Site icon Vistara News

Star Fashion | ದಸರಾ ಸಂಭ್ರಮಕ್ಕೆ ನಟಿ ಶುಭಾ ಪೂಂಜಾ ಎಥ್ನಿಕ್‌ ಫ್ಯಾಷನ್‌

shubha poonja

ಸಂದರ್ಶನ : ಶೀಲಾ ಸಿ. ಶೆಟ್ಟಿ

ಕಂಪ್ಲೀಟ್‌ ಎಥ್ನಿಕ್‌ ಫೆಸ್ಟೀವ್‌ ಫ್ಯಾಷನ್‌ಗೆ ನಟಿ ಶುಭಾ ಪೂಂಜಾ ಸೈ ಎಂದಿದ್ದು, ನಾನಾ ಟ್ರೆಡಿಷನಲ್‌ ಔಟ್‌ಫಿಟ್‌ಗಳಲ್ಲಿ ಹಬ್ಬದ ಆಚರಣೆ ಮಾಡಲಿದ್ದಾರಂತೆ. ಕುಟುಂಬದೊಂದಿಗೆ ಟ್ರೆಡಿಷನಲ್‌ ಆಗಿ ಹಬ್ಬ ಆಚರಿಸುವ ಅವರು ಸದ್ಯಕ್ಕೆ ವೆಸ್ಟರ್ನ್ ಔಟ್‌ಫಿಟ್‌ಗೆ ಬೈ ಹೇಳಿದ್ದು, ತಮ್ಮ ನೆಚ್ಚಿನ ಎಥ್ನಿಕ್‌ ಉಡುಪುಗಳಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ವಿಸ್ತಾರದೊಂದಿಗಿನ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಅವರು ಫೆಸ್ಟೀವ್‌ ಸೀಸನ್‌ ಫ್ಯಾಷನ್‌, ಸ್ಟೈಲ್‌ ಸ್ಟೇಟ್‌ಮೆಂಟ್‌ ಹಾಗೂ ಮದುವೆಯ ನಂತರ ಬದಲಾದ ಔಟ್‌ಫಿಟ್ಸ್‌ ಬಗ್ಗೆ ತಿಳಿಸಿದ್ದಾರೆ.



· ವಿಸ್ತಾರ : ನವರಾತ್ರಿ ಸಂಭ್ರಮಾಚರಣೆಗೆ ನಿಮ್ಮ ಫ್ಯಾಷನ್‌ ಮಂತ್ರ ಏನು ?

ಶುಭ ಪೂಂಜಾ : ಕಂಪ್ಲೀಟ್‌ ಎಥ್ನಿಕ್‌ ಲುಕ್‌. ಭಾಗವಹಿಸುವ ಯಾವುದೇ ಕಾರ್ಯಕ್ರಮ ಅಥವಾ ಫ್ಯಾಮಿಲಿ ಸಮಾರಂಭಗಳಲ್ಲಿ ಟ್ರೆಡಿಷನಲ್‌ ಲುಕ್‌ ನೀಡುವ ಫ್ಯಾಷನ್‌ ಸ್ಟೇಟ್‌ಮೆಂಟ್‌ಗಳಿಗೆ ಓಕೆ ಎನ್ನುತ್ತೇನೆ. ಈ ನವರಾತ್ರಿಯಲ್ಲಿ ಒಂದಿಷ್ಟು ಬದಲಾವಣೆ ಮಾಡಬೇಕೆಂದುಕೊಂಡಿದ್ದೇನೆ. ಈ ಬಾರಿ ನಾರ್ತ್ ಇಂಡಿಯನ್‌ ಶೈಲಿಯ ಬಾಂದ್ನಿ ಹಾಗೂ ಮಿರರ್‌ ವರ್ಕ್ ಡಿಸೈನ್‌ನ ಔಟ್‌ಫಿಟ್‌ಗಳನ್ನು ಧರಿಸಲು ಯೋಚಿಸಿದ್ದೇನೆ. ಪ್ರತಿಬಾರಿಯೂ ಸೌತ್‌ ಇಂಡಿಯನ್‌ ಟ್ರೆಡಿಷನಲ್‌ ಔಟ್‌ಫಿಟ್ಸ್‌ ಧರಿಸುತ್ತೇನೆ. ಇನ್ನು ಫೆಸ್ಟೀವ್‌ ಮೇಕಪ್‌ನಲ್ಲಿ ಕಾಣಿಸಿಕೊಳ್ಳುತ್ತೇನೆ.

ಶುಭಾ ಪೂಂಜಾ, ನಟಿ, ಚಿತ್ರಕೃಪೆ : ಮಂಗಲಾ ಭಾನಸುಧೆ ಸಲೂನ್‌ & ಅಕಾಡೆಮಿ

ವಿಸ್ತಾರ : ಟ್ರೆಡಿಷನಲ್‌ ಉಡುಪುಗಳಲ್ಲಿ ನಿಮಗಿಷ್ಟವಾಗಿರುವುದು ಯಾವುದು? ಯಾಕೆ?

