Lulu Fashion Week : ಲುಲು ಫ್ಯಾಷನ್‌ ವೀಕ್‌ನಲ್ಲಿ ನಯಾ ಫ್ಯಾಷನ್‌ವೇರ್‌ಗಳ ಅನಾವರಣ - Vistara News

ಫ್ಯಾಷನ್

Lulu Fashion Week : ಲುಲು ಫ್ಯಾಷನ್‌ ವೀಕ್‌ನಲ್ಲಿ ನಯಾ ಫ್ಯಾಷನ್‌ವೇರ್‌ಗಳ ಅನಾವರಣ

ಉದ್ಯಾನನಗರಿಯಲ್ಲಿ ವೀಕೆಂಡ್‌ನಲ್ಲಿ ನಡೆದ ಲುಲು ಫ್ಯಾಷನ್‌ ವೀಕ್‌ (Lulu Fashion Week) ಗಮನ ಸೆಳೆಯಿತು. ಹೊಸ ಫ್ಯಾಷನ್‌ವೇರ್‌ಗಳನ್ನು ಹೈಲೈಟ್‌ ಮಾಡಿತು. ಈ ಬಗ್ಗೆ ಇಲ್ಲಿದೆ ವರದಿ.

VISTARANEWS.COM


on

lulu Fashion week
ಚಿತ್ರಗಳು: ಲುಲು ಫ್ಯಾಷನ್‌ ವೀಕ್
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಉದ್ಯಾನನಗರಿಯಲ್ಲಿ ನಡೆದ ಲುಲು ಫ್ಯಾಷನ್‌ ವೀಕ್‌ (Lulu Fashion Week) ಜನರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಯಿತು. ನಾನಾ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಬ್ರಾಂಡ್‌ಗಳ ಟ್ರೆಂಡಿ ಫ್ಯಾಷನ್‌ವೇರ್‌ ಹಾಗೂ ಟ್ರಾವೆಲ್‌ ಆಕ್ಸೆಸರೀಸ್‌ ಧರಿಸಿದ ಪ್ರೊಫೆಷನಲ್‌ ಮಾಡೆಲ್‌ಗಳು ರ‍್ಯಾಂಪ್ ವಾಕ್‌ ಮೂಲಕ ಜನರಿಗೆ ನಯಾ ಟ್ರೆಂಡ್‌ನಲ್ಲಿ ಏನೆಲ್ಲಾ ಇದೆ ಎಂಬುದನ್ನು ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾದರು.

ಅಂದಹಾಗೆ, ಉದ್ಯಾನನಗರಿಯಲ್ಲಿ ಲುಲು ಫ್ಯಾಷನ್‌ ವೀಕ್‌ ಮೊದಲ ಬಾರಿ ನಡೆಯಿತು. ಅಮುಕ್ತಿ ಫ್ಯಾಷನ್‌, ಅಮೆರಿಕನ್‌ ಟೂರಿಸ್ಟರ್‌, ಇಂಡಿಯನ್‌ ಟೆರೈನ್‌, ವಿಐಪಿ, ಲೆವಿಸ್‌, ವಾನ್‌ ವೆಲಕ್ಸ್, ಕ್ರಿಮ್ಸನ್‌ ಕ್ಲಬ್‌, ಡಿಮೋಝಾ, ಫ್ಲೈಯಿಂಗ್‌ ಮೆಷಿನ್‌ ಸೇರಿದಂತೆ ನಾನಾ ಬ್ರಾಂಡ್‌ಗಳ ಉತ್ಪನ್ನಗಳು ಹಾಗೂ ಫ್ಯಾಷನ್‌ವೇರ್‌, ಟ್ರಾವೆಲ್‌ ಆಕ್ಸೆಸರೀಸ್‌ ಹಿಡಿದ ಮಾಡೆಲ್‌ಗಳು‌ ರ‍್ಯಾಂಪ್‌ ವಾಕ್‌ ಮಾಡಿದರು.

lulu Fashion week

ಸಾಲ್ಟ್‌ ಮತ್ತು ಪೆಪ್ಪರ್‌ ಶೋ

ಸಾಲ್ಟ್‌ ಮತ್ತು ಪೆಪ್ಪರ್‌ ಹೆಸರಿನಲ್ಲಿ ಹಿರಿಯರು ಹಾಗೂ ಕಿರುತೆರೆ ಹಿರಿಯ ನಟರು ರ್ಯಾಂಪ್‌ ವಾಕ್‌ ಮಾಡಿದ್ದು, ಎಲ್ಲರ ಗಮನ ಸೆಳೆಯಿತು. ಹಿರಿಯರು ಸಮರ್ಥರು ಎಂಬುದನ್ನು ಈ ರ್ಯಾಂಪ್‌ ಪ್ರೂವ್‌ ಮಾಡಿತು.

lulu Fashion week

ಕಿರಿಯರ ರ‍್ಯಾಂಪ್‌ ವಾಕ್‌

ಇತ್ತೀಚಿನ ಟ್ರೆಂಡ್‌ಗೆ ತಕ್ಕಂತೆ ಮಕ್ಕಳ ರ‍್ಯಾಂಪ್‌ ವಾಕ್‌ ಕೂಡ ನಡೆಯಿತು. ಬಣ್ಣಬಣ್ಣದ ನಾನಾ ಬ್ರಾಂಡ್‌ನ ಕಿಡ್ಸ್ವೇರ್‌ಗಳಲ್ಲಿ ಮಕ್ಕಳು ವಾಕ್‌ ಮಾಡಿದರು.

lulu Fashion week

ರಾಜೇಶ್‌ ಶೆಟ್ಟಿ ಕಮಾಲ್‌

ಎಂದಿನಂತೆ ಇಡೀ ಶೋ ಡೈರೆಕ್ಟ್‌ ಮಾಡಿದ ಕ್ರೆಡಿಟ್‌, ಸೆಲೆಬ್ರೆಟಿ ಶೋ ಡೈರೆಕ್ಟರ್‌ ರಾಜೇಶ್‌ ಶೆಟ್ಟಿಯವರಿಗೆ ಸಲ್ಲುತ್ತದೆ. ರ್ಯಾಂಪ್‌ ಶೋ ನನ್ನ ಮೊದಲ ಆದ್ಯತೆ. ಪ್ರತಿ ರ್ಯಾಂಪ್‌ ಶೋವನ್ನು ನಾನು ಪ್ರೀತಿಯಿಂದ ನಡೆಸುತ್ತೇನೆ ಎಂದು ಅವರು ಹೇಳಿದರು. ಸಾಲ್ಟ್ ಲೇಕ್‌ ಪ್ರೊಡಕ್ಷನ್‌ನ ಆದಿತ್ಯ ಶ್ರೀವಾತ್ಸವ್‌ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

