-ಶೀಲಾ ಸಿ. ಶೆಟ್ಟಿ, ಬೆಂಗಳೂರು
ರಾಯಲ್ ಬ್ಲೂ, ತಿಳಿ ನೀಲಿ, ಆಕಾಶ ನೀಲಿ, ಶೈನಿ ನೀಲಿ, ಬ್ಲೀಚ್ ಬ್ಲ್ಯೂ ಹೀಗೆ ಊಹೆಗೂ ಮೀರಿದ ನೀಲಿ ವರ್ಣಗಳು ಈ ಬಾರಿಯ ನವರಾತ್ರಿಯ ಕಲರ್ ಟ್ರೆಂಡ್‌ನಲ್ಲಿವೆ. ಲೆಕ್ಕವಿಲ್ಲದಷ್ಟು ಡಿಸೈನರ್‌ವೇರ್‌ನಲ್ಲಿ ಇವು ಮೆಳೈಸಿವೆ.
“ಫ್ಯಾಷನ್‌ಲೋಕದಲ್ಲಿ ನೀಲಿಯ ಅತ್ಯುತ್ತಮ ಶೇಡ್ಸ್ ಆದ ರಾಯಲ್ ಬ್ಲ್ಯೂ ಎವರ್‌ಗ್ರೀನ್ ಬಣ್ಣ. ಇದು ಸೀರೆಯಾಗಬಹುದು ಇಲ್ಲವೇ ಡಿಸೈನರ್‌ವೇರ್ ಆಗಬಹುದು. ಇವನ್ನು ಧರಿಸಿದಾಗ ನೋಡಲು ಆಕರ್ಷಕವಾಗಿ ಕಾಣುತ್ತವೆ. ಸಂಭ್ರಮದ ಯಾವುದೇ ಹಬ್ಬಕ್ಕೂ ಈ ವರ್ಣ ಎಥ್ನಿಕ್ ಟಚ್ ನೀಡುತ್ತವೆ” ಎನ್ನುತ್ತಾರೆ ಫ್ಯಾಷನಿಸ್ಟಾಗಳು.
ನೀಲಿ ಸೀರೆಯಲ್ಲಿ ಆಕರ್ಷಕ ಲುಕ್
ಮಾನೋಕ್ರೋಮ್ ಇಲ್ಲವೇ ಸೆಮಿ ಪ್ರಿಂಟೆಡ್‌ನ ನೀಲಿ ರೇಷ್ಮೆ ಸೀರೆಗಳು ಗ್ರ್ಯಾಂಡ್ ಲುಕ್ ನೀಡುತ್ತವೆ. ಇನ್ನು ಜಾರ್ಜೆಟ್, ಕ್ರೇಪ್‌ನ ಸಾದಾ ಸೀರೆಗಳು, ಬಾರ್ಡರ್ ಹಾಗೂ ಪಲ್ಲು ಡಿಸೈನ್ ಹೊಂದಿರುವಂತವು ಬಣ್ಣದ ಟ್ರೆಂಡ್‌ಗೆ ಸಾಥ್ ನೀಡುತ್ತವೆ.
