ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಾನ್ಸೂನ್‌ಗೆ ಮಕ್ಕಳ ವೈವಿಧ್ಯಮಯ ಉಡುಪುಗಳು ಹಾಗೂ ಆಕ್ಸೆಸರೀಸ್‌ಗಳು (Monsoon Kids Fashion) ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಅವುಗಳಲ್ಲಿ ಲೇಯರ್ಡ್ ಲುಕ್ ನೀಡುವ ಕ್ಯೂಟ್ ಡ್ರೆಸ್‌ಗಳು ಟ್ರೆಂಡಿಯಾಗಿವೆ. ಈ ಬಾರಿಯು ಎಂದಿನಂತೆ, ಮಳೆಯಲ್ಲೂ ಮಕ್ಕಳನ್ನು ಕ್ಯೂಟ್ ಆಗಿ, ಮುದ್ದು ಮುದ್ದಾಗಿ ಬಿಂಬಿಸುವಂತಹ ಉಡುಪುಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಅವುಗಳಲ್ಲಿ ಬೆಚ್ಚಗಿಡುವುದರೊಂದಿಗೆ ನೋಡಲು ಆಕರ್ಷಕವಾಗಿ ಕಾಣುವಂತಹ ಮಿನಿ ಲೇಯರ್ಡ್ ಔಟ್‌ಫಿಟ್‌ಗಳು ಹೊಸರೂಪದಲ್ಲಿ ಆಗಮಿಸಿವೆ.
ಪ್ರಚಲಿತದಲ್ಲಿರುವ ಮಕ್ಕಳ ಡ್ರೆಸ್‌ಗಳು
ಹೆಣ್ಣು ಹಾಗೂ ಗಂಡು ಮಕ್ಕಳು ಇಬ್ಬರೂ ಧರಿಸಬಹುದಾದ ಫುಲ್ ಸ್ಲೀವ್, ಹಾಫ್ ಶಟ್ರ್ಸ್ ಹಾಗೂ ಟೀ ಶರ್ಟ್, ಪುಲ್ ಓವರ್, ಸ್ವೆಟ್ ಶಟ್ರ್ಸ್, ಶಾರ್ಟ್ ಬಾಟಮ್ಸ್, ಆಂಕಲ್ ಲೆಂತ್ ಟೈಟ್ಸ್, ಶಾರ್ಟ್ ಕ್ಯೂಲ್ಲೋಟ್ಸ್, ನೀ ಲೆಂಥ್ ಪ್ಯಾಂಟ್ಸ್, ಪೆನ್ಸಿಲ್ ಜೀನ್ಸ್ ಪ್ಯಾಂಟ್, ಜಾಕೆಟ್ಸ್, ರೇನ್‌ಕೋಟ್ಸ್, ಡೆನಿಮ್ ಸೆಟ್‌ಗಳು ಟ್ರೆಂಡಿಯಾಗಿವೆ. ಇನ್ನು ಹೆಣ್ಣುಮಕ್ಕಳ ಉಡುಪಿನ ಕೆಟಗರಿಯಲ್ಲಿ ಶಾರ್ಟ್ ಸ್ಕರ್ಟ್, ಮಂಡಿವರೆಗಿನ ಡಂಗ್ರೀಸ್ ಸ್ಟೈಲ್‌ನ ಪ್ಯಾಂಟ್ ಹಾಗೂ ಸ್ಕಟ್ರ್ಸ್, ಲೇಯರ್ಡ್ ಲುಕ್ ನೀಡುವ ಡಬ್ಬಲ್ ತ್ರಿಬಲ್ ಟಾಪ್ ಹಾಗೂ ನೆಟ್ಟೆಡ್ ಲೈನಿಂಗ್ ಇರುವಂತಹ ಸಾಫ್ಟ್ ಫ್ಯಾಬ್ರಿಕ್‌ನ ಫ್ರಾಕ್ಸ್, ಮಿಡಿಗಳು, ರಾಂಪರ್ ಶೈಲಿಯ ಶಾರ್ಟ್ ಜಂಪ್‌ಸೂಟ್ಸ್, ಬೆಲ್ಟ್ ಡ್ರೆಸ್, ಟೈಯಿಂಗ್ ಡ್ರೆಸ್, ವಾಟರ್ ಪ್ರೂಫ್ ಕ್ಯಾಪ್‌ಗಳು ಹೆಚ್ಚು ಮಾರಾಟವಾಗುತ್ತಿವೆ ಎನ್ನುತ್ತಾರೆ ಮಕ್ಕಳ ಸ್ಟೈಲಿಸ್ಟ್ ಸಂಜಿತ್. ಅವರ ಪ್ರಕಾರ, ಮಕ್ಕಳು ಡ್ರೆಸ್‌ಗಳನ್ನು ಧರಿಸಿದ ನಂತರ ಮಳೆಯಲ್ಲಿ ಆಟವಾಡಿದಲ್ಲಿ ಧರಿಸಿದ ಉಡುಪುಗಳು ಒದ್ದೆಯಾಗಬಹುದು. ಕಾಲಿನಲ್ಲಿ ಆಡಿದಾಗ ಕೊಚ್ಚೆಯಾಗಬಹುದು. ಹಾಗಾಗಿ ಇವನ್ನೆಲ್ಲಾ ಪರಿಗಣನೆಯಲ್ಲಿಟ್ಟುಕೊಂಡಿರುವ ಡಿಸೈನರ್‌ಗಳು, ಮಾನ್ಸೂನ್‌ನಲ್ಲಿ ಬಿಡುಗಡೆಯಾಗುವ ಮಕ್ಕಳ ಉಡುಪುಗಳನ್ನು ಆದಷ್ಟೂ ಗಿಡ್ಡನಾಗಿ ವಿನ್ಯಾಸಗೊಳಿಸಿದ್ದಾರೆ. ಇದು ಫ್ಯಾಷನ್ ಲೋಕದ ಟ್ರಿಕ್ಸ್ ಎನ್ನುತ್ತಾರೆ.
ಮಾನ್ಸೂನ್‌ನಲ್ಲಿ ಮರೆಯಾದ ಕಿಡ್ಸ್ ಔಟ್‌ಫಿಟ್ಸ್
ಹೆಣ್ಣು ಮಕ್ಕಳ ಉದ್ದುದ್ದುದ ಗೌನ್ ಹಾಗೂ ಮ್ಯಾಕ್ಸಿಗಳು ಸೀಸನ್‌ನಿಂದ ಹೊರಬಿದ್ದಿವೆ. ಸ್ಲೀವ್‌ಲೆಸ್ ಡ್ರೆಸ್‌ಗಳು ಸೈಡಿಗೆ ಸರಿದಿವೆ. ಹುಡುಗರ ಫ್ಯಾಷನ್‌ನಲ್ಲಿ ಹೆಚ್ಚು ಬದಲಾವಣೆಯಾಗಿಲ್ಲ. ಅವುಗಳಲ್ಲೇ ಕೊಂಚ ಉದ್ದನೆಯ ಸ್ಲೀವ್‌ನವು ಬಿಡುಗಡೆಗೊಂಡಿವೆ ಎನ್ನುತ್ತಾರೆ ಸ್ಟೈಲಿಸ್ಟ್ಸ್.
ಮಾನ್ಸೂನ್ ಕಿಡ್ಸ್ ವೇರ್ ಖರೀದಿಸುವಾಗ ಗಮನದಲ್ಲಿರಲಿ
- ಟ್ರೆಂಡಿ ಡಿಸೈನ್ನೊಂದಿಗೆ ಕಂಫರ್ಟಬಲ್ ಆಗಿರಲಿ.
- ಮಳೆಯಲ್ಲಿ ಒದ್ದೆಯಾದಲ್ಲಿ ಒಣಗುವಂತಹ ಫ್ಯಾಬ್ರಿಕ್ನದ್ದನ್ನು ಕೊಳ್ಳಿ.
- ಕಾಲಿಗೆ ಆದಷ್ಟೂ ಬೂಟ್ಸ್ ಹಾಕಿಸಿ.
- ಭಾರವಾದ ಉಡುಪಿನ ಆಯ್ಕೆ ಬೇಡ. ಲೈಟ್ವೇಟ್ ಔಟ್ಫಿಟ್ ಖರೀದಿಸಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Monsoon Fashion: ಮಳೆಗಾಲಕ್ಕೆ ಫುಲ್ ಸ್ಲೀವ್ ಆಗಿ ಕಾಲಿಟ್ಟ 3 ಶೈಲಿಯ ಕ್ರಾಪ್ ಟಾಪ್ಸ್