Site icon Vistara News

Stars Fashion | ಎಥ್ನಿಕ್ ಉಡುಪಿಗೆ ಸೈ ಎಂದ ಸಿನಿಮಾ ತಾರೆಯರು; ಸೀರೆ, ಕುರ್ತಾದಲ್ಲಿ ಮಿಂಚು

fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಗೌರಿ-ಗಣೇಶ ಹಬ್ಬದ ಸಡಗರದಲ್ಲಿ ಪಾಲ್ಗೊಂಡಿರುವ ತಾರೆಯರು ಎಥ್ನಿಕ್ ಫ್ಯಾಷನ್ ಗೆ ಸೈ ಎಂದಿದ್ದಾರೆ. ಎಲ್ಲರೂ ದೇಸಿ ಉಡುಗೆ-ತೊಡುಗೆಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಸಂಭ್ರಮಕ್ಕೆ ಎಥ್ನಿಕ್ ಉಡುಗೆ
ಹಬ್ಬದ ಸಂಭ್ರಮ ಕೇವಲ ಒಂದು ದಿನಕ್ಕೆ ಸೀಮಿತವಾಗುವುದಿಲ್ಲ, ಬದಲಿಗೆ ಮೂರು ದಿನ ಇಲ್ಲವೇ ಐದು ದಿನ ಅಥವಾ ಹತ್ತು ದಿನಗಳವರೆಗೂ ಗಣೇಶನನ್ನು ಕೂರಿಸುವವರು ಇದ್ದಾರೆ. ಈ ಸಂದರ್ಭದಲ್ಲಿ ತಾರೆಯರು ಕೇವಲ ಮನೆಯಲ್ಲಿ ಮಾತ್ರ ಸಂಭ್ರಮಿಸುವುದಿಲ್ಲ, ಬದಲಿಗೆ ಬೀದಿಯಲ್ಲಿ, ಪೆಂಡಾಲ್‌ನಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಇರಿಸಿರುವ ಸ್ಥಳಗಳಿಗೂ ಭೇಟಿ ನೀಡುತ್ತಾರೆ. ಸಂತಸದ ವಿಷಯವೆಂದರೇ, ನಮ್ಮ ಸಂಸ್ಕೃತಿ ಬಿಂಬಿಸುವ ಉಡುಗೆ ತೊಡುಗೆಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇದು ನಿಜಕ್ಕೂ ಪ್ರಶಂಸನೀಯ.

ಎಥ್ನಿಕ್ ಫ್ಯಾಷನ್ ಎಂಬುದು ಕೇವಲ ಜನ ಸಾಮಾನ್ಯರಿಗೆ ಮಾತ್ರ ಸೀಮಿತವಾಗಿಲ್ಲ. ಇದು ತಾರೆಯರಿಗೂ ಕೂಡ ಅನ್ವಯಿಸುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ನಮ್ಮ ಆಚರಣೆಗಳಿಗೆ ಪೂರಕವಾಗಿರುತ್ತವೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರಾದ ವಿದ್ಯಾ.

ಅವರ ಪ್ರಕಾರ, ಗಣೇಶ ಹಬ್ಬದ ಸಂಭ್ರಮದಲ್ಲಿ ತಾರೆಯರು ಎಥ್ನಿಕ್ ಹಾಗೂ ದೇಸಿ ಔಟ್ ಫಿಟ್ ಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಉತ್ತಮ ಕಾರ್ಯವೇ ಸರಿ. ಸದಾ ವೆಸ್ಟರ್ನ್ ಹಾಗೂ ಗ್ಲಾಮರಸ್ ಔಟ್ ಫಿಟ್ ಗಳಲ್ಲಿ ಕಾಣಿಸಿಕೊಳ್ಳುವ ಬಾಲಿವುಡ್ ತಾರೆಯರು ಕೂಡ ಈ ಬಾರಿ ದೇಸಿ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್‌ಸ್ಟಾದೆಲ್ಲೆಡೆ ತಾರೆಯರ ಎಥ್ನಿಕ್ ಔಟ್ ಫಿಟ್

