ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮದರ್ಸ್ ಡೇ ಸಮೀಪಿಸುತ್ತಿದ್ದಂತೆ ಫ್ಯಾಷನ್ ಲೋಕದಲ್ಲಿ ನಾನಾ ಬಗೆಯ ಫ್ಯಾಷನ್‌ವೇರ್‌ಗಳು (Motherʼs Day Fashion) ಎಂಟ್ರಿ ನೀಡಿವೆ. ಆಯಾ ಮಹಿಳೆಯ ವಯಸ್ಸಿಗೆ ಹಾಗೂ ಅಭಿರುಚಿಗೆ ತಕ್ಕಂತೆ ಲೆಕ್ಕವಿಲ್ಲದಷ್ಟು ಡಿಸೈನರ್‌ವೇರ್‌ಗಳು, ಸೀರೆಗಳು ಹಾಗೂ ಜ್ಯುವೆಲರಿಗಳು ಕಾಲಿಟ್ಟಿವೆ.
ಹಿರಿಯ ವಯಸ್ಸಿನ ಅಮ್ಮನಿಗೆ ನೀಡಬಹುದಾದ ಸೀಸನ್‌ಗೆ ತಕ್ಕ ಸೀರೆಗಳಿಂದ ಹಿಡಿದು, ಇತ್ತೀಚಿನ ಜನರೇಷನ್‌ನ ಕಾರ್ಪೊರೇಟ್ ಕ್ಷೇತ್ರದ ಮಾನಿನಿಯರಿಗೂ ಸೂಟ್ ಆಗುವಂತಹ ವೆರೈಟಿ ಡಿಸೈನ್‌ನ ಮಿಕ್ಸ್ ಮ್ಯಾಚ್, ಇಂಡೋ-ವೆಸ್ಟರ್ನ್ ಕಾನ್ಸೆಪ್ಟ್‌ನ ಕ್ಯಾಶುವಲ್ ಉಡುಪುಗಳು ಆಗಮಿಸಿವೆ. ಪ್ರತಿ ಅಮ್ಮನೂ ಇಷ್ಟಪಡಬಹುದಾದ ಜ್ಯುವೆಲರಿಗಳು ಬಂದಿವೆ.
ಕೆಟಗರಿಗೆ ತಕ್ಕಂತೆ ಡಿಸೈನರ್‌ವೇರ್ಸ್
ಅಮ್ಮ-ಮಗಳು, ಅಮ್ಮ-ಮಗ, ಅಮ್ಮ-ಮಗ-ಮಗಳು ಹೀಗೆ ಎಲ್ಲರೂ ಒಂದೇ ಶೈಲಿಯಲ್ಲಿ ಕಾಣಬಹುದಾದ ಟ್ವಿನ್ನಿಂಗ್ ಮಾದರಿಯ ಉಡುಪುಗಳು ಡಿಮ್ಯಾಂಡ್ ಹೆಚ್ಚಿಸಿಕೊಂಡಿವೆ. ಇನ್ನು ಅಮ್ಮ –ಮಗನಿಗಾದಲ್ಲಿ ಕೊಂಚ ವಿನ್ಯಾಸ ಬದಲಾಗುತ್ತದೆ ಅಷ್ಟೇ! ಅದೇ ಶೇಡ್‌ನಲ್ಲಿ ದೊರೆಯುತ್ತದೆ. ಒಟ್ಟಾರೆ ಎಲ್ಲರೂ ಒಂದೇ ವರ್ಣದಲ್ಲಿ ಕಾಣಬಹುದಾದ ಡಿಸೈನರ್‌ವೇರ್‌ಗಳು ಕಾಲಿಟ್ಟಿವೆ. ನಮಗೆ ಬೇಡ, ಅಮ್ಮನಿಗೆ ಮಾತ್ರ ಖರೀದಿಸಿದರೇ ಸಾಕು ಎನ್ನುವವರಿಗೆ ಸಾಕಷ್ಟು ಹೊಸ ಬಗೆಯ ಅಪ್ಷನ್‌ಗಳಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಅಮ್ಮ-ಮಗಳ ಮ್ಯಾಚಿಂಗ್ ಡಿಸೈನರ್‌ವೇರ್ಸ್
ಮಗಳು ಅಮ್ಮನಿಗೆ ಖರೀದಿಸುವುದಾದಲ್ಲಿ ಅಥವಾ ಒಬ್ಬರಿಗಿಂತ ಹೆಚ್ಚು ಹೆಣ್ಣು ಮಕ್ಕಳು ಅಮ್ಮನೊಂದಿಗೆ ತಾವು ಮ್ಯಾಚ್ ಮಾಡುವುದಾದಲ್ಲಿ ಎಲ್ಲರಿಗೂ ಒಂದೇ ವಿನ್ಯಾಸದ ಡಿಸೈನರ್‌ವೇರ್ಸ್ ಹಾಗೂ ಸೀರೆಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿವೆ.
