್‌ಲೆಸ್‌ ಗೌನ್‌ಗಳು ಸಮ್ಮರ್‌ ಸೀಸನ್‌ನ ಟ್ರೆಂಡಿ ಗೌನ್‌ಗಳು ಎನ್ನಬಹುದು. ಇವು ಸೆಕೆಯಾಗುವುದಿಲ್ಲ. ಆರಾಮ ಎಂದೆನಿಸುತ್ತವೆ. ಇನ್ನು, ಈ ಸೀಸನ್‌ಗೆ ಪೂರಕ ಎಂಬಂತೆ, ಡಿಸೈನ್‌ಗಳನ್ನು ಹೊಂದಿರುತ್ತವೆ. ತೀರಾ ಟೈಟ್‌ ಫಿಟ್ಟಿಂಗ್‌ ಆಗಿರುವುದಿಲ್ಲ. ಅದರಲ್ಲೂ ಲೇಯರ್‌ ಇನ್ನರ್‌ ಲೈನಿಂಗ್‌ ಹೊಂದಿರುವುದಿಲ್ಲ. ಲೈಟ್‌ವೈಟಾಗಿರುತ್ತವೆ. ಅಂತಹ ಫ್ಯಾಬ್ರಿಕನ್ನೇ ಇವುಗಳನ್ನು ವಿನ್ಯಾಸ ಮಾಡಲು ಆಯ್ಕೆ ಮಾಡಲಾಗಿರುತ್ತದೆ. ವೆಡ್ಡಿಂಗ್‌ ಸೀಸನ್‌ಗೆ ಸೂಕ್ತವಾಗಿರುವುದು ಮಾತ್ರವಲ್ಲ, ಪಾರ್ಟಿವೇರ್‌ ಗೌನ್‌ಗಳು ಹಾಗೂ ಫೋಟೋಶೂಟ್‌ ಗೌನ್‌ಗಳು ಈ ಸೀಸನ್‌ಗೆ ತಕ್ಕಂತೆ ಬಿಡುಗಡೆಗೊಂಡಿವೆ” ಎನ್ನುತ್ತಾರೆ ಗೌನ್‌ ಡಿಸೈನರ್ ರಾಜನ್‌. ಅವರ ಪ್ರಕಾರ, ಇಂತಹ ಗೌನ್‌ಗಳು ಈ ಸೀಸನ್‌ಗೆಂದೇ ಸಿದ್ಧಪಡಿಸಲಾಗಿರುತ್ತದೆ ಎನ್ನುತ್ತಾರೆ.

Summer Fashion

ಟ್ರೆಂಡಿಯಾಗಿರುವ ಗೌನ್‌ ಡಿಸೈನ್ಸ್

ಸ್ಲಿವ್‌ಲೆಸ್‌ ಬಾರ್ಡರ್ ಗೌನ್ಸ್, ಎಥ್ನಿಕ್‌ ಡಿಸೈನ್ಸ್, ಸ್ಯಾಟಿನ್‌ ಗೌನ್ಸ್, ನೆಟ್ಟೆಡ್‌ ಸ್ಲಿವ್‌ಲೆಸ್‌ ಗೌನ್ಸ್, ಹಾಲ್ಟರ್‌ ನೆಕ್‌ ಗೌನ್ಸ್, ಸ್ವಿಂಗ್‌ ನೆಕ್‌ಲೈನ್‌ ಗೌನ್ಸ್, ಟೈಯಿಂಗ್‌ ಸ್ಲಿವ್‌ಲೆಸ್‌ ಗೌನ್ಸ್, ಶೋಲ್ಡರ್‌ಲೆಸ್‌ ಗೌನ್‌ಗಳು ಸೇರಿದಂತೆ ನಾನಾ ಬಗೆಯವು ಈ ಸೀಸನ್‌ಗೆ ಎಂಟ್ರಿ ನೀಡಿವೆ. ಇನ್ನು ಫುಲ್‌ಸ್ಲೀವ್‌ ಗೌನ್‌ಗಳು ಹಾಗೂ ಪಫ್‌ ಸ್ಲೀವ್‌, ಟೈಟ್‌ ಸ್ಲೀವ್‌ ಗೌನ್‌ಗಳು ಸದ್ಯಕ್ಕೆ ಸೈಡಿಗೆ ಸರಿದಿವೆ. ಮಾನ್ಸೂನ್‌ವರೆಗೂ ಇವು ಹಿಂದಿರುಗುವ ಯಾವುದೇ ಮುನ್ಸೂಚನೆಗಳು ಕಾಣುತ್ತಿಲ್ಲ ಎನ್ನುತ್ತಾರೆ ಸ್ಟೈಲಿಸ್ಟ್ ರಿಚಾ ಖಾನ್‌. ಅವರು ಹೇಳುವಂತೆ, ಈ ಸೀಸನ್‌ ಗೌನ್‌ಗಳು ಆದಷ್ಟೂ ಶಾರ್ಟ್ ಸ್ಲಿವ್‌ ಅಥವಾ ಸ್ಲಿವ್‌ಲೆಸ್‌ ಹೊಂದಿರುತ್ತವಂತೆ.

ಪಾರ್ಟಿವೇರ್‌ ಸ್ಲಿವ್‌ಲೆಸ್‌ ಗೌನ್‌ಗಳು

ಪಾರ್ಟಿವೇರ್‌ ಸ್ಲಿವ್‌ಲೆಸ್‌ ಗೌನ್‌ಗಳು ತೀರಾ ಉದ್ದವಾಗಿರುವುದಿಲ್ಲ! ಬದಲಿಗೆ ನೋಡಲು ಕೊಂಚ ಮ್ಯಾಕ್ಸಿಯಂತಿರುತ್ತವೆ. ಅಥವಾ ಲಾಂಗ್‌ ಸ್ಕರ್ಟ್‌ನಂತಿರುತ್ತವೆ. ಡಿಸೈನ್‌ಗಳು ಅಷ್ಟೇ! ಸಿಂಪಲ್‌ ಆಗಿರುತ್ತವೆ. ಕೊಂಚ ಶಿಮ್ಮರ್‌ ಆಗಿರುತ್ತವೆ ಎನ್ನುತ್ತಾರೆ ಡಿಸೈನರ್‌ ಡಿಂಪಲ್‌.