lulu Fashion week

ಸ್ಟೈಲ್‌ ಐಕಾನ್‌ ಅವಾರ್ಡ್

ಇನ್ನು ನಟಿ, ಮಾಡೆಲ್‌ ಶುಭ್ರಾ ಅಯ್ಯಪ್ಪ ಸ್ಟೈಲ್‌ ಐಕಾನ್‌ ಆಫ್‌ ದಿ ಯಿಯರ್‌ ಆವಾರ್ಡ್ ಪಡೆದರು. ಕಿರುತೆರೆ ನಟಿ ದೀಪಿಕಾ ದಾಸ್‌, ಕ್ರಿಕೆಟಿಗ ಅಯ್ಯಪ್ಪ, ನಟ ಕಿಶನ್‌ ಬೆಳಗಲಿ ಸೆಲೆಬ್ರೆಟಿ ಶೋ ಸ್ಟಾಪರ್‌ ಆಗಿ ರ‍್ಯಾಂಪ್‌ ವಾಕ್‌ ಮಾಡಿದರು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Star Fashion: ವೈಟ್‌ ಕಟೌಟ್‌ ಬಾಡಿಕಾನ್‌ ಡ್ರೆಸ್‌ನಲ್ಲಿ ಸ್ಯಾಂಡಲ್‌ವುಡ್‌ ನಟಿ ರಚನಾ ಇಂದರ್‌ ಗ್ಲಾಮರಸ್‌ ಲುಕ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Star Saree Fashion: ರೇಷ್ಮೆ ಸೀರೆಯಲ್ಲಿ ನಟಿ ಕೀರ್ತಿ ಸುರೇಶ್‌ರಂತೆ ಗ್ಲಾಮರಸ್‌ ಆಗಿ ಕಾಣಿಸಬೇಕೆ? 5 ಟಿಪ್ಸ್ ಫಾಲೋ ಮಾಡಿ!

ತಮ್ಮ ಸೋದರ ಸಂಬಂಧಿಯ ಮದುವೆಯಲ್ಲಿ ರೇಷ್ಮೆಯ ಸೀರೆಯುಟ್ಟು ಗ್ಲಾಮರಸ್‌ ಆಗಿ ಕಾಣಿಸಿಕೊಂಡ (Star Saree Fashion) ಮಹಾ ನಟಿ ಕೀರ್ತಿ ಸುರೇಶ್‌ರಂತೆ ಅಂದವಾಗಿ ಕಾಣಿಸಿಕೊಳ್ಳಲು ಯಾರಿಗೆ ಇಷ್ಟವಿಲ್ಲ ಹೇಳಿ! ಇವರಂತೆ ಆಕರ್ಷಕವಾಗಿ ಕಾಣಿಸಲು ಇಲ್ಲಿದೆ 5 ಸಿಂಪಲ್‌ ಟಿಪ್ಸ್. ಟ್ರೈ ಮಾಡಿ ನೋಡಿ ಎನ್ನುತ್ತಾರೆ ಬ್ಯೂಟಿ ಎಕ್ಸ್ಪರ್ಟ್ಸ್.

VISTARANEWS.COM


on

Star Saree Fashion
ಚಿತ್ರಗಳು: ಕೀರ್ತಿ ಸುರೇಶ್, ನಟಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ʼಮಹಾ ನಟಿʼ ಕೀರ್ತಿ ಸುರೇಶ್‌ರಂತೆ ರೇಷ್ಮೆ ಸೀರೆಯಲ್ಲೂ ಗ್ಲಾಮರಸ್‌ ಆಗಿ ಕಾಣಿಸಿಕೊಳ್ಳಲು ಯಾರಿಗೆ ಇಷ್ಟವಿಲ್ಲ, ಹೇಳಿ ನೋಡೋಣ! ಪ್ರತಿ ಮಹಿಳೆಗೂ ತಾನು ಕೂಡ ತಾನು ರೇಷ್ಮೆ ಸೀರೆಯಲ್ಲೂ ಅಂದವಾಗಿ, ಅದರಲ್ಲೂ ಗ್ಲಾಮರಸ್‌ ಆಗಿ, ಸೆಲೆಬ್ರೆಟಿ ಲುಕ್‌ನಲ್ಲಿ ಕಾಣಿಸಬೇಕೆಂಬ ಬಯಕೆ ಇದ್ದೇ ಇರುತ್ತದೆ. ಇದಕ್ಕಾಗಿ ಹೆಚ್ಚೆನೂ ಮಾಡಬೇಕಾಗಿಲ್ಲ! ಸೆಲೆಬ್ರೆಟಿಗಳು ಪಾಲಿಸುವ ಸೀರೆ ಸೆಲೆಕ್ಷನ್‌ನ ಐಡಿಯಾ, ಸ್ಟೈಲಿಂಗ್‌ ಟಿಪ್ಸ್ ಹಾಗೂ ಡ್ರೇಪಿಂಗ್‌ ಟಿಪ್ಸ್ ಫಾಲೋ ಮಾಡಿದರೇ ಸಾಕು, ಅವರಂತೆಯೇ ನೀವೂ ಕೂಡ ಗ್ಲಾಮರಸ್‌ ಆಗಿ ಕಾಣಿಸಬಹುದು ಎನ್ನುತ್ತಾರೆ ಬ್ಯೂಟಿ ಎಕ್ಸ್‌ಫರ್ಟ್‌ ಮಂಗಲಾ. ಈ ಕುರಿತಂತೆ ಒಂದೈದು ಸಿಂಪಲ್‌ (Star Saree Fashion) ಐಡಿಯಾಗಳನ್ನು ನೀಡಿದ್ದಾರೆ.

Star Saree Fashion

ವೆಡ್ಡಿಂಗ್‌ಗೆ ರೇಷ್ಮೆ ಸೀರೆಯ ಆಯ್ಕೆ ಹೀಗಿರಲಿ

ರೇಷ್ಮೆ ಸೀರೆಗಳಲ್ಲಿ ಕೆಲವು ಸಾಫ್ಟ್ ಫ್ಯಾಬ್ರಿಕ್‌ನವು ದೊರೆಯುತ್ತವೆ. ಇವನ್ನು ಉಟ್ಟಾಗ ದೇಹ ಪ್ಲಂಪಿಯಾಗಿ ಕಾಣಿಸುವುದಿಲ್ಲ. ಅಂತಹ ಫ್ಯಾಬ್ರಿಕ್‌ನ ಸೀರೆಗಳನ್ನೇ ಆಯ್ಕೆ ಮಾಡಿ, ಉಡಿ.

ಪಾಸ್ಟೆಲ್‌ ಶೇಡ್‌ ಹಾಗೂ ಪ್ರಿಂಟ್ಸ್ ಸೀರೆ ಆಯ್ಕೆ

ಈ ಸೀಸನ್‌ನಲ್ಲಿ ಟ್ರೆಂಡಿಯಾಗಿರುವ ಪೀಚ್‌, ಪಿಂಕ್‌, ಪಿಸ್ತಾದಂತಹ ಪಾಸ್ಟೆಲ್‌ ಶೇಡ್‌ ಇರುವಂತಹ ಅಥವಾ ಲೈಟ್‌ ಪ್ರಿಂಟ್ಸ್ ಇರುವಂತಹ ರೇಷ್ಮೆ ಸೀರೆಗಳನ್ನು ಉಡಿ. ಇದು ಟ್ರೆಂಡಿಯಾಗಿ ಕಾಣಿಸುವುರೊಂದಿಗೆ ಯಂಗ್‌ ಲುಕ್‌ ನೀಡುತ್ತದೆ.