ರಾಯಲ್ ಇಮೇಜ್‌ಗಾಗಿ ರಾಯಲ್ ಬ್ಲೂ
ನೀಲಿಯಲ್ಲಿ ಹಲವಾರು ವರ್ಣಗಳಿದ್ದರೂ ಅತಿ ಹೆಚ್ಚಾಗಿ ಬೇಡಿಕೆ ಇರುವುದು ರಾಯಲ್ ಬ್ಲ್ಯೂ ಬಣ್ಣಕ್ಕೆ, ಈ ವರ್ಣದ ಸೀರೆಯಾದರೂ ಸರಿಯೇ ಕಮೀಝ್ , ಲಂಗ-ದಾವಣಿ ಅಥವಾ ಇನ್ಯಾವುದೇ ಇಂಡೋ-ವೆಸ್ಟರ್ನ್ ಉಡುಪಾದರೂ ಓಕೆ. ಧರಿಸಿದಾಗ ರಾಯಲ್ ಇಮೇಜ್ ನೀಡುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ನೀಲಿ ಎಥ್ನಿಕ್‌ವೇರ್ ಮೇಕಪ್ ಹೀಗಿರಲಿ
ನೀಲಿ ವರ್ಣದ ಉಡುಪುಗಳನ್ನು ಧರಿಸಿದಾಗ ಮೇಕಪ್‌ನಲ್ಲಿ ಒಂದಿಷ್ಟು ಪ್ರಯೋಗ ಮಾಡಬಹುದು. ಕಣ್ಣುಗಳಿಗೆ ಬ್ಲ್ಯೂ ಶೇಡ್ ನೀಡಿ ಐ ಮೇಕಪ್ ಮಾಡಬಹುದು. ಇನ್ನು ಬ್ಲ್ಯೂ ಐ ಲೈನರ್ ಜತೆಗೆ ಶಿಮ್ಮರಿಂಗ್ ಶೇಡ್ಸ್ ಕೂಡ ಮಾಡಬಹುದು. ಇದು ಇಡೀ ಮೇಕಪ್‌ನ ಹೈಲೈಟಾಗುತ್ತದೆ. ಹಣೆಗೆ ನೀಲಿ ಬಿಂದಿ, ಕಿವಿಗೆ ಹಾಗೂ ಕತ್ತಿಗೆ ಮ್ಯಾಚಿಂಗ್ ಜ್ಯುವೆಲರಿ ಧರಿಸಿ. ಕೈತುಂಬಾ ನೀಲಿ ಬಳೆ ಸೆಟ್ ಹಾಕಿಕೊಳ್ಳಿ. ಕಂಪ್ಲೀಟ್ ಎಥ್ನಿಕ್ ಲುಕ್ ನಿಮ್ಮದಾಗುತ್ತದೆ ಎನ್ನುತ್ತಾರೆ ಮೇಕಪ್ ತಜ್ಞರು.
ಆಕರ್ಷಕ ಹೇರ್‌ಸ್ಟೈಲ್ ಮಾಡಿ
ಇನ್ನು ಈ ವರ್ಣದ ಉಡುಪಿಗೆ ಮಲ್ಲಿಗೆ ಹೂವಿನ ಹೇರ್ ಬನ್ ಸ್ಟೈಲ್ ಚೆನ್ನಾಗಿ ಕಾಣುತ್ತದೆ. ಇಲ್ಲವೇ ಗೋಲ್ಡನ್ ಎಥ್ನಿಕ್ ಕ್ಲಿಪ್‌ಗಳು ಸೂಟ್ ಆಗುತ್ತವೆ.
ನೀಲಿ ವರ್ಣ ಪ್ರಿಯರ ಚಾಯ್ಸ್ ಹೀಗಿರಲಿ
- ರಾಯಲ್ ಬ್ಲೂ ಬಣ್ಣ ಹೈಟೆಕ್ ಲುಕ್ ನೀಡುತ್ತದೆ.
- ಡೇನಿಮ್ನಲ್ಲೂ ಸೆಮಿ ಎಥ್ನಿಕ್ ಉಡುಪುಗಳು ಇದೀಗ ದೊರೆಯುತ್ತಿವೆ.
- ಸೀರೆಯಲ್ಲಾದರೆ ಉತ್ತಮ ಶೇಡ್ಸ್ನ ನೀಲಿ ಬಣ್ಣವನ್ನೇ ಆಯ್ಕೆ ಮಾಡಿ.
- ಆಕ್ಸೆಸರೀಸ್ ಮ್ಯಾಚ್ ಮಾಡಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ | Navaratri Colour Trend | ನವರಾತ್ರಿ 2ನೇ ದಿನಕ್ಕೆ ಟ್ರೆಂಡಿಯಾಗಿರಲಿ ಕೆಂಪು ವರ್ಣದ ಎಥ್ನಿಕ್‌ವೇರ್