Monsoon Kids Fashion: ಮಳೆಗಾಲಕ್ಕೆ ಲಗ್ಗೆ ಇಟ್ಟ ಮಕ್ಕಳ ಅಂದ ಚೆಂದದ ಕ್ಯೂಟ್‌ ಔಟ್‌ಫಿಟ್ಸ್ - Vistara News

ಫ್ಯಾಷನ್

Monsoon Kids Fashion: ಮಳೆಗಾಲಕ್ಕೆ ಲಗ್ಗೆ ಇಟ್ಟ ಮಕ್ಕಳ ಅಂದ ಚೆಂದದ ಕ್ಯೂಟ್‌ ಔಟ್‌ಫಿಟ್ಸ್

ಮಳೆಗಾಲದ ಈ ಸೀಸನ್‌ಗೆ ಹೊಂದುವಂತಹ ಆಕರ್ಷಕವಾಗಿರುವ ನಾನಾ ಬಗೆಯ ಮಕ್ಕಳ ಕ್ಯೂಟ್‌ ಔಟ್‌ಫಿಟ್‌ಗಳು (Monsoon Kids Fashion) ಮಾರುಕಟ್ಟೆಗೆ ಕಾಲಿಟ್ಟಿವೆ. ಯಾವ ಬಗೆಯವು ಹೆಚ್ಚು ಮಾರಾಟವಾಗುತ್ತಿವೆ. ಯಾಕೆ? ಎಂಬುದರ ಬಗ್ಗೆ ಇಲ್ಲಿದೆ ವರದಿ.

VISTARANEWS.COM


on

Kids outfits faded in Monsoon
ಚಿತ್ರಕೃಪೆ : ಪಿಕ್ಸೆಲ್‌
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಮಾನ್ಸೂನ್‌ಗೆ ಮಕ್ಕಳ ವೈವಿಧ್ಯಮಯ ಉಡುಪುಗಳು ಹಾಗೂ ಆಕ್ಸೆಸರೀಸ್‌ಗಳು (Monsoon Kids Fashion) ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಅವುಗಳಲ್ಲಿ ಲೇಯರ್ಡ್‌ ಲುಕ್‌ ನೀಡುವ ಕ್ಯೂಟ್‌ ಡ್ರೆಸ್‌ಗಳು ಟ್ರೆಂಡಿಯಾಗಿವೆ. ಈ ಬಾರಿಯು ಎಂದಿನಂತೆ, ಮಳೆಯಲ್ಲೂ ಮಕ್ಕಳನ್ನು ಕ್ಯೂಟ್‌ ಆಗಿ, ಮುದ್ದು ಮುದ್ದಾಗಿ ಬಿಂಬಿಸುವಂತಹ ಉಡುಪುಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಅವುಗಳಲ್ಲಿ ಬೆಚ್ಚಗಿಡುವುದರೊಂದಿಗೆ ನೋಡಲು ಆಕರ್ಷಕವಾಗಿ ಕಾಣುವಂತಹ ಮಿನಿ ಲೇಯರ್ಡ್ ಔಟ್‌ಫಿಟ್‌ಗಳು ಹೊಸರೂಪದಲ್ಲಿ ಆಗಮಿಸಿವೆ.

Monsoon Kids Fashion

ಪ್ರಚಲಿತದಲ್ಲಿರುವ ಮಕ್ಕಳ ಡ್ರೆಸ್‌ಗಳು

ಹೆಣ್ಣು ಹಾಗೂ ಗಂಡು ಮಕ್ಕಳು ಇಬ್ಬರೂ ಧರಿಸಬಹುದಾದ ಫುಲ್‌ ಸ್ಲೀವ್, ಹಾಫ್‌ ಶಟ್ರ್ಸ್ ಹಾಗೂ ಟೀ ಶರ್ಟ್, ಪುಲ್‌ ಓವರ್‌, ಸ್ವೆಟ್ ಶಟ್ರ್ಸ್, ಶಾರ್ಟ್ ಬಾಟಮ್ಸ್, ಆಂಕಲ್‌ ಲೆಂತ್‌ ಟೈಟ್ಸ್, ಶಾರ್ಟ್ ಕ್ಯೂಲ್ಲೋಟ್ಸ್, ನೀ ಲೆಂಥ್‌ ಪ್ಯಾಂಟ್ಸ್‌, ಪೆನ್ಸಿಲ್‌ ಜೀನ್ಸ್ ಪ್ಯಾಂಟ್‌, ಜಾಕೆಟ್ಸ್, ರೇನ್‌ಕೋಟ್ಸ್, ಡೆನಿಮ್‌ ಸೆಟ್‌ಗಳು ಟ್ರೆಂಡಿಯಾಗಿವೆ. ಇನ್ನು ಹೆಣ್ಣುಮಕ್ಕಳ ಉಡುಪಿನ ಕೆಟಗರಿಯಲ್ಲಿ ಶಾರ್ಟ್ ಸ್ಕರ್ಟ್, ಮಂಡಿವರೆಗಿನ ಡಂಗ್ರೀಸ್‌ ಸ್ಟೈಲ್‌ನ ಪ್ಯಾಂಟ್‌ ಹಾಗೂ ಸ್ಕಟ್ರ್ಸ್, ಲೇಯರ್ಡ್‌ ಲುಕ್‌ ನೀಡುವ ಡಬ್ಬಲ್‌ ತ್ರಿಬಲ್‌ ಟಾಪ್‌ ಹಾಗೂ ನೆಟ್ಟೆಡ್‌ ಲೈನಿಂಗ್‌ ಇರುವಂತಹ ಸಾಫ್ಟ್‌ ಫ್ಯಾಬ್ರಿಕ್‌ನ ಫ್ರಾಕ್ಸ್, ಮಿಡಿಗಳು, ರಾಂಪರ್ ಶೈಲಿಯ ಶಾರ್ಟ್ ಜಂಪ್‌ಸೂಟ್ಸ್, ಬೆಲ್ಟ್‌ ಡ್ರೆಸ್‌, ಟೈಯಿಂಗ್‌ ಡ್ರೆಸ್‌, ವಾಟರ್‌ ಪ್ರೂಫ್‌ ಕ್ಯಾಪ್‌ಗಳು ಹೆಚ್ಚು ಮಾರಾಟವಾಗುತ್ತಿವೆ ಎನ್ನುತ್ತಾರೆ ಮಕ್ಕಳ ಸ್ಟೈಲಿಸ್ಟ್‌ ಸಂಜಿತ್‌. ಅವರ ಪ್ರಕಾರ, ಮಕ್ಕಳು ಡ್ರೆಸ್‌ಗಳನ್ನು ಧರಿಸಿದ ನಂತರ ಮಳೆಯಲ್ಲಿ ಆಟವಾಡಿದಲ್ಲಿ ಧರಿಸಿದ ಉಡುಪುಗಳು ಒದ್ದೆಯಾಗಬಹುದು. ಕಾಲಿನಲ್ಲಿ ಆಡಿದಾಗ ಕೊಚ್ಚೆಯಾಗಬಹುದು. ಹಾಗಾಗಿ ಇವನ್ನೆಲ್ಲಾ ಪರಿಗಣನೆಯಲ್ಲಿಟ್ಟುಕೊಂಡಿರುವ ಡಿಸೈನರ್‌ಗಳು, ಮಾನ್ಸೂನ್‌ನಲ್ಲಿ ಬಿಡುಗಡೆಯಾಗುವ ಮಕ್ಕಳ ಉಡುಪುಗಳನ್ನು ಆದಷ್ಟೂ ಗಿಡ್ಡನಾಗಿ ವಿನ್ಯಾಸಗೊಳಿಸಿದ್ದಾರೆ. ಇದು ಫ್ಯಾಷನ್‌ ಲೋಕದ ಟ್ರಿಕ್ಸ್ ಎನ್ನುತ್ತಾರೆ.

