ಶೀಲಾ ಸಿ. ಶೆಟ್ಟಿ, ಬೆಂಗಳೂರು
ಗೋಕುಲಾಷ್ಟಮಿ (Krishna Janmastami) ಹಬ್ಬದ ಸಂಭ್ರಮ ಹೆಚ್ಚಿಸಲು ಮಾರುಕಟ್ಟೆಗೆ ನಾನಾ ಬಗೆಯ ಅಲಂಕಾರಿಕ ಸಾಮಗ್ರಿಗಳು ಕಾಲಿಟ್ಟಿದ್ದು, ಅವುಗಳನ್ನು ಬಳಸಿಕೊಂಡು ಹೇಗೆಲ್ಲಾ ಆಕರ್ಷಕವಾಗಿ ಅಂದವಾಗಿ ಅಲಂಕರಿಸಬಹುದು (Krishna Janmastami Decoration) ಎಂಬುದರ ಬಗ್ಗೆ ಎಕ್ಸ್ಪರ್ಟ್ ರಮಣಿ ಅಯ್ಯಂಗಾರ್ ಇಲ್ಲಿ ತಿಳಿಸಿದ್ದಾರೆ.
ಮಿನಿ ಜೋಕಾಲಿಯಲ್ಲಿ ಮುದ್ದು ಕೃಷ್ಣನ ಅಲಂಕಾರ
ಇಂದು ಮಾರುಕಟ್ಟೆಯಲ್ಲಿ ನಾನಾ ಬಗೆಯ ಹಲವಾರು ಸೈಝಿನ ಮುದ್ದು ಕೃಷ್ಣನ ಮಿನಿ ಜೋಕಾಲಿಗಳು ದೊರೆಯುತ್ತಿವೆ. ಇದಕ್ಕೆ ಹೊಂದುವಂತೆ ಪುಟ್ಟದಾದ ಕೃಷ್ಣನ ಉತ್ಸವ ಮೂರ್ತಿಯನ್ನು ಆಯ್ಕೆ ಮಾಡಿ, ಒಳಗೆ ಕುಳ್ಳಿರಿಸಿ ಅಥವಾ ಮಲಗಿಸಿ ಅಲಂಕರಿಸಿದಾರಾಯಿತು. ನೋಡಲು ಮಗುವಿನಂತೆ ಅತ್ಯಾಕರ್ಷಕವಾಗಿ ಕಾಣುತ್ತದೆ. ಸುತ್ತಲೂ ಹೂವುಗಳ ರಂಗೋಲಿ ಹಾಗೂ ದೀಪಗಳಿಂದ ಸಿಂಗರಿಸಿದಲ್ಲಿ ನೋಡಲು ಮತ್ತಷ್ಟು ಚೆನ್ನಾಗಿ ಕಾಣುತ್ತದೆ.
ನವಿಲುಗರಿ ಆರ್ಟ್
ಮನೆಯಲ್ಲಿ ವಾಝ್ನಲ್ಲಿ ನವಿಲುಗರಿ ಸಿಂಗರಿಸಿಟ್ಟಿದ್ದಲ್ಲಿ ಅದನ್ನು ಕೃಷ್ಣನ ಅಲಂಕಾರಕ್ಕೆ ಬಳಸಬಹುದು. ಅಲ್ಲದೇ, ಮಾರುಕಟ್ಟೆಯಲ್ಲಿ ನಾನಾ ಬಗೆಯ ನವಿಲುಗರಿಯ ಆರ್ಟಿಸ್ಟಿಕ್ ಡೆಕೋರೇಟಿವ್ ಐಟಂಗಳು ದೊರೆಯುತ್ತವೆ. ಅವನ್ನು ಬಳಸಿ, ಕೃಷ್ಣನ ಮೂರ್ತಿಯ ಸುತ್ತಲೂ ಅಲಂಕರಿಸಿದರಾಯಿತು. ಇದು ನೋಡಲು ಟ್ರೆಡಿಷನಲ್ ಲುಕ್ ನೀಡುತ್ತದೆ.