Summer Fashion

ಸ್ಲಿವ್‌ಲೆಸ್‌ ಗೌನ್‌ಗಳ ಆಯ್ಕೆಗೆ 3 ಟಿಪ್ಸ್

  • ಆದಷ್ಟೂ ಸಿಂಪಲ್‌ ಡಿಸೈನ್‌ ಆಯ್ಕೆ ಮಾಡಿ.
  • ಟ್ರೆಂಡಿ ಕಲರ್ಸ್ ಸೆಲೆಕ್ಟ್ ಮಾಡಿ.
  • ತೀರಾ ಟೈಟ್‌ ಆಗಿರುವುದು ಬೇಡ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Womens Awareness Fashion: ಭ್ರೂಣ ಹತ್ಯೆ ವಿರುದ್ಧ ಜಾಗೃತಿ ಮೂಡಿಸಿದ ಫ್ಯಾಷನ್‌ ಶೋ

Continue Reading

ಫ್ಯಾಷನ್

Womens Awareness Fashion: ಭ್ರೂಣ ಹತ್ಯೆ ವಿರುದ್ಧ ಜಾಗೃತಿ ಮೂಡಿಸಿದ ಫ್ಯಾಷನ್‌ ಶೋ

ಅವೇಕ್‌ ಹಾಗೂ ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್‌ ಮತ್ತು ಕೈಗಾರಿಕಾ ಮತ್ತು ವಾಣಿಜ್ಯ ಉದ್ಯಮಿಗಳ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಭ್ರೂಣ ಹತ್ಯೆ ಕುರಿತಂತೆ ಜಾಗೃತಿ (Womens awareness Fashion) ಮೂಡಿಸುವ ಫ್ಯಾಷನ್‌ ಶೋ ನೋಡುಗರನ್ನು ಎಚ್ಚರಿಸಿತು. ಈ ಕುರಿತಂತೆ ಇಲ್ಲಿದೆ ವರದಿ.

VISTARANEWS.COM


on

Womens Awareness Fashion
ಚಿತ್ರಗಳು: ಭ್ರೂಣ ಹತ್ಯೆ ಜಾಗೃತಿ ಕುರಿತಂತೆ ಜಾಗೃತಿ ಮೂಡಿಸಿದ ಫ್ಯಾಷನ್‌ ಶೋ ಚಿತ್ರಗಳು
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಫ್ಯಾಷನ್‌ ಶೋನಲ್ಲಿ ಹೆಣ್ಣು ಮಗುವಿನ ಭ್ರೂಣ ಹತ್ಯೆ ಕುರಿತಂತೆ ರ‍್ಯಾಂಪ್‌ ವಾಕ್‌ ಮಾಡಿ ಜಾಗೃತಿ ಮೂಡಿಸುವುದನ್ನು (Womens awareness Fashion) ನೋಡಿದ್ದೀರಾ! ತೀರಾ ಕಡಿಮೆ. ಆದರೆ, ಉದ್ಯಾನನಗರಿಯಲ್ಲಿ ಚಿತ್ರ ಕಲಾ ಪರಿಷತ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಫ್ಯಾಷನ್‌ ಶೋ ಮೂಲಕ ಈ ವಿಷಯವನ್ನು ಪ್ರೇಕ್ಷಕರಿಗೆ ಸರಳವಾಗಿ ತಿಳಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅವೇಕ್‌ ಹಾಗೂ ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್‌ ಮತ್ತು ಕೈಗಾರಿಕಾ ಮತ್ತು ವಾಣಿಜ್ಯ ಉದ್ಯಮಿಗಳ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

Womens Awareness Fashion

ಮಿಸೆಸ್‌ ಇಂಡಿಯಾ ಕರ್ನಾಟಕ ಡೈರೆಕ್ಟರ್‌ ಪ್ರತಿಭಾ ನೇತೃತ್ವ

ಮಿಸೆಸ್‌ ಇಂಡಿಯಾ ಕರ್ನಾಟಕ ಪ್ರಾದೇಶಿಕ ನಿರ್ದೇಶಕರಾದ ಪ್ರತಿಭಾ ಸಂಶಿಮಠ್‌ ಅವರ ನೇತೃತ್ವದಲ್ಲಿ ನಡೆದ ಈ ಫ್ಯಾಷನ್‌ ಶೋನಲ್ಲಿ, ಪೇಜೆಂಟ್‌ನಲ್ಲಿ ವಿಜೇತರಾದವರು ಹಾಗೂ ಭಾಗವಹಿಸಿದ್ದವರು, ರ‍್ಯಾಂಪ್‌ ವಾಕ್‌ ಮಾಡಿದರು. ಭ್ರೂಣ ಹತ್ಯೆ ಕುರಿತಂತೆ ಒಂದಿಷ್ಟು ಸ್ಕೆಚ್‌ ಹಾಗೂ ಸಂದೇಶಗಳನ್ನು ಬರೆದ ಪ್ರತಿಗಳನ್ನು ಕೈಯಲ್ಲಿ ಹಿಡಿದು, ನೆರೆದಿದ್ದ ಜನರಿಗೆ ತೋರಿಸುತ್ತಾ ಕ್ಯಾಟ್‌ ವಾಕ್‌ ಮಾಡಿದರು.