Kids Fashion

ಮಾನ್ಸೂನ್‌ನಲ್ಲಿ ಮರೆಯಾದ ಕಿಡ್ಸ್‌ ಔಟ್‌ಫಿಟ್ಸ್

ಹೆಣ್ಣು ಮಕ್ಕಳ ಉದ್ದುದ್ದುದ ಗೌನ್‌ ಹಾಗೂ ಮ್ಯಾಕ್ಸಿಗಳು ಸೀಸನ್‌ನಿಂದ ಹೊರಬಿದ್ದಿವೆ. ಸ್ಲೀವ್‌ಲೆಸ್‌ ಡ್ರೆಸ್‌ಗಳು ಸೈಡಿಗೆ ಸರಿದಿವೆ. ಹುಡುಗರ ಫ್ಯಾಷನ್‌ನಲ್ಲಿ ಹೆಚ್ಚು ಬದಲಾವಣೆಯಾಗಿಲ್ಲ. ಅವುಗಳಲ್ಲೇ ಕೊಂಚ ಉದ್ದನೆಯ ಸ್ಲೀವ್‌ನವು ಬಿಡುಗಡೆಗೊಂಡಿವೆ ಎನ್ನುತ್ತಾರೆ ಸ್ಟೈಲಿಸ್ಟ್ಸ್.

Trendy Kids Dresses

ಮಾನ್ಸೂನ್‌ ಕಿಡ್ಸ್‌ ವೇರ್‌ ಖರೀದಿಸುವಾಗ ಗಮನದಲ್ಲಿರಲಿ

  • ಟ್ರೆಂಡಿ ಡಿಸೈನ್‌ನೊಂದಿಗೆ ಕಂಫರ್ಟಬಲ್‌ ಆಗಿರಲಿ.
  • ಮಳೆಯಲ್ಲಿ ಒದ್ದೆಯಾದಲ್ಲಿ ಒಣಗುವಂತಹ ಫ್ಯಾಬ್ರಿಕ್‌ನದ್ದನ್ನು ಕೊಳ್ಳಿ.
  • ಕಾಲಿಗೆ ಆದಷ್ಟೂ ಬೂಟ್ಸ್ ಹಾಕಿಸಿ.
  • ಭಾರವಾದ ಉಡುಪಿನ ಆಯ್ಕೆ ಬೇಡ. ಲೈಟ್‌ವೇಟ್‌ ಔಟ್‌ಫಿಟ್‌ ಖರೀದಿಸಿ.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Monsoon Fashion: ಮಳೆಗಾಲಕ್ಕೆ ಫುಲ್‌ ಸ್ಲೀವ್‌ ಆಗಿ ಕಾಲಿಟ್ಟ 3 ಶೈಲಿಯ ಕ್ರಾಪ್‌ ಟಾಪ್ಸ್

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Healthy Food For Dengue: ಈ ಆಹಾರಗಳನ್ನು ತಿನ್ನಿ; ಡೆಂಗ್ಯೂಗೆ ಡೋಂಟ್ ಕೇರ್ ಅನ್ನಿ

Healthy Food For Dengue: ಈಗಾಗಲೇ ರಾಜ್ಯದಲ್ಲಿ ಡೆಂಗ್ಯೂನಿಂದ ಸಾವಿರಾರು ಮಂದಿ ಬಳಲುತ್ತಿದ್ದು, ಈ ಬಗ್ಗೆ ಮುಂಜಾಗರೂಕತೆ ವಹಿಸಬೇಕಿದೆ. ಡೆಂಗ್ಯೂ, ಮಲೇರಿಯಾ ಸೇರಿದಂತೆ ಯಾವುದೇ ಜ್ವರವಿರಬಹುದು, ಸೊಳ್ಳೆಯ ಕಡಿತದಿಂದ ಬರುತ್ತದೆಯಾದರೂ, ದೇಹದಲ್ಲಿ ಎಲ್ಲಕ್ಕಿಂತ ಮುಖ್ಯವಾಗಿ ರೋಗ ನಿರೋಧಕ ಶಕ್ತಿಯನ್ನು ಈ ಮಳೆಗಾಲದಲ್ಲಿ ಹೆಚ್ಚಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಹಾಗಾಗಿ, ಈ ಸಂದರ್ಭ ಆರೋಗ್ಯಕರ ಆಹಾರ ಸೇವನೆ ಅತ್ಯಂತ ಮುಖ್ಯ.

VISTARANEWS.COM


on

Healthy Food For Dengue
Koo

ಮಳೆಗಾಲ ಬಂದಿದೆ. ಮಳೆಗಾಲದ ಜೊತೆಗೆ ಸಹಜವಾಗಿ, ಜ್ವರ, ಶಿತ, ನೆಗಡಿ, ಕೆಮ್ಮುಗಳೂ ಬಂದಿವೆ. ಮುಖ್ಯವಾಗಿ, ಎಲ್ಲೆಡೆ ವ್ಯಾಪಕವಾಗಿ ಕೇಳಿಬರುತ್ತಿರುವ ಡೆಂಗ್ಯೂ ಜ್ವರ ಕೂಡಾ ದಿನೇ ದಿನೇ ಹೆಚ್ಚಾಗುತ್ತಿವೆ. ಈಗಾಗಲೇ, ಕರ್ನಾಟಕದಲ್ಲಿ ಡೆಂಗ್ಯೂನಿಂದ ಸಾವಿರಾರು ಮಂದಿ ಬಳಲುತ್ತಿದ್ದು, ಈ ಬಗ್ಗೆ ಮುಂಜಾಗರೂಕತೆ ವಹಿಸಬೇಕಿದೆ. ಡೆಂಗ್ಯೂ, ಮಲೇರಿಯಾ ಸೇರಿದಂತೆ ಯಾವುದೇ ಜ್ವರವಿರಬಹುದು, ಸೊಳ್ಳೆಯ ಕಡಿತದಿಂದ ಬರುತ್ತದೆಯಾದರೂ, ದೇಹದಲ್ಲಿ ಎಲ್ಲಕ್ಕಿಂತ ಮುಖ್ಯವಾಗಿ ರೋಗ ನಿರೋಧಕ ಶಕ್ತಿಯನ್ನು ಈ ಮಳೆಗಾಲದಲ್ಲಿ ಹೆಚ್ಚಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಹಾಗಾಗಿ, ಈ ಸಂದರ್ಭ ಆರೋಗ್ಯಕರ ಆಹಾರ ಸೇವನೆ ಅತ್ಯಂತ ಮುಖ್ಯ. ಬನ್ನಿ, ಡೆಂಗ್ಯೂ ಹಾಗೂ ಮಲೇರಿಯಾದಂತಹ ಜ್ವರ ನಮ್ಮನ್ನು ಬಾಧಿಸದಂತೆ ಯಾವೆಲ್ಲ ಆಹಾರ ಸೇವನೆಯಿಂದ ನಮ್ಮಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು ಎಂಬುದನ್ನು (Healthy Food For Dengue) ನೋಡೋಣ.

Citrus fruits

ಸಿಟ್ರಸ್‌ ಹಣ್ಣುಗಳು

ವಿಟಮಿನ್‌ ಸಿ ಹೆಚ್ಚಿರುವ ಹಣ್ಣುಗಳು ರೋಗ ನಿರೋಧಕ ಶಕ್ತಿಯನ್ನು ದೇಹದಲ್ಲಿ ಹೆಚ್ಚಿಸುತ್ತದೆ. ನಿಂಬೆ, ಕಿತ್ತಳೆ, ಮುಸಂಬಿ ಇತ್ಯಾದಿ ಹಣ್ಣುಗಳಲ್ಲಿ ವಿಟಮಿನ್‌ ಸಿ ಅಧಿಕವಾಗಿದೆ. ಇವಿಷ್ಟೇ ಅಲ್ಲದೆ, ನೆಲ್ಲಿಕಾಯಿ, ಕಿವಿ, ಸ್ಟ್ರಾಬೆರಿ, ಟೊಮೇಟೋ ಇತ್ಯಾದಿಗಳಲ್ಲಿಯೂ ವಿಟಮಿನ್‌ ಸಿ ಇರುವುದರಿಂದ ವಿಟಮಿನ್‌ ಸಿ ಅಧಿಕವಾಗಿರುವ ತರಕಾರಿ ಹಣ್ಣುಗಳ ಸೇವನೆ ಮಾಡುವ ಮೂಲಕ ರೋಗ ನಿರೋಧಕತೆಯನ್ನು ಹೆಚ್ಚಿಸಿಕೊಳ್ಳಬಹುದು.

Selection of leafy green vegetables in wicker basket.