ಮದರ್ಸ್ ಡೇ ಶಾಪಿಂಗ್‌ಗೆ ಹೊಸ ಆಫರ್ಸ್
ಇನ್ನು ಕೆಲವು ಮಾಲ್‌ಗಳಲ್ಲಿ ಮದರ್ಸ್ ಡೇ ನಿಮಿತ್ತ ಶಾಪಿಂಗ್ ಮಾಡುವವರಿಗೆ ಒಂದಿಷ್ಟು ಆಫರ್ ಕೂಡ ದೊರೆಯುತ್ತಿದೆ. ಆದರೆ, ಅದೇ ದಿನ ಶಾಪಿಂಗ್ ಮಾಡಬೇಕು. ಇಂತಿಷ್ಟೇ ಖರೀದಿಸಬೇಕು ಎಂಬ ನಿಯಮದೊಂದಿಗೆ ಗಿಫ್ಟ್ ವೋಚರ್ಸ್ ನೀಡುವ ಯೋಜನೆ ಹಾಕಿಕೊಳ್ಳಲಾಗಿದೆ ಎನ್ನುತ್ತಾರೆ ಶಾಪ್‌ವೊಂದರ ಮ್ಯಾನೇಜರ್. ಕೆಲವರು ತಾಯಿಗೆ ಶಾಪಿಂಗ್ ಮಾಡಲು ಬಂದವರಿಗೆ ಅವರ ಅಮ್ಮನ ಐಡಿ ಜೆರಾಕ್ಸ್ ಪಡೆದು ಮತ್ತಷ್ಟು ಆಫರ್ ನೀಡಲಾಗುತ್ತಿದೆ ಎನ್ನುತ್ತಾರೆ ಶಾಪಿಂಗ್ ಎಕ್ಸ್‌ಪರ್ಟ್ಸ್.
ಮದರ್ಸ್ ಡೇಗೆ ಜ್ಯುವೆಲರಿ ಗಿಫ್ಟ್
ಕೆಲವು ವರ್ಷಗಳಿಂದ ಮದರ್ಸ್ ಡೇಗೆ ಜ್ಯುವೆಲರಿ ನೀಡುವವರ ಸಂಖ್ಯೆಯೂ ಹೆಚ್ಚಾಗಿದೆ. ಪರಿಣಾಮ ಸಾಕಷ್ಟು ಬ್ರಾಂಡ್‌ಗಳು ಈ ದಿನದಂದು ಹೊಸ ಬಗೆಯ ಆಫರ್‌ಗಳನ್ನು ನೀಡುತ್ತಿವೆ ಎನ್ನುತ್ತಾರೆ ಜ್ಯುವೆಲರಿ ಶಾಪ್‌ವೊಂದರ ಮ್ಯಾನೇಜರ್.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Lulu Fashion Week : ಲುಲು ಫ್ಯಾಷನ್ ವೀಕ್‌ನಲ್ಲಿ ನಯಾ ಫ್ಯಾಷನ್‌ವೇರ್‌ಗಳ ಅನಾವರಣ