Womens Awareness Fashion

ಪ್ರತಿಭಾ ಸಂಶಿಮಠ್‌ ಫ್ಯಾಷನ್‌ ಟಾಕ್‌

ಫ್ಯಾಷನ್‌ ಶೋಗಳಲ್ಲಿ ವಾಕ್‌ ಮಾಡುವುದು ನಮಗೆ ತೀರಾ ಕಾಮನ್‌ ಆದ ವಿಷಯ. ಆದರೆ, ಇಲ್ಲಿ ನಡೆದ ಮಹಿಳಾ ದಿನಾಚಾರಣೆಯಲ್ಲಿ ವಿಭಿನ್ನವಾಗಿ ಯೋಚಿಸುವ ಜಾಗೃತಿ ಮೂಡಿಸುವಂತಹ ವಿಷಯದ ಬಗ್ಗೆ ಮಾಡೆಲ್‌ಗಳು ವಾಕ್‌ ಮಾಡಿದ್ದು ಸಂತಸ ತಂದಿದೆ. ನಮ್ಮ ರ‍್ಯಾಂಪ್‌ ವಾಕ್‌ನಿಂದ ಸಮಾಜಕ್ಕೆ ಸಂದೇಶ ನೀಡಿರುವುದಕ್ಕೆ ಮನಸ್ಸಿಗೆ ತೃಪ್ತಿ ದೊರಕಿದೆ. ಹೆಣ್ಣು ಮಕ್ಕಳ ಸಂರಕ್ಷಣೆ ಕುರಿತಂತೆ ಜಾಗೃತಿ ಮೂಡಿಸುವಂತಹ ಸಾಮಾಜಿಕ ಕಾರ್ಯಕ್ರಮ ಇದಾಗಿರುವುದು ನಿಜಕ್ಕೂ ಪ್ರಶಂಸನೀಯ. ಇಂತಹ ಫ್ಯಾಷನ್‌ ಶೋಗಳು ಹೆಚ್ಚಾಗಬೇಕು. ಆಗಷ್ಟೇ, ಹೆಣ್ಣುಮಕ್ಕಳು ಮಾತ್ರವಲ್ಲ, ಎಲ್ಲರೂ ಎಚ್ಚೆತ್ತುಕೊಂಡು ಹೆಣ್ಣು ಭ್ರೂಣ ಹತ್ಯೆಯನ್ನು ತಡೆಯುತ್ತಾರೆ. ಸಮಾಜದ ಒಳಿತಿಗಾಗಿ ಮುಂದಾಗುತ್ತಾರೆ ಎಂದು ಮಿಸೆಸ್‌ ಏಷಿಯಾ ಪೆಸಿಫಿಕ್‌ ಪ್ರತಿಭಾ ಸಂಶಿಮಠ್‌ ಕರೆ ನೀಡಿದರು.

ಮಿಸೆಸ್‌ ಇಂಡಿಯಾ ಕರ್ನಾಟಕ ಪೇಜೆಂಟ್‌ ಟೀಮ್‌

ಫ್ಯಾಷನ್‌ ಶೋನಲ್ಲಿ ಮಿಸೆಸ್‌ ಇಂಡಿಯಾ ಕರ್ನಾಟಕ ವಿಜೇತರಾದ ಸ್ನೇಹಾ ಶ್ರೀಧರ್‌, ಕಲಾವಿದೆ ಸ್ಮಿತಾ ಪ್ರಕಾಶ್‌, ನೀತು ಎಂಜೆ, ಅನುಷಾ ನಿತೀನ್‌, ಅಕ್ಷತಾ ಸೇಠ್‌, ಮಾನಿಶಿ ಸಿನ್ಹಾ ದಾಸ್‌, ಡಾ. ಸ್ವಾತಿ, ಪ್ರತಿಭಾ ಬಿ.ಜಿ, ಮಾಧುರಿ ಶಾಸ್ತ್ರಿ, ಜಯಾ ಮಂಜುನಾಥ್‌ ಭಾಗವಹಿಸಿದ್ದರು. ಡಿಸೈನರ್‌ ರಕ್ಷಾ ಅವರ ಎಸ್‌ಎನ್‌ಆರ್‌ ಲೆಬೆಲ್‌ ಡಿಸೈನರ್‌ವೇರ್‌ಗಳು ಮಾಡೆಲ್‌ಗಳನ್ನು ಸಿಂಗರಿಸಿದ್ದವು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Bikers Fashion Week: ಬೈಕರ್ಸ್ & ಕಿಡ್ಸ್ ಫ್ಯಾಷನ್‌ ಶೋನಲ್ಲಿ ರೋಮಾಂಚನಗೊಳಿಸಿದ ರ‍್ಯಾಂಪ್‌ ವಾಕ್‌

Continue Reading

ಫ್ಯಾಷನ್

Bikers Fashion Week: ಬೈಕರ್ಸ್ & ಕಿಡ್ಸ್ ಫ್ಯಾಷನ್‌ ಶೋನಲ್ಲಿ ರೋಮಾಂಚನಗೊಳಿಸಿದ ರ‍್ಯಾಂಪ್‌ ವಾಕ್‌

ಉದ್ಯಾನನಗರಿಯ ಕ್ಯಾಸ್ಲಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಪ್ರತಿಪದರ್ಶಿನಿ ಮಹಿಳಾ ದಿನಾಚರಣೆಯಲ್ಲಿ ಪ್ರತ್ಯೇಕವಾಗಿ ನಡೆದ ಬೈಕರ್ಸ್ ಹಾಗೂ ಕಿಡ್ಸ್ ಫ್ಯಾಷನ್‌ ಶೋ (Bikers Fashion Week) ನೋಡುಗರ ಮನ ಸೆಳೆಯಿತು. ಅಲ್ಲಿ ಯಾರ್ಯಾರೆಲ್ಲಾ ಭಾಗವಹಿಸಿದ್ದರು ಎಂಬುದರ ಬಗ್ಗೆ ಇಲ್ಲಿದೆ ಡಿಟೇಲ್ಸ್.