ಹಸಿರು ಸೊಪ್ಪು ತರಕಾರಿಗಳು

ಮಲೇರಿಯಾ, ಚಿಕುನ್‌ಗುನ್ಯಾ, ಡೆಂಗ್ಯೂ ಇವುಗಳು ಬರದಂತೆ ಅಂತಷ್ಟೇ ಅಲ್ಲ, ನಮ್ಮ ದೇಹದಲ್ಲಿ ಆರೋಗ್ಯ ಚೈತನ್ಯವನ್ನು ಹೊರಹೊಮ್ಮಿಸಲು ಈ ಹಸಿರು ಸೊಪ್ಪು ತರಕಾರಿಗಳ ನಿಯಮಿತ ಸೇವನೆಯನ್ನು ನಾವು ಮರೆಯಲೇಬಾರದು.

ಆಂಟಿ ಆಕ್ಸಿಡೆಂಟ್‌ನಿಂದ ಸಮೃದ್ಧವಾಗಿರುವ ಆಹಾರಗಳು

ಈರುಳ್ಳಿ, ಸೇಬು, ಬೆರ್ರಿಗಳು, ಒಣದ್ರಾಕ್ಷಿ ಸೇರಿದಂತೆ ಆಂಟಿ ಆಕ್ಸಿಡೆಂಟ್‌ ಹೇರಳವಾಗಿರುವ ಆಹಾರವನ್ನು ಸೇವಿಸಿ. ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪ್ರಮುಖ ಆಗರ.

Papaya leaf juice

ಪಪ್ಪಾಯ ಎಲೆಯ ರಸ

ಪಪ್ಪಾಯಿಯನ್ನು ತಿನ್ನುವುದಕ್ಕಿಂತಲೂ, ಅದರ ಎಲೆಯ ರಸ ಕುಡಿಯುವುದರಿಂದ ಡೆಂಗ್ಯುವನ್ನು ದೂರವಿಡಬಹುದು. ಇದು ಡೆಂಗ್ಯುಗೆ ಪ್ರಕೃತಿಯೇ ನೀಡಿದ ದಿವ್ಯವೌಷಧ. ಡೆಂಗ್ಯು ಬಂದಿರುವ ಮಂದಿಗೂ ಇದು ಒಳ್ಳೆಯ ಔಷಧ. ನೀವು ಮೊದಲೇ ಪಪ್ಪಾಯಿ ಹಾಗೂ ಪಪ್ಪಾಯಿ ಎಲೆಯ ರಸವನ್ನು ಆಗಾಗ ಸೇವಿಸುತ್ತಿದ್ದರೆ, ಡೆಂಗ್ಯುವಿನ ಅಪಾಯದಿಂದ ದೂರವಿರಬಹುದು.

Almonds Zinc Foods Soaked in water at night and eaten in the morning provides zinc, protein along with omega 3 fatty acids and many minerals

ಬಾದಾಮಿ

ಬಾದಾಮಿಯಂಥ ವಿಟಮಿನ್‌ ಇ ಹೇರಳವಾಗಿರುವ ಆಹಾರದಲ್ಲಿ ಡೆಂಗ್ಯು, ಮಲೇರಿಯಾದಂತಹ ರೋಗಗಳನ್ನು ದೂರವಿಡುವ ಗುಣವಿದೆ. ನಿತ್ಯವೂ ಬೆಳಿಗ್ಗೆ ಬಾದಾಮಿ, ವಾಲ್‌ನಟ್‌ ತಿನ್ನುವುದರಿಂದ ಒಳ್ಳೆಯ ಲಾಭ ಪಡೆಯಬಹುದು. ಕೇವಲ, ಇದಕ್ಕೆ ಮಾತ್ರವಲ್ಲ, ಹೃದಯದ ಆರೋಗ್ಯವೂ ಸೇರಿದಂತೆ ಸಂಪೂರ್ಣ ಆರೋಗ್ಯಕ್ಕೆ ಈ ಅಭ್ಯಾಸ ಒಳ್ಳೆಯದು.

Garlic

ಬೆಳ್ಳುಳ್ಳಿ

ಬೆಳ್ಳುಳ್ಳಿಯಲ್ಲಿರುವ ವಾಸನೆಗೆ ಹಲವು ಕೀಟಗಳನ್ನೂ, ಸೊಳ್ಳೆಗಳನ್ನೂ ದೂರವಿರಿಸುವ ಗುಣವಿದೆ. ಇದು ಆಂಟಿ ಫಂಗಲ್‌ ಹಾಗೂ ಆಂಟಿ ಬ್ಯಾಕ್ಟೀರಿಯಲ್‌ ಗುಣಗಳನ್ನು ಹೊಂದಿರುವುದರಿಂದ ಸೇವನೆ ಒಳ್ಳೆಯದು.

Benefits Of Ginger

ಶುಂಠಿ

ಶೀತ, ನೆಗಡಿ, ಜ್ವರ ಏನೇ ಇರಲಿ ಶುಂಠಿಯ ಗುಣಗಳು ಇದಕ್ಕೆ ಪೂರಕವಾಗಿರುವುದು ನಿಮಗೆ ಗೊತ್ತೇ ಇದೆ. ಹಾಗಾಗಿ ಮಳೆಗಾಲದಲ್ಲಿ ಶುಂಠಿಯ ಉಪಯೋಗ ಬಹಳ ಮುಖ್ಯ. ಗಂಟಲು ಕೆರೆತ, ಶೀತ, ನೆಗಡಿ ಕೆಮ್ಮು ಏನೇ ಇರಲಿ, ಬರದೇ ಇರಲಿ ಶುಂಠಿಯ ಸೇವನೆಯಿಂದ ಇವೆಲ್ಲ ಬರದಂತೆ ತಡೆಯಬಹುದು. ಅಷ್ಟೇ ಅಲ್ಲ, ಬಂದರೂ ಇದರ ಸೇವನೆಯಿಂದ ಪರಿಹಾರ ಪಡೆಯಬಹುದು.

Tips To Prevent Curd

ಮೊಸರು

ಮೊಸರಿನಲ್ಲಿರುವ ಪ್ರೊಬಯಾಟಿಕ್‌ ಗುಣವು ರೋಗ ನಿರೋಧಕತೆಯನ್ನು ಹೆಚ್ಚು ಮಾಡುತ್ತದೆ. ಹಾಗಾಗಿ ದಿನಕ್ಕೊಂದು ಕಪ್‌ ಮೊಸರಿನ ಸೇವನೆ ಒಳ್ಳೆಯದು.

Raw Turmeric with Powder Cutout

ಅರಿಶಿನ

ಅರಿಶಿನದ ಗುಣಗಳ ಬಗ್ಗೆ ಮತ್ತೆ ವಿವರಿಸಿ ಹೇಳಬೇಕಾಗಿಲ್ಲ. ದಿನವೂ ಅರಿಶಿನ ಹಾಕಿದ ಬಿಸಿ ಹಾಲನ್ನು ಕುಡಿಯುವ ಮೂಲಕ ರೋಗ ನಿರೋಧಕತೆಯನ್ನು ಹೆಚ್ಚಿಸಿಕೊಳ್ಳಬಹುದು. ಮಕ್ಕಳಿಗೆ ಮುಖ್ಯವಾಗಿ ಇದನ್ನು ಕೊಡುವುದರಿಂದ ಸಾಕಷ್ಟು ಲಾಭಗಳಿವೆ.

Nutrition Alert

ಎಳನೀರು

ಎಳನೀರು ಅಥವಾ ತೆಂಗಿನಕಾಯಿ ನೀರನ್ನು ಸೇವಿಸುವುದರಿಂದ ರೋಗ ನಿರೋಧಕತೆ ಹೆಚ್ಚುತ್ತದೆ. ಇದರಲ್ಲಿ ಇಲೆಕ್ಟ್ರೋಲೈಟ್‌ಗಳಿದ್ದು, ಇವು ಡೆಂಗ್ಯು, ಮಲೇರಿಯಾದಂಹತ ಸಮಸ್ಯೆಗಳು ಬರದಂತೆ ದೂರವಿರಿಸುತ್ತದೆ.