ಶುಭಾ ಪೂಂಜಾ : ಲಂಗ-ದಾವಣಿ ನನ್ನ ಆಲ್‌ ಟೈಮ್‌ ಫೇವರೆಟ್‌. ಎಷ್ಟು ಬಾರಿ ಧರಿಸಿದರೂ ಬೇಸರವಾಗುವುದಿಲ್ಲ. ಇನ್ನು ಸೀರೆ ಕೂಡ ಇಷ್ಟ. ಈ ಎರಡು ಟ್ರೆಡಿಷನಲ್‌ ಅಟೈರ್‌ ಧರಿಸಿದರೇ ಸಾಕು ಆಕರ್ಷಕವಾಗಿ ಕಾಣಿಸುವುದು ಗ್ಯಾರಂಟಿ.

ವಿಸ್ತಾರ: ಮದುವೆಯಾದ ನಂತರ ನಿಮ್ಮ ಫ್ಯಾಷನ್‌ನಲ್ಲಿ ಬದಲಾದದ್ದು ಯಾವುದು ?

ಶುಭಾ ಪೂಂಜಾ : ನನ್ನ ಪತಿಗೆ ಓವರ್‌ ಸ್ಟೈಲಿಶ್‌ ಆಗಿರುವುದು ಇಷ್ಟವಾಗುವುದಿಲ್ಲ. ಅದನ್ನು ಕೊಂಚ ಬದಲಿಸಿಕೊಂಡಿದ್ದೇನೆ. ಅವರಿಗೆ ಗರ್ಲಿ ಲುಕ್‌ ನೀಡುವ ಯಾವುದೇ ಬಗೆಯ ಔಟ್‌ಫಿಟ್‌ಗಳಾದರೂ ಸರಿಯೇ! ಲಾಂಗ್‌ ಸ್ಕರ್ಟ್ಗಗಳನ್ನು ಧರಿಸಿದಲ್ಲಿಇಷ್ಟಪಡುತ್ತಾರೆ. ಇತ್ತೀಚೆಗೆ ಅದನ್ನು ಧರಿಸಲಾರಂಭಿಸಿದ್ದೇನೆ.

ವಿಸ್ತಾರ : ನಿಮ್ಮ ಪತಿಯ ಫ್ಯಾಷನ್‌ನಲ್ಲಿ ಯಾವ ಬದಲಾವಣೆ ತಂದಿರಿ?

ಶುಭಾ ಪೂಂಜಾ : ಹೆಚ್ಚೇನೂ ಬದಲಾವಣೆ ತರಲು ಸಾಧ್ಯವಾಗಿಲ್ಲ! ಅವರು ತೀರಾ ಸಿಂಪಲ್‌. ನಾನು ಮದುವೆಯಾದ ಮೇಲೆ ಅವರು ಫ್ಯಾಷೆನಬಲ್‌ ಆಗಿದ್ದಾರೆ. ಔಟ್‌ಫಿಟ್‌ಗಳ ಬಗ್ಗೆ ಒಂಚೂರು ತಲೆಕೆಡಿಸಿಕೊಳ್ಳುವುದಿಲ್ಲ. ಅವರಿಗೆ ಲೆನಿನ್‌ ಶರ್ಟ್ ಸೂಟ್‌ ಆಗುತ್ತದೆ. ಧರಿಸಿದಾಗ ನೋಡಲು ಹ್ಯಾಂಡ್‌ಸಮ್‌ ಆಗಿ ಕಾಣಿಸುತ್ತಾರೆ.

ವಿಸ್ತಾರ : ಫೆಸ್ಟೀವ್‌ ಸೀಸನ್‌ಗೆ ಫ್ಯಾಷನ್‌ ಪ್ರಿಯರಿಗೆ ನೀವು ನೀಡುವ ಫ್ಯಾಷನ್‌ ಟಿಪ್ಸ್‌ ಏನು ?

ಶುಭಾ ಪೂಂಜಾ : ಫೆಸ್ಟೀವ್‌ ಸೀಸನ್‌ಗೆ ತಕ್ಕಂತೆ ಟ್ರೆಡಿಷನಲ್‌ ಉಡುಪನ್ನು ಧರಿಸಿ. ಟ್ರೆಡಿಷನಲ್‌ ಫ್ಯಾಷನ್‌ಗೆ ಆದ್ಯತೆ ನೀಡಿ. ದೇಸಿ ಲುಕ್‌ ನಿಮ್ಮದಾಗಲಿ. ಇಡೀ ಫ್ಯಾಮಿಲಿ ಜೊತೆ ಹಬ್ಬ ಆಚರಿಸಿ.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ | Navaratri Colour Trend | ನವರಾತ್ರಿಯ 3ನೇ ದಿನಕ್ಕೆ ಬ್ಯೂಟಿಫುಲ್‌ ಬ್ಲೂ ಡಿಸೈನರ್‌ವೇರ್‌ಗಳು

Exit mobile version