VISTARANEWS.COM


on

Bikers Fashion Week
ಚಿತ್ರಗಳು: ಪ್ರತಿಪಶಿಲ್ಪಾ ಬೈಕರ್ಸ್ ಫ್ಯಾಷನ್‌ ಶೋ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಟಾಮ್‌ ಬಾಯ್‌ ಇಮೇಜ್‌ನಲ್ಲಿ ಕಾಣಿಸಿಕೊಂಡ ಲೇಡಿಸ್‌ ಗ್ರೂಪ್‌ ರ‍್ಯಾಂಪ್‌ ಮೇಲೆ ಬಿಂದಾಸ್‌ ಆಗಿ ಹೆಜ್ಜೆ ಹಾಕುತ್ತಿದ್ದರೇ ಪ್ರೇಕ್ಷಕರು ಚಪ್ಪಾಳೆ ತಟ್ಟುತ್ತಿದ್ದರು. ಬ್ಲ್ಯಾಕ್‌ ಶೇಡ್‌ನ ಪ್ಯಾಂಟ್‌, ಟಾಪ್‌ ಹಾಗೂ ಜಾಕೆಟ್‌ ಧರಿಸಿದ ಬೈಕರ್ಸ್ ಕಮ್‌ ಮಾಡೆಲ್‌ಗಳು ತಮ್ಮದೇ ಆದ ಸ್ಟೈಲ್‌ನಲ್ಲಿ ಫ್ಯಾಷನ್‌ (Bikers Fashion Week) ವಾಕ್‌ ಮಾಡಿದರು. ಹೆಲ್ಮೆಟ್‌ ಹಿಡಿದು ಕೆಲವು ಮಾಡೆಲ್‌ಗಳು ವೇದಿಕೆ ಹತ್ತಿದರೇ, ಜಾಕೆಟನ್ನೇ ಸ್ಟೈಲಾಗಿ ಹೇಗಲೇರಿಸಿಕೊಂಡು ಒಂದಿಷ್ಟು ಮಾಡೆಲ್‌ಗಳು ವಾಕ್‌ ಮಾಡಿದರು. ಮತ್ತೆ ಕೆಲವರು ಮಾಡರ್ನ್ ಲುಕ್‌ನಲ್ಲಿ ಪೋಸ್‌ ನೀಡಿದರು. ಅಂದಹಾಗೆ, ಇದೆಲ್ಲಾ ನಡೆದದ್ದು, ಲಿಯಾ ನೇತೃತ್ವದ ಕ್ಯಾಸ್ಲಿ ಸಂಸ್ಥೆಯ ಮಹಿಳಾ ದಿನಾಚಾರಣೆಯಲ್ಲಿ. ಬೈಕರ್ಸ್ ಫ್ಯಾಷನ್‌ ಶೋ ಮಾತ್ರವಲ್ಲ, ಪುಟ್ಟ ಮಕ್ಕಳಿಂದಿಡಿದು ಟಿನೇಜ್‌ ಮಕ್ಕಳವರೆಗಿನ ಕಿಡ್ಸ್ ಫ್ಯಾಷನ್‌ ವಾಕ್‌ ಕೂಡ ನಡೆಯಿತು.

Bikers Fashion Week

ಕ್ಯೂಟ್‌ ಕಿಡ್ಸ್ ಫ್ಯಾಷನ್‌ ಶೋ

ಪುಟ್ಟ ಮಕ್ಕಳ ಕಿಡ್ಸ್ ಫ್ಯಾಷನ್‌ ಶೋವನ್ನು 3 ವರ್ಷದ ಪುಟ್ಟ ಬಾಲಕ ಹಾಗೂ ಬಾಲಕಿ ಆರಂಭಿಸಿದರು. ತಮ್ಮ ತುಂಟತನದಿಂದ ಕೂಡಿದ ವಾಕ್‌ನಿಂದ ಎದುರುಗಿದ್ದವರನ್ನು ಮಂತ್ರ ಮುಗ್ದರನ್ನಾಗಿಸಿದರು. ಎಲ್ಲರನ್ನೂ ತಮ್ಮತ್ತ ಸೆಳೆದರು. ಆ ಮಟ್ಟಿಗೆ ಆಕರ್ಷಕವಾಗಿ ವಾಕ್‌ ಮಾಡಿದರು.

Bikers Fashion Week

ಲಿಯಾ ನೇತೃತ್ವದ ಕ್ಯಾಸ್ಲಿ

ಕ್ಯಾಸ್ಲಿ ಸಂಸ್ಥೆಯ ಮುಖಾಂತರ ಸಾಕಷ್ಟು ಸಮಾಜ ಮುಖಿ ಕಾರ್ಯಕ್ರಮಗಳನ್ನು ರೂಪಿಸುತ್ತಾ ಬಂದಿರುವ ಲಿಯಾ ಸ್ಯಾಮುವೆಲ್‌ಗೆ ಸ್ವಂತ ಮಗಳೇ ಸಾಥ್‌ ನೀಡುತ್ತಿದ್ದು, ಕಾರ್ಯಕ್ರಮಗಳನ್ನು ರೂಪಿಸುತ್ತಾ ಬಂದಿದ್ದಾರೆ. ಈ ಸಾಲಿನ ಮಹಿಳಾ ದಿನಾಚಾರಣೆಯಲ್ಲಿ ಕೊಂಚ ವಿಭಿನ್ನವಾದ ಬೈಕರ್ಸ್ ಫ್ಯಾಷನ್‌ ಹಮ್ಮಿಕೊಂಡಿದ್ದು, ಸಂತಸ ತಂದಿದೆ. ಇದು ಮಹಿಳೆಯರಿಗೆ ಉತ್ತೇಜನ ನೀಡುವಂತಿತ್ತು. ಇದರೊಂದಿಗೆ ಟ್ಯಾಲೆಂಟೆಡ್‌ ಮಹಿಳೆಯರನ್ನು ಗುರುತಿಸುವ ಕಾರ್ಯವನ್ನು ಸಂಸ್ಥೆ ಮಾಡಿದೆ ಎಂದು ಲಿಯಾ ತಿಳಿಸಿದರು.