Continue Reading

ಫ್ಯಾಷನ್

Ambani Wedding Fashion: ಅನಂತ್ ಅಂಬಾನಿ ಶೆರ್ವಾನಿ ಬೆಲೆಯೇ 214 ಕೋಟಿ ರೂ! ಹೇಗಿತ್ತು ನೋಡಿ ಅಂಬಾನಿ ಜೋಡಿಯ ವೆಡ್ಡಿಂಗ್ ಫ್ಯಾಷನ್!

Ambani Wedding Fashion: ವಜ್ರ-ವೈಢೂರ್ಯ ಹಾಗೂ ಬಂಗಾರದಿಂದಲೇ ತಯಾರಾದ ಗ್ರ್ಯಾಂಡ್‌ ಡಿಸೈನರ್‌ವೇರ್‌ಗಳನ್ನು ಧರಿಸಿ ಮದುವೆಯಾದ ಅಂಬಾನಿ ಜೋಡಿ ಅನಂತ್‌-ರಾಧಿಕಾ ಮರ್ಚೆಂಟ್‌ ವೆಡ್ಡಿಂಗ್‌ ಫ್ಯಾಷನ್‌ನಲ್ಲಿ ಹೊಸ ಭಾಷ್ಯವನ್ನೇ ಬರೆದಿದ್ದಾರೆ. ಹಾಗಾದಲ್ಲಿ, ಅವರ ಮದುವೆಯ ದಿನದ ಡಿಸೈನರ್‌ವೇರ್ಸ್ & ಆಭರಣಗಳು ಹೇಗಿದ್ದವು? ಇಲ್ಲಿದೆ ವರದಿ.

VISTARANEWS.COM


on

Ambani Wedding Fashion
ಚಿತ್ರಗಳು: ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್‌ ಮದುವೆಯ ಚಿತ್ರಗಳು
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ವಜ್ರ-ವೈಢೂರ್ಯದಲ್ಲೆ ಮಿಂದೆದ್ದಿರುವ ಅಂಬಾನಿ ಜೋಡಿ ಅನಂತ್‌-ರಾಧಿಕಾ ಮರ್ಚೆಂಟ್‌, ಇಂಡಿಯನ್‌ ವೆಡ್ಡಿಂಗ್‌ ಫ್ಯಾಷನ್‌ನಲ್ಲಿ (Ambani Wedding Fashion) ಹೊಸ ಭಾಷ್ಯ ಬರೆದಿದ್ದಾರೆ. ಹೌದು, ಜನರ ಕಣ್ಣು ಕುಕ್ಕುವಂತಹ ವಜ್ರ-ವೈಢೂರ್ಯ ಹಾಗೂ ಬಂಗಾರದಿಂದಲೇ ತಯಾರಾದ ಗ್ರ್ಯಾಂಡ್‌ ಡಿಸೈನರ್‌ವೇರ್ಸ್, ದುಬಾರಿ ಜ್ಯುವೆಲರಿಗಳನ್ನು ಧರಿಸಿ ಲಕ್ಷುರಿಯಾಗಿ ಮದುವೆಯಾದ ಅಂಬಾನಿ ಜೋಡಿ ಅನಂತ್‌-ರಾಧಿಕಾ ಮರ್ಚೆಂಟ್‌ , ಬಿಗ್‌ ಗ್ರ್ಯಾಂಡ್‌ ವೆಡ್ಡಿಂಗ್‌ ಫ್ಯಾಷನ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಹಾಗಾದಲ್ಲಿ, ಮದುವೆಯ ದಿನ ಅವರು ಧರಿಸಿದ್ದ ವಿಶೇಷವಾದ ಡಿಸೈನರ್‌ವೇರ್ಸ್ ಹಾಗೂ ಆಭರಣಗಳು ಹೇಗಿದ್ದವು?ಎಷ್ಟು ಕೋಟಿ ರೂ. ಬೆಲೆಬಾಳುತ್ತಿದ್ದವು. ಈ ಕುರಿತಂತೆ ಫ್ಯಾಷನ್‌ ವಿಮರ್ಶಕರು ಹೇಳುವುದೇನು? ಇಲ್ಲಿದೆ ವಿವರ.

Ambani Wedding Fashion

ವಜ್ರ- ವೈಢೂರ್ಯ ಬಂಗಾರದಲ್ಲೆ ಮಿಂದೆದ್ದ ಜೋಡಿ

ಮದುವೆಯ ದಿನದಂದು ಅಡಿಯಿಂದ ಮುಡಿಯವರೆಗೂ ಕೋಟಿಗಟ್ಟಲೇ ಬೆಲೆ ಬಾಳುವ ವಜ್ರ ವೈಡೂರ್ಯಗಳಿಂದಲೇ ಅಲಂಕೃತಗೊಂಡಿದ್ದ ಅನಂತ್‌-ರಾಧಿಕಾ ಅಂಬಾನಿಯವರ ಸೆಲೆಬ್ರೇಷನ್‌, ವೆಡ್ಡಿಂಗ್‌ ಇಂಡಸ್ಟ್ರೀಯಲ್ಲಿ ಭಾರಿ ಸಂಚಲನ ಮೂಡಿಸಿರುವುದರೊಂದಿಗೆ ಬಿಗ್‌ ಫ್ಯಾಟ್‌ ವೆಡ್ಡಿಂಗ್‌ ಪ್ರಿಯರನ್ನು ಉತ್ತೇಜಿಸಿದೆ. ಡಿಸೈನಿಂಗ್‌ ಕ್ಷೇತ್ರದಲ್ಲಿ ಸಾಕಷ್ಟು ಮಂದಿಗೆ ಉದ್ಯೋಗ ಕಲ್ಪಿಸಿದೆ.

ಅನಂತ್‌ ಅಂಬಾನಿಯ 214 ಕೋಟಿ ರೂ. ಗಳ ಶೆರ್ವಾನಿ

ಅಬ್ಬಬ್ಬಾ., ಮದುವೆಯ ದಿನ ಅನಂತ್‌ ಅಂಬಾನಿ ಧರಿಸಿದ್ದ ವಜ್ರ ಹಾಗೂ ಬಂಗಾರ ಮಿಶ್ರಿತ ಡಿಸೈನ್‌ನ ಶೆರ್ವಾನಿ ಬೆಲೆ 214 ಕೋಟಿ ರೂ. ಗಳು. ಅದರೊಂದಿಗೆ ಧರಿಸಿದ್ದ, ಆನೆಯ ಆಕಾರದ ಬ್ರೋಚ್‌ 14 ಕೋಟಿ ರೂ. ಎಂದರೇ ನೀವು ನಂಬಲೇಬೇಕು. ದೇಸಿ ಕಲಾಕಾರರಿಂದ ಸಿದ್ಧಗೊಂಡ ಶೆರ್ವಾನಿಗೆ ಎಥ್ನಿಕ್‌ ಜೂತಿ ಧರಿಸುವ ಬದಲು, ಬಂಗಾರದ ಪಾಲಿಶ್‌ ಪ್ರಿಂಟ್ಸ್ ಇರುವಂತಹ ಕಸ್ಟಮೈಸ್ಡ್ ಸ್ಪೋರ್ಟ್ಸ್ ಶೂ ಧರಿಸಿದ್ದು, ಹೊಸ ಟ್ರೆಂಡ್‌ಗೆ ಗ್ರೀನ್‌ ಸಿಗ್ನಲ್‌ ನೀಡಿತು ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರಾದ ಜಾನ್‌.

