ಸಂದರ್ಶನ: ಶೀಲಾ ಸಿ. ಶೆಟ್ಟಿ
ಒಂದಿಷ್ಟು ವರ್ಷಗಳಿಂದ ಫ್ಯಾಷನ್ ಕ್ಷೇತ್ರದಲ್ಲಿ ಬ್ಯುಸಿಯಾಗಿರುವ ಮಾಡೆಲ್ ಸನ್ನಿಧಿ (Model Monsoon Fashion) ಇದೀಗ ಸ್ಯಾಂಡಲ್‌ವುಡ್ ಸಿನಿಮಾದಲ್ಲಿ ನಟಿಸುವುದರ ಮೂಲಕ ಸಿನಿಮಾ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ಮಾಡೆಲಿಂಗ್ ಪ್ರಪಂಚಕ್ಕೂ ಸಿನಿಮಾದಲ್ಲಿ ನಟಿಸುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ ಎನ್ನುವ ಸನ್ನಿಧಿ, ಮಿಸ್ ಸುಪ್ರಾ ಸೌತ್ 2020 ಪೇಜೆಂಟ್‌ನ ಟೈಟಲ್ ವಿಜೇತೆ ಕೂಡ. ಸಾಕಷ್ಟು ಫ್ಯಾಷನ್ ವೀಕ್‌ಗಳಲ್ಲೂ ರ‍್ಯಾಂಪ್ ವಾಕ್ ಮಾಡಿರುವ ಅವರು, ವಿಸ್ತಾರ ನ್ಯೂಸ್‌ನೊಂದಿಗೆ ಮಾತನಾಡಿದ್ದಾರೆ. ತಮ್ಮ ಫ್ಯಾಷನ್ ಹಾಗೂ ಮಾನ್ಸೂನ್ ಸ್ಟೈಲ್ ಟಿಪ್ಸ್ ಕೂಡ ಹಂಚಿಕೊಂಡಿದ್ದಾರೆ.
ವಿಸ್ತಾರ ನ್ಯೂಸ್ :ನಿಮ್ಮ ಮಾನ್ಸೂನ್ ಫ್ಯಾಷನ್ ಮಂತ್ರ ಏನು?:
ಸನ್ನಿಧಿ: ಮಾನ್ಸೂನ್‌ನಲ್ಲಿ ಕಾಟನ್ ಟೀ ಶರ್ಟ್ ಮೇಲೆ ಜಾಕೆಟ್ ಧರಿಸಿ ಲೇಯರಿಂಗ್ ಲುಕ್‌ನಲ್ಲಿ ಕಾಣಿಸಿಕೊಳ್ಳುವುದೆಂದರೇ ನನಗಿಷ್ಟ. ನನ್ನ ಪ್ರಕಾರ, ಹುಡುಗರಂತೆ , ಹುಡುಗಿಯರು ಕೂಡ ಜಾಕೆಟ್ಸ್‌ನಲ್ಲಿ ಆಕರ್ಷಕವಾಗಿ ಕಾಣಿಸಬಲ್ಲರು. ಇನ್ನು, ಮಿಕ್ಸ್ ಮ್ಯಾಚ್ ಕಾನ್ಸೆಪ್ಟ್ ಕೂಡ ಈ ಸೀಸನ್ ಫ್ಯಾಷನ್‌ನಲ್ಲಿದೆ.
ವಿಸ್ತಾರ ನ್ಯೂಸ್ :ಮಾಡೆಲ್ ಆದ ನೀವು ಟ್ರೆಂಡ್ ಫಾಲೋವರ್ರಾ ಅಥವಾ ಟ್ರೆಂಡ್ ಸೆಟ್ಟರ್ರಾ?