ರಾಗಿಣಿ ದ್ವಿವೇದಿ ಫ್ಯಾಷನ್‌ ಮಾತು

ಸ್ಯಾಂಡಲ್‌ವುಡ್‌ ನಟಿ ರಾಗಿಣಿ ದ್ವಿವೇದಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಆಗಮಿಸಿದ್ದ ಬೈಕರ್ಸ್, ವುಮೆನ್‌ ಅಚಿವರ್ಸ್ ಹಾಗೂ ಫ್ಯಾಷನ್‌ ವಾಕ್‌ ಮಾಡಿದ ಮಕ್ಕಳನ್ನು ಸನ್ಮಾನಿಸಿದರು. ನಂತರ ಮಾತನಾಡಿದ ಅವರು, ಮಹಿಳೆಯರು ಫ್ಯಾಷನ್‌ ವಾಕ್‌ ಮಾಡುವುದು ಸಾಮಾನ್ಯ. ಅದರಲ್ಲಿ ಬೈಕರ್ಸ್ ಮಹಿಳೆಯರು ರ‍್ಯಾಂಪ್‌ ವಾಕ್‌ ಮಾಡಿದ್ದನ್ನು ನೋಡಿ ಖುಷಿಯಾಯಿತು. ಇವರ ಈ ಶೋ ಇತರೇ ಮಹಿಳೆಯರಿಗೆ ಮಾದರಿಯಾಗುವಂತಿತ್ತು. ಆತ್ಮವಿಶ್ವಾಸ ಎದ್ದು ಕಾಣುತ್ತಿತ್ತು. ಇಂತಹ ಶೋಗಳು ಹೆಚ್ಚಬೇಕು ಎಂದರು. ಇನ್ನು ವಾಕ್‌ ಮಾಡಿದ ಪುಟ್ಟ ಚಿಣ್ಣರನ್ನು ಪ್ರೋತ್ಸಾಹಿಸಿದರು. ಕಾರ್ಯಕ್ರಮದಲ್ಲಿ ಇಂಟರ್‌ನ್ಯಾಷನಲ್‌ ಬಾಡಿ ಬಿಲ್ಡರ್‌ ಮಮತಾ, ಬಾಲಿವುಡ್‌ ಸೆಲೆಬ್ರೆಟಿ ಡಿಸೈನರ್‌ ಲಕ್ಷ್ಮಿ ಕೃಷ್ಣ, ಶೀ ಸೊಸೈಟಿಯ ಸಂಸ್ಥಾಪಕಿ ಹರ್ಷಿಣಿ ವೆಂಕಟೇಶ್‌, ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಡ್ಯಾನ್ಸ್‌ ಅನ್ನು ಸಂಸ್ಥಾಪಕ ನಿರ್ದೇಶಕಿ ಪೂರ್ಣಿಮಾ ರಜನಿ, ಲೆಫಿಸ್ಟನಂಟ್ ಜಾಯ್‌ಶ್ರೀ ಬ್ಯಾನರ್ಜಿ, ಡಿಸೈನರ್‌ ನೈನಾ ಕುಮಾರ್‌ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Garden Printed Fashionwears: ಬೇಸಿಗೆ ಫ್ಯಾಷನ್‌ನಲ್ಲಿ ಗಾರ್ಡನ್‌ ಪ್ರಿಂಟ್ಸ್‌ ಹಂಗಾಮ!

Continue Reading

ಫ್ಯಾಷನ್

Summer Fashion: ಲೆಹೆಂಗಾಗೆ ಗ್ಲಾಮರ್‌ ಟಚ್‌ ನೀಡಿದ ಡಿಸೈನರ್‌ ಬಿಕಿನಿ ಬ್ಲೌಸ್‌

ಸಮ್ಮರ್‌ ಸೀಸನ್‌ನಲ್ಲಿ (Summer Fashion) ಸೆಲೆಬ್ರೆಟಿಗಳ ಲೆಹೆಂಗಾಗೆ ಡಿಸೈನರ್‌ ಬಿಕಿನಿ ಬ್ಲೌಸ್‌ಗಳು ಗ್ಲಾಮರಸ್‌ ಟಚ್‌ ನೀಡಿವೆ. ಏನಿದು ಡಿಸೈನರ್‌ ಬಿಕಿನಿ ಬ್ಲೌಸ್‌ ಲೆಹೆಂಗಾ? ಯಾವ್ಯಾವ ಬಗೆಯವು ತಾರೆಯರ ಫೇವರೇಟ್‌ ಲಿಸ್ಟ್‌ನಲ್ಲಿವೆ ಎಂಬುದರ ಬಗ್ಗೆ ಇಲ್ಲಿದೆ ವಿವರ.