ಮಹಾರಾಣಿಯಂತೆ ಬಿಂಬಿಸಿದ ರಾಧಿಕಾ ಮರ್ಚೆಂಟ್‌ ಬ್ರೈಡಲ್‌ ಲುಕ್‌

ಇನ್ನು, ಮದುವೆಯ ದಿನ ಗುಜರಾತಿ ಸಂಪ್ರದಾಯದಂತೆ ವಿಶೇಷ ಲೆಹೆಂಗಾ ಹಾಗೂ ಗಾಗ್ರದಲ್ಲಿ ಕಾಣಿಸಿಕೊಂಡ ರಾಧಿಕಾ ಧರಿಸಿದ್ದ, ಡಿಸೈನರ್‌ವೇರ್‌ಗಳು ಕೂಡ ಅಷ್ಟೇ, ಶುದ್ಧ ಬಂಗಾರ ಹಾಗೂ ವಜ್ರದಿಂದಲೇ ಸಿಂಗಾರಗೊಂಡಿದ್ದವು. ತವರು ಮನೆಯಿಂದ ಹೊರಡುವ ಲುಕ್‌, ರಾತ್ರಿ ಮಹೂರ್ತದ ಲುಕ್‌, ವಿದಾಯಿ ಲುಕ್‌ ಹೀಗೆ ನಾನಾ ಟ್ರೆಡಿಷನಲ್‌ ಲುಕ್‌ಗಳಲ್ಲಿ ರಾಧಿಕಾ ಧರೆಗಿಳಿದ ಅಪ್ಸರೆಯಂತೆ ಕಾಣಿಸಿಕೊಂಡರು. ಅಗ್ನಿಸಾಕ್ಷಿ ಸಂದರ್ಭದಲ್ಲಿ, ಡಿಸೈನರ್‌ ಅಬುಜಾನಿ ಸಂದೀಪ್‌ ಕೋಸ್ಲಾ ಅವರ ಡಿಸೈನ್‌ನ ವೈಟ್‌ ಹಾಗೂ ರೆಡ್‌ ಕಾಂಬಿನೇಷನ್‌ನ ಬಂಗಾರದ ವಿನ್ಯಾಸದ ಗಾಗ್ರದಲ್ಲಿ ಮಿನುಗಿದರು. ವಿಶೇಷವೆಂದರೇ, ಸಹೋದರಿಯ ನೂರಾರು ಕೋಟಿ. ರೂ ಬೆಲೆಬಾಳುವ ಜ್ಯುವೆಲರಿ ಸೆಟ್‌ ಧರಿಸಿ, ಸಸ್ಟೈನಬಲ್‌ ಜ್ಯುವೆಲರಿ ಫ್ಯಾಷನ್‌ಗೂ ಸೈ ಎಂದರು. ಅಂದಹಾಗೆ, ಈ ಅಂಬಾನಿ ಜೋಡಿಯ ಈ ಗ್ರ್ಯಾಂಡ್‌ ವೆಡ್ಡಿಂಗ್‌ ಫ್ಯಾಷನ್‌ ಭಾರತೀಯ ಸಂಸ್ಕೃತಿ ಎತ್ತಿ ಹಿಡಿಯುವ ಸಾಕಷ್ಟು ಡಿಸೈನರ್‌ಗಳಿಗೆ ವೇದಿಕೆಯನ್ನು ಸೃಷ್ಟಿಸಿತು ಎನ್ನಬಹುದು ಎನ್ನುತ್ತಾರೆ ಫ್ಯಾಷನ್‌ ವಿಶ್ಲೇಷಕರು.

Ambani wedding Fashion: ಇಂದ್ರಲೋಕವನ್ನೇ ಧರೆಗಿಳಿಸಿದ ಅಂಬಾನಿ ಫ್ಯಾಮಿಲಿ!ಇದನ್ನೂ ಓದಿ:

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಫ್ಯಾಷನ್

Ambani wedding Fashion: ಇಂದ್ರಲೋಕವನ್ನೇ ಧರೆಗಿಳಿಸಿದ ಅಂಬಾನಿ ಫ್ಯಾಮಿಲಿ!

Ambani wedding Fashion: ಅಂಬಾನಿ ಫ್ಯಾಮಿಲಿ ವೆಡ್ಡಿಂಗ್‌ ಸಂಭ್ರಮದಲ್ಲಿ ಮಿಂದೆದ್ದಿದೆ. ಮದುಮಗ ಅನಂತ್‌ ಅಂಬಾನಿ – ರಾಧಿಕಾ ಮರ್ಚೆಂಟ್‌ ಮಾತ್ರವಲ್ಲ, ಕುಟುಂಬದವರೆಲ್ಲರೂ ತಮ್ಮದೇ ಆದ ಟ್ರೆಡಿಷನಲ್‌ ಡ್ರೆಸ್‌ಕೋಡ್‌ಗಳೊಂದಿಗೆ ಇಂದ್ರ ಲೋಕವನ್ನೇ ಮರು ಸೃಷ್ಟಿಸಿದ್ದಾರೆ. ಅಭಿರುಚಿಗೆ ತಕ್ಕಂತೆ ಹೇಗೆಲ್ಲಾ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದರ ಕುರಿತಂತೆ ಇಲ್ಲಿದೆ ಡಿಟೇಲ್ಸ್.

VISTARANEWS.COM


on

Ambani wedding Fashion
ಚಿತ್ರಗಳು: ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್‌ ವೆಡ್ಡಿಂಗ್‌ ಫ್ಯಾಷನ್‌ ಚಿತ್ರಗಳು
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಅಂಬಾನಿ ಫ್ಯಾಮಿಲಿಯ ವೆಡ್ಡಿಂಗ್‌ (Ambani wedding Fashion) ಸಂಭ್ರಮ ಮುಗಿಲು ಮುಟ್ಟಿದೆ. ಮದುಮಗ ಅನಂತ್‌ ಅಂಬಾನಿ – ರಾಧಿಕಾ ಮರ್ಚೆಂಟ್‌ ಮಾತ್ರವಲ್ಲ, ಕುಟುಂಬದವರೆಲ್ಲರೂ ಸೇರಿ ಕೆಲಕಾಲ ಇಡೀ ಇಂದ್ರ ಲೋಕವನ್ನೇ ಧರೆಗಿಳಿಸಿದ್ದಾರೆ. ಮದುವೆಯ ಹೆಸರಲ್ಲಿ ಟ್ರೆಡಿಷನಲ್‌ ಫ್ಯಾಷನ್‌ಗೆ ಪ್ರಾಮುಖ್ಯತೆ ನೀಡುವುದರೊಂದಿಗೆ ದೇಸಿ ಫ್ಯಾಷನ್‌ಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.

ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್‌ ಕಪಲ್‌ ಗೋಲ್ಸ್

ಪ್ರಿ-ವೆಡ್ಡಿಂಗ್‌ ಕಾರ್ಯಕ್ರಮಗಳ ಆರಂಭದಿಂದಲೂ ಅನಂತ್‌ ಅಂಬಾನಿ -ರಾಧಿಕಾ ಮರ್ಚೆಂಟ್‌ ಜೋಡಿಯ ಕಪಲ್‌ ಗೋಲ್ಸ್ ಫ್ಯಾಷನ್‌ವೇರ್‌ನಲ್ಲೂ ಕಂಡುಬಂದಿದೆ. ಅದರಲ್ಲೂ ಕುಟುಂಬದ ಅರಿಷಿಣ ಶಾಸ್ತ್ರ, ಸಂಗೀತ್‌, ಮೆಹೆಂದಿ, ಮಾತಾ ಕೀ ಚೌಕಿ, ಗೃಹ ಶಾಂತಿ ಪೂಜಾ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳಲ್ಲೂ ಇವರಿಬ್ಬರ ಉಡುಗೆ ತೊಡುಗೆಗಳು ಒಂದಕ್ಕೊಂದು ಮ್ಯಾಚ್‌ ಆಗುವುದರೊಂದಿಗೆ ನೋಡುಗರ ಕಣ್ಮನ ಸೆಳೆದಿವೆ. ಸನ್‌ ಕಲರ್‌ನಿಂದಿಡಿದು, ಪಿಂಕ್‌ ಆರೆಂಜ್‌, ಬ್ಲ್ಯೂ ಪರ್ಪಲ್‌, ರೆಡ್‌ನಂತಹ ಶೇಡ್‌ಗಳ ಟ್ವಿನ್ನಿಂಗ್‌ ಹಾಗೂ ಕಾಂಟ್ರಸ್ಟ್ ಸ್ಟೈಲಿಂಗ್‌ ಜೊತೆಗೆ ಅವರ ಬಂಗಾರ ಮಿಶ್ರಿತ ಪ್ರತಿ ಎಥ್ನಿಕ್‌ ಫ್ಯಾಷನ್‌ವೇರ್‌ಗಳು ನೋಡುಗರ ಮನ ಮುಟ್ಟುತ್ತಿವೆ.