Star Saree Fashion

ಗ್ಲಾಮರಸ್‌ ಲುಕ್‌ಗಾಗಿ ಡಿಸೈನರ್‌ ಬ್ಲೌಸ್

ರೇಷ್ಮೆ ಸೀರೆಗೂ ಗ್ಲಾಮರಸ್‌ ಲುಕ್‌ ಬೇಕಾದಲ್ಲಿ, ಹಾಲ್ಟರ್‌ ನೆಕ್‌, ಸ್ಲೀವ್‌ಲೆಸ್‌ ಅಥವಾ ಮೆಗಾ ಸ್ಲೀವ್‌, ಬಿಕಿನಿ ಬ್ಲೌಸ್‌ ಡಿಸೈನ್‌ನವನ್ನು ಆಯ್ಕೆ ಮಾಡಬಹುದು. ಆಗ ರೇಷ್ಮೆ ಸೀರೆಗೂ ಗ್ಲಾಮರಸ್‌ ಟಚ್‌ ಸಿಗುತ್ತದೆ.

ಸೀರೆ ಡ್ರೇಪಿಂಗ್‌ ಹೀಗಿರಲಿ

ಮದುವೆಯಲ್ಲಿ ಉಡುವ ರೇಷ್ಮೆ ಸೀರೆಯ ಡ್ರೇಪಿಂಗ್‌ ಪರ್ಫೆಕ್ಟ್ ಆಗಿರಬೇಕು. ಇದಕ್ಕಾಗಿ ಮೊದಲೇ ಸೀರೆಯ ನೆರಿಗೆ ಹಾಗೂ ಸೆರಗನ್ನು ರೆಡಿ ಮಾಡಿಟ್ಟುಕೊಳ್ಳಬಹುದು. ಫಿಟ್‌ ಆಗಿ ಕೂರುವಂತೆ ಸೀರೆಯನ್ನು ಉಡುವುದು ಒಂದು ಕಲೆ. ಸರಿಯಾದ ಡ್ರೇಪಿಂಗ್‌ ಕೂಡ ನೋಡಲು ಆಕರ್ಷಕವಾಗಿ ಬಿಂಬಿಸುತ್ತದೆ.

Star Saree Fashion

ಸೆಲೆಬ್ರೆಟಿ ಮೇಕೋವರ್‌

ಸೆಲೆಬ್ರೆಟಿ ಲುಕ್‌ಗಾಗಿ ಆದಷ್ಟೂ ಟ್ರೆಂಡಿಯಾಗಿರುವ ಸ್ಟೇಟ್‌ಮೆಂಟ್‌ ಜ್ಯುವೆಲರಿಗಳನ್ನು ಧರಿಸಿ. ಹೇರ್‌ಸ್ಟೈಲ್‌ ಮೇಕಪ್‌ಗೆ ಮ್ಯಾಚ್‌ ಆಗುವಂತಿರಲಿ. ತುಟಿಗಳ ವರ್ಣ ತಿಳಿಯಾಗಿರಲಿ. ಮ್ಯಾಚಿಂಗ್‌ ಫುಟ್‌ವೇರ್‌ ಹಾಗೂ ಆಕ್ಸೆಸರೀಸ್‌ ಕೂಡ ಅಂದ ಹೆಚ್ಚಿಸಬಲ್ಲವು.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

ಇದನ್ನೂ ಓದಿ: Celebrity Fashion: ಬ್ಲೇಜರ್‌ನಲ್ಲಿ ನಟ ಸುದೀಪ್‌ ಪುತ್ರಿ ಸಾನ್ವಿ ಕ್ಲಾಸಿ ಲುಕ್‌!

Continue Reading

ಫ್ಯಾಷನ್

Celebrity Ethnic Fashion: ನಟ ಧನುಷ್‌ ಗೌಡರ ಗ್ರ್ಯಾಂಡ್‌ ಎಥ್ನಿಕ್‌ ಜಾಕೆಟ್‌ ವಿಶೇಷತೆ ಏನು?

ನಟ ಧನುಷ್‌ ಗೌಡ ಅವರು ಧರಿಸಿದ್ದ ಮಲ್ಟಿ ಎಂಬ್ರಾಯ್ಡರಿ ಎಥ್ನಿಕ್‌ ಜಾಕೆಟ್‌ (Celebrity Ethnic Fashion) ನೋಡುಗರನ್ನು ಸೆಳೆದಿದೆ. ನಟ ಧನುಷ್‌ ಗೌಡ ಅವರು ಧರಿಸಿರುವ ಈ ಎಥ್ನಿಕ್‌ ಜಾಕೆಟ್‌ ನೆಹ್ರೂ ಜಾಕೆಟ್‌ ಡಿಸೈನ್‌ ಹೊಂದಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಗ್ರ್ಯಾಂಡ್‌ ಡಿಸೈನ್‌ ಒಳಗೊಂಡಿದೆ. ಮಲ್ಟಿ ಕಲರ್‌ ಸಿಲ್ಕ್‌ ಮಾತ್ರವಲ್ಲದೇ ನಾನಾ ಬಗೆಯ ಎಂಬ್ರಾಯ್ಡರಿ ಥ್ರೆಡ್‌ನಲ್ಲಿ ವಿನ್ಯಾಸಗೊಂಡಿದೆ. ವೆಡ್ಡಿಂಗ್‌ ಗ್ರ್ಯಾಂಡ್‌ ಔಟ್‌ಫಿಟ್‌ ಲಿಸ್ಟ್‌ಗೆ ಸೇರಿರುವ ಈ ಜಾಕೆಟ್‌ ಇತರ ವಿಶೇಷತೆ ಏನೇನು? ಇದರ ಸ್ಟೈಲಿಂಗ್‌ ಹೇಗೆ ಎಂಬುದರ ಬಗ್ಗೆ ಇಲ್ಲಿದೆ ಡಿಟೇಲ್ಸ್.

VISTARANEWS.COM


on

Celebrity Ethnic Fashion
ಚಿತ್ರಗಳು: ಧನುಷ್‌ ಗೌಡ, ಕಿರುತೆರೆ ನಟ, ಫೋಟೋಗ್ರಾಫಿ : ಸುಜಯ್‌ ನಾಯ್ಡು
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ನಟ ಧನುಷ್‌ ಗೌಡ ಧರಿಸಿದ್ದ ಗ್ರ್ಯಾಂಡ್‌ ಎಂಬ್ರಾಯ್ಡರಿ ಜಾಕೆಟ್‌ (Celebrity Ethnic Fashion) ನೋಡುಗರನ್ನು ಸೆಳೆದಿದೆ. ಧನುಷ್‌ ಗೌಡ ಅವರ ವೆಡ್ಡಿಂಗ್‌ ಗ್ರ್ಯಾಂಡ್‌ ಔಟ್‌ಫಿಟ್‌ ಲಿಸ್ಟ್‌ನಲ್ಲಿದ್ದ ಈ ಗ್ರ್ಯಾಂಡ್‌ ಎಥ್ನಿಕ್‌ ವೇಸ್ಟ್ಕೋಟ್‌ ಅಥವಾ ನೆಹ್ರೂ ಜಾಕೆಟ್‌ ಫ್ಯಾಷನ್‌ ಪ್ರಿಯ ಯುವಕರನ್ನು ಆಕರ್ಷಿಸಿದೆ.