VISTARANEWS.COM


on

Summer Fashion
ಚಿತ್ರಗಳು: ಪ್ರಗ್ಯಾ ಜಸ್ವಾಲ್‌, ನಟಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬೇಸಿಗೆಯ ಎಥ್ನಿಕ್‌ ಹೈ ಫ್ಯಾಷನ್‌ನಲ್ಲಿ (Summer Fashion) ಇದೀಗ ಡಿಸೈನರ್‌ ಬಿಕಿನಿ ಬ್ಲೌಸ್‌ ಲೆಹೆಂಗಾಗಳು ಲಗ್ಗೆ ಇಟ್ಟಿವೆ. ನೋಡಲು ಹಾಟ್‌ ಲುಕ್‌ ನೀಡುವ ಇವು ಸೆಲೆಬ್ರೆಟಿಗಳ ಹಾಗೂ ಶ್ರೀಮಂತ ಯುವತಿಯರ ಹೈ ಫ್ಯಾಷನ್‌ ಲಿಸ್ಟ್‌ಗೆ ಸೇರಿದ್ದು, ಗ್ಲಾಮರಸ್‌ ಟಚ್‌ ನೀಡಿವೆ.

Summer Fashion

ಸಿನಿಮಾ ತಾರೆಯರ ಗ್ಲಾಮರಸ್‌ ಲುಕ್‌ಗೆ ಬಿಕಿನಿ ಡಿಸೈನರ್‌ ಬ್ಲೌಸ್

ಈ ಸಮ್ಮರ್‌ ಸೀಸನ್‌ನ ಗ್ರ್ಯಾಂಡ್‌ ಸಮಾರಂಭಗಳು, ವೆಡ್ಡಿಂಗ್‌ ಹಾಗೂ ಫೆಸ್ಟಿವಲ್‌ನಲ್ಲಿ ನಾನಾ ಬಗೆಯ ಡಿಸೈನರ್‌ ಬಿಕಿನಿ ಸ್ಟೈಲ್‌ ಲೆಹೆಂಗಾ ಬ್ಲೌಸ್‌ಗಳು ಟ್ರೆಂಡಿಯಾಗಿದ್ದು, ಬಹುತೇಕ ಸಿನಿಮಾ ತಾರೆಯರು ಈ ಶೈಲಿಯ ಔಟ್‌ಫಿಟ್‌ನಲ್ಲೆ ಕಾಣಿಸತೊಡಗಿದ್ದಾರೆ. ಎಥ್ನಿಕ್‌ ಲುಕ್‌ ಜೊತೆಜೊತೆಗೆ ಹಾಟ್‌ ಲುಕ್‌ ನೀಡುವ ಇವು ಸೆಲೆಬ್ರೆಟಿಗಳ ಫೇವರೇಟ್‌ ಲಿಸ್ಟ್‌ಗೆ ಸೇರಿವೆ. ಇನ್ನು ಎಥ್ನಿಕ್‌ ಹೈ ಫ್ಯಾಷನ್‌ನಲ್ಲಿರುವ ಬಗೆಬಗೆಯ ಡಿಸೈನರ್‌ ಬಿಕಿನಿ ಲೆಹೆಂಗಾ ಬ್ಲೌಸ್‌ಗಳು, ಅಲ್ಟ್ರಾ ಮಾಡರ್ನ್ ಹಾಗೂ ಜೆನ್‌ ಜಿ ಹುಡುಗಿಯರನ್ನು ಸೆಳೆಯತೊಡಗಿವೆ. ಪರಿಣಾಮ, ಲೆಕ್ಕವಿಲ್ಲದಷ್ಟು ಬಗೆಯವು ಮಾರುಕಟ್ಟೆಗೆ ಎಂಟ್ರಿ ನೀಡಿವೆ.

Summer Fashion

ಪಾಪುಲರ್‌ ಆಗಿರುವ ಡಿಸೈನರ್‌ ಬಿಕಿನಿ ಬ್ಲೌಸ್‌

ಇನ್ನು, ಲೆಹೆಂಗಾ ಎಂದಾಕ್ಷಣ ಹೆವಿ ಡಿಸೈನ್‌ನವು ಮೈ ತುಂಬಾ ಹೊದ್ದುಕೊಳ್ಳುವಂತಹ ಡ್ರೆಸ್‌ಕೋಡ್‌ ಎಂದುಕೊಳ್ಳುತ್ತೇವೆ. ಆದರೆ, ಈ ಸೀಸನ್‌ನಲ್ಲಿ ಆ ಶೈಲಿಯವು ಸೆಕೆಯಾಗುತ್ತವೆ. ಇದಕ್ಕೆ ಪೂರಕ ಎಂಬಂತೆ, ಬಾಲಿವುಡ್‌ ಡಿಸೈನರ್‌ ಇಂತಹ ಬಿಕಿನಿ ಲೆಹೆಂಗಾ ಬ್ಲೌಸ್‌ಗಳನ್ನು ಸಿದ್ಧಪಡಿಸಿದ್ದು, ಬಹುತೇಕ ತಾರೆಯರು ಈ ಬಿಕಿನಿ ಬ್ಲೌಸ್‌ಗೆ ಮೊರೆ ಹೋಗುತ್ತಿದ್ದಾರೆ. ಇವು ಗ್ರ್ಯಾಂಡ್‌ ಲುಕ್‌ ಜೊತೆಗೆ ಗ್ಲಾಮರಸ್‌ ಆಗಿಯೂ ಬಿಂಬಿಸುತ್ತವೆ. ಜೊತೆಗೆ ಹಾಟ್‌ ಲುಕ್‌ ಕೂಡ ನೀಡುತ್ತಿವೆ ಎನ್ನುತ್ತಾರೆ ಸ್ಟೈಲಿಸ್ಟ್ ದಿಯಾ ಖಾನ್‌. ಅವರ ಪ್ರಕಾರ, ಡಿಸೈನರ್‌ ಬಿಕಿನಿ ಬ್ಲೌಸ್‌ಗಳು ನೋಡಿದಾಕ್ಷಣಾ ಬಿಕಿನಿ ಲುಕ್‌ ನೀಡುವುದಿಲ್ಲ. ಹಾಗಾಗಿ ಇವು ಪಾಪುಲರ್‌ ಆಗಿವೆ ಎನ್ನುತ್ತಾರೆ.