ನೀತಾ ಅಂಬಾನಿಯ ಹೆರಿಟೆಜ್‌ ಸೀರೆಗಳು

ಬನಾರಸಿ ರೇಷ್ಮೆ, ಕಾಂಚಿವರಂ ಸೇರಿದಂತೆ ದೇಸಿ ಹ್ಯಾಂಡ್‌ಲೂಮ್‌ನಿಂದ ಸಿದ್ಧಗೊಂಡ ಬಂಗಾರದ ದಾರದಿಂದಲೇ ನೇಯ್ದ ಸಿಲ್ಕ್‌ ಸೀರೆಗಳು ಸೀರೆಗಳು ನೀತಾ ಅಂಬಾನಿಯ ಸೌಂದರ್ಯವನ್ನು ಹೆಚ್ಚಿಸುತ್ತಿವೆ ಎಂದರೂ ಅತಿಶಯೋಕ್ತಿಯಾಗದು.

ಇಶಾ-ಶ್ಲೋಕ ಲೆಹೆಂಗಾ ಲವ್‌

ನೀತಾ ಅಂಬಾನಿಯ ಮಗಳು ಇಶಾ ಈ ವೆಡ್ಡಿಂಗ್‌ ಫ್ಯಾಷನ್‌ನಲ್ಲಿ ಧರಿಸಿದ್ದ ಒಂದೊಂದು ಲೆಹೆಂಗಾ ಕೂಡ ಒಂದೊಂದು ಕಥೆಯನ್ನೇ ಹೇಳಿವೆ. ಅಡಿಯಿಂದ ಮುಡಿಯವರೆಗೂ ಧರಿಸಿದ ವಜ್ರ-ವೈಢೂರ್ಯದ ಆಕ್ಸೆಸರೀಸ್‌ಗಳು ಫ್ಯಾಷನ್‌ ಲೋಕ ಮಾತ್ರವಲ್ಲ, ಜ್ಯುವೆಲರಿ ಲೋಕದಲ್ಲೂ ಸಂಚಲ ಮೂಡಿಸುವಲ್ಲಿ ಯಶಸ್ವಿಯಾಗಿವೆ. ಇನ್ನು, ಶ್ಲೋಕ ಅಂಬಾನಿ ಕೂಡ ಇದರಿಂದ ಹೊರತಾಗಿಲ್ಲ! ಇಲ್ಲಿ ಗಮನಿಸಬೇಕಾದ್ದು ಒಂದೇ ಒಬ್ಬರಿಗಿಂತ ಒಬ್ಬರದು ವಿಭಿನ್ನ ವಿನ್ಯಾಸ ಒಳಗೊಂಡಿದ್ದವು.

Ambani wedding Fashion

ನಾಯಿಮರಿ ಪಾಪ್‌ಕಾರ್ನ್‌ಗೂ ವೆಡ್ಡಿಂಗ್‌ ಔಟ್‌ಫಿಟ್‌

ಕುಟುಂಬದವರೊಂದಿಗೆ ಮೆಹಂದಿ ನೈಟ್‌ ಕಾರ್ಯ್ರಕಮದಲ್ಲಿ ರಾಧಿಕಾರ ಮುದ್ದು ನಾಯಿ ಮರಿ ಕೂಡ ಪಾಲ್ಗೊಂಡಿತ್ತು. ಪಾಪ್ಕಾರ್ನ್‌ ಹೆಸರಿನ ಈ ಶ್ವಾನ ಕೂಡ ಪಂಕ್‌ ಪೆಟ್‌ನ ಮಲ್ಟಿ ಶೇಡ್‌ನ ಡಿಸೈನರ್‌ವೇರ್‌ ಧರಿಸಿತ್ತು ಎಂದರೇ ಆಶ್ಚರ್ಯವಾಗಬಹುದು.

Ambani wedding Fashion

ಅಂಬಾನಿ ಮೆನ್ಸ್ ಬಂದ್ಗಾಲ ಫ್ಯಾಷನ್‌

ಸದ್ಯ ಅಂಬಾನಿ ಫ್ಯಾಮಿಲಿಯ ಬಹುತೇಕ ಎಲ್ಲಾ ಪುರುಷರು ನಾನಾ ವೆರೈಟಿ ಬಂದ್ಗಾಲ ಇಲ್ಲವೇ ಗೋಲ್ಡನ್‌ ಶೇಡ್‌ ಮಿಕ್ಸ್ ಕುರ್ತಾ ಸ್ಟೈಲಿಂಗ್‌ಗೆ ಸೈ ಎಂದಿದ್ದು, ಪ್ರತಿ ಕಾರ್ಯಕ್ರಮಕ್ಕೆ ತಕ್ಕಂತೆ ಡಿಸೈನ್‌ ಬದಲಿಸುತ್ತಿದ್ದಾರೆ ಎನ್ನಲಾಗಿದೆ.
ಒಟ್ಟಾರೆ, ಅಂಬಾನಿ ಫ್ಯಾಮಿಲಿಯ ವೆಡ್ಡಿಂಗ್‌ ಔಟ್‌ಫಿಟ್‌ಗಳು ಎಲ್ಲರನ್ನು ಸಮ್ಮೋಹನಗೊಳಿಸುತ್ತಿವೆ ಎನ್ನುತ್ತಾರೆ ಪ್ಯಾಷನ್‌ ವಿಮಶರ್ಕರು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Ambani Wedding Fashion: ಫ್ಯಾಷನ್‌ ಪ್ರಿಯರ ಹುಬ್ಬೇರಿಸಿದ ರಾಧಿಕಾ ಮರ್ಚೆಂಟ್‌ ದುಂಡು ಮಲ್ಲಿಗೆ ದುಪಟ್ಟಾ! ಏನಿದು ಫೂಲೋಂಕಾ ಚಾದರ್‌?

Continue Reading

ಫ್ಯಾಷನ್

Ambani Wedding: ಜಾಗತಿಕ ಮಟ್ಟದಲ್ಲಿ ದಾಖಲೆ ಸೃಷ್ಟಿಸಿದ ಅಂಬಾನಿ ಫ್ಯಾಮಿಲಿಯ ರಾಯಲ್‌ ವೆಡ್ಡಿಂಗ್‌ ಫ್ಯಾಷನ್‌!

Ambani Wedding: ಅಂಬಾನಿ ಫ್ಯಾಮಿಲಿಯ ವೆಡ್ಡಿಂಗ್‌ ಫ್ಯಾಷನ್‌ ಜಾಗತಿಕ ಮಟ್ಟದಲ್ಲಿ ವಿಭಿನ್ನ ದಾಖಲೆ ಸೃಷ್ಟಿಸಿದೆ. ಭಾರತೀಯ ಸಂಸ್ಕೃತಿ ಬಿಂಬಿಸುವ ಟ್ರೆಡಿಷನಲ್‌ ಡಿಸೈನರ್‌ವೇರ್ಸ್‌ಗಳಿಗೆ ಆದ್ಯತೆ ನೀಡಿರುವುದು ಮಾತ್ರವಲ್ಲದೇ, ಹಾಲಿವುಡ್‌-ಬಾಲಿವುಡ್‌ ಸೆಲೆಬ್ರೆಟಿಗಳನ್ನು ಮಾಡೆಲ್‌ಗಳನ್ನಾಗಿ ಬಿಂಬಿಸಿ ಸಂಭ್ರಮಿಸಿದ ಏಕೈಕ ರಾಯಲ್‌ ಕುಟುಂಬ ಇದಾಗಿದೆ ಎನ್ನುತ್ತಾರೆ ಫ್ಯಾಷನ್‌ ಲೋಕದ ದಿಗ್ಗಜರು.

