ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಾನ್ಸೂನ್ ಫ್ಯಾಷನ್ ಜ್ಯುವೆಲರಿಗಳಲ್ಲಿ (Monsoon Fashion Accessories) ಇದೀಗ ಮೋಡಗಳ ಅಬ್ಬರ ಹೆಚ್ಚಾಗಿದೆ. ಇದೇನಿದು? ಮೋಡಗಳಿಗೂ ಫ್ಯಾಷನ್ ಜ್ಯುವೆಲರಿಗಳಿಗೂ ಏನು ಸಂಬಂಧ ಎಂದು ಕೊಂಡಿರಾ! ಮೋಡಗಳ ಥೀಮ್ ಇರಿಸಿಕೊಂಡಂತಹ ಫ್ಯಾಷನ್ ಜ್ಯುವೆಲರಿಗಳು, ಫ್ಯಾಷನ್ ಜ್ಯುವೆಲರಿ ಲೋಕಕ್ಕೆ ಲ್ಗೆಗ ಇಟ್ಟಿದ್ದು, ಯುವತಿಯರನ್ನು ಸೆಳೆಯತೊಡಗಿವೆ.
ಯಾವ್ಯಾವ ಡಿಸೈನ್‌ನವು ಲಭ್ಯ ?
ಊಹೆಗೂ ಮೀರಿದ ವಿನ್ಯಾಸದ ಜ್ಯುವೆಲರಿಗಳು ಲಭ್ಯ. ಮೋಡದ ಚಿತ್ತಾರವಿರುವ ಹ್ಯಾಂಗಿಂಗ್ಸ್, ಕಿವಿಯೊಲೆ, ಸ್ಟಡ್ಸ್, ಉಂಗುರ, ಬ್ರೇಸ್‌ಲೆಟ್, ಫಿಂಗರ್‌ರಿಂಗ್‌ಗಳು ಜ್ಯುವೆಲರಿ ಡಿಸೈನರ್‌ಗಳ ಕೈಗಳಲ್ಲಿ ಬಗೆಬಗೆಯ ರೂಪ ಪಡೆದು ಎಂಟ್ರಿ ನೀಡಿವೆ. ನೋಡಲು ಡಿಫರೆಂಟ್ ಲುಕ್ ನೀಡುವ ಈ ಫ್ಯಾಷನ್ ಜ್ಯುವೆಲರಿಗಳು ಜೆನ್ ಜಿ ಹುಡುಗಿಯರನ್ನು ಹೆಚ್ಚು ಆಕರ್ಷಿಸಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಅತ್ಯಾಕರ್ಷಕ ಕ್ಲೌಡ್ಸ್ ಕಿವಿಯೋಲೆ
ಅಗಲವಾದ ಮೋಡದ ಸ್ಟಡ್ಸ್, ಮೋಡದಿಂದ ನೀರಿನ ಡ್ರಾಪ್ ಬೀಳುತ್ತಿರುವಂತಹ ಕ್ರಿಸ್ಟಲ್ ಹ್ಯಾಂಗಿಂಗ್ಸ್ , ಲೈಟ್‌ವೇಟ್ ಮೆಟಿರೀಯಲ್‌ನಲ್ಲಿ ಮಾಡಿದ ಇಯರಿಂಗ್ಸ್ ಹೆಚ್ಚು ಪಾಪುಲರ್ ಆಗಿವೆ. ಇನ್ನು, ಪರ್ಲ್, ಮೆಟಲ್, ಸ್ಟೋನ್, ಕಾಟನ್, ಟೆರಾಕೋಟ್, ವುಡನ್, ಸಿಲ್ವರ್, ಗೋಲ್ಡ್ ಕವರ್ಡ್ ಪ್ಯಾಟರ್ನ್‌ನ ಬಿಗ್ ಹ್ಯಾಂಗಿಂಗ್ಸ್ ಕೂಡ ಚಾಲ್ತಿಯಲ್ಲಿದ್ದು, ಫಂಕಿ ಲುಕ್‌ಗೆ ಸಾಥ್ ನೀಡುತ್ತಿವೆ. ಮೋಡದ ಜತೆ ಮಳೆಯ ಹನಿ, ಮೋಡದ ನಡುವೆ ಹಾರುತ್ತಿರುವ ಏರೋಪ್ಲೇನ್, ಮೋಡದ ಪಕ್ಕದಲ್ಲಿ ಕಾಮನಬಿಲ್ಲು ಇವುಗಳ ಚಿತ್ತಾರವನ್ನೊಳಗೊಂಡ ಫೇರಿಟೇಲ್ ಪೆಂಡೆಂಟ್‌ಗಳು ನೆಕ್‌ಚೈನ್ ಅಲಂಕರಿಸುತ್ತಿವೆ.
ಮಲ್ಟಿ ಡಿಸೈನ್ ಕ್ಲೌಡ್ಸ್ ಫಿಂಗರ್ ರಿಂಗ್
ಒಂದು, ಎರಡು ಹಾಗೂ ಮಲ್ಟಿ ಮೋಡದ ವಿನ್ಯಾಸ ವಿರುವ ಉಂಗುರಗಳು ಕೂಡ ಫಂಕಿ ಜ್ಯುವೆಲರಿ ಕೆಟಗರಿಯಲ್ಲಿ ಬಿಡುಗಡೆಯಾಗಿವೆ. ಅದರಲ್ಲೂ ಬ್ಲ್ಯೂ ಹಾಗೂ ವೈಟ್ ಕ್ರಿಸ್ಟಲ್ ಸ್ಟೋನ್‌ಗಳಿಂದ ಮಾಡಿರುವ ಮೋಡದ ಉಂಗುರುಗಳಿಗೆ ಹೆಚ್ಚಿನ ಬೇಡಿಕೆ ಇದೆ ಎನ್ನುತ್ತಾರೆ ಮಾರಾಟಗಾರರಾದ ಲಕ್ಷ್ಮಣ್.
ಆನ್‌ಲೈನ್‌ನಲ್ಲಿ ಲಭ್ಯ
ಆನ್‌ಲೈನ್‌ನಲ್ಲಿ ಬಗೆಬಗೆಯ ಮೋಡದ ಫ್ಯಾಷನ್ ಜ್ಯುವೆಲರಿಗಳು ಲಭ್ಯ. ಲೆಕ್ಕವಿಲ್ಲದಷ್ಟು ವಿನ್ಯಾಸವನ್ನು ಇಲ್ಲಿ ಕಾಣಬಹುದು.
- ಕಮರ್ಷಿಯಲ್ ಸ್ಟ್ರೀಟ್ ಬಳಿ ಕ್ಲೌಡ್ಸ್ ಫ್ಯಾಷನ್ ಜ್ಯುವೆಲರಿಗಳು ದೊರೆಯುತ್ತವೆ.
- ಕ್ಯಾಶುವಲ್ ಉಡುಪಿಗೆ ಸಖತ್ತಾಗಿ ಕಾಣುತ್ತವೆ.
- ಲೈಟ್ವೈಟ್ನ ಕ್ಲೌಡ್ಸ್ ಆಕ್ಸೆಸರೀಸ್ ಆಯ್ಕೆ ಮಾಡುವುದು ಉತ್ತಮ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Monsoon Fashion 2023: ಫ್ಯಾಷನ್ ಲೋಕಕ್ಕೆ ಲಗ್ಗೆ ಇಟ್ಟ ಮಾನ್ಸೂನ್ ಸೀಸನ್ ವೈಬ್ರೆಂಟ್ ಔಟ್‌ಫಿಟ್ಸ್!