ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಾನ್ಸೂನ್ ಫ್ಯಾಷನ್ (Monsoon Fashion 2023) ಲಗ್ಗೆ ಇಟ್ಟಿದೆ. ಹೌದು, ಸೀಸನ್‌ಗೆ ತಕ್ಕಂತೆ ಈಗಾಗಲೇ ಲೆಕ್ಕವಿಲ್ಲದಷ್ಟು ಬಗೆಯ ಡಿಸೈನರ್‌ವೇರ್‌ಗಳು ಹಾಗೂ ಆಕ್ಸೆಸರೀಸ್‌ಗಳು ಮಾರುಕಟ್ಟೆಗೆ ಎಂಟ್ರಿ ನೀಡಿದ್ದು, ಎಲ್ಲೆಡೆ, ಮಳೆಗಾಲದ ಫ್ಯಾಷನ್‌ನ ಬಿಸಿ ಹವಾ ಬೀಸಿದೆ. ಅಂದಹಾಗೆ, ಈ ಬಾರಿ ಸಮ್ಮರ್‌ನ ಫ್ಯಾಷನ್‌ವೇರ್‌ಗಳು ಯಾವ ಮಟ್ಟಿಗೆ ಜಾದೂ ಬೀಸಿದ್ದವೆಂದರೇ, ಇನ್ನೂ ಕೂಡ ಫ್ಯಾಷನ್ ಪ್ರಿಯರು ಆ ಗುಂಗಿನಿಂದ ಹೊರ ಬಂದಿಲ್ಲ! ಆಗಲೇ ಇಂಡಿಯನ್ ಮಾನ್ಸೂನ್ ಟ್ರೆಂಡಿ ಫ್ಯಾಷನ್‌ವೇರ್ಸ್ ಡಿಕ್ಲೇರ್ ಆಗಿದ್ದು, ಫ್ಯಾಷನ್‌ಲೋಕ ಫ್ಯಾಷನ್ ಪ್ರಿಯರನ್ನು ಸೆಳೆಯಲು ಸಜ್ಜಾಗಿದೆ.
ವರ್ಣಮಯವಾದ ಮಾನ್ಸೂನ್ ಫ್ಯಾಷನ್
ಇಂಡಿಗೋ, ವಾಯ್ಲೆಟ್, ಕೇಸರಿ, ವೈನ್ ರೆಡ್, ಬ್ಲಡ್ ರೆಡ್, ಕೊಬಾಲ್ಟ್, ಬ್ರಿಲಿಯಂಟ್ ಬ್ಲ್ಯೂ, ಸ್ಪೆಕ್ಟ್ರಮ್ ಶೇಡ್ಸ್, ರೆಡಿಯಂಟ್, ನಿಯಾನ್‌ನ ಆಕರ್ಷಕ ಹಸಿರು, ಲಿವಿಂಗ್ ಕೋರಲ್, ಪರ್ಪಲ್ ಆರ್ಕಿಡ್, ಚಾಕೊಲೇಟ್ ಟ್ರಫಲ್, ಆಯಿಸ್ಟರ್ ಗ್ರೇ, ಡೀಪ್ ಬ್ಲಾಕ್‌ನ ಡಾರ್ಕ್ ಲೈಟ್ ಮಿಕ್ಸ್ ಶೇಡ್‌ಗಳು ಸೇರಿದಂತೆ ನಾನಾ ಶೇಡ್‌ಗಳು ಮಾನ್ಸೂನ್‌ನ ಮೂಡ್ ಕಲರ್‌ಫುಲ್ ಆಗಿಸಲು ಔಟ್‌ಫಿಟ್‌ಗಳ ಮುಖಾಂತರ ಎಂಟ್ರಿ ನೀಡಿವೆ.