Celebrity Ethnic Fashion

ಧನುಷ್‌ ಗೌಡ ಫ್ಯಾಷನ್‌ ಅಭಿರುಚಿ

“ನಟ ಧನುಷ್‌ ಗೌಡ ಆಗಾಗ ಒಂದಲ್ಲ ಒಂದು ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡು ತಮ್ಮ ಫಾಲೋವರ್ಸ್‌ಗಳನ್ನು ಸೆಳೆಯುತ್ತಲೇ ಇರುತ್ತಾರೆ. ಅದು ವೆಸ್ಟರ್ನ್ ಆಗಬಹುದು ಅಥವಾ ಇಂಡಿಯನ್‌ ಲುಕ್‌ ಆಗಬಹುದು. ಇನ್ನು ಅವರ ವೆಡ್ಡಿಂಗ್‌ ಔಟ್‌ಫಿಟ್‌ಗಳಲ್ಲಂತೂ ಆಕರ್ಷಕವಾಗಿಯೇ ಕಾಣಿಸಿಕೊಂಡಿದ್ದರು. ಪ್ರತಿಯೊಂದು ಔಟ್‌ಫಿಟ್‌ ಆಯ್ಕೆಯಲ್ಲಿ ಅವರ ಫ್ಯಾಷನ್‌ ಸೆನ್ಸ್ ಎದ್ದು ಕಾಣಿಸುತ್ತಿತ್ತು. ಇದು ಅವರ ಅಭಿರುಚಿಯನ್ನು ತೋರ್ಪಡಿಸಿದೆ” ಎಂದು ಹೇಳುವ ಫ್ಯಾಷನ್‌ ವಿಮರ್ಶಕರ ಪ್ರಕಾರ, ನಟನಾದವನು ತಾನು ಧರಿಸುವ ಔಟ್‌ಫಿಟ್‌ಗಳಿಂದಲೇ ತಂತಮ್ಮ ಅಭಿರುಚಿಯನ್ನು ವ್ಯಕ್ತಪಡಿಸಬಹುದಂತೆ.

Celebrity Ethnic Fashion

ಸೆಲೆಬ್ರೆಟಿ ಡಿಸೈನರ್‌ ಚಂದನ್‌ ಗೌಡ ಜಾದೂ

ನಟ ಧನುಷ್‌ ಗೌಡ ಅವರು ಧರಿಸಿರುವ ಈ ಎಥ್ನಿಕ್‌ ಜಾಕೆಟ್‌ ನೆಹ್ರೂ ಜಾಕೆಟ್‌ ಡಿಸೈನ್‌ ಹೊಂದಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಗ್ರ್ಯಾಂಡ್‌ ಡಿಸೈನ್‌ ಒಳಗೊಂಡಿದೆ. ಮಲ್ಟಿ ಕಲರ್‌ ಸಿಲ್ಕ್‌ ಮಾತ್ರವಲ್ಲದೇ ನಾನಾ ಬಗೆಯ ಎಂಬ್ರಾಯ್ಡರಿ ಥ್ರೆಡ್‌ನಲ್ಲಿ ವಿನ್ಯಾಸಗೊಂಡಿದೆ. ಒಂದೇ ಜಾಕೆಟ್‌ನಲ್ಲಿ ಸಾಕಷ್ಟು ಹ್ಯಾಂಡ್‌ವರ್ಕ್ ಎಂಬ್ರಾಯ್ಡರಿ ಬಳಸಿರುವುದರಿಂದ ಅತ್ಯಾಕರ್ಷಕವಾಗಿ ಕಾಣಿಸುತ್ತಿದೆ ಎನ್ನುತ್ತಾರೆ ಸೆಲೆಬ್ರೆಟಿ ಡಿಸೈನರ್‌ ಚಂದನ್‌ ಗೌಡ. ಅವರು ಹೇಳುವಂತೆ, ಇದು ವೆಡ್ಡಿಂಗ್‌ಗೆ ಹೇಳಿಮಾಡಿಸಿದ ಔಟ್‌ಫಿಟ್‌ಗಳಲ್ಲೊಂದು ಎನ್ನುತ್ತಾರೆ.

Celebrity Ethnic Fashion

ಗ್ರ್ಯಾಂಡ್‌ ಜಾಕೆಟ್ ಸ್ಟೈಲಿಂಗ್‌ ಹೇಗೆ?

ಯುವಕರು ಗ್ರ್ಯಾಂಡ್‌ ಜಾಕೆಟ್‌ನಲ್ಲಿ ನಟ ಧನುಷ್‌ಗೌಡರಂತೆ ಕಾಣಿಸಲು ಒಂದಿಷ್ಟು ಫ್ಯಾಷನ್‌ ರೂಲ್ಸ್ ಫಾಲೋ ಮಾಡಿದರೇ ಸಾಕು. ಆಗ, ತಂತಾನೆ ಪರ್ಫೆಕ್ಟ್ ಎಥ್ನಿಕ್‌ ಲುಕ್‌ ನಿಮ್ಮದಾಗುವುದು. ಇದಕ್ಕಾಗಿ ಆದಷ್ಟೂ ಗ್ರ್ಯಾಂಡ್‌ ಎಂಬ್ರಾಯ್ಡರಿ ಇರುವಂತಹ ಜಾಕೆಟ್‌ಗಳನ್ನೇ ಚೂಸ್‌ ಮಾಡಬೇಕು. ಇವಕ್ಕೆ ಸಾದಾ ಸಿಲ್ಕ್‌ ಅಥವಾ ಕಾಟನ್‌ ಮಿಕ್ಸ್ ಸಿಲ್ಕ್‌ ಕುರ್ತಾ ಮ್ಯಾಚ್‌ ಆಗುತ್ತವೆ. ವೈಬ್ರೆಂಟ್‌ ಶೇಡ್‌ನವು ಕೂಡ ನಿಮ್ಮನ್ನು ಹೈಲೈಟ್‌ ಮಾಡಬಲ್ಲವು ಎನ್ನುತ್ತಾರೆ ಡಿಸೈನರ್‌ ಹಾಗೂ ಸ್ಟೈಲಿಸ್ಟ್ ಚಂದನ್‌ ಗೌಡ.

ಇದನ್ನೂ ಓದಿ: Celebrity Fashion: ಬ್ಲೇಜರ್‌ನಲ್ಲಿ ನಟ ಸುದೀಪ್‌ ಪುತ್ರಿ ಸಾನ್ವಿ ಕ್ಲಾಸಿ ಲುಕ್‌!

ಯುವಕರ ಆಯ್ಕೆ ಹೀಗಿರಲಿ

  • ನಿಮ್ಮ ಪರ್ಸನಾಲಿಟಿಗೆ ತಕ್ಕಂತೆ ಎಥ್ನಿಕ್‌ ಜಾಕೆಟ್‌ಗಳ ಆಯ್ಕೆ ಮಾಡಿ.
  • ಸ್ಕಿನ್‌ಟೋನ್‌ಗೆ ತಕ್ಕಂತೆ ಕಲರ್‌ ಶೇಡ್‌ ಸೆಲೆಕ್ಟ್ ಮಾಡಿ.
  • ಟ್ರೆಂಡ್‌ನಲ್ಲಿರುವ ಡಿಸೈನ್‌ನವನ್ನು ಚೂಸ್‌ ಮಾಡುವುದು ಉತ್ತಮ.
  • ವೆಡ್ಡಿಂಗ್‌ ಆದಲ್ಲಿ ಆದಷ್ಟೂಸಂಗಾತಿಯ ಔಟ್‌ಫಿಟ್‌ಗೆ ಮ್ಯಾಚ್‌ ಆಗುವುದೇ ಎಂಬುದನ್ನು ಗಮನಿಸಿ.
  • ಯಾವ ಸಂದರ್ಭಕ್ಕೆ ಎಂಬುದನ್ನು ಮೊದಲು ಗಮನದಲ್ಲಿಟ್ಟುಕೊಂಡು ಡಿಸೈನ್‌ ಆಯ್ಕೆ ಮಾಡಿ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

ಇದನ್ನೂ ಓದಿ: Celebrity Fashion: ಬ್ಲೇಜರ್‌ನಲ್ಲಿ ನಟ ಸುದೀಪ್‌ ಪುತ್ರಿ ಸಾನ್ವಿ ಕ್ಲಾಸಿ ಲುಕ್‌!