VISTARANEWS.COM


on

Ambani Wedding
ಚಿತ್ರಗಳು: ಅಂಬಾನಿ ಫ್ಯಾಮಿಲಿಯ ಪ್ರಿ-ವೆಡ್ಡಿಂಗ್‌ ಚಿತ್ರಗಳು
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಅಂಬಾನಿ ಫ್ಯಾಮಿಲಿಯ ವೆಡ್ಡಿಂಗ್‌ ಫ್ಯಾಷನ್‌ ಇದೀಗ ಜಾಗತಿಕ ಮಟ್ಟದ ಫ್ಯಾಷನ್‌ಲೋಕದಲ್ಲಿ ದಾಖಲೆ ಸೃಷ್ಟಿಸಿದೆ. ಹಾಗೆನ್ನುತ್ತಾರೆ ಫ್ಯಾಷನ್‌ ದಿಗ್ಗಜರು. ಹೌದು. ಇದುವರೆಗೂ ನಿರಂತರವಾಗಿ ನಡೆದ ಅಂಬಾನಿ ಫ್ಯಾಮಿಲಿಯ ಪ್ರಿ ಹಾಗೂ ವೆಡ್ಡಿಂಗ್‌ ಫ್ಯಾಷನ್‌ ಕೇವಲ ಭಾರತದಲ್ಲಿ ಮಾತ್ರವಲ್ಲ, ಜಾಗತಿಕ ಮಟ್ಟದಲ್ಲಿ ತನ್ನದೇ ಆದ ದಾಖಲೆ ಬರೆದಿದೆ. ಭಾರತೀಯ ಸಂಸ್ಕೃತಿ ಬಿಂಬಿಸುವ ರೇಷ್ಮೆ ಸೀರೆಗಳಿಂದ ಹಿಡಿದು, ಊಹೆಗೂ ಮೀರಿದ ಬಗೆಬಗೆಯ ಲೆಹೆಂಗಾ, ಗಾಗ್ರ, ಪುರುಷರ ವೆರೈಟಿ ಬಂದ್ಗಾಲ, ಕುರ್ತಾ, ಚೂಡಿದಾರ್‌ ಸೂಟ್‌ ಸೇರಿದಂತೆ ಕಲ್ಚರ್‌ಗೆ ಸಾಥ್‌ ನೀಡುವ ಉಡುಗೆ-ತೊಡುಗೆಗಳು, ಅತ್ಯಾಕರ್ಷಕ ಜ್ಯುವೆಲರಿಗಳು, ಆಕ್ಸೆಸರೀಸ್‌ಗಳು, ಇಡೀ ಫ್ಯಾಷನ್‌ ಪ್ರಪಂಚವನ್ನೇ ಹುಬ್ಬೇರಿಸುವಂತೆ ಮಾಡಿದೆ ಎನ್ನುತ್ತಾರೆ ಫ್ಯಾಷನ್‌ ದಿಗ್ಗಜರು.

Ambani Wedding, ambani family photo

ವಜ್ರ-ವೈಢೂರ್ಯದ ಡಿಸೈನರ್‌ವೇರ್ಸ್ ಧರಿಸಿದ ಏಕೈಕ ಕುಟುಂಬ

ಇನ್ನು ಫ್ಯಾಷನಿಸ್ಟ್‌ ಜಾನ್‌ ಹೇಳುವಂತೆ, ಅಂಬಾನಿಯವರ ಫ್ಯಾಮಿಲಿ ಪ್ರಿ-ವೆಡ್ಡಿಂಗ್‌ನಲ್ಲಿ ಕೇವಲ ಟ್ರೆಡಿಷನಲ್‌ ಡಿಸೈನರ್‌ವೇರ್ಸ್ ಮಾತ್ರವಲ್ಲ, ಬಂಗಾರದ ಸೂಟ್‌, ರೇಷ್ಮೆ ಸೀರೆ, ವಜ್ರ ವೈಢೂರ್ಯದಿಂದ ಸಿದ್ಧಗೊಂಡ ಲೆಹೆಂಗಾ-ಗಾಗ್ರ ಸೇರಿದಂತೆ ಕೋಟಿಗಟ್ಟಲೇ ಬೆಲೆಬಾಳುವ ಕ್ರಾಫ್ಟೆಡ್ ಜ್ಯುವೆಲರಿಗಳು ಅನಾವರಣಗೊಂಡವು. ಮದುವೆ ಜೊತೆಗೆ ಟ್ರೆಡಿಷನಲ್‌ ಫ್ಯಾಷನ್‌ ಸಂಭ್ರಮಿಸಿದ ಏಕೈಕ ಕುಟುಂಬ ಇದಾಗಿದೆ ಎನ್ನುತ್ತಾರೆ.

ಎಕ್ಸ್‌ಕ್ಲ್ಯೂಸಿವ್‌ ಡಿಸೈನರ್‌ವೇರ್‌ಗಳಿಗೆ ವೇದಿಕೆ

ಪ್ರಿ-ವೆಡ್ಡಿಂಗ್‌ನಿಂದ ಹಿಡಿದು ಮದುವೆಯವರೆಗೂ ಪ್ರತಿ ಕಾರ್ಯಕ್ರಮಕ್ಕೂ ಒಂದೊಂದು ಬಗೆಯ ಡ್ರೆಸ್‌ಕೋಡ್‌, ಕಲರ್ಸ್ ಹಾಗೂ ಥೀಮ್‌ ಇರಿಸಿ, ಸೆಲೆಬ್ರೆಟಿಗಳನ್ನೇ ಮಾಡೆಲ್‌ಗಳನ್ನಾಗಿ ಬಿಂಬಿಸಿದ ಕ್ರೆಡಿಟ್‌ ಅಂಬಾನಿ ಫ್ಯಾಮಿಲಿಗೆ ಸಲ್ಲುತ್ತದೆ. ಅಲ್ಲದೇ, ಕೆಲವು ತಿಂಗಳಿಂದ ಪ್ರಪಂಚದಾದ್ಯಂತ ಇರುವ ಫ್ಯಾಷನ್‌ ಪ್ರೇಮಿಗಳನ್ನು ನಿರಂತರವಾಗಿ ಸೆಳೆದಿಟ್ಟ ಹೆಗ್ಗಳಿಕೆ ಕೂಡ ಸಲ್ಲುತ್ತದೆ ಎನ್ನುತ್ತಾರೆ ಫ್ಯಾಷನ್‌ ಗುರು ಪ್ರಸಾದ್‌ ಬಿದ್ದಪ್ಪ.

Ambani Wedding, ambani family photo

ರಿಚ್‌ ಫ್ಯಾಷನ್‌ ಟ್ರೆಂಡ್‌

ನೀತಾ ಅಂಬಾನಿ, ಇಶಾ, ಶ್ಲೋಕ, ರಾಧಿಕಾ ಮರ್ಚೆಂಟ್‌-ಅನಂತ್‌ ಅಂಬಾನಿ ಸೇರಿದಂತೆ ಪ್ರತಿಯೊಬ್ಬರು ಧರಿಸಿದ ಭಾರಿ ವಿನ್ಯಾಸದ ದುಬಾರಿ ಡಿಸೈನರ್‌ವೇರ್‌ಗಳು ರಾಜ-ಮಹಾರಾಜರ ಉಡುಗೆ-ತೊಡುಗೆಗಳನ್ನು ನೆನಪಿಸುವಂತೆ ಮಾಡಿದವಲ್ಲದೇ, ಭಾರತೀಯರು ಇಷ್ಟರ ಮಟ್ಟಿಗೆ ರಿಚ್‌ ಫ್ಯಾಷನ್‌ ಹೊಂದಿದ್ದಾರೆಂಬುದನ್ನು ಪ್ರೂವ್‌ ಮಾಡಿತು ಎನ್ನುವ ಫ್ಯಾಷನ್‌ ವಿಶ್ಲೇಷಕ ಸಮೀರ್‌ ಪ್ರಕಾರ, ಸಂಸ್ಕೃತಿ ಬಿಂಬಿಸುವ ಡಿಸೈನರ್‌ವೇರ್ಗಳನ್ನು ಮರುಕಳಿಸುವಂತೆ ಮಾಡಿತು ಎನ್ನುತ್ತಾರೆ.

ಸ್ವದೇಶ್‌ ಮೂಲಕ ಪ್ರೋತ್ಸಾಹ

ಮೊದಲಿನಿಂದಲೂ ಫ್ಯಾಷನ್‌ ಕಾನ್ಶಿಯಸ್‌ ಆಗಿರುವ ನೀತಾ ಅಂಬಾನಿ, ತಮ್ಮದೇ ಆದ ಮುಖೇಶ್‌ ಅಂಬಾನಿ ಕಲ್ಚರ್‌ ಸೆಂಟರ್‌ನಲ್ಲಿ ಸ್ವದೇಶ್‌ ಎಕ್ಸಿಬೀಷನ್‌ ಮೂಲಕವೂ ಸಾಕಷ್ಟು ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಅಲ್ಲದೇ ತಮ್ಮ ಮಗನ ಪ್ರಿ-ವೆಡ್ಡಿಂಗ್‌ ಫ್ಯಾಷನ್‌ನಲ್ಲೂ ಕುಸುರಿ ಕಲಾಂಕಾರಿ, ಮೀನಾಂಕಾರಿ, ಜರ್ದೋಸಿಯಂತಹ ಸೂಕ್ಷ್ಮ ಕಲೆಗೆ ಉತ್ತೇಜನ ನೀಡಿದ್ದಾರೆ ಎನ್ನುತ್ತಾರೆ ಫ್ಯಾಷನಿಸ್ಟ್‌ ರಾಜೇಶ್‌ ಶೆಟ್ಟಿ.