ಸನ್ನಿಧಿ: ಮಾಡೆಲ್ ಆದರೂ ನಾನು ಕೂಡ ಟ್ರೆಂಡ್ ಫಾಲೋ ಮಾಡುತ್ತೇನೆ. ಅಲ್ಲದೇ, ಕೆಲವೊಮ್ಮೆ ನನ್ನದೇ ಆದ ಫ್ಯಾಷನ್‌ವೇರ್‌ಗಳನ್ನು ಧರಿಸುವುದರ ಮೂಲಕ ಹೋದೆಡೆ ಟ್ರೆಂಡ್ ಸೆಟ್ ಮಾಡಲು ಪ್ರಯತ್ನಿಸುತ್ತೇನೆ.
ವಿಸ್ತಾರ ನ್ಯೂಸ್: ಬೆಂಗಳೂರು ಫ್ಯಾಷನ್ ಪ್ರಪಂಚ ನಿಮಗೇನು ನೀಡಿದೆ?
ಸನ್ನಿಧಿ: ಮುಂಬೈ ಹಾಗೂ ದಿಲ್ಲಿ ಹೊರತುಪಡಿಸಿದಲ್ಲಿ ಬೆಂಗಳೂರು ಫ್ಯಾಷನ್ ಲೋಕ ಫಾಸ್ಟಾಗಿ ಅಭಿವೃದ್ಧಿ ಹೊಂದುತ್ತಿದೆ. ಪರಿಣಾಮ, ನಮ್ಮಂತಹ ಮಾಡೆಲ್‌ಗಳಿಗೆ ಸಾಕಷ್ಟು ಅವಕಾಶ ನೀಡಿದೆ. ಭವಿಷ್ಯ ರೂಪಿಸಿದೆ.
ವಿಸ್ತಾರ ನ್ಯೂಸ್ : ಮಾನ್ಸೂನ್‌ನಲ್ಲಿ ಹುಡುಗಿಯರು ಆಕರ್ಷಕವಾಗಿ ಕಾಣಿಸಲು ಏನು ಮಾಡಬೇಕು ?
ಸನ್ನಿಧಿ: ಆದಷ್ಟೂ ಲೇಯರಿಂಗ್ ಔಟ್‌ಫಿಟ್‌ಗಳೊಂದಿಗೆ ಬ್ರೈಟ್ ಆಕ್ಸೆಸರೀಸ್ ಧರಿಸಬೇಕು. ಧರಿಸುವ ಲೇಯರ್ ಔಟ್‌ಫಿಟ್‌ಗಳು ಕಲರ್‌ಫುಲ್ ಆಗಿರಬೇಕು.
ಇದನ್ನೂ ಓದಿ: Saree Fashion: ಕಂಟೆಂಪರರಿ ಪ್ರಿಂಟೆಡ್ ವಿನ್ಯಾಸದಲ್ಲೂ ಬಂತು ಆರ್ಗನ್ಜಾ ಸೀರೆ!
ವಿಸ್ತಾರ ನ್ಯೂಸ್: ಮಾನ್ಸೂನ್ ಫ್ಯಾಷನ್‌ಗೆ ಯುವತಿಯರಿಗೆ ನೀವು ನೀಡುವ ಟಿಪ್ಸ್ ?
- ಸಸ್ಟೈನಬಲ್ ಫ್ಯಾಷನ್‌ವೇರ್‌ಗಳನ್ನು ಚೂಸ್ ಮಾಡಿ.
- ನಿಮ್ಮ ಬಾಡಿ ಮಾಸ್ ಇಂಡೆಕ್ಸ್‌ಗೆ ಸೂಟ್ ಆಗುವಂತಹ ಡ್ರೆಸ್ ಧರಿಸಿ.
- ಉತ್ತಮ ಫ್ಯಾಬ್ರಿಕ್ ಡಿಸೈನರ್‌ವೇರ್ಸ್ ಆಯ್ಕೆ ಮಾಡಿ.
- ಹೊರ ಹೋಗುವಾಗ ರೈನ್‌ಕೋಟ್ಸ್ ಹಾಗೂ ಅಂಬ್ರೆಲ್ಲಾ ಜೊತೆಗಿರಲಿ.
- ಹೈಲೈಟಾಗುವ ಕಲರ್ಸ್ ಔಟ್‌ಫಿಟ್ ಧರಿಸಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)