Continue Reading

ದೇಶ

Reliance Retail: ಚರ್ಮ ರಕ್ಷಣೆಯ ʼಅಕೈಂಡ್ʼ ಬ್ರಾಂಡ್‌ನ ಕ್ರೀಮ್‌ ಬಿಡುಗಡೆ

Reliance Retail: ರಿಲಯನ್ಸ್ ರೀಟೇಲ್‌ಗೆ ಸೇರಿದ ಸೌಂದರ್ಯ ರೀಟೇಲ್ ಪ್ಲಾಟ್‌ಫಾರ್ಮ್ ಟಿರಾ ಬುಧವಾರ ತನ್ನ ಚರ್ಮರಕ್ಷಣೆ ಬ್ರಾಂಡ್‌ ಆದ “ಅಕೈಂಡ್” (Akind) ಬಿಡುಗಡೆ ಘೋಷಣೆ ಮಾಡಿದೆ. ಮುಂಬೈನ ಜಿಯೋ ವರ್ಲ್ಡ್‌ ಡ್ರೈವ್‌ನಲ್ಲಿರುವ ಟಿರಾ ಮಳಿಗೆಯಲ್ಲಿ ಅಕೈಂಡ್ ಸಹ ಸಂಸ್ಥಾಪಕಿ ಮೀರಾ ಕಪೂರ್ ಅವರು ಅಕೈಂಡ್ ಅನ್ನು ಅನಾವರಣ ಮಾಡಿದರು.

VISTARANEWS.COM


on

Reliance Retail Tira unveils skin care brand Akind
Koo

ಮುಂಬೈ: ರಿಲಯನ್ಸ್ ರೀಟೇಲ್‌ಗೆ (Reliance Retail) ಸೇರಿದ ಸೌಂದರ್ಯ ರೀಟೇಲ್ ಪ್ಲಾಟ್‌ಫಾರ್ಮ್ ಟಿರಾ (Tira) ಬುಧವಾರ ತನ್ನ ಚರ್ಮರಕ್ಷಣೆ ಬ್ರಾಂಡ್ ಆದ “ಅಕೈಂಡ್” (Akind) ಬಿಡುಗಡೆ ಬಗ್ಗೆ ಘೋಷಣೆ ಮಾಡಿದೆ. ಮುಂಬೈನ ಜಿಯೋ ವರ್ಲ್ಡ್‌ ಡ್ರೈವ್‌ನಲ್ಲಿರುವ ಟಿರಾ ಮಳಿಗೆಯಲ್ಲಿ ಅಕೈಂಡ್ ಸಹ ಸಂಸ್ಥಾಪಕಿ ಮೀರಾ ಕಪೂರ್, ಅಕೈಂಡ್ ಅನ್ನು ಅನಾವರಣ ಮಾಡಿದರು.

ಚರ್ಮದ ಆರೈಕೆಗೆ ಅಕೈಂಡ್

ಪ್ರತಿ ವ್ಯಕ್ತಿಯೂ ತನ್ನ ಚರ್ಮದ ಆರೈಕೆ ಬಗ್ಗೆ ವಿಶೇಷ ಕಾಳಜಿ ತೆಗೆದುಕೊಳ್ಳಲೇಬೇಕಾಗುತ್ತದೆ. ಏಕೆಂದರೆ ವ್ಯಕ್ತಿಯಿಂದ ವ್ಯಕ್ತಿಗೆ ಚರ್ಮವು ವಿಭಿನ್ನ ಹಾಗೂ ವಿಶಿಷ್ಟವಾಗಿರುತ್ತದೆ. ವೈಯಕ್ತಿಕವಾಗಿ ಪ್ರತ್ಯೇಕ ಆರೈಕೆ ಮಾಡಬೇಕಾಗುತ್ತದೆ. ಈ ಸಂಗತಿ “ಅಕೈಂಡ್” ಅರ್ಥ ಮಾಡಿಕೊಳ್ಳುತ್ತದೆ. ಇನ್ನು ಪ್ರತಿ ವ್ಯಕ್ತಿಯ ಚರ್ಮದ ಅಗತ್ಯಗಳನ್ನು ಅರಿತು, ಆರೈಕೆಯನ್ನು ಸರಳಗೊಳಿಸಲಾಗುತ್ತದೆ. ಈ ನಿಶ್ಚಿತ ಗುರಿಯ ವಿಧಾನದ ಮೂಲಕವಾಗಿ ಈ ಬ್ರ್ಯಾಂಡ್ ಪ್ರತಿ ವ್ಯಕ್ತಿಯ ಚರ್ಮ ಕಾಳಜಿಯ ಗುರಿಯನ್ನು ಸಾಧಿಸಲು ಬಲ ತುಂಬುತ್ತದೆ. ಅಕೈಂಡ್‌ನಲ್ಲಿ ಇರುವಂಥ ಪ್ರತಿ ಸೂತ್ರವು ವಿಶಿಷ್ಟ ಉದ್ದೇಶವನ್ನು ಈಡೇರಿಸಿ, ಚರ್ಮದ ಆರೋಗ್ಯಕ್ಕೆ ಇರುವ ಅಡೆತಡೆಗಳನ್ನು ನಿವಾರಿಸುತ್ತದೆ ಮತ್ತು ಅದು ಮೂರು ವರ್ಗಗಳ ಅಡಿಯಲ್ಲಿ ಬರುತ್ತದೆ.

3 ಹಂತಗಳಲ್ಲಿ ಚರ್ಮದ ರಕ್ಷಣೆ

ಬಿಲ್ಡ್, ಬ್ಯಾಲೆನ್ಸ್ ಹಾಗೂ ಡಿಫೆನ್ಸ್ ಹೀಗೆ ಮೂರು ಶ್ರೇಣಿಗಳಿವೆ. ಅದರಲ್ಲಿ ಮೊದಲನೆಯ ಶ್ರೇಣಿಯಾದ ಬಿಲ್ಡ್ ಚರ್ಮದ ಅಡೆತಡೆಗಳನ್ನು ನಿವಾರಿಸಿ, ಅದರ ಸಹಜ ಸ್ಥಿತಿಗೆ ತರುವ ಕಡೆಗೆ ಗಮನ ಕೇಂದ್ರೀಕರಿಸುತ್ತದೆ. ಇನ್ನು ಎರಡನೆಯ ಶ್ರೇಣಿ ಚರ್ಮದ ಅಡೆತಡೆಗಳನ್ನು ನಯವಾಗಿ ನಿರ್ವಹಿಸುತ್ತದೆ, ಯಥಾ ಸ್ಥಿತಿಯಲ್ಲಿ ಇರಿಸುತ್ತದೆ, ಅದರ ಫಲಿತವಾಗಿ ಆರೋಗ್ಯಪೂರ್ಣವಾಗಿ, ಹೊಳೆಯುವಂಥ ಚರ್ಮವನ್ನು ಕಾಪಾಡುತ್ತದೆ. ಇನ್ನು ಮೂರನೆಯ ಶ್ರೇಣಿಯು ಮಾಲಿನ್ಯ, ಜೀವನಶೈಲಿ ಸಂಗತಿಗಳು ಹಾಗೂ ಸೂರ್ಯನ ಕಿರಣದಿಂದ ಆಗುವಂಥ ಹಾನಿಯಿಂದ ತಡೆಯಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Glasses or Lenses?: ಕನ್ನಡಕವೋ ಕಾಂಟ್ಯಾಕ್ಟ್‌ ಲೆನ್ಸ್‌ ಬೇಕೋ? ಇದನ್ನು ಓದಿ, ನೀವೇ ನಿರ್ಧರಿಸಿ!

ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕಿ ಇಶಾ ಅಂಬಾನಿ ಈ ಕುರಿತು ಮಾತನಾಡಿ, “ಟಿರಾದ ಮೊದಲ ಚರ್ಮ ಆರೈಕೆ ಬ್ರ್ಯಾಂಡ್ ಆದ ಅಕೈಂಡ್ ಅನ್ನು ಸ್ವಂತ ಬ್ರಾಂಡ್‌ಗಳ ಪೋರ್ಟ್‌ಫೋಲಿಯೊದಲ್ಲಿ ಪರಿಚಯಿಸಲು ನಾವು ಉತ್ಸುಕರಾಗಿದ್ದೇವೆ. ಈಗ ಮಾಡಿರುವ ಉತ್ಪನ್ನದ ಬಿಡುಗಡೆಯು ಟಿರಾದ ಪಯಣದಲ್ಲಿ ಮಹತ್ವದ ಮೈಲುಗಲ್ಲು ಎನಿಸುತ್ತದೆ. ನಾವು ವಿಸ್ತರಿಸುವುದನ್ನು ಮತ್ತು ವಿಕಸನಗೊಳ್ಳುವುದನ್ನು ಮುಂದುವರಿಸಿದಂತೆ, ನಾವೀನ್ಯತೆ ಮತ್ತು ಉತ್ಕೃಷ್ಟತೆಗೆ ಬದ್ಧರಾಗಿರುತ್ತೇವೆ. ಪ್ರತಿ ಕೊಡುಗೆಯು ನಮ್ಮ ಗ್ರಾಹಕರ ಸೌಂದರ್ಯದ ಅನುಭವವನ್ನು ಹೆಚ್ಚಿಸುತ್ತದೆ ಎಂದು ಖಚಿತಪಡಿಸಿಕೊಳ್ಳುತ್ತೇವೆ ಎಂದಿದ್ದಾರೆ.

ಅಕೈಂಡ್ ಸಹ-ಸಂಸ್ಥಾಪಕಿ ಮೀರಾ ಕಪೂರ್ ಮಾತನಾಡಿ, ಬಹಳ ಹಿಂದೆಯೇನೂ ಅಲ್ಲ, ನನ್ನದೇ ಚರ್ಮ ರಕ್ಷಣೆಯ ಬಗ್ಗೆ ಪ್ರಶ್ನೆ ಕೇಳಿಕೊಳ್ಳುತ್ತಾ ಚರ್ಮದ ರಕ್ಷಣೆಯ ಈ ಪ್ರಯಾಣವು ನಿಜವಾಗಿಯೂ ಪ್ರಾರಂಭವಾಯಿತು. ಅಕೈಂಡ್ ಶ್ರೇಣಿಯು ಎಚ್ಚರಿಕೆಯಿಂದ, ಪ್ರಯೋಗಗಳಿಂದ ಮತ್ತು ತಪ್ಪುಗಳಿಂದ ಹಾಗೂ ನಿರ್ದಿಷ್ಟ ಸಮಸ್ಯೆಗಳಿಗೆ ಉದ್ದೇಶಿತ ಪರಿಹಾರವಾಗಿ ಕಾರ್ಯನಿರ್ವಹಿಸುವ ಉನ್ನತ-ಪರಿಣಾಮಕಾರಿ ಪದಾರ್ಥಗಳ ಬಗ್ಗೆ ವ್ಯಾಪಕವಾದ ಸಂಶೋಧನೆಯೊಂದಿಗೆ ನಿಖರವಾಗಿ ರೂಪಿಸಲಾಗಿದೆ ಮತ್ತು ಕ್ಯುರೇಟೆಡ್‌ ಬ್ರ್ಯಾಂಡ್‌ಗಳ ಪಾಲಿ ಅಂತಿಮ ತಾಣದಂತೆ ಇರುವ ಟಿರಾ ಮೂಲಕ ನಾವು ತಲುಪುವುದಕ್ಕಿಂತ ಉತ್ತಮವಾದ ಮಾರ್ಗ ಯಾವುದಿದೆ. ಇದರಿಂದ ನಮ್ಮ ದೃಷ್ಟಿ ಹೆಚ್ಚು ವ್ಯಾಪಿಸುತ್ತದೆ ಹಾಗೂ ಉದ್ದೇಶವನ್ನು ಜೀವಂತ ಇರಿಸುತ್ತದೆ. ಅಕೈಂಡ್ ಜತೆಗೆ, ಹೇಗೆ ನನಗೆ ಅತ್ಯುತ್ತಮ ಚರ್ಮ ರಕ್ಷಣೆಯ ಮಾರ್ಗ ದೊರೆಯಿತೋ ಅದು ಎಲ್ಲರ ಜತೆಗೂ ಈ ಚರ್ಮರಕ್ಷಣೆ ಸಂತೋಷವನ್ನು ಹಂಚಿಕೊಳ್ಳಲು ನಾನು ಬಯಸುತ್ತೇನೆ ಎಂದು ತಿಳಿಸಿದ್ದಾರೆ.

ಟಿರಾ ಟೂಲ್ಸ್ (Tira Tools) ಯಶಸ್ವಿ ಬಿಡುಗಡೆಯ ನಂತರ, ಖಾಸಗಿ ಲೇಬಲ್ ಅಡಿಯಲ್ಲಿ ಪ್ರೀಮಿಯಂ ಕ್ಯುರೇಟೆಡ್ ಸೌಂದರ್ಯ ಪರಿಕರಗಳು ಮತ್ತು ನೈಲ್ಸ್ ಅವರ್ ವೇ, ರೋಮಾಂಚಕ ಉಗುರು ಬಣ್ಣಗಳು ಮತ್ತು ಕಿಟ್‌ಗಳ ವಿಶೇಷ ಶ್ರೇಣಿಯ ಮೂಲಕವಾಗಿ ರಿಲಯನ್ಸ್ ರಿಟೇಲ್ ಲಿಮಿಟೆಡ್ (RRL) ತನ್ನ ನವೀನ ಕೊಡುಗೆಗಳನ್ನು ವಿಸ್ತರಿಸುವುದನ್ನು ಮುಂದುವರಿಸಿದೆ.