ಯೂನಿಸೆಕ್ಸ್ ಮಾನ್ಸೂನ್ ಫ್ಯಾಷನ್‌ವೇರ್ಸ್
ಈ ಸೀಸನ್‌ನಲ್ಲಿ ವೆಸ್ಟರ್ನ್ ಔಟ್‌ಫಿಟ್ ಕೆಟಗರಿಯಲ್ಲಿ ಜರ್ಸಿ- ರಿವರ್ಸಿಬಲ್ ರೈನ್ ಜಾಕೆಟ್ಸ್, ರೈನ್ ಸೂಟ್ಸ್, ವಾಟರ್‌ಪ್ರೂಫ್ ಗ್ಲೌಸ್, ಕ್ಯಾಪ್, ವ್ರಾಪ್ ಕೋಟ್ಸ್ ಕಾರ್ಡಿಗಾನ್ಸ್, ಲಾಂಗ್ ಕೋಟ್, ಕಲರ್‌ಫುಲ್ ಟ್ರಾನ್ಸ್‌ಪರೆಂಟ್ ರೈನ್ ಕೋಟ್ಸ್, ವಾಟರ್ ರೆಸಿಸ್ಟಂಟ್ಸ್ ಶಾಟ್ರ್ಸ್, ಬೂಟ್ಸ್, ಫ್ಲಿಪ್-ಫ್ಲಾಪ್ಸ್ ಹೊಸ ವಿನ್ಯಾಸದಲ್ಲಿ ಯೂನಿಸೆಕ್ಸ್ ಡಿಸೈನ್‌ನಲ್ಲಿ ಬಂದಿವೆ.
ಯುವತಿಯರ ಮಾನ್ಸೂನ್ ಫ್ಯಾಷನ್‌ವೇರ್ಸ್
ಇ,ನ್ನು ಯುವತಿಯರಿಗೆ ಮೆಚ್ಚುಗೆಯಾಗುವಂತಹ ಲಾಂಗ್ ಸ್ಲೀವ್, ತ್ರೀ ಫೋರ್ತ್ ಸ್ಲೀವ್, ಬಲೂನ್ ಸ್ಲೀವ್‌ನ ಕ್ರಾಪ್ ಟೀ ಶರ್ಟ್, ಟೈಯಿಂಗ್, ಕಾರ್ಸೆಟ್, ಡಬ್ಬಲ್ ವೆರೈಟಿ ವಿನ್ಯಾಸದ ಫಿಟ್ಟಿಂಗ್ ಟಾಪ್‌ಗಳು ಕಾಣಿಸಿಕೊಂಡಿವೆ. ರೈನ್ ಪೊಂಚೋ, ಡೆನಿಮ್, ರಯಾನ್ ಫ್ಯಾಬ್ರಿಕ್‌ನ ಕೇಪ್ರೀಸ್, ಕ್ಯೂಲ್ಲೋಟ್ಸ್, ಶಾರ್ಟ್ ಪ್ಯಾಂಟ್, ಹಾಫ್ ಪಲ್ಹಾಜೂಗಳು ಡಿಫರೆಂಟ್ ಲುಕ್‌ನಲ್ಲಿ ಲಗ್ಗೆ ಇಟ್ಟಿವೆ. ಇನ್ನು ಸೆಮಿ ಎಥ್ನಿಕ್ ಹಾಗೂ ಇಂಡಿಯನ್ ಔಟ್‌ಫಿಟ್ಸ್ ಕೆಟಗರಿಯಲ್ಲಿ ಮಂಡಿ ಕೆಳಗಿನವರೆಗಿನ ವೈಬ್ರೆಂಟ್ ಶೇಡ್‌ನ ಟೈಟ್ ಲೆಗ್ಗಿಂಗ್ಸ್, ಜೆಗ್ಗಿಂಗ್ಸ್, ಟ್ರೆಗ್ಗಿಂಗ್ಸ್ ಹಾಗೂ ಸ್ಕಿನ್ ಟೈಟ್ ಕುರ್ತಾ ಶಾರ್ಟ್ ಪ್ಯಾಂಟ್‌ಗಳು ಮಾನೋಕ್ರೋಮ್ ಶೇಡ್‌ನಲ್ಲಿ ಆಗಮಿಸಿವೆ. ಲೇಯರ್ ಲುಕ್ ನೀಡುವ ಫ್ಲೋರಲ್ ಪ್ರಿಂಟ್ಸ್‌ನ ಶಾರ್ಟ್ ಕುರ್ತಾ ಹಾಗೂ ಶಾರ್ಟ್ ಸಲ್ವಾರ್ ಕಮೀಝ್‌ಗಳು ಈ ಸೀಸನ್‌ನಲ್ಲೂ ಮುಂದುವರೆದಿವೆ.