Summer Fashion

ಟ್ರೆಂಡಿಯಾಗಿರುವ ಡಿಸೈನರ್‌ ಬಿಕಿನಿ ಬ್ಲೌಸ್‌ಗಳಿವು

ರೆಗ್ಯುಲರ್‌ ಡಿಸೈನರ್‌ ಬಿಕಿನಿ, ಹಾಲ್ಟರ್‌ ನೆಕ್‌ಲೈನ್‌ ಡಿಸೈನರ್‌ ಬಿಕಿನಿ, ಕೋಲ್ಡ್ ಶೋಲ್ಡರ್‌ ಬಿಕಿನಿ ಡಿಸೈನರ್‌ ಬ್ಲೌಸ್‌, ಶೋಲ್ಡರ್‌ ಲೆಸ್‌ ಡಿಸೈನರ್‌ ಬಿಕಿನಿ ಬ್ಲೌಸ್‌ಗಳು ಸೆಲೆಬ್ರೆಟಿಗಳ ಗ್ರ್ಯಾಂಡ್‌ ಲೆಹೆಂಗಾಗಳಿಗೆ ಸಾಥ್‌ ನೀಡುತ್ತಿವೆ. ಇವು ದೇಹವನ್ನು ಕೊಂಚ ಎಕ್ಸ್‌ಪೋಸ್‌ ಮಾಡುವುದರಿಂದ ಗ್ಲಾಮರಸ್‌ ಲುಕ್‌ಗೆ ಜೊತೆಯಾಗಿವೆ. ಇದಕ್ಕೆ ಪೂರಕ ಎಂಬಂತೆ, ಬಾಲಿವುಡ್‌ ಡಿಸೈನರ್‌ಗಳು ಒಂದಕ್ಕಿಂತ ಒಂದು ಸುಂದರವಾದ ಡಿಸೈನ್‌ಗಳನ್ನು ಸಿದ್ಧಪಡಿಸುತ್ತಿದ್ದಾರೆ. ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು.

Summer Fashion
  • · ಡಿಸೈನರ್‌ ಬಿಕಿನಿ ಲೆಹೆಂಗಾ ಬ್ಲೌಸ್‌ ಹೆವ್ವಿ ಪರ್ಸನಾಲಿಟಿಯವರಿಗೆ ನಾಟ್‌ ಓಕೆ.
  • · ಎಕ್ಸ್‌ಪೋಸ್‌ ಆಗುವುದರಿಂದ ಫಿಟ್ಟಿಂಗ್‌ ಸರಿಯಾಗಿರುವುದು ಅಗತ್ಯ.
    · ಎಥ್ನಿಕ್‌ ಲುಕ್‌ಗಾಗಿ ಮೇಕ್‌ಓವರ್‌ ಕೂಡ ಸಾಥ್‌ ನೀಡಬೇಕು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Stars Holi Fashion: ವೈವಿಧ್ಯಮಯ ದಿರಸಿನಲ್ಲಿ ಸೆಲೆಬ್ರೆಟಿಗಳ ಹೋಳಿ ಸಂಭ್ರಮ

Continue Reading
Advertisement
Lok Sabha Election 2024 Brijesh Chowta declares assets
Lok Sabha Election 202410 mins ago

Lok Sabha Election 2024: ಅವಿವಾಹಿತ ಬ್ರಿಜೇಶ್ ಚೌಟ ಬಳಿ ಇಲ್ಲ ಕೋಟಿ ಕೋಟಿ ಆಸ್ತಿ! ಸಾಲ ಮಾಡಿ ಕಾರು ಖರೀದಿ

Drowned in canal
ದಾವಣಗೆರೆ22 mins ago

Bhadra canal : ಭದ್ರಾ ನಾಲೆಗೆ ಬಿದ್ದು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಸಾವು

Unmukt Chand
ಕ್ರೀಡೆ36 mins ago

Unmukt Chand: ಭಾರತ ತಂಡ ತೊರೆದು ಯುಎಸ್​ಎ ಸೇರಿದ ಉನ್ಮುಕ್ತ್‌ಗೆ ಟಿ20 ವಿಶ್ವಕಪ್​ನಲ್ಲಿ ಸ್ಥಾನ ಅನುಮಾನ

Bullet Train
ದೇಶ1 hour ago

Bullet Train: ಬುಲೆಟ್‌ ರೈಲು ಓಡೋದು ಯಾವಾಗ? ರೈಲ್ವೆ ಸಚಿವ ಹೇಳೋದಿಷ್ಟು

Lok Sabha Election 2024 BJP JDS coordination committee meeting successful Fight to win with the workers
Lok Sabha Election 20241 hour ago

Lok Sabha Election 2024: ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ ಸಭೆ ಯಶಸ್ವಿ; ಎಲೆಕ್ಷನ್‌ ಗೆಲ್ಲಲು ಮಾಸ್ಟರ್‌ ಪ್ಲ್ಯಾನ್!

tcs jobs IT hiring
ಉದ್ಯೋಗ2 hours ago

IT Hiring: ಟಿಸಿಎಸ್‌ನಲ್ಲಿ ಫ್ರೆಶರ್‌ಗಳಿಗೆ ಅರ್ಜಿ ಆಹ್ವಾನ, ಅರ್ಜಿ ಸಲ್ಲಿಸುವುದು ಹೇಗೆ? ಯಾವಾಗ ಕೊನೆಯ ದಿನ?