ಇದನ್ನೂ ಓದಿ: SSLC Examination 2 : 700ಕ್ಕೂ ಹೆಚ್ಚು ಕೇಂದ್ರಗಳಲ್ಲಿ ನಾಳೆಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 ಶುರು

ಅದರ ಮೊದಲ ಚರ್ಮರಕ್ಷಣೆ ಬ್ರಾಂಡ್‌ನ ಸೇರ್ಪಡೆ, ಅಕೈಂಡ್ ಸೌಂದರ್ಯ ಮತ್ತು ವೈಯಕ್ತಿಕ ಆರೈಕೆ ವಿಭಾಗಗಳಾದ್ಯಂತ ಗ್ರಾಹಕರಿಗೆ ಉತ್ತಮ-ಗುಣಮಟ್ಟದ, ವೈವಿಧ್ಯಮಯ ಮತ್ತು ಟ್ರೆಂಡ್-ಸೆಟ್ಟಿಂಗ್ ಉತ್ಪನ್ನಗಳನ್ನು ಒದಗಿಸುವ ಟಿರಾ ಬದ್ಧತೆಯನ್ನು ಒತ್ತಿ‌ ಹೇಳುತ್ತದೆ.

Continue Reading

ಫ್ಯಾಷನ್

Celebrity Fashion: ಬ್ಲೇಜರ್‌ನಲ್ಲಿ ನಟ ಸುದೀಪ್‌ ಪುತ್ರಿ ಸಾನ್ವಿ ಕ್ಲಾಸಿ ಲುಕ್‌!

ನಟ ಸುದೀಪ್‌ ಅವರ ಪುತ್ರಿ ಹಾಗೂ ಗಾಯಕಿ ಸಾನ್ವಿ ಸುದೀಪ್‌ ಅವರ ಇತ್ತೀಚಿನ ಬ್ಲೇಜರ್‌ ಲುಕ್‌ ಕ್ಲಾಸಿಯಾಗಿದೆ. ಫಾರ್ಮಲ್‌ ಲುಕ್‌ಗೆ (Celebrity Fashion) ಸ್ಯಾಟೀನ್‌ ಜಾರ್ಗರ್ಸ್ ಪ್ಯಾಂಟ್‌ ಮಿಕ್ಸ್ ಮ್ಯಾಚ್‌ ಮಾಡಿರುವುದು ಅವರಿಗೆ ಕ್ಲಾಸಿ ಇಮೇಜ್‌ ನೀಡಿದೆ. ಅವರ ಈ ಲುಕ್‌ ಬಗ್ಗೆ ಫ್ಯಾಷನ್‌ ವಿಮರ್ಶಕರು ಏನು ಹೇಳಿದ್ದಾರೆ? ಇಲ್ಲಿದೆ ಡಿಟೇಲ್ಸ್.

VISTARANEWS.COM


on

Celebrity Fashion
ಚಿತ್ರಗಳು: ಸಾನ್ವಿ ಸುದೀಪ್‌, ಸಿಂಗರ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸಾನ್ವಿ ಸುದೀಪ್‌ರ ಕ್ಲಾಸಿ ಲುಕ್‌ ಫ್ಯಾಷನ್‌ (Celebrity Fashion) ಪ್ರಿಯರನ್ನು ಸೆಳೆದಿದೆ. ಹೌದು, ಸ್ಯಾಂಡಲ್‌ವುಡ್ ನಟ ಸುದೀಪ್‌ ಅವರ ಪುತ್ರಿ ಹಾಗೂ ಸಿಂಗರ್‌ ಸಾನ್ವಿ ಸುದೀಪ್‌ ಅವರ ಈ ಲುಕ್‌ ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ಅವರ ಅಭಿಮಾನಿಗಳನ್ನು ಆಕರ್ಷಿಸಿದೆ. “ಸಾನ್ವಿ ಸಿಂಪಲ್‌ ಹುಡುಗಿ. ಆಗಾಗ ಅವರು ತಮ್ಮದೇ ಆದ ಫ್ಯಾಷನ್‌ ಹಾಗೂ ಸ್ಟೈಲ್‌ ಸ್ಟೇಟ್‌ಮೆಂಟ್‌ಗಳನ್ನು ಬದಲಿಸುತ್ತಿರುತ್ತಾರೆ. ಹೈ ಫ್ಯಾಷನ್‌ನಲ್ಲೂ ಸಿಂಪಲ್‌ ಸ್ಟೈಲ್‌ ಸ್ಟೇಟ್‌ಮೆಂಟ್‌ಗಳನ್ನು ಅಳವಡಿಸಿಕೊಳ್ಳುತ್ತಿರುತ್ತಾರೆ. ಇದರೊಂದಿಗೆ ಅವರ ಪ್ರೊಫೆಷನ್‌ಗೆ ಮ್ಯಾಚ್‌ ಆಗುವಂತಹ ಡ್ರೆಸ್‌ಕೋಡ್‌ನಲ್ಲೂ ಕಾಣಿಸುತ್ತಿರುತ್ತಾರೆ. ಈ ಜನರೇಷನ್‌ನ ಆಯ್ಕೆ ಕಂಪ್ಲೀಟ್‌ ಡಿಫರೆಂಟ್‌ ಎಂಬುದು ಅವರ ನಾನಾ ಫ್ಯಾಷನ್‌ ಡ್ರೆಸ್‌ಕೋಡ್‌ಗಳಲ್ಲಿ ಕಾಣಬಹುದು” ಎನ್ನುವ ಫ್ಯಾಷನ್‌ ವಿಮರ್ಶಕರಾದ ಜಾನ್‌, ಸಾನ್ವಿಯವರ ಬ್ಲೇಜರ್‌ ಲುಕ್‌ಗೆ ಫುಲ್‌ ಮಾರ್ಕ್ಸ್ ನೀಡಿದ್ದಾರೆ.

Celebrity Fashion

ಸಾನ್ವಿ ಸುದೀಪ್‌ ವಾಯ್ಸ್

ಅಂದಹಾಗೆ, ಸಾನ್ವಿಯವರು ಸಿಂಗರ್‌ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಚೆನ್ನಾಗಿ ಹಾಡುತ್ತಾರೆ. ಇದಕ್ಕೆ ತಂದೆಯ ಸಪೋರ್ಟ್ ಕೂಡ ಇದೆ. ತಾನು ಕೂಡ ಇಂಡಿಪೆಂಡೆಂಟ್‌ ಆರ್ಟಿಸ್ಟ್ ಆಗಿ ಬೆಳೆಯಬೇಕೆಂಬ ಸಾನ್ವಿಯವರ ಉತ್ಸಾಹ ಆಗಾಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಅವರ ಹಾಡು ಕೇಳಿದವರಿಗೆ ತಿಳಿದುಬರುತ್ತದೆ.