ಮಧ್ಯಂತರದಲ್ಲಿ ಮೆನ್ಸ್ ಫ್ಯಾಷನ್‌ನಲ್ಲಿ ಬದಲಾವಣೆ
ಇನ್ನು, ಪುರುಷರ ಫ್ಯಾಷನ್‌ನಲ್ಲಿ ಸದ್ಯಕ್ಕೆ ಹೆಚ್ಚೇನೂ ಬದಲಾವಣೆಗಳಾಗಿಲ್ಲ! ಸೀಸನ್‌ನ ಮಧ್ಯಂತರದಲ್ಲಿ ಸಾಕಷ್ಟು ಬದಲಾವಣೆಗಳಾಗಲಿವೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು. ಇದೀಗ ಕ್ಯಾಶುವಲ್‌ವೇರ್‌ಗಳಲ್ಲಿ ಟೋರ್ನ್ ಜೀನ್ಸ್‌ಗೆ ನಾನಾ ಶೇಡ್‌ನ ಕಾಲರ್, ಬಟನ್ ಟೀಶರ್ಟ್‌ಗಳು ಎಂಟ್ರಿ ನೀಡಿವೆ. ಹುಡುಗರಿಗೆ ಕಾರ್ಗೋ, ಕಾಂರ್ಪೆಂಟರ್ ಪ್ಯಾಂಟ್ಸ್ ಆಗಮಿಸಿವೆ. ಇನ್ನು ಫಾರ್ಮಲ್ ಲುಕ್‌ಗೆ ಸಾಥ್ ನೀಡುವ ಡಾರ್ಕ್ ಶೇಡ್ ಫುಲ್ ಸ್ಲೀವ್ ಶರ್ಟ್‌ಗಳು ರೀ ಎಂಟ್ರಿ ನೀಡಿವೆ.
ಮಾನ್ಸೂನ್ ಫ್ಯಾಷನ್ ಝಲಕ್
- ಸ್ಟೈಲಿಸ್ಟ್ಗಳ ಪ್ರಕಾರ, ಯಾವಾಗಲೂ ಮಳೆಗಾಲ ಆರಂಭವಾದ ಕೆಲ ದಿನಗಳ ನಂತರವೇ ಬಹುತೇಕ ಫ್ಯಾಷನ್‌ವೇರ್‌ಗಳು ಎಂಟ್ರಿ ನೀಡುತ್ತವೆ.
- ಸೀಸನ್ ಆರಂಭದಲ್ಲಿ ಮಿಕ್ಸ್-ಮ್ಯಾಚ್ ಫ್ಯಾಷನ್ ಟ್ರೆಂಡಿಯಾಗುತ್ತದೆ.
- ಮೆನ್ಸ್ ಫ್ಯಾಷನ್‌ನಲ್ಲಿ, ಅಬ್ಸ್ಟ್ರಾಕ್ಟ್ ಪ್ರಿಂಟ್ಸ್‌ನ ಡಾರ್ಕ್ ಶೇಡ್‌ಗಳು ಮರುಕಳಿಸಿವೆ.
- ಯೂನಿಸೆಕ್ಸ್ ವಾಟರ್ ಪ್ರೂಫ್ವೇರ್ಗಳನ್ನು ಪುರುಷ-ಮಹಿಳೆ ಇಬ್ಬರೂ ಧರಿಸಬಹುದು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Corset Fashion: ಬಣ್ಣ ಬಣ್ಣದ ಕಾರ್ಸೆಟ್ ಕ್ರಾಪ್ ಟಾಪ್ ಜಾದೂ…