ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಬಾರಿಯ ಫೆಸ್ಟಿವ್ ಸೀಸನ್‌ನಲ್ಲಿ ಕೃಷ್ಣ ಜನ್ಮಾಷ್ಟಮಿ (Krishna janmastami) ಪ್ರಯುಕ್ತ ಟ್ರೆಡಿಷನಲ್ ಫೆಸ್ಟಿವ್ ಥೀಮ್‌ನ ಫೋಟೊಶೂಟ್‌ಗಳು ಹೆಚ್ಚಾಗಿವೆ. ಅಂದಹಾಗೆ, ಮದುವೆಯಾಗದವರು ರಾಧೆಯಂತೆ ಕಾಣಿಸಿಕೊಂಡರೇ, ವಿವಾಹಿತ ಮಹಿಳೆಯರು ತಮ್ಮ ಮುದ್ದು ಕಂದಮ್ಮಗಳ ಜೊತೆ ಯಶೋದಾ-ಕೃಷ್ಣನಂತೆ ಟ್ರೆಡಿಷನಲ್ ಲುಕ್‌ನಲ್ಲಿ ಕಾಣಿಸಿಕೊಳ್ಳುವುದು (Krishna janmastami traditional fashion) ಟ್ರೆಂಡಿಯಾಗಿದೆ. ಪರಿಣಾಮ, ಸೋಷಿಯಲ್ ಮೀಡಿಯಾ ರಾಧೆಯರ ಹಾಗೂ ಯಶೋದಾ ಮಾತೆಯರ ಟ್ರೆಡಿಷನಲ್ ಔಟ್‌ಫಿಟ್ ಧರಿಸಿರುವ ಸ್ತ್ರೀಯರ ಫೋಟೋಗಳಿಂದ ತುಂಬಿ ಹೋಗಿದೆ. ಸದ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಫೆಸ್ಟಿವ್ ಸೀಸನ್‌ನ ಫೋಟೋಶೂಟ್‌ಗಳು ಟ್ರೆಂಡಿಯಾಗಿವೆ.
ಕೃಷ್ಣ ಜನ್ಮಾಷ್ಟಮಿ ಥೀಮ್ ಫೋಟೋಶೂಟ್ಸ್
ಹೌದು. ಎರಡೆರಡು ದಿನಗಳ ಕಾಲ ನಡೆಯುವ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸೋಷಿಯಲ್ ಮೀಡಿಯಾದಲ್ಲಿ ಕೇವಲ ಸೆಲೆಬ್ರೆಟಿಗಳು ಮಾತ್ರವಲ್ಲ, ಸಾಮಾನ್ಯ ಫ್ಯಾಷನ್ ಪ್ರಿಯ ಮಹಿಳೆಯರು ಕೂಡ ತಂತಮ್ಮ ಇಷ್ಟನುಸಾರವಾಗಿ ಟ್ರೆಡಿಷನಲ್ ಔಟ್‌ಗಳಲ್ಲಿ ಕಾಣಿಸಿಕೊಂಡು ಈ ಹಬ್ಬದ ವಿಶೇಷ ಫೋಟೋಗಳನ್ನು ಅಪ್‌ಲೋಡ್ ಮಾಡುತ್ತಿದ್ದಾರೆ. ಮದುವೆಯಾಗದ ಯುವತಿಯರು ನಾನಾ ಶೈಲಿಯಲ್ಲಿ ರಾಧೆಯಂತೆ ಲುಕ್ ನೀಡಿರುವ ಫೋಟೋಗಳನ್ನು ಹಂಚಿಕೊಂಡರೇ, ವಿವಾಹಿತ ಮಹಿಳೆಯರು ಸಾಂಪ್ರದಾಯಿಕ ಲುಕ್‌ನಲ್ಲಿ ತಮ್ಮ ಮುದ್ದು ಕಂದಮ್ಮಗಳೊಂದಿಗೆ ಪ್ರೀತಿಯ ಯಶೋದೆಯಾಗಿ ಟ್ರೆಡಿಷನಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಹಬ್ಬದ ಸಂಭ್ರಮವನ್ನು ಹೆಚ್ಚಿಸಿದೆ.
ಸೆಲೆಬ್ರೆಟಿಗಳ ರಾಧಾ-ಯಶೋಧಾ ಲುಕ್
ನಟಿ ಮಾಳವಿಕಾ ಮೆನನ್, ರೂಪಾಲ್ ತ್ಯಾಗಿ, ಕಾವ್ಯಾ ಶಾಸ್ತ್ರೀ, ಶೃತಿ ರಮೇಶ್ ಸೇರಿದಂತೆ ಹಿರಿತೆರೆ ಹಾಗೂ ಬೆಳ್ಳಿ ತೆರೆಯ ಕಲಾವಿದರು ಮುರಳಿ ಮೋಹನನ ಪ್ರೇಯಸಿ ರಾಧೆಯ ಅವತಾರದಲ್ಲಿ ಆಕರ್ಷಕವಾಗಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಶುಭಾಶಯ ಹೇಳಿದ್ದಾರೆ. ಇದೇ ರೀತಿ ನಟಿಯರಾದ ಅಮೂಲ್ಯ, ನಟನ ಪತ್ನಿ ಪ್ರಗತಿ ಶೆಟ್ಟಿ, ಮಿಸೆಸ್ ಗ್ಲಾಬಲ್ ಯೂನಿವರ್ಸ್ 2019 ಸವಿತಾ ರೆಡ್ಡಿ, ಬಿಗ್‌ಬಾಸ್ ಸ್ಪರ್ಧಿ ಸಮೀರ್ ಅಚಾರ್ಯರ ಪತ್ನಿ ಶ್ರಾವಣಿ ತಮ್ಮ ಮುದ್ದು ಕಂದಮ್ಮನೊಂದಿಗೆ ಟ್ರೆಡಿಷನಲ್ ಲುಕ್‌ನಲ್ಲಿ ಯಶೋಧೆಯರಾಗಿ ಸೆಲೆಬ್ರೇಟ್ ಮಾಡಿದ್ದಾರೆ. ಸೆಲೆಬ್ರೇಟಿಗಳು ಮಾತ್ರವಲ್ಲ, ಸಾಮಾನ್ಯ ಮಹಿಳೆಯರು ಕೂಡ ತಮ್ಮ ಹಾಗೂ ಮಕ್ಕಳ ಕೃಷ್ಣನ ಲುಕ್ ಇರುವ ಫೋಟೋಗಳನ್ನು ಹಂಚಿಕೊಂಡು ಸಂಭ್ರಮಿಸಿದ್ದಾರೆ.
ಒಟ್ಟಾರೆ, ಕೃಷ್ಣ ಜನ್ಮಾಷ್ಟಮಿ ಹಬ್ಬದ ಹೆಸರಲ್ಲಿ ನಮ್ಮ ಸಾಂಪ್ರದಾಯಿಕ ಉಡುಗೆ-ತೊಡುಗೆಗಳನ್ನು ಧರಿಸಿ ಟ್ರೆಡಿಷನಲ್ ವೇರ್‌ಗಳಿಗೆ ಪ್ರಾಮುಖ್ಯತೆ ನೀಡುವುದು ಹೆಚ್ಚಾಗುತ್ತಿರುವುದು ಪ್ರಶಂಸನೀಯ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Star Onam Fashion: ಕೇರಳದಲ್ಲಿ ನಟಿ ಸಂಜನಾ ಗರ್ಲಾನಿ ಓಣಂ ಸೀರೆ ಸಂಭ್ರಮ !