ಇನ್ನು ಸೋಷಿಯಲ್ ಮೀಡಿಯಾ ತೆರೆದರೆ ಸಾಕು. ತಾರೆಯರ ಹಬ್ಬದ ಎಥ್ನಿಕ್ ಔಟ್ ಫಿಟ್ ಗಳ ದರ್ಶನವಾಗುತ್ತದೆ. ಬಾಲಿವುಡ್ ತಾರೆಯರಿಂದ ಹಿಡಿದು ನಮ್ಮ ಕನ್ನಡದ ನಟಿಯರು, ಕಿರುತೆರೆ ನಟಿಯರು ಹಾಗೂ ಮಾಡೆಲ್ಗಳು ಸಹ ತಮ್ಮ ಕುಟುಂಬದೊಂದಿಗೆ ಇಲ್ಲವೇ ಹಬ್ಬದ ಆಚರಣೆಯ ಸಂದರ್ಭದ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ. ಎಲ್ಲಾ ಪೋಟೋಗಳಲ್ಲೂ ಎಥ್ನಿಕ್ ಔಟ್ ಫಿಟ್ ಗಳು ಗಮನ ಸೆಳೆಯುತ್ತಿವೆ.

ಶ್ರದ್ಧಾ ಕಪೂರ್, ಸೋನಾಲಿ ಬೇಂದ್ರೆ, ಕೀರ್ತಿ ಸುರೇಶ್, ಕೃತಿ ಸನೂನ್, ಕಾರ್ತಿಕ್ ಆರ್ಯನ್, ಶಿಲ್ಪಾ ಶೆಟ್ಟಿ, ಊರ್ಮಿಳಾ ಮಾಂಡ್ಕರ್, ಸಾರಾ ಅಲಿಖಾನ್, ಸಲ್ಮಾನ್ ಖಾನ್ ಸೇರಿದಂತೆ ಬಹುತೇಕ ನಟ-ನಟಿಯರು ಹಬ್ಬದಂದು ಹಬ್ಬದ ಎಥ್ನಿಕ್ ಔಟ್ ಫಿಟ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸೀರೆ, ಸಲ್ವಾರ್, ಶರಾರ, ಗಾಗ್ರ ಸೇರಿದಂತೆ ನಾನಾ ಬಗೆಯ ಎಥ್ನಿಕ್ ಔಟ್ಫಿಟ್ನಲ್ಲಿ ನಟಿಯರು ಕಾಣಿಸಿಕೊಂಡರೆ, ಬಹುತೇಕ ನಟರು ಸಿಂಪಲ್ ಕುರ್ತಾಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನು ಪ್ರಿಯಾಂಕಾ ಉಪೇಂದ್ರ, ಅನು ಪ್ರಭಾಕರ್, ಸಂಜನಾ ಗರ್ಲಾನಿ, ರಾಗಿಣಿ ದ್ವಿವೇದಿ, ಮಯೂರಿ, ಭಾವನಾ ರಾವ್, ಅಶಿಕಾ ರಂಗನಾಥ್, ಪ್ರಜ್ವಲ್ ದೇವರಾಜ್ ಸೇರಿದಂತೆ ಸ್ಯಾಂಡಲ್ವುಡ್ ನಟ-ನಟಿಯರು ತಮ್ಮ ಕುಟುಂಬ ಇಲ್ಲವೇ ಸ್ಮೇಹಿತರ ಮನೆಯ ಹಬ್ಬದ ಆಚರಣೆಯಲ್ಲಿ ಎಥ್ನಿಕ್ ಡಿಸೈನರ್ವೇರ್ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಖುಷಿಯ ವಿಚಾರವೆಂದರೆ ಕಿರುತೆರೆಯ ಬಹುತೇಕ ನಟಿಯರು ಸೀರೆ ಉಟ್ಟು ಹಬ್ಬ ಆಚರಿಸಿದ್ದಾರೆ.

(ಲೇಖಕಿ: ಫ್ಯಾಷನ್ ಪತ್ರಕರ್ತೆ)

Exit mobile version