ಶೀಲಾ ಸಿ. ಶೆಟ್ಟಿ, ಬೆಂಗಳೂರು
ಉದ್ಯಾನನಗರಿಯಲ್ಲಿ ನಡೆದ ಲುಲು ಫ್ಯಾಷನ್ ವೀಕ್ (Lulu Fashion Week) ಜನರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಯಿತು. ನಾನಾ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಬ್ರಾಂಡ್‌ಗಳ ಟ್ರೆಂಡಿ ಫ್ಯಾಷನ್‌ವೇರ್ ಹಾಗೂ ಟ್ರಾವೆಲ್ ಆಕ್ಸೆಸರೀಸ್ ಧರಿಸಿದ ಪ್ರೊಫೆಷನಲ್ ಮಾಡೆಲ್‌ಗಳು ರ‍್ಯಾಂಪ್ ವಾಕ್ ಮೂಲಕ ಜನರಿಗೆ ನಯಾ ಟ್ರೆಂಡ್‌ನಲ್ಲಿ ಏನೆಲ್ಲಾ ಇದೆ ಎಂಬುದನ್ನು ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾದರು.
ಅಂದಹಾಗೆ, ಉದ್ಯಾನನಗರಿಯಲ್ಲಿ ಲುಲು ಫ್ಯಾಷನ್ ವೀಕ್ ಮೊದಲ ಬಾರಿ ನಡೆಯಿತು. ಅಮುಕ್ತಿ ಫ್ಯಾಷನ್, ಅಮೆರಿಕನ್ ಟೂರಿಸ್ಟರ್, ಇಂಡಿಯನ್ ಟೆರೈನ್, ವಿಐಪಿ, ಲೆವಿಸ್, ವಾನ್ ವೆಲಕ್ಸ್, ಕ್ರಿಮ್ಸನ್ ಕ್ಲಬ್, ಡಿಮೋಝಾ, ಫ್ಲೈಯಿಂಗ್ ಮೆಷಿನ್ ಸೇರಿದಂತೆ ನಾನಾ ಬ್ರಾಂಡ್‌ಗಳ ಉತ್ಪನ್ನಗಳು ಹಾಗೂ ಫ್ಯಾಷನ್‌ವೇರ್, ಟ್ರಾವೆಲ್ ಆಕ್ಸೆಸರೀಸ್ ಹಿಡಿದ ಮಾಡೆಲ್‌ಗಳು ರ‍್ಯಾಂಪ್ ವಾಕ್ ಮಾಡಿದರು.
ಸಾಲ್ಟ್ ಮತ್ತು ಪೆಪ್ಪರ್ ಶೋ
ಸಾಲ್ಟ್ ಮತ್ತು ಪೆಪ್ಪರ್ ಹೆಸರಿನಲ್ಲಿ ಹಿರಿಯರು ಹಾಗೂ ಕಿರುತೆರೆ ಹಿರಿಯ ನಟರು ರ್ಯಾಂಪ್ ವಾಕ್ ಮಾಡಿದ್ದು, ಎಲ್ಲರ ಗಮನ ಸೆಳೆಯಿತು. ಹಿರಿಯರು ಸಮರ್ಥರು ಎಂಬುದನ್ನು ಈ ರ್ಯಾಂಪ್ ಪ್ರೂವ್ ಮಾಡಿತು.
ಕಿರಿಯರ ರ‍್ಯಾಂಪ್ ವಾಕ್
ಇತ್ತೀಚಿನ ಟ್ರೆಂಡ್‌ಗೆ ತಕ್ಕಂತೆ ಮಕ್ಕಳ ರ‍್ಯಾಂಪ್ ವಾಕ್ ಕೂಡ ನಡೆಯಿತು. ಬಣ್ಣಬಣ್ಣದ ನಾನಾ ಬ್ರಾಂಡ್‌ನ ಕಿಡ್ಸ್ವೇರ್‌ಗಳಲ್ಲಿ ಮಕ್ಕಳು ವಾಕ್ ಮಾಡಿದರು.
ರಾಜೇಶ್ ಶೆಟ್ಟಿ ಕಮಾಲ್
ಎಂದಿನಂತೆ ಇಡೀ ಶೋ ಡೈರೆಕ್ಟ್ ಮಾಡಿದ ಕ್ರೆಡಿಟ್, ಸೆಲೆಬ್ರೆಟಿ ಶೋ ಡೈರೆಕ್ಟರ್ ರಾಜೇಶ್ ಶೆಟ್ಟಿಯವರಿಗೆ ಸಲ್ಲುತ್ತದೆ. ರ್ಯಾಂಪ್ ಶೋ ನನ್ನ ಮೊದಲ ಆದ್ಯತೆ. ಪ್ರತಿ ರ್ಯಾಂಪ್ ಶೋವನ್ನು ನಾನು ಪ್ರೀತಿಯಿಂದ ನಡೆಸುತ್ತೇನೆ ಎಂದು ಅವರು ಹೇಳಿದರು. ಸಾಲ್ಟ್ ಲೇಕ್ ಪ್ರೊಡಕ್ಷನ್‌ನ ಆದಿತ್ಯ ಶ್ರೀವಾತ್ಸವ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸ್ಟೈಲ್ ಐಕಾನ್ ಅವಾರ್ಡ್
ಇನ್ನು ನಟಿ, ಮಾಡೆಲ್ ಶುಭ್ರಾ ಅಯ್ಯಪ್ಪ ಸ್ಟೈಲ್ ಐಕಾನ್ ಆಫ್ ದಿ ಯಿಯರ್ ಆವಾರ್ಡ್ ಪಡೆದರು. ಕಿರುತೆರೆ ನಟಿ ದೀಪಿಕಾ ದಾಸ್, ಕ್ರಿಕೆಟಿಗ ಅಯ್ಯಪ್ಪ, ನಟ ಕಿಶನ್ ಬೆಳಗಲಿ ಸೆಲೆಬ್ರೆಟಿ ಶೋ ಸ್ಟಾಪರ್ ಆಗಿ ರ‍್ಯಾಂಪ್ ವಾಕ್ ಮಾಡಿದರು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Star Fashion: ವೈಟ್ ಕಟೌಟ್ ಬಾಡಿಕಾನ್ ಡ್ರೆಸ್‌ನಲ್ಲಿ ಸ್ಯಾಂಡಲ್‌ವುಡ್ ನಟಿ ರಚನಾ ಇಂದರ್ ಗ್ಲಾಮರಸ್ ಲುಕ್