Celebrity Fashion

ಮಿಕ್ಸ್ ಮ್ಯಾಚ್‌ ಬ್ಲೇಜರ್‌ ಲುಕ್‌

ನೀವು ಗಮನಿಸಿರಬಹುದು, ಈ ಜನರೇಷನ್‌ನವರ ಲುಕ್‌ ಸದಾ ಕಂಪ್ಲೀಟ್‌ ಡಿಫರೆಂಟ್‌ ಚಾಯ್ಸ್ ಹೊಂದಿರುತ್ತದೆ. ಇದೇ ರೀತಿ, ಸಾನ್ವಿಯವರ ಬ್ಲೇಜರ್‌ ಲುಕ್‌ನಲ್ಲೂ ಕಾಣಬಹುದು. ಸ್ಟ್ರೇಟ್‌ಕಟ್‌ ಅಥವಾ ಫಾರ್ಮಲ್ ಪ್ಯಾಂಟ್‌ ಬ್ಲೇಜರ್‌ಗೆ ಧರಿಸುವ ಬದಲು ಅವರು ಸ್ಯಾಟಿನ್‌ನ ಜಾಗರ್ಸ್ ಶೈಲಿಯ ಬ್ಲಾಕ್‌ ಶೇಡ್‌ನ ಪ್ಯಾಂಟ್‌ ಬ್ಲೇಜರ್‌ನೊಂದಿಗೆ ಮ್ಯಾಚ್‌ ಮಾಡಿದ್ದಾರೆ. ಬ್ಲ್ಯಾಕ್‌ ಮಾನೋಕ್ರೋಮ್‌ ಶೇಡ್‌ಗೆ ಮಿಡ್‌-ರೈಸ್‌-ಫ್ಲಾಟ್‌ ಫ್ರಂಟ್‌ ಲುಕ್‌ ನೀಡುವ ಬೂದು ಬಣ್ಣದ ಚೆಕ್ಸ್ ಪ್ಲೈಡ್ ಬ್ಲೇಜರ್‌ ಧರಿಸಿದ್ದಾರೆ. ಬ್ಲೇಜರ್‌ನ ಲುಕ್‌ ಕಂಪ್ಲೀಟ್‌ ಕ್ಲಾಸಿಯಾಗಿದೆ. ತಕ್ಷಣಕ್ಕೆ ರೆಟ್ರೋ ಜಾಕೆಟ್‌ನಂತಹ ಲುಕ್‌ ಕೂಡ ನೀಡುತ್ತದೆ. ಆದರೆ, ಇದು ಬ್ಲೇಜರ್‌ ಆಗಿರುವುದರಿಂದ ಮಿಕ್ಸ್ ಮ್ಯಾಚ್‌ ಮಾಡಿದರೂ ಕೂಡ ಕ್ಲಾಸಿ ಲುಕ್‌ ನೀಡಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

Celebrity Fashion

ಸಾನ್ವಿಯವರ ಮೂಗುತಿ

ಇನ್ನು, ಮೂಗಿಗೆ ಧರಿಸಿರುವ ಡಬ್ಬಲ್‌ ಹೂಪ್‌ ವಿನ್ಯಾಸದಂತಿರುವ ಮೂಗುತಿ ಸಾನ್ವಿಯವರಿಗೆ ಡಿಫರೆಂಟ್‌ ಇಮೇಜ್‌ ನೀಡಿದೆ.

ಇದನ್ನೂ ಓದಿ: Fish Spa Awareness: ಫಿಶ್‌ ಸ್ಪಾಗೂ ಮುನ್ನ ನೂರು ಬಾರಿ ಯೋಚಿಸಿ!

ಟ್ಯಾಟೂ ಪ್ರೇಮ

ಇತ್ತೀಚೆಗಷ್ಟೇ ಕಿವಿಯ ಹಿಂದೆ ಪುಟ್ಟ ಟ್ಯಾಟೂಗಳನ್ನು ಹಾಕಿಸಿಕೊಂಡಿರುವ ಸಾನ್ವಿಯವರ ಫ್ಯಾಷನ್‌ ಹಾಗೂ ಸ್ಟೈಲ್‌ ಸ್ಟೇಟ್ಮೆಂಟ್‌ಗಳು ಕೊಂಚ ವಿಭಿನ್ನವಾಗಿದ್ದರೂ, ನೋಡಲು ಆಕರ್ಷಕವಾಗಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

Continue Reading
Advertisement
T20 World Cup 2024
ಕ್ರಿಕೆಟ್39 mins ago

T20 World Cup 2024: ಟಿ-20 ವಿಶ್ವಕಪ್‌ನಿಂದ ಪಾಕಿಸ್ತಾನ ಔಟ್;‌ ಸೂಪರ್‌ 8ಕ್ಕೆ ಲಗ್ಗೆ ಇಟ್ಟ ಅಮೆರಿಕ

Toyota Technical Education Programme started at Bareilly Government Polytechnic by TKM
ದೇಶ1 hour ago

Toyota Kirloskar Motor: ಟೊಯೊಟಾ ತಾಂತ್ರಿಕ ಶಿಕ್ಷಣ ಕಾರ್ಯಕ್ರಮದಡಿ ವಿದ್ಯಾರ್ಥಿ ವೇತನ

Truck Driver
ದೇಶ2 hours ago

ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರಗೈದು ಕೊಂದ ಟ್ರಕ್‌ ಡ್ರೈವರ್;‌ ಭೀಕರ ವಿಡಿಯೊ ಇಲ್ಲಿದೆ

Do not split BBMP says Karave State President TA Narayana Gowda
ಕರ್ನಾಟಕ3 hours ago

BBMP: ಬಿಬಿಎಂಪಿ ವಿಭಜನೆ ಬೇಡ; ಇದು ಕನ್ನಡಿಗರಿಗೆ ಮಾರಕ: ನಾರಾಯಣ ಗೌಡ

ಕರ್ನಾಟಕ3 hours ago

Congress Guarantee: ಗ್ಯಾರಂಟಿ ಯೋಜನೆ ನಿಲ್ಲಲ್ಲ ನಿಲ್ಲಲ್ಲ ನಿಲ್ಲಲ್ಲ ಎಂದ ಸಿದ್ದರಾಮಯ್ಯ

Arundhati Roy
ದೇಶ3 hours ago

Arundhati Roy: ‘ಕಾಶ್ಮೀರ ಭಾರತದ್ದಲ್ಲ’ ಎಂದಿದ್ದ ಅರುಂಧತಿ ರಾಯ್‌ ವಿರುದ್ಧ ಉಗ್ರರ ನಿಗ್ರಹ ಕಾಯ್ದೆ ಅಡಿ ಕ್ರಮ!

Sunny Leone
ಸಿನಿಮಾ4 hours ago

Sunny Leone: ಸನ್ನಿ ಲಿಯೋನ್ ಬೇಕೇಬೇಕೆಂದು ವಿದ್ಯಾರ್ಥಿಗಳ ಪಟ್ಟು; ಕೇರಳ ವಿವಿಗೆ ಇಕ್ಕಟ್ಟು!

ಕರ್ನಾಟಕ4 hours ago

Course Fee Hike: ತಾಂತ್ರಿಕ ಶಿಕ್ಷಣ ಕೋರ್ಸ್‌ಗಳ ಪ್ರವೇಶ ಶುಲ್ಕ ಶೇ.10ರಷ್ಟು ಹೆಚ್ಚಳ

engineering students have invented a unique fire extinguisher drone at bengaluru
ಕರ್ನಾಟಕ4 hours ago

Bengaluru News: ಬೆಂಕಿ ನಂದಿಸುವ ‘ವಿಶಿಷ್ಟ ಡ್ರೋನ್‌’; ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ಆವಿಷ್ಕಾರ!

RBI Penalty
ದೇಶ4 hours ago

RBI Penalty: ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾಗೆ 1.45 ಕೋಟಿ ರೂ. ದಂಡ ವಿಧಿಸಿದ ಆರ್‌ಬಿಐ; ಕಾರಣ ಏನು?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ6 hours ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು7 hours ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು8 hours ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ9 hours ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

karnataka weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ3 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ3 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ3 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ4 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

ಟ್ರೆಂಡಿಂಗ್‌