(ಲೇಖಕರು ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Ambani Wedding Fashion: ಅನಂತ್ ಅಂಬಾನಿ ಮದುವೆಯ ಡ್ರೆಸ್ ಕೋಡ್ ಏನಿತ್ತು? ಗಣ್ಯರ ಉಡುಗೆ ಹೇಗಿತ್ತು?

Continue Reading
Advertisement
Car Catches fire
ಕೊಡಗು10 mins ago

Car Catches fire: ಮಡಿಕೇರಿ ಬಳಿ ತಾಂತ್ರಿಕ ದೋಷದಿಂದ ಹೊತ್ತಿ ಉರಿದ ಸ್ವಿಫ್ಟ್‌ ಕಾರು!

Bypoll Results
ದೇಶ25 mins ago

Bypoll Results: ಉಪ ಚುನಾವಣೆಯಲ್ಲಿ ಬಿಜೆಪಿಗೆ ಮುಖಭಂಗ; 13ರ ಪೈಕಿ 10ರಲ್ಲಿ ಇಂಡಿಯಾ ಒಕ್ಕೂಟಕ್ಕೆ ಜಯ!

MS Dhoni
ಪ್ರಮುಖ ಸುದ್ದಿ27 mins ago

MS Dhoni : ಅಂಬಾನಿ ಪುತ್ರನ ಮದುವೆಯಲ್ಲಿ ಬಿಂದಾಸ್​ ​ ಡಾನ್ಸ್ ಮಾಡಿದ ಮಹೇಂದ್ರ ಸಿಂಗ್ ಧೋನಿ

CM Siddaramaiah
ಕರ್ನಾಟಕ44 mins ago

CM Siddaramaiah: ಕೆಪಿಸಿಸಿ ಕಚೇರಿ ಸ್ವಚ್ಛತಾ ಸಿಬ್ಬಂದಿಗೆ ಮನೆ ನೀಡಲು ಸಿಎಂ ಸೂಚನೆ

Israel Hamas War
ವಿದೇಶ52 mins ago

Israel Hamas War: ಗಾಜಾ ಮೇಲೆ ಇಸ್ರೇಲ್‌ ದಾಳಿ; ಹಮಾಸ್‌ ‘ಮಿಲಿಟರಿ ಚೀಫ್’ ಸೇರಿ 71 ಮಂದಿಯ ಹತ್ಯೆ

karnataka Weather Forecast
ಮಳೆ59 mins ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

Healthy Food For Dengue
ಫ್ಯಾಷನ್1 hour ago

Healthy Food For Dengue: ಈ ಆಹಾರಗಳನ್ನು ತಿನ್ನಿ; ಡೆಂಗ್ಯೂಗೆ ಡೋಂಟ್ ಕೇರ್ ಅನ್ನಿ

radioactive material
ದೇಶ1 hour ago

Radioactive Material: ಅಪಾಯಕಾರಿ ರಾಸಾಯನಿಕ ವಸ್ತು ತುಂಬಿದ್ದ ಬಾಕ್ಸ್‌ಗಳು ಪತ್ತೆ; ಐವರು ಅರೆಸ್ಟ್‌

Ambani Wedding Fashion
ಫ್ಯಾಷನ್2 hours ago

Ambani Wedding Fashion: ಅನಂತ್ ಅಂಬಾನಿ ಶೆರ್ವಾನಿ ಬೆಲೆಯೇ 214 ಕೋಟಿ ರೂ! ಹೇಗಿತ್ತು ನೋಡಿ ಅಂಬಾನಿ ಜೋಡಿಯ ವೆಡ್ಡಿಂಗ್ ಫ್ಯಾಷನ್!

Bagalkot news
ಕರ್ನಾಟಕ2 hours ago

Bagalkot News: ಭಕ್ತರಿಗೆ ಭಂಡಾರ ಹಚ್ಚಿ ಕೊಡಲಿ ಏಟು ನೀಡೋ ಪೂಜಾರಿ; ಮೌಢ್ಯ ನಿಷೇಧ ಕಾಯ್ದೆಯಡಿ ಬಂಧನ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ59 mins ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

karnataka Rain
ಮಳೆ6 hours ago

Karnataka Rain : ಭಾರಿ ಮಳೆಗೆ ಕಳಚಿ ಬಿದ್ದ ಚಾವಣೆ; ರಸ್ತೆಗೆ ಅಡ್ಡಲಾಗಿ ಉರುಳಿದ ಬೃಹತ್‌ ಮರ

Wild Animal Attack
ಹಾಸನ7 hours ago

Wild Animal Attack : ಬೇಲೂರಿನಲ್ಲಿ ಒಂಟಿ ಸಲಗ ಡೆಡ್ಲಿ ಅಟ್ಯಾಕ್; ಮನೆ ಅಂಗಳದಲ್ಲಿ ಓಡಾಡಿದ ಚಿರತೆ

karnataka Rain Effect
ಮಳೆ2 days ago

Karnataka Rain : ಭಾರಿ ಮಳೆಗೆ ಕರೆಯಂತಾದ ರಸ್ತೆಯಲ್ಲಿ ಬೈಕ್‌ ಚಲಾಯಿಸಿ ಮುಗ್ಗರಿಸಿ ಬಿದ್ದ ಸವಾರರು; ನಾಳೆಗೂ ರೈನ್‌ ಅಲರ್ಟ್‌

Chikkamagaluru News Police detained youths for consuming liquor at tourist spot in Chikmagaluru
ಮಳೆ4 days ago

Chikkamagaluru News : ಚಿಕ್ಕಮಗಳೂರು ಚಳಿಗೆ ನಶೆ ಏರಿಸಿಕೊಳ್ಳುತ್ತಿದ್ದವರ ಕಿಕ್ಕಿಳಿಸಿದ ಬಣಕಲ್ ಪಿಎಸ್ಐ ರೇಣುಕಾ

karnataka Rain
ಮಳೆ4 days ago

Karnataka Rain : ಭಾರಿ ಮಳೆಯಲ್ಲಿ ದೇವರಮನೆಗುಡ್ಡದಲ್ಲಿ ಪ್ರವಾಸಿಗರ ಹುಚ್ಚಾಟ; ಕೇಸ್‌ ಜಡಿದ ಪೊಲೀಸರು!

karnataka weather Forecast
ಮಳೆ5 days ago

Karnataka Weather : 11 ಜಿಲ್ಲೆಗಳಲ್ಲಿ ರಣಮಳೆ; ಕರಾವಳಿಗೆ ರೆಡ್‌, ಮಲೆನಾಡಿಗೆ ಆರೆಂಜ್‌ ಅಲರ್ಟ್‌

Rain Effect
ಮಳೆ5 days ago

Rain Effect : ಭಾರಿ ಮಳೆಗೆ ನೀರಲ್ಲಿ ಕೊಚ್ಚಿ ಹೋದ ಪಾನ್‌ ಶಾಪ್‌, ಕಾರು! ಉಡುಪಿಯ ಶಾಲಾ-ಕಾಲೇಜುಗಳಿಗೆ ನಾಳೆಯೂ ರಜೆ

Karnataka Rain Effect
ಮಳೆ5 days ago

Karnataka Rain : ಮಳೆ ಅವಾಂತರ; ಮರ ಬಿದ್ದು ಕಾರು ಜಖಂ, ಕುಸಿದು ಬಿದ್ದ ಪಾವಂಜೆ ಮಹಾಗಣಪತಿ ದೇವಸ್ಥಾನದ ತಡೆಗೋಡೆ

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಉಕ್ಕಿ ಹರಿಯುತ್ತಿರುವ ಹಳ್ಳ; ಪ್ರಾಣದ ಹಂಗು ತೊರೆದು ಶಾಲೆಗೆ ಹೋಗಬೇಕು!

ಟ್ರೆಂಡಿಂಗ್‌