ಪುಟ್ಟ ಮಡಿಕೆಯಲ್ಲಿ ಬೆಣ್ಣೆ ಅಲಂಕಾರ
ಇದೀಗ ಮಾರುಕಟ್ಟೆಯಲ್ಲಿ ನಾನಾ ಬಗೆಯ ಅಲಂಕಾರಿಕ ಸಾಮಗ್ರಿಗಳಲ್ಲಿ ಬೆಣ್ಣೆ ತುಂಬಿರುವಂತೆ ಕಾಣುವ ರೆಡಿಮೇಡ್ ಬೆಣ್ಣೆ ತುಂಬಿದಂತೆ ಕಾಣುವ ಮಡಿಕೆಗಳು ಅಥವಾ ಮಟ್ಕಾಗಳು ದೊರೆಯುತ್ತವೆ. ನಿಮಗೆ ಬೇಕಾದ ಸೈಝಿನ ಮಟ್ಕಾಗಳನ್ನು ಆಯ್ಕೆ ಮಾಡಿ, ಕೃಷ್ಣನನ್ನು ಇರಿಸಿರುವ ಜಾಗದ ಸುತ್ತಾ ಮುತ್ತಾ ಇಲ್ಲವೇ ಕಾರ್ನರ್ನಲ್ಲಿ ಅಲಂಕರಿಸಬಹುದು. ಇಲ್ಲವೇ ಕೃಷ್ಣನ ಬೊಂಬೆಯ ಬಳಿಯೂ ಇರಿಸಬಹುದು. ಮಿನಿ ಸೈಝ್ನದ್ದಾದಲ್ಲಿ ಓವಲ್ ಶೇಪ್ನಲ್ಲಿ ಸುತ್ತಲೂ ಇರಿಸಬಹುದು.
ಬೆಣ್ಣೆ ಕೃಷ್ಣನ ಹೆಜ್ಜೆಯ ಗುರುತು
ಶ್ವೇತ ವರ್ಣ, ಕೆಂಪು, ಆರೆಂಜ್ ಹೀಗೆ ನಾನಾ ವರ್ಣಗಳಲ್ಲಿ ಅದರಲ್ಲೂ ಪರ್ಲ್, ಗೋಲ್ಡನ್ ಬೀಡ್ಸ್ನಲ್ಲಿ ಸಿದ್ಧಪಡಿಸಿರುವ ಕೃಷ್ಣ ಹೆಜ್ಜೆಯಂತೆ ಕಾಣುವ ಫೂಟ್ ಸ್ಟಿಕ್ಕರ್ಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯ. ನಿಮಗೆ ಅಗತ್ಯವಿರುವಷ್ಟು ಕೊಂಡು ತಂದು ಇವುಗಳನ್ನು ಬಾಗಿಲಿನಿಂದ ಕೃಷ್ಣನ ಅಲಂಕಾರ ಮಾಡಿರುವ ಕಡೆಯವರೆಗೂ ಹೂವಿನೊಂದಿಗೆ ಸಿಂಗರಿಸಬಹುದು.
ಥೀಮ್ಗೆ ತಕ್ಕಂತೆ ಅಲಂಕಾರ
ಥೀಮ್ಗೆ ತಕ್ಕಂತೆಯೂ ಅಲಂಕಾರ ಮಾಡಬಹುದು. ಗೋವಿನೊಂದಿಗೆ ಇರುವ ಬಾಲ ಕೃಷ್ಣ, ಗೋಪಿಕೆಯರೊಂದಿಗೆ ಇರುವ ಗೋಪಾಲ, ಬಾಲಕೃಷ್ಣ ಹೀಗೆ ಥೀಮ್ಗೆ ತಕ್ಕಂತೆ ಮಾರುಕಟ್ಟೆಯಲ್ಲಿ ಕೃಷ್ಣನ ಬೊಂಬೆ ಸೆಟ್ಗಳು ಕೂಡ ದೊರೆಯುತ್ತದೆ. ಆನ್ಲೈನ್ನಲ್ಲಿ ಸಾಕಷ್ಟು ಬಗೆಯವು ಸಿಗುತ್ತವೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Krishna Janmashtami: ಕೃಷ್ಣ ಜನ್ಮಾಷ್ಟಮಿ; ಮಕ್ಕಳ ಅಲಂಕಾರದ ಉಡುಪುಗಳಿಗೆ ಭರ್ಜರಿ ಬೇಡಿಕೆ