Road Accident
ಬೆಂಗಳೂರು ಗ್ರಾಮಾಂತರ2 hours ago

Road Accident : ತಲೆ ಮೇಲೆ ಹರಿದ ಲಾರಿ; ಅರಣ್ಯ ಇಲಾಖೆ ಸಿಬ್ಬಂದಿ ಸಾವು, ಮತ್ತೊಬ್ಬ ಗಂಭೀರ

Sonarika Bhadoria
ಕಿರುತೆರೆ2 hours ago

Sonarika Bhadoria: ಹನಿಮೂನ್‌ನ ಹಾಟ್‌ ಫೋಟೊ ಶೇರ್‌ ಮಾಡಿದ ಹಿಂದಿ ಸೀರಿಯಲ್‌ ನಟಿ!

Riyan Parag
ಕ್ರೀಡೆ2 hours ago

Riyan Parag: 3 ದಿನ ನೋವು ನಿವಾರಕ ಮಾತ್ರೆ ಸೇವಿಸಿ ಹಾಸಿಗೆಯಲ್ಲಿದ್ದೆ; ಪಂದ್ಯಶ್ರೇಷ್ಠ ಪ್ರಶಸ್ತಿ ವೇಳೆ ಭಾವುಕರಾದ ​ಪರಾಗ್

Accident Case
ತುಮಕೂರು2 hours ago

Accident Case : ಮರ ಕಡಿಯುವಾಗ ಕರೆಂಟ್‌ ಶಾಕ್‌ಗೆ ಬಲಿ; ಹುಣಸೆ ಹಣ್ಣು ಕೊಯ್ಯುವಾಗ ಬಿದ್ದು ಸಾವು

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ10 hours ago

Dina Bhavishya : ಗೌಪ್ಯ ವಿಷಯಗಳು ಬಹಿರಂಗವಾಗದಿರಲಿ; ಈ ರಾಶಿಯವರು ಎಚ್ಚರಿಕೆ ವಹಿಸಿ

Lok Sabha Election 2024 DK Brothers hold roadshow in Ramanagara and DK Suresh file nomination
Lok Sabha Election 20241 day ago

Lok Sabha Election 2024: ರಾಮನಗರದಲ್ಲಿ ಡಿಕೆ ಬ್ರದರ್ಸ್‌ ಶಕ್ತಿ ಪ್ರದರ್ಶನ, ರೋಡ್‌ ಶೋ ಮಾಡಿ ನಾಮಪತ್ರ ಸಲ್ಲಿಸಿದ ಡಿಕೆಸು

Lok Sabha Election 2024 personal prestige will not be allowed DK Shivakumar warns Kolar leaders
Lok Sabha Election 20241 day ago

Lok Sabha Election 2024: ಯಾರ ವೈಯಕ್ತಿಕ ಪ್ರತಿಷ್ಠೆಗೂ ಅವಕಾಶ ನೀಡಲ್ಲ; ಕೋಲಾರ ನಾಯಕರಿಗೆ ಡಿಕೆಶಿ ಖಡಕ್‌ ಎಚ್ಚರಿಕೆ

dina bhavishya read your daily horoscope predictions for March 28 2024
ಭವಿಷ್ಯ1 day ago

Dina Bhavishya : ಇಂದು ಈ ರಾಶಿಯವರಿಗೆ ಒತ್ತಡ ಹೆಚ್ಚು; ಜಾಗ್ರತೆ ವಹಿಸುವುದು ಉತ್ತಮ!

R Ashok Pressmeet and attack on CM Siddaramaiah Congress Government
Lok Sabha Election 20242 days ago

Lok Sabha Election 2024: ಬೈ ಬೈ ಬೆಂಗಳೂರು ಎನ್ನುತ್ತಿರುವ ಜನ; ಸರ್ಕಾರದ ವಿರುದ್ಧ ಹರಿಹಾಯ್ದ ಆರ್.‌ ಅಶೋಕ್

Tejaswini Gowda resigns from BJP Council Impact on BJP
Lok Sabha Election 20242 days ago

Tejaswini Gowda: ಬಿಜೆಪಿ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ತೇಜಸ್ವಿನಿ ಗೌಡ! ಬಿಜೆಪಿಗೆ ಎಫೆಕ್ಟ್?

Lok Sabha Election 2024 Gokarna priest shalls to make DK Shivakumar CM Whats wrong says Shivakumar
Lok Sabha Election 20242 days ago

Lok Sabha Election 2024: ಡಿಕೆಶಿ ಸಿಎಂ ಆಗಲಿ ಎಂದು ಗೋಕರ್ಣ ಅರ್ಚಕರಿಂದ ಸಂಕಲ್ಪ; ತಪ್ಪೇನು ಎಂದ ಶಿವಕುಮಾರ್

Dina Bhavishya
ಭವಿಷ್ಯ2 days ago

Dina Bhavishya : ಉತ್ಸಾಹದಲ್ಲಿ ಆಶ್ವಾಸನೆ ಕೊಟ್ಟು ಅಪಾಯದ ಸುಳಿಗೆ ಸಿಲುಕಬೇಡಿ

BBMP marshals harass street vendors in Jayanagar
ಬೆಂಗಳೂರು3 days ago

BBMP Marshals : ಜಯನಗರದ ಬೀದಿಯಲ್ಲಿ ಬ್ಯಾಗ್‌ ಮಾರುತ್ತಿದ್ದ ವೃದ್ಧನ ಮೇಲೆ ದರ್ಪ ಮೆರೆದ ಮಾರ್ಷಲ್ಸ್‌

Dina Bhavishya
ಭವಿಷ್ಯ3 days ago

Dina Bhavishya : ಆಪ್ತರ ವರ್ತನೆಯು ಈ ರಾಶಿಯವರ ಮನಸ್ಸಿಗೆ ನೋವು ತರಲಿದೆ

ಟ್ರೆಂಡಿಂಗ್‌